Categories
ರಾಷ್ಟ್ರೀಯ ವಾರ್ತೆ

ಭಾರತ್ ಮಹಾನ್…!

ಭಾರತ್ ಮಹಾನ್…!
– ವಿಶ್ವ ಕಪ್ ಫೈನಲ್ ತಲುಪಿದ ಭಾರತ!
– ನ್ಯೂಜಿಲ್ಯಾಂಡ್ ವಿರುದ್ಧ ಐತಿಹಾಸಿಕ ವಿಜಯ!
– 70 ರನ್ ಗೆಲುವು: ಶಮಿ 7 ವಿಕೆಟ್ ಸಾಧನೆ
– ವಿರಾಟ್ ಕೊಹ್ಲಿ ಶತಕ.. ಎರಡು ವಿಶ್ವ ದಾಖಲೆ!

NAMMUR EXPRESS NEWS
ಭಾರತ ವಿಶ್ವ ಕಪ್ ಕ್ರಿಕೆಟ್ ಫೈನಲ್ ತಲುಪಿದೆ. ಈ ಮೂಲಕ ಕ್ರಿಕೆಟ್ ಜಗತ್ತಲ್ಲಿ ಹೊಸ ಮೈಲುಗಲ್ಲು ಸಾಧಿಸಿದೆ. ಎಲ್ಲೆಡೆ ಭಾರತ ವಿಜಯ ಮಾಲೆ ಧರಿಸಿದೆ. ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನ್ಯೂಜಿಲ್ಯಾಂಡ್ ವಿರುದ್ಧದ ಪಂದ್ಯದಲ್ಲಿ ಭಾರತ 4 ವಿಕೆಟ್ ಕಳೆದುಕೊಂಡು 397 ರನ್ ಗುರಿಯನ್ನು ನೀಡಿತ್ತು. ಆದರೆ ನ್ಯೂಜಿಲ್ಯಾಂಡ್ 70 ರನ್ ಸೋಲು ಕಂಡಿತು. ಒಂದು ಹಂತದಲ್ಲಿ ಮಿಚೆಲ್

ವಿರಾಟ್ ಕೊಹ್ಲಿ ಶತಕ.. ಎರಡು ವಿಶ್ವ ದಾಖಲೆ

ವಿರಾಟ್ ಕೊಹ್ಲಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಗರಿಷ್ಠ ರನ್’ಗಳನ್ನು ಗಳಿಸಿ ದಾಖಲೆ ನಿರ್ಮಿಸಿರುವುದು ಒಂದು ದಾಖಲೆಯಾದರೆ, ಏಕದಿನ ಕ್ರಿಕೆಟ್ ನಲ್ಲಿ 50 ನೆಯ ಶತಕ ದಾಖಲಿಸಿ ಸಚಿನ್ ತೆಂಡೂಲ್ಕರ್ 2 ದಾಖಲೆ ಪುಡಿಗಟ್ಟಿದ ವಿರಾಟ್ ಕೋಹ್ಲಿ ಅಬ್ಬರಕ್ಕೆ ವಿಶ್ವವೇ ಫಿದಾ ಆಗಿದೆ. ಭಾರತದ ಹೆಮ್ಮೆಯ ಕ್ರಿಕೆಟಿಗ ವಿರಾಟ್ ಕೊಹ್ಲಿ ಒಂದೇ ಪಂದ್ಯದಲ್ಲಿ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಅವರ ಎರಡು ದಾಖಲೆಗಳನ್ನು ಪುಡಿಗಟ್ಟುವ ಮೂಲಕ, ಇಂತಹ ಸಾಧನೆ ಮಾಡಿದ ವಿಶ್ವದ ಏಕೈಕ ಕ್ರಿಕೆಟಿಗ ಎಂಬ ದಾಖಲೆ ಬರೆದಿದ್ದಾರೆ. ಟೀಂ ಇಂಡಿಯಾ ರನ್ ಮಷೀನ್ ವಿರಾಟ್ ಕೊಹ್ಲಿ, ಏಕದಿನ ಕ್ರಿಕೆಟ್ ಇತಿಹಾಸದಲ್ಲಿ 50ನೆಯ ಶತಕ ಸಿಡಿಸಿ ಸಂಭ್ರಮಿಸಿದ್ದಾರೆ.

2023ರ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯ ಸೆಮಿಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ಎದುರು ಕೆಚ್ಚೆದೆಯ ಬ್ಯಾಟಿಂಗ್ ನಡೆಸಿದ ವಿರಾಟ್ ಕೊಹ್ಲಿ ವೃತ್ತಿಜೀವನದ 50ನೆಯ ಏಕದಿನ ಶತಕ ಸಿಡಿಸಿ ಅಬ್ಬರಿಸಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್‌’ನಲ್ಲಿ ವಿರಾಟ್ ಕೊಹ್ಲಿ ಬಾರಿಸಿದ ಒಟ್ಟಾರೆ 80ನೆಯ ಶತಕವಾಗಿದೆ. ಈಗ ವಿಶ್ವಕಪ್ ಟೂರ್ನಿಯಲ್ಲಿ ಕೇವಲ 10 ಇನ್ನಿಂಗ್ಸ್ ನಲ್ಲಿ ಕೊಹ್ಲಿ ಗರಿಷ್ಠ ರನ್ ದಾಖಲಿಸಿರುವ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ.

ಭಾರತದ ಗೆಲುವಿನಲ್ಲಿ ಶಮಿ ಮ್ಯಾಜಿಕ್!

ಭಾರತದ ಬೌಲರ್ ಶಮಿ 7ಪ್ರಮುಖ ವಿಕೆಟ್ ಪಡೆಯುವ ಮೂಲಕ ಹೀರೋ ಆದರು. ಒಂದು ಹಂತದಲ್ಲಿ ಮಿಚೆಲ್ ಸ್ಪೋಟಕ ಹೊಡೆತದಿಂದ ಕಂಗೆಟ್ಟಿದ್ದ ಭಾರತವನ್ನು ಪಾರು ಮಾಡಿದ್ದು, ಮಹಮದ್ ಶಮಿ. ತಮ್ಮ ಬೌಲಿಂಗ್ ಮೂಲಕ 7 ವಿಕೆಟ್ ಪಡೆದು ಭಾರತವನ್ನು ಗೆಲುವಿನ ದಡ ಸೇರಿಸಿದರು. ಈ ಮೂಲಕ ವಿಶ್ವ ಕಪ್ ವಿಕೆಟ್ ಪಂದ್ಯದಲ್ಲಿ ಅತೀ ಹೆಚ್ಚು ವಿಕೆಟ್ ಪಡೆದಿದ್ದಾರೆ.
ಎಲ್ಲಾ ಸುದ್ದಿಗಳನ್ನು nammurexpress.in ಅಲ್ಲಿ ವೀಕ್ಷಿಸಿ.

