Categories
ರಾಜಕೀಯ ರಾಷ್ಟ್ರೀಯ ವಾರ್ತೆ

ಶುರುವಾಯ್ತು ಲೋಕಸಭಾ ಚುನಾವಣೆ!

ಶುರುವಾಯ್ತು ಲೋಕಸಭಾ ಚುನಾವಣೆ!
– ಇಂದಿನಿಂದ ಮೊದಲ ಹಂತದ ಲೋಕಸಭಾ ಚುನಾವಣೆ..!
– ದೇಶಾದ್ಯಂತ 102 ಕ್ಷೇತ್ರಗಳಿಗೆ ಮತದಾನ
– ಲೋಕಸಭಾದ 543 ಕ್ಷೇತ್ರಗಳಿಗೆ ಏಳು ಹಂತಗಳಲ್ಲಿ ಮತದಾನ
– ರಾಜ್ಯದಲ್ಲಿ ಯಾವತ್ತು ಎಲ್ಲಿ ಮತದಾನ..?

NAMMUR EXPRESS NEWS
ಹೊಸದಿಲ್ಲಿ: ಲೋಕಸಭೆಗೆ ಮೊದಲ ಹಂತದ ಚುನಾವಣೆಯು ಎಪ್ರಿಲ್ 19ರಿಂದ ನಡೆಯಲಿದ್ದು, 21 ರಾಜ್ಯಗಳು, ಕೇಂದ್ರಾಡಳಿತಗಳ 102 ಕ್ಷೇತ್ರಗಳಲ್ಲಿ ಮತದಾರರು ತಮ್ಮ ಹಕ್ಕು ಚಲಾಯಿಸಲಿದ್ದಾರೆ. ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆಯೊಂದಿಗೆ ಕೇಂದ್ರ ರಸ್ತೆ ಹಾಗೂ ಸಾರಿಗೆ ಸಚಿವ ನಿತಿನ್ ಗಡ್ಕರಿ ಸ್ಪರ್ಧಿಸುತ್ತಿರುವ ನಾಗಪುರ , ಮೊದಲ ಹಂತದ ಚುನಾವಣೆ ನಡೆಯಲಿರುವ ಪ್ರಮುಖ ಕ್ಷೇತ್ರಗಳಲ್ಲೊಂದಾಗಿದೆ. ಕೇಂದ್ರ ಸಚಿವ ಕಿರಣ್ ರಿಜಿಜು ಕಣದಲ್ಲಿರುವ ಅರುಣಾಚಲ ಪಶ್ಚಿಮ ಕ್ಷೇತ್ರ, ಕೇಂದ್ರ ಬಂದರು, ಶಿಪ್ಪಿಂಗ್ ಹಾಗೂ ಜಲಸಾರಿಗೆ ಸಚಿವ ಸರ್ಬಾನಂದ ಸೊನೊವಾಲ್ ಅವರು ಸ್ಪರ್ಧಿಸುತ್ತಿರುವ ಅಸ್ಸಾಂನ ದಿಬ್ರೂಘಡದಲ್ಲೂ ಮೊದಲ ಹಂತದ ಚುನಾವಣೆಯಲ್ಲಿ ಮತದಾನ ನಡೆಯಲಿರುವ ಇನ್ನೆರಡು ಪ್ರಮುಖ ಕ್ಷೇತ್ರಗಳಾಗಿವೆ.
ತಮಿಳುನಾಡಿನ ನೀಲಗಿರಿ ಲೋಕಸಭಾ ಕ್ಷೇತ್ರದಲ್ಲಿ ಹಾಲಿ ಡಿಎಂಕೆ ಸಂಸದ ಎ. ರಾಜಾ ಹಾಗೂ ಬಿಜೆಪಿಯ ಎಲ್. ಮುರುಗನ್ ನಡುವೆ ಜಿದ್ದಾಜಿದ್ದಿಯ ಸ್ಪರ್ಧೆ ನಡೆಯಲಿದೆ. ಮಧ್ಯಪ್ರದೇಶದ ರಾಜ್ಯಸಭಾ ಸದಸ್ಯರಾಗಿ ಆಯ್ಕೆಯಾಗಿದ್ದ ಮುರುಗನ್ ಅವರು ಲೋಕಸಭಾ ಚುನಾವಣೆಗೆ ಸ್ಪರ್ಧಿಸುತ್ತಿರುವುದು ಇದೇ ಮೊದಲ ಸಲವಾಗಿದೆ.

ಶಿವಗಂಗಾ ಸಂಸದ ಕಾರ್ತಿ ಚಿದಂಬರಂ ಅವರು ಶಿವಗಂಗಾ ಕ್ಷೇತ್ರದಲ್ಲಿ ಬಿಜೆಪಿಯ ಟಿ. ದೇವನಾಥನ್ಯಾದವ್ ಹಾಗೂ ಎಡಿಎಂಕೆಯ ಕ್ಸೇವಿಯರ್ ಡೇವಿಸ್ ಅವರನ್ನು ಎದುರಿಸಲಿದ್ದಾರೆ. ಈ ಕ್ಷೇತ್ರವನ್ನು ಕಾರ್ತಿ ಅವರ ತಂದೆ ಪಿ.ಚಿದಂಬರಂ ಅವರು ಏಳು ಬಾರಿ ಪ್ರತಿನಿಧಿಸಿದ್ದರು. ತಮಿಳುನಾಡು ಬಿಜೆಪಿ ಅಧ್ಯಕ್ಷ, ಮಾಜಿ ಐಪಿಎಸ್ ಅಧಿಕಾರಿ ಕೆ. ಅಣ್ಣಾಮಲೈ ಅವರು ಸ್ಪರ್ಧಿಸುತ್ತಿರುವ ಕೊಯಮತ್ತೂರು ದೇಶದ ಗಮನವನ್ನು ಸೆಳೆದಿರುವ ಇನ್ನೊಂದು ಪ್ರಮುಖ ಕ್ಷೇತ್ರವಾಗಿದೆ. ಇಲ್ಲಿ ಅಣ್ಣಾ ಮಲೈ ವಿರುದ್ಧ ಡಿಎಂಕೆ ನಾಯಕ ಗಣಪತಿ ಪಿ. ರಾಜಕುಮಾರ್ ಹಾಗೂ ಎಡಿಎಂಕೆ ಸಂಸದ ಸಿಂಗಾಯ್ ರಾಮಚಂದ್ರನ್ ಸ್ಪರ್ಧಿಸುತ್ತಿದ್ದಾರೆ.
18ನೇ ಲೋಕಸಭಾದ 543 ಕ್ಷೇತ್ರಗಳಿಗೆ ಏಳು ಹಂತಗಳಲ್ಲಿ ಮತದಾನ ನಡೆಯಲಿದೆ. ಜೂನ್ 4ರಂದು ಮತಏಣಿಕೆ ನಡೆಯಲಿದೆ.

ಕರ್ನಾಟಕದಲ್ಲೂ ದಿನಗಣನೆ

ಏಪ್ರಿಲ್ 26 ಮತ್ತು ಮೇ 7 ರಂದು ಎರಡು ಹಂತಗಳಲ್ಲಿ ಮತದಾನ ನಡೆಯಲಿದೆ. ಕಳೆದ ವಾರ ಮಾರ್ಚ್ 16 ರಂದು ನಡೆದ ಮಾಧ್ಯಮಗೋಷ್ಠಿಯಲ್ಲಿ ಚುನಾವಣಾ ಆಯೋಗವು ಈ ಮಹತ್ವದ ಮಾಹಿತಿಯನ್ನು ಬಹಿರಂಗಪಡಿಸಿದೆ. ಮತದಾನದ ದಿನಾಂಕಗಳು ಹತ್ತಿರವಾಗುತ್ತಿದ್ದಂತೆ, ರಾಜಕೀಯ ಪಕ್ಷಗಳಲ್ಲಿ ರಾಜಕೀಯ ಉತ್ಸಾಹವು ತೀವ್ರಗೊಳ್ಳುತ್ತಿದೆ ಮತ್ತು ಮತದಾನ ಪ್ರಕ್ರಿಯೆಯು ತೀವ್ರವಾಗಿರುತ್ತದೆ.

