Categories
ರಾಜ್ಯ ರಾಷ್ಟ್ರೀಯ ವಾರ್ತೆ

ಈ ವರ್ಷ ಇಬ್ಬರು ಪ್ರಧಾನಿಗಳ ಸಾವು!!!

ಈ ವರ್ಷ ಇಬ್ಬರು ಪ್ರಧಾನಿಗಳ ಸಾವು!!!
– ಕೋಡಿ ಮಠ ಶ್ರೀಗಳ ಭಯಾನಕ ಭವಿಷ್ಯ
– ದೊಡ್ಡ ಅನಾಹುತಗಳು ಜಗತ್ತಿನಲ್ಲಿ ನಡೆಯುತ್ತೆ!

NAMMUR EXPRESS NEWS
ಜಗತ್ತಿನ ಮುಂದಿನ ಆಗುಹೋಗುಗಳ ಬಗ್ಗೆ ಆಗಾಗ ಭವಿಷ್ಯವನ್ನು ನುಡಿಯುವ ಕೋಡಿ ಮಠದ ಡಾ. ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿಗಳು ಈ ಬಾರಿ ಮಾತ್ರ ‌ಒಂದಿಷ್ಟು ಆತಂಕ ಮೂಡಿಸುವ ಭವಿಷ್ಯವನ್ನು ಹೇಳಿದ್ದಾರೆ. ಅವರ ಪ್ರಕಾರ, 2024ರಲ್ಲಿ ಜಗತ್ತಿಗೆ ಒಳ್ಳೆಯ ದಿನಗಳೇ ಇಲ್ಲವಂತೆ. ಒಂದು ಕಡೆ ಅಕಾಲಿಕ ಮಳೆ ಸುರಿದು ಪ್ರವಾಹಗಳು ಸೃಷ್ಟಿಯಾಗಬಹುದು, ಬಾಂಬ್‌ ಸಿಡಿಯುವ ಸಂಭವವಿದೆ, ಯುದ್ಧಗಳ ಭೀತಿ ಇದೆ ಎಂದು ಕೋಡಿ ಮಠ ಶ್ರೀಗಳು ಹೇಳಿದರು. ಭೂಕಂಪನ, ಜಲಕಂಟಕದಿಂದ ಜನರು ತಲ್ಲಣಗೊಳ್ಳುತ್ತಾರೆ ಎಂದು ಹೇಳಿರುವ ಕೋಡಿ ಮಠ ಶ್ರೀಗಳು, ಜಗತ್ತಿನ ದೊಡ್ಡ ಸಂತರು ಕೊಲೆಯಾಗುತ್ತಾರೆ ಎಂದು ಹೇಳಿದ್ದಾರೆ. ಇದಕ್ಕಿಂತಲೂ ಹೆಚ್ಚಾಗಿ ಕೋಡಿ ಶ್ರೀಗಳು ಇನ್ನೊಂದು ಭಯಾನಕ ಭವಿಷ್ಯ ಹೇಳಿದ್ದಾರೆ. ಅವರ ಪ್ರಕಾರ ಈ ವರ್ಷದಲ್ಲಿ ಜಗತ್ತಿನಲ್ಲಿ ಇಬ್ಬರು ಪ್ರಧಾನಿಗಳು ಸಾವು ಕಾಣಬಹುದು.

ಮತೀಯ ಗಲಭೆ ಸಾಧ್ಯತೆ

ಜಗತ್ತಿಗೆ ವಿನಾಶ, ಜಗತ್ತಿಗೆ ಅಪಾಯ, ರೋಗ, ಸುನಾಮಿ ಹಾಗೂ ಮತೀಯ ಸಮಸ್ಯೆಯಿಂದ ಜನರು ದುಖಃ ಅನುಭವಿಸುತ್ತಾರೆ ಎಂದು ಸ್ವಾಮೀಜಿ ತಿಳಿಸಿದ್ದಾರೆ. ಅಂದರೆ ಜಗತ್ತಿನಲ್ಲಿ ಧರ್ಮಗಳ ನಡುವೆ ಸಂಘರ್ಷ ನಡೆಯುವ ಅಪಾಯವಿದೆ ಎಂದು ಎಚ್ಚರಿಸಿದ್ದಾರೆ.

Categories
ರಾಷ್ಟ್ರೀಯ ವಾರ್ತೆ

ಆರೋಗ್ಯ ವಿಮೆ ನಿಯಮದಲ್ಲಿ ಬದಲಾವಣೆ

ಆರೋಗ್ಯ ವಿಮೆ ನಿಯಮದಲ್ಲಿ ಬದಲಾವಣೆ
– ಇನ್ನು ಮುಂದೆ ಎಲ್ಲಾ ಆಸ್ಪತ್ರೆಗಳಲ್ಲಿ ನಗದು ರಹಿತ ಚಿಕಿತ್ಸೆ ಲಭ್ಯ!
– ಈ ಸೌಲಭ್ಯದ ಪ್ರಯೋಜನ ಪಡೆಯುವುದು ಹೇಗೆ?

NAMMUR EXPRESS NEWS
ನವದೆಹಲಿ: ಜನರಲ್‌ ಇನ್ಸೂರೆನ್ಸ್ ಕೌನ್ಸಿಲ್‌ (ಜಿಐಸಿ) ಸಾಮಾನ್ಯ ಮತ್ತು ಆರೋಗ್ಯ ವಿಮಾ ಕಂಪನಿಗಳೊಂದಿಗೆ ಸಮಾಲೋಚಿಸಿ ಎಲ್ಲಾ ಆಸ್ಪತ್ರೆಗಳಲ್ಲಿ ನಗದು ರಹಿತ ಚಿಕಿತ್ಸೆಯನ್ನು ವಿಸ್ತರಿಸಲು ‘ಎಲ್ಲೆಡೆ ನಗದು ರಹಿತ’ ಉಪಕ್ರಮವನ್ನು ಪ್ರಾರಂಭಿಸಿದೆ. ಎಲ್ಲಾ ಆಸ್ಪತ್ರೆಗಳಲ್ಲಿ ಜನವರಿ 2024 ರಿಂದ ನಗದು ರಹಿತ ಚಿಕಿತ್ಸಾ ಸೌಲಭ್ಯ ಲಭ್ಯವಾಗಲಿದೆ ಎಂಬ ವರದಿ ಈ ಹಿಂದೆಯೇ ಪ್ರಕಟವಾಗಿತ್ತು. ಈ ಸೌಲಭ್ಯದ ನಂತರ, ಆರೋಗ್ಯ ವಿಮಾ ಪಾಲಿಸಿದಾರರು ಈಗ ವಿಮಾ ಕಂಪನಿಯ ನೆಟ್‌ವರ್ಕ್‌ನಲ್ಲಿಲ್ಲದ ಆಸ್ಪತ್ರೆಗಳಲ್ಲಿಯೂ ನಗದು ರಹಿತ ಸೌಲಭ್ಯಗಳನ್ನು ಪಡೆಯಬಹುದು.

ಹಿಂದೆ ಯಾವ ಸೌಲಭ್ಯ ಇತ್ತು?:

ಈ ಹಿಂದೆ ವಿಮಾ ಕಂಪನಿಯ ನೆಟ್‌ವರ್ಕ್‌ನಲ್ಲಿರುವ ಆಸ್ಪತ್ರೆಗಳಲ್ಲಿ ಮಾತ್ರ ಪಾಲಿಸಿದಾರರು ನಗದು ರಹಿತ ಸೌಲಭ್ಯವನ್ನು ಪಡೆಯಬಹುದಿತ್ತು. ವಿಮಾ ಕಂಪನಿಗಳೊಂದಿಗೆ ಪಾಲುದಾರಿಕೆ ಹೊಂದಿರದ ಆಸ್ಪತ್ರೆಗಳಲ್ಲಿ ಚಿಕಿತ್ಸೆಗಾಗಿ, ಪಾಲಿಸಿದಾರನು ತನ್ನ ಸ್ವಂತ ಜೇಬಿನಿಂದ ಪಾವತಿಸಬೇಕಾಗಿತ್ತು. ಆದರೆ ‘ಕ್ಯಾಶ್‌ಲೆಸ್‌ ಎವೆರಿವೇ‌ರ್’ ಉಪಕ್ರಮದ ಅಡಿಯಲ್ಲಿ, ಈಗ ಪಾಲಿಸಿದಾರರು ತಮ್ಮ ಆಯ್ಕೆಯ ಯಾವುದೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಬಹುದು.

ಈ ಸೌಲಭ್ಯದ ಪ್ರಯೋಜನ ಪಡೆಯುವುದು ಹೇಗೆ?

