Categories
ಮಾಹಿತಿ ರಾಜ್ಯ ರಾಷ್ಟ್ರೀಯ ವಾರ್ತೆ

ಎಲ್‌ಐಸಿ ವಿಶ್ವದ ಅತ್ಯಂತ ಬಲಿಷ್ಠ ವಿಮಾ ಬ್ರಾಂಡ್!

ಎಲ್‌ಐಸಿ ವಿಶ್ವದ ಅತ್ಯಂತ ಬಲಿಷ್ಠ ವಿಮಾ ಬ್ರಾಂಡ್!
– ಫೈನಾನ್ಸ್ ಇನ್ಸೂರೆನ್ಸ್ ವರದಿ: ಏನಿದು ವರದಿ..?

NAMMUR EXPRESS NEWS
ನವದೆಹಲಿ: ಭಾರತದ ಸರ್ಕಾರಿ ಸ್ವಾಮ್ಯದ ಭಾರತೀಯ ಜೀವ ವಿಮಾ ನಿಗಮ (ಎಲ್‌ಐಸಿ) ವಿಶ್ವದಲ್ಲೇ ಅತ್ಯಂತ ಬಲಿಷ್ಠ ವಿಮಾ ಬ್ರಾಂಡ್ ಎಂಬ ಹೆಗ್ಗಳಿಕೆಗೆ ಪಾತ್ರ ವಾಗಿದೆ. ‘ಬ್ರಾಂಡ್ ಫೈನಾನ್ಸ್ ಇನ್ಸೂರೆನ್ಸ್ 100’ ಬಿಡುಗಡೆ ಮಾಡಿರುವ 2024ನೇ ಸಾಲಿನ ವರದಿಯಲ್ಲಿ ಈ ಅಂಶವಿದೆ. ಎಲ್‌ಐಸಿಯ ಬ್ರಾಂಡ್ ಮೌಲ್ಯ 9.8 ಶತಕೋಟಿ ಡಾಲರ್‌ನಲ್ಲೇ ಸ್ಥಿರವಾಗಿ ಮುಂದುವರೆದಿದೆ. ಬ್ಯಾಂಡ್ ಸ್ಟೆಂಥ್‌ ಇಂಡೆಕ್ಸ್‌ನಲ್ಲಿ ಎಲ್ ಐ ಸಿ ಶೇ.88.3ರಷ್ಟು ಅಂಕ ಹೊಂದಿದೆ ಮತ್ತು ಬ್ರಾಂಡ್ ಸ್ಟೆಂಥ್ ರೇಟಿಂಗ್‌ನಲ್ಲಿ ಎಎಎ ಸ್ತರ ಹೊಂದಿದೆ ಎಂದು ವರದಿ ಹೇಳಿದೆ. ಎಲ್‌ಐಸಿ ನಂತರದ ಸ್ಥಾನವನ್ನು ಕ್ಯಾಥೆ ಲೈಫ್‌ ಇನ್ಸೂರೆನ್ಸ್, ಎನ್‌ಆರ್‌ಎಂಎ ಇನ್ಸೂರೆನ್ಸ್ ಹೊಂದಿವೆ. ಇನ್ನು ಬ್ಯಾಂಡ್ ಮೌಲ್ಯದಲ್ಲಿ ಚೀನಾದ ಪಿಂಗ್ ಆ್ಯನ್, ಚೀನಾ ಲೈಫ್ ಇನ್ಸೂರೆನ್ಸ್ ಮತ್ತು ಸಿಪಿಐಸಿ ಕ್ರಮವಾಗಿ ಮೊದಲ ಮೂರು ಸ್ಥಾನ ಪಡೆದಿವೆ ಎಂದು ವರದಿಯಲ್ಲಿ ವಿವರಿಸಲಾಗಿದೆ.

Categories
ರಾಜ್ಯ ರಾಷ್ಟ್ರೀಯ ವಾರ್ತೆ

ಬ್ಯಾನ್ ಆಗಲಿದ್ಯಾ 100 ರೂ. ಹಳೆ ನೋಟು!?

ಬ್ಯಾನ್ ಆಗಲಿದ್ಯಾ 100 ರೂ. ಹಳೆ ನೋಟು!?
– ಆರ್‌ಬಿಐ ಕೊಟ್ಟ ಸೂಚನೆ ಏನು?

NAMMUR EXPRESS NEWS
ನವದೆಹಲಿ: 100 ರೂ ಹಳೆ ನೋಟುಗಳು ಬ್ಯಾನ್ ಆಗಲಿದೆ, ಹೀಗಾಗಿ ಆದಷ್ಟು ಬೇಗ ಬ್ಯಾಂಕ್ಗಳಿಗೆ ನಿಮ್ಮ ಬಳಿ ಇರುವ ಹಳೆ ನೋಟುಗಳನ್ನ ವಾಪಸ್ ಮಾಡಿ ಹೊಸ ನೋಟುಗಳನ್ನ ಪಡೆದುಕೊಳ್ಳಿ ಎಂಬ ಸಂದೇಶ ಒಂದು ವಾಟ್ಸಾಪ್ ಮತ್ತು ಇತರೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದು ಜನರನ್ನ ಗೊಂದಲಕ್ಕೀಡು ಮಾಡಿದೆ. ಇದು ನಿಜವೋ ಸುಳ್ಳೋ ಅಂತ ತಿಳಿಯದೇ ಕೆಲವರು ಬ್ಯಾಂಕ್ ಗೆ ಭೇಟಿ ಕೊಟ್ಟವರು ಬಹಳ ಮಂದಿ ಇದ್ದಾರೆ. ಇತ್ತೀಚೆಗಷ್ಟೇ ರಿಸರ್ವ್ ಬ್ಯಾಂಕ್‌ ಆಫ್ ಇಂಡಿಯಾ 2000 /- ಮುಖಬೆಲೆಯ ನೋಟುಗಳನ್ನ ಬ್ಯಾಂಕ್ ಗೆ ಹಿಂದಿರುಗಿಸಿ ಬದಲಿ ಹಣ ಪಡೆದುಕೊಳ್ಳಲು ಸೂಚಿಸಿತ್ತು. ಈ ಹಿಂದೆ 2017ರ ನವೆಂಬರ್ ನಲ್ಲಿ ಕೇಂದ್ರ ಸರ್ಕಾರ 500 ಮತ್ತು 1000 ಮುಖಬೆಲೆಯ ನೋಟುಗಳನ್ನ ಅಮ್ಮನ್ನೀಕರಣಗೊಳಿಸಿ ಆದೇಶ ಹೊರಡಿಸಿತ್ತು. ಆ ಸಂದರ್ಭದಲ್ಲಿ ಇದಕ್ಕೆ ಪರ್ಯಾಯವಾಗಿ 100,200 ಮತ್ತು 500 ಹಾಗೂ ಸಾವಿರ ಮುಖಬೆಲೆಯ ಹೊಸ ನೋಟುಗಳನ್ನ ಜಾರಿಗೊಳಿಸಿತ್ತು. ತದನಂತರ 6 ವರ್ಷಗಳ ಬಳಿಕ ಮತ್ತೆ ಕೇಂದ್ರ ಸರ್ಕಾರ ಹಾಗೂ ಆರ್ ಬಿಐ 1000 ರೂಪಾಯಿ ನೋಟುಗಳನ್ನ ಬನ್ ಮಾಡಿತ್ತು.