Categories
ರಾಷ್ಟ್ರೀಯ ವಾರ್ತೆ

ಉದ್ಯೋಗಿಗಳಿಗೆ ಅಮೆಜಾನ್ ಬಿಗ್ ಶಾಕ್

ಉದ್ಯೋಗಿಗಳಿಗೆ ಅಮೆಜಾನ್ ಬಿಗ್ ಶಾಕ್
– ಮತ್ತಷ್ಟು ಉದ್ಯೋಗ ಕಡಿತಕ್ಕೆ ಮುಂದಾದ ಕಂಪನಿ

NAMMUR EXPRESS NEWS
ನವದೆಹಲಿ : ಅಮೆಜಾನ್ ಕಂಪನಿ ತನ್ನ ಸಂಗೀತ ವಿಭಾಗದಲ್ಲಿ ಉದ್ಯೋಗಿಗಳನ್ನು ವಜಾಗೊಳಿಸಲು ಪ್ರಾರಂಭಿಸಿದೆ ಎಂದು ದೃಢಪಡಿಸಿದೆ. ಕಳೆದ ಒಂದು ವರ್ಷದಲ್ಲಿ 27,000 ಕ್ಕೂ ಹೆಚ್ಚು ಉದ್ಯೋಗಿಗಳ ಮೇಲೆ ಪರಿಣಾಮ ಬೀರಿದ ಉದ್ಯೋಗ ಕಡಿತಗಳ ಸರಣಿಯಲ್ಲಿ ಈ ವಜಾ ಇತ್ತೀಚಿನದು. ಮಾಧ್ಯಮ ವರದಿಗಳ ಪ್ರಕಾರ, ಬುಧವಾರ ವಜಾಗೊಳಿಸುವಿಕೆಯನ್ನು ಘೋಷಿಸಲಾಯಿತು ಮತ್ತು ಲ್ಯಾಟಿನ್ ಅಮೆರಿಕ, ಉತ್ತರ ಅಮೆರಿಕ ಮತ್ತು ಯುರೋಪಿನ ಉದ್ಯೋಗಿಗಳ ಮೇಲೆ ಪರಿಣಾಮ ಬೀರಿದೆ.

ವರದಿಯ ಪ್ರಕಾರ, ವಜಾಗೊಳಿಸುವಿಕೆಯನ್ನು ಅಮೆಜಾನ್ ವಕ್ತಾರರು ದೃಢಪಡಿಸಿದ್ದಾರೆ, ಆದರೆ ಬಾಧಿತ ಉದ್ಯೋಗಿಗಳ ನಿಖರ ಸಂಖ್ಯೆಯನ್ನು ಬಹಿರಂಗಪಡಿಸಲಾಗಿಲ್ಲ. “ನಾವು ನಮ್ಮ ಸಾಂಸ್ಥಿಕ ಅಗತ್ಯಗಳನ್ನು ನಿಕಟವಾಗಿ ಮೇಲ್ವಿಚಾರಣೆ ಮಾಡುತ್ತಿದ್ದೇವೆ ಮತ್ತು ಗ್ರಾಹಕರು ಮತ್ತು ನಮ್ಮ ವ್ಯವಹಾರಗಳ ದೀರ್ಘಕಾಲೀನ ಆರೋಗ್ಯವು ನಮಗೆ ಹೆಚ್ಚು ಮುಖ್ಯವಾಗಿದೆ” ಎಂದು ವಕ್ತಾರರು ಹೇಳಿದರು. ಅಮೆಜಾನ್ ಮ್ಯೂಸಿಕ್ ತಂಡದಲ್ಲಿ ಕೆಲವು ಪಾತ್ರಗಳನ್ನು ತೆಗೆದುಹಾಕಲಾಗಿದೆ. ನಾವು ಅಮೆಜಾನ್ ಮ್ಯೂಸಿಕ್ ನಲ್ಲಿ ಹೂಡಿಕೆ ಮಾಡುವುದನ್ನು ಮುಂದುವರಿಸುತ್ತೇವೆ.

ವಾಷಿಂಗ್ಟನ್ ರಾಜ್ಯ, ಕ್ಯಾಲಿಫೋರ್ನಿಯಾ ಅಥವಾ ನ್ಯೂಯಾರ್ಕ್ನಲ್ಲಿ ಇತ್ತೀಚೆಗೆ ಸಾಮೂಹಿಕ ವಜಾಗಳು ನಡೆದಿಲ್ಲ, ಇವು ಕಂಪನಿಯ ಅತಿದೊಡ್ಡ ಉದ್ಯೋಗಿ ಕೇಂದ್ರಗಳಲ್ಲಿ ಸೇರಿವೆ. ಮೂರನೇ ತ್ರೈಮಾಸಿಕದಲ್ಲಿ ಅಮೆಜಾನ್ ನಿವ್ವಳ ಆದಾಯವನ್ನು ವರದಿ ಮಾಡಿದ ಸಮಯದಲ್ಲಿ ಕಂಪನಿಯನ್ನು ವಜಾಗೊಳಿಸುವ ನಿರ್ಧಾರ ಬಂದಿದೆ. ಈ ಗಳಿಕೆಯು ಹೆಚ್ಚಾಗಿ ವಿಶ್ಲೇಷಕರ ಅಂದಾಜುಗಳನ್ನು ಮೀರಿದೆ ಮತ್ತು ವರ್ಷದ ಕೊನೆಯ ತ್ರೈಮಾಸಿಕದ ಆದಾಯದ ಅಂದಾಜುಗಳಿಗೆ ಅನುಗುಣವಾಗಿದೆ. ರಜಾದಿನಗಳಲ್ಲಿ ಶಾಪಿಂಗ್ ಮಾಡುವುದರಿಂದ ನಾಲ್ಕನೇ ತ್ರೈಮಾಸಿಕವು ಅಮೆಜಾನ್ ಗೆ ವಿಶೇಷವಾಗಿ ಮುಖ್ಯವಾಗಿದೆ.

ಅಮೆಜಾನ್ ಕಳೆದ ತಿಂಗಳಿನಿಂದ ತನ್ನ ಸ್ಟುಡಿಯೋ, ವೀಡಿಯೊ ಮತ್ತು ಸಂಗೀತ ವಿಭಾಗಗಳಲ್ಲಿ ಸಂವಹನ ಸಿಬ್ಬಂದಿ ಸೇರಿದಂತೆ ಉದ್ಯೋಗಗಳನ್ನು ಎಚ್ಚರಿಕೆಯಿಂದ ಕಡಿಮೆ ಮಾಡುತ್ತಿದೆ. ಶುಲ್ಕಕ್ಕೆ ಬದಲಾಗಿ ಅನಿಯಮಿತ ಮ್ಯೂಸಿಕ್ ಸ್ಟ್ರೀಮಿಂಗ್ ಸೇವೆಗಳನ್ನು ಒದಗಿಸುವಲ್ಲಿ ಇದು ಸ್ಪಾಟಿಫೈ, ಯೂಟ್ಯೂಬ್ ಮ್ಯೂಸಿಕ್ ಮತ್ತು ಆಪಲ್ ಮ್ಯೂಸಿಕ್ಕೊಂದಿಗೆ ಸ್ಪರ್ಧಿಸುತ್ತದೆ.

