Categories
ರಾಜ್ಯ ರಾಷ್ಟ್ರೀಯ ವಾರ್ತೆ

ಕಾವೇರಿ ನೀರು: ಸುಪ್ರೀಂನಲ್ಲಿ ರಾಜ್ಯಕ್ಕೆ ಬಿಗ್ ಶಾಕ್!

– ಕಾವೇರಿ ನೀರು: ಸುಪ್ರೀಂನಲ್ಲಿ ರಾಜ್ಯಕ್ಕೆ ಬಿಗ್ ಶಾಕ್!
– 15 ದಿನ ತಮಿಳುನಾಡಿಗೆ ನೀರು ಹರಿಸಲು ಆದೇಶ
– ರಾಜ್ಯದಲ್ಲಿ ಪ್ರತಿಭಟನೆ ಕಿಚ್ಚು: ಸಿನಿಮಾ ನಟರ ವಿರುದ್ಧ ಆಕ್ರೋಶ

NAMMUR EXPRESS NEWS
ನವದೆಹಲಿ: ಈಗಾಗಲೇ ರಾಜ್ಯದಲ್ಲಿ ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ ಆಕ್ರೋಶ ಭುಗಿಲೆದ್ದಿರುವ ಬೆನ್ನಲ್ಲೇ ಸುಪ್ರೀಂ ಕೋರ್ಟಿನಲ್ಲೂ ಸಹ ಕರ್ನಾಟಕ್ಕೆ ಭಾರೀ ಹಿನ್ನಡೆಯಾಗಿದೆ. ಕಾವೇರಿ ನೀರು ಹಂಚಿಕೆ ವಿಚಾರದಲ್ಲಿ ತಮಿಳುನಾಡು ಪರ ತೀರ್ಪು ನೀಡಿರುವ ಸುಪ್ರೀಂ ಕೋರ್ಟ್, ಮುಂದಿನ 15 ದಿನಗಳ ಕಾಲ 5 ಸಾವಿರ ಕ್ಯೂಸೆಕ್ಸ್ ನೀರು ಹರಿಸಬೇಕು ಎಂದು ಸೂಚನೆ ನೀಡಿದೆ. ಈ ಕುರಿತಂತೆ ನ್ಯಾಯಮೂರ್ತಿ ಬಿ.ಆರ್. ಗವಾಯಿ ನೇತೃತ್ವದ ತ್ರಿಸದಸ್ಯ ಪೀಠ ಆದೇಶ ನೀಡಿದ್ದು, ಈ ಮೂಲಕ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಮತ್ತು ಕಾವೇರಿ ನೀರು ನಿಯಂತ್ರಣ ಸಮಿತಿಯ ಆದೇಶವನ್ನು ಯಥಾವತ್ತಾಗಿ ಜಾರಿಗೆ ತರಬೇಕೆಂದು ಸೂಚಿಸಿದೆ. ತಮಿಳುನಾಡು ಪರ ವಕೀಲರಾದ ಮುಕುಲ್ ರೋಹಟಗಿ, ಸದ್ಯ ನೀರಿನ ಸಂಕಷ್ಟ ಇದೆ ಎನ್ನುವುದು ಎಲ್ಲರಿಗೂ ತಿಳಿದಿದೆ. ಈ ನಡುವೆ ಕರ್ನಾಟಕ ಸಂಕಷ್ಟ ಸೂತ್ರವನ್ನು ಪಾಲಿಸುತ್ತಿಲ್ಲ. ಹೀಗಾಗಿ, ನಮ್ಮ ರಾಜ್ಯಕ್ಕೆ ಕಡಿಮೆ ನೀರು ದೊರೆಯುತ್ತಿದೆ ಎಂದರು. ಕರ್ನಾಟಕದ ಪರವಾಗಿ ವಾದ ಮಂಡಿಸಿದ ಶ್ಯಾಮ್ ದಿವಾನ್, ಕಾವೇರಿ ನೀರು ನಿಯಂತ್ರಣ ಸಮಿತಿ ನೀಡಿರುವ ಆದೇಶವನ್ನು ನಾವು ಪಾಲಿಸಿದ್ದೇವೆ ಎಂದರು.

ರಾಜ್ಯದಲ್ಲಿ ಹೆಚ್ಚಿದ ಆಕ್ರೋಶ

ರಾಜ್ಯದಲ್ಲಿ ಕರವೇ ಸೇರಿದಂತೆ ಅನೇಕ ಸಂಘಟನೆಗಳು ಮಂಡ್ಯ, ಮೈಸೂರು ಸೇರಿ ಹಲವೆಡೆ ಪ್ರತಿಭಟನೆ ಶುರು ಮಾಡಿವೆ. ಕಾವೇರಿ ನೀರು ಹಂಚಿಕೆ ಬಗ್ಗೆ ಮಾತನಾಡದ ಸಿನಿಮಾ ನಟರ ವಿರುದ್ಧವೂ ಆಕ್ರೋಶ ವ್ಯಕ್ತವಾಗಿದೆ.

Categories
ರಾಷ್ಟ್ರೀಯ ವಾರ್ತೆ

ದೇಶಕ್ಕೆ ಹೊಸ ಸಂಸತ್ ಭವನ!

ದೇಶಕ್ಕೆ ಹೊಸ ಸಂಸತ್ ಭವನ!
– ಹಳೆಯ ಸಂಸತ್ ಕಟ್ಟಡಕ್ಕೆ ಹೆಸರು ಬದಲಾವಣೆ
– ಪ್ರಧಾನಿ ನರೇಂದ್ರ ಮೋದಿ ಅವರಿಂದ ಸಂವಿಧಾನ ಸದನ್ ಎಂದು ಘೋಷಿಣೆ
– ಮಹಿಳೆಯರಿಗೆ ಶೇ.33 ರಾಜಕೀಯ ಮೀಸಲಾತಿ ಪಾಸ್!

ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್ :
ನವ ದೆಹಲಿ: ಹೊಸ ಸಂಸತ್ ಭವನ ಉದ್ಘಾಟನೆಯಾಗಿದ್ದು, ಇದೇ ವೇಳೆ ಹಳೆಯ ಸಂಸತ್ ಕಟ್ಟಡದ ಹೊಸ ಹೆಸರನ್ನು ಪ್ರಧಾನಿ ನರೇಂದ್ರ ಮೋದಿ ‘ಸಂವಿಧಾನ ಸದನ’ ಎಂದು ಘೋಷಿಸಿದ್ದಾರೆ. ಗಣೇಶ ಹಬ್ಬದ ಸಂಭ್ರಮದಲ್ಲೇ ಹೊಸ ಕಟ್ಟಡಕ್ಕೆ ದೇಶದ ಹಳೆಯ ಸಂಸತ್ ಕಟ್ಟಡವನ್ನು “ಸಂವಿಧಾನ ಸದನ್” ಎಂದು ಕರೆಯಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹಳೆಯ ಸಂಸತ್ ಕಟ್ಟಡದಲ್ಲಿ ಮಾಡಿದ ತಮ್ಮ ಕೊನೆಯ ಭಾಷಣದಲ್ಲಿ ಘೋಷಿಸಿದರು. ಲೋಕಸಭೆಯಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಹಳೆಯ ಕಟ್ಟಡದ ಪ್ರತಿ ಇಟ್ಟಿಗೆಗೆ ನಮನ ಸಲ್ಲಿಸಿದರು ಮತ್ತು ಸಂಸದರು “ಹೊಸ ಭರವಸೆ ಮತ್ತು ಆತ್ಮವಿಶ್ವಾಸದಿಂದ” ಹೊಸ ಕಟ್ಟಡವನ್ನು ಪ್ರವೇಶಿಸುತ್ತಾರೆ ಎಂದು ಹೇಳಿದರು.

ಕಟ್ಟಡವನ್ನು ಕೆಡವಲಾಗುವುದಿಲ್ಲ ಮತ್ತು ಸಂಸತ್ತಿನ ಕಾರ್ಯಕ್ರಮಗಳಿಗೆ ಹೆಚ್ಚು ಕ್ರಿಯಾತ್ಮಕ ಸ್ಥಳಗಳನ್ನು ಒದಗಿಸಲು ಅದನ್ನು “ರಿಟ್ರೊಫಿಟ್” ಮಾಡಲಾಗುವುದು ಎಂದು ಸರ್ಕಾರಿ ಮೂಲಗಳು ಹೇಳುತ್ತಿವೆ. ಹಳೆಯ ಕಟ್ಟಡದ ಒಂದು ಭಾಗವನ್ನು ವಸ್ತುಸಂಗ್ರಹಾಲಯವಾಗಿ ಪರಿವರ್ತಿಸಬಹುದು ಎಂದು ಕೆಲವು ವರದಿಗಳು ಸೂಚಿಸಿವೆ. ಐತಿಹಾಸಿಕ ರಚನೆಯನ್ನು ಸಂರಕ್ಷಿಸಲಾಗುವುದು, ಏಕೆಂದರೆ ಇದು ದೇಶದ ಪುರಾತತ್ವ ಆಸ್ತಿಯಾಗಿದೆ” ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇನ್ನು ಹೊಸ ಸಂಸತ್ ಅಲ್ಲಿ ಮಹಿಳಾ ಮೀಸಲಾತಿ ಶೇ.33 ಬಿಲ್ ಪಾಸ್ ಮಾಡುವ ಮೂಲಕ ಐತಿಹಾಸಿಕ ದಾಖಲೆಯನ್ನು ಸರ್ಕಾರ ಮಾಡಿದೆ. ಇನ್ನು ಮುಂದೆ ಮಹಿಳೆಯರಿಗೆ ಶೇ.33ರಷ್ಟು ರಾಜಕೀಯ ಮೀಸಲಾತಿ ಸಿಗಲಿದೆ.

Categories
ರಾಜ್ಯ ರಾಷ್ಟ್ರೀಯ ವಾರ್ತೆ

ಕನ್ನಡಿಗರಿಗೆ ಮತ್ತೊಂದು ಹೆಮ್ಮೆ..!

ಕನ್ನಡಿಗರಿಗೆ ಮತ್ತೊಂದು ಹೆಮ್ಮೆ..!
– ಯುನೆಸ್ಕೋ ವಿಶ್ವ ಪರಂಪರೆ ತಾಣಗಳ ಪಟ್ಟಿಗೆ ‘ಹೊಯ್ಸಳ ದೇಗುಲ’ ಸಮೂಹ
– ಪ್ರತಿಷ್ಠಿತ ಮಾನ್ಯತೆ ಪಡೆದ ಭಾರತದ 42ನೇ ತಾಣ

NAMMUR EXPRESS NEWS
ನವದೆಹಲಿ: ಕನ್ನಡಿಗರಿಗೆ ಮತ್ತೊಂದು ಹೆಮ್ಮೆಯ ಸಂಗತಿ ದೊರಕಿದ್ದು, ಯುನೆಸ್ಕೋ ವಿಶ್ವ ಪರಂಪರೆಯ ಪಟ್ಟಿಯಲ್ಲಿ ಹೊಯ್ಸಳ ಸಾಮ್ರಾಜ್ಯದ ದೇವಾಲಯಗಳ ಸಮೂಹಗಳನ್ನ ಸೇರಿಸಲಾಗಿದೆ. ರಾಜ್ಯದ ಹೊಯ್ಸಳ ಸಾಮ್ರಾಜ್ಯದ ದೇವಾಲಯಗಳನ್ನ ಯುನೆಸ್ಕೋ ವಿಶ್ವ ಪರಂಪರೆಯ ತಾಣಕ್ಕೆ ಸೇರಿಸಲಾಗಿದ್ದು, ಈ ಪ್ರತಿಷ್ಠಿತ ಮಾನ್ಯತೆ ಪಡೆದ ಭಾರತದ 42ನೇ ತಾಣವಾಗಿದೆ. ಪಶ್ಚಿಮ ಬಂಗಾಳದ ಶಾಂತಿನಿಕೇತನವನ್ನ ಯುನೆಸ್ಕೋದ ಮತ್ತೊಂದು ಪಾರಂಪರಿಕ ತಾಣವಾಗಿ ಸೇರಿಸಿದ ಒಂದು ದಿನದ ನಂತರ ಈ ಪ್ರಕಟಣೆ ಬಂದಿದೆ. 10 ಮತ್ತು 14ನೇ ಶತಮಾನಗಳ ನಡುವೆ ಪ್ರವರ್ಧಮಾನಕ್ಕೆ ಬಂದ ಹೊಯ್ಸಳ ಸಾಮ್ರಾಜ್ಯವು ಭಾರತದ ದಕ್ಷಿಣ ಪ್ರದೇಶದಲ್ಲಿ ಕಲೆ, ವಾಸ್ತುಶಿಲ್ಪ ಮತ್ತು ಸಂಸ್ಕೃತಿಗೆ ನೀಡಿದ ಕೊಡುಗೆಗಳಿಗೆ ಹೆಸರುವಾಸಿಯಾಗಿದೆ.