ಇದೀಗ ಅದೇ ರೀತಿ ಮತ್ತೆ 100 ರೂಪಾಯಿ ಹಳೆ ನೋಟುಗಳು ಬ್ಯಾನ್ ಆಗಿಲಿದೆ ಎಂಬ ಸುದ್ದಿ ಹರಿದಾಡ್ತಿದೆ. ಆದ್ರೆ ಇದು ನಿಜವಲ್ಲ ಎಂದು ಬ್ಯಾಂಕ್ ಸ್ಪಷ್ಟಪಡಿಸಿದೆ.ನೂರು ರೂಪಾಯಿ ಹಳೆ ನೋಟ್‌ ಬ್ಯಾನ್ ಆಗೋದಿಲ್ಲ! ನೂರು ರೂಪಾಯಿ ಮುಖ ಬೆಲೆಯ ಹಳೆನೋಟು ಅಮಾನ್ಯ ಎಂಬ ಸುದ್ದಿ ಹರಿದಾಡಿದ್ದು, ಕೊನೆಗೂ ಈ ಬಗ್ಗೆ ಆರ್ ಬಿಐ ಸ್ಪಷ್ಟನೆ ನೀಡಿದೆ. ಹಾಗಾಗಿ ಜನರಿಗೂ ಕೂಡ ಈ ವಿಚಾರದ ಬಗ್ಗೆ ಗೊಂದಲಗೊಳ್ಳದಂತೆ ಸೂಚನೆ ಸಿಕ್ಕಿದೆ. ನೂರರ ಮುಖಬೆಲೆ ನೋಟು ಮಾರ್ಚ್ 31ರ ವರೆಗೆ ಮಾತ್ರ ಬಳಸಬಹುದು ಆ ನಂತರ ಮತ್ತೆ ಬಳಸಬಾರದು ಎಂದು ಸುಳ್ ಸುದ್ದಿ ಹಬ್ಬಿಸಲಾಗಿತ್ತು. ಹೀಗಾಗಿ ಜನರು ತಮ್ಮ ಹಳೆ ನೂರು ರೂಪಾಯಿ ನೋಟು ಹಿಂದಕ್ಕೆ ಹಿಂದಿರುಗಿಸಲು ಬ್ಯಾಂಕಿನ ಮೊರೆ ಹೋಗುವ ಅಗತ್ಯ ಇಲ್ಲ ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಹೇಳಿದೆ.

ಆ ಮೂಲಕ ನೂರು ರೂಪಾಯಿಯ ಹೊಸ ಮತ್ತು ಹಳೆಯ ಎರಡು ನೋಟುಗಳೂ ಕೂಡ ಚಾಲ್ತಿಯಲ್ಲಿ ಇರಲಿವೆ ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ತಿಳಿಸಿದೆ. ಇನ್ನು ಮುಂದೆ ಈ ರೀತಿಯ ಸುದ್ದಿಗಳು ನಿಮ್ಮನ್ನ ತಲುಪಿದರೆ ಗಾಬರಿಯಾಗದೆ, ಸರಿಯಾದ ಮಾಹಿತಿಯನ್ನು ಪಡೆದುಕೊಂಡ ನಂತರವಷ್ಟೇ ಮುಂದುವರೆಯಬೇಕು. ಹಾಗೇನಾದ್ರೂ ಮತ್ತೆ ಯಾವುದಾದ್ರೂ ನೋಟ್ ಬ್ಯಾನ್ ಆದಲ್ಲಿ ಬ್ಯಾಂಕ್ ಅದರ ಬಗ್ಗೆ ಅಧಿಕೃತ ಘೋಷಣೆ ಮಾಡಲಿದೆ ಮತ್ತು ನೋಟುಗಳ ಎಂಜ್ ಮಾಡಿಕೊಳ್ಳಲು ಸಾಕಷ್ಟು ಕಾಲವಕಾಶವನ್ನೂ ನೀಡಲಿದೆ.

Categories
ರಾಜಕೀಯ ರಾಜ್ಯ ರಾಷ್ಟ್ರೀಯ ವಾರ್ತೆ

ಲೋಕಸಭಾ ಸಮರ: ಟಾಪ್ 5 ನ್ಯೂಸ್

ಬಿಜೆಪಿ ಪಕ್ಷಕ್ಕೆ ಶಾಕ್!
– ವಿಕಸಿತ ಭಾರತ ಮೆಸೇಜ್ ಮಾಡದಂತೆ ಆದೇಶ
– ಪಕ್ಷದ ವಿರುದ್ಧ ಸಣ್ಣ ದನಿ ಎತ್ತಿದ ಸದಾನಂದ ಗೌಡ
– ಬಿಜೆಪಿ ಈ ಬಾರಿ ಅಬ್ಬರದ ಪ್ರಚಾರಕ್ಕೆ ಬ್ರೇಕ್!?
– ಜೆಡಿಎಸ್ – ಬಿಜೆಪಿ ಸಮನ್ವಯ ಸಮಿತಿ ರಚನೆ
– ಚುನಾವಣೆ ಹಿನ್ನೆಲೆ: ಹಲವು ಪರೀಕ್ಷೆ ಮುಂದೂಡಿಕೆ
– ಕೇಜ್ರಿವಾಲ್ ಬಂಧನ: ಜೈಲಿನಿಂದಲೇ ಆಡಳಿತ ಎಂದ ಕೇಜ್ರಿವಾಲ್

NAMMUR EXPRESS NEWS
ನವ ದೆಹಲಿ: ಅಭಿವೃದ್ಧಿ ಹೊಂದಿದ ಭಾರತದ ಸಂದೇಶಗಳನ್ನು ವಾಟ್ಸಾಪ್ನಲ್ಲಿ ಕಳುಹಿಸುವುದನ್ನು ತಕ್ಷಣ ನಿಲ್ಲಿಸುವಂತೆ ಚುನಾವಣಾ ಆಯೋಗವು ಮಾಹಿತಿ ತಂತ್ರಜ್ಞಾನ ಸಚಿವಾಲಯಕ್ಕೆ ಆದೇಶಿಸಿದೆ. ಲೋಕಸಭಾ ಚುನಾವಣೆ 2024ರ ದಿನಾಂಕಗಳನ್ನ ಘೋಷಿಸಿದ ನಂತರ, ದೇಶದಲ್ಲಿ ಮಾದರಿ ನೀತಿ ಸಂಹಿತೆ ಜಾರಿಗೆ ಬಂದಿದೆ ಎಂದು ಆಯೋಗ ತಿಳಿಸಿದೆ. ಹೀಗಾಗಿ ಅಂತಹ ಸಂದೇಶವನ್ನ ಕಳುಹಿಸುವಂತಿಲ್ಲ ಎಂದು ತಾಕೀತು ಮಾಡಿದೆ. ಹೌದು, ಕೇಂದ್ರ ಸರ್ಕಾರವು ವಾಟ್ಸಾಪ್‌’ನಲ್ಲಿ ಕಳುಹಿಸುತ್ತಿರುವ ವಿಕಸಿತ್ ಭಾರತ್ ಸಂದೇಶಗಳ ಬಗ್ಗೆ ಚುನಾವಣಾ ಆಯೋಗವು ಗಂಭೀರವಾಗಿದೆ. ಆ ಸಂದೇಶಗಳನ್ನ ಕಳುಹಿಸುವುದನ್ನ ತಕ್ಷಣವೇ ನಿಲ್ಲಿಸಿ, ಮಾದರಿ ನೀತಿ ಸಂಹಿತೆ ಅನುಸರಿಸುವಂತೆ ನಿರ್ದೇಶನ ನೀಡಲಾಗಿದೆ. ಅಷ್ಟೇ ಅಲ್ಲ. ಈ ಬಗ್ಗೆ ಸಂಪೂರ್ಣ ವರದಿ ಸಿದ್ಧಪಡಿಸಿ ಸಲ್ಲಿಸುವಂತೆ ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಇಲಾಖೆಗೆ ಸೂಚಿಸಲಾಗಿದೆ.

ಕೇಜ್ರಿವಾಲ್ ಬಂಧನ: ಜೈಲಿನಿಂದಲೇ ಆಡಳಿತ ಎಂದ ಕೇಜ್ರಿವಾಲ್

ಮದ್ಯನೀತಿ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದಿಂದ ಬಂಧನಕ್ಕೊಳಗಾಗಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರವಾಲ್ ಇದೀಗ ಜೈಲಿನಿಂದಲೇ ಆಡಳಿತ ನಡೆಸುವುದಾಗಿ ಘೋಷಣೆ ಮಾಡಿದ್ದಾರೆ. ಅಲ್ಲದೆ ಅರವಿಂದ್ ಕುಟುಂಬದವರನ್ನು ಇಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಭೇಟಿಯಾಗಲಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಬಂಧನದ ಕುರಿತು ಪ್ರತಿಕ್ರಿಯಿಸಿದ ದೆಹಲಿ ಸಚಿವ ಮತ್ತು ಆಮ್ ಆದ್ಮ ಪಕ್ಷದ ನಾಯಕ ಅತಿಶಿ, ಜಾರಿ ನಿರ್ದೇಶನಾಲಯದ ಹಿಂದೆ ರಾಜಕೀಯ ಮಾಡುವುದನ್ನು ಬಿಜೆಪಿ ನಿಲ್ಲಿಸುವಂತೆ ಕೇಳಿಕೊಂಡರು.ಬಿಜೆಪಿ ಪ್ರಜಾಪ್ರಭುತ್ವವನ್ನು ಕೊಲೆ ಮಾಡುತ್ತಿದೆ. ಇವೆಲ್ಲಾ ಮಾಡಿ ಚುನಾವಣೆ ಗೆಲ್ಲಬಹುದು ಎಂದು ಬಿಜೆಪಿ ಅಂದುಕೊಂಡಿರಬೇಕು ಎಂದು ಅತಿಶಿ ಹೇಳಿದ್ದಾರೆ.

