Categories
ರಾಷ್ಟ್ರೀಯ ವಾರ್ತೆ

ಹೋಟೆಲ್ ಉದ್ದಿಮೆದಾರರಿಗೆ ಗುಡ್‌ನ್ಯೂಸ್..!!

ಹೋಟೆಲ್ ಉದ್ದಿಮೆದಾರರಿಗೆ ಗುಡ್‌ನ್ಯೂಸ್..!!
– ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆ ಇಳಿಕೆ
– ಭಾರತದಲ್ಲಿ ಶೇಕಡಾ 90 ರಷ್ಟು ಎಲ್‌ಪಿಜಿ ಬಳಕೆ

NAMMUR EXPRESS NEWS
ಹೊಸದಿಲ್ಲಿ: ತೈಲ ಮಾರುಕಟ್ಟೆಗಳು ವಾಣಿಜ್ಯ ಬಳಕೆಯ 19 ಕೆಜಿ ಎಲ್‌ಪಿಜಿ ಸಿಲಿಂಡರ್ ದರವನ್ನು ಇಳಿಸಿದೆ. ಇದರಿಂದ 51.50 ರೂ ನಷ್ಟು ಬೆಲೆ ಇಳಿಕೆ ಆಗಿದ್ದು, ಹೊಸ ದರ ಸಿಲಿಂಡರ್ ಒಂದಕ್ಕೆ 1580 ರೂ ಆಗಲಿದ್ದು, ಇಂದಿನಿಂದಲೇ ಜಾರಿಗೆ ಬರಲಿದೆ. ಆದರೆ ಗೃಹ ಬಳಕೆಯ 14.2 ಕೆಜಿ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಯಾವುದೇ ವ್ಯತ್ಯಾಸ ಆಗಿಲ್ಲ. ಕಳೆದ ಕೆಲವು ತಿಂಗಳುಗಳಿಂದ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯನ್ನು ಇಳಿಕೆ ಮಾಡುತ್ತಾ ಬರಲಾಗಿದೆ. ಇದರಿಂದ ವ್ಯಾಪಾರ ಮಾಡುವವರಿಗೆ, ಹೋಟೆಲ್ ಉದ್ದಿಮೆಯವರಿಗೆ ಅನುಕೂಲವಾಗಲಿದೆ.

ಯಾವ ತಿಂಗಳಲ್ಲಿ ಎಷ್ಟು ಇಳಿಕೆ?
ಕಳೆದ ತಿಂಗಳು ಆಗಸ್ಟ್ 1 ರಂದು ಸಹ ತೈಲ ಕಂಪನಿಗಳು ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯನ್ನು 33.50 ರೂಪಾಯಿಗಳಷ್ಟು ಕಡಿಮೆ ಮಾಡಿದ್ದವು. ಅದಕ್ಕೂ ಮೊದಲು ಜುಲೈ 1 ರಂದು 58.50 ರೂಪಾಯಿಗಳಷ್ಟು ಬೆಲೆ ಕಡಿತ ಮಾಡಲಾಗಿತ್ತು. ಜೂನ್ ತಿಂಗಳಲ್ಲಿ ವಾಣಿಜ್ಯ ಸಿಲಿಂಡರ್‌ಗಳ ಬೆಲೆಯನ್ನು 24 ರೂಪಾಯಿಗಳಷ್ಟು ಕಡಿತಗೊಳಿಸಲಾಗಿತ್ತು. ಆಗ ದರ 1,723.50 ರೂಪಾಯಿ ಇತ್ತು. ಏಪ್ರಿಲ್‌ನಲ್ಲಿರ ಗ್ಯಾಸ್ ಬೆಲೆ 1,762 ರೂಪಾಯಿ ಆಗಿತ್ತು. ಫೆಬ್ರವರಿಯಲ್ಲಿ 7 ರೂಪಾಯಿ ಕಡಿಮೆ ಮಾಡಲಾಗಿತ್ತು. ಆದರೆ ಮಾರ್ಚ್‌ನಲ್ಲಿ 6 ರೂಪಾಯಿ ಹೆಚ್ಚಿಸಲಾಗಿತ್ತು ಎಂಬುದು ಅಂಕಿಅಂಶಗಳು ಹೇಳುತ್ತವೆ.

ಭಾರತದಲ್ಲಿ ಶೇಕಡಾ 90 ರಷ್ಟು ಎಲ್‌ಪಿಜಿಯನ್ನು ಅಡುಗೆಗೆ ಬಳಸಲಾಗುತ್ತದೆ. ಉಳಿದ ಶೇಕಡಾ 10 ರಷ್ಟನ್ನು ಮಾತ್ರ ವಾಣಿಜ್ಯ, ಕೈಗಾರಿಕೆ ಮತ್ತು ವಾಹನಗಳಿಗೆ ಬಳಸಲಾಗುತ್ತದೆ. ವಾಣಿಜ್ಯ ಸಿಲಿಂಡರ್‌ಗಳ ಬೆಲೆ ಏರಿಳಿತವಾದರೂ, ಮನೆಯ ಸಿಲಿಂಡರ್‌ಗಳ ಬೆಲೆ ಸಾಮಾನ್ಯವಾಗಿ ಸ್ಥಿರವಾಗಿರುತ್ತದೆ. ಕಳೆದ ಹತ್ತು ವರ್ಷಗಳಲ್ಲಿ ಮನೆಯ ಎಲ್‌ಪಿಜಿ ಸಂಪರ್ಕಗಳು ಸುಮಾರು 33 ಕೋಟಿಗೆ ಹೆಚ್ಚಳ ಆಗಿದೆ. ಅಡುಗೆ ಅನಿಲವು ಭಾರತದ ದೈನಂದಿನ ಜೀವನಕ್ಕೆ ಎಷ್ಟು ಆಳವಾಗಿ ಸಂಬಂಧಿಸಿದೆ ಎಂಬುದನ್ನು ತೋರಿಸುತ್ತದೆ. ಕಂಪನಿಗಳು ಬೆಲೆ ಕಡಿಮೆ ಮಾಡಿರುವುದರಿಂದ, ವ್ಯಾಪಾರಸ್ಥರಿಗೆ ಸ್ವಲ್ಪ ಮಟ್ಟಿಗೆ ಸಹಾಯವಾಗುತ್ತದೆ. ಸಣ್ಣ ಹೋಟೆಲ್ ಮತ್ತು ಟೀ ಅಂಗಡಿ ನಡೆಸುವವರಿಗೆ ಇದು ಅನುಕೂಲಕರವಾಗಲಿದೆ. ಇತ್ತೀಚಿನ ಮಾಸಿಕ ಪರಿಷ್ಕರಣೆಯ ನಂತರ ದೇಶಾದ್ಯಂತ ವಾಣಿಜ್ಯ ಗ್ರಾಹಕರಿಗೆ ಬೆಲೆ ಕಡಿತವು ಲಾಭ ತಂದಿದೆ.

ವಾಣಿಜ್ಯ ಅನಿಲ ಸಿಲಿಂಡರ್‌ಗಳ ಬೆಲೆ ಹೊಂದಾಣಿಕೆಯು ದೈನಂದಿನ ಕಾರ್ಯಾಚರಣೆಗಳಿಗೆ ಈ ಎಲ್‌ಪಿಜಿ ಸಿಲಿಂಡರ್‌ಗಳನ್ನು ಬಳಸುವ ರೆಸ್ಟೋರೆಂಟ್‌ಗಳು, ಹೋಟೆಲ್‌ಗಳು ಮತ್ತು ಇತರ ವಾಣಿಜ್ಯ ಸಂಸ್ಥೆಗಳಿಗೆ ನೇರವಾಗಿ ಪ್ರಯೋಜನವನ್ನು ನೀಡುತ್ತದೆ. ಬೆಲೆ ಹೊಂದಾಣಿಕೆಗಳು ಜಾಗತಿಕ ಕಚ್ಚಾ ತೈಲ ಬೆಲೆಗಳು ಮತ್ತು ಇತರ ಮಾರುಕಟ್ಟೆ ಅಂಶಗಳ ಆಧಾರದ ಮೇಲೆ ನಿಯಮಿತ ಮಾಸಿಕ ಪರಿಷ್ಕರಣೆಗಳ ಭಾಗವಾಗಿದೆ. ಪ್ರಧಾನಿ ನರೇಂದ್ರ ಮೋದಿಯವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟವು ಈ ತಿಂಗಳು 2025-26ರ ಹಣಕಾಸು ವರ್ಷದಲ್ಲಿ ಪ್ರಧಾನ ಮಂತ್ರಿ ಉಜ್ವಲ ಯೋಜನೆಯ (ಪಿಎಂಯುವೈ) ಫಲಾನುಭವಿಗಳಿಗೆ ವರ್ಷಕ್ಕೆ 9 ಮರುಪೂರಣಗಳಿಗೆ (ಮತ್ತು 5 ಕೆಜಿ ಸಿಲಿಂಡರ್‌ಗೆ ಅನುಗುಣವಾಗಿ ಅನುಪಾತದಲ್ಲಿ) 14.2 ಕೆಜಿ ಸಿಲಿಂಡರ್‌ಗೆ 300 ರೂ.ಗಳ ಬೆಲೆಯನ್ನು ಅನುಮೋದಿಸಿದೆ. ಇದಕ್ಕಾಗಿ ಕೇಂದ್ರ ಸರಕಾರ ರೂ. 12,000 ಕೋಟಿ ವೆಚ್ಚ ಮಾಡಿದೆ.

