Categories
ರಾಜಕೀಯ ರಾಜ್ಯ ರಾಷ್ಟ್ರೀಯ ವಾರ್ತೆ

ಕರ್ನಾಟಕ 28 ಕ್ಷೇತ್ರಗಳಲ್ಲಿ ಏನೇನ್ ಆಗಿದೆ?

ಕರ್ನಾಟಕ 28 ಕ್ಷೇತ್ರಗಳಲ್ಲಿ ಏನೇನ್ ಆಗಿದೆ?
– ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್ ಅಪ್ಡೇಟ್
– ಯಾರು ಮುಂದೆ…? ಯಾರು ಹಿಂದೆ…?
– ದೇಶದಲ್ಲಿ ಯಾರು ಮುಂದೆ.. ಯಾರು ಹಿಂದೆ?
– ಹಾಸನದಲ್ಲಿ ಪ್ರಜ್ವಲ್, ಮಂಡ್ಯದಲ್ಲಿ ಕುಮಾರಸ್ವಾಮಿ ಮುನ್ನಡೆ
– ಗ್ರಾಮಾಂತರದಲ್ಲಿ ಸುರೇಶ್ ಸೋಲಿಸುವ ಹಂತದಲ್ಲಿ ಮಂಜುನಾಥ್

NAMMUR EXPRESS NEWS
ರಾಜ್ಯದಲ್ಲಿ ಮಂಡ್ಯ ಜೆಡಿಎಸ್, ಬೆಂಗಳೂರು ಗ್ರಾಮಾಂತರ ಬಿ.ಜೆ.ಪಿ, ಮೈಸೂರು ಬಿಜೆಪಿ, ಶಿವಮೊಗ್ಗ ಬಿಜೆಪಿ, ದಕ್ಷಿಣ ಕನ್ನಡ ಬಿಜೆಪಿ, ಚಿತ್ರದುರ್ಗ ಕಾಂಗ್ರೆಸ್ ಚಂದ್ರಪ್ಪ ಮುನ್ನಡೆ ಸಾಧಿಸಿದ್ದು ಕುಮಾರಸ್ವಾಮಿ ಗೆಲುವು ಬಳಿ ಸಾಗುತ್ತಿದ್ದಾರೆ. 1.20 ಸಾವಿರ ಮತಗಳ ಮುನ್ನಡೆ ಸಾಧಿಸಿದ್ದಾರೆ.

(11 ಗಂಟೆ ಸುಮಾರಿನ ವರದಿ).

1. ಚಿಕ್ಕೋಡಿ ಲೋಕಸಭಾ ಕ್ಷೇತ್ರ
ಬಿಜೆಪಿ – ಅಣ್ಣಾಸಾಹೇಬ್‌ ಜೊಲ್ಲೆ- ಹಿನ್ನಡೆ
ಕಾಂಗ್ರೆಸ್ ಅಭ್ಯರ್ಥಿ– ಪ್ರಿಯಾಂಕಾ ಜಾರಕಿಹೊಳಿ- ಮುನ್ನಡೆ

2. ಬೆಳಗಾವಿ ಲೋಕಸಭಾ ಕ್ಷೇತ್ರ
ಬಿಜೆಪಿ – – ಜಗದೀಶ್‌ ಶೆಟ್ಟರ್‌- ಮುನ್ನಡೆ
ಕಾಂಗ್ರೆಸ್ – ಮೃಣಾಳ್ ಹೆಬ್ಬಾಳ್ಕರ್- ಹಿನ್ನಡೆ

3 . ಬಾಗಲಕೋಟೆ ಲೋಕಸಭಾ ಕ್ಷೇತ್ರ
ಬಿಜೆಪಿ – ಪಿಸಿ ಗದ್ದಿಗೌಡರ್‌- ಮುನ್ನಡೆ
ಕಾಂಗ್ರೆಸ್ – ಸಂಯುಕ್ತಾ ಪಾಟೀಲ್- ಹಿನ್ನಡೆ

4. ವಿಜಯಪುರ (SC)
ಬಿಜೆಪಿ – ರಮೇಶ್‌ ಜಿಗಜಿಣಗಿ- ಮುನ್ನಡೆ
ಕಾಂಗ್ರೆಸ್ – ಪ್ರೊ.ರಾಜು ಆಲಗೂರ್- ಹಿನ್ನಡೆ

5. ಕಲಬುರಗಿ (SC)
ಬಿಜೆಪಿ – ಡಾ. ಉಮೇಶ್‌ ಜಾಧವ್- ಹಿನ್ನಡೆ
ಕಾಂಗ್ರೆಸ್ – ರಾಧಾಕೃಷ್ಣ ದೊಡ್ಡಮನಿ- ಮುನ್ನಡೆ

6. ರಾಯಚೂರು (ST)
ಬಿಜೆಪಿ – ರಾಜಾ ಅಮರೇಶ್ವರ ನಾಯಕ- ಹಿನ್ನಡೆ
ಕಾಂಗ್ರೆಸ್ – ಜಿ.ಕುಮಾರ ನಾಯಕ- ಮುನ್ನಡೆ

7. ಬೀದರ್
ಬಿಜೆಪಿ – ಭಗವಂತ್‌ ಖೂಬಾ- ಹಿನ್ನಡೆ
ಕಾಂಗ್ರೆಸ್ – ಸಾಗರ್ ಖಂಡ್ರೆ- ಮುನ್ನಡೆ

8. ಕೊಪ್ಪಳ
ಬಿಜೆಪಿ – ಡಾ. ಬಸವರಾಜ್‌ ಕ್ಯಾವಟೂರು- ಹಿನ್ನಡೆ
ಕಾಂಗ್ರೆಸ್ – ಕೆ. ರಾಜಶೇಖರ ಹಿಟ್ನಾಳ- ಮುನ್ನಡೆ

9. ಬಳ್ಳಾರಿ (ST)
ಬಿಜೆಪಿ – ಶ್ರೀರಾಮುಲು- ಹಿನ್ನಡೆ
ಕಾಂಗ್ರೆಸ್ – ಈ.ತುಕಾರಾಂ- ಮುನ್ನಡೆ

10. ಹಾವೇರಿ
ಬಿಜೆಪಿ – ಬಸವರಾಜ ಬೊಮ್ಮಾಯಿ- ಮುನ್ನಡೆ
ಕಾಂಗ್ರೆಸ್ – ಆನಂದಸ್ವಾಮಿ ಗಡ್ಡದೇವರಮಠ- ಹಿನ್ನಡೆ

11. ಧಾರವಾಡ
ಬಿಜೆಪಿ – ಪ್ರಹ್ಲಾದ್‌ ಜೋಶಿ- ಮುನ್ನಡೆ
ಕಾಂಗ್ರೆಸ್ – ವಿನೋದ್‌ ಅಸೂಟಿ- ಹಿನ್ನಡೆ

12. ಉತ್ತರ ಕನ್ನಡ
ಬಿಜೆಪಿ – ವಿಶ್ವೇಶ್ವರ ಹೆಗಡೆ ಕಾಗೇರಿ- ಮುನ್ನಡೆ
ಕಾಂಗ್ರೆಸ್ – ಅಂಜಲಿ ನಿಂಬಾಳ್ಕರ್‌- ಹಿನ್ನಡೆ

13. ದಾವಣಗೆರೆ
ಬಿಜೆಪಿ – ಗಾಯತ್ರಿ ಸಿದ್ದೇಶ್ವರ್‌- ಹಿನ್ನಡೆ
ಕಾಂಗ್ರೆಸ್ – ಪ್ರಭಾ ಮಲ್ಲಿಕಾರ್ಜುನ್- ಮುನ್ನಡೆ

14. ಶಿವಮೊಗ್ಗ
ಬಿಜೆಪಿ – ಬಿ.ವೈ ರಾಘವೇಂದ್ರ- ಮುನ್ನಡೆ
ಕಾಂಗ್ರೆಸ್ – ಗೀತಾ ಶಿವರಾಜ್​ಕುಮಾರ್- ಹಿನ್ನಡೆ

15. ಮೈಸೂರು
ಬಿಜೆಪಿ – ಯದುವೀರ್‌ ಒಡೆಯರ್- ಮುನ್ನಡೆ
ಕಾಂಗ್ರೆಸ್ – ಎಂ.ಲಕ್ಷ್ಮಣ್- ಹಿನ್ನಡೆ

16. ಉಡುಪಿ-ಚಿಕ್ಕಮಗಳೂರು
ಬಿಜೆಪಿ- ಕೋಟ ಶ್ರೀನಿವಾಸ್‌ ಪೂಜಾರಿ- ಮುನ್ನಡೆ
ಕಾಂಗ್ರೆಸ್ – ಜಯಪ್ರಕಾಶ್ ಹೆಗ್ಡೆ- ಹಿನ್ನಡೆ

17. ದಕ್ಷಿಣ ಕನ್ನಡ
ಬಿಜೆಪಿ – ಕ್ಯಾ. ಬ್ರಿಜೇಶ್‌ ಚೌಟಾ- ಮುನ್ನಡೆ
ಕಾಂಗ್ರೆಸ್ – ಆರ್.ಪದ್ಮರಾಜ್- ಹಿನ್ನಡೆ

18. ಚಿತ್ರದುರ್ಗ (SC)
ಬಿಜೆಪಿ – ಗೋವಿಂದ ಕಾರಜೋಳ- ಹಿನ್ನಡೆ
ಕಾಂಗ್ರೆಸ್ – ಬಿ.ಎನ್ ಚಂದ್ರಪ್ಪ- ಮುನ್ನಡೆ

19. ತುಮಕೂರು
ಬಿಜೆಪಿ – ವಿ ಸೋಮಣ್ಣ- ಮುನ್ನಡೆ
ಕಾಂಗ್ರೆಸ್ – ಎಸ್.ಪಿ. ಮುದ್ದಹನುಮೇಗೌಡ- ಹಿನ್ನಡೆ

20. ಚಾಮರಾಜನಗರ (SC)
ಬಿಜೆಪಿ – ಎಸ್‌. ಬಾಲರಾಜ್‌- ಹಿನ್ನಡೆ
ಕಾಂಗ್ರೆಸ್ – ಸುನೀಲ್ ಬೋಸ್- ಮುನ್ನಡೆ

