Categories
ರಾಷ್ಟ್ರೀಯ ವಾರ್ತೆ

1200 ಚಾಕ್ ಪೀಸ್ ನಲ್ಲಿ ತಯಾರಾದ ರಾಮ ಮಂದಿರ!

ಅಯೋಧ್ಯೆ ಸಂಭ್ರಮ!
– 1200 ಚಾಕ್ ಪೀಸ್ ನಲ್ಲಿ ತಯಾರಾದ ರಾಮ ಮಂದಿರ!
– ಪೆನ್ಸಿಲ್ ತುದಿಯಲ್ಲಿ ಮೂಡಿ ಬಂದ ರಾಮಮಂದಿರ!
– ಪ್ರಾಣ ಪ್ರತಿಷ್ಠಾಪನೆಯಂದು ಸಾರ್ವತ್ರಿಕ ರಜೆ ಬೇಡ; ಖಾಸಗಿ ಶಾಲೆಗಳ ಒಕ್ಕೂಟ

NAMMUR EXPRESS NEWS
ಉತ್ತರಕನ್ನಡ: ಶ್ರೀರಾಮ ಪ್ರಾಣ ಪ್ರತಿಷ್ಠಾಪನೆಗೆ ಕ್ಷಣಗಣನೆ ಆರಂಭವಾಗಿದೆ. ದೇಶ ವಿದೇಶಗಳಿಂದ ಜನ ತಮಗಾದ ರೀತಿಯಲ್ಲಿ ಕಾಣಿಕೆಗಳನ್ನು ಕಳಿಸುತ್ತಿದ್ದಾರೆ. ತಮ್ಮ ಕಲೆಗಳ ಮೂಲಕ ಭಕ್ತಿ ವ್ಯಕ್ತ ಪಡಿಸುತ್ತಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ ತಾಲ್ಲೂಕಿನ ಗೇರುಸೊಪ್ಪದ ಬಸಾಕುಳಿಯ ಚಂದ್ರಕಲಾ ಮತ್ತು ಮಂಜುನಾಥ ನಾಯ್ಕ ದಂಪತಿಯ ಪುತ್ರನಾದ ಪ್ರದೀಪ್‌ ನಾಯ್ಕ ಎಂಬುವರು ಚಿಕ್ಕಂದಿನಿಂದಲೂ ವಿವಿಧ ಕಲೆಗಳ ಮೇಲೆ ಆಸಕ್ತಿ ಹೊಂದಿದ್ದು, ಚಿತ್ರಕಲೆ, ತಬಲಾ, ಸಂಗೀತ, ಚಾಕ್ ಪೀಸ್ ಆರ್ಟ್ ಹೀಗೆ ಹಲವು ರಂಗಗಳಲ್ಲಿ ಸಾಧನೆ ಮಾಡುತ್ತಾ ಬಂದಿದ್ದಾರೆ. ಇದೀಗ ಅಯೋಧ್ಯೆಯಲ್ಲಿ ಉದ್ಘಾಟನೆಗೆ ಸಿದ್ದವಾಗಿರುವ ಶ್ರೀ ರಾಮ ಮಂದಿರದ ಮಾದರಿಯನ್ನು ಸುಮಾರು 1200 ಚಾಕ್ ಪೀಸ್ ಗಳನ್ನು ಬಳಸಿ ತಯಾರಿಸಿದ್ದಾರೆ. 25 ದಿನಗಳ ಕಾಲ 250 ಕ್ಕೂ ಹೆಚ್ಚು ಗಂಟೆಯ ನಿರಂತರ ಪ್ರಯತ್ನದ ಫಲವಾಗಿ ಅದ್ಭುತವಾದ ಶ್ರೀ ರಾಮ ಮಂದಿರದ ಮಾದರಿ ಕಲಾಕೃತಿ ನಿರ್ಮಾಣವಾಗಿದೆ.

ಜನವರಿ 22 ರಂದು ನಡೆಯಲಿರುವ ಬಾಲರಾಮನ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಉದ್ಘಾಟನೆಯ ದಿನವೇ ಕಲಾವಿದ ಪ್ರದೀಪ್ ನಾಯ್ಕ ತಮ್ಮ ಕಲೆಯನ್ನು ಗೇರುಸೊಪ್ಪದ ಶ್ರೀ ಗುತ್ತಿಕನ್ನಿಕಾ ಪರಮೇಶ್ವರಿ ದೇವಸ್ಥಾನದಲ್ಲಿ ತಂದೆ-ತಾಯಿ, ಗುರುಹಿರಿಯರ ಸಮ್ಮುಖದಲ್ಲಿ ಅನಾವರಣಗೊಳಿಸಲಿದ್ದಾರೆ. 2021 ರ ಮೇ 22 ರಂದು 18 ಚಾಕ್ ಪೀಸ್ ನಲ್ಲಿ ರಾಷ್ಟ್ರಗೀತೆಯನ್ನು ಕೆತ್ತುವ ಮೂಲಕ ಇಂಡಿಯಾ ಮತ್ತು ಏಷ್ಯಾ ಬುಕ್ ಆಫ್ ರೆಕಾರ್ಡ್ ನಲ್ಲಿ ಪ್ರದೀಪ್ ಸಾಧನೆ ಮಾಡಿದ್ದರು.
ಬುದ್ಧ ಗಾಂಧೀಜಿ, ಐಫೆಲ್ ಟವರ್, ಸೂರ್ಯನಮಸ್ಕಾರದ ಆಕೃತಿ ಹೀಗೆ ಹತ್ತು ಹಲವು ಆಕೃತಿಗಳನ್ನು ರಚಿಸಿ ಎಲ್ಲಾರ ಮೆಚ್ಚುಗೆಗೆ ಪಾತ್ರವಾಗಿದ್ದರು. ಪ್ರಸ್ತುತ ಧಾರವಾಡದ ವಿದ್ಯಾಗಿರಿ ಜೆ.ಎಸ್.ಎಸ್ ವಿದ್ಯಾಸಂಸ್ಥೆಯಲ್ಲಿ ಸ್ನಾತಕೋತ್ತರ ಪದವಿ ಪಡೆಯುತ್ತಿದ್ದಾರೆ.

– ಪೆನ್ಸಿಲ್ ತುದಿಯಲ್ಲಿ ಮೂಡಿ ಬಂದ ರಾಮಮಂದಿರ!

ಭದ್ರಾವತಿ: ಗುರುಗಳ ಸಹಾಯವಿಲ್ಲದೆ ಸ್ವಪ್ರಯತ್ನದಿಂದ ಸತತ ಸಾಧನೆ ಮಾಡಿ ಯಶಸ್ಸುಗಳಿಸಬಹುದು ಎಂಬುದನ್ನು ಸಾಬೀತು ಪಡಿಸುವ ಮೂಲಕ ಗಮನ ಸೆಳೆದಿರುವ ಸಾಧಕ ಎಸ್.ವರುಣ್ ಕುಮಾರ್. ಪೆನ್ಸಿಲ್ ಲೆಡ್‌ನಲ್ಲಿ ಅಯೋಧ್ಯೆಯಲ್ಲಿ ಉದ್ಘಾಟನೆಗೊಳ್ಳುತ್ತಿರುವ ರಾಮಮಂದಿರವನ್ನು ಮೂಡಿಸಿ ರಾಮನಿಗೆ ವಿಶೇಷ ರೀತಿಯಲ್ಲಿ ತಮ್ಮ ಭಕ್ತಿ ಸಮರ್ಪಣೆ ಮಾಡಿದ್ದಾರೆ. ಈ ಹಿಂದೆ ಒಂದೇ ಒಂದು ಬೆಂಕಿ ಕಡ್ಡಿಯಲ್ಲಿ ಕೇವಲ ಒಂದೇ ದಿನದಲ್ಲಿ ಅತ್ಯಂತ ಸಣ್ಣ ಪ್ರಮಾಣದ ಲಂಡನ್ ಬ್ರಿಡ್ಜ್ ತಯಾರಿಸಿ ಇಂಡಿಯನ್ ಬುಕ್ ಆಫ್ ರೆಕಾರ್ಡ್ಸ್ ಹೆಸರು ಪಡೆದಿದ್ದಾರೆ.