ದೇಶಾದ್ಯಂತ ಬಡ ಕುಟುಂಬಗಳ ವಯಸ್ಕ ಮಹಿಳೆಯರಿಗೆ ಠೇವಣಿ-ಮುಕ್ತ ಎಲ್‌ಪಿಜಿ ಸಂಪರ್ಕಗಳನ್ನು ಒದಗಿಸುವ ಉದ್ದೇಶದಿಂದ ಪ್ರಧಾನ ಮಂತ್ರಿ ಉಜ್ವಲ ಯೋಜನೆ (ಪಿಎಂಯುವೈ) ಅನ್ನು ಮೇ 2016 ರಲ್ಲಿ ಪ್ರಾರಂಭಿಸಲಾಯಿತು. ಜುಲೈ 1, 2025 ರ ಹೊತ್ತಿಗೆ, ದೇಶಾದ್ಯಂತ ಸುಮಾರು 10.33 ಕೋಟಿ ಪ್ರಧಾನ ಮಂತ್ರಿ ಉಜ್ವಲ ಯೋಜನೆಯ ಸಂಪರ್ಕಗಳಿವ, ಇದರಿಂದ ಕಡಿಮೆ ಬೆಲೆಗೆ ಗ್ಯಾಸ್ ಸಿಲಿಂಡರ್ ದೊರೆಯಲಿದ್ದು, ಸಬ್ಸಿಡಿ ಹಣ ನೆರವಾಗುತ್ತಿದೆ.

Categories
ರಾಷ್ಟ್ರೀಯ ವಾರ್ತೆ

300 ಮಂದಿ ಸಾವು ಸಾಧ್ಯತೆ!?

300 ಮಂದಿ ಸಾವು ಸಾಧ್ಯತೆ!?
– ದೇಶದಲ್ಲೇ ದೊಡ್ಡ ದುರಂತ: ವಿಮಾನದಲ್ಲಿದ್ದವರೆಲ್ಲ ಸಾವು!
– ವಿಮಾನ ಪತನ: ಹಾಸ್ಟೆಲ್ ವಿದ್ಯಾರ್ಥಿಗಳ ದುರ್ಮರಣ
* 30ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸಾವು ಸಾಧ್ಯತೆ

NAMMMUR EXPRESS NEWS
ಅಹಮದಾಬಾದ್: ಗುಜರಾತ್​ನ ಅಹಮದಾಬಾದ್​‌ನಲ್ಲಿ ವಿಮಾನವೊಂದು ನಿರ್ಮಾಣ ಹಂತದ ಕಟ್ಟಡದ ಮೇಲೆ ಪತನಗೊಂಡಿರುವ ಘಟನೆಯಲ್ಲಿ ವಿಮಾನದಲ್ಲಿದ್ದ 242 ಮಂದಿಯೂ ಮೃತಪಟ್ಟಿದ್ದಾರೆ.
ಸಂಜೆ 6:10ಕ್ಕೆ ಬ್ರಿಟನ್ ತಲುಪಬೇಕಾಗಿದ್ದ ವಿಮಾನ ಟೇಕ್ ಆಫ್ ಆಗುತ್ತಿದ್ದಂತೆ ವಿಮಾನ ಪತನವಾಗಿದೆ. ಏರ್ ಇಂಡಿಯಾ ವಿಮಾನದಲ್ಲಿ 242 ಪ್ರಯಾಣಿಕರಿದ್ದರು. 58 ಸಾವಿರ ಲೀಟರ್ ಪೆಟ್ರೋಲ್ ಇತ್ತು.
ಗುಜರಾತ್‌ನ ಮಾಜಿ ಸಿಎಂ ವಿಜಯ್ ರುಪಾನಿ ಸೇರಿ ಎಲ್ಲಾ ಪ್ರಯಾಣಿಕರು ಸಾವನ್ನು ಕಂಡಿದ್ದಾರೆ. 600 ಅಡಿ ಎತ್ತರದಿಂದ ವಿಮಾನ ಪತನವಾಗಿದೆ . 5ಕ್ಕೂ ಹೆಚ್ಚು ಕಟ್ಟಡ ಸುಟ್ಟು ಹೋಗಿದೆ.
ವಿಮಾನದಲ್ಲಿ ಗುಜರಾತ್ ಮಾಜಿ ಮುಖ್ಯಮಂತ್ರಿ ವಿಜಯ್ ರೂಪಾನಿ ಸೇರಿದಂತೆ 217 ವಯಸ್ಕರು,11 ಮಕ್ಕಳು,2 ಶಿಶುಗಳು ಮತ್ತು 53 ಬ್ರಿಟೀಷ್ ಪ್ರಜೆಗಳು ಪ್ರಯಾಣಿಸುತ್ತಿದ್ದರು ಎನ್ನಲಾಗಿದೆ. ಸಾವಿನ ಸಂಖ್ಯೆ ಇನ್ನು ಹೆಚ್ಚಾಗುವ ಸಾಧ್ಯತೆ ಇದೆ. ಅಲ್ಲದೆ ಈ ಘಟನೆ ವಿಮಾನ ಯಾನ ಎಷ್ಟು ಸೇಫ್ ಎಂಬ ಬಗ್ಗೆಯೂ ಚರ್ಚೆ ಹುಟ್ಟು ಹಾಕಿದೆ.
2010 ಮೇ 22ರಂದು ಮಂಗಳೂರು ವಿಮಾನ ನಿಲ್ದಾಣ ಬಜ್ಪೆ ಸಮೀಪ 158 ಮಂದಿ ವಿಮಾನ ಪತನವಾಗಿ ಸಾವನ್ನು ಕಂಡಿದ್ದರು.

Categories
ರಾಷ್ಟ್ರೀಯ ವಾರ್ತೆ

ಪಾಕ್ ಹಾರಾಟಕ್ಕೆ ಭಾರತದ”ಬ್ರಹ್ಮೋತ್ತರ”..!

ಪಾಕ್ ಹಾರಾಟಕ್ಕೆ ಭಾರತದ”ಬ್ರಹ್ಮೋತ್ತರ”..!
– ಭಾರತೀಯರ ಹೆಮ್ಮೆಯ ಆಪರೇಷನ್ ಆಪರೇಷನ್ ಸಿಂಧೂರ
– ಜಗತ್ತಿನಲ್ಲಿ ಗಮನ ಸೆಳೆದ ಬ್ರಹ್ಮೋಸ್ ಕ್ರೂಸ್ ಕ್ಷಿಪಣಿ!