ಏಪ್ರಿಲ್ 26ಕ್ಕೆ ಚುನಾವಣೆ

ಹಂತ 1 (ಏಪ್ರಿಲ್ 26) ಉಡುಪಿ ಚಿಕ್ಕಮಗಳೂರು, ಹಾಸನ, ದಕ್ಷಿಣ ಕನ್ನಡ, ಚಿತ್ರದುರ್ಗ, ತುಮಕೂರು, ಮಂಡ್ಯ, ಮೈಸೂರು, ಚಾಮರಾಜನಗರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ಉತ್ತರ, ಬೆಂಗಳೂರು ಕೇಂದ್ರ, ಬೆಂಗಳೂರು ದಕ್ಷಿಣ, ಚಿಕ್ಕಬಳ್ಳಾಪುರ, ಕೋಲಾರ

ಮೇ 7ಕ್ಕೆ ರಾಜ್ಯದ ಹಲವೆಡೆ ಚುನಾವಣೆ

ಹಂತ 2 (ಮೇ 7) ಚಿಕ್ಕೋಡಿ, ಬೆಳಗಾವಿ, ಬಾಗಲಕೋಟೆ, ಬಿಜಾಪುರ, ಗುಲ್ಬರ್ಗ, ರಾಯಚೂರು, ಬೀದರ್, ಕೊಪ್ಪಳ, ಬಳ್ಳಾರಿ, ಹಾವೇರಿ, ಧಾರವಾಡ, ಉತ್ತರ ಕನ್ನಡ, ದಾವಣಗೆರೆ, ಶಿವಮೊಗ್ಗ

Categories
ರಾಜ್ಯ ರಾಷ್ಟ್ರೀಯ ವಾರ್ತೆ

ಬಾಲ ರಾಮನ ಹಣೆಗೆ ಸೂರ್ಯ ತಿಲಕ

ಬಾಲ ರಾಮನ ಹಣೆಗೆ ಸೂರ್ಯ ತಿಲಕ
– ಅದ್ಭುತ ದೃಶ್ಯ ಕಣ್ತುಂಬಿಕೊಂಡ ಭಕ್ತ ಸಾಗರ
– ವೇದಘೋಷ, ಮಹಾಮಂಗಳಾರತಿ, ವಿಶೇಷ ಪೂಜೆ

NAMMUR EXPRESS NEWS
ಅಯೋಧ್ಯೆ: ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವಾದ ಬಳಿಕ ನಡೆಯುತ್ತಿರುವ ಮೊದಲ ರಾಮನವಮಿ ಆಚರಣೆ ಸಂಭ್ರಮದಿಂದ ನಡೆಯುತ್ತಿದೆ. ಬಾಲರಾಮನ ದರ್ಶನಕ್ಕಾಗಿ ಲಕ್ಷಾಂತರ ಜನರು ಆಗಮಿಸಿದ್ದಾರೆ. ಇದೇ ವೇಳೆ ಸೂರ್ಯ ರಶ್ಮಿ ಬಾಲರಾಮನ ಹಣೆಗೆ ಸ್ಪರ್ಶಿಸುವ ಮೂಲಕ ಸೂರ್ಯ ತಿಲಕವಿಟ್ಟ ವಿಸ್ಮಯಕಾರಿ ದೃಶ್ಯವನ್ನು ಭಕ್ತರು ಕಣ್ತುಂಬಿಕೊಂಡರು.
ಅಯೋಧ್ಯೆ ರಾಮ ಮಂದಿರದಲ್ಲಿ ಬಲರಾಮನ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಬಳಿಕ ಮೊದಲ ಶ್ರೀ ರಾಮನವಮಿ ಆಚರಿಸಲಾಗುತ್ತಿದೆ. ರಾಮ ಜನ್ಮಭೂಮಿಯಲ್ಲಿ ರಾಮನವಮಿ ಆಚರಣೆಗಾಗಿ ಲಕ್ಷಾಂತರ ಭಕ್ತರು ನೆರೆದಿದ್ದಾರೆ. ಈ ಶುಭ ಸಂದರ್ಭದಲ್ಲಿ ಮಧ್ಯಾಹ್ನ 12 ಗಂಟೆ ಸಮಯದಲ್ಲಿ ಸೂರ್ಯವಂಶದ ಬಾಲರಾಮನಿಗೆ ಸೂರ್ಯದೇವರು ತನ್ನ ಕಿರಣಗಳ ಮೂಲಕ ಸ್ಪರ್ಶಿಸಿ ಸೂರ್ಯ ತಿಲಕವಿಟ್ಟಿದ್ದಾರೆ.

ಈ ಅದ್ಭುತ ದೃಶ್ಯವನ್ನು ಕಣ್ಣಾರೆ ಕಂಡ ದೇವಾಲಯದಲ್ಲಿ ನೆರೆದಿದ್ದ ಭಕ್ತರು ಪುನೀತರಾದರು. ವಿಸ್ಮಯಕಾರಿ ದೃಶ್ಯ ಕೋಟ್ಯಂತರ ಭಾರತೀಯರನ್ನು ಬೆರಗುಗೊಳಿಸಿದೆ. ಸುಮಾರು 5 ನಿಮಿಷಗಳಕಾಲ ಬಾಲರಾಮನ ಮೂರ್ತಿಯ ಹಣೆಗೆ ಸೂರ್ಯನ ಕಿರಣಗಳು ಸ್ಪರ್ಶಿಸಿವೆ. ಈ ವೇಳೆ ವೇದಘೋಷ, ಮಹಾಮಂಗಳರಾತಿ ಮೂಲಕ ಬಾಲರಾಮನಿಗೆ ವಿಶೇಷ ಪೂಜೆ ನೆರವೇರಿಸಲಾಯಿತು.

ದೇಶದೆಲ್ಲ ಕಡೆ ರಾಮೋತ್ಸವ..!

ದೇಶದ ಎಲ್ಲಾ ಕಡೆಯಲ್ಲೂ ರಾಮ ಜಪ ಮೊಳಗಿದೆ. ಮಂಗಳವಾರ ರಾತ್ರಿಯಿಂದಲೇ ಜಪ, ವಿಶೇಷ ಪೂಜೆಗಳು ಶುರುವಾಗಿದೆ. ಬೆಳಿಗ್ಗೆಯಿಂದಲೇ ರಾಮನ ದೇಗುಲದಲ್ಲಿ ಕಾರ್ಯಕ್ರಮ ನಡೆಯುತ್ತಿದೆ.

Categories
ಅಂತಾರಾಷ್ಟ್ರೀಯ ಸುದ್ದಿ ಕೃಷಿ ರಾಜ್ಯ ರಾಷ್ಟ್ರೀಯ ವಾರ್ತೆ

ಭಾರತದ ಹಸು ವಿಶ್ವದಲ್ಲೇ ದುಬಾರಿ!