Categories
ರಾಷ್ಟ್ರೀಯ ವಾರ್ತೆ

ರಸ್ತೆಗಿಳಿಯಲಿವೆ 10,000 ಎಲೆಕ್ಟ್ರಿಕ್ ಬಸ್!

ರಸ್ತೆಗಿಳಿಯಲಿವೆ 10,000 ಎಲೆಕ್ಟ್ರಿಕ್ ಬಸ್!
– ಮುಂದಿನ ವಾರ ಪಿಎಂ-ಇಬಸ್ ಸೇವಾ ಯೋಜನೆ ಟೆಂಡರ್
– ಇನ್ಮೇಲೆ ಎಲೆಕ್ಟ್ರಿಕಲ್ ವೆಹಿಕಲ್ ಜಮಾನ

NAMMUR EXPRESS NEWS
ನವದೆಹಲಿ: ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ ಪ್ರಕಾರ, ಇತ್ತೀಚೆಗೆ ಘೋಷಿಸಲಾದ ಪಿಎಂ-ಇಬಸ್ ಸೇವಾ ಯೋಜನೆ ಅಡಿಯಲ್ಲಿ 3,000 ಎಲೆಕ್ಟ್ರಿಕ್ ಬಸ್‌ಗಳ ಮೊದಲ ಸೆಟ್ ಟೆಂಡರ್ ಮುಂದಿನ ವಾರ ಹೊರ ಬೀಳಲಿದೆ.
ಈ ವರ್ಷದ ಆಗಸ್ಟ್ ನಲ್ಲಿ ಕೇಂದ್ರ ಸಚಿವ ಸಂಪುಟದಿಂದ ಅನುಮೋದನೆಗೊಂಡ ಯೋಜನೆಯು ಸಂಘಟಿತ ಸಾರ್ವಜನಿಕ ಬಸ್ ಸೇವೆಯ ಕೊರತೆಯಿರುವ ನಗರಗಳಲ್ಲಿ 10,000 ಎಲೆಕ್ಟ್ರಿಕ್ ಬಸ್‌ಗಳನ್ನು ಸೇರಿಸುವ ಗುರಿ ಹೊಂದಿದೆ.
ಪ್ರಸ್ತಾವನೆಗಳನ್ನು ಕಳುಹಿಸಲು ರಾಜ್ಯಗಳಿಗೆ ಒಂದು ತಿಂಗಳ ಕಾಲಾವಕಾಶ ನೀಡಲಾಗಿದೆ ಎಂದು ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದ ಕಾರ್ಯದರ್ಶಿ ಮನೋಜ್ ಜೋಶಿ ಶುಕ್ರವಾರ ಹೇಳಿದ್ದಾರೆ.

ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವ ಹರ್ದೀಪ್ ಸಿಂಗ್ ಅವರು ಉದ್ಘಾಟಿಸಿದ 16 ನೇ ಅರ್ಬನ್ ಮೊಬಿಲಿಟಿ ಇಂಡಿಯಾ (ಯುಎಂಐ) ಕಾನ್ಸರೆನ್ಸ್ ಕಮ್ ಎಕ್ಸ್ ಪೋ 2023 ರ ಉದ್ಘಾಟನಾ ಸಮಾರಂಭದ ಪತ್ರಿಕಾಗೋಷ್ಠಿಯಲ್ಲಿ ಅವರು, ರಾಜ್ಯಗಳು ಈ ಕುರಿತು ಕೆಲಸ ಮಾಡುತ್ತಿವೆ. ಮುಂದಿನ ವಾರದ ವೇಳೆಗೆ ಟೆಂಡರ್ ಹೊರಬರಲಿದೆ ಎಂದು ತಿಳಿಸಿದರು.
ಪಿಎಂ – ಇ ಬಸ್ ಸೇವಾ ಅಡಿಯಲ್ಲಿ 169 ನಗರಗಳಲ್ಲಿ ಸಾರ್ವಜನಿಕ-ಖಾಸಗಿ ಸಹಭಾಗಿತ್ವದ ಮಾದರಿಯಲ್ಲಿ 10,000 ಇ-ಬಸ್‌ಗಳನ್ನು ನಿಯೋಜಿಸಲಾಗುವುದು. ಜೊತೆಗೆ ಸಂಬಂಧಿತ ಮೂಲಸೌಕರ್ಯ, ಬಸ್ ಡಿಪೋಗಳು ಮತ್ತು ಮೀಟರ್‌ನ ಹಿಂದಿನ ವಿದ್ಯುತ್ ಮೂಲಸೌಕರ್ಯಗಳಿಗೆ ಬೆಂಬಲ ನೀಡಲಾಗುವುದು.

ಇದಲ್ಲದೆ, ಕೇಂದ್ರ ಸರ್ಕಾರವು ರಾಜ್ಯಗಳಿಗೆ ಬಸ್ ಆದ್ಯತೆಯ ಮೂಲಸೌಕರ್ಯ, ಮಲ್ಟಿಮೋಡಲ್ ಇಂಟರ್ಚೇಂಜ್ ಸೌಲಭ್ಯಗಳು, ರಾಷ್ಟ್ರೀಯ ಸಾಮಾನ್ಯ ಮೊಬಿಲಿಟಿ ಕಾರ್ಡ್‌ ಆಧಾರಿತ ಸ್ವಯಂಚಾಲಿತ ಶುಲ್ಕ ಸಂಗ್ರಹ ವ್ಯವಸ್ಥೆ ಮತ್ತು ಗ್ರೀನ್ ಅರ್ಬನ್ ಮೊಬಿಲಿಟಿ ಇನಿಶಿಯೇಟಿವ್ ಅಡಿಯಲ್ಲಿ ಮೂಲಸೌಕರ್ಯಗಳನ್ನು ಸ್ಥಾಪಿಸಲು ಸಹಾಯ ಮಾಡುತ್ತದೆ.
ಈ ಯೋಜನೆಗೆ 57,613 ಕೋಟಿ ರೂ. ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದ್ದು, ಈ ಪೈಕಿ ಕೇಂದ್ರ ಸರ್ಕಾರ 20,000 ಕೋಟಿ ರೂ. ನೆರವು ನೀಡಲಿದೆ. ಈ ಯೋಜನೆಯು 10 ವರ್ಷಗಳ ಕಾಲ ಬಸ್ ಕಾರ್ಯಾಚರಣೆಗಳನ್ನು ಬೆಂಬಲಿಸುತ್ತದೆ.