21. ಬೆಂಗಳೂರು ಗ್ರಾಮಾಂತರ
ಬಿಜೆಪಿ – ಡಾ ಸಿ.ಎನ್‌ ಮಂಜುನಾಥ್‌- ಮುನ್ನಡೆ
ಕಾಂಗ್ರೆಸ್ – ಡಿ.ಕೆ ಸುರೇಶ್- ಹಿನ್ನೆಡೆ

22. ಬೆಂಗಳೂರು ಉತ್ತರ
ಬಿಜೆಪಿ – ಶೋಭಾ ಕರಂದ್ಲಾಜೆ- ಮುನ್ನಡೆ
ಕಾಂಗ್ರೆಸ್ – ಎಂ.ವಿ.ರಾಜೀವ್ ಗೌಡ- ಹಿನ್ನಡೆ

23. ಬೆಂಗಳೂರು ಕೇಂದ್ರ
ಬಿಜೆಪಿ – ಪಿ.ಸಿ ಮೋಹನ್- ಹಿನ್ನಡೆ
ಕಾಂಗ್ರೆಸ್ – ಮನ್ಸೂರ್ ಅಲಿಖಾನ್‌- ಮುನ್ನಡೆ

24. ಬೆಂಗಳೂರು ದಕ್ಷಿಣ
ಬಿಜೆಪಿ – ತೇಜಸ್ವಿ ಸೂರ್ಯ- ಮುನ್ನಡೆ
ಕಾಂಗ್ರೆಸ್ – ಸೌಮ್ಯಾ ರೆಡ್ಡಿ- ಹಿನ್ನಡೆ

25. ಚಿಕ್ಕಬಳ್ಳಾಪುರ
ಬಿಜೆಪಿ – ಡಾ.ಕೆ.ಸುಧಾಕರ್‌- ಮುನ್ನಡೆ
ಕಾಂಗ್ರೆಸ್ – ರಕ್ಷಾ ರಾಮಯ್ಯ- ಹಿನ್ನಡೆ

26. ಮಂಡ್ಯ
ಜೆಡಿಎಸ್‌ – ಹೆಚ್‌.ಡಿ ಕುಮಾರಸ್ವಾಮಿ- ಮುನ್ನಡೆ
ಕಾಂಗ್ರೆಸ್ – ಸ್ಟಾರ್ ಚಂದ್ರು- ಹಿನ್ನಡೆ

27. ಹಾಸನ
ಜೆಡಿಎಸ್ – ಪ್ರಜ್ವಲ್‌ ರೇವಣ್ಣ- ಹಿನ್ನಡೆ
ಕಾಂಗ್ರೆಸ್ – ಶ್ರೇಯಸ್‌ ಪಟೇಲ್‌-ಮುನ್ನಡೆ

28. ಕೋಲಾರ (SC)
ಜೆಡಿಎಸ್ – ಮಲ್ಲೇಶ್ ಬಾಬು- ಮುನ್ನಡೆ
ಕಾಂಗ್ರೆಸ್ – ಕೆ.ವಿ ಗೌತಮ್- ಹಿನ್ನಡೆ

ದೇಶದಲ್ಲಿ ಮುನ್ನಡೆ

ಎನ್ ಡಿ ಎ 293
ಇಂಡಿಯಾ 203
ಇತರೆ 47

ರಾಜ್ಯದಲ್ಲಿ ಮುನ್ನಡೆ
ಬಿಜೆಪಿ 17
ಕಾಂಗ್ರೆಸ್ 8
ಜೆಡಿಎಸ್ 3

Categories
ಉಡುಪಿ ಕರಾವಳಿ ರಾಜಕೀಯ ರಾಜ್ಯ ರಾಷ್ಟ್ರೀಯ ವಾರ್ತೆ

ಎಲೆಕ್ಷನ್ ಬ್ರೇಕಿಂಗ್ ನ್ಯೂಸ್ – ಲೋಕಸಭಾ ಚುನಾವಣೆ: ದಕ್ಷಿಣ ಕನ್ನಡ, ಉಡುಪಿ ಬಿಜೆಪಿ ಮುನ್ನಡೆ

ಎಲೆಕ್ಷನ್ ಬ್ರೇಕಿಂಗ್ ನ್ಯೂಸ್
ಲೋಕಸಭಾ ಚುನಾವಣೆ: ದಕ್ಷಿಣ ಕನ್ನಡ, ಉಡುಪಿ ಬಿಜೆಪಿ ಮುನ್ನಡೆ
– ಕೋಟಾ ಶ್ರೀನಿವಾಸ್ ಪೂಜಾರಿ, ಬ್ರಿಜೇಶ್ ಚೌಟ ಮುನ್ನಡೆ
– ಶಿವಮೊಗ್ಗದಲ್ಲಿ ರಾಘವೇಂದ್ರ ಭಾರೀ ಮುನ್ನಡೆ
– ಹಾಸನದಲ್ಲಿ ಪ್ರಜ್ವಲ್ ಕಡಿಮೆ ಅಂತರದಲ್ಲಿ ಹಿನ್ನಡೆ

NAMMUR EXPRESS NEWS
ಕರಾವಳಿಯ ಎರಡು ಹಾಗೂ ಮಲೆನಾಡಿನ ಒಂದು ಲೋಕ ಸಭಾ ಕ್ಷೇತ್ರಗಳಲ್ಲಿ ಮತ ಎಣಿಕೆ ಒಂದು ಸುತ್ತು ಮುಗಿದಿದ್ದು, ಬಿಜೆಪಿ ಮುನ್ನಡೆ ಸಾಧಿಸಿದೆ.

ದಕ್ಷಿಣ ಕನ್ನಡ

ಮೂರನೇ ಸುತ್ತಿನ ಮತ ಎಣಿಕೆ ಮುಕ್ತಾಯ
ಬ್ರಿಜೇಶ್ ಚೌಟ – ಬಿಜೆಪಿ – 133896
ಪದ್ಮರಾಜ್ ಆರ್ ಪೂಜಾರಿ – ಕಾಂಗ್ರೆಸ್ – 111312
ಅಂತರ – 22584

ಉಡುಪಿ ಚಿಕ್ಕಮಗಳೂರು

ಬಿಜೆಪಿಯ ಕೋಟಾ ಶ್ರೀನಿವಾಸ್ ಪೂಜಾರಿ 63 ಸಾವಿರ ಮತಗಳ ಮುನ್ನಡೆ ಸಾಧಿಸಿದ್ದಾರೆ.

ಶಿವಮೊಗ್ಗದಲ್ಲಿ ರಾಘವೇಂದ್ರ ಮುನ್ನಡೆ

ಶಿವಮೊಗ್ಗದಲ್ಲಿ ರಾಘವೇಂದ್ರ ಅವರು 30 ಸಾವಿರ ಮತಗಳ ಮುನ್ನಡೆ ಸಾಧಿಸಿದ್ದಾರೆ.

ಹಾಸನದಲ್ಲಿ ಪ್ರಜ್ವಲ್ ಹಿನ್ನಡೆ

ಹಾಸನದಲ್ಲಿ ಕಾಂಗ್ರೆಸ್ ಶ್ರೇಯಸ್ ಪಟೇಲ್ ಎದುರು 1000 ಮತಗಳ ಹಿನ್ನಡೆ ಇದೆ.

ಭಾರತ

NDA 291
I.N.D.I.A 210
Others 42

ರಾಜ್ಯದಲ್ಲಿ ಮುನ್ನಡೆ

19 BJP
6 Cong
3 JDS

Categories
ರಾಜಕೀಯ ರಾಜ್ಯ ರಾಷ್ಟ್ರೀಯ ವಾರ್ತೆ

ಎನ್.ಡಿ.ಎಗೆ ಇಂಡಿಯಾ ಟಕ್ಕರ್!

ಎನ್.ಡಿ.ಎಗೆ ಇಂಡಿಯಾ ಟಕ್ಕರ್!
– ಭಾರೀ ಪೈಪೋಟಿ: ಮೊದಲ ಗೆಲುವು ಬಿಜೆಪಿಗೆ!
– ಎಕ್ಸಿಟ್ ಪೋಲ್ ಹೇಳಿದಷ್ಟು ಸುಲಭ ಇಲ್ವಾ?
– ಆರಂಭಿಕ ಹಂತದಲ್ಲಿ ಭಾರೀ ಹೋರಾಟ!
– ಮೋದಿ ತಂಡಕ್ಕೆ ಗೆಲುವು ಪಕ್ಕಾ ಅಂತಿದೆ ರಿಸಲ್ಟ್ಸ್

NAMMUR EXPRESS NEWS
ನವ ದೆಹಲಿ: ಎನ್.ಡಿ.ಎಗೆ ಇಂಡಿಯಾ ಟಕ್ಕರ್ ನೀಡುತ್ತಿದೆ. ಸುಮಾರು 210 ಕ್ಷೇತ್ರದಲ್ಲಿ ಭಾರೀ ಪೈಪೋಟಿ ನೀಡಿದೆ. ಎಕ್ಸಿಟ್ ಪೋಲ್ ಹೇಳಿದಷ್ಟು ಸುಲಭ ಇಲ್ಲ. ಆದರೆ ಮೋದಿ ನೇತೃತ್ವ ಸರ್ಕಾರ ರಚನೆ ಸೂಚನೆ ಕಾಣುತ್ತಿದೆ. ಕರ್ನಾಟಕದಲ್ಲಿ ಕೂಡ ಬಿಜೆಪಿ ಭಾರೀ ಮುನ್ನಡೆ ಸಾಧಿಸುತ್ತಿದೆ.

ಬಿಜೆಪಿಗೆ ಮೊದಲ ಗೆಲುವು!

ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ನಾಯಕರಿಗೆ ಮೊಟ್ಟ ಮೊದಲ ಗೆಲುವು ಸಿಕ್ಕಿದೆ. ಮತ ಎಣಿಕೆ ಆರಂಭಕ್ಕೂ ಮೊದಲೇ ಬಿಜೆಪಿ ಒಂದು ಸ್ಥಾನ ಗೆದ್ದು ಬೀಗಿದೆ. ಅಷ್ಟಕ್ಕೂ ಬಿಜೆಪಿಯ ಭದ್ರಕೋಟೆ ಗುಜರಾತ್ ರಾಜ್ಯದ ಸೂರತ್ ಲೋಕಸಭೆ ಕ್ಷೇತ್ರವನ್ನು ಬಿಜೆಪಿ ಗೆದ್ದಿದೆ. ಬಿಜೆಪಿ ಅಭ್ಯರ್ಥಿ ಆಗಿದ್ದ ಮುಕೇಶ್ ದಲಾಲ್ ಅವಿರೋಧವಾಗಿ ಆಯ್ಕೆ ಆಗಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಆಗಿದ್ದ ನೀಲೇಶ್ ಕುಂಭಾನಿ ನಾಮಪತ್ರ ತಿರಸ್ಕೃತವಾದ ನಂತರ, ಕಣದಲ್ಲಿದ್ದ ಎಲ್ಲಾ ಅಭ್ಯರ್ಥಿಗಳು ತಮ್ಮ ನಾಮಪತ್ರ ಹಿಂದೆ ಪಡೆದುಕೊಂಡ ಬಳಿಕ ಬಿಜೆಪಿಗೆ ಭರ್ಜರಿ ಗೆಲುವು ಸಿಕ್ಕಿತ್ತು. ಬಿಜೆಪಿ ಅಭ್ಯರ್ಥಿ ಆಗಿದ್ದ ಮುಖೇಶ್ ದಲಾಲ್ ಅವರ ಎದುರಲ್ಲಿ, ಯಾವುದೇ ಅಭ್ಯರ್ಥಿ ಇಲ್ಲದ ಕಾರಣಕ್ಕೆ ಮುಖೇಶ್ ದಲಾಲ್ ಅವಿರೋಧವಾಗಿ ಆಯ್ಕೆಯೂ ಆಗಿದ್ದಾರೆ.

Categories
ರಾಜಕೀಯ ರಾಜ್ಯ ರಾಷ್ಟ್ರೀಯ ವಾರ್ತೆ

ಲೋಕಸಭೆ ಫಲಿತಾಂಶದತ್ತ ಈಗ ದೇಶದ ಚಿತ್ತ!

ಲೋಕಸಭೆ ಫಲಿತಾಂಶದತ್ತ ಈಗ ದೇಶದ ಚಿತ್ತ!
– ಕರ್ನಾಟಕದ 28 ಸೇರಿ ದೇಶದ 543 ಕ್ಷೇತ್ರಗಳ ಫಲಿತಾಂಶ ಪ್ರಕಟ
– ಮತ ಎಣಿಕೆ ಎಷ್ಟು ಗಂಟೆಗೆ ಪ್ರಾರಂಭವಾಗುತ್ತದೆ?
– ಮಾರ್ಗಸೂಚಿಗಳನ್ನು ಪಾಲಿಸುವುದು ಕಡ್ಡಾಯ: ಏನೇನು ನಿಯಮ?

NAMMUR EXPRESS NEWS
ದೇಶದಲ್ಲಿ ಭಾರೀ ಕುತೂಹಲಕ್ಕೆ ಕಾರಣವಾಗಿರುವ ಲೋಕಸಭೆ ಚುನಾವಣೆಯ ಮತ ಎಣಿಕೆ ಜೂನ್ 4ರಂದು ನಡೆಯಲಿದ್ದು, ಮಧ್ಯಾಹ್ನದ ವೇಳೆಗೆ ಲೋಕಸಭೆ ಚುನಾವಣೆಯ ಅಂತಿಮ ಫಲಿತಾಂಶ ಹೊರಬೀಳುವ ಸಾಧ್ಯತೆ ಇದೆ. ಇದೀಗ ಇಡೀ ದೇಶದ ಜನ ಈ ಫಲಿತಾಂಶವನ್ನು ಎದುರು ನೋಡುತ್ತಿದ್ದಾರೆ. 44 ದಿನಗಳಲ್ಲಿ ಏಳು ಸುತ್ತಿನ ಚುನಾವಣೆಗಳ ನಂತರ ಭಾರತದ ಬಹು ಹಂತದ ಮತದಾನ ಶನಿವಾರ ಮುಕ್ತಾಯಗೊಂಡಿದೆ. ಏಪ್ರಿಲ್ 19, ಏಪ್ರಿಲ್ 26, ಮೇ 7, ಮೇ 13, ಮೇ 20, ಮೇ 25 ಮತ್ತು ಜೂನ್ 1 ರಂದು ನಡೆದ ಏಳು ಹಂತಗಳಲ್ಲಿ ಕ್ರಮವಾಗಿ 66.1, 66.7, 61.0, 67.3, 60.5, 63.4 ಮತ್ತು 62 ರಷ್ಟು ಮತದಾನವಾಗಿದೆ. ಅಂದಾಜು 969 ಮಿಲಿಯನ್ ಜನರು ಮತ ಚಲಾಯಿಸಲು ನೋಂದಾಯಿಸಿಕೊಂಡಿದ್ದಾರೆ. ವಿದ್ಯುನ್ಮಾನ ಮತದಾನ ಯಂತ್ರಗಳನ್ನು ಬಳಸಿ ಮತ ಚಲಾಯಿಸಲಾಯಿತು.

ಮತ ಎಣಿಕೆ ಎಷ್ಟು ಗಂಟೆಗೆ ಪ್ರಾರಂಭವಾಗುತ್ತದೆ?

ಲೋಕಸಭೆ ಚುನಾವಣೆಯ ಮತ ಎಣಿಕೆಯು ಮಂಗಳವಾರ ಬೆಳಿಗ್ಗೆ 8 ಗಂಟೆಗೆ ಮತ ಎಣಿಕೆ ಪ್ರಾರಂಭವಾಗಲಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.

ಚುನಾವಣಾ ಫಲಿತಾಂಶವನ್ನು ಎಲ್ಲಿ ನೋಡಬಹುದು?

ಇಸಿಐ ಇತ್ತೀಚಿನ ಎಣಿಕೆಗೆ ಸಂಬಂಧಿಸಿದ ಡೇಟಾವನ್ನು ಡಿಜಿಟಲ್ ರೂಪದಲ್ಲಿ ಹಂಚಿಕೊಳ್ಳುತ್ತಲೇ ಇರುತ್ತದೆ. “ಎಸಿ / ಪಿಸಿಗಾಗಿ ಆರ್‌ಒ / ಎಆರ್‌ಒ ನಮೂದಿಸಿದ ಮಾಹಿತಿಯ ಪ್ರಕಾರ ಎಣಿಕೆ ಪ್ರವೃತ್ತಿಗಳು ಮತ್ತು ಫಲಿತಾಂಶಗಳು ಇಸಿಐ ವೆಬ್ಸೈಟ್ನಲ್ಲಿ ಯುಆರ್‌ಎಲ್ https://results.eci.gov.in/ ಮತ್ತು ಮತದಾರರ ಸಹಾಯವಾಣಿ ಅಪ್ಲಿಕೇಶನ್ನಲ್ಲಿ, ಐಒಎಸ್ ಮತ್ತು ಆಂಡ್ರಾಯ್ಡ್ ಮೊಬೈಲ್ ಅಪ್ಲಿಕೇಶನ್ಗಳಲ್ಲಿ ಲಭ್ಯವಿರುತ್ತವೆ” ಎಂದು ಚುನಾವಣಾ ಆಯೋಗ ತಿಳಿಸಿದೆ.

ಮಾರ್ಗಸೂಚಿಗಳನ್ನು ಪಾಲಿಸುವುದು ಕಡ್ಡಾಯ:

ಜೂನ್ 4 ರಂದು ಮತ ಎಣಿಕೆ ನಡೆಯಲಿದ್ದು, ಲೋಕಸಭಾ ಚುನಾವಣೆ, ಉಪಚುನಾವಣೆ ಮತ್ತು ರಾಜ್ಯ ವಿಧಾನಸಭೆಗಳ ಫಲಿತಾಂಶಗಳನ್ನು ಘೋಷಿಸುವಾಗ ಚುನಾವಣಾ ಅಧಿಕಾರಿಗಳು ಅನುಸರಿಸಬೇಕಾದ ಸಮಗ್ರ ಮಾರ್ಗಸೂಚಿಗಳನ್ನು ಚುನಾವಣಾ ಆಯೋಗ ಬಿಡುಗಡೆ ಮಾಡಿದೆ. ಜಿಲ್ಲಾ ಚುನಾವಣಾ ಅಧಿಕಾರಿಗಳು, ರಿಟರ್ನಿಂಗ್ ಅಧಿಕಾರಿಗಳು (ಆರ್‌ಒ) ಮತ್ತು ವೀಕ್ಷಕರು ಮತ ಎಣಿಕೆ ಪ್ರಾರಂಭವಾಗುವ ಮೊದಲು ಎಣಿಕೆ ಕೇಂದ್ರಗಳಲ್ಲಿ ಮತ್ತು ಸುತ್ತಮುತ್ತಲಿನ ಎಣಿಕೆ ವ್ಯವಸ್ಥೆಗಳಿಗಾಗಿ ಅಸ್ತಿತ್ವದಲ್ಲಿರುವ ಮಾರ್ಗಸೂಚಿಗಳನ್ನು ಸಂಪೂರ್ಣವಾಗಿ ಪಾಲಿಸಬೇಕು ಎಂದು ಮಾರ್ಗಸೂಚಿಗಳು ತಿಳಿಸಿವೆ.

ಮದ್ಯ ನಿಷೇಧ: ನಿಷೇಧಾಜ್ಞೆ ಜಾರಿ

ಚುನಾವಣೆ ಮತ ಎಣಿಕೆ ಹಿನ್ನಲೆ ಜೂನ್ 4ರ ಬೆಳಿಗ್ಗೆಯಿಂದ ರಾತ್ರಿ 12ರವರೆಗೆ ಮದ್ಯ ಮಾರಾಟ ನಿಷೇಧ ಮಾಡಲಾಗಿದೆ. ಎಣಿಕೆ ಹಿನ್ನೆಲೆ ಜೂ-04 ರ ಬೆಳಗ್ಗೆ 6 ರಿಂದ ಜೂ-05 ರ ಬೆಳಗ್ಗೆ 6.00 ಗಂಟೆಯವರೆಗೆ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.

Categories
ರಾಜಕೀಯ ರಾಜ್ಯ ರಾಷ್ಟ್ರೀಯ ವಾರ್ತೆ

ಮೋದಿ ಮತ್ತೊಮ್ಮೆ: ಶ್ವಾನ ಭವಿಷ್ಯ..!

ಮೋದಿ ಮತ್ತೊಮ್ಮೆ: ಶ್ವಾನ ಭವಿಷ್ಯ..!
– ಮೈಸೂರು – ಕೊಡಗು ಕ್ಷೇತ್ರದಲ್ಲಿ ಯದುವೀರ್ ಒಡೆಯರ್ ಗೆಲುವು
– ಎಲ್ಲೆಡೆ ಶ್ವಾನ ಭವಿಷ್ಯ ವೈರಲ್: ಏನಿದು ಸ್ಟೋರಿ…?