ಭಾರತದ ಹಸು ವಿಶ್ವದಲ್ಲೇ ದುಬಾರಿ!
– ನೆಲ್ಲೂರು ತಳಿಯ ಈ ಹಸು ಬೆಲೆ 40 ಕೋಟಿ ರೂ.
– ಮೂಲತಃ ಆಂಧ್ರ ಪ್ರದೇಶದ ತಳಿ
– ರೋಗ ಬರುವುದಿಲ್ಲ ಸಾಂಕ್ರಾಮಿಕ ರೋಗ ಹಬ್ಬಿದರೂ ಇದಕ್ಕೆ ತಾಕುವುದಿಲ್ಲ

NAMMUR EXPRESS :
ಅರಾಂಡು(ಬ್ರೆಜಿಲ್): ಭಾರತದ ಮೂಲದ ಹಸು ವಿಶ್ವದಲ್ಲೇ ದುಬಾರಿ ಹಸುವಾಗಿದೆ. ನೆಲ್ಲೂರು ತಳಿಯ ಈ ಹಸು ಬೆಲೆ 40 ಕೋಟಿ ರೂ. ಮೂಲತಃ ಆಂಧ್ರ ಪ್ರದೇಶದ ತಳಿ ಇದಾಗಿದೆ. ಇದಕ್ಕೆ ರೋಗ ರೋಗ ಬರುವುದಿಲ್ಲ ಸಾಂಕ್ರಾಮಿಕ ರೋಗ ಹಬ್ಬಿದರೂ ಇದಕ್ಕೆ ತಾಕುವುದಿಲ್ಲ ಬ್ರೆಜಿಲ್ ದೇಶದ ಅರಾಂಡು ಎಂಬ ಪ್ರದೇಶದಲ್ಲಿ ನಡೆದ ಹರಾಜಿನಲ್ಲಿ ಕುಬೇರ ರೈತರೊಬ್ಬರು ಭಾರಿ ಮೊತ್ತವನ್ನು ಕೊಟ್ಟು ‘ವಿಯಾಟಿನ್-19 ಎಫ್‌ಐವಿ ಮಾರಾ ಇಮೊವಿಸ್’ ಎಂದು ಹೆಸರಿಸಲಾಗಿದ್ದ ಹಸು ಈಗ ಭಾರೀ ಸುದ್ದಿಯಲ್ಲಿದೆ. ಇದು ಮೂಲತಃ ಆಂಧ್ರ ಪ್ರದೇಶದ ನೆಲ್ಲೂರಿನ ತಳಿ. ಕಡು ಕಠಿಣ ಹವಾಮಾನಕ್ಕೂ ಕೊಂಚ ಕೂಡ ಅಂಜುವುದಿಲ್ಲ; ಅಳುಕುವುದಿಲ್ಲ. ರೋಗ ಬರುವುದಿಲ್ಲ. ಸಾಂಕ್ರಾಮಿಕ ರೋಗ ಹಬ್ಬಿದರೂ ಇದಕ್ಕೆ ತಾಕುವುದಿಲ್ಲ.

ಬಿಳಿ ಮೈ ಬಣ್ಣ, ಉಣ್ಣೆಯಂತಹ ಚರ್ಮ, ಎತ್ತರದ ಭುಜುಕ್ಕೆ ಹೆಸರುವಾಸಿಯಾಗಿದೆ. ನೆಲ್ಲೂರಿನಿಂದ ಬ್ರೆಜಿಲ್‌ಗೆ ಬಂದು ಇಲ್ಲಿ ನೆಲೆಯೂರಿ ಪ್ರವರ್ಧಮಾನಕ್ಕೆ ಬಂದಿದೆ. ನೆಲ್ಲೂರು ತಳಿಗೆ ದೊಡ್ಡ ಗತ ಇತಿಹಾಸವಿದೆ. ಅನುವಂಶಿಕ ಉತ್ಕೃಷ್ಟತೆಗೆ ಅನನ್ಯವಾದ ಹೆಸರು ಸಂಪಾದಿಸಿದೆ. ಇದರ ವಂಶವಾಹಿ ಗುಣಗಳು, ಭ್ರೂಣದಿಂದ ಹುಟ್ಟುವ ಸಂತತಿ ಕೂಡ ಅಸಾಧಾರಣ ಗುಣಲಕ್ಷಣಗಳನ್ನು ಹೊಂದಿರುತ್ತದೆ ಎಂದು ಪಾಲ್ಗೊಂಡಿದ್ದ ಬಿಡ್‌ದಾರರು ಹೊಗಳಿದ್ದಾರೆ.

Categories
ರಾಜ್ಯ ರಾಷ್ಟ್ರೀಯ ವಾರ್ತೆ

ಜನಸಾಮಾನ್ಯರಿಗೆ ಬಿಗ್ ಶಾಕ್..!

ಜನಸಾಮಾನ್ಯರಿಗೆ ಬಿಗ್ ಶಾಕ್..!
– ಇಂದಿನಿಂದ ಔಷಧಿಗಳ ಬೆಲೆಯಲ್ಲಿ ಏರಿಕೆ
– 800 ಅಗತ್ಯ ಔಷಧಿಗಳ ಬೆಲೆಯಲ್ಲಿ ಭಾರಿ ಏರಿಕೆ

NAMMUR EXPRESS NEWS
ನವದೆಹಲಿ : ಏಪ್ರಿಲ್ 1 ರ ಇಂದಿನಿಂದ 800 ಔಷಧಿಗಳ ಬೆಲೆ ಹೆಚ್ಚಾಗಲಿದೆ. ಈ ಔಷಧಿಗಳ ಪಟ್ಟಿಯಲ್ಲಿ ನೋವು ನಿವಾರಕಗಳು, ಪ್ರತಿಜೀವಕಗಳು ಮತ್ತು ಸೋಂಕಿನ ವಿರೋಧಿ ಔಷಧಿಗಳು ಸೇರಿವೆ. ವರದಿಯ ಪ್ರಕಾರ, ಸರ್ಕಾರವು ಸಗಟು ಬೆಲೆ ಸೂಚ್ಯಂಕದಲ್ಲಿ (ಡಬ್ಲ್ಯುಪಿಐ) ಹಲವಾರು ಬದಲಾವಣೆಗಳನ್ನು ಮಾಡಿದೆ. ಮತ್ತು ಸರ್ಕಾರವು ಅಗತ್ಯ ಔಷಧಿಗಳ ರಾಷ್ಟ್ರೀಯ ಪಟ್ಟಿಯನ್ನು (ಎನ್‌ಎಲ್‌ಇಎಂ) ಶೇಕಡಾ 0.0055 ರಷ್ಟು ಹೆಚ್ಚಿಸಿದೆ. ಕೆಲವೇ ದಿನಗಳಲ್ಲಿ ಬೆಲೆ ಏರಿಕೆಯಾಗಿದೆ.

ಔಷಧಿಗಳ ಬೆಲೆಗಳು ವರ್ಷಕ್ಕೆ ಒಮ್ಮೆ ಮಾತ್ರ ಹೆಚ್ಚಾಗಬಹುದು!

2022 ರಲ್ಲಿ ಔಷಧಿಗಳ ಬೆಲೆಯನ್ನು ಶೇಕಡಾ 12 ಮತ್ತು 10 ರಷ್ಟು ಹೆಚ್ಚಿಸಲಾಗಿತ್ತು. ವರದಿಯ ಪ್ರಕಾರ, ಔಷಧಿಗಳ ಬೆಲೆ ಹೆಚ್ಚಳಕ್ಕೆ ಅನುಮೋದನೆ ವರ್ಷಕ್ಕೆ ಒಮ್ಮೆ ಮಾತ್ರ ಮಾಡಬಹುದು. ಕಳೆದ ಕೆಲವು ವರ್ಷಗಳಲ್ಲಿ, ಔಷಧಿಯಲ್ಲಿ ಬಳಸುವ ವಸ್ತುಗಳ ಬೆಲೆಯೂ ಹೆಚ್ಚಾಗಿದೆ. ಇದು 15 ರಿಂದ 130 ಪ್ರತಿಶತದಷ್ಟು ಹೆಚ್ಚಾಗಿದೆ. ಪ್ಯಾರಸಿಟಮಾಲ್ ಬೆಲೆ ಶೇ.130ರಷ್ಟು ಏರಿಕೆಯಾಗಿದ್ದರೆ, ಎಕ್ಸಿಪಿಯೆಂಟ್ ಗಳ ಬೆಲೆ ಶೇ.18-262ರಷ್ಟು ಏರಿಕೆಯಾಗಿದೆ. ಇದಲ್ಲದೆ, ಅನೇಕ ಔಷಧಿಗಳ ಬೆಲೆ ಹೆಚ್ಚಾಗಿದೆ.

ಬೆಲೆ ಅನುಮತಿ ಕೋರಲಾಗಿದೆ.!