– ಕೆಲವು ಷರತ್ತುಗಳು ಅನ್ವಯವಾಗಲಿದ್ದು, ಚಿಕಿತ್ಸೆಯನ್ನು ಯೋಜಿಸಿರುವ ಗ್ರಾಹಕರು ನಗದು ರಹಿತ ಸೌಲಭ್ಯವನ್ನು ಪಡೆಯಲು ತಮ್ಮ ವಿಮಾ ಕಂಪನಿಗೆ 48 ಗಂಟೆಗಳ ಮುಂಚಿತವಾಗಿ ತಿಳಿಸಬೇಕಾಗುತ್ತದೆ.
– ತುರ್ತು ಚಿಕಿತ್ಸೆಯ ಸಂದರ್ಭದಲ್ಲಿ ನೀವು 48 ಗಂಟೆಗಳ ಒಳಗೆ ನಿಮ್ಮ ವಿಮಾ ಕಂಪನಿಗೆ ತಿಳಿಸಬೇಕು.
– ಪ್ರಸ್ತುತ, ಸುಮಾರು 40,000 ಎಂಪನೆಲ್ಡ್ ಆಸ್ಪತ್ರೆಗಳಲ್ಲಿ ಮಾತ್ರ ನಗದು ರಹಿತ ಸೌಲಭ್ಯಗಳು ಲಭ್ಯ.
– ಒಂದು ವೇಳೆ ವಿಮಾದಾರನು ಪಾಲಿಸಿಯ ನಿಯಮಗಳು ಮತ್ತು ಷರತ್ತುಗಳಿಗೆ ಒಳಪಡದ ಕಾಯಿಲೆಗೆ ಚಿಕಿತ್ಸೆ ಪಡೆಯುತ್ತಿದ್ದರೆ, ವಿಮಾ ಕಂಪನಿಯು ನಗದು ರಹಿತ ಕ್ರೈಮ್ ಅನ್ನು ತಿರಸ್ಕರಿಸುತ್ತದೆ.
ಈ ಪ್ರಯೋಜನಗಳನ್ನು ಯಾವಾಗ ಪಡೆದುಕೊಳ್ಳಬಹುದು?
– ಈ ಸೌಲಭ್ಯವನ್ನು ತಕ್ಷಣದಿಂದಲೇ ಜಾರಿಗೆ ತರಲಾಗಿದೆ ಎಂದು ಜನರಲ್ ಇನ್ಸೂರೆನ್ಸ್ ಕೌನ್ಸಿಲ್ (ಜಿಐಸಿ) ಮಾಹಿತಿ ನೀಡಿದೆ. ಇದರರ್ಥ ನೀವು ಇಂದಿನಿಂದಲೇ ಯಾವುದೇ ಆಸ್ಪತ್ರೆಯಲ್ಲಿ ನಗದು ರಹಿತ ಸೌಲಭ್ಯವನ್ನು ಪಡೆಯಬಹುದು.
– ಪ್ರಸ್ತುತ ನಗದು ರಹಿತ ಚಿಕಿತ್ಸೆಯು ಒಟ್ಟು ಕೈಮ್‌ಗಳಲ್ಲಿ ಕೇವಲ 63 ಪ್ರತಿಶತ ಮಾತ್ರ. ಆದರೆ IRDAI ಅದನ್ನು 100 ಪ್ರತಿಶತಕ್ಕೆ ಹೆಚ್ಚಿಸಲು ಬಯಸುತ್ತದೆ. ನಗದು ರಹಿತವಾಗಿ ಹೋಗುವುದರಿಂದ ನಕಲಿ ಆರೋಗ್ಯ ವಿಮೆ ಕ್ರೈಮ್‌ಗಳು ಕಡಿಮೆಯಾಗುತ್ತವೆ ಮತ್ತು ಪಾಲಿಸಿದಾರರ ಜೇಬಿನ ಮೇಲಿನ ಹೊರೆಯೂ ಕಡಿಮೆಯಾಗುತ್ತದೆ. ಈ ಉಪಕ್ರಮವು ಹೆಚ್ಚಿನ ಗ್ರಾಹಕರನ್ನು ಆರೋಗ್ಯ ವಿಮೆಯನ್ನು ಆಯ್ಕೆ ಮಾಡಲು, ವೆಚ್ಚಗಳನ್ನು ನಿಯಂತ್ರಿಸಲು ಮತ್ತು ಕೈಮ್‌ಗಳಿಗೆ ಸಂಬಂಧಿಸಿದ ವಂಚನೆಗಳನ್ನು ತೊಡೆದುಹಾಕಲು ಪ್ರೋತ್ಸಾಹಿಸುತ್ತದೆ.

Categories
ರಾಜ್ಯ ರಾಷ್ಟ್ರೀಯ ವಾರ್ತೆ

ದೇಶದಲ್ಲಿ ಮಧ್ಯಂತರ ಬಜೆಟ್ ಮಂಡನೆ

ದೇಶದಲ್ಲಿ ಮಧ್ಯಂತರ ಬಜೆಟ್ ಮಂಡನೆ
– 6ನೇ ಬಾರಿಗೆ ಬಜೆಟ್ ಮಂಡಿಸುತ್ತಿರುವ ನಿರ್ಮಲಾ ಸೀತಾರಾಮನ್
– ಕೇಂದ್ರ ಬಜೆಟ್‌ನಲ್ಲಿ ಈ 5 ಪ್ರಮುಖ ವರ್ಗಗಳಿಗೆ ಸಿಗಲಿದೆ ಆದ್ಯತೆ

NAMMUR EXPRESS NEWS
ನವದೆಹಲಿ: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಫೆಬ್ರವರಿ 1ರಂದು ಮಧ್ಯಂತರ ಬಜೆಟ್ ಮಂಡಿಸುವ ಮೂಲಕ ದಾಖಲೆ ಬರೆಯಲಿದ್ದಾರೆ. ಮೊರಾರ್ಜಿ ದೇಸಾಯಿ ಅವರ ಬಳಿಕ ಸತತ 6 ಬಜೆಟ್‌ ಮಂಡಿಸುತ್ತಿರುವ ಎರಡನೇ ವಿತ್ತ ಮಂತ್ರಿ ಎಂಬ ಖ್ಯಾತಿಗೆ ಪಾತ್ರರಾಗಲಿದ್ದಾರೆ. ಫೆ.1ರಂದು ಮಧ್ಯಂತರ ಬಜೆಟ್ ಮಂಡನೆಯಾದರೂ, ಲೋಕಸಭೆ ಚುನಾವಣೆ ಬಳಿಕ ರಚನೆಯಾಗುವ ಸರ್ಕಾರವು ಮತ್ತೆ ಪೂರ್ಣ ಪ್ರಮಾಣದ ಬಜೆಟ್ ಮಂಡಿಸುತ್ತದೆ.

ಫೆಬ್ರವರಿ 1 ರಂದು ತಮ್ಮ ಆರನೇ ಕೇಂದ್ರ ಬಜೆಟ್ ಮಂಡನೆಗೆ ಸಿದ್ಧವಾಗಿರುವ ಸೀತಾರಾಮನ್ ಅವರು, ಇದು ಪ್ರಾಥಮಿಕವಾಗಿ ಸಾರ್ವತ್ರಿಕ ಚುನಾವಣೆಗಳಿಗೆ ಮೊದಲು ನಡೆಯುವ “ವೋಟ್ ಆನ್ ಅಕೌಂಟ್” ಎಂದು ಹೇಳಿದರು. ಈ ಬಜೆಟ್‌ನಲ್ಲಿ ಯಾವುದೇ ಪ್ರಮುಖ ಘೋಷಣೆಗಳಿರುವ ಬಗ್ಗೆ ಮಾಹಿತಿ ನೀಡಲಿಲ್ಲ. ಮಧ್ಯಂತರ ಬಜೆಟ್‌ಗಳು ವಿಶಿಷ್ಟವಾಗಿ ಮಹತ್ವದ ಘೋಷಣೆಗಳನ್ನು ಒಳಗೊಂಡಿರುವುದಿಲ್ಲ ಮತ್ತು ಲೋಕಸಭೆ ಚುನಾವಣೆ ಬಳಿಕ ಅಧಿಕಾರಕ್ಕೆ ಬರುವ ಹೊಸ ಸರ್ಕಾರವು 2024ರ ಜುಲೈನಲ್ಲಿ ಸಮಗ್ರ ಬಜೆಟ್‌ ಮಂಡಿಸಲಾಗುತ್ತದೆ. ಆಗ ಮಂಡಿಸಲಾಗುವ ಬಜೆಟ್‌ನಲ್ಲಿ ವಿಶೇಷ ಘೋಷಣೆಗಳನ್ನು ನಿರೀಕ್ಷಿಸಬಹುದು ಎಂದು ಹೇಳಿದರು.