NAMMUR EXPRESS NEWS
ಮೈಸೂರು : ಲೋಕಸಭಾ ಚುನಾವಣೆಯ ಫಲಿತಾಂಶಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಈ ಮಧ್ಯೆ ಗೆಲುವು- ಸೋಲುಗಳ ಲೆಕ್ಕಾಚಾರ ಶುರುವಾಗಿದೆ. ಎಕ್ಸಿಟ್ ಪೋಲ್ ಬಿಡುಗಡೆಯಾಗಿ ಸದ್ದು ಮಾಡಿರುವ ಬೆನ್ನಲ್ಲೇ ಶ್ವಾನವೊಂದು ಫಲಿತಾಂಶದ ಭವಿಷ್ಯ ನುಡಿದಿದೆ. ಮೈಸೂರಿನ ಕೆ ಸಿ ಸ್ಟ್ರೀಟ್‌ ನ ಕಾಲಭೈರವೇಶ್ವರ ದೇಗುಲದಲ್ಲಿ ಭೈರವ ಎಂಬ ಶ್ವಾನ ಈ ಬಾರಿ ನರೇಂದ್ರ ಮೋದಿ ಗೆಲ್ಲುತ್ತಾರೆ ಎಂದು ಭವಿಷ್ಯ ನುಡಿದಿದೆ. ಭೈರವ ಶ್ವಾನದ ಮುಂದೆ ಪ್ರಧಾನಿ ನರೇಂದ್ರ ಮೋದಿ ಹಾಗೂ ರಾಹುಲ್ ಗಾಂಧಿ ಫೋಟೋ ಇಟ್ಟಾಗ ಅದು ಮೋದಿ ಫೋಟೋವನ್ನು ಆಯ್ಕೆ ಮಾಡುವ ಮೂಲಕ ಫಲಿತಾಂಶದ ಭವಿಷ್ಯ ನುಡಿದಿದೆ.

ಮೈಸೂರು ಕೊಡಗು ಲೋಕಸಭಾ ಕ್ಷೇತ್ರದ ಅಭ್ಯರ್ಥಿಗಳಾಗಿರುವ ಎಂ.ಲಕ್ಷ್ಮಣ್ ಹಾಗೂ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಫೋಟೋ ಇಟ್ಟಾಗ ಯದುವೀರ್ ಫೋಟೋವನ್ನು ಆಯ್ಕೆ ಮಾಡಿದೆ. ಇದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಬಿಜೆಪಿ ಬೆಂಬಲಿಗರು, ನಾಯಕರು, ಕಾರ್ಯಕರ್ತರು ಹರ್ಷ ವ್ಯಕ್ತಪಡಿಸುತ್ತಿದ್ದಾರೆ. ಈ ಹಿಂದೆ ಹಲವಾರು ಕಾರ್ಯಕ್ಕೆ ಈ ರೀತಿ ಭೈರವನ ಬಳಿ ಭವಿಷ್ಯ ಕೇಳಲಾಗಿತ್ತು. ಶ್ವಾನ ನುಡಿದ ಭವಿಷ್ಯದಂತೆ ಆಗಿತ್ತು. ಆ ಕಾರಣದಿಂದ ಮೋದಿ ಮತ್ತೊಮ್ಮೆ ದೇಶದ ಪ್ರಧಾನಿಯಾಗುತ್ತಾರೆ. ಜೊತೆಗೆ ಮೈಸೂರು – ಕೊಡಗು ಕ್ಷೇತ್ರದಲ್ಲಿ ಯದುವೀರ್ ಒಡೆಯರು ಗೆದ್ದು ಬೀಗುತ್ತಾರೆ ಎಂದು ಹೇಳಲಾಗುತ್ತಿದೆ.

Categories
ರಾಜಕೀಯ ರಾಜ್ಯ ರಾಷ್ಟ್ರೀಯ ವಾರ್ತೆ

ಕರ್ನಾಟಕ ಮತ್ತೆ ಬಿಜೆಪಿ ಪಾಲು!?

ಕರ್ನಾಟಕ ಮತ್ತೆ ಬಿಜೆಪಿ ಪಾಲು!?
– ಬಿಜೆಪಿಗೆ 20ಕ್ಕೂ ಹೆಚ್ಚು ಸ್ಥಾನ: ಸಮೀಕ್ಷೆ
– ನರೇಂದ್ರ ಮೋದಿ ಮತ್ತೊಮ್ಮೆ ದೇಶದಲ್ಲಿ ಕಿಂಗ್
– ಕಾಂಗ್ರೆಸ್ ಗಳಿಕೆ ಕಳೆದ ಸಲಕ್ಕಿಂತ ಏರಿಕೆ, ಆದರೆ ಗರಿಷ್ಠ 8 ಸ್ಥಾನ

NAMMUR EXPRESS NEWS
ಭಾರತ ಪ್ರಜಾಪ್ರಭುತ್ವದ ದೇಗುಲ, ಭಾರತವೇ ಈ ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ. ಪ್ರಧಾನಿ ಮೋದಿ ನೇತೃತ್ವದಲ್ಲಿ ಭರ್ಜರಿ ಹ್ಯಾಟ್ರಿಕ್ ಬಾರಿಸಿ, ಕೇಂದ್ರದ ಅಧಿಕಾರ ಹಿಡಿಯೋದಕ್ಕೆ ಎನ್‌ಡಿಎ ಒಕ್ಕೂಟ ಸಜ್ಜಾಗಿದೆ. ಈ ಬಾರಿ ಕನಿಷ್ಠ 400 ಸ್ಥಾನ ಗೆಲ್ಲಲು ಬಿಜೆಪಿ ಮಾಸ್ಟರ್ ಪ್ಲ್ಯಾನ್‌ ಮಾಡಿತ್ತು. ಆದ್ರೆ ಎಲ್ಲಾ ಸಮೀಕ್ಷೆಗಳು 350-380 ಸ್ಥಾನ ಗೆಲ್ಲಲಿವೆ ಎಂದು ಹೇಳಿವೆ. ಕರ್ನಾಟಕದಲ್ಲಿ ಕಳೆದ ಅವಧಿಗಿಂತ ಕಡಿಮೆ ಸ್ಥಾನ ಬಿಜೆಪಿ ಗೆಲ್ಲಲಿದೆ. ಆದರೆ ಈ ಬಾರಿ ಬಿಜೆಪಿ ಕರ್ನಾಟಕದಲ್ಲಿ ಗೆಲ್ಲಲ್ಲಿರುವ ಸ್ಥಾನಗಳು ಎಷ್ಟು? ಎನ್ನುವುದಾದ್ರೆ 20-23 ಎಂದು ಸಮೀಕ್ಷೆಗಳು ಹೇಳಿವೆ. ಜೆಡಿಎಸ್ ಕೂಡ ಮೂರು ಸ್ಥಾನ ಗೆಲ್ಲಲಿದೆ ಎಂದು ಅಂದಾಜಿಸಲಾಗಿದೆ.

2024ರ ಲೋಕಸಭೆ ಚುನಾವಣೆ ಏಪ್ರಿಲ್ 19 ರಿಂದ ಜೂನ್ 1 ರವರೆಗೆ ನಡೆಯಿತು. ಹೀಗೆ ಒಟ್ಟು 543 ಲೋಕಸಭಾ ಕ್ಷೇತ್ರಗಳಿಗೆ 7 ಹಂತಗಳಲ್ಲಿ ಮತದಾನ ನಡೆಸಲಾಗಿತ್ತು. ಇಂದು ಅಂತಿಮ ಹಂತದ ಮತದಾನ ಮುಕ್ತಾಯವಾಗಿದ್ದು, ಚುನಾವಣೋತ್ತರ ಫಲಿತಾಂಶ ಹೊರಬಿದ್ದಿದೆ. ಈ ಪೈಕಿ ‘ನ್ಯೂಸ್18 ಪೋಲ್ ಹಬ್’ ಎಕ್ಸಿಟ್ ಪೋಲ್ ಪ್ರಕಾರ ಬಿಜೆಪಿಗೆ ಪ್ರಚಂಡ ಗೆಲುವು ಪಕ್ಕಾ ಆಗಿದೆ. ಅದರಲ್ಲೂ ಕರ್ನಾಟಕದಲ್ಲಿ ಬಿಜೆಪಿ 20ಕ್ಕೂ ಹೆಚ್ಚು ಸ್ಥಾನಗಳನ್ನ ಗೆದ್ದು ಬೀಗಲಿದೆ ಎಂದಿದೆ ‘ನ್ಯೂಸ್18 ಪೋಲ್ ಹಬ್’ ಎಕ್ಸಿಟ್ ಪೋಲ್ ಫಲಿತಾಂಶ.

ಬಿಜೆಪಿ ಹೈಕಮಾಂಡ್ ಮತ್ತು ಬಿ.ವೈ. ವಿಜಯೇಂದ್ರ ಅವರ ತಂತ್ರಗಾರಿಕೆ ಈಗ ಫಲ ನೀಡಿ ಬಿಜೆಪಿ ಪಕ್ಷದ ಪ್ರಚಂಡ ಗೆಲುವು ಪಕ್ಕಾ ಆಗಿದೆ. ಕರ್ನಾಟಕದಲ್ಲಿ ಬಿಜೆಪಿ & ಜೆಡಿಎಸ್ 23 ರಿಂದ 26 ಸ್ಥಾನ ಗೆಲ್ಲಬಹುದು ಎನ್ನಲಾಗಿದ್ದು, ಅದೇ ರೀತಿ ಕಾಂಗ್ರೆಸ್ ಕರ್ನಾಟಕದಲ್ಲಿ 3 ರಿಂದ 7 ಸ್ಥಾನ ಗೆಲ್ಲಬಹುದು ಎನ್ನುತ್ತಿದೆ ‘ನ್ಯೂಸ್18 ಪೋಲ್ ಹಬ್’ ಸಮೀಕ್ಷೆ.