ಬಿಜೆಪಿಯನ್ನು ಶುದ್ಧೀಕರಣ ಮಾಡುವುದಾಗಿ ಘೋಷಣೆ

ಲೋಕ ಸಭಾ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ ಮಾಜಿ ಮುಖ್ಯಮಂತ್ರಿ, ಮಾಜಿ ಕೇಂದ್ರ ಸಚಿವರೂ ಆಗಿರುವ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಸದಸ್ಯ ಡಿ.ವಿ. ಸದಾನಂದ ಗೌಡ ಅವರು ಕಾಂಗ್ರೆಸ್ ಸೇರ್ಪಡೆ ಬಗ್ಗೆ ಇದ್ದಂತಹ ಊಹಾ-ಪೋಹಾಗಳಿಗೆ ತೆರೆ ಎಳೆದಿದ್ದಾರೆ. ಈ ಬಗ್ಗೆ ಸುದ್ಧಿಗೋಷ್ಠಿ ಮೂಲಕ ಮಾಹಿತಿ ನೀಡಿದ ಡಿ.ವಿ. ಸದಾನಂದ ಗೌಡ ಅವರು ಕಾಂಗ್ರೆಸ್ ಸೇರುವ ವಿಚಾರವನ್ನು ಅಲ್ಲಗಳೆದಿದ್ದಾರೆ. ಕೇಂದ್ರದಲ್ಲಿ ಮೋದಿ ಸರಕಾರ ಮತ್ತೊಮ್ಮೆ ಅಧಿಕಾರಕ್ಕೆ ಬರಬೇಕು. ಕರ್ನಾಟಕದ ಬಿಜೆಪಿಯನ್ನು ಶುದ್ಧೀಕರಣ ಮಾಡುವವರೆಗೆ ವಿರಮಿಸುವುದಿಲ್ಲ ಎಂದು ಹೇಳಿದ್ದಾರೆ. ಕೇಂದ್ರದಲ್ಲಿ ಮೋದಿ ಸರಕಾರ ಮತ್ತೊಮ್ಮೆ ಅಧಿಕಾರಕ್ಕೆ ಬರಬೇಕು. ಕರ್ನಾಟಕದ ಬಿಜೆಪಿಯನ್ನು ಶುದ್ಧೀಕರಣ ಮಾಡುವವರೆಗೆ ವಿರಮಿಸುವುದಿಲ್ಲ. ರಾಜ್ಯದಲ್ಲಿ ಜವಾಬ್ದಾರಿ ವಹಿಸಿಕೊಂಡವರು ಸ್ವಾರ್ಥಿಗಳಾಗಿದ್ದಾರೆ. ತನಗೆ., ತನ್ನ ಮನೆಯವರಿಗೆ, ತನ್ನ ಚೇಲಾಗಳಿಗೆ ಅಂತಾಗಿದೆ ಇದು ಆಗ್ಬಾರ್ದು ಎಂದಿದ್ದಾರೆ.

ಬಿಜೆಪಿಯಿಂದ ನೋ ಮೈಕ್, ನೋ ಚೇರ್ಸ್ ಪ್ರಚಾರ

ಲೋಕಸಭೆ ಚುನಾವಣೆ ನಿಟ್ಟಿನಲ್ಲಿ ಸ್ಥಳೀಯ ಮಟ್ಟದಲ್ಲಿ ಸಣ್ಣಮಟ್ಟಿನ ಜನ ಸಮುದಾಯವನ್ನು ತಲುಪಿ ಪ್ರಚಾರ ಮಾಡುವವ ನಿಟ್ಟಿನಲ್ಲಿ ಕರ್ನಾಟಕದಲ್ಲಿ ಬಿಜೆಪಿ ನೋ ಮೈಕ್, ನೋ ಚೇರ್ಸ್ ಅಭಿಯಾನ ಹಮ್ಮಿಕೊಂಡಿದೆ. ತಳಮಟ್ಟದಲ್ಲಿ ಜನರನ್ನು ತಲುಪುವ ಉದ್ದೇಶದೊಂದಿಗೆ ಈ ಅಭಿಯಾನ ಹಮ್ಮಿಕೊಳ್ಳಲಾಗಿದ್ದು ಏಪ್ರಿಲ್ 5ರ ಒಳಗೆ ರಾಜ್ಯದ ಎಲ್ಲಾ ಕಡೆಗಳಲ್ಲಿ ಚುನಾವಣಾ ಪ್ರಚಾರ ಪೂರ್ಣಗೊಳಿಸಲು ನಿರ್ಧರಿಸಲಾಗಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ. ಈ ಅಭಿಯಾನದಡಿ ರಸ್ತೆ ಬದಿಗಳಲ್ಲಿ, ಸಣ್ಣಪುಟ್ಟ ಹಳ್ಳಿಗಳ ಮರಗಳ ಅಡಿಯಲ್ಲಿ ಅಥವಾ ಮನೆಗಳಲ್ಲಿ ಚುನಾವಣಾ ಪ್ರಚಾರ ನಡೆಸಲಾಗುತ್ತದೆ. ಒಂದು ಬಾರಿಯ ಸಭೆಯ ವೇಳೆ ಸುಮಾರು ನೂರು ಜನರನ್ನು ತಲುಪುವ ಗುರಿ ಹೊಂದಲಾಗಿದೆ ಎಂದು ಪಕ್ಷದ ಹಿರಿಯ ನಾಯಕರೊಬ್ಬರು ತಿಳಿಸಿದ್ದಾರೆ.

ದೊಡ್ಡ ದೊಡ್ಡ ರ್‍ಯಾಲಿಗಳನ್ನು ನಡೆಸುವ ಬದಲು ಸಣ್ಣಪುಟ್ಟ ಸಭೆಗಳನ್ನು ನಡೆಸುವ ಮೂಲಕ ಜನರನ್ನು ತಲುಪುವುದು ಉತ್ತಮ ವಿಧಾನವಾಗಿದೆ. ಈ ಮೂಲಕ ಪ್ರತಿಯೊಬ್ಬರಿಗೂ ನಾವು ಸರ್ಕಾರದ ಸಾಧನೆಗಳನ್ನು ಮನವರಿಕೆ ಮಾಡಿಕೊಡಬಹುದು ಎಂದು ಪಕ್ಷದ ವಿವಿಧ ಘಟಕಗಳ ಮುಖ್ಯಸ್ಥರ ಸಭೆಯಲ್ಲಿ ತೀರ್ಮಾನಕ್ಕೆ ಬರಲಾಗಿದೆ . ಸಣ್ಣ ಮಟ್ಟದ ಸ್ಥಳೀಯ ಚುನಾವಣಾ ಪ್ರಚಾರ ಸಭೆಗಳಿಗೆ ಪಕ್ಷದ ರಾಜ್ಯ ಘಟಕವು 22 ವಿವಿಧ ಘಟಕಗಳನ್ನು ಸ್ಥಾಪಿಸಿದೆ. ಇದರಲ್ಲಿ ರೈತರು, ವಕೀಲರು, ವೈದ್ಯರು ಹಾಗೂ ಕೇಂದ್ರ ಸರ್ಕಾರ ಯೋಜನೆಗಳ ಫಲಾನುಭವಿಗಳು ಸೇರಿದ್ದಾರೆ.