ಕೇಂದ್ರ ಬಜೆಟ್‌ನಲ್ಲಿ ಈ 5 ಪ್ರಮುಖ ವರ್ಗಗಳಿಗೆ ಸಿಗಲಿದೆ ಆದ್ಯತೆ

ಕೇಂದ್ರ ಸರ್ಕಾರವು ಫೆಬ್ರವರಿ 1ರಂದು ಮಧ್ಯಂತರ ಬಜೆಟ್ ಮಂಡಿಸಲಿದೆ. ಈಗಾಗಲೇ ಈ ಬಗ್ಗೆ ಸಿದ್ಧತೆ ಆರಂಭವಾಗಿದೆ. ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಮಂಡಿಸಲಿರುವ ಈ ಚುನಾವಣಾ ಪೂರ್ವ ಬಜೆಟ್‌ ಮಹಿಳೆಯರು, ಬಡವರು, ಯುವಜನತೆ, ರೈತರು ಮತ್ತು ಬುಡಕಟ್ಟು ಜನಾಂಗದವರು ಸೇರಿ ಸಮಾಜದ ಐದು ಪ್ರಮುಖ ವರ್ಗಗಳ ಕಲ್ಯಾಣ ಯೋಜನೆಗಳಿಗೆ ಆದ್ಯತೆ ನೀಡಲಿದೆ. ಅಲ್ಲದೆ ಈ ವರ್ಗಗಳಿಗಾಗಿ ಅಸ್ತಿತ್ವದಲ್ಲಿರುವ ಯೋಜನೆಗಳ ಅನುದಾನ ಹೆಚ್ಚಾಗುವ ಸಾಧ್ಯತೆಯಿದೆ. ಜತೆಗೆ ಇನ್ನೂ ಹೊಸ ಯೋಜನೆಗಳನ್ನು ಘೋಷಿಸುವ ಸಾಧ್ಯತೆಯೂ ಇದೆ ಎಂದು ಊಹಿಸಲಾಗಿದೆ. “ಸಮಾಜದ ಈ ವರ್ಗಗಳಿಗೆ ಮೀಸಲಾಗಿರುವ ಯೋಜನೆಗಳಿಗೆ ಬಜೆಟ್‌ನಲ್ಲಿ ಒತ್ತು ನೀಡಲಾಗುವುದು.

ಉದಾಹರಣೆಗೆ ಶಿಕ್ಷಣ ಮತ್ತು ಕೌಶಲ್ಯ ಅಭಿವೃದ್ಧಿ. ಈ ಕ್ಷೇತ್ರದತ್ತ ವಿಶೇಷ ಗಮನ ಹರಿಸಲಾಗುವುದು. ಯುವ ಜನತೆಯ ಆಶೋತ್ತರಗಳಿಗೆ ಸ್ಪಂದಿಸಲಾಗುವುದುʼʼ ಎಂದು ಮೂಲಗಳು ತಿಳಿಸಿವೆ. 2023-24ರಲ್ಲಿ ಶಾಲಾ ಶಿಕ್ಷಣ, ಸಾಕ್ಷರತೆ ಮತ್ತು ಉನ್ನತ ಶಿಕ್ಷಣವನ್ನು ನಿರ್ವಹಿಸುವ ಎರಡು ಇಲಾಖೆಗಳಿಗೆ ಕೇಂದ್ರ ಸರ್ಕಾರ 1.12 ಲಕ್ಷ ಕೋಟಿ ರೂ. ಮೀಸಲಿಟ್ಟಿದೆ. ಮಹಿಳಾ ನೇತೃತ್ವದ ಅಭಿವೃದ್ಧಿಯ ಗುರಿ ಹೊಂದಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಈ ದೃಷ್ಟಿಕೋನವನ್ನು ಗಮನದಲ್ಲಿಟ್ಟುಕೊಂಡು ಬಜೆಟ್‌ ಮಂಡಿಸಲಿರುವ ನಿರ್ಮಲಾ ಸೀತಾರಾಮನ್ ಅವರ ಬಜೆಟ್ ಭಾಷಣದ ಪ್ರಮುಖ ಆಧಾರಸ್ತಂಭವಾಗಿ ಮಹಿಳೆಯರ ಕಲ್ಯಾಣವೂ ಇರಲಿದೆ. ಮಧ್ಯಪ್ರದೇಶದಲ್ಲಿ ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಮಹಿಳಾ ಮತದಾರರು ನಿರ್ಣಾಯಕರಾಗಿದ್ದರು. ಹೀಗಾಗಿ ಬೆಜೆಪಿ ಮತ್ತು ಕಾಂಗ್ರೆಸ್‌ ಪ್ರಣಾಳಿಕೆಯಲ್ಲಿ ಮಹಿಳೆಯರಿಗಾಗಿ ವಿಶೇಷ ಯೋಜನೆಗಳನ್ನು ಜಾರಿಗೆ ತರುವ ಪ್ರಸ್ತಾವ ಇಟ್ಟಿದ್ದವು.

ಅನುದಾನ ಹೆಚ್ಚಳ

ʼʼಬುಡಕಟ್ಟು ಸಮುದಾಯದ ಕಲ್ಯಾಣಕ್ಕಾಗಿ ಯೋಜನೆಗಳನ್ನು ಜಾರಿಗೆ ತರುವ ಬುಡಕಟ್ಟು ಅಭಿವೃದ್ಧಿ ಸಚಿವಾಲಯಕ್ಕೆ 2023-24ರ ಸಾಲಿನಲ್ಲಿ ಅನುದಾನವನ್ನು ಹೆಚ್ಚಿಸಲಾಗಿತ್ತು. ಇದು 2024-25ರಲ್ಲಿಯೂ ಮುಂದುವರಿಯಲಿದೆ” ಎಂದು ಹೆಸರು ಹೇಳಲಿಚ್ಛಿಸದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. 2023-24ರ ಬಜೆಟ್‌ನಲ್ಲಿ, ಬುಡಕಟ್ಟು ಅಭಿವೃದ್ಧಿ ಸಚಿವಾಲಯಕ್ಕೆ ಹಂಚಿಕೆಯು ಸುಮಾರು ಶೇ. 71ರಷ್ಟು ಹೆಚ್ಚಳವಾಗಿತ್ತು.

ಅದರಲ್ಲಿ ಹೆಚ್ಚಿನ ಭಾಗವನ್ನು ಪರಿಶಿಷ್ಟ ಪಂಗಡದ ಮಕ್ಕಳಿಗೆ ಆರನೇ ತರಗತಿಯಿಂದ ಉಚಿತ ಶಿಕ್ಷಣವನ್ನು ಒದಗಿಸುವ ಏಕಲವ್ಯ ಮಾದರಿ ವಸತಿ ಶಾಲೆಗಳು (EMRS) ಯೋಜನೆಗೆ ವಿನಿಯೋಗಿಸಲಾಗುತ್ತದೆ. ಅಲ್ಲದೆ ಬುಡಕಟ್ಟು ಸಮುದಾಯಕ್ಕಾಗಿ ಸರ್ಕಾರ ಜಾರಿಗೆ ತಂದಿರುವ ಯೋಜನೆಗಳು ಎಲ್ಲ ಅರ್ಹರಿಗೆ ತಲುಪುತ್ತಿದೆ ಎನ್ನುವುದನ್ನು ಖಚಿತಪಡಿಸಿಕೊಳ್ಳಲು ಕೇಂದ್ರ ಸರ್ಕಾರ ವಿಕಾಸ್ ಭಾರತ್ ಸಂಕಲ್ಪ ಯಾತ್ರೆಯನ್ನು ಆರಂಭಿಸಿದೆ. ಬುಡಕಟ್ಟು ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿರುವ ಝಾರ್ಖಂಡ್‌ನ ಖುಂಟಿ ಗ್ರಾಮದಲ್ಲಿ 2023ರ ನವೆಂಬರ್ 15ರಂದು ಮೋದಿ ಈ ಅಭಿಯಾನಕ್ಕೆ ಚಾಲನೆ ನೀಡಿದ್ದರು.

ರೈತರ ಕಲ್ಯಾಣ

ಶೇ. 33ಕ್ಕೂ ಹೆಚ್ಚಿನ ರೈತರು ಪಿಎಂ-ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಪ್ರಯೋಜನ ಪಡೆಯುವ ನಿರೀಕ್ಷೆಯಿದೆ. ಈ ಯೋಜನೆಯಡಿ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಪ್ರತಿ ವರ್ಷ 6,000 ರೂ. ಒದಗಿಸಲಾಗುತ್ತದೆ. 2023-24ರಲ್ಲಿ ಕೇಂದ್ರವು ಈ ಯೋಜನೆಗೆ 60,000 ಕೋಟಿ ರೂ.ಗಳನ್ನು ನಿಗದಿಪಡಿಸಿದೆ. ಇದು 2024-25ರಲ್ಲಿ ಹೆಚ್ಚಾಗಲಿದೆ. ವಿವಿಧ ಸಚಿವಾಲಯಗಳಿಗೆ ಅನುದಾನವನ್ನು ಸಮರ್ಪಕವಾಗಿ ಹಂಚಿಕೆ ಮಾಡಲು ಯೋಜನೆ ರೂಪಿಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

Categories
ರಾಷ್ಟ್ರೀಯ ವಾರ್ತೆ

ಅಯೋಧ್ಯೆ ಕಡೆ ಲಕ್ಷ ಲಕ್ಷ ಭಕ್ತರ ಸಾಲು!