Categories
ರಾಷ್ಟ್ರೀಯ ವಾರ್ತೆ

ಏಷ್ಯಾನ್ ಗೇಮಿನಲ್ಲಿ ಭಾರತ ಐತಿಹಾಸಿಕ ಸಾಧನೆ

ಕ್ರೀಡೆಯಲ್ಲಿ ಭಾರತ ಜೈ ಹೋ..!
– ಏಷ್ಯಾನ್ ಗೇಮಿನಲ್ಲಿ ಭಾರತ ಐತಿಹಾಸಿಕ ಸಾಧನೆ
– ನೂರು ಪದಕಗಳನ್ನು ಭಾರತಾಂಬೆಯ ಮಡಿಲಿಗೆ ಹಾಕಿದ ಹೆಮ್ಮೆಯ ಕ್ರೀಡಾಪಟುಗಳು
– ಚಿನ್ನ ಗೆದ್ದ ಹಾಕಿ ತಂಡ: ಒಲಂಪಿಕ್ಸ್ ಅರ್ಹತೆ

NAMMUR EXPRESS NEWS
ಚೀನಾದ ಹ್ಯಾಂಗ್‌ನಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್ 2023ರಲ್ಲಿ ಭಾರತ ನೂರು ಪದಕ ಗೆದ್ದು ಇತಿಹಾಸ ಸೃಷ್ಟಿಸಿದೆ. ಏಷ್ಯನ್ ಗೇಮ್ಸ್ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಪದಕಗಳ ಬೇಟೆಯಲ್ಲಿ ಭಾರತ ಸೆಂಚುರಿ ಬಾರಿಸಿದೆ.
ಕ್ರೀಡಾಕೂಟ ಆರಂಭವಾದ ದಿನದಿಂದ ಇಲ್ಲಿಯವರೆಗೆ ಭಾರತದ ಕ್ರೀಡಾಪಟುಗಳು ವಿವಿಧ ವಿಭಾಗಗಳಲ್ಲಿ 100 ಪದಕಗಳಿಗೆ ಮುತ್ತಿಟ್ಟಿದ್ದಾರೆ. ಭಾರತದ ಕ್ರೀಡಾ ಪ್ರಾಧಿಕಾರವು ಈ ಐತಿಹಾಸಿಕ ಸಾಧನೆಗೆ ಕಾರಣಕರ್ತರಾದ ಕ್ರೀಡಾಪಟುಗಳಿಗೆ ಅಭಿನಂದನೆ ಸಲ್ಲಿಸಿ ಎಕ್ಸಲ್ಲಿ ಪೋಸ್ಟ್ ಮಾಡಿದೆ. ಏಷ್ಯನ್ ಗೇಮ್ ನಲ್ಲಿ ಭಾರತವು ತನ್ನ 100 ಪದಕವನ್ನು ಪಡೆಯುತ್ತಿದ್ದಂತೆ ಇತಿಹಾಸವನ್ನು ನಿರ್ಮಿಸಲಾಗಿದೆ. ಟೀಮ್ ಇಂಡಿಯಾ ಸಾಧನೆಯಲ್ಲಿ ತೊಡಗಿಸಿಕೊಂಡಿರುವ ನಮ್ಮ ಕ್ರೀಡಾಪಟುಗಳ ಕನಸುಗಳ ಶಕ್ತಿ, ಸಮರ್ಪಣೆ ಮತ್ತು ತಂಡದ ಕೆಲಸಗಳಿಗೆ ಇದು ಸಾಕ್ಷಿಯಾಗಿದೆ. ಈ ಸಾಧನೆಯು ಮುಂದಿನ ಪೀಳಿಗೆಗೆ ಸ್ಫೂರ್ತಿಯಾಗಲಿ. ಕಠಿಣ ಪರಿಶ್ರಮ ಮತ್ತು ಉತ್ಸಾಹದಿಂದ ಏನು ಸಾಧ್ಯ ಎಂಬುದನ್ನು ಇದು ತೋರಿಸುತ್ತದೆ ಎಂದು ಬರೆದುಕೊಂಡಿದೆ.

ಇದುವರೆಗೆ ಭಾರತಕ್ಕೆ 25 ಚಿನ್ನ, 35 ಬೆಳ್ಳಿ, 40 ಕಂಚಿನ ಪದಕ ಸೇರಿದಂತೆ ಒಟ್ಟು 100 ಪದಕಗಳು ಏಷ್ಯನ್ ಗೇಮ್ಸ್ಲ್ಲಿ ಸಿಕ್ಕಿವೆ. ಶುಕ್ರವಾರ ಕಾಂಪೌಡ್ ಆರ್ಚರಿ (3), ಕಬಡ್ಡಿ (2), ಬ್ಯಾಡ್ಮಿಂಟನ್ (1), ಮತ್ತು ಪುರುಷರ ಕ್ರಿಕೆಟ್ (1) ನಲ್ಲಿ ಹೆಚ್ಚಿನ ಪದಕಗಳನ್ನು ಗೆದ್ದು 100 ರ ಗಡಿ ತಲುಪಿತ್ತು. ಇಂಡೋನೇಷ್ಯಾದಲ್ಲಿ ಕಳೆದ ಆವೃತ್ತಿಯಲ್ಲಿ ಭಾರತ 70 ಪದಕಗಳನ್ನು ಗೆದ್ದಿತ್ತು. ಅಲ್ಲಿ ದೇಶದ ಕ್ರೀಡಾಪಟುಗಳು 16 ಚಿನ್ನ, 23 ಬೆಳ್ಳಿ ಮತ್ತು 31 ಕಂಚಿನ ಪದಕಗಳನ್ನು ಗೆದ್ದು ತಮ್ಮ ಅತ್ಯುತ್ತಮ ಪ್ರದರ್ಶನವನ್ನು ದಾಖಲಿಸಿದ್ದರು.

ಹಾಕಿಯಲ್ಲಿ ಭಾರತ ಕಮಾಲ್

ಹಾಕಿಯಲ್ಲೂ ಭಾರತ ಕಮಾಲ್ ಮಾಡಿದೆ. 2014ರ ಬಳಿಕ ಮೊದಲ ಬಾರಿಗೆ ಚಿನ್ನ ಗೆದ್ದಿದೆ. ಈ ಮೂಲಕ ಮುಂಬರುವ ಒಲಂಪಿಕ್ಸ್ ಅಲ್ಲಿ ಆಡಲು ಅರ್ಹತೆ ಪಡೆದಿದೆ.