ಬಿಜೆಪಿ-ಜೆಡಿಎಸ್ ಸಮನ್ವಯ ಸಮಿತಿ

ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿಯಲ್ಲಿ ಉಭಯ ಪಕ್ಷಗಳ ನಡುವೆ ಮೂಡುವ ವೈಮನಸ್ಸು ಹಾಗೂ ಗೊಂದಲಗಳನ್ನು ಪರಿಹರಿಸುವ ಸಲುವಾಗಿ ಸಮನ್ವಯ ಸಮಿತಿಯನ್ನು ರಚಿಸಲು ಉದ್ದೇಶಿಸಲಾಗಿದೆ. ಸಮಿತಿಯಲ್ಲಿ ಎರಡು ಪಕ್ಷಗಳ ನಾಯಕರು ಇರಲಿದ್ದಾರೆ. ಕ್ಷೇತ್ರ ಮಟ್ಟದಲ್ಲಿ ಈ ನಾಯಕರು ಕಾರ್ಯನಿರ್ವಹಿಸಲಿದ್ದಾರೆ.

ಮೇ 8ಕ್ಕೆ ನಿಗದಿಯಾಗಿದ್ದ ಪಿಎಸ್ಐ ಪರೀಕ್ಷೆ ಮುಂದೂಡಿಕೆ

ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಮೇ 8 ಕ್ಕೆ ನಿಗದಿಯಾಗಿದ್ದ ಪಿಎಸ್ಐ ಪರೀಕ್ಷೆಯನ್ನು ಮುಂದೂಡಲಾಗಿದೆ. ಪೊಲೀಸ್‌ ಸಬ್‌ ಇನ್ಸ್‌ಪೆಕ್ಟರ್‌ (ಸಿವಿಲ್)‌, ಕಲ್ಯಾಣ ಕರ್ನಾಟಕದ ಪ್ರದೇಶದ ಸ್ಥಳೀಯ ಹುದ್ದೆಗಳನ್ನು ಒಳಗೊಂಡಂತೆ ಒಟ್ಟು 402 ಖಾಲಿ ಹುದ್ದೆಗಳ ನೇರ ನೇಮಕಾತಿಯ ಲಿಖಿತ ಪರೀಕ್ಷೆಯನ್ನು ನಡೆಸಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಸಿದ್ಧತೆ ನಡೆಸಿತ್ತು. ಅದರಂತೆ ಮೇ. 8ಕ್ಕೆ ಪರೀಕ್ಷಾ ದಿನಾಂಕವನ್ನು ನಿಗದಿಗೊಳಿಸಲಾಗಿತ್ತು. ಆದರೆ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ದೇಶಾದ್ಯಂತ ನೀತಿ ಸಂಹಿತೆ ಜಾರಿಯಲ್ಲಿದೆ. ಈ ಕಾರಣದಿಂದ ಮೇ.8ಕ್ಕೆ ನಡೆಯಬೇಕಿದ್ದ ಎಲ್ಲ ಪರೀಕ್ಷೆಯನ್ನು ಮುಂದೂಡಲಾಗಿದೆ. ಮುಂದಿನ ಪರೀಕ್ಷೆಯ ದಿನಾಂಕ‌ವನ್ನು ಪ್ರಾಧಿಕಾರದ ವೈಬ್‌ಸೈಟ್‌ನಲ್ಲಿ ಹೊರಡಿಸಲಾಗುವುದು ಎಂದು ಪ್ರಕಟಣೆ ಹೊರಡಿಸಿದೆ.

Categories
ಕರಾವಳಿ ಮಂಗಳೂರು ರಾಷ್ಟ್ರೀಯ ವಾರ್ತೆ

ಮಂಗಳೂರಿನ ಒಂದೇ ಕುಟುಂಬದ ನಾಲ್ವರು ಸಾವು!

ಮಂಗಳೂರಿನ ಒಂದೇ ಕುಟುಂಬದ ನಾಲ್ವರು ಸಾವು!
– ಸೌದಿಯಲ್ಲಿ ಭೀಕರ ಅಪಘಾತ: ಕಾರು ಅಪಘಾತ
– ಇಬ್ಬರು ಪವಾಡ ರೀತಿಯಲ್ಲಿ ಪಾರು

NAMMUR EXPRESS NEWS
ಸೌದಿ ಅರೇಬಿಯಾದಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮಂಗಳೂರು ಮೂಲದ ಒಂದೇ ಕುಟುಂಬದ ನಾಲ್ವರು ಪ್ರಾಣ ಕಳೆದುಕೊಂಡಿದ್ದಾರೆ. ಕತಾರ್‌ನಿಂದ ಮದೀನಾಕ್ಕೆ ಉಮ್ರಾ ನಿರ್ವಹಿಸಲು ಬುಧವಾರ ರಾತ್ರಿ ಕಾರಿನಲ್ಲಿ ತೆರಳುತ್ತಿದ್ದಾಗ ರಿಯಾದ್‌ ಹೊರವಲಯದ ಝುಲ್ಫಾ ಎಂಬಲ್ಲಿ ಈ ದುರ್ಘಟನೆ ನಡೆದಿದೆ. ಮೃತ ನಾಲ್ವರು ಒಂದೇ ಕುಟುಂಬದವರಾಗಿದ್ದು, ಮೂಲತಃ ದಕ್ಷಿಣ ಕನ್ನಡದ ಹಳೆಯಂಗಡಿಯ ತೋಕೂರಿನ ನಿವಾಸಿಗಳಾಗಿದ್ದಾರೆ. ಮೃತರನ್ನು ಇಲ್ಲಿನ ಶಮೀಮ್‌ ಹಾಗೂ ಝರೀನಾ ದಂಪತಿಯ ಪುತ್ರಿ ಹಿಬಾ(29), ಆಕೆಯ ಪತಿ ಮುಹ್ಮದ್‌ ರಮೀಝ್(34), ಅವರ ಮಕ್ಕಳಾದ ಆರೂಶ್‌(3) ಹಾಗೂ ಮೂರು ತಿಂಗಳ ರಾಹ ಎಂದು ಗುರುತಿಸಲಾಗಿದೆ.

ಹಿಬಾ ಹಾಗೂ ಕುಟುಂಬಸ್ಥರು ಚಲಿಸುತ್ತಿದ್ದ ಕಾರು ಡಿವೈಡರ್‌ಗೆ ಡಿಕ್ಕಿಯಾಗಿ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಕಾರು ಸಂಪೂರ್ಣ ನುಜ್ಜು-ಗುಜ್ಜಾಗಿದ್ದು, ನಾಲ್ಕವರು ಕೂಡ ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದಾರೆ. ಈ ಕಾರಿನಲ್ಲಿ ಹಿಬಾ ಅವರ ಸಹೋದರಿ ಶಬ್ನಮ್‌ ಅವರ ಮಗಳು ಫಾತಿ(19) ಸಂಚರಿಸುತ್ತಿದ್ದು, ಅವರು ಕೂಡ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಇನ್ನು ಈ ಕಾರಿನಲ್ಲಿದ್ದ ಹಿಬಾ ಅವರ ಮತ್ತೊಬ್ಬರು ಸಹೋದರಿ ಲುಬ್ನಾ ಅವರ 4 ವರ್ಷದ ಈಸ ಎಂಬ ಮಗು ಯಾವುದೇ ಪ್ರಾಣಾಪಾಯವಿಲ್ಲದೆ ಪವಾಡಸದೃಶವಾಗಿ ಬದುಕಿಳಿದಿದೆ.

ಮೃತ ಹಿಬಾ ಅವರ ತಂದೆ ಶಮೀಮ್‌, ತಾಯಿ ಝರೀನಾ ಹಾಗೂ ಮೊಮ್ಮಕ್ಕಳು ಒಂದು ಕಾರಿನಲ್ಲಿ ಹಾಗೂ ಹಿಬಾ ಹಾಗೂ ಅವರ ಪತಿ, ಮಕ್ಕಳು ಇನ್ನೊಂದು ಕಾರಿನಲ್ಲಿ ಸಂಚರಿಸುತ್ತಿದ್ದರು. ಅವರು ಮಂಗಳವಾರ ಫಜರ್‌ ನಮಾಝ್‌ ಮುಗಿಸಿಕೊಂಡು ಉಮ್ರಾ ಯಾತ್ರೆಗೆ ತೆರಳಿದ್ದರು. ಈ ಕುಟುಂಬದ ಅಷ್ಟು ಮಂದಿ ಸದಸ್ಯರು ಮಂಗಳವಾರ ರಾತ್ರಿ ರಿಯಾದ್‌ ತಲುಪಿದ್ದು, ಅಲ್ಲಿ ತಮ್ಮ ಕುಟುಂಬಸ್ಥರ ಮನೆಯಲ್ಲಿ ಉಳಿದುಕೊಂಡು ಬುಧವಾರ ಬೆಳಗ್ಗೆ ರಿಯಾದ್‌ನಿಂದ ಮತ್ತೆ ಉಮ್ರಾ ಯಾತ್ರೆ ಪ್ರಾರಂಭಿಸಿದ್ದರು.