ವಿಶೇಷ ಲೇಖನ: ಪ್ರೀತಮ್ ಹೆಬ್ಬಾರ್

ಭಾರತ ಕೇವಲ ಮುಂದುವರಿಯುತ್ತಿರುವ ರಾಷ್ಟ್ರವಲ್ಲದೆ ಎಲ್ಲಾ ವಿಷಯಗಳಲ್ಲೂ ಶತ್ರು ರಾಷ್ಟ್ರಕ್ಕೆ ತಕ್ಕ ಉತ್ತರವನ್ನು ಕೊಡುವಂತಹ ಬಲಿಷ್ಠ ರಾಷ್ಟ್ರವಾಗಿ ಬೆಳೆದಿದೆ ಎಂಬುವುದನ್ನು ಭಾರತ ಜಗತ್ತಿಗೆ ಮತ್ತೊಮ್ಮೆ ಸಾಭೀತು ಪಡಿಸಿದೆ. ಇತ್ತೀಚೆಗೆ ಪಹಲ್ಗಾಮ್‌ನಲ್ಲಿ ಹಿಂದೂ ಪ್ರವಾಸಿಗರ ಮೇಲೆ ನಡೆದ ಹತ್ಯಾಕಾಂಡದ ಪ್ರತಿಕಾರವಾಗಿ ಭಾರತ ಇದಕ್ಕೆ ಕಾರಣರಾದವರನ್ನು ಸದೆಬಡೆಯುವುದಾಗಿ ಘೋಷಿಸಿತ್ತು. ಇದರ ಬೆನ್ನಲೇ ಭಾರತೀಯ ಸೇನೆಯು ಪಾಕಿಸ್ತಾನದ ಉಗ್ರರ ದಮನ ಮಾಡುವಲ್ಲಿ ಯಶಸ್ವಿ ಕೂಡ ಆಗಿದೆ.
ಬ್ರಹ್ಮೋಸ್ ಕ್ರೂಸ್ ಕ್ಷಿಪಣಿ ದಾಳಿಯಿಂದ ಪಾಕಿಸ್ತಾನ ಮತ್ತು ಭಯೋತ್ಪಾದಕರು ಭಯಭೀತರಾಗಿದ್ದರು. ಆಪರೇಷನ್ ಸಿಂಧೂರ್‌ ಹೆಸರಿನಲ್ಲಿ ಕಾರ್ಯಾಚರಣೆ ನಡೆಸಿದ ಭಾರತೀಯ ಸೇನೆ ಬ್ರಹ್ಮೋಸ್ ಎಂಬ ಕ್ರೂಸ್ ಕ್ಷಿಪಣಿಯ ಹೊಡೆತಕ್ಕೆ ಪಾಕಿಸ್ತಾನ ಅಕ್ಷರಶಃ ನಲುಗಿ ಹೋಗಿದೆ.

ಬ್ರಹ್ಮೋಸ್ ಹಿನ್ನೆಲೆ ಏನು?

ಭಾರತದ ಸ್ವನಿರ್ಮಿತ ಬ್ರಹ್ಮಾಸ್ತ್ರ ಈ ಬ್ರಹ್ಮೋಸ್ ಗೆ ಈ ಹೆಸರು ಬರಲು ಮುಖ್ಯವಾದ ಹಿನ್ನೆಲೆ ಕೂಡ ಇದೆ. ಭಾರತದ ಬ್ರಹ್ಮಪುತ್ರ ಮತ್ತು ರಷ್ಯಾದ ಮೊಸ್ಕ್ವಾ ಎಂಬ ಎರಡು ನದಿಗಳ ಹೆಸರುಗಳ ಸಂಯೋಜನೆಯೇ ಈ ಬ್ರಹ್ಮೋಸ್ ಯಾಗಿದೆ. ಭಾರತದ DRDO ಮತ್ತು ರಷ್ಯಾದ NPO ಜಂಟಿಯಾಗಿ ಈ ಬ್ರಹ್ಮೋಸ್ ಕ್ಷಿಪಣಿಯನ್ನ ಅಭಿವೃದ್ಧಿಪಡಿಸಿವೆ. ಹೈದರಾಬಾದ್ ನ ನಾಗ್ಪುರದಲ್ಲಿ ಬ್ರಹ್ಮೋಸ್ ತಯಾರಿಕಾ ಘಟಕ ಕಾರ್ಯನಿರ್ವಹಿಸುತ್ತಿದೆ. ಜೊತೆಗೆ ಉತ್ತರ ಪ್ರದೇಶದ ಲಕ್ನೋದಲ್ಲಿನ ಇನ್ನೊಂದು ತಯಾರಿಕಾ ಘಟಕವನ್ನ ಇತ್ತೀಚೆಗಷ್ಟೇ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಲೋಕಾರ್ಪಣೆ ಮಾಡಿದ್ದಾರೆ.

ಬ್ರಹ್ಮೋಸ್ ದಾಳಿಗೆ ಪಾಕ್ ತತ್ತರ

ಬ್ರಹ್ಮೋಸ್ ಕ್ರೂಸ್ ಕ್ಷಿಪಣಿಯ ಎಷ್ಟು ಪರಿಣಾಮಕಾರಿಯಾಗಿ ಕೆಲಸವನ್ನು ನಿರ್ವಹಿಸಲಿದೆ ಎಂದರೆ ಅದು ಭೂಮಿ, ವಾಯು ಮತ್ತು ಹಡಗು ಎಲ್ಲಿಂದ ಬೇಕಾದರೂ ಶತ್ರುಗಳ ಮೇಲೆ ದಾಳಿ ಮಾಡುವ ಸಾಮರ್ಥ್ಯವನ್ನು ಹೊಂದಿದೆ. ಎಂಬ ಅಂಶದಿಂದಲೇ ಅರ್ಥಮಾಡಿಕೊಳ್ಳಬಹುದು.
ಬ್ರಹ್ಮೋಸ್ ಬರೋಬ್ಬರಿ 800 ಕಿಲೋ ಮೀಟರ್ ರೇಂಜ್ ಹೊಂದಿದೆ. ನಿಮಿಷಗಳಲ್ಲಿ 300 ಕಿಲೋ ಮೀಟರ್ ಸಾಗುವ ಸಾಮರ್ಥ್ಯವಿದೆ. ಒಂದೇ ಸಾರಿ 300 ಕೆಜಿಯ ಸ್ಫೋಟಕ ಹೊತ್ತೊಯ್ಯಬಲ್ಲ ಸಾಮರ್ಥ್ಯವಿದ್ದು, ಜಿಪಿಎಸ್ ಆಧಾರಿತ ಗೈಡೆಡ್ ಸಿಸ್ಟಮ್ ನಮ್ಮ ಹೆಮ್ಮೆಯ ಈ ಬ್ರಹ್ಮೋಸ್ನಲ್ಲಿದೆ. ಬ್ರಹ್ಮೋಸ್‌ ಕ್ಷಿಪಣಿಯನ್ನು ಒಮ್ಮೆ ಉಡಾಯಿಸಿದ ನಂತರ, ಕ್ಷಿಪಣಿಯು ಮೊದಲೇ ಪ್ರೋಗ್ರಾಮ್ ಮಾಡಲಾದ ಹಾರಾಟದ ಮಾರ್ಗಗಳು ಮತ್ತು ಸುಧಾರಿತ ಸೀಕರ್‌ಗಳನ್ನು ಬಳಸಿಕೊಂಡು ಗುರಿಯತ್ತ ಸ್ವತಃ ಹೋಗಿ ದಾಳಿಮಾಡುವ ಸಾಮರ್ಥ್ಯವನ್ನು ಕೂಡ ಹೊಂದಿದೆ. ಹಾಗೂ ಇದು ಯಾವುದೇ ಹವಾಮಾನ ಪರಿಸ್ಥಿತಿಯಲ್ಲಿ, ಹಗಲು ಅಥವಾ ರಾತ್ರಿಯಲ್ಲೂ ಪರಿಣಾಮಕಾರಿಯಾಗಿ ಕಾರ್ಯನಿರ್ವಹಣೆ ಮಾಡಬಹುದಾದ ಅತ್ಯುತ್ತಮ ತಂತ್ರಜ್ಞಾನವನ್ನು ಕೂಡ ಹೊಂದಿದೆ. ಜೊತೆಗೆ ಇದರ ದಾಳಿಯಿಂದ ಯಾರೂ ಕೂಡ ತಪ್ಪಿಸಿಕೊಳ್ಳಲು ಅಸಾಧ್ಯವಾಗಿದೆ. ಈ ಹಿನ್ನೆಲೆಯಲ್ಲಿ ನಮ್ಮ ಹೆಮ್ಮೆಯ ಬ್ರಹ್ಮೋಸ್ ಹೊಡೆತಕ್ಕೆ ಶತ್ರು ರಾಷ್ಟ್ರ ಪಾಕಿಸ್ತಾನ ನುಚ್ಚು ನೂರಾಗಿ ಹೋಗಿ ಅಮೆರಿಕದ ಬಳಿ ಗೋಗರೆದು ಭಾರತ ಯುದ್ಧ ನಿಲ್ಲಿಸುವಸಂತೆ ಕದನ ವಿರಾಮಕ್ಕೆ ಬೇಡಿಕೊಂಡಿತ್ತು. ಭಾರತ ಬ್ರಹ್ಮಾಸ್ತ್ರ ಬ್ರಹ್ಮೋಸ್ ಪಾಕ್ ಗೆ ಕೊಟ್ಟ ಹೊಡೆತ ನೋಡಿ ಇದೀಗ ನೆರೆಯ ರಾಷ್ಟ್ರಗಳು ಕೂಡ ತಮಗೂ ಬ್ರಹ್ಮೋಸ್ ಕ್ಷಿಪಣಿಯನ್ನು ಉತ್ಪಾದಿಸಿ ಕೊಡುವಂತೆ ಕೇಳಿಕೊಂಡಿವೆ. ಪ್ರಸ್ತುತ ಲಕ್ನೋ ಘಟಕವು ವಾರ್ಷಿಕವಾಗಿ 100 ಕ್ಷಿಪಣಿಗಳನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಮುಂಬರುವ ದಿನಗಳಲ್ಲಿ ಇನ್ನೂ ಹೆಚ್ಚಿನ ಕ್ಷಿಪನಿಗಮ್ಮ ತಯಾರಿಸುವ ಗುರಿಯನ್ನು ಭಾರತ ಹೊಂದಿದೆ. ಪ್ರಸ್ತುತ ಭಾರತಕ್ಕೆ ಫಿಲಿಪೈನ್ಸ್, ಇಂಡೋನೇಷ್ಯಾ, ವಿಯೆಟ್ನಾಂ, ಮಲೇಷ್ಯಾ, ಥೈಲ್ಯಾಂಡ್, ಸಿಂಗಾಪುರ, ಬ್ರೂನಿ, ಬ್ರೆಜಿಲ್, ಚಿಲಿ, ಅರ್ಜೆಂಟೈನಾ, ವೆನೆಜುವೆಲಾ, ಈಜಿಪ್ಟ್, ಸೌದಿ ಅರೇಬಿಯಾ, ಯುಎಇ, ಕತಾರ್, ದಕ್ಷಿಣ ಆಫ್ರಿಕಾ
ಮತ್ತು ಬಲ್ಗೇರಿಯಾ ದೇಶಗಳು ಬ್ರಹ್ಮೋಸ್ ಕ್ಷಿಪಣಿಯನ್ನು ಖರೀದಿಸಲು ಉತ್ಸುಕವಾಗಿವೆ. ಒಟ್ಟಿನಲ್ಲಿ ಭಾರತದ ಸೇನಾಬಲ ಎಷ್ಟು ಎಂಬುವುದನ್ನು ಜಗತ್ತಿನ ಮುಂದೆ ಸಾಭೀತಾಗಿದೆ