ಕಾಂಗ್ರೆಸ್ ಗಳಿಕೆ ಕಳೆದ ಸಲಕ್ಕಿಂತ ಏರಿಕೆ, ಆದರೆ ಗರಿಷ್ಠ 8 ಸ್ಥಾನ

ಬಹುತೇಕ ಚುನಾವಣೋತ್ತರ ಸಮೀಕ್ಷೆಗಳು ಕರ್ನಾಟಕದಲ್ಲಿ ಬಿಜೆಪಿ ಜೆಡಿಎಸ್ ಪಕ್ಷಗಳ ಎನ್‌ಡಿಎ ಮೈತ್ರಿಕೂಟ ಭರ್ಜರಿ ಜಯ ಸಾಧಿಸಲಿದೆ ಎಂದು ಹೇಳಿವೆ. ರಾಜ್ಯದ ಆಡಳಿತಾರೂಡ ಕಾಂಗ್ರೆಸ್ ಭಾರಿ ಹಿನ್ನಡೆ ಕಾಣಲಿದೆ, ಆದರೆ ಕಳೆದ ಚುನಾವಣೆಗಿಂತ ಕಾಂಗ್ರೆಸ್ ಪಕ್ಷದ ಗಳಿಕೆ ಹೆಚ್ಚಲಿದೆ ಎಂದು ಅಭಿಪ್ರಾಯ ಪಟ್ಟಿವೆ. ರಾಜ್ಯದ ಒಟ್ಟು 28 ಕ್ಷೇತ್ರಗಳಲ್ಲಿ ಎನ್‌ಡಿಎ ಮೈತ್ರಿಕೂಟಕ್ಕೆ 23-26 ಸ್ಥಾನ ಬರಲಿದೆ. ಕಾಂಗ್ರೆಸ್ ಕೇವಲ 3-7 ಸ್ಥಾನಗಳಲ್ಲಿ ಕಾಂಗ್ರೆಸ್ ತನ್ನ ಗೆಲುವು ದಾಖಲಿಸಬಹುದು ಎಂದು ಹೇಳಿದೆ. ರಿಪಬ್ಲಿಕ್ ಟಿವಿ ಸಮೀಕ್ಷೆ ಪ್ರಕಾರ ಬಿಜೆಪಿ ಜೆಡಿಎಸ್ 22, ಕಾಂಗ್ರೆಸ್ ಆರು ಸ್ಥಾನ ಗೆಲ್ಲಲಿವೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 25, ಜೆಡಿಎಸ್ 1, ಕಾಂಗ್ರೆಸ್ ಒಂದು ಹಾಗೂ ಪಕ್ಷೇತರರು ಒಂದು ಸ್ಥಾನದಲ್ಲಿ ಗೆದ್ದಿದ್ದರು.

ಕಳೆದ ಸಲಕಿಂತಲೂ ಈ ಸಲ ಹೆಚ್ಚು ಸ್ಥಾನ :

ಎಲ್ಲಾ ಏಳು ಹಂತಗಳ ಸುದೀರ್ಘ ಲೋಕಸಭಾ ಚುನಾವಣೆ ಶನಿವಾರ ಮುಗಿದಿದೆ. ಇದರ ಬೆನ್ನಲ್ಲೇ ಸತತ ಮೂರನೇ ಬಾರಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಬಿಜೆಪಿ ಹಾಗೂ ಎನ್‌ಡಿಎ ಕೂಟಗಳು ಗೆಲುವು ಕಾಣಲಿವೆ. ಈ ಮೂಲಕ ಕೇಂದ್ರದಲ್ಲಿ ಹ್ಯಾಟ್ರಿಕ್ ಅವದಿಗೆ ಎನ್.ಡಿ.ಎ ಸರ್ಕಾರ ಪ್ರತಿಷ್ಠಾಪಿತವಾಗಲಿದೆ ಎಂದು ಬಹುತೇಕ ಎಲ್ಲಾ ಚುನಾವಣೋತ್ತರ ಸಮೀಕ್ಷೆಗಳು ಭವಿಷ್ಯ ನುಡಿದಿವೆ. ಈ ಸಮೀಕ್ಷೆಗಳು ನಿಜವಾಗುತ್ತವೆಯೇ ಎಂಬುದು ಜೂ.4 ರ ಮತ ಎಣಿಕೆಯಲ್ಲಿ ಸ್ಪಷ್ಟವಾಗಲಿದೆ. ಕರ್ನಾಟಕ ಉತ್ತರ ಪ್ರದೇಶ, ಬಿಹಾರ, ಗುಜರಾತ್, ಮಧ್ಯ ಪ್ರದೇಶ, ಹಿಮಾಚಲ ಪ್ರದೇಶ, ರಾಜಸ್ಥಾನದಂತ ತನ್ನ ಸಾಂಪ್ರದಾಯಿಕ ರಾಜ್ಯಗಳಲ್ಲಿ ಬಿಜೆಪಿ ಬಹುತೇಕ ಎಲ್ಲಾ ಸೀಟುಗಳಲ್ಲಿ ಕಳೆದ ಸಲದಂತೆ ಜಯಿಸಲಿದೆ. ಇದಕ್ಕೆ ಹೆಚ್ಚುವರಿಯಾಗಿ ಪ. ಬಂಗಾಳ, ಒಡಿಶಾ, ಆಂಧ್ರಪ್ರದೇಶದಂತ ತನಗೆ ಅಷ್ಟಾಗಿ ನೆಲೆ ಇಲ್ಲದ ರಾಜ್ಯಗಳಲ್ಲೂ ಬಿಜೆಪಿ ಸ್ವಂತ ಬಲದಿಂದ ಹಾಗೂ ಟಿಡಿಪಿಯಂತ ಮಿತ್ರರ ಬಲದಿಂದ ಉತ್ತಮ ಸ್ಥಾನ ಸಂಪಾದಿಸಲಿದೆ.

Categories
ರಾಜ್ಯ ರಾಷ್ಟ್ರೀಯ ವಾರ್ತೆ

ಆಭರಣ ಪ್ರಿಯರಿಗೆ ಬಿಗ್‌ ಶಾಕ್‌

ಆಭರಣ ಪ್ರಿಯರಿಗೆ ಬಿಗ್‌ ಶಾಕ್‌
– ಬೆಳ್ಳಿ ಈಗ ಕೇಜಿಗೆ ಬರೋಬ್ಬರಿ 1 ಲಕ್ಷ..!
– ಒಂದೇ ತಿಂಗಳಿನಲ್ಲಿ 17000 ರು ಅಷ್ಟು ಭಾರೀ ಏರಿಕೆ

NAMMUR EXPRESS NEWS
ಮುಂಬೈ : ಆಭರಣ ಮತ್ತು ಕೈಗಾರಿಕೆ ಎರಡೂ ವಲಯಗಳಲ್ಲಿ ಪ್ರಮುಖವಾಗಿ ಬಳಕೆಯಾಗುವ ಬೆಳ್ಳಿ ಬೆಲೆ ಪ್ರತಿ ಕೆ.ಜಿ.ಗೆ ಸಾರ್ವಕಾಲಿಕ ಗರಿಷ್ಠ ಎನ್ನಬಹುದಾದ 1 ಲಕ್ಷ ರು. ತಲುಪಿದೆ. ಇದು ಹಬ್ಬ ಮತ್ತು ಶುಭ ಸಮಾರಂಭಗಳಿಗೆ ಬೆಳ್ಳಿ ಆಭರಣ ಖರೀದಿಗೆ ಮುಂದಾಗಿದ್ದವರಿಗೆ ಭಾರೀ ಶಾಕ್ ನೀಡಿದೆ. ತಿಂಗಳ ಹಿಂದಷ್ಟೇ ಕೆ.ಜಿ.ಗೆ 83000 ರು.ನ ಆಸುಪಾಸಿನಲ್ಲಿದ್ದ ಬೆಳ್ಳಿ ಬೆಲೆ ಕಳೆದ 3 ದಿನಗಳಲ್ಲಿ 6000-7000 ರು.ನಷ್ಟು ಹೆಚ್ಚಳವಾಗಿದೆ. ಪರಿಣಾಮ ದೇಶದ ವಿವಿಧ ನಗರಗಳ ಮಾರುಕಟ್ಟೆಯಲ್ಲಿ 1 ಲಕ್ಷ ರು.ಗಳ ಗಡಿ ದಾಟಿದೆ. ಚಿನ್ನದ ಪ್ರಮುಖ ಮಾರುಕಟ್ಟೆಗಳಾದ ಚೆನ್ನೈ, ಹೈದ್ರಾಬಾದ್, ತಿರುವನಂತಪುರ, ಕಟಕ್ ಸೇರಿದಂತೆ ಹಲವು ನಗರಗಳಲ್ಲಿ ಬುಧವಾರ ಬೆಳ್ಳಿ ಬೆಲೆ ಕೆ.ಜಿ.ಗೆ 1 ಲಕ್ಷ ರು.ಗಳ ಗಡಿ ದಾಟಿದೆ. ಉಳಿದಂತೆ ದೆಹಲಿಯಲ್ಲಿ 97100 ರು., ಮುಂಬೈನಲ್ಲಿ 94180 ರು., ಬೆಂಗಳೂರಿನಲ್ಲಿ 97100 ರು. ತಲುಪಿದೆ. ಇದೇ ವೇಳೆ ಬುಧವಾರ ದೆಹಲಿಯಲ್ಲಿ ಚಿನ್ನದ ಬೆಲೆ ಪ್ರತಿ 10 ಗ್ರಾಂಗೆ 250 ರು. ಏರಿಕೆ ಕಂಡು 73200 ರು. ತಲುಪಿದೆ.

