Categories
ಪುತ್ತೂರು

ಪುತ್ತೂರು ಅರಣ್ಯ ಇಲಾಖೆ ವಿಚಿತ್ರ ಪ್ಲಾನ್!

ಪುತ್ತೂರು ಅರಣ್ಯ ಇಲಾಖೆ ವಿಚಿತ್ರ ಪ್ಲಾನ್!
– ವಿದ್ಯುತ್ ತಂತಿ, ನೀರಿನ ಪೈಪ್ ಹೋಗುವಲ್ಲೇ ಗಿಡ ನೆಡ್ತಾರಂತೆ
– ಸರ್ಕಾರದ ಹಣ ನೀರಲ್ಲಿ ಹೋಮ: ಕೇಳುವವರು ಯಾರು?

ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ಪುತ್ತೂರು: ವಿದ್ಯುತ್ ತಂತಿಗಳ ಅಡಿಯಲ್ಲಿ ಮತ್ತು ನೀರಿನ ಪೈಪ್ ಲೈನ್ ಗಳು ಹಾದು ಹೋಗುವ ಜಾಗಗಳ ಮೇಲೆ ಗಿಡಗಳನ್ನು ನೆಡುವ ಮತ್ತು ಬೆಳೆಸುವ ಪ್ರಯತ್ನ ನಡೆಸುವ ವಿಚಿತ್ರ ರೀತಿಯ ಪರಿಸರ ಚಟುವಟಿಕೆಯೊಂದು ಅರಣ್ಯ ಇಲಾಖೆಯಿಂದ ನಡೆಯುತ್ತಿದೆ ಎಂಬ ದೂರುಗಳು ಕೇಳಿ ಬರುತ್ತಿವೆ. ಪುತ್ತೂರು ಉಪವಿಭಾಗದ ಅರಣ್ಯ ಇಲಾಖೆಯ ವ್ಯಾಪ್ತಿಗೆ ಒಳಪಟ್ಟ ಹಲವೆಡೆ ಇಂತಹ ದೃಶ್ಯಗಳು ಕಂಡು ಬರುತ್ತಿರುವುದು, ಸಾರ್ವಜನಿಕರಿಗೆ ಇದು ಯಾವ ಬಗೆಯ ಪರಿಸರ ಸಂರಕ್ಷಣೆ ಎನ್ನುವುದು ಅರ್ಥವಾಗುತ್ತಿಲ್ಲ. ರಸ್ತೆಯ ಅಗಲೀಕರಣ ಸಂದರ್ಭದಲ್ಲಿ ಹಾನಿಯಾಗದಂತೆ ಮತ್ತು ಇನ್ನಿತರ ಯಾವುದೇ ಸಮಸ್ಯೆಗಳು ತಲೆದೋರದಂತಹ ಜಾಗಗಳಲ್ಲಿ ಗಿಡಗಳನ್ನು ನೆಟ್ಟು ಬೆಳೆಸುವ ಬದಲು, ಸುರಕ್ಷಿತವಾಗಿ ಕಾಪಾಡಲು ಸಾಧ್ಯವಾಗದಂತಹ ಮಾದರಿಯ ನಾಟಿಯ ಮೂಲಕ ಸಂಬಂಧಿತ ವ್ಯಕ್ತಿಗಳು ಜನರ ಹಣವನ್ನು ವ್ಯರ್ಥಗೊಳಿಸುತ್ತಿದ್ದಾರೆ ಎಂಬ ಆರೋಪಗಳು ಕೇಳಿಬರುತ್ತಿವೆ. ಪುತ್ತೂರು, ಸವಣೂರು, ಕಾಣಿಯೂರು, ಸುಳ್ಯ ರಸ್ತೆಗಳ ಹಲವು ಭಾಗಗಳಲ್ಲಿ ಎಚ್ ಟಿ ಲೈನ್ ಗಳ ಅಡಿಯಲ್ಲಿಯೇ ಗಿಡಗಳನ್ನು ನೆಡಲಾಗಿದ್ದು, ಅದು ಮುಂದೆ ಮರವಾಗಿ ಬೆಳೆದ ನಂತರ ವಿದ್ಯುತ್ ತಂತಿಗಳನ್ನು ಸ್ಪರ್ಶಿಸಿ ಅಪಾಯ ಎದುರಾಗುವ ಸಂಭವ ಇದೆ. ಇಷ್ಟು ಸಾಮಾನ್ಯ ಅರಿವು ಕೂಡ ಇಲ್ಲದ ರೀತಿಯಲ್ಲಿ ಅರಣ್ಯ ಇಲಾಖೆ ಗಿಡ ನೆಟ್ಟಿರುವುದಕ್ಕೆ ಜನರು ವಿರೋಧ ವ್ಯಕ್ತಪಡಿಸಿದ್ದಾರೆ. ಸುರಕ್ಷಿತ ಸ್ಥಳಗಳಲ್ಲಿ ಗಿಡಗಳನ್ನು ನೆಡುವ ಮೂಲಕ ಅರಣ್ಯ ಇಲಾಖೆಯು ಸಾರ್ವಜನಿಕರಿಗೆ ಮಾದರಿಯಾಗಬೇಕು. ಅದಕ್ಕೆ ಬದಲು ಈ ರೀತಿ ಅಸಮರ್ಪಕ ರೀತಿಯಲ್ಲಿ ಕಾರ್ಯವನ್ನು ಕೈಗೊಂಡು ಟೀಕೆಗೆ ಒಳಗಾಗುತ್ತಿದ್ದಾರೆ ಎನ್ನಲಾಗಿದೆ.‌ ಈ ರೀತಿಯ ಆರೋಪಗಳು ಮತ್ತು ಟೀಕೆಗಳು ಸಾರ್ವಜನಿಕರಿಂದ ಬಂದ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿದ ಪುತ್ತೂರು ಅರಣ್ಯ ಇಲಾಖೆಯ ವಿಭಾಗಕ್ಕೆ ಸಂಬಂಧಿಸಿದ ಸುಬ್ಬಯ್ಯ ನಾಯ್ಕ ಅವರು ಕಾನೂನಿನ ಪ್ರಕಾರ ವಿದ್ಯುತ್ ತಂತಿಗಳ ಅಡಿಯಲ್ಲಿ ಗಿಡಗಳನ್ನು ನೆಡಲು ಅವಕಾಶವಿಲ್ಲ. ಇದನ್ನು ಅರಣ್ಯ ಇಲಾಖೆಯ ಸಿಬ್ಬಂದಿಗಳಿಗೂ ತಿಳಿಸಲಾಗಿದೆ. ಇಷ್ಟಾದರೂ ಸಿಬ್ಬಂದಿಗಳು ಈ ರೀತಿಯ ಅಪ್ರಯೋಜಕ ಕೆಲಸಕ್ಕೆ ಕೈ ಹಾಕಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ನಾನೇ ಸ್ವತಃ ಪರಿಶೀಲನೆ ನಡೆಸಿ, ಸೂಕ್ತ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.