Categories
ರಾಷ್ಟ್ರೀಯ ವಾರ್ತೆ

ಭಾರತ-ಮಾಯನ್ಮಾರ್ ಗಡಿಯ ಬಳಿ 10 ಉಗ್ರರನ್ನು ಹೊಡೆದುರುಳಿಸಿದ ಸೇನೆ

ಭಾರತ-ಮಾಯನ್ಮಾರ್ ಗಡಿಯ ಬಳಿ 10 ಉಗ್ರರನ್ನು ಹೊಡೆದುರುಳಿಸಿದ ಸೇನೆ

* ಉಗ್ರರನ್ನು ಹುಡುಕಿ ಹುಡುಕಿ ಹೊಡೆಯುತ್ತಿರುವ ಭಾರತೀಯ ಸೇನೆ
* ಉಗ್ರರ ನೆಲೆಯಿಂದ ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶಕ್ಕೆ

NAMMUR EXPRESS NEWS
ಮಣಿಪುರ: ಭಾರತದೊಳಗೆ ನುಗ್ಗಿದ ಪಾಕ್ ಬೆಂಬಲಿತ ಉಗ್ರರನ್ನು ಕಾಶ್ಮೀರದ ಪುಲ್ವಾಮಾದಲ್ಲಿ ಭಾರತೀಯ ಸೇನೆಯಿಂದ ಬೇಟೆಯಾಡುತ್ತಿರುವ ಬೆನ್ನಲ್ಲಿಯೇ, ಮಾಯನ್ಮಾರ್ ಗಡಿಯಲ್ಲಿ ಕಾಣಸಿಕೊಂಡು ಉಪಟಳ ನೀಡುತ್ತಿದ್ದ 10 ಉಗ್ರರನ್ನು ಅಸ್ಸಾಂ ರೈಫಲ್ಸ್ ಪಡೆಯು ಮಣಿಪುರದಲ್ಲಿ ಹತ್ಯೆಗೈದಿದೆ.
ಮಣಿಪುರದ ಚಂದೇಲ್ ಜಿಲ್ಲೆಯಲ್ಲಿ ಬುಧವಾರ ಅಸ್ಸಾಂ ರೈಫಲ್ಸ್ ಮತ್ತು ಉಗ್ರಗಾಮಿಗಳ ನಡುವೆ ಗುಂಡಿನ ಚಕಮಕಿ ನಡೆದಿದ್ದು, ಕನಿಷ್ಠ 10 ಉಗ್ರಗಾಮಿಗಳನ್ನು ಹತ್ಯೆ ಮಾಡಲಾಗಿದೆ. ಈ ಕಾರ್ಯಾಚರಣೆ ಇನ್ನೂ ಮುಂದುವರೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಭಾರತ-ಮಾಯನ್ಮಾರ್ ಗಡಿಯ ಬಳಿ ಇರುವ ನ್ಯೂ ಸಮತಲ್ ಗ್ರಾಮದ ಸಮೀಪ ಶಸ್ತ್ರಸಜ್ಜಿತ ಉಗ್ರರ ಇರುವಿಕೆ ಬಗ್ಗೆ ಗುಪ್ತಚರ ಮಾಹಿತಿ ಸಿಕ್ಕ ನಂತರ ಈ ಕಾರ್ಯಾಚರಣೆ ಆರಂಭಿಸಲಾಗಿದೆ ಎಂದು ಸೇನೆಯ ಪೂರ್ವ ಕಮಾಂಡ್ ಸಾಮಾಜಿಕ ಮಾಧ್ಯಮ ವೇದಿಕೆ ಎಕ್ಸ್ ನಲ್ಲಿ ತಿಳಿಸಿದೆ. ಅಸ್ಸಾಂ ರೈಫಲ್ಸ್ ತಂಡವು ತಕ್ಷಣವೇ ಸ್ಥಳಕ್ಕೆ ತಲುಪಿ ಕಾರ್ಯಾಚರಣೆ ನಡೆಸಿತು. ಭದ್ರತಾ ಪಡೆಗಳು ಇನ್ನೂ ಪ್ರದೇಶದಲ್ಲಿ ಶೋಧ ಕಾರ್ಯ ಮುಂದುವರೆಸಿವೆ.
* 10 ಉಗ್ರರ ಹತ್ಯೆ,ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶಕ್ಕೆ
ಮಣಿಪುರದ ಚಂದೇಲ್ ಜಿಲ್ಲೆಯಲ್ಲಿ ಶೋಧ ಕಾರ್ಯಾಚರಣೆಯ ಸಂದರ್ಭದಲ್ಲಿ ಶಂಕಿತ ಉಗ್ರಗಾಮಿಗಳು ಭದ್ರತಾ ಪಡೆಗಳ ಮೇಲೆ ಏಕಾಏಕಿ ಗುಂಡಿನ ದಾಳಿ ನಡೆಸಿದರು. ಪ್ರತಿಯಾಗಿ ಯೋಧರು ಕಾರ್ಯತಂತ್ರದಿಂದ ಕಾರ್ಯಾಚರಣೆ ನಡೆಸಿದ್ದು, 10 ಉಗ್ರಗಾಮಿಗಳನ್ನು ಹತ್ಯೆ ಮಾಡಲಾಗಿದೆ. ಕಾರ್ಯಾಚರಣೆಯ ಭಾಗವಾಗಿ ಭದ್ರತಾ ಪಡೆಗಳು ಪ್ರದೇಶವನ್ನು ಸುತ್ತುವರೆದಿದ್ದವು. ಆಗ ಅಡಗಿಕೊಂಡಿದ್ದ ಉಗ್ರರು ಗುಂಡಿನ ದಾಳಿ ನಡೆಸಿದರು, ಇದಕ್ಕೆ ತಕ್ಕ ಪ್ರತ್ಯುತ್ತರ ನೀಡಲಾಯಿತು. ಸೇನೆಯು ಈ ಕಾರ್ಯಾಚರಣೆಯನ್ನು ನಿಖರ ಮತ್ತು ಯೋಜಿತ ಎಂದು ಬಣ್ಣಿಸಿದೆ.
ಎನ್‌ಕೌಂಟರ್ ನಂತರ ಸ್ಥಳದಿಂದ ಭಾರಿ ಪ್ರಮಾಣದ ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ. ಪ್ರದೇಶದಲ್ಲಿ ಶೋಧ ಕಾರ್ಯಾಚರಣೆ ಇನ್ನೂ ಮುಂದುವರೆದಿದೆ.