ಔಷಧ ತಯಾರಿಕೆಯ ವೆಚ್ಚವು ತುಂಬಾ ಹೆಚ್ಚಾಗಿದೆ ಎಂದು ಔಷಧೀಯ ಉದ್ಯಮದ ಗುಂಪುಗಳು ಹೇಳುತ್ತವೆ. ಆದ್ದರಿಂದ, ಅದರ ಬೆಲೆಯೂ ಹೆಚ್ಚಾಗುತ್ತದೆ. ಎರಡಂಕಿಗಳು ಹೆಚ್ಚುತ್ತಿವೆ. ಈಗ ಬೆಲೆ ಏರಿಕೆಯಿಂದ ಸ್ವಲ್ಪ ಪರಿಹಾರ ಸಿಕ್ಕಿದೆ. ಔಷಧಿಗಳು ಹೆಚ್ಚಿನ ಜನರಿಗೆ ಕೆಲಸ ಮಾಡುವ ವಿಷಯವಾಗಿದೆ. ಪ್ಯಾರಸಿಟಮಾಲ್, ಅಜಿಪ್ರೊಮೈಸಿನ್ ಮತ್ತು ಜೀವಸತ್ವಗಳು ಮತ್ತು ಖನಿಜಗಳು ಇತ್ಯಾದಿಗಳನ್ನು ಒಳಗೊಂಡಿದೆ. ಔಷಧಿಗಳ ಪಟ್ಟಿಯಲ್ಲಿ ಪ್ಯಾರಸಿಟಮಾಲ್, ಅಜಿಪ್ರೊಮೈಸಿನ್ ನಂತಹ ಪ್ರತಿಜೀವಕಗಳು, ರಕ್ತಹೀನತೆ ವಿರೋಧಿ, ಜೀವಸತ್ವಗಳು ಮತ್ತು ಕಬ್ಬಿಣ ಸೇರಿವೆ.

ಪ್ಯಾರಸಿಟಮಾಲ್ ಬೆಲೆ ಶೇ.130ರಷ್ಟು ಹಾಗೂ ಎಕ್ಸಿಪೆಂಟ್ಸ್ ಶೇ. 18-262ರಷ್ಟು ಏರಿಕೆಯಾಗಿದೆ. ಗ್ಲಿಸರಿನ್ ಮತ್ತು ಪ್ರೊಪಿಲೀನ್‌ ಕಾಲ್, ಸಿರಪ್ ಸೇರಿದಂತೆ ದ್ರಾವಕಗಳು ಕ್ರಮವಾಗಿ ಶೇಕಡಾ 263 ಮತ್ತು ಶೇಕಡಾ 83 ರಷ್ಟು ದುಬಾರಿಯಾಗಿವೆ. ಮಧ್ಯಂತರ ಬೆಲೆಗಳು ಶೇಕಡಾ 11 ರಿಂದ 175 ರಷ್ಟು ಹೆಚ್ಚಾಗಿದೆ. ಪೆನ್ಸಿಲಿನ್ ಜಿ ಶೇಕಡಾ 175 ರಷ್ಟು ದುಬಾರಿಯಾಗಿದೆ.

Categories
ಮಾಹಿತಿ ರಾಜ್ಯ ರಾಷ್ಟ್ರೀಯ ವಾರ್ತೆ ವ್ಯವಹಾರ

ಹೊಸ ಆರ್ಥಿಕ ವರ್ಷಕ್ಕೆ ಸ್ವಾಗತ!

ಹೊಸ ಆರ್ಥಿಕ ವರ್ಷಕ್ಕೆ ಸ್ವಾಗತ!
– ಏ.1ರಿಂದ ಏನೇನ್ ಜಾಸ್ತಿ ಆಗುತ್ತೆ?
– ಹಲವು ನಿಯಮ ಬದಲು: ಏನೇನು ಬದಲಾಗುತ್ತೆ?

NAMMUR EXPRESS NEWS
ಏ.1ರಿಂದ ಹೊಸ ಆರ್ಥಿಕ ವರ್ಷ ಆರಂಭವಾಗಲಿದೆ. ಎನ್ ಪಿ ಎಸ್‌ಗೆ ಲಾಗಿನ್ ಆಗಲು ಆಧಾರ್ ಕಡ್ಡಾಯ, ಎಸ್ ಬಿ ಐ ಡೆಬಿಟ್ ಕಾರ್ಡ್ ಶುಲ್ಕ ಹೆಚ್ಚಳ, ಇಪಿಎಫ್‌ ಒ ನಿಯಮ ಬದಲಾವಣೆ, ಫಾಸ್‌ ಟ್ಯಾಗ್‌ ಗೆ ಕೆವೈಸಿ ಇವೂ ಸೇರಿದಂತೆ ಏ.1ರಿಂದ ವಿತ್ತೀಯ ಜಗತ್ತಿನಲ್ಲಿ ಹಲವು ಬದಲಾವಣೆಗಳು ಆಗಲಿವೆ. ಜನಸಾಮಾನ್ಯರ ಜೇಬಿಗೆ ನೇರ ಪರಿಣಾಮ.

-ಫಾಸ್‌ಟ್ಯಾಗ್ ಕೆವೈಸಿ ಕಡ್ಡಾಯ

ಏ . 1ಕ್ಕೂ ಮೊದಲು ಫಾಸ್ಟ್‌ ಟ್ಯಾಗ್ ಕೆವೈಸಿ ಅನ್ನು ಅಪ್‌ಡೇಟ್ ಮಾಡುವಂತೆ ಎನ್ ಎಚ್ ಎಐ ಸೂಚನೆ ನೀಡಿದೆ. ಒಂದೊಮ್ಮೆ ಕೆವೈಸಿ ಮಾಡಲು ವಿಫಲವಾದರೆ ನಿಮ್ಮ ಫಾಸ್ಟ್ ಟ್ರ್ಯಾಕ್ ಖಾತೆ ನಿಷ್ಕ್ರಿಯವಾಗಲಿದೆ. ನಂತರ ಖಾತೆಯಲ್ಲಿ ಹಣವಿದ್ದರೂ, ನಿಮ್ಮ ಟೋಲ್ ಪಾವತಿಸಲು ನಿಮಗೆ ಸಾಧ್ಯವಾಗುವುದಿಲ್ಲ.

– ಇನ್ಮುಂದೆ ಇ-ಇನ್ಸೂರೆನ್ಸ್ ಅಷ್ಟೇ !

ಏ .1ರ ಬಳಿಕ ಲೈಫ್, ಹೆಲ್ತ್ ಅಥವಾ ಯಾವುದೇ ಜನರಲ್ ವಿಮೆ ಪಾಲಿಸಿ ಖರೀದಿಸಿದರೂ, ವಿಮಾ ಕಂಪನಿಗಳು ಕಾಗದದ ರೂಪದ ದಾಖಲೆ ಪತ್ರಗಳನ್ನು ನೀಡುವುದಿಲ್ಲ. ಕೇವಲ ಡಿಜಿಟಲ್ ಫಾರ್ಮೆಟ್‌ ನಲ್ಲಷ್ಟೇ ಪಾಲಿಸಿಯನ್ನು ಗ್ರಾಹಕರಿಗೆ ನೀಡುತ್ತವೆ.

-ಮ್ಯೂಚುವಲ್ ಫಂಡ್ ಬಂದ್ ಆಗಬಹುದು!

ಮ್ಯೂಚುವಲ್ ಫಂಡ್ ಗಳಿಗೂ ಕೆವೈಸಿ ಏ.1ರಿಂದ ಕಡ್ಡಾಯವಾಗಲಿದೆ ಯಾರು ಕೆವೈಸಿ ಮಾಡಿಸಿಲ್ಲವೋ ಅವರ ಎಂಎಫ್ ವಹಿವಾಟುಗಳು ಸ್ಥಗಿತಗೊಳ್ಳಲಿದೆ.