ಅಯೋಧ್ಯೆ ಕಡೆ ಲಕ್ಷ ಲಕ್ಷ ಭಕ್ತರ ಸಾಲು!
– ರಾಮಲಲ್ಲಾ ದರ್ಶನಕ್ಕೆ ಭಕ್ತರ ನೂಕು ನುಗ್ಗಲು
– ಮೊದಲ ದಿನವೇ ರಾಮನ ದರ್ಶನಕ್ಕೆ 5 ಲಕ್ಷ ಜನರು
– ಅಯೋಧ್ಯೆಗೆ ಸದ್ಯಕ್ಕೆ ಬರಬೇಡಿ: ಉ.ಪ್ರ ಪೊಲೀಸರು
– ಕೊರೆವ ಚಳಿಯಲ್ಲೂ ಮಧ್ಯ ರಾತ್ರಿಯಿಂದಲೇ ಕ್ಯೂ

NAMMUR EXPRESS NEWS
ಅಯೋಧ್ಯೆ: ರಾಮನೂರು ಅಯೋಧ್ಯೆಯಲ್ಲಿ ರಾಮ ಮಂದಿರ ಲೋಕಾರ್ಪಣೆಯಾದ ಬಳಿಕ ‘ಬಾಲರಾಮ’ನ ದರ್ಶನಕ್ಕೆ ಭಕ್ತರ ದಂಡು ಸಾಗರೋಪಾದಿಯಲ್ಲಿ ಹರಿದುಬರುತ್ತಿದೆ. ರಾಮಲಲ್ಲಾನ ದರ್ಶನ ಪಡೆಯಲು ಮೈ ಕೊರೆಯುವ ಚಳಿಯನ್ನೂ ಲೆಕ್ಕಿಸದೇ ಸಾವಿರಾರು ಭಕ್ತರು ಮಂಗಳವಾರ ಬೆಳಗಿನ ಜಾವ 3 ಗಂಟೆಯಿಂದಲೇ ಮಂದಿರದ ಆವರಣದ ಮುಂದೆ ಜಮಾಯಿಸಿದ್ದರು. ಬೆಳಗ್ಗೆ 6 ಗಂಟೆಯ ಹೊತ್ತಿಗೆ ಬ್ಯಾರಿಗೇಡ್‌ಗಳನ್ನು ದಾಟಿ ಆವರಣದೊಳಗೆ ಏಕಕಾಲಕ್ಕೆ ಪ್ರವೇಶಿಸಿದ್ದರಿಂದ ನೂಕು ನುಗ್ಗಲು ಉಂಟಾಗಿದೆ. ತಳ್ಳಾಟದಲ್ಲಿ ಕೆಲವರು ಅಸ್ವಸ್ಥಗೊಂಡು ಆಸ್ಪತ್ರೆ ಸೇರಿರುವುದು ವರದಿಯಾಗಿದೆ. ಜನದಟ್ಟಣೆ ನಿಭಾಯಿಸುವಲ್ಲಿ ಅಯೋಧ್ಯೆ ಜಿಲ್ಲಾಡಳಿತ ವಿಫಲಗೊಂಡಿದೆ ಎಂದು ಅಸಮಾಧಾನ ಹೊರಹಾಕಿರುವ ಸಿಎಂ ಯೋಗಿ ಆದಿತ್ಯನಾಥ್‌ ಅವರು ಅಯೋಧ್ಯೆಯಲ್ಲಿ ವೈಮಾನಿಕ ಸಮೀಕ್ಷೆ ಕೈಗೊಂಡು, ಪರಿಸ್ಥಿತಿ ತಿಳಿಗೊಳಿಸುವಂತೆ ಹಿರಿಯ ಅಧಿಕಾರಿಗಳಿಗೆ ಸೂಚನೆ ಕೊಟ್ಟಿದ್ದಾರೆ.

ಜನರ ಪ್ರವಾಹ: ಭದ್ರತೆ ಕಷ್ಟ ಕಷ್ಟ!

ಜನರ ಪ್ರವಾಹ ನಿಯಂತ್ರಿಸಲು ಪೊಲೀಸರು ಹರಸಾಹಸ ನಡೆಸಿದ್ದು, ಮಧ್ಯಾಹ್ನದ ಹೊತ್ತಿಗೆ ಪರಿಸ್ಥಿತಿ ಹತೋಟಿಗೆ ಬಂದಿದೆ ಎಂದು ಉತ್ತರ ಪ್ರದೇಶ ಪೊಲೀಸ್‌ ಇಲಾಖೆ ತಿಳಿಸಿದೆ. ಬೆಳಗ್ಗೆ 6 ಗಂಟೆಯಿಂದಲೇ ರಾಮಲಲ್ಲಾನ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು. 8 ಸಾವಿರ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದರೂ ಬೆಳಗ್ಗೆ 10 ಗಂಟೆಯ ಸುಮಾರಿಗೆ ಪರಿಸ್ಥಿತಿ ಮಿತಿಮೀರಿತ್ತು. ಶಿಸ್ತು, ಸಂಯಮ ಪಾಲಿಸುವಂತೆ ಪೊಲೀಸರು ಮನವಿ ಮಾಡಿಕೊಳ್ಳುತ್ತಿದ್ದರೂ ಪರಿಸ್ಥಿತಿ ಹತೋಟಿಗೆ ಬಂದಿರಲಿಲ್ಲ. ಆಗ ಅಯೋಧ್ಯೆ ಜಿಲ್ಲಾಡಳಿತವು ಹೆಚ್ಚುವರಿ ಭದ್ರತಾ ಪಡೆಗಳನ್ನು ಸ್ಥಳಕ್ಕೆ ಕರೆಸಿಕೊಂಡು ಪರಿಸ್ಥಿತಿಯನ್ನು ಹತೋಟಿಗೆ ತರುವ ಪ್ರಯತ್ನ ಮಾಡಿತು. ಒಂದು ಹಂತದಲ್ಲಿ ತಾತ್ಕಾಲಿಕ ಅವಧಿಗೆ ದರ್ಶನವನ್ನು ಬಂದ್‌ ಮಾಡಲಾಗಿತ್ತು.

ಅಯೋಧ್ಯೆ ನಗರ ಫುಲ್ ಟ್ರಾಫಿಕ್ ಜಾಮ್!

ಜನದಟ್ಟಣೆ ನಿಯಂತ್ರಿಸಲು ಪೊಲೀಸರು ಕೆಲವು ಸಂಚಾರ ಮಾರ್ಗಗಳಲ್ಲಿಬದಲಾವಣೆ ತಂದಿದ್ದಾರೆ. ಲಖನೌನಿಂದ ಸುಮಾರು 30 ಕಿ.ಮೀ. ದೂರದಲ್ಲಿರುವ ಬಾರಾಬಂಕಿಯಿಂದ ಅಯೋಧ್ಯೆ ಕಡೆಗಿನ ಸಂಚಾರ ಮಾರ್ಗವನ್ನು ಬದಲಾಯಿಸಲಾಗಿದೆ. ಈ ಮಧ್ಯೆ, ”ಮೊದಲ ದಿನವೇ ರಾಮಲಲ್ಲಾನ ದರ್ಶನ ಪಡೆಯಬೇಕು ಎಂಬ ಆತುರಬೇಡ. ಮಂದಿರದ ಆವರಣದಲ್ಲಿಸೆಲ್ಫಿ ಕ್ಲಿಕ್ಕಿಸಿಕೊಂಡು ಸರತಿ ಸಾಲಿಗೆ ಅಡ್ಡಿಪಡಿಸಬೇಡಿ. ಸಾಧ್ಯವಾದಷ್ಟು ದಿನ ಅಯೋಧ್ಯೆ ಭೇಟಿ ಮುಂದೂಡಿ,” ಎಂದು ಉ.ಪ್ರದೇಶ ಪೊಲೀಸ್‌ ಇಲಾಖೆ ‘ಎಕ್ಸ್‌’ನಲ್ಲಿಮನವಿ ಮಾಡಿಕೊಂಡಿದೆ.

ಗಣರಾಜ್ಯೋತ್ಸವ ದಿನದ ಪರೇಡ್‌ನಲ್ಲಿಉತ್ತರ ಪ್ರದೇಶದಿಂದ ‘ರಾಮಲಲ್ಲಾ’ ಟ್ಯಾಬ್ಲೊ ಈ ಬಾರಿ ಗಮನ ಸೆಳೆಯಲಿದೆ. ರಾಮಲಲ್ಲಾನಿಗೆ 6 ಕೆ.ಜಿ ತೂಕದ 11 ಕೋಟಿ ರೂ. ಮೌಲ್ಯದ ವಜ್ರದ ಕಿರೀಟ ಅರ್ಪಿಸಿದ ಸೂರತ್‌ ವಜ್ರದ ವ್ಯಾಪಾರಿ ಮುಕೇಶ್‌ ಪಟೇಲ್‌ ರಾಮನಿಗೆ ತಲೆಬಾಗಿದ್ದಾರೆ. ರಾಮ ಮಂದಿರಕ್ಕೆ ಉದ್ಯಮಿ ಮುಕೇಶ್‌ ಅಂಬಾನಿಯಿಂದ 2.5 ಕೋಟಿ ರೂ. ದೇಣಿಗೆ ನೀಡಿಕೆ ನೀಡಿದ್ದಾರೆ. ಹೀಗೆ ಹತ್ತು ಹಲವು ವಿಶೇಷತೆಗಳು ಇವೆ.