Categories
ಪುತ್ತೂರು

ಪುತ್ತೂರು: ಬಿಜೆಪಿ ಶಾಸಕರಿಂದ ಯಾವುದೇ ನ್ಯಾಯ ದೊರಕಿಲ್ಲ!!’

ಪುತ್ತೂರು: ಬಿಜೆಪಿ ಶಾಸಕರಿಂದ ಯಾವುದೇ ನ್ಯಾಯ ದೊರಕಿಲ್ಲ!!’

* ಮದುವೆಯಾಗುವುದಾಗಿ ನಂಬಿಸಿ ವಂಚನಾ ಪ್ರಕರಣ, ಸಂತ್ರಸ್ತೆ ತಾಯಿಯಿಂದ ಪತ್ರಿಕಾಗೋಷ್ಠಿ

NAMMUR EXPRESS NEWS
ಪುತ್ತೂರು: ‘ನನ್ನ ಮಗಳಿಗೆ ಪ್ರಪೋಸ್ ಮಾಡಿ ಮದುವೆಯಾಗುವುದಾಗಿ ನಂಬಿಸಿ ಯುವಕ ಮಗಳು ಗರ್ಭವತಿಯಾದಾಗ ನಾನು ಮದುವೆಯಾಗುವುದಿಲ್ಲ ಎಂದು ಹೇಳಿದ್ದಾನೆ. ನಮಗೆ ನ್ಯಾಯ ಸಿಗದಿದ್ದರೆ ನಾವು ಬಿಡುವುದಿಲ್ಲ. ಎಲ್ಲಿಯೂ ಪ್ರತಿಭಟನೆಗೂ ಸಿದ್ಧ ಎಂದು ಸಂತ್ರಸ್ತೆ ಯುವತಿಯ ತಾಯಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಪಿ.ಜಿ.ಜಗನ್ನಿವಾಸ ರಾವ್ ಅವರ ಪುತ್ರ ಶ್ರೀಕೃಷ್ಣ ಜೆ.ರಾವ್‌ಗೆ ನನ್ನ ಮಗಳೊಂದಿಗೆ ಲವ್ ಇತ್ತು. ಆಕೆ 8 ರಿಂದ 10ನೇ ತರಗತಿಯ ತನಕ ರಾಮಕೃಷ್ಣ ಶಾಲೆಗೆ ಹೋಗಿದ್ದಳು. ಅಲ್ಲಿಂದ ನಂತರ ಮಂಗಳೂರಿನಲ್ಲಿ ಸಯನ್ಸ್ ವಿದ್ಯಾರ್ಥಿನಿಯಾಗಿ, ವಿದ್ಯಾರ್ಜನೆ ಪೂರ್ಣಗೊಳಿಸಿದ್ದಾಳೆ. ಈ ನಡುವೆ ಆಕೆ ಗರ್ಭಿಣಿಯಾಗಿರುವ ವಿಚಾರವನ್ನು ಶ್ರೀಕೃಷ್ಣನೇ ನನ್ನ ಬಳಿ ಬಂದು ಆಂಟಿ ನಮ್ಮಿಂದ ತಪ್ಪಾಗಿದೆ ಎಂದು ಹೇಳಿ ವಿಷಯ ತಿಳಿಸಿದ್ದ. ಈ ವಿಚಾರವನ್ನು ಅವನ ತಂದೆಗೂ ತಿಳಿಸಿದ್ದೆ. ಆಗ ಅವರೇ ಹಾಗಾದರೆ ಮದುವೆ ಮಾಡಿಸಿ ಬಿಡುವ ಎಂದು ತಿಳಿಸಿದ್ದರು. ಹಾಗೆ ಗರ್ಭಿಣಿಯ ಪರೀಕ್ಷೆಗೆಂದು ಪಿ.ಜಿ.ಜಗನ್ನಿವಾಸ ರಾವ್, ಅವರ ಪತ್ನಿ ಹಾಗು ನಾನು ಮತ್ತು ಮಗಳು ಜೊತೆಯಲ್ಲೇ ಅಥೇನಾ ಆಸ್ಪತ್ರೆಗೆ ಹೋದಾಗ ಮಗುವನ್ನು ತೆಗೆಸುವಂತೆ ಪರೀಕ್ಷೆ ಮಾಡಿದಾಗ ಆಕೆಗೆ 7 ತಿಂಗಳಾಗಿರುವುದರಿಂದ ಕಷ್ಟ ಸಾಧ್ಯ ಎಂದಿದ್ದರು.
ನಾನು ಜೂ.22ಕ್ಕೆ ಮಹಿಳಾ ಪೊಲೀಸ್ ಸ್ಟೇಷನ್‌ನಲ್ಲಿ ದೂರು ನೀಡಲು ಹೋದಾಗ ಪಿ.ಜಿ.ಜಗನ್ನಿವಾಸ ರಾವ್ ಅವರು ಠಾಣೆಗೆ ಬಂದು ನನ್ನ ಮಗನಿಗೆ 21 ವರ್ಷ ಆದ ತಕ್ಷಣ ರಿಜಿಸ್ಟರ್ ಮದುವೆ ಮಾಡಿಸುತ್ತೇನೆ ಎಂದು ಹೇಳಿ ಬಳಿಕ ಶಾಸಕರಿಗೆ ಕರೆ ಮಾಡಿದ್ದರು. ಶಾಸಕರ ಕರೆಯನ್ನು ನನಗೆ ಕೊಟ್ಟು ಶಾಸಕರೊಂದಿಗೆ ಮಾತನಾಡಲು ತಿಳಿಸಿದರು.
ಶಾಸಕರು ಪೋನ್‌ನಲ್ಲಿ ನನ್ನಲ್ಲಿ ಮಾತನಾಡಿ ಎಫ್‌ಐಆ‌ರ್ ಈಗ ಮಾಡಬೇಡಿ. ಜೂ.23ಕ್ಕೆ ಆವನಿಗೆ 21 ವರ್ಷ ಆದ ಬಳಿಕ ಅವರು ಮದುವೆ ಒಪ್ಪಿದಾರಲ್ಲ ಎಂದರು. ಹಾಗೆ ಠಾಣೆಯಲ್ಲಿ ಮುಚ್ಚಳಿಕೆ ಬರೆಸಿ ಇತ್ಯರ್ಥ ಆಗಿತ್ತು. ಆದರೆ ಹುಡುಗನಿಗೆ 21 ವರ್ಷ ಆದ ಬಳಿಕ ಅವರು ಮದುವೆ ಒಪ್ಪದಿರುವುದನ್ನು ಶಾಸಕರಿಗೆ ಕರೆ ಮಾಡಿ ತಿಳಿಸಿದೆ. ಅದಕ್ಕೆ ಅವರು ಮದುವೆಗೆ ಒಪ್ಪದಿದ್ದರೆ ನಿಮಗೆ ಹೇಗೆ ಬೇಕೋ ಹಾಗೆ ಕೇಸ್ ಮುಂದುವರಿಸಿ ಎಂದು ಹೇಳಿದ್ದಾರೆ ಎಂದು ಸಂತ್ರಸ್ತೆಯ ತಾಯಿ ಹೇಳಿದರು.