– ವಿಮೆ ನಿಯಮ ಬದಲಾವಣೆ

ಏಪ್ರಿಲ್ 1ರಿಂದ ವಿಮಾ ಕ್ಷೇತ್ರದಲ್ಲೂ ಮಹತ್ವದ ಬದಲಾವಣೆ ಆಗಲಿದೆ. ಐಆರ್ ಡಿಎಐ ನಿಯಮಗಳನ್ನು ಬದಲಾಯಿಸುವ ಮೂಲಕ ಸರೆಂಡರ್ ಮೌಲ್ಯದ ನಿಯಮಗಳನ್ನು ಬದಲಾಯಿಸಿದೆ. ಇನ್ನು ಮುಂದೆ ಗ್ರಾಹಕರು ಪಾಲಿಸಿಯನ್ನು ಎಷ್ಟು ತಡವಾಗಿ ಸರೆಂಡರ್ ಮಾಡುತ್ತಾರೋ ಅಷ್ಟು ಹೆಚ್ಚು ಸರೆಂಡರ್ ಮೌಲ್ಯ ಪಡೆಯಲಿದ್ದಾರೆ. ಪ್ರಸ್ತುತ ವರ್ಷಗಳೊಳಗೆ ಪಾಲಿಸಿಯನ್ನು ಸರೆಂಡರ್ ಮಾಡಿದರೆ ಮುಖ ಬೆಲೆಗಿಂತ ಕಡಿಮೆ ಮೌಲ್ಯ ದೊರೆಯುತ್ತಿದೆ.

– ಎನ್‌ಪಿಎಸ್‌ ಗೆ ಆಧಾರ್ ಭದ್ರತೆ

ಎನ್‌ಪಿಎಸ್‌ ಖಾತೆಗೆ ಲಾಗಿನ್ ಆಗುವ ನಿಯಮಗಳನ್ನು ಪಿಂಚಣಿ ನಿಯಂತ್ರಕ ಸಂಸ್ಥೆ ಪಿಇಆ‌ರ್ ಡಿವಿ ಬದಲಾಯಿಸಿದೆ. ಇನ್ನು ಮುಂದೆ ‘ಎನ್‌ಪಿಎಸ್’ ಖಾತೆಗೆ ಲಾಗಿನ್ ಆಗಲು ಬಳಕೆದಾರರ ಐಡಿ ಮತ್ತು ಪಾಸ್ ವರ್ಡ್ ಅಲ್ಲದೆ ಆಧಾ‌ರ್ ಲಿಂಕ್ ಮಾಡಲಾದ ಮೊಬೈಲ್ ಸಂಖ್ಯೆಯೂ ಅಗತ್ಯವಾಗಿದೆ. ನಿಮ್ಮ ಆಧಾ‌ರ್ ಗೆ ಲಿಂಕ್ ಮಾಡಲಾದ ಮೊಬೈಲ್ ಸಂಖ್ಯೆಗೆ ಒಟಿಪಿ ಬರಲಿದ್ದು, ಇದನ್ನು ನಮೂದಿಸಿದ ನಂತರದೇ ನೀವು ಎನ್‌ಪಿಎಸ್ ಖಾತೆಗೆ ಲಾಗಿನ್ ಆಗಬಹುದು.

– ಹೊಸ ತೆರಿಗೆ ಪದ್ಧತಿ ಡೀಫಾಲ್ಟ್ ಆಯ್ಕೆ

ಏಪ್ರಿಲ್ 1ರಿಂದ ಆದಾಯ ತೆರಿಗೆ ನಿಯಮಗಳಲ್ಲಿಯೂ ಪ್ರಮುಖ ಬದಲಾವಣೆ ಜಾರಿಗೆ ಬರಲಿದೆ. ಇದರ ಅಡಿಯಲ್ಲಿ ಹೊಸ ತೆರಿಗೆ ಪದ್ಧತಿಯು ಡೀಫಾಲ್ಟ್ ತೆರಿಗೆ ಪದ್ಧತಿಯಾಗಿರಲಿದೆ. ಅಂದರೆ, ನೀವು ಹಳೆಯ ಮತ್ತು ಹೊಸ ತೆರಿಗೆ ಪದ್ಧತಿಯ ನಡುವೆ ನಿಮಗೆ ಬೇಕಾದ ಆಯ್ಕೆಯನ್ನು ಆಯ್ದು ಕೊಳ್ಳದೇ ಇದ್ದಲ್ಲಿ ನಿಮ್ಮ ಐಟಿಆರ್ ‘ಅನ್ನು ಹೊಸ ತೆರಿಗೆ ಪದ್ದತಿಯ ಅಡಿಯಲ್ಲಿ ಸಲ್ಲಿಸಲಾಗುತ್ತದೆ. ಒಮ್ಮೆ ಹೊಸ ತೆರಿಗೆ ಪದ್ಧತಿ ಆಯ್ದುಕೊಂಡರೆ ಹಳೆ ತೆರಿಗೆ ಪದ್ದತಿ ಆಯ್ದುಕೊಳ್ಳುವ ಆಯ್ಕೆ ಇರುವುದಿಲ್ಲ, ಹೊಸ ತೆರಿಗೆ ಪದ್ಧತಿಯಲ್ಲಿ 7 ಲಕ್ಷ ರೂ.ವರೆಗೂ ತೆರಿಗೆ ಪಾವತಿಸಬೇಕಾಗಿಲ್ಲ,

– ಕ್ರೆಡಿಟ್ ಕಾರ್ಡ್ ಗ್ರಾಹಕರಿಗೆ ಸೌಲಭ್ಯ

• “ಯೆಸ್ ಬ್ಯಾಂಕ್’ ತನ್ನ ಕ್ರೆಡಿಟ್ ಕಾರ್ಡ್ ನಿಯಮಗಳನ್ನು ಬದಲಾಯಿಸಿದೆ. ಕ್ರೆಡಿಟ್ ಕಾರ್ಡ್ ಬಳಕೆದಾರರು ತ್ರೈಮಾಸಿಕದಲ್ಲಿ ಕನಿಷ್ಠ 10,000 ರೂ.ಗಳನ್ನು ಖರ್ಚು ಮಾಡಿದರೆ, ಅವರು ದೇಶೀಯ ವಿಮಾನ ನಿಲ್ದಾಣದ ಲಾಂಜ್ ಪ್ರವೇಶವನ್ನು ಪಡೆಯುತ್ತಾರೆ. ಈ ಸೌಲಭ್ಯ ಏ.1ರಿಂದ ಜಾರಿಗೆ ಬರಲಿದೆ.

• ದೇಶದ ಪ್ರಮುಖ ಖಾಸಗಿ ಬ್ಯಾಂಕ್ ‘ಐಸಿಐಸಿಐ ತನ್ನ ಗ್ರಾಹಕರಿಗೆ ಒಂದು ತ್ರೈಮಾಸಿಕದಲ್ಲಿ 35,000 ರೂ.ವರೆಗೆ ವೆಚ್ಚ ಮಾಡಿದಲ್ಲಿ ಕಾಂಪ್ಲಿಮೆಂಟರಿ ಏರ್ ಪೋರ್ಟ್ ಲಾಂಜ್ ಪ್ರವೇಶವನ್ನು ನೀಡುತ್ತಿದೆ.

– ಇಪಿಎಫ್‌ಒ ನಿಯಮ ಬದಲು

ಏಪ್ರಿಲ್ 1ರಿಂದ ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್‌ಒ) ನಿಯಮಗಳಲ್ಲಿ ದೊಡ್ಡ ಬದಲಾವಣೆಯೊಂದು ಜಾರಿಗೆ ಬರುತ್ತಿದೆ. ಇನ್ನು ಮುಂದೆ ಉದ್ಯೋಗ ಬದಲಾವಣೆಯ ಸಂದರ್ಭದಲ್ಲಿ ಉದ್ಯೋಗಿಯ ಇಪಿಎಫ್ ಒ ಖಾತೆಯನ್ನು ಸ್ವಯಂಚಾಲಿತವಾಗಿ ಹೊಸ ಉದ್ಯೋಗದಾತರಿಗೆ ವರ್ಗಾಯಿಸಲಾಗುತ್ತದೆ. ಈ ಹಿಂದೆ ಖಾತೆದಾರರ ಕೋರಿಕೆಯ ಮೇರೆಗೆ ಮಾತ್ರ ಖಾತೆಗಳನ್ನು ವರ್ಗಾಯಿಸಲಾಗುತ್ತಿತ್ತು.