Categories
ತೀರ್ಥಹಳ್ಳಿ ರಾಜ್ಯ ರಾಷ್ಟ್ರೀಯ ವಾರ್ತೆ

ಡಾ.ಶ್ರೀಕರ ಕೊಳಿಗೆ ಅವರಿಗೆ ರಾಷ್ಟ್ರ ಮಟ್ಟದಲ್ಲಿ ಹುದ್ದೆ

ಡಾ.ಶ್ರೀಕರ ಕೊಳಿಗೆ ಅವರಿಗೆ ರಾಷ್ಟ್ರ ಮಟ್ಟದಲ್ಲಿ ಹುದ್ದೆ
– ಕೇಂದ್ರದ ಸಮಾಜ ಕಲ್ಯಾಣ ಇಲಾಖೆಯ ಸಂಸ್ಥೆಗೆ ಕಾರ್ಯಕಾರಿ ಸದಸ್ಯ ಸ್ಥಾನ

NAMMUR EXPRESS NEWS
ನವ ದೆಹಲಿ: ಕೇಂದ್ರ ಸರ್ಕಾರದ ಸಮಾಜ ಅಭಿವೃದ್ಧಿ ಮತ್ತು ವಿಕಲಚೇತನರ ಸಬಲೀಕರಣ ಇಲಾಖೆಯ ಅಧೀನದಲ್ಲಿರುವ ನ್ಯಾಷನಲ್ ಇನ್ಸ್ಟಿಟ್ಯೂಟ್ ಫಾರ್ ಎಂಪವರ್ಮೆಂಟ್ ಪರ್ಸನಲಿಟಿಸ್ ಇಂಟೆಲೆಕ್ಚ್ಯಲ್ ಡಿಸಬಲೀಸ್ ಸಂಸ್ಥೆಯ ಕಾರ್ಯಕಾರಿ ಕಮಿಟಿ ಸದಸ್ಯರಾಗಿ ಯುವ ಉದ್ಯಮಿ, ತೀರ್ಥಹಳ್ಳಿ ಮೂಲದ ಡಾ.ಶ್ರೀಕರಗೌಡ ನೇಮಕಗೊಂಡಿದ್ದಾರೆ.
ನರೇಂದ್ರ ಮೋದಿ ವಿಕಾಸ್ ಮಿಷನ್ ರಾಜ್ಯ ಉಪಾಧ್ಯಕ್ಷರಾಗಿರುವ ಯುವ ಉದ್ಯಮಿ ಡಾ. ಶ್ರೀಕರ ಗೌಡ ಅವರಿಗೆ ರಾಷ್ಟ್ರ ಮಟ್ಟದಲ್ಲಿ ಗೌರವ ಸಿಕ್ಕಿದೆ.

ಈಗಾಗಲೇ ಕೇಂದ್ರ ಸರ್ಕಾರದ ರೈಲ್ವೆ ಸಮಿತಿಯಲ್ಲಿ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಕೆಲಸ ಮಾಡುತ್ತಿದ್ದಾರೆ.
ನಿರ್ದೇಶಕ ಸ್ಥಾನ ಎರಡು ವರ್ಷದ ಅವಧಿ ಇದ್ದು ರಾಷ್ಟ್ರಮಟ್ಟದಲ್ಲಿ ಡಿಸಾಬಲಿಟೀಸ್ ಕ್ಷೇತ್ರದಲ್ಲಿ ಸೇವೆ ಸಲ್ಲಿಸಲಿದ್ದಾರೆ.

Categories
ರಾಷ್ಟ್ರೀಯ ವಾರ್ತೆ

ಮಾರುತಿ ಸುಜುಕಿ ಫ್ರಾಂಕ್ಸ್ ಕಾರಿಗೆ ಸಖತ್ ಡಿಮ್ಯಾಂಡ್

ಮಾರುತಿ ಸುಜುಕಿ ಫ್ರಾಂಕ್ಸ್ ಕಾರಿಗೆ ಸಖತ್ ಡಿಮ್ಯಾಂಡ್
– ಹೊಸ ಕಾರು ಹಲವಾರು ವಿಶೇಷತೆಗಳೊಂದಿಗೆ ಅಭಿವೃದ್ದಿ
– ಬಿಡುಗಡೆ ಆಗುತ್ತಿದ್ದಂತೆ ಭರ್ಜರಿ ಬೇಡಿಕೆ

NAMMUR EXPRESS NEWS
ದೇಶದ ಅಗ್ರ ಕಾರು ಉತ್ಪಾದನಾ ಕಂಪನಿಯಾಗಿರುವ ಮಾರುತಿ ಸುಜುಕಿ ತನ್ನ ಹೊಸ ಫ್ರಾಂಕ್ಸ್ ಕಂಪ್ಯಾಕ್ಟ್ ಎಸ್ ಯುವಿಯೊಂದಿಗೆ ಭರ್ಜರಿ ಬೇಡಿಕೆ ಪಡೆದುಕೊಳ್ಳುತ್ತಿದೆ. ವಿಶೇಷ ಫೀಚರ್ಸ್ ಗಳೊಂದಿಗೆ ದಾಖಲೆ ಪ್ರಮಾಣದ ಬುಕಿಂಗ್ ಪಡೆದುಕೊಳ್ಳುತ್ತಿದೆ. ವಿವಿಧ ಎಂಜಿನ್ ಆಯ್ಕೆ ಮತ್ತು ಆಕರ್ಷಕ ಬೆಲೆ ಹೊಂದಿರುವ ಹೊಸ ಕಾರು ಮಧ್ಯಮ ವರ್ಗದ ಗ್ರಾಹಕರ ಆಯ್ಕೆಯಲ್ಲಿ ಮುಂಚೂಣಿಯಲ್ಲಿದ್ದು, ಸಿಎನ್ ಜಿ ವರ್ಷನ್ ಬಿಡುಗಡೆಯ ನಂತರ ಮತ್ತಷ್ಟು ಬೇಡಿಕೆ ಹರಿದುಬರುತ್ತಿದೆ.