Categories
ಬೆಂಗಳೂರು ರಾಜ್ಯ ರಾಷ್ಟ್ರೀಯ ವಾರ್ತೆ

ಮೋದಿ ಹೆಸರು ದುರ್ಬಳಕೆ: ಸೈಬರ್ ಕಳ್ಳರ ಹೊಸ ಪ್ಲಾನ್!

ಮೋದಿ ಹೆಸರು ದುರ್ಬಳಕೆ: ಸೈಬರ್ ಕಳ್ಳರ ಹೊಸ ಪ್ಲಾನ್!
– ಸಾರ್ವಜನಿಕರೆ ಎಚ್ಚರ, ಎಚ್ಚರ: ಮೋದಿ ಹೆಸರಲ್ಲಿ ಬರಲಿದೆ ಫೇಕ್ ಮೆಸೇಜ್
– ನಂಬಿ ರಿಪ್ಲೈ ಕೊಟ್ರೆ ಖಾತೆಗೆ ಕನ್ನ ಗ್ಯಾರಂಟಿ!

NAMMUR EXPRESS NEWS
ಬೆಂಗಳೂರು: ಜನರೇ ಎಚ್ಚರ… ಎಚ್ಚರ… ಪ್ರಧಾನಿ ಮೋದಿ ಹೆಸರಲ್ಲಿ ಜನ್ ಧನ್ ಯೋಜನೆಯಡಿ ನಕಲಿ ಮೆಸೇಜ್ ಬರುತ್ತಿದ್ದು, ನೀವು ಈ ಮೆಸೇಜ್ ನಂಬಿ ರಿಪ್ಲೈ ಕೊಟ್ಟರೆ ನಿಮ್ಮ ಖಾತೆಗೆ ಕನ್ನ ಗ್ಯಾರಂಟಿ. ಹೌದು, ಪ್ರಧಾನಿ ಮೋದಿ ಹೆಸರಲ್ಲಿ ಜನ್ ಧನ್ ಯೋಜನೆಯಡಿ ₹4750 ರೂ ನಕಲಿ ಮೆಸೆಜ್ ಬರುತ್ತಿದ್ದು, ಸಾರ್ವಜನಿಕರ ಖಾತೆಗೆ ಕನ್ನ ಹೊಡೆಯಲು ಸೈಬ‌ರ್ ಕಳ್ಳರು ಹೊಸ ಪ್ಲಾನ್ ರೂಪಿಸಿದ್ದಾರೆ. ಪ್ರಧಾನಿ ಮೋದಿ ಹೆಸರಿನಲ್ಲಿ ಮೊಬೈಲ್ ಗೆ ಸಂದೇಶ ಕಳುಹಿಸಿ ಚಾಲಾಕಿಗಳು ವಂಚಿಸುತ್ತಿದ್ದಾರೆ. ಲೋಕಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ಫೇಕ್ ಮೆಸೇಜ್ ಹಾವಳಿ ಹೆಚ್ಚಾಗಿದ್ದು, ಪ್ರಧಾನಿ ಮೋದಿ ಹೆಸರು ಹಾಗೂ ಫೋಟೋ ಬಳಸಿ ಫೇಕ್ ಮೆಸೇಜ್ ಕಳಿಸಲಾಗುತ್ತಿದೆ. ಎಲ್ಲರ ಖಾತೆಗೆ ಮೋದಿಯಿಂದ ₹4950 ರೂಪಾಯಿ ಬರಲಿದೆ ಅನ್ನೋ ಫೇಕ್ ಸಂದೇಶ ಕಳಿಸಲಾಗುತ್ತಿದೆ.

ಈ ಹಣವನ್ನು ನಿಮ್ಮ ಅಕೌಂಟ್ ಗೆ ಹಾಕಲು ಅಕೌಂಟ್ ಲಿಂಕ್ ಮಾಡಿ ಎಂದು ಖದೀಮರಿಂದ ಕರೆ ಬರುತ್ತಿದೆ. ಕರೆ ಮಾಡಿ OTP ರವಾನೆ, ಬಳಿಕ ಸಾರ್ವಜನಿಕರ ಖಾತೆಗೆ ಕನ್ನ ಹಾಕುತ್ತಿದ್ದಾರೆ. ನೂತನ ಮಾರ್ಗವಾಗಿ ಜನರ ಖಾತೆಗೆ ಕನ್ನ ಹಾಕಲು ಆನ್ ಲೈನ್ ವಂಚಕರು ಮುಂದಾಗಿದ್ದಾರೆ. ಪ್ರಧಾನಿ ಹೆಸರಲ್ಲಿ ಆನ್ ಲೈನ್ ನಲ್ಲಿ ಹಾವಳಿ ಹಿನ್ನೆಲೆ, ಸಾರ್ವಜನಿಕರು ಇಂತಹ ವಂಚಕರಿಂದ ದೂರ ಇರುವಂತೆ ಮನವಿ ಮಾಡಲಾಗಿದೆ. ಆನ್ ಲೈನ್ ಕಳ್ಳರ ವಿರುದ್ಧ ಸಾಮಾಜಿಕ ಕಾರ್ಯಕರ್ತ ರಾಘವೇಂದ್ರ ನೇತೃತ್ವದಲ್ಲಿ ಚುನಾವಣಾ ಆಯೋಗಕ್ಕೆ ದೂರು ನೀಡಲಾಗಿದೆ.

Categories
ಆರೋಗ್ಯ ರಾಜ್ಯ ರಾಷ್ಟ್ರೀಯ ವಾರ್ತೆ

ಕಾನ್ಸರ್ ಔಷಧ ಇನ್ನು ಅಗ್ಗ!

ಕಾನ್ಸರ್ ಔಷಧ ಇನ್ನು ಅಗ್ಗ!
– 72 ಲಕ್ಷ ಮೌಲ್ಯದ ಔಷಧಿ ಈಗ ಕೇವಲ 3 ಲಕ್ಷಕ್ಕೆ.!
– ಪೇಟೆಂಟ್ ಅವಧಿ ಮುಗಿದ ಹಿನ್ನೆಲೆ ಅಗ್ಗ
– ಲೈಫ್‌ಸೈನ್ಸಸ್ ಔಷಧ ಕಂಪನಿ ಮಾಹಿತಿ

NAMMUR EXPRESS NEWS
ನವದೆಹಲಿ: ವಿವಿಧ ರೀತಿಯ ಕ್ಯಾನ್ಸರ್ ಚಿಕಿತ್ಸೆಗೆ ಪ್ರಮುಖವಾಗಿ ಬಳಸುವ ಓಲಾಪರಿಬ್ ಬೆಲೆಯನ್ನು ಭಾರೀ ಪ್ರಮಾಣದಲ್ಲಿ ಇಳಿಸಲಾಗಿದೆ. ಇದುವರೆಗೂ 72 ಲಕ್ಷ ರು. ತಗಲುತ್ತಿದ್ದ ಔಷಧಿ ಇನ್ನು ಕೇವಲ 3 ಲಕ್ಷ ರು.ಗಳಿಗೆ ಲಭ್ಯವಾಗಲಿದೆ ಎಂದು ಝಡಸ್ ಲೈಫ್‌ಸೈನ್ಸಸ್ ಔಷಧ ಕಂಪನಿ ಮಾಹಿತಿ ನೀಡಿದೆ. ಔಷಧ ತಯಾರಿಸಿದ್ದ ಮೂಲ ಕಂಪನಿಯ ಪೇಟೆಂಟ್ ಅವಧಿ ಮುಗಿದಿರುವ ಹಿನ್ನೆಲೆಯಲ್ಲಿ ಮೂಲ ಔಷದಧ ಜೆನೆರಿಕ್ ಮಾದರಿ ಬಿಡುಗಡೆ ಮಾಡಲಾಗಿದೆ ಎಂದು ಕಂಪನಿ ಮಾಹಿತಿ ನೀಡಿದೆ.