ಹಳೇನಗರದ ಎನ್‌ಎಸ್‌ಟಿ ರಸ್ತೆಯ ನಿವಾಸಿ ಸಿದ್ದರಾಜು ಹಾಗೂ ಗಾಯಿತ್ರಿ ದಂಪತಿಗಳ ಪುತ್ರ, ಎಸ್.ವರುಣ್ ನ್ಯೂಟೌನ್ ಸರಕಾರಿ ಸರ್.ಎಂ. ವಿಶ್ವೇಶ್ವರಯ್ಯ ಕಲಾ ಮತ್ತು ವಾಣಿಜ್ಯ ಕಾಲೇಜಿನಲ್ಲಿ ಪದವಿ ಪಡೆದು ಬಳಿಕ ಖಾಸಗಿ ಹಣಕಾಸು ಸಂಸ್ಥೆಯಲ್ಲಿ ಕೆಲಸಕ್ಕೆ ಸೇರಿ ರಜಾ ದಿನಗಳಂದು ಕುಸುರಿ ಕಲೆಯನ್ನು ಮೈಗೂಡಿಸಿಕೊಂಡಿದ್ದಾರೆ.
ಆಸಕ್ತಿ ಮೂಡಿದ ಬಗ್ಗೆ ಒಂದು ಖಾಸಗಿ ವಾಹಿನಿಯಲ್ಲಿ ಪ್ರದರ್ಶನವಾಗುತ್ತಿದ್ದ ಕಾರ್ಯಕ್ರಮವೊಂದರಲ್ಲಿ ಒಬ್ಬರು ಕುಸುರಿ ಕಲೆಯನ್ನು ಪ್ರದರ್ಶಿಸಿದ್ದನ್ನು ಕಂಡ ವರುಣ್, ತಾನೇಕೆ ಕುಸುರಿ ಕೆಲಸದಲ್ಲಿ ಸಾಧನೆ ಮಾಡಬಾರದೆಂದು ಚಿಂತಿಸಿದರು.

ನಂತರ ಸತತ ಪ್ರಯತ್ನ ದಿಂದ 300ಕ್ಕೂ ಅಧಿಕ ಬಗೆಯ, ವೈವಿಧ್ಯತೆ ತೋರುವ ಕಲಾಕೃತಿಗಳನ್ನು ರಚಿಸಿ ಒಂದೇ ‘ ಬೆಂಕಿಕಡ್ಡಿಯಲ್ಲಿ ತಯಾರಿಸಿದ ಸ್ಥಾಲೆಸ್ಟ್ ಲಂಡನ್ ಬ್ರಿಡ್ಜ್ ನಿರ್ಮಿಸಿದ್ದಾರೆ. ಸೀಮೆಸುಣ್ಣ, ಅಕ್ಕಿಕಾಳು, ಗೋಬಿಕಡ್ಡಿ, ಬೆಂಕಿಕಡ್ಡಿ, ಶೇಂಗಾಬೀಜ ಹಾಗೂ ವಿವಾಹ ಆಮಂತ್ರಣಗಳ ಮೇಲೆ ಕುಸುರಿ ಕಲೆಯನ್ನು ಮೂಡಿಸಿದ್ದಾರೆ. ಶೇಂಗಾಬೀಜದಲ್ಲಿ ಕನ್ನಡ ವರ್ಣಮಾಲೆ, ಸೀಮೆ ಸುಣ್ಣದಿಂದ ಅಟಲ್ ಬಿಹಾರಿ ವಾಜಪೇಯಿ, ಅಬ್ದುಲ್ ಕಲಾಂ, ಚಿತ್ರನಟಿ ಶ್ರೀದೇವಿ ಅವರ ಚಿತ್ರವನ್ನು ಕೆತ್ತಿದ್ದಾರೆ. ಪೆನ್ಸಿಲ್ ಮದ್ದಿ ನಲ್ಲಿ ವರಮಹಾಲಕ್ಷ್ಮಿ ಹಾಗೂ ಆಂಗ್ಲ ಭಾಷೆಯ ಎಯಿಂದ ಝಡ್ ವರೆಗೆ ಅಕ್ಷರ ಮಾಲೆ, ಗಣಪತಿ ಹೀಗೆ ಹಲವು ಕಲಾಕೃತಿಗಳನ್ನು ರಚಿಸಿದ್ದಾರೆ.

– ಪ್ರಾಣ ಪ್ರತಿಷ್ಠಾಪನೆಯಂದು ಸಾರ್ವತ್ರಿಕ ರಜೆ ಬೇಡ; ಖಾಸಗಿ ಶಾಲೆಗಳ ಒಕ್ಕೂಟ

ಬೆಂಗಳೂರು: ಜನವರಿ 22ರಂದು ರಾಮ ಜನ್ಮಭೂಮಿ ಅಯೋಧ್ಯೆಯಲ್ಲಿ ನೂತನವಾಗಿ ನಿರ್ಮಿಸಲಾಗುತ್ತಿರುವ ರಾಮ ಮಂದಿರದಲ್ಲಿ ನಡೆಯುವ ಪ್ರಾಣ ಪ್ರತಿಷ್ಠೆ ಕಾರ್ಯಕ್ರಮದ ನೇರ ಪ್ರಸಾರವನ್ನು ನಡೆಸುವಂತೆ ಖಾಸಗಿ ಶಾಲೆಗಳ ಒಕ್ಕೂಟ (ಕ್ಯಾಮ್ಸ್)ನ ಪ್ರಧಾನ ಕಾರ್ಯದರ್ಶಿ ಡಿ.ಶಶಿ ಕುಮಾರ್ ಖಾಸಗಿ ಶಾಲೆಗಳಿಗೆ ಸಲಹೆ ನೀಡಿದ್ದಾರೆ.

ಒಕ್ಕೂಟದ ಎಲ್ಲ ಸದಸ್ಯರು ಧಾರ್ಮಿಕ ಮನೋಭಾವವನ್ನು ಮಕ್ಕಳಿಗೆ ತಿಳಿಸುವ ಹಿನ್ನೆಲೆಯಲ್ಲಿ ಆಯಾ ಶಾಲೆಯಲ್ಲಿ ತಮ್ಮಲ್ಲಿರುವ ಲಭ್ಯ ವ್ಯವಸ್ಥೆಗೆ ಅನುಗುಣವಾಗಿ ಒಂದೂವರೆ ಘಂಟೆ ಪ್ರಾಣ ಪ್ರತಿಷ್ಠೆ ಕಾರ್ಯಕ್ರಮವನ್ನು ನೇರ ಪ್ರಸಾರ ಮಾಡಬೇಕು. ರಜೆ ನೀಡುವುದು ಸರಿಯಲ್ಲ ಎಂಬುದು ನಮ್ಮ ಅಭಿಪ್ರಾಯ. ಒಂದು ವೇಳೆ ರಜೆ ನೀಡಿದರೆ ವಿದ್ಯಾರ್ಥಿಗಳು, ಆಟ ಅಥವಾ ಅನ್ಯ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡು ಪ್ರಾಣ ಪ್ರತಿಷ್ಠೆ ಕಾರ್ಯ ಕ್ರಮವನ್ನು ನೋಡದಿರಬಹುದು ಎಂದು ಅವರು ಹೇಳಿದ್ದಾರೆ.

Categories
ರಾಷ್ಟ್ರೀಯ ವಾರ್ತೆ

ಆದಾಯ ತೆರಿಗೆದಾರರಿಗೆ ಶುಭ ಸುದ್ದಿ ನೀಡಿದ ಕೇಂದ್ರ!