ರಾಮ ಮಂದಿರ ದರ್ಶನ ಸಮಯ ಏನು?

ಬೆಳಗ್ಗೆ 7 ರಿಂದ 11.30 ಹಾಗೂ ಮಧ್ಯಾಹ್ನ 2 ರಿಂದ ಸಂಜೆ 7 ಗಂಟೆವರೆಗೆ

Categories
ರಾಷ್ಟ್ರೀಯ ವಾರ್ತೆ

ಏಪ್ರಿಲ್‌ 16ರಿಂದ ಲೋಕಸಭೆ ಚುನಾವಣೆ?‌!

ಏಪ್ರಿಲ್‌ 16ರಿಂದ ಲೋಕಸಭೆ ಚುನಾವಣೆ?‌!
-ಚುನಾವಣೆ ಆಯೋಗ ಹೇಳಿದ್ದೇನು..ಅಧಿಸೂಚನೆ ಬರುತ್ತಾ?
– ರಾಮ ಮಂದಿರ ಉದ್ಘಾಟನೆ ಬಳಿಕ ಹೊಸ ಬೆಳವಣಿಗೆ

NAMMUR EXPRESS NEWS
ಹೊಸದಿಲ್ಲಿ: ಲೋಕಸಭೆ ಚುನಾವಣೆ-2024ಕ್ಕೆ ಇಷ್ಟರಲ್ಲಿಯೇ ದಿನಾಂಕ ಘೋಷಿಸಲಾಗುತ್ತದೆ ಎಂದು ಸುದ್ದಿ ಹರಡುತ್ತಿರುವ ಬೆನ್ನಲ್ಲಿಯೇ, ಮಹತ್ವದ ಸಂದೇಶವೊಂದನ್ನು ಚುನಾವಣಾ ಆಯೋಗ ತನ್ನ ಎಕ್ಸ್‌ (ಟ್ವಿಟರ್)‌ ಹ್ಯಾಂಡಲ್‌ನಲ್ಲಿ ಹರಿಬಿಟ್ಟಿದೆ. ಅದರ ಪ್ರಕಾರ, ʼಪರಿಶೀಲನೆʼಗಾಗಿ ದಿನಾಂಕವೊಂದನ್ನು ʼತಾತ್ಕಾಲಿಕʼವಾಗಿ ನಿಗದಿಪಡಿಸಿರುವುದಾಗಿ ತಿಳಿಸಿದೆ. ಆ ದಿನಾಂಕ ಏಪ್ರಿಲ್‌ 16. ಆಯೋಗದ ಪ್ರಕಾರ ಇದು ʼಅಧಿಕಾರಿಗಳ ಕರ್ತವ್ಯ ಪರಿಪಾಲನೆʼಯ ʼಪರಿಶೀಲನೆʼಗಾಗಿ ನಿಗದಿಪಡಿಸಲಾದ ತಾತ್ಕಾಲಿಕ ದಿನಾಂಕವಾಗಿದೆ.

ಏಪ್ರಿಲ್‌ 16ನ್ನು ಲೋಕಸಭೆ ಚುನಾವಣೆ ಮತದಾನದ ಹಂತಗಳ ಆರಂಭದ ದಿನಾಂಕ ಎಂದು ನಿಗದಿಪಡಿಸಲಾಗಿದೆಯೇ? ಈ ಬಗ್ಗೆ ಸ್ಪಷ್ಟನೆ ನೀಡುವಂತೆ ಕೆಲವು ಮಾಧ್ಯಮಗಳು ನಮ್ಮನ್ನು ಸಂಪರ್ಕಿಸಿವೆ. ಏಪ್ರಿಲ್‌ 16 ಚುನಾವಣಾ ಆಯೋಗದ ಅಧಿಕಾರಿಗಳು ಮುಂದಿನ ಕಾರ್ಯಯೋಜನೆಯನ್ನು ರೂಪಿಸಲು ಪರಿಶೀಲನೆಗಾಗಿ ಈ ದಿನಾಂಕವನ್ನು ʼತಾತ್ಕಾಲಿಕವಾಗಿ ನಿಗದಿಪಡಿಸಲಾಗಿದೆ” ಎಂದು ಚುನಾವಣಾ ಆಯೋಗ ಎಕ್ಸ್‌ನಲ್ಲಿ ಸ್ಪಷ್ಟನೆ ನೀಡಿದೆ. ಅಯೋಧ್ಯೆಯಲ್ಲಿ ರಾಮ ಮಂದಿರದ ಪ್ರಾಣ ಪ್ರತಿಷ್ಠಾಪನೆ ನಡೆದ ಕೆಲವೇ ದಿನಗಳಲ್ಲಿ ಚುನಾವಣಾ ಆಯೋಗ ಲೋಕಸಭೆ ಚುನಾವಣೆಯ ದಿನಾಂಕಗಳನ್ನು ಘೋಷಿಸಲಿದೆ ಎಂಬ ಊಹೆ ದಟ್ಟವಾಗಿ ಹರಡಿದೆ. ಇತ್ತೀಚೆಗೆ ಆಯೋಗದ ದಿಲ್ಲಿ ಕಚೇರಿ ಈ ಕುರಿತ ಪ್ಲಾನಿಂಗ್‌ಗಾಗಿ ತನ್ನ ಅಧಿಕಾರಿಗಳಿಗೆ ಸರ್ಕ್ಯುಲರ್‌ ಹೊರಡಿಸಿತ್ತು. ಈ ನಿಟ್ಟಿನಲ್ಲಿ ಅನುಮಾನ ಮೂಡಿತ್ತು.

Categories
ರಾಷ್ಟ್ರೀಯ ವಾರ್ತೆ

ರಾಮ ಸೀತೆ ವಿಶೇಷ ಅವತಾರ!

ರಾಮ ಸೀತೆ ವಿಶೇಷ ಅವತಾರ!
– ಬಾಲಕಿ ಕೆನ್ನೆ ಮೇಲೆ ರಾಮನ ಚಿತ್ರ,!
– ಅಕ್ಕಿಯಲ್ಲಿ ಅರಳಿದ ಸೀತಾ ರಾಮ..!
– ನಾಣ್ಯಗಳಲ್ಲಿ ಸಿದ್ಧವಾದ ಅಯೋಧ್ಯೆ
– ಅಯೋಧ್ಯೆ ಮಂದಿರ ಮಾದರಿಯಲ್ಲೆ ಸೆಟ್‌ ನಿರ್ಮಾಣ
– ಸಿಲಿಕಾನ್ ಸಿಟಿಯಲ್ಲಿ ಮೂಡಿದ ಅಯೋಧ್ಯೆ
– ಗದಗದ ಮಸೀದಿಯಲ್ಲಿ ಪೂಜೆ, ಹೋಮ

NAMMUR EXPRESS NEWS
ಅಯೋಧ್ಯೆಯಲ್ಲಿ ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆಗೊಂಡಿದೆ. ಈಗಾಗಲೇ ರಾಮ ನಾಮ ಸ್ಮರಣೆಯು ಎಲ್ಲೆಡೆ ಮೊಳಗಿದ್ದು, ದೇಶದಾದ್ಯಂತ ಹಬ್ಬದ ವಾತಾವರಣ ಸೃಷ್ಟಿಯಾಗಿದೆ. ಪ್ರತಿಯೊಂದು ಊರುಗಳಲ್ಲೂ ಭಕ್ತರು ರಾಮನನ್ನು ವಿಶೇಷವಾಗಿ ಸ್ಮರಿಸುತ್ತಿದ್ದಾರೆ. ಅದಲ್ಲೂ ಕಲಾವಿದರಂತೂ ತಮ್ಮ ಕಲೆಯ ಮೂಲಕವೇ ರಾಮನಿಗೊಂದು ಅಳಿಲು ಸೇವೆಯನ್ನು ಮಾಡುತ್ತಿದ್ದಾರೆ. ಹೌದು ಅದೆಷ್ಟೋ ಕಲಾವಿದರು ತಮ್ಮ ಕೈಯಾರೆ ರಾಮ ಮಂದಿರದ ಮೂರ್ತಿ ಹಾಗೂ ಶ್ರೀರಾಮ ಮೂರ್ತಿಯನ್ನು ತಯಾರಿಸಿ ಸುದ್ದಿಯಲ್ಲಿದ್ದಾರೆ.

ಬಾಲಕಿ ಕೆನ್ನೆ ಮೇಲೆ ಮೂಡಿಬಂದ ಶ್ರೀರಾಮಚಂದ್ರ !