ಭಾರತದಲ್ಲಿ ಪ್ರತಿ ವರ್ಷ 14 ಲಕ್ಷ ಜನರಲ್ಲಿ ಕ್ಯಾನ್ಸರ್ ಪತ್ತೆಯಾಗುತ್ತದೆ. ಈ ಪೈಕಿ 2.75 ಲಕ್ಷ ಜನರು ಸ್ತನ, ಗರ್ಭಕೋಶ, ಮೇಜೋಜೀರಕ ಗ್ರಂಥಿಯ ಕ್ಯಾನ್ಸರ್‌ಗೆ ತುತ್ತಾಗುತ್ತಾರೆ. ಇದನ್ನು ಗುಣಪಡಿಸಲು ಓಲಾಪರಿಬ್ ಅನ್ನು ಬಳಸಲಾಗುತ್ತದೆ. ಒಂದು ವರ್ಷದ ಚಿಕಿತ್ಸೆಗೆ ಇದುವರೆಗೂ 75 ಲಕ್ಷ ರು.ಗಳನ್ನು ಔಷಧಕ್ಕಾಗಿ ವ್ಯಯಿಸಬೇಕಿತ್ತು. ಆದರೆ ಅದೇ ಔಷಧಿ ಇನ್ನು ಕೇವಲ 3 ಲಕ್ಷ ರು. ಗೆ ಸಿಗಲಿದೆ ಎಂದು ಕಂಪನಿ ಮಾಹಿತಿ ನೀಡಿದೆ.

Categories
ರಾಜ್ಯ ರಾಷ್ಟ್ರೀಯ ವಾರ್ತೆ

ಮಾ .31ರಂದು ಯಾವುದೇ ‘ಬ್ಯಾಂಕ್’ಗೆ ರಜೆ ಇಲ್ಲ

ಮಾ .31ರಂದು ಯಾವುದೇ ‘ಬ್ಯಾಂಕ್’ಗೆ ರಜೆ ಇಲ್ಲ
– ಆರ್. ಬಿ.ಐ ಮಹತ್ವದ ಆದೇಶ
– ಎಲ್ಲಾ ಆದಾಯ ತೆರಿಗೆ ಕಚೇರಿಗಳು ತೆರೆದಿರುತ್ತವೆ.!
– ನೀವು ಆದಾಯ ತೆರಿಗೆ ಕಟ್ಟಿ ದಾಖಲೆ ಪಡೆಯಿರಿ!

NAMMUR EXPRESS NEWS
ನವದೆಹಲಿ : ಮಾರ್ಚ್ 31ರ ಭಾನುವಾರದಂದು ಬ್ಯಾಂಕ್’ನ್ನ ತೆರೆದಿಡಲು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ನಿರ್ಧರಿಸಿದೆ. ಸಾಮಾಜಿಕ ಮಾಧ್ಯಮ ಪ್ಲಾಟ್ಫಾರ್ಮ್ ಎಕ್ಸ್ನಲ್ಲಿ ಟ್ವೀಟ್ ಮೂಲಕ ಆರ್ ಬಿ ಐ ಈ ನಿರ್ಧಾರದ ಬಗ್ಗೆ ಮಾಹಿತಿ ನೀಡಿದೆ. ಮಾರ್ಚ್ 31, 2024 ಭಾನುವಾರವಾಗಿದ್ದರೂ, ಎಲ್ಲಾ ಬ್ಯಾಂಕುಗಳು ತೆರೆದಿರುತ್ತವೆ ಎಂದು ಕೇಂದ್ರ ಬ್ಯಾಂಕ್ ತಿಳಿಸಿದೆ. ಪ್ರಸಕ್ತ ಹಣಕಾಸು ವರ್ಷದ 2023-24ರ ಕೊನೆಯ ದಿನವಾಗಿರುವುದರಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.

ಎಲ್ಲಾ ಆದಾಯ ತೆರಿಗೆ ಕಚೇರಿಗಳು ತೆರೆದಿರುತ್ತವೆ. ಈ ಹಿಂದೆ, ಆದಾಯ ತೆರಿಗೆ ಇಲಾಖೆ ತನ್ನ ಎಲ್ಲಾ ಕಚೇರಿಗಳನ್ನ ತೆರೆದಿಡಲು ನಿರ್ಧರಿಸಿತ್ತು. ಗುಡ್ ಫ್ರೈಡೆ ರಜೆ ಸೇರಿದಂತೆ ಶನಿವಾರ ಮತ್ತು ಭಾನುವಾರ ರಜಾದಿನಗಳನ್ನ ಇಲಾಖೆ ರದ್ದುಗೊಳಿಸಿತ್ತು.

Categories
ರಾಜಕೀಯ ರಾಜ್ಯ ರಾಷ್ಟ್ರೀಯ ವಾರ್ತೆ ಶಿವಮೊಗ್ಗ

ರಾಜ್ಯದಲ್ಲಿ ಮೋದಿ ಗರ್ಜನೆ…!

ರಾಜ್ಯದಲ್ಲಿ ಮೋದಿ ಗರ್ಜನೆ…!
– ಬಿಜೆಪಿಯಲ್ಲಿ ಮಿಂಚಿನ ಸಂಚಲನ ಸೃಷ್ಟಿ
– ಕನ್ನಡದಲ್ಲೇ ಭಾಷಣ ಮಾಡಿದ ಮೋದಿ
– ಈಶ್ವರಪ್ಪ ಗೈರು, ಕುಮಾ‌ರ್ ಬಂಗಾರಪ್ಪ ಹಾಜರು

NAMMUR EXPRESS NEWS
ಶಿವಮೊಗ್ಗ: ಲೋಕಸಭೆ ಚುನಾವಣೆ ದಿನಾಂಕ ಘೋಷಣೆಯಾದ ಬೆನ್ನಲ್ಲೇ ಪ್ರಧಾನಿ ನರೇಂದ್ರಮೋದಿ ಅವರು ಕರ್ನಾಟಕದಲ್ಲಿ ಮತ್ತೆ ರಣಕಹಳೆ ಮೊಳಗಿಸುವ ಮೂಲಕ ಚುನಾವಣಾ ಕಾವು ರಂಗೇರುವಂತೆ ಮಾಡಿದ್ದಾರೆ. ಎರಡು ದಿನಗಳ ಹಿಂದಷ್ಟೇ ಕಲ್ಯಾಣ ಕರ್ನಾಟಕದ ಮುಖ್ಯ ಕೇಂದ್ರ ಕಲಬರುಗಿಯಲ್ಲಿ ಬಿಜೆಪಿ ಪರ ಪ್ರಚಾರ ನಡೆಸಿದ್ದ ಮೋದಿಯವರು ಸೋಮವಾರ ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದಲ್ಲಿ ಮಧ್ಯ ಕರ್ನಾಟಕದ ನಾಲ್ಕು ಜಿಲ್ಲೆಗಳ ಅಭ್ಯರ್ಥಿಗಳ ಪರವಾಗಿ ಮತಯಾಚಿಸಿ ಬಿಜೆಪಿಯಲ್ಲಿ ಮಿಂಚಿನ ಸಂಚಲನ ಸೃಷ್ಟಿಸಿದರು.