Categories
ಪುತ್ತೂರು

ಪಹಲ್ಗಾಮ್‌ ಘಟನೆ ಖಂಡಿಸಿ ಸುಳ್ಯ ಸ್ಥಳೀಯರಿಂದ ಪ್ರತಿಭಟನೆ!

ಪಹಲ್ಗಾಮ್‌ ಘಟನೆ ಖಂಡಿಸಿ ಸುಳ್ಯ ಸ್ಥಳೀಯರಿಂದ ಪ್ರತಿಭಟನೆ!

– ಸ್ವಯಂಪ್ರೇರಿತ ಅಂಗಡಿ-ಮುಂಗಟ್ಟುಗಳನ್ನು ಬಂದ್ ಮಾಡಿ ಪ್ರೊಟೆಸ್ಟ್
– ರಿಕ್ಷಾ ಚಾಲನೆ ಸ್ಥಗಿತಗೊಳಿಸಿ ಘಟನೆ ಖಂಡಿಸಿದ ಸ್ಥಳೀಯರು

NAMMUR EXPRESS NEWS
ಸುಳ್ಯ: ಪಹಲ್ಗಾಮ್‌ ಘಟನೆ ಖಂಡಿಸಿ ಸ್ಥಳೀಯರು ಏ. 23ರಂದು ಸ್ವಯಂಪ್ರೇರಿತವಾಗಿ ಅಂಗಡಿ-ಮುಂಗಟ್ಟುಗಳನ್ನು ಬಂದ್ ಮಾಡಿ ಪ್ರತಿಭಟಿಸಿದರು.
ಕೆಲವು ಸಂಘಟನೆಗಳು ಬಂದ್‌ಗೆ ಕರೆ ನೀಡಿದ್ದವು. ನಗರದಲ್ಲಿ ಬೆಳಗ್ಗೆ 11ರಿಂದ 12ರವರೆಗೆ ವರ್ತಕರು ಸ್ವಯಂಪ್ರೇರಿತ ಬಂದ್ ನಡೆಸಿದರು. ಗುತ್ತಿಗಾರು, ಅರಂತೋಡು ಭಾಗದಲ್ಲೂ ವರ್ತಕರು ಅಂಗಡಿ ಮುಚ್ಚಿ ಪ್ರತಿಭಟಿಸಿದರು.

ರಿಕ್ಷಾ ಸಂಚಾರ ಸ್ಥಗಿತ!

ತಾಲೂಕಿನ ಹರಿಹರ ಪಳ್ಳತ್ತಡ್ಕ, ಗುತ್ತಿಗಾರು, ಅರಂತೋಡು, ಜಾಲೂಂರು, ಪಂಜದಲ್ಲಿ ಅಟೋ ರಿಕ್ಷಾ ಚಾಲಕರು ಬೆಳಗ್ಗೆ ಒಂದರಿಂದ 2 ತಾಸು ರಿಕ್ಷಾ ಚಾಲನೆಯನ್ನು ಸ್ಥಗಿತಗೊಳಿಸಿ ಘಟನೆಯನ್ನು ಖಂಡಿಸಿದರು.
ರಾಷ್ಟ್ರೀಯವಾದಿ ಸಂಘಟನೆಗಳ ನೇತೃತ್ವದಲ್ಲಿ ಸುಳ್ಯ ಖಾಸಗಿ ಬಸ್‌ ನಿಲ್ದಾಣದಲ್ಲಿ ಪ್ರತಿಭಟನಾ ಸಭೆಯನ್ನು ನಡೆಸಿ ಘಟನೆಯನ್ನು ಖಂಡಿಸಿತು.
ಶಾಸಕಿ ಭಾಗೀರಥಿ ಮುರುಳ್ಯ ಮಾತನಾಡಿ, ಉಗ್ರರ ದಾಳಿ ಖಂಡನೀಯ. ಈ ರೀತಿಯ ಘಟನೆಗಳು ಮುಂದೆ ನಡೆಯದಂತೆ ತಡೆಯಲು ಎಲ್ಲರೂ ಒಗ್ಗಟ್ಟಾಗಬೇಕಿದೆ. ಉಗ್ರರಿಗೆ ತಕ್ಕ ಶಿಕ್ಷೆ ಆಗಬೇಕು. ದೇಶದ ಪ್ರಧಾನಿ ನರೇಂದ್ರ ಮೋದಿಯವರಿಗೆ ನಾವೆಲ್ಲರೂ ಇನ್ನಷ್ಟು ಬಲ ಕೊಡೋಣ. ಭಯೋತ್ಪಾದನೆ ಕೊನೆಗಾಣಿಸಲು ಸೈನಿಕರಿಗೆ ಬಲ ತುಂಬೋಣ ಎಂದರು.
ಸುಳ್ಯ ನ.ಪಂ. ಮಾಜಿ ವಿನಯ ಕುಮಾರ್‌ ಕಂದಡ್ಕ ಮಾತನಾಡಿ, ಹಿಂದೂ ಸಮಾಜ ಇನ್ನಾದರೂ ಎಚ್ಚೆತ್ತು ಕೊಳ್ಳಬೇಕು ಎಂದರು.
ವರ್ತಕರಾದ ಜಿ.ಜಿ. ನಾಯಕ್ ಮಾತನಾಡಿ, ದೇಶದ ಅಭಿವೃದ್ಧಿ ಬಗ್ಗೆ ತುಡಿತ ಇದ್ದವರಿಗೆ ನಿನ್ನೆಯ ಘಟನೆಯಿಂದ ನೋವಾಗಿದೆ. ಮನಸ್ಸನ್ನು ಕಲಕಿದೆ. ಇದಕ್ಕೆ ಕೇಂದ್ರ ಸರಕಾರ ಪ್ರತ್ಯುತ್ತರ ನೀಡಬೇಕು ಎಂದು ಹೇಳಿದರು.
ಉದ್ಯಮಿ ರಾಜೇಶ್ ಶೆಟ್ಟಿ ಮೇನಾಲ ಮಾತನಾಡಿ, ಧರ್ಮ ಒಡೆಯುವ ಕೆಲಸ ಕೆಲವರ ನಿರಂತರ ಪ್ರಯತ್ನಕ್ಕೆ ನಾವು ಆಸ್ಪದ ನೀಡಬಾರದು ಎಂದರು. ಬಿಜೆಪಿ ಮಂಡಲ ಸಮಿತಿ ಕೋಶಾಧಿಕಾರಿ ಸುಭೋದ್ ಶೆಟ್ಟಿ ಮೇನಾಲ ಮಾತನಾಡಿ, ದೇಶ ದ್ರೋಹದ ಘಟನೆ ನಡೆಯಬಾರದು. ನಾವು ಜಾಗೃತರಾಗೋಣ ಎಂದರು.
ನ.ಪಂ. ಅಧ್ಯಕ್ಷೆ ಶಶಿಕಲಾ ಎ. ನೀರಬಿದಿರೆ, ಬಿಜೆಪಿ ಮಂಡಲ ಸಮಿತಿ ಕೋಶಾ ಧಿಕಾರಿ ಸುಭೋದ್‌ ಶೆಟ್ಟಿ ಮೇನಾಲ, ಪ್ರಮುಖರಾದ ಡಾ| ಮನೋಜ್ ಅಡ್ಡಂತಡ್ಕ, ಹರೀಶ್ ಕಂಜಿಪಿಲಿ ಮತ್ತಿತರರು ಭಾಗವಹಿಸಿದ್ದರು