Categories
ರಾಷ್ಟ್ರೀಯ ವಾರ್ತೆ

ಒಬ್ಬ ಉಗ್ರನನ್ನು ಬಿಡೋದಿಲ್ಲ,ಒಬ್ಬೊಬ್ಬರನ್ನು ಹುಡುಕಿ ಹುಡುಕಿ ಹೊಡಿಯುತ್ತೇವೆ

ಒಬ್ಬ ಉಗ್ರನನ್ನು ಬಿಡೋದಿಲ್ಲ,ಒಬ್ಬೊಬ್ಬರನ್ನು ಹುಡುಕಿ ಹುಡುಕಿ ಹೊಡಿಯುತ್ತೇವೆ

* ಪಹಲ್ಗಾಮ್ ಉಗ್ರ ದಾಳಿ ಕುರಿತು ಪ್ರಧಾನಿ ಮೋದಿ ಪ್ರತಿಕ್ರಿಯೆ
* ಉಗ್ರಗಾಮಿಗಳು ಹಾಗೂ ಪಾಕ್‌ಗೆ ತಕ್ಕ ಉತ್ತರ ಕೊಡುವ ಸುಳಿವು ನೀಡಿದ ಮೋದಿ
* ಹಿಂದಿಯಲ್ಲಿ ಭಾಷಣ ಮಾಡುತ್ತಿದ್ದ ಪ್ರಧಾನಿ ಆ ಮಾತನ್ನ ಇಂಗ್ಲೀಷ್‌ನಲ್ಲಿ ಹೇಳಿದ್ಯಾಕೆ?

NAMMMUR EXPRESS NEWS
ಬಿಹಾರ: ಮಧುಬನಿ ಜಿಲ್ಲೆಯಲ್ಲಿ ಪಂಚಾಯತ್ ರಾಜ್ ದಿನದ ಅಂಗವಾಗಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ, ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಿದರು.
ಕಾರ್ಯಕ್ರಮದಲ್ಲಿ ತಮ್ಮ ಭಾಷಣವನ್ನು ಪ್ರಾರಂಭಿಸಿದ ಪ್ರಧಾನಿ ಮೋದಿ, ಭಾಷಣಕ್ಕೂ ಮುನ್ನ ಪಹಲ್ಗಾಮ್‌ನಲ್ಲಿ ಮಡಿದವರಿಗೆ ಎರಡು ನಿಮಿಷಗಳ ಮೌನ ಆಚರಿಸುವ ಮೂಲಕ ಗೌರವ ಸಲ್ಲಿಸಿದರು. ಭಾಷಣದಲ್ಲಿ ಪಹಲ್ಗಾಮ್ ದಾಳಿಯ ಕುರಿತು ಪ್ರತಿಕ್ರಿಯಿಸಿದ ಪ್ರಧಾನಿ, ‘ಏಪ್ರಿಲ್ 22 ರಂದು ಪಹಲ್ಗಾಮ್‌ನಲ್ಲಿ ಭಯೋತ್ಪಾದಕರು ಅಮಾಯಕ ನಾಗರಿಕರನ್ನು ಕೊಂದ ಕ್ರೂರತೆಯಿಂದ ಇಡೀ ರಾಷ್ಟ್ರವು ದುಃಖಿತವಾಗಿದೆ, ಕೋಟ್ಯಂತರ ನಾಗರಿಕರು ದುಃಖಿತರಾಗಿದ್ದಾರೆ. ಇಡೀ ದೇಶವು ಎಲ್ಲಾ ಸಂತ್ರಸ್ತ ಕುಟುಂಬಗಳ ದುಃಖದಲ್ಲಿ ಜೊತೆಗಿದೆ. ಚಿಕಿತ್ಸೆ ಪಡೆಯುತ್ತಿರುವ ಕುಟುಂಬ ಸದಸ್ಯರು ಬೇಗನೆ ಗುಣಮುಖರಾಗುವುದನ್ನು ಖಚಿತಪಡಿಸಿಕೊಳ್ಳಲು ಸರ್ಕಾರ ಎಲ್ಲ ಪ್ರಯತ್ನಗಳನ್ನು ಮಾಡುತ್ತಿದೆ ಎಂದು ಹೇಳಿದರು.
ತಮ್ಮ ಭಾಷಣದಲ್ಲಿ ಮೋದಿ, “ಸ್ನೇಹಿತರೇ, ಈ ಭಯೋತ್ಪಾದಕ ದಾಳಿಯಲ್ಲಿ, ಯಾರೋ ಒಬ್ಬರು ತಮ್ಮ ಮಗನನ್ನು ಕಳೆದುಕೊಂಡರು, ಯಾರೋ ಒಬ್ಬರು ತಮ್ಮ ಸಹೋದರನನ್ನು ಕಳೆದುಕೊಂಡರು, ಯಾರೋ ಒಬ್ಬರು ತಮ್ಮ ಸಂಗಾತಿಯನ್ನು ಕಳೆದುಕೊಂಡರು, ಅವರಲ್ಲಿ ಕೆಲವರು ಬಂಗಾಳಿ ಮಾತನಾಡುತ್ತಿದ್ದರು, ಕೆಲವರು ಕನ್ನಡ ಮಾತನಾಡುತ್ತಿದ್ದರು, ಕೆಲವರು ಮರಾಠಿ ಮಾತನಾಡುತ್ತಿದ್ದರು, ಯಾರೋ ಗುಜರಾತಿ ಆಗಿದ್ದರು. ಇಂದು, ಕಾರ್ಗಿಲ್ ನಿಂದ ಕನ್ಯಾಕುಮಾರಿಯವರೆಗೆ, ಅವರೆಲ್ಲರ ಸಾವಿನಿಂದ ಸಮಾನ ದುಃಖವಿದೆ. ಕೋಪವೂ ಹಾಗೆಯೇ ಇದೆ. ದೇಶದ ಶತ್ರುಗಳು ಭಾರತದ ನಂಬಿಕೆಯ ಮೇಲೆ ದಾಳಿ ಮಾಡಲು ಧೈರ್ಯ ಮಾಡಿದ್ದಾರೆ. ನಾನು ಸ್ಪಷ್ಟವಾಗಿ ಹೇಳಬೇಕೆಂದರೆ, ದಾಳಿ ನಡೆಸಿದ ಭಯೋತ್ಪಾದಕರು ಮತ್ತು ಪಿತೂರಿ ರೂಪಿಸಿದವರಿಗೆ ಅವರು ಊಹಿಸಿದ್ದಕ್ಕಿಂತ ದೊಡ್ಡ ಶಿಕ್ಷೆ ಸಿಗುತ್ತದೆ. ಆ ಶಿಕ್ಷೆಯನ್ನು ಹಂಚಿಕೊಳ್ಳುತ್ತೇನೆ, ನಾನು ಅದನ್ನು ಮಣ್ಣಿನೊಂದಿಗೆ ಬೆರೆಸಿ ಇಡುತ್ತೇನೆ’ ಎಂದು ಗುಡುಗಿದರು.
ಈಗ ಭಯೋತ್ಪಾದಕರು ಬಿಟ್ಟಿರುವ ಅಲ್ಪಸ್ವಲ್ಪ ನೆಲವನ್ನು ಕೂಡ ನಾಶಮಾಡುವ ಸಮಯ ಬಂದಿದೆ ಎಂದು ಗುಡುಗಿದರು.
ಹಿಂದಿಯಲ್ಲಿ ಭಾಷಣ ಮಾಡುತ್ತಿದ್ದ ಮೋದಿ ಉಗ್ರರಿಗೆ ಹಾಗೂ ಅವರಿಗೆ ಬೆಂಬಲವಾಗಿರುವ ಪಾಕ್‌ಗೆ ಎಚ್ಚರ ನೀಡುವಾಗ ಇಂಗ್ಲೀಷ್‌ನಲ್ಲಿ ಮಾತನಾಡಲಾರಂಭಿಸಿದರು,ಇದನ್ನ ಗಮನಿಸಿದರೆ ಭಾರತ ಉಗ್ರರ ವಿರುದ್ಧ ದೊಡ್ಡ ಹೆಜ್ಜೆಯೊಂದನ್ನು ಇಡಲು ಮುಂದಾಗಿದೆ ಎನಿಸುತ್ತಿದೆ, ಹೌದು, ಏಕೆಂದರೆ ಇಸ್ರೇಲ್ ಕೂಡ ಉಗ್ರವಾದದ ವಿರುದ್ಧದ ತನ್ನ ಪ್ರತೀಕಾರದ ಎಚ್ಚರಿಕೆಯನ್ನು ಇದೇ ಮಾದರಿಯಲ್ಲಿ ಸುಳಿವು ನೀಡಿತ್ತು ಎಂಬುದನ್ನು ನೆನಪಿಸಿಕೊಳ್ಳಬಹುದು.

Categories
ರಾಷ್ಟ್ರೀಯ ವಾರ್ತೆ

ರಾಜ್ಯದ ಕಾರ್ಮಿಕರಿಗೆ ಸಿಹಿ ಸುದ್ದಿ!

ರಾಜ್ಯದ ಕಾರ್ಮಿಕರಿಗೆ ಸಿಹಿ ಸುದ್ದಿ!