ಆದಾಯ ತೆರಿಗೆದಾರರಿಗೆ ಶುಭ ಸುದ್ದಿ ನೀಡಿದ ಕೇಂದ್ರ!
– 7 ಲಕ್ಷ ಆದಾಯಕ್ಕೆ ತೆರಿಗೆ..!
– 2023 ರ ಬಜೆಟ್‌ನಲ್ಲಿ ಘೋಷಣೆ

NAMMUR EXPRESS NEWS
ನವದೆಹಲಿ: ಬಜೆಟ್‌ನಲ್ಲಿ 7 ಲಕ್ಷ ರೂ. ವೈಯಕ್ತಿಕ ಆದಾಯಕ್ಕೆ ತೆರಿಗೆ ವಿನಾಯಿತಿಯನ್ನು ಘೋಷಿಸಿದ್ದ ಸರ್ಕಾರ ಈಗ ಆದಾಯ ತೆರಿಗೆ ಕಾಯ್ದೆಗೆ ತಿದ್ದುಪಡಿ ಮಾಡಿ ಈ ಪ್ರಸ್ತಾಪವನ್ನು ಅಧಿಕೃತವಾಗಿ ಜಾರಿ ಮಾಡಿದೆ. ಈ ಸಂಬಂಧ ಹಣಕಾಸು ಸಚಿವಾಲಯ ಎಕ್ಸ್‌ನಲ್ಲಿ ಪೋಸ್ಟ್ ಮಾಡಿ ಈ ವಿಷಯವನ್ನು ಅಧಿಕೃತವಾಗಿ ತಿಳಿಸಿದೆ. ಆದಾಯ ತೆರಿಗೆ ಕಾಯ್ದೆ ಸೆಕ್ಷನ್ 87ಕ್ಕೆ ತಿದ್ದುಪಡಿ ಮಾಡಿ ವಾರ್ಷಿಕ ಬಜೆಟ್‌ನಲ್ಲಿ ಪ್ರಕಟಿಸಿದ ಘೋಷಣೆಯನ್ನು ಜಾರಿ ಮಾಡಲಾಗಿದೆ ಎಂದು ತಿಳಿಸಿದೆ.

ಆದಾಯ 7 ಲಕ್ಷ ರೂಪಾಯಿಯ ತನಕ ಇದ್ದಲ್ಲಿ ಇನ್ನು ಮುಂದೆ ಆದಾಯ ತೆರಿಗೆ ಸಲ್ಲಿಸುವಾಗ ಕಟ್ಟಿರುವ ತೆರಿಗೆಯನ್ನು ರಿಬೇಟ್ ಅಥವಾ ವಾಪಸ್‌ ಪಡೆದುಕೊಳ್ಳುವ ಅವಕಾಶ ಲಭ್ಯವಿರುತ್ತದೆ. ಈ ಹಿಂದೆ 5 ಲಕ್ಷ ರೂ. ತನಕ ಆದಾಯ ಇದ್ದವರಿಗೆ ಈ ವಿನಾಯಿತಿ ನೀಡಲಾಗುತ್ತಿತ್ತು. 2023ರ ಬಜೆಟ್‌ನಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಈ ಅವಕಾಶವನ್ನು 7 ಲಕ್ಷ ರೂ. ಆದಾಯ ಇರುವವರಿಗೂ ವಿಸ್ತರಿಸಿದ್ದರು.

Categories
ರಾಷ್ಟ್ರೀಯ ವಾರ್ತೆ

ಹೃದಯ ರೋಗಿಗಳ ಜೀವಕ್ಕೆ ಹೊಸ ಭರವಸೆ!

ಹೃದಯ ರೋಗಿಗಳ ಜೀವಕ್ಕೆ ಹೊಸ ಭರವಸೆ!
– ಲಭ್ಯವಾಗಲಿದೆ ರಾಮ್ ಕಿಟ್!
– ವರದಾನವಾಗಲಿದೆ 7 ರೂ.ಗಳ ರಾಮ್ ಕಿಟ್
– ರಾಮ್ ಕಿಟ್ ಏನು? ಹೇಗೆ? ಇಲ್ಲಿದೆ ಮಾಹಿತಿ

NAMMUR EXPRESS NEWS
ನವದೆಹಲಿ : ಕಾಲ್ಪುರದ ಲಕ್ಷ್ಮಿಪತ್‌ ಸಿಂಘನಿಯ ಟೆಕ್ನೋಲಜಿ ಕಾರ್ಡಿಯಾಲಜಿ ಅಂಡ್ ಕಾರ್ಡಿಯಾಕ್ ಸರ್ಜರಿ ಹೃದಯ ರೋಗಿಗಳಿಗಾಗಿ ರಾಮ್ ಕಿಟ್ ಎಂಬ ತುರ್ತು ಪ್ಯಾಕ್ ಅನ್ನು ರೂಪಿಸಿದೆ. ಈ ಕಿಟ್ ಗೆ ವೈದ್ಯಕೀಯ ‘ವಿ ಟ್ರೇಟ್ ಹೀ ಕ್ಯೂರ್ಸ್‌’ ಹೆಸರನ್ನು ಇಡಲಾಗಿದೆ. ಇದು ರಾಮ ಮಂದಿರದ ಚಿತ್ರ, ಅಗತ್ಯ ಔಷಧಿಗಳು ಮತ್ತು ವೈದ್ಯಕೀಯ ಸಂಪರ್ಕ ಸಂಖ್ಯೆಗಳನ್ನು ಹೊಂದಿದೆ. ಹೃದ್ರೋಗಿಗಳಿಗಾಗಿ ಮಾಡಿದ ತುರ್ತು ಪರಿಸ್ಥಿತಿಗಾಗಿ ‘ರಾಮ್ ಕಿಟ್’ ಅನ್ನು ರಚಿಸಲಾಗಿದೆ. ಈ ಕಿಟ್ನಲ್ಲಿ ರಾಮನ ಚಿತ್ರದೊಂದಿಗೆ ‘ನಾವು ಚಿಕಿತ್ಸೆ ನೀಡುತ್ತೇವೆ, ಅವರು ಗುಣಮುಖರಾಗುತ್ತಾರೆ ಎಂದು ಬರೆಯಲಾಗಿದೆ. ಇದು ಅಗತ್ಯ ಔಷಧಿಗಳು ಮತ್ತು ಆಸ್ಪತ್ರೆಗಳ ಸಹಾಯವಾಣಿ ಸಂಖ್ಯೆಗಳನ್ನು ಸಹ ಒಳಗೊಂಡಿದೆ.

ರಾಮ್ ಕಿಟ್ ಮೂರು ಅಗತ್ಯ ಔಷಧಿಗಳನ್ನು ಒಳಗೊಂಡಿದೆ – ಇಕೋಸ್ಪಿನ್ (ರಕ್ತ ತೆಳುಗೊಳಿಸುವಿಕೆ), ರೋಸುವಾಸ್ಟಾಟಿನ್ (ಕೊಲೆಸ್ಟ್ರಾಲ್ ನಿಯಂತ್ರಿಸಲು ರೋಸುವಾಸ್ಟಾಟಿನ್) ಮತ್ತು ಸೋರ್ಬಿಟ್ರೇಟ್ (ಉತ್ತಮ ಹೃದಯದ ಕಾರ್ಯಕ್ಕಾಗಿ ಸೋರ್ಬಿಟ್ರೇಟ್) ಇದು ಹೃದ್ರೋಗದಿಂದ ಬಳಲುತ್ತಿರುವ ಯಾರಿಗಾದರೂ ತ್ವರಿತ ಪರಿಹಾರವನ್ನು ನೀಡಲು ಸಹಾಯ ಮಾಡುತ್ತದೆ. ಚಳಿಗಾಲದಲ್ಲಿ ಹೃದ್ರೋಗ ಮತ್ತು ಮೆದುಳಿನ ಪಾರ್ಶ್ವವಾಯು ಪ್ರಕರಣಗಳು ಹೆಚ್ಚಾಗುವುದರಿಂದ, ರಾಮ್ ಕಿಟ್ ಉಪಯುಕ್ತವಾಗಿದೆ. ಪ್ರತಿಯೊಬ್ಬರೂ ದೇವರನ್ನು ನಂಬುತ್ತಾರೆ ಎಂಬ ಕಾರಣಕ್ಕಾಗಿ ‘ರಾಮ್ ಕಿಟ್’ ಗೆ ಭಗವಾನ್ ರಾಮನ ಹೆಸರನ್ನು ಇಡಲಾಗಿದೆ. ಈ ಕಿಟ್ ರಕ್ತವನ್ನು ತೆಳುವಾಗಿಸಲು, ಹೃದಯದ ರಕ್ತನಾಳಗಳಲ್ಲಿನ ತಡೆಯನ್ನು ತೆರೆಯಲು ಮತ್ತು ಹೃದ್ರೋಗಿಗಳಿಗೆ ಪರಿಹಾರ ನೀಡಲು ಜೀವ ಉಳಿಸುವ ಔಷಧಿಗಳನ್ನು ಒಳಗೊಂಡಿದೆ ಮತ್ತು ಕೇವಲ 7 ರೂ.ಗೆ ಲಭ್ಯವಿರುವ ಈ ಕಿಟ್ ಬಡವರನ್ನು ಗಮನದಲ್ಲಿಟ್ಟುಕೊಂಡು ತಯಾರಿಸಲಾಗಿದೆ.