Categories
ಪುತ್ತೂರು

ಅದ್ದೂರಿಯಾಗಿ ನಡೆಯುತ್ತಿದೆ ಇತಿಹಾಸ ಪ್ರಸಿದ್ಧ ಪುತ್ತೂರು ಜಾತ್ರೆ!

ಅದ್ದೂರಿಯಾಗಿ ನಡೆಯುತ್ತಿದೆ ಇತಿಹಾಸ ಪ್ರಸಿದ್ಧ ಪುತ್ತೂರು ಜಾತ್ರೆ!

– ಪುತ್ತೂರು ಮಹಾಲಿಂಗೇಶ್ವರ ಬ್ರಹ್ಮರಥೋತ್ಸವ!
– ರಥೋತ್ಸವದಂದು 50 ಸಾವಿರ ಭಕ್ತಾದಿಗಳಿಗೆ ಅನ್ನಪ್ರಸಾದಕ್ಕೆ ಸಿದ್ಧತೆ

NAMMUR EXPRESS NEWS
ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ, ಅನ್ನದ ಅಗಳು ಮುತ್ತಾದ ಐತಿಹ್ಯವುಳ್ಳ ಕೆರೆಯ ಬಳಿಯೇ ಈ ಬಾರಿ ಜಾತ್ರಾ ಸಂಭ್ರಮದ ಅನ್ನಪ್ರಸಾದ ವಿತರಣೆಯಾಗಲಿದೆ.
ಕೆರೆಯ ಬಳಿಯ 20 ಸಾವಿರ ಚದರ ಅಡಿಯಲ್ಲಿರುವ ಅನ್ನಪೂರ್ಣ ಭೋಜನ ಮಂಟಪದಲ್ಲಿ ನಿತ್ಯ ಅನ್ನಪ್ರಸಾದ ವಿತರಣೆ ನಡೆದಿದ್ದು, ಜಾತ್ರೆ ಆರಂಭವಾದ ದಿನದಿಂದ 6 ದಿನದಲ್ಲಿ ಸುಮಾರು 50 ಸಾವಿರಕ್ಕೂ ಮಿಕ್ಕಿ ಭಕ್ತರಿಗೆ ಈಗಾಗಲೇ ಅನ್ನಪ್ರಸಾದ ವಿತರಣೆ ನಡೆದಿದೆ.
ಏ.16 ಮತ್ತು 17ರಂದು ಇನ್ನಷ್ಟು ಹೆಚ್ಚಿನ ಭಕ್ತರು ಅನ್ನಪ್ರಸಾದ ಸ್ವೀಕರಿಸಲಿದ್ದಾರೆ. ಮುಖ್ಯವಾಗಿ ಬ್ರಹ್ಮರಥೋತ್ಸವದಂದು ಲಕ್ಷಾಂತರ ಮಂದಿ ಭಕ್ತರು ಬರಲಿದ್ದಾರೆ. ಮಧ್ಯಾಹ್ನದ ವೇಳೆ ಸುಮಾರು 50 ಸಾವಿರ ಮಂದಿ ಭಕ್ತರಿಗೆ ಅನ್ನಪ್ರಸಾದ ವಿತರಣೆಗೆ ಈಗಾಗಲೇ ಸಿದ್ಧತೆ ನಡೆದಿದೆ.
ಎ.16ರ ರಾತ್ರಿಯೇ ಅನ್ನಪ್ರಸಾದ ಪಲ್ಲಪೂಜೆಗೆ ದೊಡ್ಡ ರೀತಿಯಲ್ಲಿ ಕದಿಕೆ ಕಟ್ಟಲಾಗುತ್ತದೆ ಎಂದು ಎಂದು ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆಯವರು ತಿಳಿಸಿದ್ದಾರೆ.
ಅದೇ ರೀತಿ ಏ.14ರಂದು ಶಾಸಕರು ಅನ್ನಪ್ರಸಾದ ಸ್ವೀಕರಿಸಿ ಬಳಿಕ ತಾನೂ ಭಕ್ತರಿಗೆ ಅನ್ನಪ್ರಸಾದ ವಿತರಣೆ ಮಾಡಿದ್ದಾರೆ. ಜೊತೆಗೆ ಭಕ್ತರಿಗಾಗಿ ಅಳವಡಿಸಿರುವ ಸ್ಟ್ಯಾಂಡಿಂಗ್ ಫ್ಯಾನ್‌ನ ಗಾಳಿ ಸಾಕಾಗದೇ ಇರುವುದನ್ನು ಗಮನಿಸಿ ತಕ್ಷಣ ಸೀಲಿಂಗ್ ಫ್ಯಾನ್ ಅಳವಡಿಸಲು ತಿಳಿಸಿದ್ದರು. ಅವರ ಸೂಚಿಸಿದ ಮರುದಿನವೇ ಅನ್ನಪೂರ್ಣ ಭೋಜನ ಮಂಟಪಕ್ಕೆ ಎರಡು ಜಂಬೋಫ್ಯಾನ್ ಅಳವಡಿಸಲಾಗಿದೆ. ಜೊತೆಗೆ ಹೆಚ್ಚುವರಿ ಅನ್ನಪ್ರಸಾದ ವಿತರಣೆಯ ಕೌಂಟರ್ ತೆರೆಯಲಾಗಿದೆ. ಜೊತೆಗೆ ಸರಕಾರಿ ನೌಕರರಿಗೆ, ಕಚೇರಿ ಸಿಬ್ಬಂದಿಗಳಿಗೆ ಸಮಯಕ್ಕೆ ಸರಿಯಾಗಿ ತೆರಳಲು ಪ್ರತ್ಯೇಕವಾಗಿ, ಕುಳಿತು ಅನ್ನಪ್ರಸಾದ ಸ್ವೀಕರಿಸುವ ವ್ಯವಸ್ಥೆಯನ್ನೂ ಮಾಡಲಾಗಿದೆ.