– ನರೇಗಾ ಕಾರ್ಮಿಕರಿಗೆ 349/-ರೂ. ಗಳಿಂದ 370/- ರೂ.ಗಳಿಗೆ ಹೆಚ್ಚಳ
– ಕೂಲಿ ಹೆಚ್ಚಿಸಿದ ಕೇಂದ್ರ ಸರ್ಕಾರ!

NAMMUR EXPRESS NEWS
ನವದೆಹಲಿ: ನರೇಗಾ ಯೋಜನೆಯಡಿ ನೀಡುತ್ತಿದ್ದ ಕೂಲಿಯು 370/- ರೂ.ಗೆ ಹೆಚ್ಚಳವಾಗಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮಹಮ್ಮದ್ ಹ್ಯಾರೀಸ್ ಸುಮೈರ್ ಅವರು ತಿಳಿಸಿದ್ದಾರೆ.
ಮಹಾತ್ಮಗಾಂಧಿ ನರೇಗಾ ಯೋಜನೆಯಡಿ ಕೂಲಿ ನೀಡುತ್ತಿರುವ 349/-ರೂ. ಗಳಿಂದ 370/- ರೂ.ಗಳಿಗೆ ಹೆಚ್ಚಿಸಲಾಗಿದೆ. ಬೇಸಿಗೆ ಅವಧಿಯಲ್ಲಿ ಗ್ರಾಮೀಣ ಪ್ರದೇಶದ ಜನರಿಗೆ ನಿರಂತರವಾಗಿ ಕೆಲಸ ನೀಡಲಾಗುವುದು. ಏ.1ರಿಂದ ಅನ್ವಯವಾಗುವಂತೆ ಪಾವತಿಸಲು ಕೇಂದ್ರ ಸರ್ಕಾರ ಆದೇಶ ನೀಡಿದೆ.
ಗ್ರಾಮದ ಬಡ ಕೂಲಿ ಕಾರ್ಮಿಕರು ನಮೂನೆ-6ರಲ್ಲಿ ಅರ್ಜಿಯನ್ನು ಗ್ರಾಮ ಪಂಚಾಯತಿಗೆ ಸಲ್ಲಿಸಿ, ಕೂಲಿ ಕೆಲಸವನ್ನು ತಮ್ಮ ಗ್ರಾಮದಲ್ಲೇ ಪ್ರತಿ ಕುಟುಂಬವು 100 ದಿನಗಳವರೆಗೆ ನರೇಗಾ ಕೆಲಸದಲ್ಲಿ ಭಾಗವಹಿಸುವಂತೆ ಅವರು ತಿಳಿಸಿದ್ದಾರೆ.

Categories
ರಾಜ್ಯ ರಾಷ್ಟ್ರೀಯ ವಾರ್ತೆ

ಬ್ಯಾಂಕ್ ನೌಕರರಿಗೆ ಕಹಿ ಸುದ್ದಿ!

ಬ್ಯಾಂಕ್ ನೌಕರರಿಗೆ ಕಹಿ ಸುದ್ದಿ!

– ಮಾರ್ಚ್ 31 ರಂದು ಇಲ್ಲ ಬ್ಯಾಂಕ್ ರಜೆ!!
– ಹಣಕಾಸು ವರ್ಷದ ಕೊನೆ ದಿನವಾಗಿರುವುದರಿಂದ ರಂಜಾನ್ ರಜೆ ರದ್ದು!

NAMMUR EXPRESS NEWS
ಹೊಸದಿಲ್ಲಿ: ಹಣಕಾಸು ವರ್ಷದ ಕೊನೆಯ ದಿನವಾದ ಮಾರ್ಚ್ ಮೂವತ್ತೊಂದರಂದು ಬ್ಯಾಂಕ್ ಗಳಿಗೆ ರಜೆ ಇರುವುದಿಲ್ಲ. ಎಂದಿನಂತೆ ವ್ಯವಹಾರ-ವಹಿವಾಟು ನಡೆಯುತ್ತದೆ ಎಂಬ ಅಧಿಕೃತ ಮಾಹಿತಿ ಹೊರಬಿದ್ದಿದೆ.
ಮಾ. 31ರಂದು ರಂಜಾನ್ ಹಬ್ಬವಿರುವುದರಿಂದ ಸಾರ್ವಜನಿಕ ರಜೆ ಇರುತ್ತದೆ. ಹೀಗಾಗಿ ಮಿಜೋರಾಂ, ಹಿಮಾಚಲ ಪ್ರದೇಶ ಹೊರತುಪಡಿಸಿ ಎಲ್ಲಾ ರಾಜ್ಯಗಳಿಗೂ ರಜೆ ಇರಬೇಕಿತ್ತು. ಹಣಕಾಸಿನ ರಿಪೋರ್ಟಿನಲ್ಲಿ ಯಾವುದೇ ವ್ಯತ್ಯಾಸ ಬರದಂತೆ ಕಂಟ್ರೋಲ್ ಮಾಡಲು ಆರ್ ಬಿಐ ಎಲ್ಲಾ ಬ್ಯಾಂಕ್ ಗಳಿಗೆ ನಿರ್ದೇಶನ ನೀಡಿದೆ.
ಹಣಕಾಸು ವರ್ಷದ ಕೊನೆ ದಿನವಾಗಿರುವುದರಿಂದ ವಹಿವಾಟಿನ ಲೆಕ್ಕವನ್ನು ಖಚಿತಪಡಿಸಿಕೊಳ್ಳಬೇಕಾಗಿರುವುದರಿಂದ ಬ್ಯಾಂಕ್ ಗಳಿಗೆ ರಜೆ ಇರುವುದಿಲ್ಲ.

Categories
ರಾಷ್ಟ್ರೀಯ ವಾರ್ತೆ

ಇನ್ಮುಂದೆ ಎಲ್ಲಾ ವಾಹನಗಳಿಗೆ ಸಿಗಲ್ಲ ಪೆಟ್ರೋಲ್, ಡೀಸೆಲ್!

ಇನ್ಮುಂದೆ ಎಲ್ಲಾ ವಾಹನಗಳಿಗೆ ಸಿಗಲ್ಲ ಪೆಟ್ರೋಲ್, ಡೀಸೆಲ್!

– ಏಪ್ರಿಲ್ 1ರಿಂದ ಹೊಸ ರೂಲ್ಸ್ ಜಾರಿ!
– ವಾಯು ಮಾಲಿನ್ಯ ತಡೆಗಟ್ಟಲು ದೆಹಲಿ ಸರ್ಕಾರದ ಮಹತ್ವದ ನಿರ್ಧಾರ

NAMMUR EXPRESS NEWS
ನವದೆಹಲಿ: ವಾಯು ಮಾಲಿನ್ಯವನ್ನು ತಡೆಗಟ್ಟುವ ನಿಟ್ಟಿನಲ್ಲಿ ದೆಹಲಿ ಸರ್ಕಾರ ಹೊಸ ನಿಯಮ ಒಂದನ್ನು ಜಾರಿಗೊಳಿಸಿದೆ. ಈ ನಿಯಮದ ಪ್ರಕಾರ ನಿಮ್ಮ ವಾಹನಗಳು 15 ವರ್ಷಕ್ಕೂ ಹಳೆಯದಾಗಿದ್ದರೆ ಅವುಗಳನ್ನು ರಸ್ತೆಗೆ ಇಳಿಸುವಂತಿಲ್ಲ. ಅಷ್ಟೇ ಅಲ್ಲದೆ ಅವುಗಳಿಗೆ ಪೆಟ್ರೋಲ್ ಡೀಸೆಲ್ ಕೂಡ ಸಿಗುವುದಿಲ್ಲ.
ಹೌದು, ನಿಮ್ಮ ವಾಹನವು 15 ವರ್ಷಗಳ ಮಾರ್ಕ್ ದಾಟಿದ್ರೆ, ರಸ್ತೆಗೆ ಇಳಿಸುವಂತಿಲ್ಲ. ಒಂದು ವೇಳೆ ರಸ್ತೆಗೆ ಇಳಿಸಿದರೂ ಯಾವುದೇ ಪೆಟ್ರೋಲ್ ಬಂಕ್ ಗಳಲ್ಲಿ ಡೀಸೆಲ್ ಅಥವಾ ಪೆಟ್ರೋಲ್‌ ತುಂಬಿಸುವುದಿಲ್ಲ.
ಈ ಹೊಸ ಇಂಧನದ ನಿಯಮದ ಪ್ರಕಾರ, ಹಳೆಯ ಪೆಟ್ರೋಲ್ ಮತ್ತು ಡೀಸೆಲ್ ವಾಹನಗಳಿಗೆ ಪೆಟ್ರೋಲ್‌, ಡೀಸೆಲ್ ನೀಡುವುದಿಲ್ಲ.
ದೆಹಲಿಯಲ್ಲಿ ಹಳೆಯ ಪೆಟ್ರೋಲ್ ಮತ್ತು ಡೀಸೆಲ್ ವಾಹನಗಳಿಗೆ ಇಂಧನ ನಿಷೇಧ ಮಾಡಲಾಗಿದೆ. ಏಪ್ರಿಲ್ 1 ರಿಂದ ಈ ನಿಯಮ ಜಾರಿಗೊಳ್ಳಲಿದೆ. ಪೆಟ್ರೋಲ್ ಪಂಪ್‌ಗಳಲ್ಲಿ ಹಳೆಯ ವಾಹನಗಳ ಮೇಲ್ವಿಚಾರಣೆ ಮಾಡಲಾಗುತ್ತದೆ. NGT ಸೂಚನೆಗಳ ಪ್ರಕಾರ, ಹಳೆಯ ಪೆಟ್ರೋಲ್ ಮತ್ತು ಡೀಸೆಲ್ ವಾಹನಗಳಿಗೆ ಪೆಟ್ರೋಲ್‌, ಡೀಸೆಲ್ ಸಿಗುವುದಿಲ್ಲ. ಮಾಲೀಕರು ಈ ಬಗ್ಗೆ ಅಲರ್ಟ್ ಆಗಿರಬೇಕು.