ಶಿವಮೊಗ್ಗದ ಅಲ್ಲಮ್ಮಪ್ರಭು ಕ್ರೀಡಾಂಗಣದಲ್ಲಿ ಜಿಲ್ಲಾ ಅಭ್ಯರ್ಥಿಗಳ ಪರವಾಗಿ ಮತಯಾಚನೆ ಮಾಡಿದ ಮೋದಿ, ರಾಜ್ಯದಲ್ಲಿ ಈ ಬಾರಿ 28 ಕ್ಷೇತ್ರಗಳಲ್ಲೂ ಬಿಜೆಪಿ, ಜೆಡಿಎಸ್‌ ಬೆಂಬಲಿತ ಅಭ್ಯರ್ಥಿಗಳನ್ನು ಬೆಂಬಲ ನೀಡಬೇಕೆಂದು ಕೋರಿದರು.
ಎಂದಿನಂತೆ ಕನ್ನಡದಲ್ಲೇ ತಮ್ಮ ಭಾಷಣವನ್ನು ಆರಂಭಿಸಿದ ಮೋದಿಯವರು ತಮ್ಮ ಅರ್ಧಗಂಟೆಗಳ ಭಾಷಣದಲ್ಲಿ ಕಾಂಗ್ರೆಸ್ ಮತ್ತು ಇಂಡಿಯಾ ಮೈತ್ರಿಕೂಟಗಳನ್ನು ತರಾಟೆಗೆ ತೆಗೆದುಕೊಂಡರು. ಕರ್ನಾಟಕದಲ್ಲಿ ಇಲ್ಲಿನ ಜನತೆ ನನಗೆ ಒಂದು ಗ್ಯಾರಂಟಿಯನ್ನು ನೀಡಬೇಕು. ಲೋಕಸಭಾ ಚುನಾವಣೆಯಲ್ಲಿ 28 ಕ್ಷೇತ್ರಗಳನ್ನು ಗೆಲ್ಲಿಸಿ ಕಾಂಗ್ರೆಸ್‌ಗೆ ಒಂದೇ ಒಂದು ಕ್ಷೇತ್ರವನ್ನು ಸಹ ಬಿಟ್ಟು ಕೊಡುವುದಿಲ್ಲ ಎಂದು ವಾಗ್ದಾನ ಮಾಡಬೇಕು. ಕರುನಾಡಿನಲ್ಲಿ ಎಲ್ಲಾ ಕಡೆ ಬಿಜೆಪಿ ಮತ್ತು ಜೆಡಿಎಸ್‌ ಅಭ್ಯರ್ಥಿಗಳು ಗೆಲ್ಲಬೇಕೆಂದು ಮನವಿ ಮಾಡಿಕೊಂಡರು.

ಕಾಂಗ್ರೆಸ್ ಕರ್ನಾಟಕವನ್ನು ಗ್ಯಾರಂಟಿ ನೆಪದಲ್ಲಿ ಲೂಟಿ ಹೊಡೆಯುತ್ತಿದೆ. ಇಲ್ಲಿನ ಹಣವು ದೆಹಲಿ ಪಾಲಾಗುತ್ತದೆ. ಅಲ್ಲಿನ ನಾಯಕರು ಕರುನಾಡನ್ನು ಎಟಿಎಂ ಮಾಡಿಕೊಂಡಿದ್ದಾರೆ. ಇದಕ್ಕೆ ಅವಕಾಶ ಮಾಡಿಕೊಡಬೇಡಿ. ಎನ್‌ಡಿಎ ಅಭ್ಯರ್ಥಿಗಳನ್ನು ಬಹುಮತದಿಂದ ಗೆಲ್ಲಿಸಿ ಎಂದು ಹೇಳಿದರು. ಹತ್ತು ವರ್ಷಗಳಲ್ಲಿ ನಾವು ಒಂದೇ ಒಂದು ಹಗರಣವಿಲ್ಲದೆ ಸರ್ಕಾರವನ್ನು ಮುನ್ನಡೆಸಿದ್ದೇವೆ. ಕೇಂದ್ರದಲ್ಲಿ ಮೂರನೇ ಬಾರಿಗೆ ನಾವು ಅಕಾರಕ್ಕೆ ಬರುವುದು ನೂರಕ್ಕೆ ನೂರರಷ್ಟು ಖಚಿತ. ಗ್ಯಾರಂಟಿಗಳನ್ನು ನಂಬಿ ಕಾಂಗ್ರೆಸ್‌ಗೆ ಮರಳಾಗಬೇಡಿ. ವಿಶ್ವದಲ್ಲಿ ಭಾರತವನ್ನು ಮೊದಲ ಸ್ಥಾನಕ್ಕೆ ಕೊಂಡೊಯ್ಯಬೇಕಾದರೆ ಬಿಜೆಪಿಯನ್ನು ಗೆಲ್ಲಿಸಿ ಎಂದು ವಿನಮ್ರವಾಗಿ ಕೋರಿದರು.

ಶಿವಮೊಗ್ಗ ಸಂಸದ ಬಿ.ವೈ.ರಾಘವೇಂದ್ರ ಹಾಗೂ ದಾವಣಗೆರೆ ಕ್ಷೇತ್ರದ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ ತೆರೆದ ವಾಹನದಲ್ಲಿ ನರೇಂದ್ರ ಮೋದಿ ಅಕ್ಕಪಕ್ಕದಲ್ಲಿ ನಿಂತು ಜನರಿಗೆ ಕೈಮುಗಿದರು. ಈ ವೇಳೆ ‘ಮೋದಿ’, ‘ಮೋದಿ’ ಘೋಷಣೆ ಜೋರಾಗಿ ಕೇಳಿ ಬಂತು. ಕೇಸರಿ ಶಾಲು, ಟೋಪಿ ಬೀಸಿ ಜನರು ಪ್ರಧಾನಿಯತ್ತ ಅಭಿಮಾನ ತೋರಿದರು. ಕಾರ್ಯಕ್ರಮದಲ್ಲಿ ಕಾಲೇಜು ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಸಂಘಟಕರು ಅವರಿಗೆ ವಿಐಪಿ ಪಾಸ್ ನೀಡಿದ್ದರು. ನವ ಮತದಾರರು ಪ್ರಧಾನಿಯನ್ನು ಹತ್ತಿರದಿಂದ ನೋಡಿದರು. ಚಿತ್ರದುರ್ಗ ಕ್ಷೇತ್ರ ಪ್ರತಿನಿಧಿಸುವ ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ವೇದಿಕೆಯಲ್ಲಿದ್ದರು.

ಈಶ್ವರಪ್ಪ ಗೈರು, ಕುಮಾ‌ರ್ ಹಾಜರು: ಹಾವೇರಿ ಕ್ಷೇತ್ರದ ಟಿಕೆಟ್ ಹಂಚಿಕೆ ವಿಷಯದಲ್ಲಿ ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್.ಯಡಿಯೂರಪ್ಪ ವಿರುದ್ಧ ಮುನಿಸಿಕೊಂಡಿರುವ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಅವರ ಮನವೊಲಿಸಲು ಈ ಸಮಾವೇಶ ವೇದಿಕೆ ಆಗಲಿದೆ ಎಂಬ ಕಾರ್ಯಕರ್ತರ ನಿರೀಕ್ಷೆ ಹುಸಿಯಾಯಿತು. ಪ್ರಧಾನಿ ಕಾರ್ಯಕ್ರಮದಿಂದ ಕೆ.ಎಸ್.ಈಶ್ವರಪ್ಪ ದೂರ ಉಳಿದರು.

Categories
ಮಾಹಿತಿ ರಾಜ್ಯ ರಾಷ್ಟ್ರೀಯ ವಾರ್ತೆ

ಮೊಬೈಲ್‌ ಬಳಕೆದಾರರಿಗೆ ಮಹತ್ವದ ಮಾಹಿತಿ..!