Categories
ಪುತ್ತೂರು

ಪುತ್ತೂರು: ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವರ ಅದ್ದೂರಿ ಜಾತ್ರೆ!

ಪುತ್ತೂರು: ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವರ ಅದ್ದೂರಿ ಜಾತ್ರೆ!

– ಎ.10 ರಿಂದ 20ರವರೆಗೆ ಪ್ರಸಿದ್ದ ಹತ್ತೂರ ಒಡೆಯ ಪುತ್ತೂರು ಜಾತ್ರೆ
– ಜಾತ್ರೆಯ ಪ್ರಯುಕ್ತ ಧ್ವಜಾರೋಹಣ ಮೂಲಕ ಚಾಲನೆ

NAMMUR EXPRESS NEWS
ಪುತ್ತೂರು: ಇತಿಹಾಸ ಪ್ರಸಿದ್ದ ಹತ್ತೂರ ಒಡೆಯ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವರ ಜಾತ್ರೋತ್ಸವವು ಎ.10 ರಿಂದ 20ರವರೆಗೆ ನಡೆಯಲಿದ್ದು, ಆ ಪ್ರಯುಕ್ತ ಧ್ವಜಾರೋಹಣ ಮೂಲಕ ಚಾಲನೆ ನೀಡಲಾಯಿತು.
ಬೆಳಿಗ್ಗೆ ದೇವಸ್ಥಾನದಲ್ಲಿ ದೇವಳದ ತಂತ್ರಿ ಬ್ರಹ್ಮಶ್ರೀ ಕುಂಟಾರು ರವೀಶ ತಂತ್ರಿಯವರ ನೇತೃತ್ವದಲ್ಲಿ ಪ್ರಧಾನ ಅರ್ಚಕ ವೇ ಮೂ ವಿ.ಎಸ್ ಭಟ್ ಅವರ ವೈದಿಕ ವಿಧಾನಗಳನ್ನು ನೇರವೆರಿಸಿದರು. ಅರ್ಚಕ ವಸಂತ ಕೆದಿಲಾಯ ಸಹಕರಿಸಿದರು.

Categories
ಪುತ್ತೂರು

ಪುತ್ತೂರು: ಬೆಳ್ಳಂಬೆಳಗ್ಗೆ ಮಂಗಳೂರಿಗೆ ಬರುತ್ತಿದ್ದ ಬಸ್‌ ಪಲ್ಟಿ; ಓರ್ವ ಸಾವು, ಹಲವರಿಗೆ ಗಾಯ!

BREAKING NEWS

ಪುತ್ತೂರು: ಬೆಳ್ಳಂಬೆಳಗ್ಗೆ ಮಂಗಳೂರಿಗೆ ಬರುತ್ತಿದ್ದ ಬಸ್‌ ಪಲ್ಟಿ; ಓರ್ವ ಸಾವು, ಹಲವರಿಗೆ ಗಾಯ!

– ಕಡಬ ತಾಲೂಕಿನ ನೀರಕಟ್ಟೆ ಸಮೀಪ, ಮುಂಜಾನೆ ಘಟನೆ!
– ಮೃತಪಟ್ಟ ಪ್ರಯಾಣಿಕನ ಗುರುತು ಇನ್ನೂ ಪತ್ತೆಯಾಗಿಲ್ಲ!

NAMMUR EXPRESS NEWS
ಪುತ್ತೂರು: ಬೆಂಗಳೂರಿನಿಂದ ಮಂಗಳೂರು ಕಡೆಗೆ ಬರುತ್ತಿದ್ದ ಖಾಸಗಿ ಬಸ್ಸೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಗೆ ಪಲ್ಟಿಯಾದ ಪರಿಣಾಮ ಓರ್ವ ಪ್ರಯಾಣಿಕ ಸಾವಿಗೀಡಾಗಿದ್ದು, ಹಲವು ಮಂದಿ ಗಾಯಗೊಂಡ ಘಟನೆ ಕಡಬ ತಾಲೂಕಿನ ಬಜತ್ತೂರು ಗ್ರಾಮದ ನೀರಕಟ್ಟೆ ಸಮೀಪ ಎ.4 (ಇಂದು) ಮುಂಜಾನೆ 5 ಗಂಟೆಗೆ ನಡೆದಿದೆ.
ಏ. 03ರಂದು ರಾತ್ರಿ ಬೆಂಗಳೂರಿನಿಂದ ಹೊರಟಿದ್ದ ಖಾಸಗಿ ಸ್ಲೀಪರ್‌ ಕೋಚ್‌ ಬಸ್‌, ಏ. 04ರಂದು ಮುಂಜಾನೆ ಉಪ್ಪಿನಂಗಡಿ ಮಾರ್ಗವಾಗಿ ಮಂಗಳೂರಿಗೆ ಹೋಗುತ್ತಿರುವಾಗ ಬಜತ್ತೂರು ಗ್ರಾಮದ ನೀರಕಟ್ಟೆ ಬಳಿ ಬರುತ್ತಿದ್ದಂತೆ, ಮುಂಜಾನೆಯ ಸಮಯ ವಾಹನ ಚಾಲಕನ ನಿಯಂತ್ರಣ ಕಳೆದುಕೊಂಡಿದೆ. ಪರಿಣಾಮ ಬಸ್‌ ರಸ್ತೆ ಬದಿಗೆ ಉರುಳಿ ಬಿದ್ದಿದೆ.
ಅಪಘಾತ ನಡೆದ ಕೂಡಲೇ ಸ್ಥಳೀಯರು ಹಾಗೂ ಇತರ ವಾಹನ ಸವಾರರು ಗಾಯಾಳುಗಳನ್ನು ರಕ್ಷಣೆ ಮಾಡಿ, ಚಿಕಿತ್ಸೆಗೆಂದು ಪುತ್ತೂರು ಹಾಗೂ ಮಂಗಳೂರಿನ ಆಸ್ಪತ್ರೆಗಳಿಗೆ ಸಾಗಿಸಲು ನೆರವಾದರು. ಮೃತಪಟ್ಟ ಪ್ರಯಾಣಿಕನ ಗುರುತು ಇನ್ನೂ ಪತ್ತೆಯಾಗಿಲ್ಲ. ಉಪ್ಪಿನಂಗಡಿ ಠಾಣಾ ಪೊಲೀಸರು ಸ್ಥಳಕ್ಕೆ ಧಾವಿಸಿದ್ದು, ಪರಿಶೀಲನೆ ಮಾಡುತ್ತಿದ್ದಾರೆ.