ಗ್ರ್ಯಾಂಡ್ ವಿಟಾರಾ ಎಸ್ ಯುವಿ ಮತ್ತು ಬಲೆನೊ ಪ್ರೀಮಿಯಂ ಹ್ಯಾಚ್ ಬ್ಯಾಕ್ ಕಾರಿನ ವಿನ್ಯಾಸ ಆಧರಿಸಿ ಅಭಿವೃದ್ದಿಗೊಂಡಿದೆ ಹೊಸ ಫ್ರಾಂಕ್ಸ್ ಕಾರು ವಿವಿಧ ವೆರಿಯೆಂಟ್ ಗಳೊಂದಿಗೆ ಎಕ್ಸ್ ಶೋರೂಂ ಪ್ರಕಾರ ರೂ. 7.47 ಲಕ್ಷದಿಂದ ರೂ. 13.14 ಲಕ್ಷ ಬೆಲೆ ಹೊಂದಿದೆ. ಹೊಸ ಕಾರಿನಲ್ಲಿ 1.0 ಲೀಟರ್ ಟರ್ಬೊ ಪೆಟ್ರೋಲ್ ಮತ್ತು 1.2 ಲೀಟರ್ ಎನ್ಎ ಪೆಟ್ರೋಲ್ ಎಂಜಿನ್ ಜೋಡಣೆ ಮಾಡಲಾಗಿದ್ದು, 1.2 ಲೀಟರ್ ಪೆಟ್ರೋಲ್ ಮಾದರಿಯಲ್ಲಿ ಸಿಎನ್ ಜಿ ವರ್ಷನ್ ಆವೃತ್ತಿಯನ್ನು ಪರಿಚಯಿಸಲಾಗಿದೆ.ಭಾರತದಲ್ಲಿ ಮಾರುತಿ ಸುಜುಕಿ ಕಂಪನಿಯು ಡೀಸೆಲ್ ಕಾರುಗಳ ಮಾರಾಟವನ್ನು ಸ್ಥಗಿತಗೊಳಿಸಿದ ನಂತರ ಸಂಪೂರ್ಣವಾಗಿ ಪೆಟ್ರೋಲ್, ಪೆಟ್ರೋಲ್ ಹೈಬ್ರಿಡ್ ಮತ್ತು ಸಿಎನ್ ಜಿ ಕಾರುಗಳ ಮೇಲೆ ಹೆಚ್ಚಿನ ಒತ್ತು ನೀಡುತ್ತಿದ್ದು, ಕಂಪನಿಯು ಇದುವರೆಗೆ ಸುಮಾರು 13 ಕಾರು ಮಾದರಿಗಳಲ್ಲಿ ಸಿಎನ್ ಜಿ ಆವೃತ್ತಿಗಳನ್ನು ಮಾರಾಟ ಮಾಡುತ್ತಿದೆ.

ಇದೀಗ ಹೊಸ ಫ್ರಾಂಕ್ಸ್ ಕಾರು ಮಾದರಿಯಲ್ಲೂ ಕೂಡಾ ಸಿಎನ್ ಜಿ ಆವೃತ್ತಿಯನ್ನು ಬಿಡುಗಡೆ ಮಾಡಿದ್ದು, ಎಸ್-ಸಿಎನ್ ಜಿ ತಂತ್ರಜ್ಞಾನದೊಂದಿಗೆ ಅತ್ಯುತ್ತಮ ಪರ್ಫಾಮೆನ್ಸ್ ಜೊತೆಗೆ ಭರ್ಜರಿ ಮೈಲೇಜ್ ಹಿಂದಿರುಗಿಸುತ್ತಿರುವುದು ಬೇಡಿಕೆ ಹೆಚ್ಚಳಕ್ಕೆ ಪ್ರಮುಖ ಕಾರಣವಾಗಿದೆ.

ಕಾರಲ್ಲಿ ಏನೇನು ಸೌಲಭ್ಯ ಇದೆ?

ಆಕರ್ಷಕ ಹೊರಭಾಗದ ವಿನ್ಯಾಸದ ಜೊತೆಗೆ ಐಷಾರಾಮಿ ಅನುಭವ ನೀಡುವ ಡ್ಯುಯಲ್ ಕಲರ್ ಕ್ಯಾಬಿನ್ ಸೌಲಭ್ಯವನ್ನು ಪಡೆದುಕೊಂಡಿದೆ. ಇದರಲ್ಲಿರುವ 7 ಇಂಚಿನ ಟಚ್ ಸ್ಕ್ರೀನ್ ಇನ್ಪೋಟೈನ್ ಮೆಂಟ್ ಸಿಸ್ಟಂ, ಸ್ಮಾರ್ಟ್ ಪ್ಲೇ ಪ್ರೋ ಸಿಸ್ಟಂ, ಸ್ಟಿರಿಂಗ್ ಮೌಂಟೆಡ್ ಕಂಟ್ರೋಲ್, ಆಟೋಮ್ಯಾಟಿಕ್ ಕ್ಲೈಮೆಟ್ ಕಂಟ್ರೋಲ್, ವೈರ್ ಲೆಸ್ ಅಂಡ್ರಾಯಿಡ್ ಆಟೋ ಮತ್ತು ಆ್ಯಪಲ್ ಕಾರ್ ಪ್ಲೇ ಗ್ರಾಹಕರನ್ನು ಆಕರ್ಷಿಸುತ್ತಿದ್ದು, ಸುರಕ್ಷತೆಗಾಗಿ ಡ್ಯುಯಲ್ ಏರ್ ಬ್ಯಾಗ್, ರಿವರ್ಸ್ ಪಾರ್ಕಿಂಗ್ ಸೆನ್ಸಾರ್ ಸೇರಿದಂತೆ ಹಲವಾರು ಸುರಕ್ಷಾ ಸೌಲಭ್ಯಗಳಿವೆ. ಇನ್ನು ಹೊಸ ಫ್ರಾಂಕ್ಸ್ ಸಿಎನ್ ಜಿ ಕಾರು ಮಾದರಿಯು ಸಾಮಾನ್ಯ ಸಿಗ್ಮಾ ಮತ್ತು ಡೆಲ್ಟಾ ಪೆಟ್ರೋಲ್ ಆವೃತ್ತಿಯಂತೆ ಹಲವಾರು ಫೀಚರ್ಸ್ ಹೊಂದಿದ್ದು, ಸಿಎನ್ ಜಿ ಕಿಟ್ ಜೋಡಣೆಯೊಂದಿಗೆ ಸಾಮಾನ್ಯ ಪೆಟ್ರೋಲ್ ಮಾದರಿಗಿಂತಲೂ ರೂ. 95 ಸಾವಿರದಷ್ಟು ದುಬಾರಿಯಾಗಿರಲಿದೆ

Categories
ರಾಷ್ಟ್ರೀಯ ವಾರ್ತೆ

2000 ರೂ.ನೋಟು ಬದಲಾವಣೆಗೆ ಕೊನೆ ದಿನ ಬಂತು!

2000 ರೂ.ನೋಟು ಬದಲಾವಣೆಗೆ ಕೊನೆ ದಿನ ಬಂತು!
– ಸೆ.30ರಂದು 2000 ನೋಟು ಬದಲಾವಣೆ ಕೊನೆ ದಿನ
– ಏನಿದು ನೋಟು ಬದಲಾವಣೆ ಮಾಹಿತಿ?