ಕರ್ನಾಟಕವು ಈಗಾಗಲೇ ಹಂಪಿ ಅವಶೇಷಗಳು, ಪಟ್ಟದಕಲ್ಲು ಸ್ಮಾರಕಗಳು ಮತ್ತು ಪಶ್ಚಿಮ ಘಟ್ಟಗಳಂತಹ ಹಲವಾರು ಯುನೆಸ್ಕೋ ವಿಶ್ವ ಪರಂಪರೆಯ ತಾಣಗಳಿಗೆ ನೆಲೆಯಾಗಿದೆ. ಪಶ್ಚಿಮ ಬಂಗಾಳದಲ್ಲಿ ನೊಬೆಲ್ ಪ್ರಶಸ್ತಿ ವಿಜೇತ ರವೀಂದ್ರನಾಥ ಟ್ಯಾಗೋರ್ ಸ್ಥಾಪಿಸಿದ ಶಾಂತಿನಿಕೇತನದ ಸೇರ್ಪಡೆಯೂ ಈ ಪಟ್ಟಿಗೆ ಸೇರಿದೆ. ಹೊಯ್ಸಳ ಸಾಮ್ರಾಜ್ಯದ ದೇವಾಲಯಗಳು ಮತ್ತು ಶಾಂತಿನಿಕೇತನವನ್ನು ಯುನೆಸ್ಕೋ ವಿಶ್ವ ಪರಂಪರೆಯ ಪಟ್ಟಿಯಲ್ಲಿ ಸೇರಿಸಿರುವುದು ಶ್ರೀಮಂತ ಮತ್ತು ವೈವಿಧ್ಯಮಯ ಸಾಂಸ್ಕೃತಿಕ ಸಂಪತ್ತಿನ ಭಂಡಾರವಾಗಿ ಭಾರತದ ಪರಂಪರೆಯನ್ನ ನೆನಪಿಸುತ್ತದೆ.

Categories
ರಾಜ್ಯ ರಾಷ್ಟ್ರೀಯ ವಾರ್ತೆ

168 ಇಲಿ ಹಿಡಿಯಲು 69 ಲಕ್ಷ ಖರ್ಚು!

168 ಇಲಿ ಹಿಡಿಯಲು 69 ಲಕ್ಷ ಖರ್ಚು!
– ಭಾರತೀಯ ರೈಲ್ವೆ ಮಹಾ ವಂಚನೆ: ಏನಿದು ಇಲಿ ಹಗರಣ?
– ಸೊಳ್ಳೆಗೆ ಹಾಕಿದ್ದ ಹೊಗೆಗೆ ಉಸಿರುಗಟ್ಟಿ ನಾಲ್ವರು ಸಾವು

NAMMUR EXPRESS NEWS
ದೊಡ್ಡಬಳ್ಳಾಪುರ: ಸೊಳ್ಳೆ ಕಾಟಕ್ಕೆ ಹಾಕಿದ್ದ ಹೊಗೆಯಿಂದ ಉಸಿರುಗಟ್ಟಿ ಕೂಲಿ ಕಾರ್ಮಿಕರಾಗಿದ್ದ ಒಂದೇ ಕುಟುಂಬದ ನಾಲ್ವರು ಮೃತಪಟ್ಟ ಘಟನೆ ಬೆಂಗಳೂರು ಗ್ರಾಮಾಂತರದಲ್ಲಿ ಭಾನುವಾರ ನಡೆದಿದೆ. ದೊಡ್ಡಬಳ್ಳಾಪುರ ತಾಲೂಕಿನ ದೊಡ್ಡಬೆಳವಂಗಲ, ಗ್ರಾಮದ ಒಡೆಯರಹಳ್ಳಿ ರಸ್ತೆಯಲ್ಲಿರುವ ಮೋಹನ್ ಕುಮಾರ್ ಎಂಬುವರ ಕೋಳಿಫಾರಂ ಶೆಡ್‌ನಲ್ಲಿ ಈ ಘಟನೆ ಸಂಭವಿಸಿದೆ. ಮೃತರನ್ನು ಕಾಲೇ ಸರೇರಾ, ಲಕ್ಷ್ಮಿಸರೇರಾ , ಉಷಾ ಸರೇರಾ ಮತ್ತು ಪೊಲ್ ಸರೇರಾ ಎಂದು ಗುರುತಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇಲಿ ಹಿಡಿಯಲು 69 ಲಕ್ಷ ಹಣ ಖರ್ಚು ಮಾಡಿದ ರೈಲ್ವೆ ಇಲಾಖೆ

ಭಾರತೀಯ ರೈಲ್ವೆ ಇಲಾಖೆಯು ಇಲಿಗಳನ್ನು ಹಿಡಿಯಲು ಲಕ್ಷ ಲಕ್ಷ ಹಣ ಖರ್ಚು ಮಾಡಿದೆ ಎಂದು ಎಎಪಿ ಸಂಸದ ಸಂಜಯ್‌ ಸಿಂಗ್‌ ಅವರು ಆರೋಪಿಸಿದ್ದಾರೆ. ಈ ಕುರಿತು ಅವರ ಹೇಳಿಕೆ ಈಗ ವೈರಲ್ ಆಗಿದೆ. ಉತ್ತರ ರೈಲ್ವೆಯ ಲಕ್ನೋ ವಿಭಾಗವು 2020- 22ರ ಅವಧಿಯಲ್ಲಿ 168 ಇಲಿಗಳನ್ನು ಹಿಡಿಯಲು ಬರೋಬ್ಬರಿ 69.5 ಲಕ್ಷ ರೂಪಾಯಿ ಖರ್ಚು ಮಾಡಿರುವುದಾಗಿ ಅವರು ಟ್ವಿಟ್ ನಲ್ಲಿ ತಿಳಿಸಿದ್ದಾರೆ. ಆರ್‌ಟಿಐ ಕಾರ್ಯಕರ್ತ ಚಂದ್ರಶೇಖರ್‌ ಗೌರ್‌ ಮಾಹಿತಿ ಕೋರಿ ಅರ್ಜಿ ಸಲ್ಲಿಸಿದ್ದನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿರುವ ಸಂಜಯ್‌ ಸಿಂಗ್‌, ಜಾರಿ ನಿರ್ದೇಶನಾಲಯ ಹಾಗೂ ಕೇಂದ್ರೀಯ ತನಿಖಾ ದಳ ಎಲ್ಲಿವೆ ಎಂದು ಪ್ರಶ್ನಿಸಿದ್ದಾರೆ. ಕೇವಲ ಇಲಿಗಳನ್ನು ಹಿಡಿಯಲು ರೈಲ್ವೆ ಇಲಾಖೆಯು ಇಷ್ಟೊಂದು ಹಣ ಪೋಲು ಮಾಡಿದೆಯೇ ಎಂದು ನೆಟ್ಟಿಗರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.