Categories
ರಾಷ್ಟ್ರೀಯ ವಾರ್ತೆ

ಮಹಾಕುಂಭ ಮೇಳದಲ್ಲಿ ನಡೆಯುತ್ತಿದೆ ಬಲಿ ಬಲಿ ಬಲಿ!!

ಮಹಾಕುಂಭ ಮೇಳದಲ್ಲಿ ನಡೆಯುತ್ತಿದೆ ಬಲಿ ಬಲಿ ಬಲಿ!!
– ಕರ್ನಾಟಕದ ನಾಲ್ವರು ಭಕ್ತರು ಬಲಿ!
– ಮಹಾಕುಂಭಮೇಳದ ಕಾಲ್ತುಳಿತದಲ್ಲಿ ಬೆಳಗಾವಿ ನಾಲ್ವರು ಸಾವು!

NAMMUR EXPRESS NEWS
ಪ್ರಯಾಗ್‌ರಾಜ್‌: ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ಕಳೆದು 2 ವಾರಗಳಿಂದ ವಿಶ್ವದ ಅತಿದೊಡ್ಡ ಧಾರ್ಮಿಕ ಸಮಾರಂಭ ಮಹಾಕುಂಭಮೇಳ ನಡೆಯುತ್ತಿದೆ. ಮೌನಿ ಅಮಾವಾಸ್ಯೆ ಹಿನ್ನೆಲೆ ಪ್ರಯಾಗ್‌ರಾಜ್‌ನಲ್ಲಿ ಭಕ್ತರ ಸಂಖ್ಯೆ ಹೆಚ್ಚಾಗುತ್ತಲೇ ಇದೆ.. ಇದೇ ಕಾರಣದಿಂದ ಮಹಾಕುಂಭ ಮೇಳದಲ್ಲಿ ಕಾಲ್ತುಳಿತ ಉಂಟಾಗಿದೆ. ಮಹಾಕುಂಭ ಮೇಳ ಹಿನ್ನೆಲೆ ಪವಿತ್ರ ಸ್ನಾನಕ್ಕಾಗಿ ತಡರಾತ್ರಿ ಪ್ರಯಾಗ್‌ರಾಜ್‌ನಲ್ಲಿ ನೂಕುನುಗ್ಗಲು ಉಂಟಾಗಿತ್ತು. ಈ ವೇಳೆ ಕರ್ನಾಟಕದಿಂದ ಹೋಗಿದ್ದ ಹಲವು ಭಕ್ತರು ಕಾಲ್ತುಳಿತಕ್ಕೆ ಸಿಲುಕಿ ಗಂಭೀರ ಗಾಯಗೊಂಡಿದ್ದು, ಇದೀಗ ಒಂದೇ ಜಿಲ್ಲೆಯ ನಾಲ್ವರು ಸಾವನ್ನಪ್ಪಿರುವ ಘಟನೆ ಬೆಳಕಿಗೆ ಬಂದಿದೆ. ಕುಂಭಮೇಳದಲ್ಲಿ ಕಾಲ್ತುಳಿತ ಪ್ರಕರಣದಲ್ಲಿ ಬೆಳಗಾವಿಯ ತಾಯಿ-ಮಗಳು ಮಿಸ್ಸಿಂಗ್ಎಂದು ಬೆಳಿಗ್ಗೆಯಿಂದಲೇ ಸುದ್ದಿಯಾಗಿತ್ತು. ಆದ್ರೆ ಸಂಜೆ ವೇಳೆ ಇಬ್ಬರೂ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. ಈ ಬೆನ್ನಲ್ಲೇ ರಾಜ್ಯದ ಮತ್ತಿಬ್ಬರು ಕುಂಭಮೇಳದಲ್ಲಿ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಮಹಾಕುಂಭಮೇಳದ ಕಾಲ್ತುಳಿತದಲ್ಲಿ ಬೆಳಗಾವಿ ನಾಲ್ವರು ಸಾವನ್ನಪ್ಪಿದ್ದಾರೆ ಎಂದು ಡಿಸಿ ಮೊಹಮ್ಮದ್ ರೋಷನ್ ಖಚಿಪಡಿಸಿದ್ದು, ಮೃತರನ್ನು ಜ್ಯೋತಿ, ಮೇಘಾ, ಮಹಾದೇವಿ ಮತ್ತು ಅರುಣ ಕೋಪರ್ಡೆ ಎಂದು ಗುರುತಿಸಲಾಗಿದೆ. ಬೆಳಗಾವಿಯ ಮೂರು ದಿನಗಳ ಹಿಂದೆ ಸಾಯಿರಥ ಟ್ರಾವೆಲ್ ಏಜೆನ್ಸಿ ಮೂಲಕ ಪ್ರಯಾಣ ಆರಂಭಿಸಿದ್ದ, 13 ಜನರ ತಂಡದಲ್ಲಿ ಜ್ಯೋತಿ ಹತ್ತರವಾಠ (50) ಮತ್ತು ಮೇಘಾ ಹತ್ತರವಾರ್ ಹೋಗಿದ್ದರು. ಬೆಳಗಾವಿ ವಡಗಾವಿ ನಿವಾಸಿಯವರಾಗಿದ್ದ ಜ್ಯೋತಿ ಮತ್ತು ಮೇಘಾ ಕುಂಭ ಮೇಳದ ಕಾಲ್ತುಳಿತದಲ್ಲಿ ಸಾವನ್ನಪ್ಪಿದ್ದಾರೆ ಎಂದು ದೃಢಪಟ್ಟಿದೆ. ಕುಂಭಮೇಳದ ಕಾಲ್ತುಳಿತದಲ್ಲಿ ಬೆಳಗಾವಿಯ ಮತ್ತೋರ್ವ ಯಾತ್ರಾರ್ಥಿ ಬಲಿಯಾಗಿದ್ದು, ಅವರನ್ನು ಬೆಳಗಾವಿಯ ಶೆಟ್ಟಿಗಲ್ಲಿಯ ಅರುಣ ಕೋಪರ್ಡೆ ಎಂದು ಗುರುತಿಸಲಾಗಿದೆ. ಪತ್ನಿ ಜೊತೆಗೆ ಪ್ರಯಾಗ್‌ ರಾಜ್‌ಗೆ ತೆರಳಿದ್ದ ಅರುಣ್, ಇಂದು ಬೆಳಗ್ಗೆ ಕಾಲ್ತುಳಿತದಲ್ಲಿ ಗಂಭೀರ ಗಾಯಗೊಂಡಿದ್ದರು. ನಂತರ ಪ್ರಯಾಗ್ ರಾಜ್‌ನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆ ಫಲಿಸದೇ ಅರುಣ್ ಕೊಪಾರ್ಡೆ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. ಇನ್ನು ಈ ದುರಂತದಲ್ಲಿ ಬೆಳಗಾವಿಯ ಮತ್ತೋರ್ವ ಮಹಿಳೆ ಸಾವನ್ನಪ್ಪಿದ್ದು, ಬೆಳಗಾವಿಯ ಶಿವಾಜಿ ನಗರದ ನಿವಾಸಿ ಮಹಾದೇವಿ ಎಂಬ ಮಹಿಳೆ ಮೃತಪಟ್ಟಿದ್ದಾರೆ. ಇನ್ನು ಈ ಬಗ್ಗ ಮೃತ ಮಹಿಳೆ ಮಹಾದೇವಿ ಪತಿ ಮಾತನಾಡಿದ್ದು, ಕಳೆದ ಮೂರು ದಿನಗಳ ಹಿಂದೆ ಮೂವತ್ತು ಜನ ಕುಂಭಮೇಳಕ್ಕೆ ಹೋಗಿದ್ರು. ಕಾಲ್ತುಳಿತದಲ್ಲಿ ನನ್ನ ಪತ್ನಿ ಸಾವನ್ನಪ್ಪಿರೋದು ಖಚಿತವಾಗಿದೆ. ಇನ್ನೂ ಶವ ಮಾತ್ರ ಪತ್ತೆಯಾಗಿಲ್ಲ ಎಂದು ಹೇಳಿದ್ದಾರೆ.