Categories
ಪುತ್ತೂರು

`ಪುತ್ತೂರ ಜಾತ್ರೆ’ ಮಹಾಲಿಂಗೇಶ್ವರ ದೇವಳದ ವಾರ್ಷಿಕ ಜಾತ್ರಾಮಹೋತ್ಸವ!

`ಪುತ್ತೂರ ಜಾತ್ರೆ’ ಮಹಾಲಿಂಗೇಶ್ವರ ದೇವಳದ ವಾರ್ಷಿಕ ಜಾತ್ರಾಮಹೋತ್ಸವ!

– ಹತ್ತೂರ ಒಡೆಯ ಮಹಾಲಿಂಗೇಶ್ವರನ ಜಾತ್ರೆಗೆ ಪೂರ್ವಭಾವಿ ಸಿದ್ಧತೆ!
– ಪುತ್ತೂರಿನ ಜನತೆಗೆ ಜಾತ್ರೆ ಆರಂಭಕ್ಕೆ ಕ್ಷಣಗಣನೆ

NAMMUR EXPRESS NEWS
ಪುತ್ತೂರು: ಪುತ್ತೂರಿನ ಬಹುದೊಡ್ಡ ಹಬ್ಬ ಎಂದೇ ಖ್ಯಾತಿ ಪಡೆದಿರುವ `ಪುತ್ತೂರ ಜಾತ್ರೆ’ ಮಹಾಲಿಂಗೇಶ್ವರ ದೇವಳದ ವಾರ್ಷಿಕ ಜಾತ್ರಾಮಹೋತ್ಸವ ಎ.1೦ರಿಂದ 2೦ ತನಕ ನಡೆಯಲಿದ್ದು, ಈ ಸಂಬಂಧ ಬ್ರಹ್ಮರಥ ಸಿದ್ಧಗೊಳಿಸಲು ರಥವನ್ನು ಪೂಜಾವಿಧಿವಿಧಾನಗಳೊಂದಿಗೆ ರಥಬೀದಿಗೆ ತರಲಾಯಿತು.
ಬ್ರಹ್ಮರಥ ಆಗಮನದೊಂದಿಗೆ ಪುತ್ತೂರು ಜನತೆಗೆ ಜಾತ್ರೆ ಆರಂಭಕ್ಕೆ ಕ್ಷಣಗಣನೆ ಆರಂಭವಾಯಿತು ಎಂಬುವುದು ಜನತೆಯ ನಂಬಿಕೆಯಾಗಿದೆ. ಎ.1೦ಕ್ಕೆ ಆರಂಭಗೊಳ್ಳುವ ಪುತ್ತೂರು ಜಾತ್ರೋತ್ಸವದಲ್ಲಿ ಎ.17ರಂದು ಬ್ರಹ್ಮರಥೋತ್ಸವ ನಡೆಯಲಿದೆ. ಈ ಜಾತ್ರೋತ್ಸವದಲ್ಲಿ ಸೀಮೆಯ ಭಕ್ತರೂ ಸೇರಿದಂತೆ ದ. ಕ ಜಿಲ್ಲೆಯ ಲಕ್ಷಾಂತರ ಮಂದಿ ಪಾಲ್ಗೊಳ್ಳುತ್ತಾರೆ.

Categories
ಪುತ್ತೂರು

ರಾಜಕೀಯ ಷಡ್ಯಂತ್ರ ಎಂದ ಪುತ್ತಿಲ!

ರಾಜಕೀಯ ಷಡ್ಯಂತ್ರ ಎಂದ ಪುತ್ತಿಲ!
– ಪುತ್ತಿಲ ಪರಿವಾರದ ಲೆಟ‌ರ್ ಹೆಡ್ಡಿನಲ್ಲೇ ಮಹಿಳೆಯೊಂದಿಗಿನ ವೈರಲ್ ಆಡಿಯೋ ಕುರಿತು ಸ್ಪಷ್ಟನೆ