Categories
ರಾಷ್ಟ್ರೀಯ ವಾರ್ತೆ

ಪ್ರಧಾನಿ ನರೇಂದ್ರ ಮೋದಿ ಜನ್ಮದಿನದ ಸಂಭ್ರಮ!

ಪ್ರಧಾನಿ ನರೇಂದ್ರ ಮೋದಿ ಜನ್ಮದಿನದ ಸಂಭ್ರಮ!
– ಹಳ್ಳಿ ಹಳ್ಳಿಯಲ್ಲೂ ಆಚರಣೆ, ರಕ್ತದಾನ, ಸಮಾಜ ಸೇವೆ
– ಬಿಜೆಪಿಯಿಂದ 16 ದಿನಗಳ ಬೃಹತ್ ಕಾರ್ಯಕ್ರಮ

NAMMUR EXPRESS NEWS
ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ 73ನೇ ವಸಂತಕ್ಕೆ ಕಾಲಿಟ್ಟಿದ್ದು, ಎಲ್ಲೆಡೆ ಪ್ರಧಾನಿ ನರೇಂದ್ರ ಮೋದಿಯವರ ಹುಟ್ಟುಹಬ್ಬವನ್ನು ಬಿಜೆಪಿ ಕಾರ್ಯಕರ್ತರು, ಮುಖಂಡರು, ಜನತೆ ಸಂಭ್ರಮದಿಂದ ಆಚರಣೆ ಮಾಡುತ್ತಿದ್ದಾರೆ.
ವಿಶ್ವದಲ್ಲೇ ಭಾರತವನ್ನು ಮುಂಚೂಣಿಯಲ್ಲಿರಿಸಿದ ಗರಿಮೆ ಮೋದಿ ಅವರಿಗೆ ಸಲ್ಲುತ್ತದೆ. ಇದೀಗ ಎಲ್ಲೆಡೆ ಮೋದಿ ಅವರಿಗೆ ಶುಭಾಶಯಗಳ ಸುರಿಮಳೆ ಹರಿದು ಬರುತ್ತಿದೆ.

ಬಿಜೆಪಿಯಿಂದ ಬೃಹತ್ ಕಾರ್ಯಕ್ರಮ:

ಬಿಜೆಪಿ ಪಕ್ಷ ಸೆಪ್ಟೆಂಬರ್ 17ರಿಂದ ಅಕ್ಟೋಬರ್ 2 ರವರೆಗೆ 16 ದಿನಗಳ ಕಾರ್ಯಕ್ರಮವನ್ನು ನಡೆಸಲಿದೆ. ಪ್ರಧಾನಿಯವರ ಹುಟ್ಟುಹಬ್ಬದಂದು ಬಿಜೆಪಿ ದೇಶಾದ್ಯಂತ ‘ಸೇವಾ ಹಿ ಸಂಘಟನೆ’ ಕಾರ್ಯಕ್ರಮವನ್ನು ಆಯೋಜಿಸಲಿದೆ. 16 ದಿನಗಳ ಈ ಕಾರ್ಯಕ್ರಮವು ಸೆಪ್ಟೆಂಬರ್ 17 ರಂದು ಪ್ರಾರಂಭವಾಗಲಿದ್ದು, ಮಹಾತ್ಮ ಗಾಂಧಿ ಜಯಂತಿಯ ದಿನವಾದ ಅಕ್ಟೋಬರ್ 2 ರಂದು ಮುಕ್ತಾಯಗೊಳ್ಳಲಿದೆ.

ಕಳೆದ ವರ್ಷ ಹಲವು ಕಾರ್ಯಕ್ರಮಗಳಲ್ಲಿ ಪ್ರಧಾನಿ ಭಾಗಿ

ಕಳೆದ ವರ್ಷ ಪ್ರಧಾನಿ ಮೋದಿ ತಮ್ಮ ಜನ್ಮದಿನದಂದು ಹಲವು ಕಾರ್ಯಕ್ರಮಗಳನ್ನು ಉದ್ದೇಶಿಸಿ ಮಾತನಾಡಿದ್ದರು. ತಮ್ಮ 72ನೇ ಹುಟ್ಟುಹಬ್ಬದ ಸಂದರ್ಭದಲ್ಲಿ, ಪ್ರಧಾನಿ ಮೋದಿ ಅವರು ನಮೀಬಿಯಾದಿಂದ ತಂದ ಚಿರತೆಗಳನ್ನು ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ಬಿಡುಗಡೆ ಮಾಡಿದ್ದರು.

Categories
ರಾಷ್ಟ್ರೀಯ ವಾರ್ತೆ

ಗಣೇಶ ಹಬ್ಬಕ್ಕೆ ಸಂಭ್ರಮದ ತಯಾರಿ!

ಗಣೇಶ ಹಬ್ಬಕ್ಕೆ ಸಂಭ್ರಮದ ತಯಾರಿ!
– ಮಾರುಕಟ್ಟೆಯಲ್ಲಿ ಖರೀದಿ ಭರಾಟೆ ಜೋರು
– ಎಲ್ಲೆಡೆ ಗಣೇಶ ಕೂರಿಸಲು ಸಿದ್ಧತೆ