ಕಲಾವಿದನೋರ್ವ ಮಗಳ ಕೆನ್ನೆಯ ಮೇಲೆಯೇ ಶ್ರೀರಾಮನ ಚಿತ್ರ ಬಿಡಿಸಿದ್ದಾರೆ. ಕಲಾವಿದ ಯಲ್ಲಪ್ಪ ವೈ.ಕುಂಬಾರ ಕಲೆಗೆ ಜನರು ಫಿದಾ ಆಗಿದ್ದಾರೆ.ಶ್ರೀರಾಮನ ಆಗಮನವನ್ನು ನಮ್ಮಮನೆಯಲ್ಲಿ ವಿಶೇಷವಾಗಿ ಆಚರಣೆ ಮಾಡುತ್ತಿದ್ದೇವೆ ಎಂದು ಕಲಾವಿದ ಹೇಳಿದ್ದಾರೆ. ಕಲಾವಿದರೊಬ್ಬರು ಅಕ್ಕಿಯನ್ನು ಬಳಸಿ ಸೀತಾ ರಾಮರ ಸುಂದರ ಮೂರ್ತಿಯನ್ನು ತಯಾರಿಸಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.

ನಾಣ್ಯಗಳಲ್ಲಿ ಸಿದ್ಧವಾದ ಅಯೋಧ್ಯೆ!

ರಾಮ ಮಂದಿರ ಪ್ರಾಣ ಪ್ರತಿಷ್ಠಪನೆ ಕಾರ್ಯ ನಡೆಯುತ್ತಿದ್ದು, ಭಕ್ತರು ವಿವಿಧ ರೀತಿಯಲ್ಲಿ ರಾಮ ಮಂದಿರ, ರಾಮನನ್ನು ರಚಿಸುತ್ತಿದ್ದಾರೆ. ದಾವಣಗೆರೆಯಲ್ಲಿ ನಾಣ್ಯದಲ್ಲಿಯೇ ಮಂದಿರ ರಚಿಸಿದ್ದು, ಪ್ರಧಾನಿ ಮೋದಿ ಅವರಿಗೆ ನೀಡಲು ಸಿದ್ಧತೆ ಮಾಡಿಕೊಂಡಿದ್ದಾರೆ. ಹರಿಹರ ನಗರದ ಆಕಾರ-ಆಧಾರ ಸಂಸ್ಥೆಯ ರಾಮು ಎಂ ಹಾಗೂ ಮಕ್ಕಳು ಒಂದು, ಎರಡು, ಐದು, 10, 20 ರೂ. ಮೌಲ್ಯದ ಒಟ್ಟು 12 ಸಾವಿರ ನಾಣ್ಯ ಬಳಸಿ ಶ್ರೀರಾಮ ಮಂದಿರ ನಿರ್ಮಾಣ ಮಾಡಿದ್ದಾರೆ. 31,500 ರೂ. ವೆಚ್ಚದಲ್ಲಿ 30 ದಿನಗಳಲ್ಲಿ ಈ ಮಂದಿರ ನಿರ್ಮಾಣ ಮಾಡಿದ್ದಾರೆ ಎನ್ನಲಾಗಿದೆ.

ಅಯೋಧ್ಯೆ ಮಂದಿರ ಮಾದರಿಯಲ್ಲೆ ಸೆಟ್‌ ನಿರ್ಮಾಣ!

ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ನಗರದ ಭಗತ್ ಸಿಂಗ್ ಕ್ರೀಡಾಂಗಣದಲ್ಲಿ ಅಯೋಧ್ಯೆ ರಾಮಮಂದಿರ ಸೆಟ್ ಹಾಕಲಾಗಿದೆ. ಬಿಜೆಪಿ ಯುವಘಟಕ ರಾಜ್ಯಾಧ್ಯಕ್ಷ ಹಾಗೂ ಸ್ಥಳಿಯ ಶಾಸಕ ದೀರಜ್ ಮುನಿರಾಜು ಅವರು ರಾಮಮಂದಿರ ಸೆಟ್ ಅನ್ನು ನಿರ್ಮಾಣ ಮಾಡಿಸಿದ್ದಾರೆ. ಈ ಸೆಟ್ ಜನರ ಕಣ್ಮನ ಸೆಳೆಯುತ್ತಿದೆ. ರಾಮಮಂದಿರ ಸೆಟ್ ಮುಂದೆ ನಿಂತು ಸಾರ್ವಜನಿಕರು ಸೆಲ್ಪಿ ತೆಗೆದುಕೊಳ್ಳುತ್ತಿದ್ದಾರೆ. ಅಲ್ಲದೇ ಪೋಷಕರು ಮಕ್ಕಳಿಗೆ ರಾಮ, ಸೀತೆ ಮತ್ತು ಆಂಜನೇಯನ ವೇಷ ಹಾಕಿಸಿ ಸೆಟ್ ಮುಂದೆ ನಿಲ್ಲಿಸಿ ಫೋಟೋ ತೆಗೆಸಿಕೊಳ್ಳುತ್ತಿದ್ದಾರೆ. ಅಲ್ಲದೇ ನಗರದ ಪ್ರಮುಖ ರಸ್ತೆಗಳಲ್ಲಿ ವಿದ್ಯುತ್ ದೀಪಾಲಂಕಾರ ಮಾಡಲಾಗಿದೆ. ರಾಮಲಲ್ಲಾ ಪ್ರಾಣ ಪ್ರತಿಷ್ಠೆ ವೀಕ್ಷಿಸಲು ಬೃಹತ್‌ ಎಲ್‌ಇಡಿ ವಾಲ್ ಅಳವಡಿಸಲಾಗಿದೆ.

ಸಿಲಿಕಾನ್ ಸಿಟಿಯಲ್ಲಿ ಅಯೋಧ್ಯೆ ರಾಮಮಂದಿರ!

ಅಯೋಧ್ಯೆಯಲ್ಲಿ ರಾಮಮಂದಿರ ಪ್ರಾಣ ಪ್ರತಿಷ್ಠಾಪನೆ ಹಿನ್ನೆಲೆ ಸಿಲಿಕಾನ್ ಸಿಟಿಯಲ್ಲಿ ಅಯೋಧ್ಯೆ ರಾಮಮಂದಿರ ನಿರ್ಮಾಣವಾಗಿದೆ. ಅಯೋಧ್ಯೆಯಲ್ಲಿ ನಿರ್ಮಾಣವಾಗಿರುವ ರಾಮಮಂದಿರ ಮಾದರಿಯಲ್ಲಿ ರಾಮಮಂದಿರದ ಪ್ರತಿಕೃತಿ ನಿರ್ಮಾಣ ಮಾಡಲಾಗಿದೆ. ಗಿರಿನಗರದ ವಾಸವಿ ಕನ್ನಿಕಾ ಪರಮೇಶ್ವರ ದೇವಾಲಯದಲ್ಲಿ ಅಯೋಧ್ಯೆ ಮಾದರಿ ದೇವಾಲಯದ ಪ್ರತಿಕೃತಿ ನಿರ್ಮಾಣ ಮಾಡಲಾಗಿದೆ 18 ಅಡಿ ಎತ್ತರದ ಅಯೋಧ್ಯೆ ರಾಮಮಂದಿರವನ್ನು ರಾಮಭಕ್ತರು ನಿರ್ಮಾಣ ಮಾಡಿದ್ದಾರೆ.

ಗದಗದ ಮಸೀದಿಯಲ್ಲಿ ಪೂಜೆ, ಹೋಮ!

ಗದಗ ಜಿಲ್ಲೆಯ ನರಗುಂದ ತಾಲೂಕಿನ ಹುಣಸಿಕಟ್ಟಿ ಗ್ರಾಮದ ಮಸೀದಿಯಲ್ಲಿ ಹೋಮ-ಹವನ ಮಾಡುವ ಮೂಲಕ ಭಾವೈಕ್ಯತೆ ಮೆರೆಯಲಾಗಿದೆ. ಗ್ರಾಮದ ಹಿಂದೂ ಮುಸ್ಲಿಂ ಮುಖಂಡರು ಸೇರಿ ಕಾರ್ಯಕ್ರಮ ಪೂರ್ಣಗೊಳಿಸಿದ್ದಾರೆ. ಭಾರತ ಮಾತೆ ಚಿತ್ರದ ಜೊತೆಗೆ ಕಳಸವಿಟ್ಟು ರುದ್ರಾಭಿಷೇಕ, ಪೂಜೆ ನೆರವೇರಿಸಲಾಯಿತು.

Categories
ರಾಷ್ಟ್ರೀಯ ವಾರ್ತೆ

ಜೈ ಶ್ರೀರಾಮ್…ಅಯೋಧ್ಯೆಗೆ ಬಂದ ರಾಮ!