NAMMUR EXPRESS NEWS
ಪುತ್ತೂರು : ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಆಡಿಯೋ ಹಾಗೂ ಈ ಕುರಿತು ಮಾಧ್ಯಮಗಳಲ್ಲಿ ಪ್ರಸಾರವಾಗಿರುವ ವರದಿಗಳ ಕುರಿತಾಗಿ ಅರುಣ್ ಕುಮಾ‌ರ್ ಪುತ್ತಿಲ ಸ್ಪಷ್ಟನೆ ನೀಡಿದ್ದಾರೆ.
ಕಳೆದ ವಿಧಾನಸಭಾ ಚುನಾವಣೆ ಮತ್ತು ನಂತರ ನಡೆದಿರುವ ಆರೋಪ ಪ್ರತ್ಯಾರೋಪಗಳು ಎಲ್ಲವೂ ಜನತೆಯ ಮುಂದಿರುವುದು ನಮಗೆಲ್ಲ ತಿಳಿದ ವಿಚಾರ. ಚುನಾವಣಾ ಸಂದರ್ಭದಲ್ಲಿ 3.5 ಕೋಟಿ ರೂಪಾಯಿ ವ್ಯವಹಾರದ ಆಪಾದನೆ ಮತ್ತು ನಾನು ಅದರ ಬಗ್ಗೆ ಸಾರ್ವಜನಿಕ ಸಭೆಯಲ್ಲಿ ಹೇಳಿರುವ ವಿಚಾರಕ್ಕೆ ಇಂದು ಕೂಡ ಬದ್ಧನಾಗಿದ್ದೇನೆ ಎಂದು ಹೇಳಿದ್ದು, ಆದರೆ ಈ ರೀತಿಯಾಗಿ ಸುಳ್ಳು ಆರೋಪ ಮಾಡುವುದು ಸರಿಯಲ್ಲ ಎಂದು ನಾನು ಭಾವಿಸಿದ್ದೇನೆ. ಮುಂದಿನ ದಿನಗಳಲ್ಲೂ ಇದೇ ರೀತಿಯ ರಾಜಕೀಯ ಷಡ್ಯಂತರಗಳನ್ನು ನಡೆಯುವ ಬಗ್ಗೆ ನಾನು ಹಿರಿಯರ ಹಾಗೂ ಅಧಿಕಾರಿಗಳ ಸೂನೆಯಂತೆ ಕಾನೂನನ ಚೌಕಟ್ಟಿನಲ್ಲಿ ಮುಂದುವರಿಯುತ್ತೇನೆ. ಎಂದು ಹೇಳಿದ್ದಾರೆ.

Categories
ಪುತ್ತೂರು

ಕನಸಿನ ಮನೆ, ಕಾರು, ಸೈಟ್, ಚಿನ್ನ ಬಹುಮಾನ!

ಕನಸಿನ ಮನೆ, ಕಾರು, ಸೈಟ್, ಚಿನ್ನ ಬಹುಮಾನ!

– ಬ್ರೈಟ್ ಭಾರತ್” ಸಂಸ್ಥೆಯ ವಿಶೇಷ ಯೋಜನೆ
– ಪ್ರತಿ ಗ್ರಾಹಕರಿಗೆ ಖಚಿತ ಬಹುಮಾನ

NAMMUR EXPRESS NEWS

ಪುತ್ತೂರು: ಮೊದಲ ಸೀಸನ್’ನ ಯಶಸ್ವಿ ಪಯಣದೊಂದಿಗೆ, ಸಾವಿರಾರು ಸಂತೃಪ್ತ ಗ್ರಾಹಕರನ್ನು ಪಡೆದ “ಬ್ರೈಟ್ ಭಾರತ್” ಸಂಸ್ಥೆ ಇದೀಗ ಈ ಭಾಗದಲ್ಲಿ ಪ್ರಪ್ರಥಮ ಬಾರಿಗೆ, ಆರು ಸುಸಜ್ಜಿತ ಮನೆಯೊಂದಿಗೆ ನಾಲ್ಕು ಐಶಾರಾಮಿ ಕಾರು, ನಾಲ್ಕು ಸುಸಜ್ಜಿತ ಜಾಗ, ಚಿನ್ನ, ಡೈಮಂಡ್’ಗಳನ್ನು ಬಹುಮಾನವಾಗಿ ನೀಡುವ ಮತ್ತೊಂದು ಹೊಸ ಯೋಜನೆಯನ್ನು ಬಿಡುಗಡೆಗೊಳಿಸಿದೆ.

ಸೇರಿದ ಯಾವ ಗ್ರಾಹಕರಿಗೂ ನಷ್ಟವಿಲ್ಲದ ರೀತಿಯಲ್ಲಿ, ಪ್ರತೀ ತಿಂಗಳು ಕೂಡ ಲಕ್ಷಾಂತರ ಮೌಲ್ಯದ ಬಂಪರ್ ಬಹುಮಾನಗಳಿರುವ ವಿಭಿನ್ನ ಯೋಜನೆ ಇದಾಗಿದ್ದು. ಬಡವರ ಸ್ವಂತ ಮನೆಯ ಕನಸನ್ನು ಬ್ರೈಟ್ ಭಾರತ್‌ನ ಈ ಯೋಜನೆ ನನಸು ಮಾಡಲಿದೆ.

ಬ್ರೈಟ್ ಭಾರತ್ ಸದಸ್ಯರಾಗುವುದು ಹೇಗೆ!?

ಬ್ರೈಟ್ ಭಾರತ್ ಸದಸ್ಯರಾಗಲು ನಿಮ್ಮ ಹೆಸರು, ಸ್ಥಳ, ಮೊಬೈಲ್ ನಂಬರ್, ಇಷ್ಟು ಮಾಹಿತಿಯನ್ನು +91 861-8521744 ಈ ನಂಬರ್‌ಗೆ ವಾಟ್ಸಪ್ ಮಾಡಬಹುದು ಅಥವಾ ಕರೆಮಾಡಿ ಮಾಹಿತಿ ಪಡೆದುಕೊಳ್ಳಬಹುದು.

ಬ್ರೈಟ್ ಭಾರತ್ ಯೋಜನೆಯ ಬಗ್ಗೆ ಮಾಹಿತಿ

ವಿಶೇಷವಾಗಿ ಇದೊಂದು ಉಳಿತಾಯ ಯೋಜನೆಯಾಗಿದ್ದು, ಪ್ರತಿ ತಿಂಗಳ ತಮ್ಮ ಉಳಿತಾಯದ ಸಾವಿರ ರೂಪಾಯಿಯನ್ನು ಇಪ್ಪತ್ತು ತಿಂಗಳು ಪಾವತಿಸಿ, ಆರು ಸುಸಜ್ಜಿತ ಮನೆ, ನಾಲ್ಕು ಐಶಾರಾಮಿ ಕಾರು, ನಾಲ್ಕು ಸುಸಜ್ಜಿತ ಜಾಗ, 500 ಚಿನ್ನದ ಉಂಗುರ ಸೇರಿದಂತೆ, ಬುಲೆಟ್, ಆಕ್ವೀವಾ, ಐಫೋನ್, ಚಿನ್ನ, ಡೈಮಂಡ್, ನಗದು, ಹೀಗೆ ಪ್ರತೀ ತಿಂಗಳು ಕೂಡ ಲಕ್ಷಾಂತರ ಬೆಲೆಯ ಬಹುಮಾನಗಳನ್ನು ಗೆಲ್ಲುವ ಅವಕಾಶವನ್ನು ಬ್ರೈಟ್ ಭಾರತ್ ನೀಡಿದೆ. ಕೊನೆಯವರೆಗೆ ಯಾವುದೇ ಬಹುಮಾನ ಗೆಲ್ಲದ ಸದಸ್ಯರಿಗೆ ಅವರು ಕಟ್ಟಿದ ಹಣಕ್ಕೆ ಹೊಂದುವಂತ ಬೆಲೆಯ ಪ್ರೋತ್ಸಾಹಕ ಬಹುಮಾನಗಳು ಸೇರಿದ ಪ್ರತಿಯೊಬ್ಬ ಸದಸ್ಯರಿಗೂ ಲಭಿಸಲಿದೆ‌. ಜೊತೆಗೆ ಎಲ್ಲಾ ಸರ್ಕಾರಿ ತೆರಿಗೆಗಳನ್ನು ಪಾವತಿಸಿ, ಪಾರದರ್ಶಕವಾಗಿ ಡ್ರಾ ನಡೆಯುವ ಬಡವರ ಕನಸಿನ ಯೋಜನೆ ಇದಾಗಿದ್ದು. ಪ್ರತಿಯೊಬ್ಬರಿಗೂ ಇದರ ಸದಸ್ಯತ್ವವನ್ನು ಪಡೆಯಬಹುದಾಗಿದೆ.