NAMMUR EXPRESS NEWS
ದೇಶಾದ್ಯಂತ ಗೌರಿ-ಗಣೇಶ ಹಬ್ಬದ ಸಂಭ್ರಮ ಕಳೆಕಟ್ಟಿದ್ದು, ಮಾರುಕಟ್ಟೆಗಳಲ್ಲಿ ಗಣೇಶ ಮೂರ್ತಿ, ಹೂವು, ಹಣ್ಣುಗಳ ಖರೀದಿ ಭರಾಟೆ ಜೋರಾಗಿದೆ. ಶನಿವಾರ, ಭಾನುವಾರ ಎಲ್ಲೆಡೆ ಖರೀದಿ ಭರಾಟೆ ಜೋರಾಗಿದೆ.  ಹೂವು, ಹಣ್ಣು, ತರಕಾರಿ, ಹೊಸ ಬಟ್ಟೆಗಳ ಖರೀದಿಯೂ ಜೋರಾಗಿತ್ತು. ಜನ ಸ್ವಂತ ವಾಹನಗಳಲ್ಲಿ ಮಾರುಕಟ್ಟೆಗಳಿಗೆ ಲಗ್ಗೆ ಇಟ್ಟಿದ್ದರಿಂದ ಸಂಚಾರ ದಟ್ಟಣೆ ಉಂಟಾಗಿ, ಸವಾರರು ಪ್ರಯಾಸ ಪಡಬೇಕಾಯಿತು. ಹೂವು, ಹಣ್ಣಿನ ಬೆಲೆ ಗಗನಕ್ಕೇರಿದೆ. ಮಾರುಕಟ್ಟೆಯಲ್ಲಿ ಬೆಲೆ ಕಡಿಮೆ ಇದ್ದರೂ ಚಿಲ್ಲರೆ ವ್ಯಾಪಾರಿಗಳು ದುಪ್ಪಟ್ಟು ಬೆಲೆಗೆ ಮಾರಾಟ ಮಾಡುತ್ತಿದ್ದಾರೆ. ಇದರಿಂದಾಗಿ ಹಬ್ಬಗಳು ದುಬಾರಿ ಎನ್ನುವ ಭಾವನೆ ಮೂಡುತ್ತಿದೆ.

ಗೌರಿ ಹಬ್ಬದಂದು ಮುತ್ತೈದೆಯರಿಗೆ ಬಾಗಿನ ಅರ್ಪಿಸುವುದು ವಾಡಿಕೆ. ಬಿಡಿ ಯಾಗಿ ವಸ್ತುಗಳನ್ನು ತಂದು ಸಿದ್ಧಪಡಿಸುವಷ್ಟು ಸಮಯ ಇಲ್ಲದವರಿಗೆಂದೇ ಸಿದ್ಧವಾದ ಬಾಗಿನಗಳು ಮಾರುಕಟ್ಟೆಯಲ್ಲಿ ಖರೀದಿಸುತ್ತಿದ್ದಾರೆ. ದೇಗುಲದಲ್ಲಿ ವಿಶೇಷ ಪೂಜೆಗೆ ಸಿದ್ಧತೆ ನಡೆದಿದೆ. ಗಣೇಶ ಮೂರ್ತಿಗಳಿಗೆ ಭಾರೀ ಡಿಮ್ಯಾಂಡ್ ಬಂದಿದೆ. ಹಳ್ಳಿ ಹಳ್ಳಿಯಲ್ಲೂ ಗಣೇಶ ಕೂರಿಸಲು ಯುವಕ ಸಂಘ, ಸಂಘ ಸಂಸ್ಥೆಗಳು ಸಿದ್ಧತೆ ನಡೆಸುತ್ತಿವೆ.

Categories
ರಾಷ್ಟ್ರೀಯ ವಾರ್ತೆ

ಜನನ ಪ್ರಮಾಣ ಪತ್ರ ಹೊಸ ಕಾಯಿದೆ ಜಾರಿ

ಜನನ ಪ್ರಮಾಣ ಪತ್ರ ಹೊಸ ಕಾಯಿದೆ ಜಾರಿ
– ಒಂದೇ ದಾಖಲೆಯಾಗಿ ಬಳಸಲು ಅನುಮತಿ
– ಏನಿದು ಹೊಸ ನಿಯಮ? ಏನೆಲ್ಲಾ ದಾಖಲೆ ಬೇಕು?

NAMMUR EXPRESS NEWS
ನವ ದೆಹಲಿ: ಜನನ ಮತ್ತು ಮರಣಗಳ ನೋಂದಣಿ (ತಿದ್ದುಪಡಿ) ಕಾಯಿದೆ, 2023 ಅಕ್ಟೋಬರ್ 1ರಿಂದ ದೇಶಾದ್ಯಂತ ಜಾರಿಗೆ ಬರಲಿದೆ. ಜನನ ಮತ್ತು ಮರಣ ನೋಂದಣಿ (ತಿದ್ದುಪಡಿ) ಕಾಯಿದೆ, 2023ರ ಪ್ರಕಾರ ಶಿಕ್ಷಣ ಸಂಸ್ಥೆಗೆ ಪ್ರವೇಶ, ಚಾಲನಾ ಪರವಾನಗಿ ನೀಡಿಕೆ, ಮತದಾರರ ಪಟ್ಟಿ, ಆಧಾರ್ ಸಂಖ್ಯೆ, ಮದುವೆ ನೋಂದಣಿ, ಸರ್ಕಾರಿ ಕೆಲಸ ಅಥವಾ ನೇಮಕಾತಿಗಾಗಿ ಜನನ ಪ್ರಮಾಣಪತ್ರವನ್ನು ಒಂದೇ ದಾಖಲೆಯಾಗಿ ಬಳಸಲು ಅನುಮತಿಸುತ್ತದೆ. ಗೃಹ ಸಚಿವಾಲಯದ ಅಧೀನದಲ್ಲಿರುವ ರಿಜಿಸ್ಟ್ರಾರ್ ಜನರಲ್ ಕಚೇರಿ ತನ್ನ ಹೇಳಿಕೆಯಲ್ಲಿ, “ಜನನ ಮತ್ತು ಮರಣಗಳ ನೋಂದಣಿ (ತಿದ್ದುಪಡಿ) ಕಾಯಿದೆ, 2023 ರ ಸೆಕ್ಷನ್1 ರ ಉಪ-ವಿಭಾಗ (2) ರ ಮೂಲಕ ನೀಡಲಾದ ಅಧಿಕಾರಗಳನ್ನು ಪರಿಗಣಿಸಿ (2023 ರ 20), ಕೇಂದ್ರ ಸರ್ಕಾರವು ಈ ಮೂಲಕ 2023 ರ ಅಕ್ಟೋಬರ್ 1 ನೇ ದಿನವನ್ನು ಸೂಚಿಸಿದ ಕಾಯಿದೆಯ ನಿಬಂಧನೆಗಳು ಜಾರಿಗೆ ಬರುವ ದಿನಾಂಕವಾಗಿ ನೇಮಿಸುತ್ತದೆ” ಎಂದು ತಿಳಿಸಿದೆ.