Categories
ರಾಷ್ಟ್ರೀಯ ವಾರ್ತೆ

24.8 ಕೋಟಿ ಜನ ಬಡತನದಿಂದ ಹೊರಕ್ಕೆ.!

24.8 ಕೋಟಿ ಜನ ಬಡತನದಿಂದ ಹೊರಕ್ಕೆ.!
– ನೀತಿ ಆಯೋಗದ ವರದಿ
– ಬಡತನದ ಪ್ರಮಾಣವನ್ನು ಶೇ.1ಕ್ಕೆ ಇಳಿಸುವುದು ಕೇಂದ್ರ ಸರ್ಕಾರದ ಗುರಿ

NAMMUR EXPRESS NEWS
ನವದೆಹಲಿ: ದೇಶದಲ್ಲಿ 2013-14ರಿಂದ 2022-23ರ ನಡುವಿನ ಅವಧಿಯಲ್ಲಿ 24.8 ಕೋಟಿ ಜನರು ಬಹು ಆಯಾಮಗಳ ಬಡತನದಿಂದ ಹೊರಬಂದಿದ್ದಾರೆ ಎಂದು ನೀತಿ ಆಯೋಗದ ವರದಿ ಹೇಳಿದೆ. ರಾಷ್ಟ್ರೀಯ ಬಹುಆಯಾಮಗಳ ಬಡತನ ಸೂಚ್ಯಂಕ (ಎಂಪಿಐ) ಆಧಾರಿತ ವರದಿ ಪ್ರಕಾರ ದೇಶದಲ್ಲಿ 2013-14ರಲ್ಲಿ ಶೇ 29.17ರಷ್ಟಿದ್ದ ಬಡತನ ಪ್ರಮಾಣವು 2022-23ರಲ್ಲಿ ಶೇ 11.28ರಷ್ಟು ಇಳಿಕೆ ಯಾಗಿದೆ. ಉತ್ತರ ಪ್ರದೇಶ, ಬಿಹಾರ, ಮಧ್ಯಪ್ರದೇಶ ಬಡವರ ಸಂಖ್ಯೆಯು ತೀವ್ರಗತಿಯಲ್ಲಿ ಕಡಿಮೆಯಾಗಿದೆ ಎಂದು ವಿವರಿಸಿದೆ. ಇದು ನಮ್ಮ ಬದ್ಧತೆಗೆ ಹಿಡಿದ ಕನ್ನಡಿಯಾಗಿದೆ.

ಪ್ರತಿಯೊಬ್ಬ ಭಾರತೀಯ ಪ್ರಜೆಯ ಭವಿಷ್ಯವನ್ನು ಉತ್ತಮಪಡಿಸಲು ಕೇಂದ್ರ ಸರ್ಕಾರದಿಂದ ಬದ್ಧವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಪ್ರತಿಕ್ರಿಯಿಸಿದ್ದಾರೆ. ಉತ್ತರಪ್ರದೇಶದಲ್ಲಿ ಅತಿಹೆಚ್ಚು ಅಂದರೆ 5.94 ಕೋಟಿ, ಬಿಹಾರದಲ್ಲಿ 3.77 ಕೋಟಿ ಮತ್ತು ಮಧ್ಯಪ್ರದೇಶದಲ್ಲಿ 2.30 ಕೋಟಿ ಜನರು ಬಡತನದಿಂದ ಹೊರಬಂದಿದ್ದಾರೆ ಎಂದು ತಿಳಿಸಿದೆ. ಬಹು ಆಯಾಮಗಳ ಬಡತನದ ಪ್ರಮಾಣವನ್ನು ಶೇ 1ಕ್ಕೆ ಇಳಿಸುವುದು ಕೇಂದ್ರ ಸರ್ಕಾರದ ಗುರಿಯಾಗಿದೆ. ಈ ನಿಟ್ಟಿನಲ್ಲಿ ಕ್ರಮವಹಿಸಲಾಗಿದೆ ಎಂದು ನೀತಿ ಆಯೋಗದ ಸಿಇಒ ಬಿ.ವಿ.ಆ‌ರ್. ಸುಬ್ರಹ್ಮಣ್ಯಂ ಹೇಳಿದ್ದಾರೆ. ದೇಶದಲ್ಲಿ ಈ ಅವಧಿಯಲ್ಲಿ ಕೃಷಿ ಕ್ಷೇತ್ರದ ಉತ್ತಮ ಪ್ರಗತಿ ಕಂಡಿದೆ ಎಂದು ನೀತಿ ಆಯೋಗದ ಸದಸ್ಯ ರಮೇಶ್‌ ಚಂದ್ ತಿಳಿಸಿದ್ದಾರೆ.

Categories
ರಾಷ್ಟ್ರೀಯ ವಾರ್ತೆ

ಅಯೋಧ್ಯೆಯಲ್ಲಿ ಬಿರುಸಿನ ತಯಾರಿ

ಅಯೋಧ್ಯೆಯಲ್ಲಿ ಬಿರುಸಿನ ತಯಾರಿ
– ಹಸುವಿನ ಸಗಣಿಯಿಂದ 21 ಸಾವಿರ ದೀಪಗಳು!
– ಅಯೋಧ್ಯೆಗೆ ರವಾನೆ
– ಪವಿತ್ರ ದೀಪಾವಳಿ ಆಚರಣೆಗೆ ಸಕಲ ಸಿದ್ಧತೆ

NAMMUR EXPRESS NEWS
ನವದೆಹಲಿ: ಜ. 22 ರಂದು ನಡೆಯಲಿರುವ ಅಯೋಧ್ಯೆಯ ರಾಮಮಂದಿರದಲ್ಲಿ ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆಯ ಸಮಾರಂಭ ನಡೆಯಲಿದ್ದು ಈ ಸಂಭ್ರಮಕ್ಕೆ ದೇಶವ್ಯಾಪಿ ಕಾಣಿಕೆಗಳು ಹರಿದು ಬರುತ್ತಿದೆ. ಹಾಗೆಯೇ ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ಈ ದಿನದಂದು ದೇಶವಾಸಿಗಳು ತಮ್ಮ ಮನೆಗಳಲ್ಲಿ ದೀಪಗಳನ್ನು ಬೆಳಗಿಸುವಂತೆ ಕರೆ ನೀಡಿದ್ದಾರೆ. ಇನ್ನು ಮುಜಾಫರ್‌ಪುರದ ಸಕ್ರಾ ಬ್ಲಾಕ್’ನ ಮಹಿಳೆಯರು ಹಸುವಿನ ಸಗಣಿ ದೀಪಗಳನ್ನು ಸಿದ್ಧಪಡಿಸಿ, ಅವುಗಳನ್ನು ಅಯೋಧ್ಯೆಗೆ ಕಳುಹಿಸಲು ಸಿದ್ಧತೆ ನಡೆಸಿದ್ದಾರೆ.