ಈಗಾಗಲೇ ನೂರಾರು ಮಂದಿ ತಮ್ಮ ಹೆಸರು ನೋಂದಾಯಿಸಿ ರಿಜಿಸ್ಟರ್ ಆಗಿದ್ದು, ಈ ಕನಸಿನ ಯೋಜನೆಯಲ್ಲಿ ನಿಮಗೂ ಸದಸ್ಯರಾಗಬಹುದು.

ಸ್ವಂತ ಮನೆ ಅನ್ನುವುದು ಹಲವರಿಗೆ ಕನಸು ಮಾತ್ರವಾಗಿ ಉಳಿದಿರುವ ಈ ದಿನದಲ್ಲಿ, ಅವರ ಕನಸಿನ ಮನೆಯನ್ನು ಈ ಯೋಜನೆಯ ಮೂಲಕ ನೀಡಬೇಕು, ಅದರ ಜೊತೆಗೆ ಯಾರಿಗೂ ನಷ್ಟವಿಲ್ಲದ ರೀತಿಯಲ್ಲಿ, ಸೇರಿದ ಪ್ರತಿಯೊಬ್ಬ ಸದಸ್ಯರಿಗೂ, ಅವರು ಕಟ್ಟಿದ ಹಣಕ್ಕೆ ಸರಿಸಮಾನವಾದ ಪ್ರೋತ್ಸಾಹಕ ಬಹುಮಾನಗಳನ್ನು ನೀಡಿ, ಹೆಚ್ಚಿನ ಲಾಭದ ಉದ್ದೇಶಕ್ಕಿಂತಲೂ, ಅವರ ನಂಬಿಕೆಯನ್ನು ಉಳಿಸಿಕೊಳ್ಳಬೇಕು. ಆ ಕಾರಣದಿಂದಲೇ ಮೊದಲ ಸೀಸನ್ ಯಶಸ್ವಿ ಪಯಣದ ಜೊತೆಗೆ ಇದೀಗ ಮತ್ತೊಂದು ವಿಭಿನ್ನ ಯೋಜನೆಯನ್ನು ಜನರ ಮುಂದಿಟ್ಟಿದ್ದೇವೆ ಅನ್ನುವುದು ಬ್ರೈಟ್ ಭಾರತ್‌ನ ಪಾಲುದಾರರ ಮಾತು.

ಬ್ರೈಟ್ ಭಾರತ್‌ನ ಸೀಸನ್-2ರ ಮೊದಲ ಡ್ರಾ ಸೆಪ್ಟೆಂಬರ್ 13ಕ್ಕೆ

ಬ್ರೈಟ್ ಭಾರತ್‌ನ ಸೀಸನ್-2ರ ಮೊದಲ ಡ್ರಾ ಸೆಪ್ಟೆಂಬರ್ 13ಕ್ಕೆ ನಡೆಯಲಿದ್ದು, ಮೊದಲ ತಿಂಗಳಲ್ಲೇ ಒಬ್ಬ ಅದೃಷ್ಟಶಾಲಿಗೆ ಎರಡು ಬೆಡ್’ರೂಮಿನ ಸುಸಜ್ಜಿತ ಮನೆಯನ್ನು ಹಾಗು 5 ಜನರಿಗೆ ಆಕ್ಟಿವಾ ಮತ್ತು 25 ಜನರಿಗೆ ಚಿನ್ನದ ಉಂಗುರ ಗೆಲ್ಲುಲು ಅವಕಾಶವಿದೆ. ಜೊತೆಗೆ ಪ್ರತಿ ತಿಂಗಳು ಕೂಡ ಕಾರು, ಮನೆ, ಜಾಗ, ಬುಲೆಟ್, ಐಫೋನ್, ಚಿನ್ನ, ಡೈಮಂಡ್ ನಗದು ಬಹುಮಾನವಿದ್ದು, ಒಟ್ಟು 6 ಸುಸಜ್ಜಿತ ಮನೆ, 4 ಕಾರು, 4 ಜಾಗ ಹೀಗೆ ಕೋಟ್ಯಾಂತರ ರುಪಾಯಿಯ ಬಹುಮಾನಗಳನ್ನು ಗೆಲ್ಲುವ ಅವಕಾಶವನ್ನು ಬ್ರೈಟ್ ಭಾರತ್ ನೀಡಿದ್ದು, ಅದೃಷ್ಟವಂತರು ಎರಡು ಬೆಡ್‌ರೂಮಿನ ಹೊಸ ಮನೆಯನ್ನು ತಮ್ಮದಾಗಿಸಿಕೊಳ್ಳಲಿದ್ದಾರೆ.

ಬ್ರೈಟ್ ಭಾರತ್ ನ ಪ್ರಧಾನ ಕಚೇರಿಯೂ ಪುತ್ತೂರಿನಲ್ಲಿದ್ದು, ಸಹ ಸಂಸ್ಥೆ ಮಂಗಳೂರಿನ ಫರಂಗಿಪೇಟೆಯಲ್ಲಿದೆ.

ಸದಸ್ಯರಾಗಲು ಅಥವಾ ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ್ನ ನಂಬರನ್ನು ಸಂಪರ್ಕಿಸಬಹುದು.

Contact: +91 8618521744