Categories
ರಾಜ್ಯ ರಾಷ್ಟ್ರೀಯ ವಾರ್ತೆ

ಇಂದು, ನಾಳೆ ಬ್ಯಾಂಕ್,ಎಲ್ ಐಸಿ ಕಚೇರಿಗಳು ಪೂರ್ಣ ದಿನ ಓಪನ್

ಇಂದು, ನಾಳೆ ಬ್ಯಾಂಕ್,ಎಲ್ ಐಸಿ ಕಚೇರಿಗಳು ಪೂರ್ಣ ದಿನ ಓಪನ್
– ಆ‌ರ್ ಬಿಐ ಅಧಿಸೂಚನೆ: ಮಾರ್ಚ್ ತಿಂಗಳ ಕೊನೆ ದಿನ
– ಐಟಿ ರಿಟರ್ನ್ಸ್ ಮಾಡೋದನ್ನು ಮರೆಯದಿರಿ

NAMMUR EXPRESS NEWS
ನವದೆಹಲಿ : ಜೀವ ವಿಮಾ ನಿಗಮ ಮಾರ್ಚ್ 30 ಮತ್ತು ಮಾರ್ಚ್ 31ರಂದು ತನ್ನ ಕಚೇರಿಗಳನ್ನ ತೆರೆದಿಡಲಿದ್ದು, ಹಣಕಾಸು ವರ್ಷ ಮುಗಿಯುವ ಮೊದಲು ತೆರಿಗೆ ಉಳಿತಾಯ ಕಾರ್ಯವನ್ನ ಪೂರ್ಣಗೊಳಿಸಲು ತೆರಿಗೆದಾರರಿಗೆ ಅನುಕೂಲವಾಗಲಿದೆ. ಶನಿವಾರ ಮತ್ತು ಭಾನುವಾರ ತಮ್ಮ ಶಾಖೆಗಳು ತೆರೆದಿರುತ್ತವೆ ಎಂದು ಬ್ಯಾಂಕುಗಳು ಘೋಷಿಸಿದ ನಂತರ ಎಲ್‌ಐಸಿ ಈ ಕ್ರಮ ಕೈಗೊಂಡಿದೆ. ಭಾರತದಲ್ಲಿ ಬ್ಯಾಂಕುಗಳಿಗೆ ಪ್ರತಿ ಭಾನುವಾರ ರಜೆ ಇರುತ್ತದೆ. ಇದಲ್ಲದೆ, ತಿಂಗಳ ಎರಡು ಶನಿವಾರಗಳಂದು ಬ್ಯಾಂಕುಗಳು ಸಹ ಮುಚ್ಚಲ್ಪಡುತ್ತವೆ. ಆದಾಗ್ಯೂ, ಈ ವಾರ ವಿಭಿನ್ನವಾಗಿದೆ. ಈ ವಾರ ಶನಿವಾರ ಮತ್ತು ಭಾನುವಾರ ಎರಡೂ ದಿನಗಳಲ್ಲಿ ಬ್ಯಾಂಕುಗಳು ತೆರೆದಿರುತ್ತವೆ.

ಆ‌ರ್ ಬಿಐ ಅಧಿಸೂಚನೆ: ಇದಕ್ಕಾಗಿ ರಿಸರ್ವ್ ಬ್ಯಾಂಕ್ ಪ್ರತ್ಯೇಕ ಅಧಿಸೂಚನೆ ಹೊರಡಿಸಿದೆ. ಮಾರ್ಚ್ 20, 2024 ರಂದು ರಿಸರ್ವ್ ಬ್ಯಾಂಕ್ ಹೊರಡಿಸಿದ ಅಧಿಸೂಚನೆಯಲ್ಲಿ ಎಲ್ಲಾ ಏಜೆನ್ಸಿ ಬ್ಯಾಂಕುಗಳ ಎಲ್ಲಾ ಶಾಖೆಗಳು ಮಾರ್ಚ್ 30 ಶನಿವಾರ ಮತ್ತು ಮಾರ್ಚ್ 31 ಭಾನುವಾರ ತೆರೆದಿರುತ್ತವೆ ಎಂದು ತಿಳಿಸಲಾಗಿದೆ. ಆ‌ರ್ ಬಿಐನ ಈ ಅಧಿಸೂಚನೆಯನ್ನು ಜಾರಿಗೆ ತರುತ್ತಿರುವ ಬ್ಯಾಂಕುಗಳ ಶಾಖೆಗಳು ಈ ವಾರ ಶನಿವಾರ ಮತ್ತು ಭಾನುವಾರ ತೆರೆದಿರುತ್ತವೆ. ಬಾಧಿತ ಬ್ಯಾಂಕುಗಳ ಉದ್ಯೋಗಿಗಳಿಗೆ ಈ ವಾರಾಂತ್ಯದಲ್ಲಿ ರಜೆ ಸಿಗುವುದಿಲ್ಲ.

Categories
ರಾಷ್ಟ್ರೀಯ ವಾರ್ತೆ ವೈರಲ್ ವೀಡಿಯೊಗಳು

ಆಂಧ್ರದಲ್ಲಿ ಅಪರೂಪದ ಮೀನು ಪತ್ತೆ..!

ಆಂಧ್ರದಲ್ಲಿ ಅಪರೂಪದ ಮೀನು ಪತ್ತೆ..!
– ಸ್ವಲ್ಪ ಮನುಷ್ಯನಂತೆ ಕಂಡರೂ ತುಂಬಾ ಡೇಂಜರ್ ಈ ಜೀವಿ
– ಮೀನಿನ ವಿಚಿತ್ರ ರೂಪಕ್ಕೆ ದಂಗಾದ ಮೀನುಗಾರರು!

NAMMUR EXPRESS NEWS
ವಿಜಯವಾಡ: ಆಂಧ್ರ ಪ್ರದೇಶದ ವಿಶಾಖಪಟ್ಟಣಂ ಸಮುದ್ರದಲ್ಲಿ ಗುರುವಾರ ಮೀನುಗಾರರ ಬಲೆಗೆ ಅಪರೂಪದ ಮೀನು ಸಿಕ್ಕಿದೆ. ಮೀನಿನ ವಿಚಿತ್ರ ರೂಪವನ್ನು ಕಂಡು ಒಂದು ಕ್ಷಣ ಮೀನುಗಾರರೇ ದಂಗಾಗಿದ್ದಾರೆ. ಮೀನಿನ ಬಗ್ಗೆ ವಿಶಾಖಪಟ್ಟಣಂನ ಸಹಾಯಕ ಮೀನುಗಾರಿಕಾ ನಿರ್ದೇಶಕ ಡಾ. ಪಿ. ಶ್ರೀನಿವಾಸ್ ರಾವ್ ಮಾಹಿತಿ ನೀಡಿದ್ದು, ಇದು ಪಫ್ಫರ್ ಫಿಶ್ ಎಂದು ತಿಳಿಸಿದ್ದಾರೆ. ಆದರೆ, ಸ್ಥಳೀಯ ಮೀನುಗಾರರು ಇದನ್ನು ಸಮುದ್ರ ಕಪ್ಪೆ ಎಂದು ಭಾವಿಸಿದ್ದರು. ಈ ಮೀನು ಸಮುದ್ರದ ಆಳದಲ್ಲಿ ಅಲೆದಾಡುತ್ತವೆ. ಬಲೆಗೆ ಬಿದ್ದಾಗ ಅಥವಾ ಯಾರಾದರು ದಾಳಿ ಮಾಡಿದಂತಹ ಸಂದರ್ಭದಲ್ಲಿ ತಮ್ಮ ದೇಹವನ್ನು ಬಲೂನ್ ರೀತಿ ಮಾಡಿಕೊಳ್ಳುತ್ತವೆ. ಈ ಮೀನು ನೋಡಲು ಸ್ವಲ್ಪ ಮನುಷ್ಯನ ರೀತಿ ಕಾಣುತ್ತದೆ. ಅಂದಹಾಗೆ ಈ ಪಫ್ಫರ್ ಫಿಶ್ ತುಂಬಾ ವಿಷಕಾರಿ ಮೀನು. ಇತರ ಸಮುದ್ರ ಪ್ರಭೇದಗಳಿಂದ ತನ್ನನ್ನು ರಕ್ಷಿಸಿಕೊಳ್ಳಲು, ಈ ಮೀನಿನ ಯಕೃತ್ತಿನಲ್ಲಿ ಶಕ್ತಿಯುತವಾದ ವಿಷ ಉತ್ಪಾದನೆಯಾಗುತ್ತದೆ. ಈ ವಿಷವು ಸೈನೈಡ್‌ಗಿಂತ 1,000 ಪಟ್ಟು ಹೆಚ್ಚು ಮಾರಕವಾಗಿದೆ. ಇದನ್ನು ಹೆಚ್ಚಾಗಿ ಜಪಾನ್ ಸೇವನೆ ಮಾಡುತ್ತಾರೆ.