ಜನನ ಮತ್ತು ಮರಣಗಳ ನೋಂದಣಿ (ತಿದ್ದುಪಡಿ) ಮಸೂದೆ, 2023 ಕಳೆದ ಐದು ದಶಕಗಳಲ್ಲಿ ಸಮಾಜದಲ್ಲಿ ಪ್ರಗತಿಪರ ಬದಲಾವಣೆಗಳಿಗೆ ಅವಕಾಶ ಕಲ್ಪಿಸಲು ಪ್ರಯತ್ನಿಸುತ್ತದೆ, ನೋಂದಣಿ ಪ್ರಕ್ರಿಯೆಯನ್ನು ಜನಸ್ನೇಹಿಯನ್ನಾಗಿ ಮಾಡುತ್ತದೆ ಮತ್ತು ನೋಂದಾಯಿತ ಜನನ ಮತ್ತು ಮರಣಗಳ ಡೇಟಾಬೇಸ್ ಬಳಸಿ ರಾಷ್ಟ್ರೀಯ ಮತ್ತು ರಾಜ್ಯ ಮಟ್ಟದಲ್ಲಿ ಇತರ ಡೇಟಾಬೇಸ್‌ಗಳನ್ನು ನವೀಕರಿಸುತ್ತದೆ ಎಂದು ಕಚೇರಿ ತಿಳಿಸಿದೆ.

Categories
ರಾಷ್ಟ್ರೀಯ ವಾರ್ತೆ

ಕೇರಳಕ್ಕೆ ಕಾಲಿಟ್ಟ ನಿಫಾ ವೈರಸ್ : ಇಬ್ಬರು ಬಲಿ!

ಕೇರಳಕ್ಕೆ ಕಾಲಿಟ್ಟ ನಿಫಾ ವೈರಸ್ : ಇಬ್ಬರು ಬಲಿ!
– ಲಿಬಿಯಾದಲ್ಲಿ ಡ್ಯಾಮ್ ಒಡೆದು 2500 ಹೆಚ್ಚು ಜನ ಸಾವು

NAMMUR EXPRESS NEWS
ಕೋಝಿಕೋಡ್: ಕೇರಳಕ್ಕೆ ಮತ್ತೆ ನಿಫಾ ವೈರಸ್ ಕಾಲಿಟ್ಟಿದೆ. ಮಾರಣಾಂತಿಕ ನಿಫಾ ವೈರಸ್‌ನಿಂದ ಕೇರಳದ ಕೋಝಿಕೋಡ್‌ನಲ್ಲಿ ಇಬ್ಬರು ಸಾವು ಸಂಭವಿಸಿರುವುದು ದೃಢಪಟ್ಟಿದೆ. ಮೃತಪಟ್ಟವರು ಮತ್ತು ಆಸ್ಪತ್ರೆಗೆ ದಾಖಲಾದವರ ರಕ್ತದ ಮಾದರಿಗಳನ್ನು ಪುಣೆಯಲ್ಲಿರುವ ರಾಷ್ಟ್ರೀಯ ವೈರಾಣು ಸಂಸ್ಥೆಗೆ ಕಳುಹಿಸಲಾಗಿತ್ತು. ಮಂಗಳವಾರ ಸಂಜೆ ಈ ದೃಢೀಕರಣ ಬಂದಿದೆ. ಇಬ್ಬರು ಮೃತ ವ್ಯಕ್ತಿಗಳ ಸಂಪರ್ಕಕ್ಕೆ ಬಂದ 70 ಕ್ಕೂ ಹೆಚ್ಚು ವ್ಯಕ್ತಿಗಳನ್ನು ಗುರುತಿಸಲಾಗಿದೆ ಮತ್ತು ಅವರ ಮೇಲೆ ನಿಗಾ ಇರಿಸಲಾಗಿದೆ ಎಂದು ಆರೋಗ್ಯ ಇಲಾಖೆ ಮೂಲಗಳು ತಿಳಿಸಿವೆ.

ಲಿಬಿಯಾದಲ್ಲಿ ಡ್ಯಾಮ್ ಒಡೆದು 2500 ಜನ ಸಾವು

ಮೊರಕ್ಕೊ ದುರಂತ ಮಾಸುವ ಮುನ್ನವೇ ಲಿಬಿಯಾದಲ್ಲಿ ಭಾರಿ ಪ್ರವಾಹ ಸೃಷ್ಟಿಯಾಗಿದೆ. ಪ್ರವಾಹದ ಅಬ್ಬರಕ್ಕೆ ಎರಡು ಡ್ಯಾಮ್ ಗಳು ಒಡೆದಿದ್ದು ಎರಡುವರೆ ಸಾವಿರಕ್ಕೂ ಹೆಚ್ಚು ಜನ ಕೊಚ್ಚಿ ಹೋಗಿದ್ದಾರೆ. ಉತ್ತರ ಆಫ್ರಿಕಾದ ಲಿಬಿಯಾ ದೇಶದ ಪೂರ್ವ ಭಾಗಗಳಲ್ಲಿ ಡೇನಿಯಲ್ ಚಂಡಮಾರುತ ಹಾಗೂ ಪ್ರವಾಹದ ಅಬ್ಬರಕ್ಕೆ ಸುಮಾರು 2,500 ಜನರು ಮೃತಪಟ್ಟಿದ್ದಾರೆ. ಸಾವಿರಾರು ಜನರು ನಾಪತ್ತೆಯಾಗಿದ್ದು ಸಾವಿನ ಸಂಖ್ಯೆ 10,000 ದಾಟಬಹುದು ಎಂದು ಅಂದಾಜಿಸಲಾಗಿದೆ. ಮೆಡಿಟರೇನಿಯನ್ ಸಮುದ್ರದಲ್ಲಿ ಎದ್ದಿರುವ ಚಂಡಮಾರುತದಿಂದ ಲಿಬಿಯಾದಲ್ಲಿ ಭಾರಿ ಮಳೆ ಆಗುತ್ತಿದೆ. ಡರ್ನ ನದಿಯಲ್ಲಿ ಪ್ರವಾಹ ಉಕ್ಕಿ ಹರಿಯುತ್ತಿದ್ದು ಎರಡು ಡ್ಯಾಮ್ ಗಳು ಒಡಿದಿವೆ. ರಾತ್ರಿ ಸುನಾಮಿಯಂತೆ ಅಪ್ಪಳಿಸಿದ್ದರಿಂದ ಮಲಗಿದ್ದ ಜನರು ಹಾಗೆಯೇ ಕೊಚ್ಚಿ ಹೋಗಿದ್ದಾರೆ. ಅಪಾರ ಪ್ರಮಾಣದ ಆಸ್ತಿ ಮತ್ತು ಜೀವ ಹಾನಿ ಉಂಟಾಗಿದೆ.