ಮುಜಾಫರ್‌ಪುರ ಜಿಲ್ಲೆಯ ಸಕ್ರಾ ಬ್ಲಾಕ್’ನ ವಿಶುನ್‌ಪುರ ಬಾಘನಗರಿ ಗ್ರಾಮದ ಮಹಿಳೆಯರು ದೀಪಗಳನ್ನು ತಯಾರಿಸಲು ಪ್ರಾರಂಭಿಸಿದ್ದಾರೆ. ವಿಶೇಷವೆಂದರೆ ಇಲ್ಲಿನ ಮಹಿಳೆಯರು ಹಸುವಿನ ಸಗಣಿಯಿಂದ ದೀಪಗಳನ್ನು ಸಿದ್ಧಪಡಿಸುತ್ತಿದ್ದಾರೆ. ಅಯೋಧ್ಯೆ ಹೊರತುಪಡಿಸಿ, ಬ್ಲಾಕ್ ವ್ಯಾಪ್ತಿಯ 27 ಪಂಚಾಯತ್‌’ಗಳಿಗೆ ತಲಾ ಐದು ದೀಪಗಳನ್ನು ಕಳುಹಿಸಲಾಗುವುದು ಎಂದು ಹೇಳಲಾಗುತ್ತಿದೆ. ಈ ದೀಪವನ್ನು ತಯಾರಿಸಲು ಶುದ್ಧ ಹಸುವಿನ ಸಗಣಿ ಬಳಸಲಾಗುತ್ತಿದೆ. ಅದು ಒಣಗಿದ ನಂತರ ಪ್ಯಾಕ್ ಮಾಡಿ ಅಯೋಧ್ಯೆಗೆ ಕಳುಹಿಸಲಾಗುವುದು ಎಂದು ಈ ಮಹಿಳೆಯರು ಹೇಳಿದ್ದಾರೆ.

ಅಯೋಧ್ಯೆ 21 ಸಾವಿರ ದೀಪಗಳು:

ಇಲ್ಲಿನ ಮುಖ್ಯಸ್ಥೆ ಬಬಿತಾ ಕುಮಾರಿ ಮಾತನಾಡಿ, “21 ಸಾವಿರ ದೀಪಗಳನ್ನು ತಯಾರಿಸಲಾಗುತ್ತಿದ್ದು, ಅದನ್ನು ರಾಮಮಂದಿರ ಅಯೋಧ್ಯೆಗೆ ಕಳುಹಿಸಲಾಗುವುದು. ಇದಲ್ಲದೇ ಬ್ಲಾಕ್ ನ ಎಲ್ಲ ಪಂಚಾಯಿತಿಗಳಿಗೆ ತಲಾ ಐದರಂತೆ ಕಳುಹಿಸಲಾಗುವುದು’ ಎಂದಿದ್ದಾರೆ.

Categories
ರಾಷ್ಟ್ರೀಯ ವಾರ್ತೆ

ಅಯೋಧ್ಯೆ ರಾಮಮಂದಿರದ ಪ್ರವೇಶ ದ್ವಾರ.!

ಅಯೋಧ್ಯೆ ರಾಮಮಂದಿರದ ಪ್ರವೇಶ ದ್ವಾರ.!
– ಒಳಾಂಗಣದ ಮೊದಲ ಫೋಟೋ ಬಿಡುಗಡೆ
– ಹತ್ತು ಕೋಟಿ ಕುಟುಂಬಗಳಿಗೆ ಆಮಂತ್ರಣ!

NAMMUR EXPRESS NEWS
ನವದೆಹಲಿ : 2024 ರ ಜನವರಿ 22 ರಂದು ನಡೆಯಲಿರುವ ಅಯೋಧ್ಯೆಯ ರಾಮ ಮಂದಿರದ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಪ್ರಧಾನಿ ಮೋದಿ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಇದೀಗ ಅಯೋಧ್ಯೆ ರಾಮ ಮಂದಿರ ಆವರಣದ ಮೊದಲ ಫೋಟೋ ಬಿಡುಗಡೆಯಾಗಿದೆ. ಶ್ರೀ ರಾಮ್ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಫೋಟೋ ಬಿಡುಗಡೆ ಮಾಡಿದೆ. ಅಯೋಧ್ಯೆ ರಾಮ ಮಂದಿರ ಉದ್ಘಾಟನೆಗೂ ಮುನ್ನ ಟ್ರಸ್ಟ್ ಜಟಾಯುವಿನ ಶಿಲ್ಪ, ದೇವಾಲಯದ ಪ್ರವೇಶದ್ವಾರ ಮತ್ತು ದೇವಾಲಯದ ಒಳಗಿನ ನೋಟಗಳ ಚಿತ್ರಗಳನ್ನು ಹಂಚಿಕೊಂಡಿದೆ.

ರಾಮ ಮಂದಿರದ ಉದ್ಘಾಟನೆಯ ಸಿದ್ಧತೆಗಳು ಅಂತಿಮ ಹಂತವನ್ನು ಪ್ರವೇಶಿಸಿವೆ ಮತ್ತು ವೈದಿಕ ವಿದ್ವಾಂಸರು ಜನವರಿ 22 ರಂದು ರಾಮ ಜನ್ಮಭೂಮಿ ದೇವಾಲಯದಲ್ಲಿ ಪ್ರತಿಷ್ಠಾಪನಾ ಸಮಾರಂಭವನ್ನು ನಡೆಸಲಿದ್ದಾರೆ. ಭವ್ಯ ಸಮಾರಂಭದಲ್ಲಿ ಭಾಗವಹಿಸಲು ದೇಶ ಮತ್ತು ವಿದೇಶಗಳ 10 ಕೋಟಿಗೂ ಹೆಚ್ಚು ಕುಟುಂಬಗಳಿಗೆ ಆಹ್ವಾನ ನೀಡಲಾಗಿದೆ. ವಿಶೇಷವೆಂದರೆ, ಉದ್ಘಾಟನಾ ಸಮಾರಂಭಕ್ಕೆ ಅತಿಥಿಗಳ ಪಟ್ಟಿಯನ್ನು ವಿಶ್ವ ಹಿಂದೂ ಪರಿಷತ್‌ (ವಿಎಸ್ಪಿ) ಮತ್ತು ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ನಾಯಕರು ಪ್ರಾಬಲ್ಯ ಹೊಂದಿರುವ ಶ್ರೀ ರಾಮ್ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ರಿಂದ ನಾಮನಿರ್ದೇಶನಗೊಂಡ ತಂಡವು ನಿರ್ಧರಿಸುತ್ತಿದೆ.

Categories
ರಾಷ್ಟ್ರೀಯ ವಾರ್ತೆ

ಶಬರಿಮಲೆ ಅಯ್ಯಪ್ಪನ ಸನ್ನಿಧಿಯಲ್ಲಿ ಮಕರ ಜ್ಯೋತಿ ದರ್ಶನ

ಸ್ವಾಮಿಯೇ ಶರಣಂ ಅಯ್ಯಪ್ಪ!
– ಶಬರಿಮಲೆ ಅಯ್ಯಪ್ಪನ ಸನ್ನಿಧಿಯಲ್ಲಿ ಮಕರ ಜ್ಯೋತಿ ದರ್ಶನ
– ಪುನೀತರಾದ ಭಕ್ತರು