ಬೆಲೆ ಏರಿಕೆ ಏಕೆ: ಚಿನ್ನವನ್ನು ಕೇವಲ ಆಭರಣ ಅಥವಾ ಹೂಡಿಕೆ ಉದ್ದೇಶಕ್ಕಾಗಿ ಮಾತ್ರ ಬಳಸಲಾಗುತ್ತದೆ. ಆದರೆ ಬೆಳ್ಳಿಯನ್ನು ಆಭರಣದ ಜೊತೆಗೆ ಕೈಗಾರಿಕಾ ಉದ್ದೇಶಗಳಿಗಾಗಿಯೂ ಬಳಸಲಾಗುತ್ತದೆ. ಕಳೆದ ಕೆಲ ವರ್ಷಗಳಿಂದ ಉತ್ಪಾದನೆ ಹಿಂದಿನ ಮಟ್ಟದಲ್ಲೇ ಮುಂದುವರೆದಿದ್ದರೆ ಬೇಡಿಕೆ ಭಾರೀ ಪ್ರಮಾಣದಲ್ಲಿ ಹೆಚ್ಚಳವಾಗಿದೆ. ಎಲೆಕ್ನಿಕ್ ವಾಹನಗಳು, ಸೌರಫಲಕ, 5ಜಿ ಆ್ಯಂಟೆನಾ, ಫೋಟೋಗ್ರಾಫಿ ಮೊದ ಲಾದ ವಲಯಗಳಲ್ಲಿ ಬೇಡಿಕೆ ಹೆಚ್ಚಳವಾಗಿರುವುದು ಕಳೆದ ಕೆಲ ವರ್ಷಗಳಲ್ಲಿ ಬೆಳ್ಳಿ ಬೆಲೆ ಭಾರೀ ಏರಿಕೆ ಕಾರಣವಾಗಿದೆ. ಮತ್ತೊಂದೆಡೆ ಮಧ್ಯಪ್ರಾಚ್ಯ ದೇಶಗಳ ನಡುವಿನ ಬಿಕ್ಕಟ್ಟು, ಮಧ್ಯಪ್ರಾಚ್ಯ ದೇಶಗಳ ಮೂಲಕ ಹಾದುಹೋಗುವ ಸರಕು ಹಡಗುಗಳ ಮೇಲೆ ಮುಂದುವರೆದ ದಾಳಿ ಉದ್ವಿಗ್ನ ಪರಿಸ್ಥಿತಿಗೆ ಕಾರಣವಾಗಿದೆ. ಜೊತೆಗೆ ಅಮೆರಿಕದಲ್ಲಿ ಹಣದುಬ್ಬರದ ಆತಂಕ ಮುಂದುವರೆದಿರುವುದು ಕೂಡಾ ಬೆಳ್ಳಿ ಬೆಲೆ ದಾಖಲೆ ಮಟ್ಟ ತಲುಪಲು ಕಾರಣವಾಗಿದೆ.

ಬೆಲೆ ಏರಿಕೆಗೆ ಕಾರಣ ಏನು?

* ಮಧ್ಯಪ್ರಾಚ್ಯ ಬಿಕ್ಕಟ್ಟು ಇತ್ಯರ್ಥವಾಗದೇ ಇದಿರುವುದು
* ಬೇಡಿಕೆ, ಲಭ್ಯತೆ ನಡುವಿನ ವ್ಯತ್ಯಾಸ ದಿನೇ ದಿನೇ ಏರಿಕೆ
* ಕೈಗಾರಿಕಾ ವಲಯ ದಿಂದ ಬೆಳ್ಳಿಗೆ ಭಾರೀ ಬೇಡಿಕೆ

Categories
ರಾಜಕೀಯ ರಾಜ್ಯ ರಾಷ್ಟ್ರೀಯ ವಾರ್ತೆ

ಜೂನ್ 4ಕ್ಕೆ ಲೋಕ ಸಭಾ ಫಲಿತಾಂಶ!

ಜೂನ್ 4ಕ್ಕೆ ಲೋಕ ಸಭಾ ಫಲಿತಾಂಶ!
– ಎಲ್ಲೆಡೆ ಕುತೂಹಲ: ಸೋಲು ಗೆಲುವಿನ ಲೆಕ್ಕಾಚಾರ
– ಅಂದು ಇದೆಯಾ ರಜೆ?.. ಯಾರು ಗೆಲ್ತಾರೆ?

NAMMUR EXPRESS NEWS
ನವದೆಹಲಿ: ಲೋಕಸಭೆಯ 543 ಸ್ಥಾನಗಳಿಗೆ ನಡೆದಿರುವ ಮಹಾ ಚುನಾವಣೆಯಲ್ಲಿ ಮತದಾರರ ಬೆಂಬಲ ಯಾರಿಗೆ ಸಿಕ್ಕಿದೆ ಎನ್ನುವುದು ಜೂನ್ 4ರಂದು ಗೊತ್ತಾಗಲಿದೆ. ಅಂದು ಮಂಗಳವಾರ ಏಳು ಹಂತಗಳಲ್ಲಿ ನಡೆದ ಮತದಾನದಲ್ಲಿ ಚಲಾವಣೆಯಾದ ಮತಗಳ ಎಣಿಕೆ ಆಗಲಿದೆ. ಬೆಳಗ್ಗೆ ಶುರುವಾದರೆ ಮಧ್ಯಾಹ್ನದ ವೇಳೆಗೆ ಫಲಿತಾಂಶದ ಮುನ್ನೋಟ ದೊರಕಿ ಬಿಡುತ್ತದೆ. ಮತ ಎಣಿಕೆ ಪೂರ್ಣಗೊಳ್ಳಲು ತಡರಾತ್ರಿಯಾದರೂ ಆಗಬಹುದು. ಈ ಮಹಾ ಪ್ರಕ್ರಿಯೆ ನಡೆಯುವ ಜೂನ್ 4, ಮಂಗಳವಾರದಂದು ಸಾರ್ವತ್ರಿಕ ರಜೆ ಇರುತ್ತದಾ? ಮತ ಎಣಿಕೆಯ ದಿನದಂದು ಸಾರ್ವತ್ರಿಕ ರಜೆ ಇರುವುದಿಲ್ಲ. ಮತದಾನ ದಿನಗಳಂದು ಆ ಪ್ರಕ್ರಿಯೆ ನಡೆಯುವ ಪ್ರದೇಶಗಳಲ್ಲಿ ರಜೆ ನೀಡಲಾಗಿತ್ತು. ಎಲ್ಲರಿಗೂ ಪ್ರಜಾಸತ್ತಾತ್ಮಕವಾಗಿ ಬಂದಿರುವ ತಮ್ಮ ಮತದಾನ ಹಕ್ಕನ್ನು ಚಲಾಯಿಸಲಿ ಎನ್ನುವ ಉದ್ದೇಶದಿಂದ ರಜೆ ಘೋಷಿಸಲಾಗಿತ್ತು. ಆದರೆ, ಮತ ಎಣಿಕೆಯ ದಿನದಂದು ರಜೆ ನೀಡಲಾಗಿಲ್ಲ. ಸರ್ಕಾರಿ ಕಚೇರಿ, ಬ್ಯಾಂಕು ಇತ್ಯಾದಿ ಎಲ್ಲವೂ ಯಥಾ ಪ್ರಕಾರ ಕಾರ್ಯನಿರ್ವಹಿಸುತ್ತವೆ.

543 ಸದಸ್ಯ ಬಲದ ಲೋಕಸಭೆಗೆ ಏಳು ಹಂತಗಳಲ್ಲಿ ಚುನಾವಣೆ ನಿಗದಿಯಾಗಿದೆ. ಈಗಾಗಲೇ ಆರು ಹಂತದ ಮತದಾನವಾಗಿದೆ. ಜೂನ್ 1ಕ್ಕೆ ಅಂತಿಮ ಹಾಗೂ ಆರನೇ ಹಂತದ ಮತದಾನ ಇದೆ. ಉತ್ತರಪ್ರದೇಶ, ಬಿಹಾರ, ಹಿಮಾಚಲಪ್ರದೇಶ, ಪಂಜಾಬ್, ಒಡಿಶಾ, ಪಶ್ಚಿಮ ಬಂಗಾಳ, ಜಾರ್ಖಂಡ್ ಮತ್ತು ಚಂಡೀಗಡ ರಾಜ್ಯಗಳಲ್ಲಿನ 57 ಲೋಕಸಭಾ ಕ್ಷೇತ್ರಗಳಲ್ಲಿ ಶನಿವಾರ ಮತದಾನವಾಗಲಿದೆ. ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಮೈತ್ರಿಕೂಟ ಸತತ ಮೂರನೇ ಬಾರಿ ಅಧಿಕಾರಕ್ಕೆ ಬರುವ ಪ್ರಯತ್ನದಲ್ಲಿದೆ. ಯುಪಿಎ ಒಕ್ಕೂಟ ಇಂಡಿಯಾ ಹೆಸರಿನಲ್ಲಿ ಹೊಸ ಅವತಾರದಲ್ಲಿದ್ದು ಹತ್ತು ವರ್ಷ ಬಳಿಕ ಗದ್ದುಗೆ ಹಿಡಿಯಲು ಹೊರಟಿದೆ. 2014ರಲ್ಲಿ ಗುಜರಾತ್ ಸಿಎಂ ಆಗಿದ್ದ ನರೇಂದ್ರ ಮೋದಿ ಅವರನ್ನು 2014ರ ಚುನಾವಣೆಯಲ್ಲಿ ಬಿಜೆಪಿಯ ಪ್ರಧಾನಿ ಅಭ್ಯರ್ಥಿಯಾಗಿ ಹೆಸರಿಸಲಾಗಿತ್ತು.

ಆ ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿಕೂಟ 282 ಸ್ಥಾನ ಗೆದ್ದು ಸರಳ ಬಹುಮತ ಪಡೆಯಿತು. 2019ರಲ್ಲಿ ನಡೆದಿದ್ದ ಲೋಕಸಭಾ ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿಕೂಟ ಗೆದ್ದ ಕ್ಷೇತ್ರಗಳ ಸಂಖ್ಯೆ 303ಕ್ಕೆ ಏರಿತು. ಈಗ ಎನ್‌ಡಿಎ ಮೈತ್ರಿಕೂಟ 400 ಸ್ಥಾನದ ಗಡಿ ದಾಟುವ ಅಜೆಂಡಾ ಇಟ್ಟಿದೆ. ಜೂನ್ 1ಕ್ಕೆ ಕೊನೆಯ ಹಂತದ ಚುನಾವಣೆ ಮುಕ್ತಾಯವಾದ ಬಳಿಕ ಸಂಜೆ 7ಕ್ಕೆ ವಿವಿಧ ಮತಗಟ್ಟೆ ಸಮೀಕ್ಷೆಗಳು ಹೊರಬರಲಿದ್ದು, ಯಾರು ಗೆಲ್ಲಬಹುದು ಎನ್ನುವ ಅಸ್ಪಷ್ಟ ಚಿತ್ರಣ ಸಿಗುವ ಸಾಧ್ಯತೆ ಇದೆ. ಜೂನ್ 4ಕ್ಕೆ ಮತ ಎಣಿಕೆ ಕಾರ್ಯ ನಡೆಯಲಿದೆ.