ಭೀಕರ ಅಪಘಾತಕ್ಕೆ 13 ಜನ ದುರ್ಮರಣ!

ಜೈಪುರ: ರಾಜಸ್ಥಾನದ ಭರತಪುರ ಜಿಲ್ಲೆಯಲ್ಲಿ ಬುಧವಾರ ಬೆಳಗ್ಗೆ ಭೀಕರ ಅಪಘಾತ ಸಂಭವಿಸಿದ್ದು, 13 ಜನ ದಾರುಣವಾಗಿ ಮೃತಪಟ್ಟಿದ್ದಾರೆ. ಬೆಳಗ್ಗೆ 4.30ರ ಸುಮಾರಿಗೆ ಜೈಪುರ-ಆಗ್ರಾ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿಂತಿದ್ದ ಪ್ಯಾಸೆಂಜರ್‌ ಬಸ್‌ಗೆ ಹಿಂದಿನಿಂದ ಬಂದ ಯಮರೂಪಿ ಟ್ರಕ್‌ ಗುದ್ದಿದೆ. ಗಾಯಾಳುಗಳನ್ನು ಕೂಡಲೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ರಾಜಸ್ಥಾನದಿಂದ ಉತ್ತರ ಪ್ರದೇಶದ ಮಥುರಾಗೆ ಸುಮಾರು 60 ಪ್ರಯಾಣಿಕರು ಬಸ್‌ನಲ್ಲಿ ತೆರಳುತ್ತಿದ್ದರು. ರಾಜಸ್ಥಾನದ ಲಖನ್‌ಪುರ ಪ್ರದೇಶದ ಹೆದ್ದಾರಿ ಬಳಿ ಬಸ್‌ ನಿಲ್ಲಿಸಲಾಗಿತ್ತು. ಇದೇ ವೇಳೆ ವೇಗವಾಗಿ ಬಂದ ಟ್ರಕ್‌ ಬಸ್‌ಗೆ ಹಿಂಬದಿಯಿಂದ ಗುದ್ದಿದೆ. ಟ್ರಕ್‌ ಗುದ್ದಿದ ತೀವ್ರತೆಗೆ ಬಸ್‌ನಲ್ಲಿದ್ದ ಐವರು ಪುರುಷರು ಹಾಗೂ ಆರು ಮಹಿಳೆಯರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಸುಮಾರು 15 ಜನ ಮೃತಪಟ್ಟಿದ್ದು, ಇವರಲ್ಲಿ ಕೆಲವರ ಸ್ಥಿತಿ ಗಂಭೀರವಾಗಿದೆ. ರಾಜಸ್ಥಾನದ ಹನುಮಗಢ ಜಿಲ್ಲೆಯಲ್ಲಿ ಜೀಪ್‌ ಹಾಗೂ ಬಸ್‌ ಡಿಕ್ಕಿಯಾಗಿ ನಾಲ್ವರು ಮೃತಪಟ್ಟಿದ್ದರು. ಲಖೋವಲಿ ಪ್ರದೇಶದಲ್ಲಿ ಅಪಘಾತ ಸಂಭವಿಸಿದ್ದು, ಜೀಪ್‌ನಲ್ಲಿದ್ದ ನಾಲ್ವರೂ ಸ್ಥಳದಲ್ಲೇ ಮೃತಪಟ್ಟಿದ್ದರು.

Categories
ರಾಷ್ಟ್ರೀಯ ವಾರ್ತೆ

ಚಿನ್ನಾಭರಣ ಪ್ರಿಯರಿಗೆ ಗುಡ್‌ನ್ಯೂಸ್!

ಚಿನ್ನಾಭರಣ ಪ್ರಿಯರಿಗೆ ಗುಡ್‌ನ್ಯೂಸ್!
– ಮಾರುಕಟ್ಟೆಯಲ್ಲಿ ಭಾರೀ ಇಳಿಕೆ ಕಂಡ ಬಂಗಾರ
– ಬೆಳ್ಳಿ ವಸ್ತುಗಳಿಗೆ ಬೇಡಿಕೆ: ಈಗ ಎಷ್ಟು ದರ?

NAMMUR EXPRESS NEWS
ನವದೆಹಲಿ : ಚಿನ್ನಾಭರಣ ಪ್ರಿಯರಿಗೆ ಸಿಹಿ ಸುದ್ದಿ. ಚಿನ್ನ ಮತ್ತು ಬೆಳ್ಳಿಯ ಬೆಲೆಯಲ್ಲಿ ಬಾರೀ ಏರಿಳಿತ ಕಂಡಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿಯ ದರದಲ್ಲಿ ಬಾರೀ ಏರಿಳಿತ ಕಾಣುತ್ತಿದೆ. ಇದು ದೇಶೀಯ ಮಾರುಕಟ್ಟೆಯ ಮೇಲೂ ಪರಿಣಾಮ ಬೀರಿದೆ. ಮಾರುಕಟ್ಟೆಯಲ್ಲಿ ಮಾರುಕಟ್ಟೆಯಲ್ಲಿ ಪ್ರತೀ ಗ್ರಾಂ ಆಭರಣದ ಚಿನ್ನದ ದರ 5,485 ರೂ.ಗೆ ಮಾರಾಟವಾಗುತ್ತಿದೆ. ಪ್ರತಿ ಗ್ರಾಂ ಚಿನ್ನಾಭರಣ ಚಿನ್ನದ ದರ 5,485 ರೂ.ಗಳಾಗಿದ್ದು, 10 ಗ್ರಾಂ ಆಭರಣ ಚಿನ್ನದ ಬೆಲೆ ರೂ. 54,850 ಮತ್ತು ಅಪರಂಜಿ ಚಿನ್ನ ಹತ್ತು ಗ್ರಾಂಗೆ ರೂ. 59,840. 22 ಕ್ಯಾರೆಟ್ ಚಿನ್ನದ ಬೆಲೆ (ಹತ್ತು ಗ್ರಾಂ):

ಬೆಂಗಳೂರು – ರೂ. 54,850,
ಚೆನ್ನೈ – ರೂ. 55,100
ಮುಂಬೈ – ರೂ. 54,850
ಕೋಲ್ಕತ್ತಾ – ರೂ. 54,850
ದೆಹಲಿ – 55,000 ರೂ.