Categories
ರಾಜ್ಯ ರಾಷ್ಟ್ರೀಯ ವಾರ್ತೆ

ಏ.1ರಿಂದ 2,000 ರೂ. ನೋಟು ವಿನಿಮಯ

ಏ.1ರಿಂದ 2,000 ರೂ. ನೋಟು ವಿನಿಮಯ
– ಠೇವಣಿ ತಾತ್ಕಾಲಿಕ ಸ್ಥಗಿತ ಆರ್.ಬಿ.ಐ ಘೋಷಣೆ

NAMMUR EXPRESS NEWS
ನವದೆಹಲಿ: ದೇಶಾದ್ಯಂತ ಏ.1ರಿಂದ ತನ್ನ 19 ವಿತರಣಾ ಕಚೇರಿಗಳಲ್ಲಿ 2,000 ರೂ.ಗಳ ನೋಟುಗಳ ವಿನಿಮಯ ಅಥವಾ ಠೇವಣಿ ಸಾಧ್ಯವಿಲ್ಲ ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಘೋಷಿಸಿದೆ. ಖಾತೆಗಳ ವಾರ್ಷಿಕ ಮುಚ್ಚುವಿಕೆಗೆ ಸಂಬಂಧಿಸಿದ ಕಾರ್ಯಾಚರಣೆಗಳಿಂದಾಗಿ ಈ ತಾತ್ಕಾಲಿಕ ನಿಲುಗಡೆಯಾಗಿದೆ. ಎಂದು ಮಾಹಿತಿ ನೀಡಿದೆ. ವಾರ್ಷಿಕ ಮುಚ್ಚುವಿಕೆಗೆ ಸಂಬಂಧಿಸಿದ ಕಾರ್ಯಾಚರಣೆಗಳಿಂದಾಗಿ 2,000 ರೂ.ಗಳ ನೋಟುಗಳ ವಿನಿಮಯ / ಠೇವಣಿ ಸೌಲಭ್ಯವು ಏ.1ರಿಂದ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ 19 ವಿತರಣಾ ಕಚೇರಿಗಳಲ್ಲಿ ಲಭ್ಯವಿರುವುದಿಲ್ಲ. ಮೇ 19, 2023 ರಂದು ಚಲಾವಣೆಯಿಂದ 2,000 ರೂ ಮುಖಬೆಲೆಯ ನೋಟುಗಳನ್ನು ಹಿಂತೆಗೆದುಕೊಳ್ಳುವುದಾಗಿ ಆರ್.ಬಿ.ಐ ಈ ಹಿಂದೆ ಘೋಷಿಸಿತ್ತು. ಫೆಬ್ರವರಿ 29 ರ ಹೊತ್ತಿಗೆ, ಸುಮಾರು 97.62 ಪ್ರತಿಶತದಷ್ಟು 2,000 ರೂ ನೋಟುಗಳು ಬ್ಯಾಂಕಿಂಗ್ ವ್ಯವಸ್ಥೆಗೆ ಮರಳಿವೆ. 8,470 ಕೋಟಿ ಮೌಲ್ಯದ ಹಿಂಪಡೆದ ನೋಟುಗಳು ಮಾತ್ರ ಇನ್ನೂ ಸಾರ್ವಜನಿಕರ ವಶದಲ್ಲಿವೆ.

Categories
ರಾಷ್ಟ್ರೀಯ ವಾರ್ತೆ

238 ಬಾರಿ ಸೋತರೂ ಮತ್ತೆ ಸ್ಪರ್ಧೆ

238 ಬಾರಿ ಸೋತರೂ ಮತ್ತೆ ಸ್ಪರ್ಧೆ
– ಲಿಮ್ಕಾ ದಾಖಲೆ ಬರೆದ ಎಲೆಕ್ಷನ್ ಕಿಂಗ್ ಪದ್ಮರಾಜನ್

NAMMUR EXPRESS NEWS
ಮೆಟ್ಟೂರು: ಒಂದಲ್ಲ ಎರಡಲ್ಲ ಬರೋಬ್ಬರಿ 238 ಬಾರಿ ಚುನಾವಣೆಯಲ್ಲಿ ಸೋಲು ಕಂಡಿರುವ 65 ವಯಸ್ಸಿನ ವ್ಯಕ್ತಿ ಮರಳಿ ಧರ್ಮಪುರಿ ಲೋಕಸಭಾ ಕ್ಷೇತ್ರಕ್ಕೆ ನಾಮಪತ್ರ ಸಲ್ಲಿಕೆ ಮಾಡುವ ಮೂಲಕ ಸ್ಪರ್ಧೆಗೆ ಸಜ್ಜಾಗಿದ್ದಾರೆ. ತಮಿಳು ನಾಡಿನ ಮೆಟ್ಟೂರು ನಿವಾಸಿ ಕೆ ಪದ್ಮ ರಾಜನ್ (65) ಸಣ್ಣದೊಂದು ಪಂಚರ್ ಅಂಗಡಿ ಇಟ್ಟುಕೊಂಡಿದ್ದು, 1988 ರಿಂದ ಚುನಾವಣೆಗಳಲ್ಲಿ ವಿವಿಧ ಚಿಹ್ನೆಗಳ ಮೂಲಕ ಸ್ಪರ್ಧಿಸಿ ಸೋಲುವ ಮೂಲಕವೇ ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್ನಲ್ಲಿ ವಿಶ್ವ ದಾಖಲೆ ನಿರ್ಮಾಣ ಮಾಡಿದ್ದಾರೆ.

ರಾಷ್ಟ್ರಪತಿಯಿಂದ ಹಿಡಿದು ಪಂಚಾಯಿತಿ ಚುನಾವಣೆವರೆಗೂ ಸ್ಪರ್ಧಿಸಿರುವ ಇವರು ಪ್ರಧಾನಿ ನರೇಂದ್ರ ಮೋದಿ, ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ, ಮನಮೋಹನ್ ಸಿಂಗ್ ಹಾಗೂ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧವೂ ನಾಮಪತ್ರ ಸಲ್ಲಿಸಿ ಸೋಲಿನ ಸರಮಾಲೆ ಹಾಕಿಕೊಂಡಿದ್ದು, ಎಲೆಕ್ಷನ್ ಕಿಂಗ್ ಎಂದು ಜನಪ್ರಿಯತೆ ಗಳಿಸಿದ್ದಾರೆ. ಗೆಲುವು ಮುಖ್ಯವಲ್ಲ, ನನ್ನ ವಿರುದ್ಧದ ಅಭ್ಯರ್ಥಿ ಯಾರೆಂದು ತಲೆಕೆಡಿಸಿ ಕೊಳ್ಳುವುದಿಲ್ಲ. ಫಲಿತಾಂಶದ ವೇಳೆ ಸೋಲು ಘೋಷಣೆಯಾದಾಗ ಸಂತಸವಾಗುತ್ತದೆ. ಸಾಮಾನ್ಯ ಜನರು ಸಹ ಚುನಾವಣೆಯಲ್ಲಿ ಸ್ಪರ್ಧಿಸುವಂತೆ ಜಾಗೃತಿ ಮೂಡಿಸಿ ಮಾದರಿಯಾಗಲು ಬಯಸುತ್ತೇನೆ ಎಂದು ಪದ್ಮರಾಜನ್ ಹೇಳಿದ್ದಾರೆ.