NAMMUR EXPRESS NEWS
ನವದೆಹಲಿ: ಕಳೆದ ಮೇ 19 ರಂದು 2000 ರೂಪಾಯಿ ಮುಖಬೆಲೆಯ ನೋಟುಗಳನ್ನು, ಚಲಾವಣೆಯಿಂದ ಹಿಂಪಡೆಯುವ ಘೋಷಣೆಯನ್ನು ಭಾರತೀಯ ರಿಸರ್ವ್ ಬ್ಯಾಂಕ್ ಮಾಡಿತ್ತು. ನೋಟುಗಳನ್ನು ಹಿಂದಿರುಗಿಸಲು 2023 ರ ಸೆಪ್ಟೆಂಬರ್ 30 ರವರೆಗೆ ಅವಕಾಶ ಕಲ್ಪಿಸಿತ್ತು. ಇದೀಗ ಗಡುವಿನ ಅವಧಿ ಸಮೀಪಿಸುತ್ತಿದೆ. ಚಲಾವಣೆಯಿಂದ ಹಿಂಪಡೆಯುವ ಘೋಷಣೆ ಮಾಡಿದ ನಂತರ, ಸಾರ್ವಜನಿಕರು ತಮ್ಮ ಬಳಿಯಿರುವ 2000 ರೂ. ನೋಟ್ ಗಳನ್ನು ಬ್ಯಾಂಕ್ ನ ಉಳಿತಾಯ ಖಾತೆಗೆ ಜಮೆ ಮಾಡಲು ಅಥವಾ ಬ್ಯಾಂಕ್ ನಲ್ಲಿ ವಿನಿಮಯ ಮಾಡಿಕೊಳ್ಳಲು ಆರ್.ಬಿ.ಐ. ಅವಕಾಶ ಕಲ್ಪಿಸಿತ್ತು. ಸೆ. 1 ರಂದು ಆರ್.ಬಿ.ಐ ನೀಡಿದ ಮಾಹಿತಿ ಅನುಸಾರ, ಈಗಾಗಲೇ ಶೇ. 93 ರಷ್ಟು 2000 ರೂ. ಮುಖಬೆಲೆಯ ನೋಟುಗಳು ಬ್ಯಾಂಕ್ ಗಳಿಗೆ ವಾಪಾಸ್ ಬಂದಿವೆ ಎಂದು ಹೇಳಿತ್ತು. ನೋಟುಗಳನ್ನು ಹಿಂದಿರುಗಿಸಲು ಪ್ರಸ್ತುತ ನೀಡಲಾಗಿರುಬ ಗಡುವು ಅವಧಿ

ವಿಸ್ತರಣೆಯಾಗಲಿದೆಯೇ? ಅಥವಾ ಇಲ್ಲವೇ?

ಎಂಬುವುದರ ಬಗ್ಗೆ ಇಲ್ಲಿಯವರೆಗೂ ಆರ್.ಬಿ.ಐ ಯಾವುದೇ ಪ್ರಕಟಣೆ ಹೊರಡಿಸಿಲ್ಲ. ಮೂಲಗಳ ಪ್ರಕಾರ ಗಡುವು ಅವಧಿ ವಿಸ್ತರಣೆಯಾಗುವ ಸಾಧ್ಯತೆಗಳು ವಿರಳ ಎಂದು ಹೇಳಲಾಗುತ್ತಿದೆ. 2016 ರ ನವೆಂಬರ್ ತಿಂಗಳಲ್ಲಿ ಕೇಂದ್ರ ಸರ್ಕಾರವು 500 ಹಾಗೂ 1000 ರೂ. ಮುಖಬೆಲೆಯ ನೋಟುಗಳ ಅಮಾನ್ಯೀಕರಣ ಮಾಡಿತ್ತು. ನೋಟ್‌ ಬ್ಯಾನ್‌ ನಂತರ 500 ಮತ್ತು 2000 ರೂಪಾಯಿ ಮುಖಬೆಲೆಯ ಹೊಸ ನೋಟುಗಳು ಚಲಾವಣೆ ಜಾರಿಗೊಳಿಸಿತ್ತು.

Categories
ರಾಷ್ಟ್ರೀಯ ವಾರ್ತೆ

ರೈಲು ಅಪಘಾತ ತಪ್ಪಿಸಿ ನೂರಾರು ಜನರ ಪ್ರಾಣ ಉಳಿಸಿದ ಬಾಲಕ!

ರೈಲು ಅಪಘಾತ ತಪ್ಪಿಸಿ ನೂರಾರು ಜನರ ಪ್ರಾಣ ಉಳಿಸಿದ ಬಾಲಕ!
-ರೈಲ್ವೆ ಹಳಿಯ ಒಂದು ಭಾಗವು ಹಾನಿ.. ಏನಿದು ಸ್ಟೋರಿ

NAMMUR EXPRESS NEWS
ಬಾಲಕನ ಸಮಯಪ್ರಜ್ಞೆಯಿಂದ ಬಹುದೊಡ್ಡ ರೈಲು ಅಪಘಾತ ತಪ್ಪಿದ ಘಟನೆ ಪಶ್ಚಿಮ ಬಂಗಾಳದಲ್ಲಿ ನಡೆದಿದೆ. ಮುರ್ಸಲೀನ್ ಶೇಖ್ ಎಂಬ 12 ವರ್ಷದ ಬಾಲಕ ಹೊಲದಲ್ಲಿ ಕೆಲಸ ಮಾಡುವ ಕಾರ್ಮಿಕನ ಮಗ. ಅಂದು ತಂದೆಯೊoದಿಗೆ ಹೊಲಕ್ಕೆ ಬಂದಿದ್ದ ಮುರ್ಸಲಿನ್ ರೈಲ್ವೆ ಹಳಿಯ ಒಂದು ಭಾಗವು ಹಾನಿಗೊಳಗಾಗಿರುವುದನ್ನು ಗಮನಿಸಿದ್ದಾನೆ. ಇನ್ನೇನು ರೈಲು ಬಂದೇ ಬಿಡುತ್ತದೆ ಏನು ಮಾಡುವುದು ಎಂದು ಆಲೋಚಿಸಿ ತಕ್ಷಣ ತಾನು ಧರಿಸಿರುವ ಕೆಂಪು ಟಿ ಶರ್ಟ್ ತೆಗೆದು ರೈಲು ಬರುತ್ತಿದ್ದ ಕಡೆಗೆ ಬೀಸುತ್ತಾನೆ. ರೈಲಿನ ಲೊಕೊಮೊಟಿವ್ ಪೈಲಟ್ ಸಿಗ್ನಲ್ ಗುರುತಿಸಿ ತುರ್ತು ಬ್ರೇಕ್ ಹಾಕಿದ್ದರಿಂದ ಅಪಘಾತ ತಪ್ಪಿತ್ತು. ಕಳೆದ ಒಂದು ವಾರದಿಂದ ಆ ಭಾಗದಲ್ಲಿ ಭಾರಿ ಮಳೆಯಾಗಿತ್ತು, ಇದರಿಂದಾಗಿ ರೈಲು ಹಳಿ ಹಾಳಾಗಿತ್ತು, ಬಾಲಕನ ಸಮಯಪ್ರಜ್ಞೆಯಿಂದ ಅಪಘಾತ ತಪ್ಪಿದೆ, ಜತೆಗೆ ಜನರ ಜೀವವೂ ಉಳಿದಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.