ಜೈ ಶ್ರೀರಾಮ್…ಅಯೋಧ್ಯೆಗೆ ಬಂದ ರಾಮ!
– ರಾಮಮಂದಿರ ಪ್ರಾಣ ಪ್ರತಿಷ್ಠಾಪನೆ
– ದೇಶದ ಮೂಲೆ ಮೂಲೆಗಳಲ್ಲಿ ಸಂಭ್ರಮ
– ಎಲ್ಲ ದೇವಸ್ಥಾನಗಳಲ್ಲೂ ವಿಶೇಷ ಪೂಜೆ

NAMMUR EXPRESS NEWS
ದೇಶ ಸಂಭ್ರಮದಿಂದ ಕಾಯುತ್ತಿದ್ದ ಕ್ಷಣ ಕೊನೆಗೂ ಬಂದಿದೆ. ರಾಮ ಅಯೋಧ್ಯೆಗೆ ಪುನಃ ಮರಳಿದ್ದಾನೆ. ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆಯನ್ನು ದಿವ್ಯ ಘಳಿಗೆಯಲ್ಲಿ ನೆರವೇರಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿಯವರು ರೇಷ್ಮೆ ವಸ್ತ್ರದಲ್ಲಿ ಮುಖ್ಯವ್ಯಕ್ತಿಯಾಗಿ ಈ ಪೂಜೆಯ ವಿಧಿ ವಿಧಾನಗಳನ್ನು ನೆರವೇರಿಸಿದ್ದಾರೆ. ಗಣಪತಿಯ ಪೂಜೆ, ಪ್ರಾರ್ಥನೆಯನ್ನು ನೆರವೇರಿಸಿ ಗರ್ಭಗುಡಿಗೆ ಕಾಲಿಟ್ಟ ಮೋದಿಯವರೊಂದಿಗೆ ಮೋಹನ್ ಭಾಗವತ್ ಸಹ ಉಪಸ್ಥಿತರಿದ್ದರು. ಈ ಪೂಜಾ ಕೈಂಕರ್ಯಗಳನ್ನು ನೆರವೇರಿಸಿದ್ದು ಪೇಜಾವರ ಶ್ರೀಗಳು. ಇಡೀ ದೇಶದಲ್ಲಿ ಸಂಭ್ರಮದ ವಾತಾವರಣ ಏರ್ಪಟ್ಟಿದ್ದು ಶಾಂತಿ ಕಾಯ್ದುಕೊಳ್ಳುವಲ್ಲಿ, ಪದ್ಧತಿಯ ಪ್ರಕಾರ ಸಕಲವನ್ನೂ ನೆರವೇರಿಸುವಲ್ಲಿ ಅಯೋಧ್ಯೆ ಯಶಸ್ವಿಯಾಗಿದೆ.

ಇದೇ ಸುಸಂದರ್ಭದಲ್ಲಿ ದೇಶಾದ್ಯಂತ ಪ್ರತೀ ದೇವಾಲಯಗಳಲ್ಲೂ ಸಾರ್ವಜನಿಕರಿಂದ, ಸಂಘ ಸಂಸ್ಥೆಗಳಿಂದ, ದೇವಸ್ಥಾನ ಸಮಿತಿಗಳಿಂದ ಮಹಾ ಮಂಗಳಾರತಿ ಪೂಜೆ ನೆರವೇರಿದ್ದು ಇದೊಂದು‌ ಸಾರ್ವಜನಿಕ ಹಬ್ಬವಾಗಿದೆ. ‌ ಶ್ರೀರಾಮನು ಮಹಾವಿಷ್ಣುವಿನ ಅವತಾರವೇ ಆಗಿದ್ದು ಇದೀಗ ಗರ್ಭಗುಡಿಯಲ್ಲಿ ಮಹಾವಿಷ್ಣುವಿನಂತೆಯೇ ಕಂಗೊಳಿಸುತ್ತಿದ್ದಾರೆ. ಪ್ರಾಣ ಪ್ರತಿಷ್ಠಾಪನೆಯಾಗುತ್ತಿದ್ದಂತೆ ಹೊರಗಡೆ ಹೆಲಿಕಾಪ್ಟರ್ ನಿಂದ ಹೂಮಳೆ ಸುರಿಸಲಾಯ್ತು, ಸಹಸ್ರಾರು ಭಕ್ತರ, ಸಾಧುಸಂತರ ಜೈ ಶ್ರೀರಾಮ್ ಎನ್ನುವ ಘೋಷಣೆ ಅಯೋಧ್ಯೆಯ ತುಂಬ ಮೊಳಗಿತು. ಮಂತ್ರಘೋಷಗಳು, ದೀಪದ ಹಣತೆಗಳು, ಘಂಟಾ ನಿನಾದ, ಮಹಾಮಂಗಳಾರತಿಯ ಬೆಳಕಿನಿಂದ ಎಲ್ಲ ದೇವಸ್ಥಾನಗಳೂ ಪ್ರಕಾಶಮಾನವಾಗಿ ಹೊಳೆಯುತ್ತಿವೆ. ಪ್ರಸಾದ ವಿನಿಯೋಗ, ಅನ್ನ ಸಂತರ್ಪಣೆಗಳು ನಡೆಯಲಿದ್ದು ಶಾಂತಿಯಿಂದ ಈ ದೇಶವ್ಯಾಪಿ ಸಂಭ್ರಮ ಜರುಗುತ್ತಿದೆ. ಸೋಮವಾರ ರಾತ್ರಿವರೆಗೆ ಎಲ್ಲೆಡೆ ಕಾರ್ಯಕ್ರಮ ನಡೆಯುತ್ತಿದೆ.

Categories
ರಾಷ್ಟ್ರೀಯ ವಾರ್ತೆ

ಅಯೋಧ್ಯೆ ಶುಭ ಘಳಿಗೆ!

ಅಯೋಧ್ಯೆ ಶುಭ ಘಳಿಗೆ!
– ಸುಮಾರು 500 ವರ್ಷದ ಕನಸು ಇಂದು ನನಸು!
– ಜ.23 ರಿಂದ ಸಾರ್ವಜನಿಕರ ಪ್ರವೇಶಕ್ಕೆ ಅವಕಾಶ
– ರಾಮನ ವಿಗ್ರಹ ನಿರ್ಮಿಸಿದ ಹೆಮ್ಮೆ ಕರುನಾಡಿಗೆ
– 7000ಕ್ಕೂ ಹೆಚ್ಚು ಗಣ್ಯರ ಆಗಮನ

NAMMUR EXPRESS NEWS
ಅಯೋಧ್ಯೆಯ ಸಂಭ್ರಮ ಇಡೀ ದೇಶದಲ್ಲಿಯೇ ಮನೆ ಮಾಡಿದ್ದು ಅಯೋಧ್ಯೆಗೆ ಗಣ್ಯರ ಆಗಮನವಾಗಿದೆ. ತ್ರೇತಾಯುಗದ ರಾಮನ ಪಟ್ಟಾಭಿಷೇಕದ ವರ್ಣನೆಯನ್ನು ನೆನಪಿಸುವಂತೆ ಅಯೋಧ್ಯೆ ಕಂಗೊಳಿಸುತ್ತಿದೆ. ಮಧ್ಯಾಹ್ನ 12.30 ಕ್ಕೆ ಪ್ರಾಣ ಪ್ರತಿಷ್ಠಾಪನೆಯಾಗಲಿದ್ದು ಇದು ಕೇವಲ 82 ಸೆಕೆಂಡ್ ಘಳಿಗೆಯಲ್ಲಿ ನಡೆಯಲಿದೆ. ದೇಶದ ಸಾಧು ಸಂತರು, ಕಲಾವಿದರು, ಪುರೋಹಿತರು, ಸಿನಿಮಾ ಕಲಾವಿದರು, ಸಂಗೀತಗಾರರು, ವಾಸ್ತು ಶಿಲ್ಪಿಗಳು, ಸೇವಕರು, ಸಾವಿರಾರು ಭಕ್ತರು ಆಗಮಿಸಿದ್ದಾರೆ. ಇಡೀ ಅಯೋಧ್ಯೆಯಲ್ಲಿ ಹಬ್ಬದ ವಾತಾವರಣ ಕಂಡು ಬರುತ್ತಿದೆ. ಅಯೋಧ್ಯೆ ಸಹಸ್ರಾರು ಭಕ್ತರಿಂದ ಒಂದು ಕಡೆ ತುಂಬಿ ತುಳುಕುತ್ತಿದ್ದರೆ ಇನ್ನೊಂದು ಕಡೆ ದೀಪಾಲಂಕಾರ, ಹೂವಿನ ಅಲಂಕಾರಗಳಿಂದ ಕಂಗೊಳಿಸುತ್ತಿದೆ. ಸುಮಾರು ಇಪ್ಪತ್ತೈದು ಸಾವಿರ ಪೋಲಿಸ್ ಬಿಗಿ ಭದ್ರತೆಯನ್ನು ಒದಗಿಸಲಾಗಿದೆ.

Categories
ರಾಷ್ಟ್ರೀಯ ವಾರ್ತೆ

ರಾಮ ಮಂದಿರ ಉದ್ಘಾಟನೆ: ರಾಜ್ಯದಲ್ಲಿ ಹೈ ಅಲರ್ಟ್!