Categories
ರಾಷ್ಟ್ರೀಯ ವಾರ್ತೆ

ಮಹಾಕುಂಭ ಮೇಳದಲ್ಲಿ ಕಾಲ್ತುಳಿತಕ್ಕೆ 15 ಮಂದಿ ಬಲಿ!

ಮಹಾಕುಂಭ ಮೇಳದಲ್ಲಿ ಕಾಲ್ತುಳಿತಕ್ಕೆ 15 ಮಂದಿ ಬಲಿ!
– ಸಾಧುಗಳಿಂದ ಅಮೃತ ಸ್ನಾನ ರದ್ದು
– ಅತಿಯಾದ ಜನಸಂದಣಿಯಿಂದಾಗಿ ಅವಘಡ
– ಪ್ರಯಾಗ್ ರಾಜ್ ಬರಬೇಡಿ ಎಂದ ಆಡಳಿತ ಮಂಡಳಿ

NAMMUR EXPRESS NEWS
ಪ್ರಯಾಗ್‌ರಾಜ್‌: ಮಹಾಕುಂಭ ಮೇಳದಲ್ಲಿ ಮೌನಿ ಅಮಾವಾಸ್ಯೆ ಹಿನ್ನಲೆ ಕೋಟ್ಯಾಂತರ ಭಕ್ತರು ಸೇರಿದ್ದಾರೆ. ಅಮೃತ ಸ್ನಾನ ಮಾಡಲು ಭಕ್ತರು ಸರದಿ ಸಾಲಿನಲ್ಲಿ ತೆರಳಿದ್ದಾರೆ. ಆದರೆ ಭಕ್ತರ ಸಂಖ್ಯೆ ಹೆಚ್ಚಾದ ಕಾರಣ ತಡೆಗೋಡೆಗಳನ್ನು ದಾಟಿ ಅಮೃತಸ್ನಾನಕ್ಕೆ ತೆರಳಿದ್ದಾರೆ, ಇದು ನೂಕು ನುಗ್ಗಲಿಕೆ ಕಾರಣವಾಗಿದೆ. ಘಟನೆಯಿಂದ ಹಲವು ಭಕ್ತರು ಗಾಯಗೊಂಡಿದ್ದು, 10ಕ್ಕೂ ಹೆಚ್ಚು ಭಕ್ತರು ಮೃತಪಟ್ಟಿರುವುದಾಗಿ ವರದಿಯಾಗಿದೆ. ಆದರೆ ಸ್ಥಳದಲ್ಲಿರುವ ಮೂಲಗಳ ಮಾಹಿತಿಗಳ ಪ್ರಕಾರ ಯಾವುದೇ ಭಕ್ತರು ಮೃತಪಟ್ಟಿಲ್ಲ ಎಂದು ಹೇಳಲಾಗುತ್ತಿದೆ. ಗಾಯಾಳುಗಳನ್ನು ತಕ್ಷಣವೇ ಆಸ್ಪತ್ರೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಸದ್ಯ ಪರಿಸ್ಥಿತಿ ನಿಯಂತ್ರಣಕ್ಕೆ ತರಲಾಗಿದೆ. ಕಾಲ್ತುಳಿತ ಪ್ರಕರಣ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಜೊತೆ ಮಾತನಾಡಿದ್ದಾರೆ. ಘಟನೆ ಮಾಹಿತಿ ಪಡೆದು ಎಲ್ಲಾ ನೆರವಿಗೆ ಸೂಚಿಸಿದ್ದು, ಪರಿಸ್ಥಿತಿಯ ಬಗ್ಗೆ ಮಾಹಿತಿ ಪಡೆದು, ಪರಿಹಾರ ಕಾರ್ಯಗಳನ್ನು ತ್ವರಿತಗೊಳಿಸುವಂತೆ ಸೂಚಿಸಿದ್ದಾರೆ. ಪರಿಸ್ಥಿತಿಯನ್ನು ಪ್ರಧಾನಿ ನಿರಂತರವಾಗಿ ಗಮನಿಸುತ್ತಿದ್ದಾರೆ. ಪ್ರಯಾಗ್‌ರಾಜ್‌ನ ಮಹಾ ಕುಂಭ ಮೇಳದಲ್ಲಿ ಜ. 28, 29ರಂದು ಮಧ್ಯರಾತ್ರಿ ಸುಮಾರು 2 ಗಂಟೆಗೆ ಅವಘಡ ಸಂಭವಿಸಿದ್ದು, ಘಟನೆಯಲ್ಲಿ 10ಕ್ಕೂ ಹೆಚ್ಚು ಭಕ್ತರು ಮೃತಪಟ್ಟಿರುವುದಾಗಿ ವರದಿಯಾಗಿದೆ. ಇತ್ತ 40ಕ್ಕೂ ಹೆಚ್ಚು ಭಕ್ತರು ಗಾಯಗೊಂಡಿರುವುದಾಗಿ ವರದಿಯಾಗಿದೆ. ಕುಂಭ ಮೇಳದ ವಿಶೇಷ ಕಾರ್ಯನಿರ್ವಾಹಕ ಅಧಿಕಾರಿ ಆಕಾಂಕ್ಷಾ ರಾಣಾ ಪ್ರಕಾರ, ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಒಂದೆಡೆ ಸೇರಿದ್ದಾರೆ. ಇದರಿಂದ ತಡೆಗೋಡೆಗಳು ಮುರಿದಿದೆ ಎಂದಿದ್ದಾರೆ. ಇದರಿಂದಾಗಿ ಜನರು ಗಾಯಗೊಂಡರು. ಗಾಯಾಳುಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಭಾರೀ ಜನಸಂದಣಿಯಿಂದಾಗಿ ಗಾಯಗೊಂಡವರನ್ನು ಕೇಂದ್ರ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಇನ್ನು ಮೌನಿ ಅಮಾವಾಸ್ಯೆ ಈ ಸಂದರ್ಭದಲ್ಲಿ ಅಮೃತ ಸ್ನಾನ ನಡೆಯಬೇಕಿತ್ತು. ಇದಕ್ಕಾಗಿ ಸುಮಾರು10 ಕೋಟಿ ಜನರು ಕುಂಭ ಮೇಳಕ್ಕೆ ಆಗಮಿಸಿದ್ದರು. ಅತಿಯಾದ ಜನಸಂದಣಿಯಿಂದಾಗಿ ಅವಘಡ ಸಂಭವಿಸಿದೆ. ಅನೇಕರಿಗೆ ಉಸಿರಾಟದ ಸಮಸ್ಯೆ ಎದುರಾಗಿದೆ. ಇತ್ತ ಅವಘಡದಿಂದ ಎಲ್ಲಾ 13 ಅಖಾಡಗಳು ಸಾಧು ಸಂತರ ಶಾಹಿ ಸ್ನಾನವನ್ನು ರದ್ದುಗೊಳಿಸಿದ್ದಾರೆ. ಮುಂದಿನ ಅಮೃತ ಸ್ನಾನ ಬಸಂತ್ ಪಂಚಮಿಯಂದು ನಡೆಯಲಿದೆ. ಜನಸಂದಣಿಯನ್ನು ನಿಯಂತ್ರಿಸಲು ಎಲ್ಲಾ 30 ಪ್ಲಟೂನ್ ಸೇತುವೆಗಳನ್ನು ತೆರೆಯಲಾಗಿದೆ. ಪ್ರಯಾಗ್‌ರಾಜ್‌ಗೆ ಕುಂಭಮೇಳಕ್ಕೆ ಹೋಗುವವರ ಪ್ರವೇಶವನ್ನು ನಿಲ್ಲಿಸಲಾಗಿದೆ. ಪ್ರಯಾಗ್ ರಾಜ್ ಬರಬೇಡಿ ಎಂದು ಆಡಳಿತ ಮಂಡಳಿ ಮನವಿ ಮಾಡಿದೆ.