Categories
ಮಾಹಿತಿ ರಾಜ್ಯ ರಾಷ್ಟ್ರೀಯ ವಾರ್ತೆ

ಪಾನ್ ಕಾರ್ಡ್​ಗೆ ಆಧಾರ್ ಲಿಂಕ್

ಪಾನ್ ಕಾರ್ಡ್​ಗೆ ಆಧಾರ್ ಲಿಂಕ್
– ಮೇ31ರ ಒಳಗೆ ಲಿಂಕ್ ಮಾಡಿ ಇಲ್ಲಿದ್ರೆ ಡಬಲ್ ತೆರಿಗೆ !
– ಆದಾಯ ತೆರಿಗೆ ಇಲಾಖೆ ಎಚ್ಚರಿಕೆ ಸಂದೇಶ

NAMMUR EXPRESS NEWS
ನವದೆಹಲಿ : ಪ್ಯಾನ್ ಕಾರ್ಡ್​ಗೆ ಆಧಾರ್ ಅನ್ನು ಲಿಂಕ್ ಮಾಡಬೇಕೆಂದು ಆದಾಯ ತೆರಿಗೆ ಇಲಾಖೆ ಹೇಳುತ್ತಲೇ ಬಂದಿದೆ. ಮೇ 31ಕ್ಕೆ ಡೆಡ್​ಲೈನ್ ಇದೆ. ಅಷ್ಟರೊಳಗೆ ಲಿಂಕ್ ಮಾಡದೇ ಹೋದರೆ ಹೆಚ್ಚಿನ ಟಿಡಿಎಸ್ ಕಟ್ಟಬೇಕಾದೀತು. ಐಟಿ ಇಲಾಖೆ ಇಂದು ಎಕ್ಸ್​ನಲ್ಲಿ ಪೋಸ್ಟ್ ಹಾಕಿದ್ದು, ಈ ಸಂಬಂಧ ಎಚ್ಚರಿಕೆಯ ಸಂದೇಶ ರವಾನಿಸಿದೆ. ಮೇ 31ರೊಳಗೆ ನಿಮ್ಮ ಪ್ಯಾನ್ ಅನ್ನು ಆಧಾರ್ ಜೊತೆ ಜೋಡಿಸಿದರೆ ಐಟಿ ಸೆಕ್ಷನ್ 206ಎಎ ಮತ್ತು 206ಸಿಸಿ ಅಡಿಯಲ್ಲಿ ಹೆಚ್ಚಿನ ಟ್ಯಾಕ್ಸ್ ಪಾವತಿಯನ್ನು ತಪ್ಪಿಸಬಹುದು.

– ಎಷ್ಟು ಟಿಡಿಎಸ್ ಕಡಿತವಾಗುತ್ತದೆ?

ಆಧಾರ್​ಗೆ ಲಿಂಕ್ ಆಗದ ಪ್ಯಾನ್ ನಂಬರ್ ನಿಷ್ಕ್ರಿಯವಾಗಿರುತ್ತದೆ. ಅಂದರೆ ಇದನ್ನು ಬಳಸಲು ಆಗುವುದಿಲ್ಲ. ಆಧಾರ್​ಗೆ ಲಿಂಕ್ ಮಾಡಿದಲ್ಲಿ ಮಾತ್ರವೇ ಪ್ಯಾನ್ ಬಳಕೆಯೋಗ್ಯ ಎನಿಸುತ್ತದೆ. ಈಗ ಆಧಾರ್​ಗೆ ಪ್ಯಾನ್ ಅನ್ನು ಲಿಂಕ್ ಮಾಡಲು ಶುಲ್ಕ ಪಾವತಿಸಬೇಕಾಗುತ್ತದೆ. ಉಚಿತವಾಗಿ ಮಾಡಲು ಇದ್ದ ಡೆಡ್​ಲೈನ್ ಬಹಳ ದಿನಗಳ ಹಿಂದೆಯೇ ಮುಗಿದುಹೋಗಿದೆ. ಈಗ ಶುಲ್ಕ ಪಾವತಿಸಿ ಆಧಾರ್​ಗೆ ಲಿಂಕ್ ಮಾಡುವ ಮೂಲಕ ಪ್ಯಾನ್ ಕಾರ್ಡ್ ಅನ್ನು ಸಕ್ರಿಯಗೊಳಿಸಬಹುದು.

– ಎಲ್ಲಾ ಪ್ಯಾನ್ ಕಾರ್ಡ್​ದಾರರೂ ಆಧಾರ್​ಗೆ ಲಿಂಕ್ ಮಾಡಬೇಕಾ?

2017ರ ಜುಲೈ 1ರ ಬಳಿಕ ವಿತರಿಸಲಾದ ಎಲ್ಲಾ ಪ್ಯಾನ್ ನಂಬರ್​ಗೆ ಆಟೊಮ್ಯಾಟಿಕ್ ಆಗಿ ಆಧಾರ್ ಜೋಡಣೆ ಆಗಿರುತ್ತದೆ. ಆಧಾರ್ ದಾಖಲೆ ಹೊಂದಿದ್ದರೆ ಮಾತ್ರವೇ ಪ್ಯಾನ್ ನಂಬರ್ ಅಲಾಟ್ ಮಾಡಲಾಗುತ್ತದೆ. ಆದರೆ, 2017ರ ಜುಲೈ ಒಂದಕ್ಕಿಂತ ಮುಂಚೆ ಪ್ಯಾನ್ ಕಾರ್ಡ್ ಮಾಡಿಸುವಾಗ ಆಧಾರ್ ದಾಖಲೆ ಕಡ್ಡಾಯ ಇರಲಿಲ್ಲ. ಬೇರೆ ಬೇರೆ ದಾಖಲೆಗಳನ್ನು ನೀಡಿ ಪ್ಯಾನ್ ಕಾರ್ಡ್ ಮಾಡಿಸಿದವರು ಹಲವರಿದ್ದರು. ಆ ದಿನಕ್ಕೆ ಮುಂಚೆ ಪ್ಯಾನ್ ಕಾರ್ಡ್ ಮಾಡಿಸಿದವರು ಆಧಾರ್​ಗೆ ಲಿಂಕ್ ಮಾಡುವುದು ಅವಶ್ಯಕವಾಗಿದೆ.

– ಆಧಾರ್​ಗೆ ಪ್ಯಾನ್ ಲಿಂಕ್ ಆಗದಿದ್ದರೆ ಎಷ್ಟು ಟಿಡಿಎಸ್ ಕಡಿತವಾಗುತ್ತದೆ?

ಆಧಾರ್​ಗೆ ಲಿಂಕ್ ಆಗದ ಪ್ಯಾನ್ ನಿಷ್ಕ್ರಿಯಗೊಂಡಿರುತ್ತದೆ. ಕಾರ್ಡ್ ಇದ್ದೂ ಇಲ್ಲದಂತಾಗುತ್ತದೆ. ಆದಾಯ ತೆರಿಗೆ ಸೆಕ್ಷನ್ 206 ಪ್ರಕಾರ ಪ್ಯಾನ್ ಕಾರ್ಡ್ ಇಲ್ಲದ ವಹಿವಾಟಿಗೆ ಶೇ. 20ರಷ್ಟು ಟಿಡಿಎಸ್ ತೆರಿಗೆ ಕಡಿತ ಆಗುತ್ತದೆ. ನೀವು ಒಂದು ಲಕ್ಷ ರೂ ಆದಾಯ ಪಡೆದರೆ ಅದಕ್ಕೆ 20,000 ರೂ ತೆರಿಗೆಯನ್ನೇ ಪಾವತಿಸಬೇಕಾಗುತ್ತದೆ. ಹೀಗಾಗಿ, ನಿಮ್ಮ ಪ್ಯಾನ್ ಅನ್ನು ಆಧಾರ್ ಜೊತೆ ಲಿಂಕ್ ಮಾಡದೇ ಇದ್ದರೆ ಕೂಡಲೇ ಆ ಕೆಲಸ ಮಾಡಿ.

Categories
ಮಾಹಿತಿ ರಾಜ್ಯ ರಾಷ್ಟ್ರೀಯ ವಾರ್ತೆ

ಜೂನ್ 1ರಿಂದ ಹಲವು ಬದಲಾವಣೆ!

ಜೂನ್ 1ರಿಂದ ಹಲವು ಬದಲಾವಣೆ!
– ಹಣಕಾಸಿಗೆ ಸಂಬಧಿಸಿದ ಹಲವು ನಿಯಮಗಳಲ್ಲಿ ಬದಲಾವಣೆ
– ಡ್ರೈವಿಂಗ್ ಲೈಸನ್ಸ್, ದಂಡ, ಗ್ಯಾಸ್, ಆಧಾರ್ ನಿಯಮ ಬದಲು

NAMMUR EXPRESS NEWS
ನವದೆಹಲಿ : ಕೆಲವು ಹಣಕಾಸು ನಿಯಮಗಳನ್ನು ಪ್ರತಿ ತಿಂಗಳ ಮೊದಲ ದಿನಾಂಕದಂದು ಬದಲಾಯಿಸಲಾಗುತ್ತದೆ. ಈ ನಿಯಮಗಳು ಸಾರ್ವಜನಿಕರ ಜೇಬಿನ ಮೇಲೆ ನೇರ ಪರಿಣಾಮ ಬೀರುತ್ತವೆ. ಕೆಲವೇ ದಿನಗಳಲ್ಲಿ ಮೇ ತಿಂಗಳು ಮುಗಿಯಲಿದೆ, ಜೂನ್ ತಿಂಗಳು ಆರಂಭವಾಗಲಿದೆ. ಜೂನ್ 2024 ರಲ್ಲಿ, ಅನೇಕ ಹಣಕಾಸು ನಿಯಮಗಳು ಬದಲಾಗುತ್ತವೆ, ಇದು ನಿಮ್ಮ ಆರ್ಥಿಕ ಸ್ಥಿತಿಯ ಮೇಲೂ ಪರಿಣಾಮ ಬೀರಬಹುದು.