ಲಕ್ಷಾಂತರ ರೂ. ಠೇವಣಿ ನಷ್ಟ ಕಳೆದ ಬಾರಿ 25 ಸಾವಿರ ರೂ. ಠೇವಣಿ ಕಳೆದುಕೊಂಡಿದ್ದ ಪದ್ಮರಾಜ್ 35 ವರ್ಷಗಳಲ್ಲಿ ವಿವಿಧ ಚುನಾವಣೆಗಳಲ್ಲಿ ಲಕ್ಷಾಂತರ ರೂಪಾಯಿ ವೆಚ್ಚ ಮಾಡಿದ್ದಾರೆ. ಚುನಾವಣೆಯಲ್ಲಿ ಶೇ.16 ಮತ ಪಡೆದರೆ ಮಾತ್ರ ಠೇವಣೆ ಮರಳಿ ಪಡೆಯಬಹುದು. ಚುನಾವಣೆಗೆ ನಾಮಪತ್ರ ಸಲ್ಲಿಸೋದು, ಸೋಲೋದು, ಠೇವಣಿ ಕಳೆದುಕೊಳ್ಳುವುದು ಪದ್ಮರಾಜ್‌ಗೆ ಸಾಮಾನ್ಯವಾಗಿದೆ.

Categories
ರಾಷ್ಟ್ರೀಯ ವಾರ್ತೆ

500 ರು. ನೋಟಿನ ಹಾಸಿಗೆ ಮೇಲೆ ಮಲಗಿದ ರಾಜಕಾರಣಿ…!

500 ರು. ನೋಟಿನ ಹಾಸಿಗೆ ಮೇಲೆ ಮಲಗಿದ ರಾಜಕಾರಣಿ…!
– ಲಂಚಗುಳಿತನ ಕಾರಣಕ್ಕೆ ಈತ ಪಕ್ಷದಿಂದ ವಜಾ
– ವಾಷಿಂಗ್ ಮಷಿನ್‌ನಲ್ಲಿ ₹2.54 ಕೋಟಿ!

NAMMUR EXPRESS NEWS
ಗುವಾಹಟಿ: ಸುಖದ ಸುಪ್ಪತ್ತಿಗೆಯಲ್ಲಿ ಮಲಗುವುದು ಎಲ್ಲರ ಕನಸಾಗಿರುತ್ತದೆ. ಹಾಗೆಯೇ ಇಲ್ಲೊಬ್ಬ ಭ್ರಷ್ಟ ರಾಜಕಾರಣಿ ಕಾಂಚಾಣದಿಂದ ಆವೃತವಾಗಿರುವ ಹಾಸಿಗೆಯಲ್ಲಿ ಮಲಗಿರುವ ದೃಶ್ಯ ವೈರಲ್ ಆಗಿದೆ. ಅಸ್ಸಾಂನ ಉಡಾಲ್‌ಗುರಿ ಜಿಲ್ಲೆಯ ಭೈರಾಗೂರಿ ಯಲ್ಲಿ ಗ್ರಾಮಾಭಿವೃದ್ಧಿ ಸಮಿತಿಯ ಅಧ್ಯಕ್ಷನಾಗಿದ್ದ ಬೋಡೋಲ್ಯಾಂಡ್ ಪಕ್ಷದ ನಾಯಕ ಬೆಂಜಮಿನ್ ಬಸುಮಾತಾರಿ ಈ ರೀತಿ 500 ರು. ನೋಟಿನ ಮೇಲೆ ಮಲಗಿದ್ದಾನೆ. ಆತನ ಪೋಟೋ ಇಂಟರ್ನೆಟ್‌ನಲ್ಲಿ ಭಾರಿ ಸದ್ದು ಮಾಡಿದೆ. ಈತ ಗ್ರಾಮದಲ್ಲಿ ಹಲವು ಸರ್ಕಾರಿ ಯೋಜನೆಗೆ ಫಲಾನುಭವಿಗಳಿಂದ ಲಂಚ ಪಡೆಯುತ್ತಿರುವ ಕುರಿತು ಆರೋಪವಿದೆ.

ಪಕ್ಷದಿಂದ ವಜಾ: ವಿಡಿಯೋ ವೈರಲ್ ಬೆನ್ನಲ್ಲೇ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ಬೋಡೋ ಲ್ಯಾಂಡ್ ಪಕ್ಷ, ಕಳೆದ ಜ.10ರಂದೇ ತನ್ನ ಪ್ರಾಥಮಿಕ ಸದಸ್ಯತ್ವದಿಂದ ಕಿತ್ತು ಹಾಕಿರುವುದಾಗಿ ತಿಳಿಸಿದೆ.

– ವಾಷಿಂಗ್ ಮಷಿನ್‌ನಲ್ಲಿ ₹2.54 ಕೋಟಿ!

ನವದೆಹಲಿ: ಭ್ರಷ್ಟರು ಹಣವನ್ನು ಪೈಪ್‌ಗಳಲ್ಲಿ, ,ಹಾಸಿಗೆಗಳ ಕೆಳಗೆ ಬಚ್ಚಿಟ್ಟದ್ದನ್ನು ನೋಡಿದ್ದೇವೆ. ಆದರೆ ವಿದೇಶಿ ನೇರ ನಗದು ವರ್ಗಾವಣೆಯಲ್ಲಿ ಅಕ್ರಮ ನಡೆಸಿರುವ ಕಂಪನಿಯೊಂದರ ಮೇಲೆ ದಾಳಿ ಮಾಡುವ ವೇಳೆ ಜಾರಿ ನಿರ್ದೇಶನಾಲಯ (ಇ.ಡಿ.) ಅಧಿಕಾರಿಗಳಿಗೆ ವಾಷಿಂಗ್ ಮಷಿನ್‌ನಲ್ಲಿ ಅಡಗಿಸಿಟ್ಟಿದ್ದ 2.54 ಕೋಟಿ ರು. ಹಣ ಸಿಕ್ಕಿದೆ. ವಿಜಯ್ ಕುಮಾರ್ ಶುಕ್ಲಾ ಮತ್ತು ಸಂಜಯ್ ಗೋಸ್ವಾಮಿ ಅವರಿಗೆ ಸೇರಿದ ಲಾಜಿಸ್ಟಿಕ್ಸ್ ಕಂಪನಿ ಯೊಂದು 1800 ಕೋಟಿ ರು. . ಮೌಲ್ಯದ ಹಣವನ್ನು ವಿದೇಶಿ ನೇರ ನಗದು ವರ್ಗಾವಣೆ ನಿಯಮ ಉಲ್ಲಂಘಿಸಿ ರವಾನೆ ಮಾಡಿದೆ ಎಂಬ ಆರೋಪವಿದೆ. ಈ ಹಿನ್ನೆಲೆಯಲ್ಲಿ ಅದಕ್ಕೆ ಸಂಬಂಧಿಸಿದ ಹಲವು ಊರುಗಳಲ್ಲಿ ದಾಳಿ ಇ.ಡಿ. ಮಂಗಳವಾರ ದಾಳಿ ಮಾಡಿದೆ ಹಾಗೂ ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿದೆ. ಈ ವೇಳೆ ವಾಷಿಂಗ್ ಮಷಿನ್‌ನಲ್ಲಿ 2.54 ಕೋಟಿ ರು.ಗಳನ್ನು ಅಡಗಿಸಿ ಇಟ್ಟಿದ್ದು ಅಚ್ಚರಿ ಮೂಡಿಸಿದೆ.