22 ಕ್ಯಾರೆಟ್ ಚಿನ್ನದ ದರ:
1 ಗ್ರಾಂ – ರೂ 5,485, 8 ಗ್ರಾಂ – ರೂ 43,880, 10 ಗ್ರಾಂ – 54,850 ರೂ.
24 ಕ್ಯಾರೆಟ್ ಚಿನ್ನದ ದರ :
1 ಗ್ರಾಂ – ರೂ 5,984, 8ಗ್ರಾಂ – ರೂ 47,872, 10 ಗ್ರಾಂ – ರೂ 59,840. ಬೆಳ್ಳಿ ಬೆಲೆ ರೂ. 73,500. ಚಿನ್ನದಂತೆ ಬೆಳ್ಳಿಯ ವಸ್ತುಗಳಿಗೂ ಹೆಚ್ಚಿನ ಬೇಡಿಕೆ ಇದ್ದು, ನಿತ್ಯ ಖರೀದಿಸಲಾಗುತ್ತದೆ.

ಇದನ್ನೂ ಓದಿ : ನದಿಯಲ್ಲಿ ಒಬ್ಬರ ಮೃತದೇಹ ಸಿಕ್ತು, ಮತ್ತೊಬ್ಬನಿಗಾಗಿ ಶೋಧ!

Categories
ರಾಷ್ಟ್ರೀಯ ವಾರ್ತೆ

ಅಯೋಧ್ಯೆ ರಾಮ ಮಂದಿರದ ಉದ್ಘಾಟನೆಗೆ ಸಜ್ಜು!

ಅಯೋಧ್ಯೆ ರಾಮ ಮಂದಿರದ ಉದ್ಘಾಟನೆಗೆ ಸಜ್ಜು!
– 2024 ಜ.21ರಿಂದ 24ವರೆಗೂ ವಿಶೇಷ ಪೂಜೆ
– ಪ್ರಧಾನಿ ಮೋದಿ ಅವರಿಂದ ರಾಮ ಮಂದಿರ ಜ.22ಕ್ಕೆ ಉದ್ಘಾಟನೆ

NAMMUR EXPRESS NEWS
ಹೊಸದಿಲ್ಲಿ: ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ಭವ್ಯ ಶ್ರೀರಾಮ ಮಂದಿರವನ್ನು 2024ರ ಜನವರಿ 22ರಂದು ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ರಾಮ ಮಂದಿರ ಜ. 24ಕ್ಕೆ ಉದ್ಘಾಟನೆಯಾಗಲಿದೆ ಈ ಹಿಂದೆ ಹೇಳಲಾಗಿತ್ತು. ಆದರೆ, ಪ್ರಧಾನಿ ಮೋದಿ ಜನವರಿ 22ಕ್ಕೆ ಅಯೋಧ್ಯೆಗೆ ಭೇಟಿ ನೀಡಲಿದ್ದಾರೆ ಎಂದು ಪ್ರಧಾನಮಂತ್ರಿ ಕಾರ್ಯಾಲಯದ ಮೂಲಗಳು ಖಚಿತ ಪಡಿಸಿವೆ ಎಂದು ಖಾಸಗಿ ಟಿವಿ ವಾಹಿನಿಯೊಂದು ವರದಿ ಮಾಡಿದೆ.

ಜನವರಿ 21 ರಿಂದ 24ವರೆಗೆ ವಿಶೇಷ ಪೂಜೆ

ಮಂದಿರ ಉದ್ಘಾಟನೆಗೂ ಒಂದು ವಾರ ಮೊದಲು ಧಾರ್ಮಿಕ ಕಾರ್ಯಗಳು ಆರಂಭವಾಗಲಿವೆ. ಅಯೋಧ್ಯೆ ಶ್ರೀರಾಮ ಮಂದಿರ ತೀರ್ಥಕ್ಷೇತ್ರ ಟ್ರಸ್ಟ್ ಈ ಹಿಂದೆ ನೀಡಿರುವ ಮಾಹಿತಿ ಪ್ರಕಾರ, ರಾಮಲಲ್ಲಾವಿಗ್ರಹದ ‘ಪ್ರಾಣ ಪ್ರತಿಷ್ಠಾಪನೆ ಕಾರ್ಯ ಜ. 21ರಿಂದ 24ರವರೆಗೆ ಜರುಗಲಿದ್ದು, ಪ್ರಧಾನಿ ಮೋದಿ ಭೇಟಿಯ ದಿನಾಂಕವನ್ನು ನೋಡಿಕೊಂಡು ಉದ್ಘಾಟನಾ ಕಾರ್ಯ ನಡೆಸಲಾಗುವುದು ಎಂದು ಹೇಳಿತ್ತು.

ನೆಲ ಅಂತಸ್ತು ಮತ್ತು ನೆಲಮಾಳಿಗೆ ಕಾಮಗಾರಿ ಪೂರ್ಣ ಅಯೋಧ್ಯೆ ವಿವಾದದ ಬಗ್ಗೆ ಸುಪ್ರೀಂಕೋರ್ಟ್ 2019ರ ನವೆಂಬರ್ 9ರಂದು ತೀರ್ಪು ಪ್ರಟಿಸಿದ ನಂತರ ರಾಮಮಂದಿರ ನಿರ್ಮಾಣಕ್ಕೆ ಇದ್ದ ಕಾನೂನಾತ್ಮಕ ತೊಡಕು ನಿವಾರಣೆಯಾಗಿತ್ತು, 2020ರ ಅ.5ರಂದು ಪ್ರಧಾನಿ ಮೋದಿ ಮಂದಿರ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಿಸಿದ್ದರು. ಸದ್ಯ ಮಂದಿರದ ನೆಲಅಂತಸ್ತು ಮತ್ತು ನೆಲಮಾಳಿಗೆ ಕಾಮಗಾರಿ ಪೂರ್ಣಗೊಂಡಿದೆ. ಇತ್ತೀಚೆಗಷ್ಟೇ ದೇಗುದಲ ಟ್ರಸ್ಟ್ ಮಂದಿರದ ಕಾಮಗಾರಿಯ ಚಿತ್ರವನ್ನು ಹಂಚಿಕೊಂಡಿತ್ತು.

ಇದನ್ನೂ ಓದಿ : ನದಿಯಲ್ಲಿ ಒಬ್ಬರ ಮೃತದೇಹ ಸಿಕ್ತು, ಮತ್ತೊಬ್ಬನಿಗಾಗಿ ಶೋಧ!