1. ಚಾಲನಾ ಪರವಾನಗಿಗೆ ಸಂಬಂಧಿಸಿದ ನಿಯಮಗಳು:

ಡ್ರೈವಿಂಗ್ ಲೈಸೆನ್ಸ್ ಪಡೆಯಲು ನೀವು ಇನ್ನು ಮುಂದೆ ಆರ್ ಟಿಒ ಕಚೇರಿಗೆ ಹೋಗಬೇಕಾಗಿಲ್ಲ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ತಿಳಿಸಿದೆ. ಬದಲಾಗಿ, ಸರ್ಕಾರವು ಆ ಸಂಸ್ಥೆಗಳಿಗೆ ಪ್ರಮಾಣಪತ್ರಗಳನ್ನು ಸಹ ನೀಡುತ್ತದೆ. ಇದರೊಂದಿಗೆ, ಆರ್ಟಿಒಗೆ ಹೋಗಿ ಪರೀಕ್ಷೆ ನೀಡುವ ಬದಲು, ವ್ಯಕ್ತಿಯು ತನ್ನ ಚಾಲನಾ ಪರವಾನಗಿಯನ್ನು ಚಾಲನಾ ಶಾಲೆಯಿಂದಲೇ ಪಡೆಯಲು ಸಾಧ್ಯವಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ನೀವು ಆ ಸಂಸ್ಥೆಗಳಲ್ಲಿ ಈ ಪ್ರಮಾಣಪತ್ರಕ್ಕಾಗಿ ಪರೀಕ್ಷೆಯನ್ನು ತೆಗೆದುಕೊಳ್ಳಬೇಕಾಗುತ್ತದೆ ಮತ್ತು ಶುಲ್ಕವನ್ನು ಸಹ ಪಾವತಿಸಬೇಕಾಗುತ್ತದೆ. ಕಲಿಕಾ ಪರವಾನಗಿಗೆ 150 ರೂ., ಪರೀಕ್ಷೆಗೆ 50 ರೂ. ಅಂತಿಮ ಪರೀಕ್ಷೆಗೆ 300 ರೂಪಾಯಿ ಶುಲ್ಕ ವಿಧಿಸಲಾಗುತ್ತದೆ, ಅದು ತೇರ್ಗಡೆಯಾಗುವವರೆಗೆ ಪ್ರತಿ ಬಾರಿಯೂ ಪಾವತಿಸಬೇಕಾಗುತ್ತದೆ. ನೀವು ಪರವಾನಗಿಯನ್ನು ನವೀಕರಿಸಲು ಬಯಸಿದರೆ, ನೀವು 200 ರೂಪಾಯಿ ಶುಲ್ಕವನ್ನು ಪಾವತಿಸಬೇಕಾಗುತ್ತದೆ.

2. ಎಲ್ ಪಿಜಿ ಸಿಲಿಂಡರ್ ಬೆಲೆ :

ತೈಲ ಮಾರುಕಟ್ಟೆ ಕಂಪನಿಗಳು ಪ್ರತಿ ತಿಂಗಳ ಮೊದಲ ದಿನಾಂಕದಂದು ಎಲ್ಪಿಜಿ ಸಿಲಿಂಡರ್ಗಳ ಬೆಲೆಯನ್ನು ನವೀಕರಿಸುತ್ತವೆ. ಮೇ ತಿಂಗಳಲ್ಲಿ ತೈಲ ಕಂಪನಿಗಳು ವಾಣಿಜ್ಯ ಸಿಲಿಂಡರ್ಗಳ ಬೆಲೆಯನ್ನು ಕಡಿತಗೊಳಿಸಿದ್ದವು. ಜೂನ್ 1, 2024 ರಂದು ದೇಶೀಯ ಸಿಲಿಂಡರ್ಗಳು ಮತ್ತು ವಾಣಿಜ್ಯ ಸಿಲಿಂಡರ್ಗಳ ಬೆಲೆಗಳನ್ನು ನವೀಕರಿಸಲಾಗುವುದು. ಎಲ್ಪಿಜಿ ಬೆಲೆಯ ಹೆಚ್ಚಳವು ಸಾಮಾನ್ಯ ಜನರ ಆರ್ಥಿಕ ಸ್ಥಿತಿಯಲ್ಲಿ ಕೋಲಾಹಲವನ್ನು ಉಂಟುಮಾಡುತ್ತದೆ.

3. ಬ್ಯಾಂಕುಗಳಿಗೆ 10 ದಿನಗಳ ರಜೆ :

ಜೂನ್ ತಿಂಗಳಲ್ಲಿ ಬ್ಯಾಂಕುಗಳಿಗೆ 10 ದಿನಗಳ ರಜೆ ಇರುತ್ತದೆ. ನಿಮ್ಮ ಮಾಹಿತಿಗಾಗಿ, ಭಾನುವಾರ, ಎರಡನೇ ಮತ್ತು ನಾಲ್ಕನೇ ಶನಿವಾರ ಬ್ಯಾಂಕುಗಳು 6 ದಿನಗಳ ಕಾಲ ಮುಚ್ಚಲ್ಪಡುತ್ತವೆ ಎಂದು ನಿಮಗೆ ತಿಳಿಸಿ. ಅದೇ ಸಮಯದಲ್ಲಿ, ಹಬ್ಬದ ಕಾರಣದಿಂದಾಗಿ ಬ್ಯಾಂಕುಗಳು ಮುಚ್ಚಲ್ಪಡುತ್ತವೆ, ಆದರೆ ಬ್ಯಾಂಕ್ ಸ್ಥಗಿತದ ಸಮಯದಲ್ಲಿ, ನೀವು ಮೊಬೈಲ್ ಅಥವಾ ನೆಟ್ ಬ್ಯಾಂಕಿಂಗ್ ಮೂಲಕ ಬ್ಯಾಂಕಿಗೆ ಸಂಬಂಧಿಸಿದ ಅನೇಕ ಕೆಲಸಗಳನ್ನು ಮಾಡಬಹುದು. ಇದಲ್ಲದೆ, ನೀವು ಎಟಿಎಂಗಳಿಗೆ ಭೇಟಿ ನೀಡುವ ಮೂಲಕ ಬ್ಯಾಂಕಿಂಗ್ ಸೌಲಭ್ಯಗಳ ಲಾಭವನ್ನು ಸಹ ಪಡೆಯಬಹುದು. ಬ್ಯಾಂಕ್ ಮುಚ್ಚುವ ಸಮಯದಲ್ಲಿ ಎಲ್ಲಾ ಆನ್ಲೈನ್ ಸೌಲಭ್ಯಗಳು ಕಾರ್ಯನಿರ್ವಹಿಸಲಿವೆ. ಇವುಗಳ ಮೂಲಕ, ನಿಮ್ಮ ಬ್ಯಾಂಕಿಗೆ ಸಂಬಂಧಿಸಿದ ಹೆಚ್ಚಿನ ಕೆಲಸಗಳನ್ನು ನೀವು ಮನೆಯಿಂದ ಆರಾಮವಾಗಿ ನಿಭಾಯಿಸಬಹುದು.

4. ಸಂಚಾರ ನಿಯಮಗಳಲ್ಲಿಯೂ ಬದಲಾವಣೆ

ಒಬ್ಬ ವ್ಯಕ್ತಿಯು ಅತಿ ವೇಗದಲ್ಲಿ ವಾಹನವನ್ನು ಓಡಿಸಿದರೆ, ಅವನು 1000 ರೂ.ಗಳಿಂದ 2000 ರೂ.ಗಳವರೆಗೆ ದಂಡವನ್ನು ಪಾವತಿಸಬೇಕಾಗುತ್ತದೆ. ಅದೇ ಸಮಯದಲ್ಲಿ, ಪರವಾನಗಿ ಇಲ್ಲದೆ ವಾಹನ ಚಲಾಯಿಸಿದ್ದಕ್ಕಾಗಿ 500 ರೂ.ಗಳ ದಂಡವನ್ನು ಪಾವತಿಸಬೇಕಾಗುತ್ತದೆ ಮತ್ತು ಚಾಲಕ ಹೆಲ್ಮೆಟ್ ಅಥವಾ ಸೀಟ್ ಬೆಲ್ಟ್ ಇಲ್ಲದೆ ಚಾಲನೆ ಮಾಡಿದರೆ 100 ರೂ.ಗಳ ದಂಡವನ್ನು ಪಾವತಿಸಬೇಕಾಗುತ್ತದೆ. ಇದಲ್ಲದೆ, ಹೊಸ ಚಾಲನಾ ಪರವಾನಗಿ ಪಡೆಯಲು ದಾಖಲೆಗಳ ನಿಯಮಗಳಲ್ಲಿಯೂ ಬದಲಾವಣೆಗಳನ್ನು ಮಾಡಲಾಗಿದೆ. ಈಗ, ಸಚಿವಾಲಯವು ಅರ್ಜಿದಾರರಿಗೆ ಅವರು ಪಡೆಯುವ ಪರವಾನಗಿಗೆ ಅಗತ್ಯವಿರುವ ನಿರ್ದಿಷ್ಟ ದಾಖಲೆಗಳ ಬಗ್ಗೆ ಮುಂಚಿತವಾಗಿ ತಿಳಿಸುತ್ತದೆ. ಭಾರತದಾದ್ಯಂತ ಪರಿಸರವನ್ನು ಉಳಿಸುವ ಮತ್ತು ರಕ್ಷಿಸುವ ಸಲುವಾಗಿ, ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು 9000 ಹಳೆಯ ಸರ್ಕಾರಿ ವಾಹನಗಳನ್ನು ಹಂತ ಹಂತವಾಗಿ ತೆಗೆದುಹಾಕುವ ಮತ್ತು ಇತರ ವಾಹನಗಳಿಗೆ ಹೊರಸೂಸುವಿಕೆಯ ಮಾನದಂಡಗಳನ್ನು ಸುಧಾರಿಸುವ ಮಾರ್ಗಗಳನ್ನು ಪರಿಗಣಿಸುತ್ತಿದೆ.

5. ಆಧಾರ್ ಕಾರ್ಡ್ ನವೀಕರಣಗಳು :

ಯುಐಡಿಎಐ ಪ್ರಕಾರ, ನೀವು ಜೂನ್ 14 ರವರೆಗೆ ಉಚಿತವಾಗಿ ಬೇಸ್ ಅನ್ನು ನವೀಕರಿಸಲು ಸಾಧ್ಯವಾಗುತ್ತದೆ. ನೀವು ಆಧಾರ್ ಕಾರ್ಡ್ ಅನ್ನು ಆನ್ಲೈನ್ನಲ್ಲಿ ಸುಲಭವಾಗಿ ನವೀಕರಿಸಬಹುದು. ಆಫ್ಲೈನ್ ಅಪ್ಡೇಟ್ಗಳಿಗಾಗಿ, ನೀವು ಪ್ರತಿ ನವೀಕರಣಕ್ಕೆ 50 ರೂ.ಗಳನ್ನು ಪಾವತಿಸಬೇಕಾಗುತ್ತದೆ.