ರಾಮ ಮಂದಿರ ಉದ್ಘಾಟನೆ: ರಾಜ್ಯದಲ್ಲಿ ಹೈ ಅಲರ್ಟ್!
– ಎಲ್ಲೆಡೆ ಬಿಗಿ ಭದ್ರತೆ: ಶಾಂತಿಯುತ ಆಚರಣೆಗೆ ಸಜ್ಜು
– ಸಾರ್ವಜನಿಕರ ಹಿತದೃಷ್ಟಿಯಿಂದ ಮುನ್ನೆಚ್ಚರಿಕೆ

NAMMUR EXPRESS NEWS
ಅಯೋಧ್ಯ ರಾಮ ಮಂದಿರ ಉದ್ಘಾಟನೆ ಹಿನ್ನೆಲೆ ದೇವಸ್ಥಾನ ಹಾಗೂ ಮಂದಿರಗಳು ಸೇರಿದಂತೆ ವಿಶೇಷ ಪೂಜೆ, ಧಾರ್ಮಿಕ ಕಾರ್ಯಕ್ರಮ ನಡೆಯುವ ಸ್ಥಳಗಳನ್ನುಹಾಗೂ ಆಯಕಟ್ಟಿನ ಜಾಗಗಳಲ್ಲಿ ಹೈ ಅಲರ್ಟ್ ಮಾಡಲಾಗಿದೆ.ಆದ್ದರಿಂದ ಸಾರ್ವಜನಿಕರ ಹಿತದೃಷ್ಟಿಯಿಂದ ಮತ್ತು ಕಾನೂನು ಸುವ್ಯವಸ್ಥೆ ಕಾಪಾಡುವ ಸಲುವಾಗಿ ಹಲವಾರು ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ರಾಜ್ಯದ ಸೂಕ್ಷ್ಮ ಪ್ರದೇಶಗಳಲ್ಲಿ ಹಗಲು ರಾತ್ರಿ ಪಿಕೆಟಿಂಗ್ ನೇಮಿಸಿ ಅಧಿಕಾರಿಗಳನ್ನು ನಿಯೋಜಿಸಲಾಗಿದೆ. 24 ಗಂಟೆ ಹಗಲು ರಾತ್ರಿ ಗಸ್ತಿನಲ್ಲಿರುವ ವ್ಯವಸ್ಥೆ ಮಾಡಲಾಗಿದೆ.ಚೆಕ್ ಪಾಯಿಂಟ್‌ಗಳನ್ನು ನಿಯೋಜಿಸಲಾಗಿದೆ. ಭಾನುವಾರ ತಡರಾತ್ರಿ ಮತ್ತು ಮುಂಜಾನೆ ವಿಶೇಷ ಗಸ್ತುಗಳನ್ನು ಆಯೋಜಿಸಲಾಗಿದೆ.

ಎಲ್ಲಾ ಸಾರ್ವಜನಿಕ ಸ್ಥಳಗಳಲ್ಲಿ ವಿದ್ವಂಸಕ ತಪಾಸಣಾ ತಂಡದಿಂದ ತಪಾಸಣೆ ನಡೆಸಲಾಗುತ್ತಿದೆ. ರಾಜ್ಯದಲ್ಲಿ ಯಾವುದೇ ರೀತಿಯ ಮೆರವಣಿಗೆ ಅನುಮತಿಸಿಲ್ಲ.ಎಲ್ಲಾ ಪೊಲೀಸ್ ಠಾಣೆಗಳಲ್ಲಿ ಆಯಾ ಎಸಿಪಿಯವರ ಮಾರ್ಗದರ್ಶನದಲ್ಲಿ ಈಗಾಗಲೇ ಶಾಂತಿ ಸಭೆಗಳನ್ನು ಆಯೋಜಿಸಲಾಗಿದೆ. ಕೆಲವು ನಗರಗಳಲ್ಲಿ ಪ್ಲೆಕ್ಸ್, ಬ್ಯಾನರ್ ಬಂಟಿಂಗ್ಸ್ ಅಳವಡಿಕೆಗಳ ಮೇಲೆ ಸೂಕ್ತ ನಿಗಾ ಇರಿಸಲಾಗಿದೆ. ಮತ್ತು ಆಯೋಜಕರಿಗೆ ಅವುಗಳ ಭದ್ರತೆಯನ್ನು ಖಚಿತಪಡಿಸಲು ಸೂಚಿಸಲಾಗಿದೆ. ಜ.21ರ ಮಧ್ಯರಾತ್ರಿಯಿಂದ ಜನವರಿ 23ರ ಮುಂಜಾನೆವರೆಗೆ ಕೆಲವು ನಗರಗಳಲ್ಲಿ ಬಾರ್ ಹಾಗೂ ಮದ್ಯ ಮಾರಾಟ ಮಳಿಗೆಗಳನ್ನು ಮುಚ್ಚಿಸುವಂತೆ ಜಿಲ್ಲಾಧಿಕಾರಿಗಳಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಅನೇಕ ಕಡೆ ಹೆಚ್ಚುವರಿ ಪೊಲೀಸ್ ಸಿಬ್ಬಂದಿಯನ್ನು ಬಂದೋಬಸ್ತ್ ಕರ್ತವ್ಯಕ್ಕೆ ನಿಯೋಜಿಸಲಾಗಿದೆ. ರಾಮ ಮಂದಿರ ಉದ್ಘಾಟನೆ ಅಂಗವಾಗಿ ಕಾರ್ಯಕ್ರಮ ಶಾಂತಿಯುತವಾಗಿ ನಡೆಯಲು ಎಲ್ಲಾ ಆಡಳಿತಗಳು ಕ್ರಮ ಕೈಗೊಂಡಿವೆ.

Categories
ಮಾಹಿತಿ ರಾಷ್ಟ್ರೀಯ ವಾರ್ತೆ

ಆಭರಣ ಪ್ರಿಯರಿಗೆ ಗುಡ್ ನ್ಯೂಸ್..!

ಆಭರಣ ಪ್ರಿಯರಿಗೆ ಗುಡ್ ನ್ಯೂಸ್..!
– ಚಿನ್ನ, ಬೆಳ್ಳಿ ಬೆಲೆಯಲ್ಲಿ ಮತ್ತೆ ಭಾರೀ ಇಳಿಕೆ.!
– ಇಲ್ಲಿದೆ ಇವತ್ತಿನ ದರ ಪಟ್ಟಿ

NAMMUR EXPRESS NEWS
ನವದೆಹಲಿ : ಭಾರತದಲ್ಲಿ 10 ಗ್ರಾಮ್‌ನ 22 ಕ್ಯಾರಟ್ ಚಿನ್ನದ ಬೆಲೆ 57,400 ರೂ. 24 ಕ್ಯಾರಟ್‌ನ ಅಪರಂಜಿ ಚಿನ್ನದ ಬೆಲೆ 62,620 ರೂ. ಬೆಳ್ಳಿ ಬೆಲೆ ಒಂದು ಗ್ರಾಮ್‌ಗೆ 75.50 ರೂ. ಬೆಂಗಳೂರಿನಲ್ಲಿ 22 ಕ್ಯಾರೆಟ್‌ನ 10 ಗ್ರಾಮ್ ಚಿನ್ನದ ಬೆಲೆ 57,400 ರೂ, ಬೆಳ್ಳಿ ಬೆಲೆ 100 ಗ್ರಾಮ್‌ಗೆ 7,300 ರೂ ಇದೆ. ಚಿನ್ನ ಮತ್ತು ಬೆಳ್ಳಿ ದರ ಎಷ್ಟಿದೆ, ಡೀಟೇಲ್ಸ್‌ ನೋಡಿ.

ಭಾರತದಲ್ಲಿರುವ ಚಿನ್ನ ಮತ್ತು ಬೆಳ್ಳಿ ಬೆಲೆ:

22 ಕ್ಯಾರಟ್‌ನ 10 ಗ್ರಾಂ ಚಿನ್ನದ ಬೆಲೆ: 57,400 ರೂ
24 ಕ್ಯಾರಟ್‌ನ 10 ಗ್ರಾಂ ಚಿನ್ನದ ಬೆಲೆ: 62,620 ರೂ
ಬೆಳ್ಳಿ ಬೆಲೆ 10 ಗ್ರಾಂಗೆ: 755 ರೂ
ಬೆಂಗಳೂರಿನಲ್ಲಿ ಚಿನ್ನ ಬೆಳ್ಳಿ ಬೆಲೆ:
22 ಕ್ಯಾರಟ್‌ನ 10 ಗ್ರಾಂ ಚಿನ್ನದ ಬೆಲೆ: 57,400 ರೂ 24 ಕ್ಯಾರಟ್‌ನ 10 ಗ್ರಾಂ ಚಿನ್ನದ ಬೆಲೆ: 62,620 ರೂ
ಬೆಳ್ಳಿ ಬೆಲೆ 10 ಗ್ರಾಂಗೆ: 730 ರೂ. ಇದೆ.