NAMMUR EXPRESS NEWS
ಶಬರಿಮಲೆ : ಮಕರ ಸಂಕ್ರಾಂತಿ ಶುಭ ದಿನ ಶಬರಿಮಲೆ ಅಯ್ಯಪ್ಪ ಕ್ಷೇತ್ರದಲ್ಲಿ ಮಕರಜ್ಯೋತಿ ದರ್ಶನವಾಗಿದೆ. ಪೊನ್ನಂಬಲ ಬೆಟ್ಟದ ಮೇಲಿನಿಂದ ಮಕರ ಜ್ಯೋತಿ ಬೆಳಗಿದೆ. ಮೂರು ಬಾರಿ ಜ್ಯೋತಿ ದರ್ಶನವಾಗಿದ್ದು ಲಕ್ಷಾಂತರ ಭಕ್ತರು ದರ್ಶನ ಪಡೆದು ಪುನೀತರಾಗಿದ್ದಾರೆ. ಮಕರವಿಳಕ್ಕು ದರ್ಶನವಾಗುತ್ತಿದ್ದಂತೆ ಭಕ್ತರು ಸ್ವಾಮಿಯೇ ಶರಣಮಯಪ್ಪ ಷೋಷಣೆ ಮೊಳಗಿಸಿದ್ದಾರೆ. ಪದಂಳಂ ಅರಮನೆಯಿಂದ ಹೊರಟ ತಿರುವಾಭರಣ ಸರಿಸುಮಾರಿ 6 ಗಂಟೆ ಹೊತ್ತಿಗೆ ಸಾರಂಗುದಿ ತಲುಪಿದೆ. ಬಳಿಕ ದೇವಸ್ವಂ ಮಂಡಳಿ ಸದಸ್ಯರು ದೇಗುದಲ್ಲಿ ಪೂಜೆ ಸಲ್ಲಿಸಿದ ಬಳಿಕ ತಿರುವಾಭರಣ ಸ್ವೀಕರಿಸಿದ್ದಾರೆ. ಬಳಿ ಮರೆವಣಿಗೆ ಮೂಲಕ ಅಯ್ಯಪ್ಪ ಸನ್ನಿಧಾನಕ್ಕೆ ಬಂದ ತಿರುವಾಭರಣಕ್ಕೆ ಪೂಜೆ ಸಲ್ಲಿಲಾಯಿತು. ಪೂಜೆ ನೇರವೇರಿದ ಬೆನ್ನಲ್ಲೇ ಪೊನ್ನಂಬಲ ಬೆಟ್ಟದ ಮೇಲಿನಿಂದ ಮಕರಜ್ಯೋತಿಯ ದರ್ಶನವಾಗಿದೆ.

ಅಯ್ಯಪ್ಪ ಸನ್ನಿಧಾನಕ್ಕೆ ಆಗಮಿಸಿದ ಲಕ್ಷಾಂತರ ಭಕ್ತರು ಸುಸೂತ್ರವಾಗಿ ಮಕರಜ್ಯೋತಿ ದರ್ಶನಕ್ಕೆ ಶಬರಿಮಲೆಯ ಹಲವೆಡೆಗಳಲ್ಲಿ ವ್ಯವಸ್ಥೆ ಮಾಡಲಾಗಿತ್ತು. ಮಾಳಿಗಾಪ್ಪುರಂ ದೇವಸ್ಥಾನ ಆವರಣ, ಅನ್ನದಾನಮಂಟಪದ ಮುಂಭಾಗದಲ್ಲಿರುವ ಸಮತಟ್ಟು ಜಾಗ, ಮರಮಟ್ ಕಾಂಪ್ಲೆಕ್ ಟರೇಸ್, ವಾಟರ್‌ ಟ್ಯಾಂಕ್, ಪಂಡಿತಳವಳಂ ಸೇರಿದಂತೆ 10ಕ್ಕೂ ಹೆಚ್ಚು ಜಾಗದಲ್ಲಿ ಭಕ್ತರು ನಿಂತು ಮಕರಜ್ಯೋತಿ ದರ್ಶನ ಮಾಡಿದರು.

Categories
ರಾಷ್ಟ್ರೀಯ ವಾರ್ತೆ

ಎಲ್ಲಾ ಫೋನ್ ಬಳಕೆದಾರರಿಗೆ ಭಾರತ ಸರ್ಕಾರದಿಂದ ಎಚ್ಚರಿಕೆ

ಎಲ್ಲಾ ಫೋನ್ ಬಳಕೆದಾರರಿಗೆ ಭಾರತ ಸರ್ಕಾರದಿಂದ ಎಚ್ಚರಿಕೆ
– ಈ ನಂಬರ್ ಡಯಲ್ ಮಾಡಲೇಬೇಡಿ!
– ಕರೆ ಫಾರ್ವಡ್‌ ಆಗಲು ಬಿಡಬೇಡಿ!
– ಕರೆ ಫಾರ್ವರ್ಡ್ ತಡೆಯುವುದು ಹೇಗೆ? ಇಲ್ಲಿದೆ ಮಾಹಿತಿ 

NAMMUR EXPRESS NEWS
ನವದೆಹಲಿ: ಫೋನ್ ಗಳ ಬಳಕೆ ಮತ್ತು ಫೋನ್ ಗಳ ಸಂಖ್ಯೆ ಎರಡೂ ಇತ್ತೀಚಿನ ದಿನಗಳಲ್ಲಿ ಅಗತ್ಯವೂ ಅನಿವಾರ್ಯವೂ ಆಗಿರುವ ಈ ಸಂದರ್ಭದಲ್ಲಿ ಅತಿ ಹೆಚ್ಚು ತಾಪತ್ರಯಗಳೂ ಕೂಡ ಇದೇ ಫೋನ್ ಗಳಿಂದ ಸಂಭವಿಸುತ್ತಿವೆ. ಇತ್ತೀಚಿನ ದಿನಗಳಲ್ಲಿ ಆನ್‌ಲೈನ್ ವಂಚನೆ ಪ್ರಕರಣ ಹೆಚ್ಚಾಗುತ್ತಿದ್ದು, ಇದಕ್ಕೆ ಫೋನ್‌ಗಳೂ ಸಹ ನೇರ ಕಾರಣ ಆಗಿವೆ. ಇದನ್ನು ತಡೆಯಲು ಹಾಗೂ ಈ ಸಂಬಂಧ ಜನರಿಗೆ ಎಚ್ಚರಿಕೆ ಮೂಡಿಸುವ ಹಲವಾರು ಕೆಲಸಗಳು ಸರ್ಕಾರದಿಂದ ಅಥವಾ ಸಂಬಂಧಿಸಿದ ಅಧಿಕಾರಿಗಳಿಂದ ಆಗುತ್ತಿದೆ.

ಅದಾಗ್ಯೂ ಮೋಸದ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಇದೇ ಕಾರಣಕ್ಕೆ ಸರ್ಕಾರ ಈಗ ಈ ಎಚ್ಚರಿಕೆ ನೀಡಿದೆ. ಹಾಗಿದ್ರೆ, ಸರ್ಕಾರ ನೀಡಿದ ಎಚ್ಚರಿಕೆ ಏನು?, ನಿಮ್ಮ ಫೋನ್‌ನಲ್ಲಿ ಏನೆಲ್ಲಾ ಮಾಡಬೇಕು ಅನ್ನೋ ಅಗತ್ಯ ಮಾಹಿತಿ ಇಲ್ಲಿದೆ ನೋಡಿ. ಭಾರತ ಸರ್ಕಾರದಿಂದ ಎಚ್ಚರಿಕೆ: ಕರೆ ಫಾರ್ವಡ್ ಮಾಡುವ ಮೂಲಕ ಜನರನ್ನು ವಂಚನೆ ಮಾಡುವ ಜಾಲ ಈಗ ಎಲ್ಲಾ ಕಡೆ ವ್ಯಾಪಿಸಿದೆ ಎನ್ನಲಾಗಿದೆ. ಅಂದರೆ ಈ ಕರೆ ಸೌಲಭ್ಯ ಬಳಕೆ ಮಾಡಿಕೊಂಡು ಸೈಬರ್ ಅಪರಾಧಿಗಳು ಓಟಿಪಿ ವಿನಂತಿಗಳ ಮೂಲಕ ಬ್ಯಾಂಕ್ ಖಾತೆಗಳನ್ನು ಖಾಲಿ ಮಾಡುವ ಕೆಲಸ ಮಾಡಲು ಮುಂದಾಗಿದ್ದಾರೆ. ಜೊತೆಗೆ ವಿವಿಧ ಪ್ರಕರಣಗಳಲ್ಲಿ ಈ ಕೃತ್ಯವನ್ನೂ ಈಗಾಗಲೇ ಮಾಡಿದ್ದಾರೆ.