ಮೊಬೈಲ್‌ ಬಳಕೆದಾರರಿಗೆ ಮಹತ್ವದ ಮಾಹಿತಿ..!
– ಜುಲೈ 1 ರಿಂದ ದೇಶಾದ್ಯಂತ ಜಾರಿಗೆ ಬರಲಿವೆ ಹೊಸ ನಿಯಮಗಳು
– ಹೊಸ ಸಿಮ್ ಕಾರ್ಡ್ ನಿಯಮಗಳಲ್ಲಿ ಬದಲಾವಣೆ

NAMMUR EXPRESS NEWS
ನವದೆಹಲಿ : ನೀವು ಮೊಬೈಲ್‌ ಬಳಕೆದಾರರಾಗಿದ್ದರೆ, ಜುಲೈ 1 ರಿಂದ ದೇಶಾದ್ಯಂತ ಹೊಸ ನಿಯಮಗಳನ್ನು ಜಾರಿಗೆ ತರಬಹುದು ಎಂಬ ಪ್ರಮುಖ ಮಾಹಿತಿ ಇಲ್ಲಿದೆ. ಆನೈನ್ ವಂಚನೆ ಮತ್ತು ಹ್ಯಾಕಿಂಗ್ ಅನ್ನು ತಡೆಗಟ್ಟುವುದು ಈ ನಿಯಮವನ್ನು ಜಾರಿಗೆ ತರುವ ಉದ್ದೇಶವಾಗಿದೆ. ಮೊಬೈಲ್ ಸಿಮ್ ಕಾರ್ಡ್ಗಳ ಹೊಸ ನಿಯಮಗಳನ್ನು ಹೊರಡಿಸಲಾಗಿದ್ದು, ಇದು ಜುಲೈ 1, 2024 ರಿಂದ ದೇಶಾದ್ಯಂತ ಅನ್ವಯವಾಗಲಿದೆ. ಈ ನಿಯಮಗಳ ಬದಲಾವಣೆಗಳು ವಂಚನೆಯನ್ನು ತಡೆಯಬಹುದು ಆದರೆ ಇದು ಸಾಮಾನ್ಯ ಬಳಕೆದಾರರಿಗೆ ಸಮಸ್ಯೆಗಳನ್ನು ಉಂಟುಮಾಡಬಹುದು. ಅಂತಹ ಪರಿಸ್ಥಿತಿಯಲ್ಲಿ, ಇದರ ಬಗ್ಗೆ ವಿವರವಾಗಿ ತಿಳಿದುಕೊಳ್ಳಿ.

ಹೊಸ ಸಿಮ್ ಕಾರ್ಡ್ ನಿಯಮಗಳಲ್ಲಿ ಬದಲಾವಣೆ:

ಹೊಸ ನಿಯಮಗಳ ಪ್ರಕಾರ, ಇತ್ತೀಚೆಗೆ ತಮ್ಮ ಸಿಮ್ ಕಾರ್ಡ್ಗಳನ್ನು ಬದಲಾಯಿಸಿದ ಮೊಬೈಲ್ ಬಳಕೆದಾರರು ಇನ್ನು ಮುಂದೆ ತಮ್ಮ ಮೊಬೈಲ್ ಸಂಖ್ಯೆಯನ್ನು ಪೋರ್ಟ್ ಮಾಡಲು ಸಾಧ್ಯವಿಲ್ಲ. ಸಿಮ್ ಸ್ವಾಪಿಂಗ್ ಅನ್ನು ಸಿಮ್ ಸೈಪಿಂಗ್ ಎಂದು ಕರೆಯಲಾಗುತ್ತದೆ. ನಿಮ್ಮ ಸಿಮ್ ಕಾರ್ಡ್ ಕಳೆದುಹೋದಾಗ ಅಥವಾ ಮುರಿದಾಗ ಸಿಮ್ ವಿನಿಮಯ ನಡೆಯುತ್ತದೆ. ಈ ಸಂದರ್ಭದಲ್ಲಿ, ನೀವು ನಿಮ್ಮ ಟೆಲಿಕಾಂ ಆಪರೇಟರ್ನೊಂದಿಗೆ ಮಾತನಾಡಬೇಕಾಗುತ್ತದೆ ಮತ್ತು ನಿಮ್ಮ ಹಳೆಯ ಸಿಮ್ ಅನ್ನು ಬದಲಾಯಿಸಲು ಮತ್ತು ಹೊಸ ಸಿಮ್ ನೀಡುವಂತೆ ಕೇಳಬೇಕಾಗುತ್ತದೆ.

ಪ್ರಯೋಜನಗಳು ಯಾವುವು?:

ಆನ್ ಲೈನ್ ವಂಚನೆ ಮತ್ತು ಹ್ಯಾಕಿಂಗ್ ಘಟನೆಗಳನ್ನು ತಡೆಗಟ್ಟಲು ಈ ನಿಯಮವನ್ನು ಜಾರಿಗೆ ತರುವ ಉದ್ದೇಶವನ್ನು ತೆಗೆದುಕೊಳ್ಳಲಾಗಿದೆ, ವಿಶೇಷವಾಗಿ ವಂಚನೆ ಮಾಡುವವರು, ಮೊಬೈಲ್ ಸಂಪರ್ಕವನ್ನು ಬದಲಿಸಿದ ತಕ್ಷಣ ಸಿಮ್ ಬದಲಾಯಿಸುವುದನ್ನು ಅಥವಾ ಪೋರ್ಟಿಂಗ್ ಮಾಡುವುದನ್ನು ತಡೆಯಲು ಹೊಸ ನಿಯಮವನ್ನು ಜಾರಿಗೆ ತರಲಾಗಿದೆ.

Categories
ರಾಜ್ಯ ರಾಷ್ಟ್ರೀಯ ವಾರ್ತೆ

ಸೀಮೆ ಎಣ್ಣೆ ಬಳಕೆ ಗಣನೀಯ ಪ್ರಮಾಣದಲ್ಲಿ ಇಳಿಕೆ.!

ಸೀಮೆ ಎಣ್ಣೆ ಬಳಕೆ ಗಣನೀಯ ಪ್ರಮಾಣದಲ್ಲಿ ಇಳಿಕೆ.!
– ಹೈ ಸ್ಪೀಡ್ ಡೀಸೆಲ್ ಆಯಿಲ್‌ಗೆ ಭರ್ಜರಿ ಬೇಡಿಕೆ!
– ಡೀಸೆಲ್ ಆಯಿಲ್ ಬಳಕೆ ಪ್ರಮಾಣ ಶೇ 38.52 ಹೆಚ್ಚಳ

NAMMUR EXPRESS NEWS
ನವದೆಹಲಿ: ಕೇಂದ್ರ ಸರ್ಕಾರವು ನವೀಕರಿಸಬಹುದಾದ ಇಂಧನ ನೀತಿಗೆ ಒತ್ತು ನೀಡಿದ ಬೆನ್ನಿಗೇ ದೇಶದಲ್ಲಿ ಸೀಮೆ ಎಣ್ಣೆ ಬಳಕೆ ಪ್ರಮಾಣವು ಗಣನೀಯವಾಗಿ ಇಳಿಕೆಯಾಗಿದೆ. ಕಳೆದ 2013 -14ರಿಂದ 2022-23ರ ನಡುವೆ ಸೀಮೆಎಣ್ಣೆ ಬಳಕೆಯು ಶೇ 26ರಷ್ಟು ಇಳಿಕೆಯಾಗಿದೆ ಎಂದು ಎನ್‌ಎಸ್‌ಒ (ರಾಷ್ಟ್ರೀಯ ಸಾಂಖ್ಯಿಕ ಕಚೇರಿ) ಅಂಕಿಅಂಶಗಳು ಹೇಳುತ್ತಿವೆ. ಇದೇ ವೇಳೆ ದೇಶದಲ್ಲಿ 2022-23ರ ಅವಧಿಯಲ್ಲಿ ಪೆಟ್ರೋಲಿಯಂ ಉತ್ಪನ್ನಗಳ ಪೈಕಿ ಹೈ ಸ್ಪೀಡ್ ಡೀಸೆಲ್ ಆಯಿಲ್ ಬಳಕೆ ಪ್ರಮಾಣ ಶೇ 38.52 ಹೆಚ್ಚಿದೆ. ಇನ್ನು 2021-22ನೇ ಸಾಲಿಗೆ ಹೋಲಿಸಿದರೆ ಬಳಕೆ ಪ್ರಮಾಣದಲ್ಲಿ ಶೇ 12.05ರಷ್ಟು ಏರಿಕೆ ಆಗಿದೆ. ಪೆಟ್ರೋಲ್ ಬಳಕೆ ಶೇ 13.38ರಷ್ಟು ಇದ್ದರೆ, ಪೆಟ್ರೋಲಿಯಂ ಕೋಕ್ ಬಳಕೆ ಶೇ 28.68ರಷ್ಟಿದೆ. ಹೈ ಸ್ಪೀಡ್ ಡೀಸೆಲ್ ಬಳಕೆಯಲ್ಲಿ ಶೇ 12.05ರಷ್ಟು ಹೆಚ್ಚಳವಾಗಿದೆ ಎಂದು ವರದಿ ತಿಳಿಸಿದೆ.