Categories
ರಾಜಕೀಯ ರಾಜ್ಯ ರಾಷ್ಟ್ರೀಯ ವಾರ್ತೆ

ಲೋಕಸಭೆಗೆ ಬಿಜೆಪಿ-ಜೆಡಿಎಸ್ ಮೈತ್ರಿ

ಲೋಕಸಭೆಗೆ ಬಿಜೆಪಿ-ಜೆಡಿಎಸ್ ಮೈತ್ರಿ
– ದೆಹಲಿಯಲ್ಲಿ ಬಿಜೆಪಿ ಅಧ್ಯಕ್ಷ. ನಡ್ದಾ ಘೋಷಣೆ
– ಕುಮಾರಸ್ವಾಮಿ, ದೇವೇಗೌಡರಿಂದ ನಾಯಕರ ಭೇಟಿ

NAMMUR EXPRESS NEWS
ನವದೆಹಲಿ: ರಾಷ್ಟ್ರೀಯ ಬಿಜೆಪಿ ಅಧ್ಯಕ್ಷ. ನಡ್ದಾ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಭೇಟಿ ಬಳಿಕ ಜೆಡಿಎಸ್ ಜತೆ ಬಿಜೆಪಿ ಮೈತ್ರಿ ಘೋಷಣೆ ಆಗಿದೆ. ದೆಹಲಿಯಲ್ಲಿ ನಡ್ದಾ ಘೋಷಣೆ ಮಾಡಿದ್ದಾರೆ. ದೆಹಲಿಯಲ್ಲಿ ಈ ನಾಯಕರ ಜತೆ ಕುಮಾರಸ್ವಾಮಿ, ದೇವೇಗೌಡರು ಮಾತುಕತೆ ನಡೆಸಿದ ಬಳಿಕ ಈ ಘೋಷಣೆ ಮಾಡಲಾಗಿದೆ. ರಾಜ್ಯದಲ್ಲಿ ಕಾಂಗ್ರೆಸ್ ಮಣಿಸಲು ಬಿಜೆಪಿ ಜೆಡಿಎಸ್ ಒಂದಾಗಿ ಹೋರಾಟಕ್ಕೆ ವೇದಿಕೆ ಸಿದ್ಧಮಾಡಿಕೊಂಡಿವೆ. ಮಂಡ್ಯ, ಹಾಸನ, ಮೈಸೂರು ಭಾಗದ ಮೇಲೆ ಜೆಡಿಎಸ್ ಕಣ್ಣಿಟ್ಟಿದ್ದು ರಾಜ್ಯದ ಮತ್ತೆಲ್ಲಾ ಕಡೆ ಜೆಡಿಎಸ್ ಈ ಬಾರಿ ಬಿಜೆಪಿಗೆ ಬೆಂಬಲ ನೀಡಲಿದೆ.

Categories
ರಾಷ್ಟ್ರೀಯ ವಾರ್ತೆ

ಮಹಿಳಾ ಮೀಸಲಾತಿ ಮಸೂದೆ ಪಾಸ್!

ಮಹಿಳಾ ಮೀಸಲಾತಿ ಮಸೂದೆ ಪಾಸ್!
– ಪ್ರಧಾನಿ ಮೋದಿ ಅಭಿನಂದಿಸಿದ ಮಹಿಳಾ ಸಂಸದರು
– ಇನ್ಮುಂದೆ ರಾಜಕೀಯದಲ್ಲಿ ಶೇ.33 ಮೀಸಲಾತಿ
– ಲೋಕ ಸಭೆ, ವಿಧಾನ ಸಭೆಯಲ್ಲಿ ಮಹಿಳೆಯರಿಗೆ ಹೆಚ್ಚು ಸ್ಥಾನ

NAMMUR EXPRESS NEWS
ನವದೆಹಲಿ: ಗುರುವಾರ ರಾತ್ರಿ ಐತಿಹಾಸಿಕ ಮಹಿಳಾ ಮೀಸಲಾತಿ ಮಸೂದೆ, ನಾರಿ ಶಕ್ತಿ ವಂದನ್ ಅಧಿನಿಯಂ ಅಂಗೀಕಾರದ ನಂತರ ಪ್ರಧಾನಿ ಮೋದಿ ಅವರು ಮಹಿಳಾ ಸಂಸದರನ್ನು ಭೇಟಿ ಮಾಡಿ ಅಭಿನಂದಿಸಿದ್ದಾರೆ. ‘ಭಾರತವು ಉಜ್ವಲ, ಹೆಚ್ಚು ಅಂತರ್ಗತ ಭವಿಷ್ಯದ ಹೊಸ್ತಿಲಲ್ಲಿ ನಿಂತಿದೆ. ಬದಲಾವಣೆಯ ಜ್ಯೋತಿಯನ್ನು ಹೊತ್ತವರು, ತಾವು ಪ್ರತಿಪಾದಿಸಿದ ಶಾಸನವನ್ನು ಆಚರಿಸಲು ಒಗ್ಗೂಡುವುದನ್ನು ನೋಡುವುದು ಸಂತೋಷದ ಸಂಗತಿ’ ಎಂದಿದ್ದಾರೆ.

ಪ್ರಧಾನಿಯವರು ಮಹಿಳಾ ಸಂಸದರೊಂದಿಗೆ ಛಾಯಾಚಿತ್ರಕ್ಕೆ ಪೋಸ್ ನೀಡಿದರು, ಅವರಲ್ಲಿ ಹಲವರು ಮಸೂದೆ ಅಂಗೀಕಾರದ ಸಂಭ್ರಮ ಆಚರಿಸಲು ಸಿಹಿ ಹಂಚಿದರು. ಮಹಿಳಾ ಸಂಸದರು ಪ್ರಧಾನಿಯನ್ನು ಅಭಿನಂದಿಸಿ ಸಿಹಿ ಹಂಚಿ ಸಂಭ್ರಮಿಸಿದರು. ಮಸೂದೆಯ ಅಂಗೀಕಾರದಲ್ಲಿ ಪ್ರಧಾನಿ ಅವರ ನಿರ್ಣಾಯಕ ನಾಯಕತ್ವಕ್ಕಾಗಿ ಅನೇಕ ಮಹಿಳಾ ಸದಸ್ಯರು ಸಹ ಪ್ರಶಂಸಿಸಿದ್ದಾರೆ. ಪ್ರಧಾನಿ ಮೋದಿ ಅವರು ಶಾಸನವನ್ನು ಬೆಂಬಲಿಸಿದ್ದಕ್ಕಾಗಿ ಸಂಸದರಿಗೆ ಕೃತಜ್ಞತೆ ಸಲ್ಲಿಸಿದರು.