‘*401 #’ ಅನ್ನು ಡಯಲ್ ಮಾಡಲು ಜನರಿಗೆ ಕೇಳುತ್ತಿದ್ದು, ಇದು ಕರೆ ಫಾರ್ವಡ್ ಮಾಡುವ ಸಂಖ್ಯೆಯಾಗಿದೆ. ಹಲವಾರು ಜನರಿಗೆ ಇದರ ಬಗ್ಗೆ ಮಾಹಿತಿ ಇದ್ದು ಇನ್ನೂ ಹಲವಾರು ಜನರು ಇದರ ಬಗ್ಗೆ ತಿಳಿಯುವ ಅಗತ್ಯ ಇದೆ. ಇದರಿಂದ ಭಾರತದಲ್ಲಿನ ಲಕ್ಷಾಂತರ ಮೊಬೈಲ್‌ ಫೋನ್ ಬಳಕೆದಾರರಿಗೆ ದೂರಸಂಪರ್ಕ ಇಲಾಖೆ ಎಚ್ಚರಿಕೆ ನೀಡಿದೆ. ಅಪರಿಚಿತ ಸಂಖ್ಯೆಯೊಂದಿಗೆ ‘*401 #’ ಅನ್ನು ಡಯಲ್ ಮಾಡಲು ಸೂಚಿಸುವ ಕರೆಗಳ ಬಗ್ಗೆ ಜಾಗರೂಕರಾಗಿರಿ ಎಂದು ಸೂಚಿಸಲಾಗಿದೆ. ಅದರಲ್ಲೂ ನಿರ್ಧಿಷ್ಟವಾಗಿ ಏರ್‌ಟೆಲ್, ಜಿಯೋ, ವೊಡಾಫೋನ್-ಐಡಿಯಾ ಮತ್ತು ಬಿಎಸ್‌ಎನ್‌ಎಲ್‌ ಬಳಕೆದಾರರಿಗೆ ದೂರಸಂಪರ್ಕ ಇಲಾಖೆ ಎಚ್ಚರಿಕೆ ನೀಡಿದ್ದು, ಅಕ್ಟೋಬರ್‌ನಲ್ಲಿ ‘*401#’ ಕರೆ ಫಾರ್ವಡ್‌ ಮಾಡುವ ಹಗರಣದ ಸಂಖ್ಯೆ ಹೆಚ್ಚಾದ ಹಿನ್ನೆಲೆ ಈ ಸೂಚನೆ ಬಂದಿದೆ. ಇನ್ನು ವಂಚನೆ ಮಾಡಲು ಡೆಲಿವರಿ ಏಜೆಂಟ್‌ಗಳು, ಬ್ಯಾಂಕ್ ಪ್ರತಿನಿಧಿಗಳು ಅಥವಾ ಸೇವಾ ಪೂರೈಕೆದಾರರು ಎಂದು ಹೇಳಿಕೊಂಡು ಜನರನ್ನು ಸ್ಕ್ಯಾಮರ್‌ಗಳು ಸಂಪರ್ಕ ಮಾಡುತ್ತಾರೆ.

ಸೈಬ‌ರ್ ಕ್ರಿಮಿನಲ್‌ಗಳ ಕಾರ್ಯಾಚರಣೆಯ ವಿಧಾನದ ಬಗ್ಗೆ ತಿಳಿಸುವುದಾದರೆ ಹೆಚ್ಚಾಗಿ ಇವರು ಬ್ಯಾಂಕ್‌ ಏಜೆಂಟ್‌ಗಳು ಅಥವಾ ಟೆಲಿಕಾಂ ಬೆಂಬಲ ಪ್ರತಿನಿಧಿಗಳಂತೆ ವರ್ತಿಸುವ ಕೆಲಸ ಮಾಡುತ್ತಾರೆ. ನೆಟ್‌ವರ್ಕ್ ಸಮಸ್ಯೆ ಅಥವಾ ಬೇರೆ ಸಮಸ್ಯೆ ಇದೆ ಎಂದು ಹೇಳುತ್ತಾರೆ. ಆ ವೇಳೆ ಸಮಸ್ಯೆ ಬಗೆಹರಿಯಬೇಕು ಎಂದರೆ ‘*401#’ ಅನ್ನು ಡಯಲ್ ಮಾಡಲು ಹೇಳುತ್ತಾರೆ. ಅವರು ಏನು ಹೇಳಿದ್ದಾರೋ ಅದನ್ನು ನೀವು ಅನುಸರಿಸಿದ್ದೀರಿ ಎಂದಾದರೆ ನಿಮ್ಮ ಬ್ಯಾಂಕ್‌ ಖಾತೆಯಲ್ಲಿ ಇರುವ ಹಣ ಮಂಗಮಾಯ ಆದಂತೆ. ಈ ರೀತಿ ಮಾಡುವುದರಿಂದ ನಿಮ್ಮ ನಂಬರ್‌ಗೆ ಬರುವ ಕರೆಗಳೆಲ್ಲಾ ಸ್ಕ್ಯಾಮರ್ ನಂಬರ್‌ಗೆ ಹೋಗುತ್ತವೆ.

ಅಂದರೆ ಈ ಕ್ರಮದಿಂದ ವಂಚಕನಿಗೆ ಎಲ್ಲಾ ಒಳಬರುವ ಕರೆಗಳನ್ನು ಸ್ವೀಕರಿಸಲು ಅನುಮತಿಸಲಿದ್ದು, ಮುಂದೆ ಅವರು ಎಲ್ಲಾ ರೀತಿಯಲ್ಲೂ ವಂಚನೆ ಮಾಡಲು ಬಳಕೆ ಮಾಡುತ್ತಾರೆ ಎಂದು DoT ತನ್ನ ಹೇಳಿಕೆಯಲ್ಲಿ ಉಲ್ಲೇಖ ಮಾಡಿದೆ. ಅಂತಹ ಸೇವಾ ಕರೆಗಳನ್ನು ನಿರ್ಲಕ್ಷಿಸಿ ಎಂದು ಈ ಮೂಲಕ ಜನರಿಗೆ ತಿಳಿಸಿದೆ. ಕರೆ ಫಾರ್ವಡ್‌ ಮಾಡುವುದನ್ನು ತಡೆಯುವುದು ಹೇಗೆ?: ಇಂತಹ ವಂಚನೆಗಳಿಂದಾಗಿ ಬಳಕೆದಾರರು ತಿಳಿಯದೆ ಕರೆ ಫಾರ್ವಡ್ ಮಾಡುವಿಕೆಯನ್ನು ಸಕ್ರಿಯಗೊಳಿಸಿದ್ದೇ ಆದರೆ ಅದನ್ನು ತ್ವರಿತವಾಗಿ ನಿಷ್ಕ್ರಿಯಗೊಳಿಸುವುದು ಬಹಳ ಮುಖ್ಯವಾದ ಕೆಲಸವಾಗಿದೆ. ಇದಕ್ಕೆ ಬಳಕೆದಾರರು ಫೋನ್‌ ಸೆಟ್ಟಿಂಗ್‌ಗಳಿಗೆ ಹೋಗಬೇಕು. ನಂತರದಲ್ಲಿ ಅಲ್ಲಿ ಕರೆ ಸೆಟ್ಟಿಂಗ್‌ಗಳಿಗೆ ನ್ಯಾವಿಗೇಟ್ ಮಾಡಿ. ಬಳಿಕ ಕರೆ ಫಾರ್ವಡ್ ಮಾಡುವ ಆಯ್ಕೆಯನ್ನು ನಿಷ್ಕ್ರಿಯಗೊಳಿಸಿ ಅಥವಾ ಡೀಫಾಲ್ಟ್ ಸೆಟ್ಟಿಂಗ್‌ಗಳನ್ನು ರೀಸ್ಟೋರ್ ಮಾಡಿ.

Categories
ರಾಷ್ಟ್ರೀಯ ವಾರ್ತೆ

ಶಾಕ್‌ ನೀಡಿದ ವಾಟ್ಸಪ್‌ ಮೆಸೇಜಿಂಗ್ ಅಪ್ಲಿಕೇಶನ್

ಶಾಕ್‌ ನೀಡಿದ ವಾಟ್ಸಪ್‌ ಮೆಸೇಜಿಂಗ್ ಅಪ್ಲಿಕೇಶನ್
– ಬ್ಯಾಕಪ್ ಪಡೆಯಲು 130 ರೂ.ಗಳ ಶುಲ್ಕ!
– ಇನ್ಮುಂದೆ ಇಲ್ಲ ಗೂಗಲ್ ಸ್ಪೇಸ್ ಅನ್ ಲಿಮಿಟೆಡ್ ಫ್ರೀ!

NAMMUR EXPRESS NEWS
ನವದೆಹಲಿ: ಈಗಿನ ಕಾಲದಲ್ಲಿ ಬಹುತೇಕ ಎಲ್ಲಾ ಸ್ಮಾರ್ಟ್ ಪೋನ್ ಗಳು ವಾಟ್ಸಾಪ್ ಮೆಸೇಜಿಂಗ್ ಅಪ್ಲಿಕೇಶನ್ ಅನ್ನು ಬಳಸುತಿದ್ದು ಇದೊಂದು ಬಹು ಮುಖ್ಯವಾದ ಅಪ್ಲಿಕೇಶನ್ ಆಗಿ ಮಾರ್ಪಟ್ಟಿದೆ. ತನ್ನ ಕೋಟ್ಯಾಂತರ ಬಳಕೆದಾರರಿಗೆ ಕಾಲಕಾಲಕ್ಕೆ ಹೊಸ ನವೀಕರಣಗಳನ್ನು ತರುತ್ತಿರುವ ವಾಟ್ಸಪ್‌ ತನ್ನ ಬಳಕೆದಾರರಿಗೆ ಇದೀಗ ಶಾಕ್‌ ನೀಡಿದೆ. ಇನ್ಮುಂದೆ ವಾಟ್ಸಾಪ್ನಲ್ಲಿ ಚಾಟ್ ಬ್ಯಾಕಪ್ ಮತ್ತು ಮೀಡಿಯಾ ಫೈಲ್ ಬ್ಯಾಕಪ್ ಪಡೆಯಲು ವಾಟ್ಸಾಪ್ ಜೂನ್ ನಿಂದ ಉಚಿತ ಸೇವೆಯನ್ನು ನಿಲ್ಲಿಸಲಿದೆ. ಇಲ್ಲಿಯವರೆಗೆ ವಾಟ್ಸಾಪ್ ಚಾಟ್ ಗಳಿಗಾಗಿ ಗೂಗಲ್ ಡ್ರೈವ್ನಲ್ಲಿ ಪ್ರತ್ಯೇಕ ಉಚಿತ ಸ್ಥಳವಿತ್ತು. ಆದರೆ ಈಗ ಗೂಗಲ್ ಚಾಟ್ ಬ್ಯಾಕಪ್ ಮತ್ತು ಮಾಧ್ಯಮ ಫೈಲ್‌ಗಳ ಬ್ಯಾಕಪ್ ಗೆ ಉಚಿತ ಸ್ಥಳವನ್ನು ನೀಡಲು ನಿರಾಕರಿಸಿದೆ.

ಈಗ ಆಂಡ್ರಾಯ್ಡ್ ಫೋನ್ ಬಳಕೆದಾರರು ಕೇವಲ 15 ಜಿಬಿ ಕ್ಲೌಡ್ ಸ್ಟೋರೇಜ್ ನೊಂದಿಗೆ ಕೆಲಸ ಮಾಡಬೇಕಾಗುತ್ತದೆ. ಗೂಗಲ್ ಡ್ರೈವ್ ನ ಉಚಿತ ಸ್ಥಳ ಮುಗಿದ ನಂತರ,130 ರೂ.ಗಳ ಶುಲ್ಕವನ್ನು ಕೊಟ್ಟು ಬ್ಯಾಕಪ್ ತಯಾರಿಸಲು ನೀವು ಕ್ಲೌಡ್ ಸ್ಟೋರೇಜ್ ಖರೀದಿಸಬೇಕಾಗುತ್ತದೆ. ಗೂಗಲ್ ತನ್ನ ಡ್ರೈವ್ ನಿಯಮಗಳಲ್ಲಿ ಹಲವಾರು ಪ್ರಮುಖ ಬದಲಾವಣೆಗಳನ್ನು ಮಾಡಿದ್ದು, ಇದು ಜೂನ್ 2024 ರಿಂದ ಜಾರಿಗೆ ಬರಲಿದೆ. ಈ ಹೊಸ ನಿಯಮಗಳನ್ನು ಜಾರಿಗೆ ತರುವ ಮೊದಲು ಗೂಗಲ್ ಬಳಕೆದಾರರಿಗೆ ಅಧಿಸೂಚನೆಗಳನ್ನು ಕಳುಹಿಸುತ್ತದೆ.

Categories
ರಾಷ್ಟ್ರೀಯ ವಾರ್ತೆ

ಕೋವಿಡ್ ಗೆ ಬಂತು ಪವರ್ಫುಲ್ ಲಸಿಕೆ

ಕೋವಿಡ್ ಗೆ ಬಂತು ಪವರ್ಫುಲ್ ಲಸಿಕೆ
– ಭಾರತೀಯ ವಿಜ್ಞಾನಿಗಳಿಂದ ಲಸಿಕೆ ತಯಾರಿಕೆ!
– ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ನ ವಿಜ್ಞಾನಿಗಳಿಂದ ಉತ್ತಮ ಕೆಲಸ!

NAMMUR EXPRESS NEWS
ನವದೆಹಲಿ: ಕೋವಿಡ್ -19 ವಿರುದ್ಧ ಕ್ರಾಂತಿಕಾರಿ ಲಸಿಕೆಯನ್ನು ಕಂಡುಹಿಡಿಯುವಲ್ಲಿ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ನ ವಿಜ್ಞಾನಿಗಳು ಯಶಸ್ವಿಯಾಗಿದ್ದಾರೆ. ಈ ಲಸಿಕೆಗೆ ಆರ್‌ಎಸ್ 2 ಎಂದು ಹೆಸರಿಸಲಾಗಿದೆ. ಪ್ರಸ್ತುತ, ಆರ್ ಎಸ್2 ಲಸಿಕೆಯನ್ನು ಪ್ರಾಣಿಗಳ ಮೇಲೆ ಯಶಸ್ವಿಯಾಗಿ ಪರೀಕ್ಷಿಸಲಾಗಿದೆ. ಈ ಲಸಿಕೆ ಸ್ಪೈಕ್ ಪ್ರೋಟೀನ್ ಲಸಿಕೆಗಿಂತ ಉತ್ತಮ ರಕ್ಷಣೆಯನ್ನು ನೀಡಲಿದ್ದು, ಶಾಖ ಸಹಿಷ್ಣುತೆ ಹೊಂದಾಣಿಕೆಯ ಲಸಿಕೆ ಕೇವಲ ಸಾರ್ಸ್-ಕೋವ್-2 ಮಾತ್ರವಲ್ಲದೆ ಎಲ್ಲಾ ಕರೋನಾ ತಳಿಗಳ ವಿರುದ್ಧ ಪರಿಣಾಮಕಾರಿ ಎಂದು ತೋರಿಸಿದೆ. ಭವಿಷ್ಯದ ಕೋವಿಡ್ ರೂಪಾಂತರಗಳನ್ನು ಎದುರಿಸುವಲ್ಲಿಯೂ ಇದು ಪರಿಣಾಮಕಾರಿಯಾಗಿರುತ್ತದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ. ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ನ ವಿಜ್ಞಾನಿಗಳ ಈ ಭರವಸೆಯ ಲಸಿಕೆ ಕೋವಿಡ್ -19 ವಿರುದ್ಧದ ಹೋರಾಟದಲ್ಲಿ ಕ್ರಾಂತಿಕಾರಿ ಬದಲಾವಣೆಗಳನ್ನು ತರಬಹುದು ಎಂದು ಊಹೆ ಮಾಡಲಾಗಿದೆ.