ಶೃಂಗೇರಿ ಕ್ಷೇತ್ರದ ಶಾಸಕರ ಊರಿಗೇ ಬಂದ ಕಾಡಾನೆಗಳ ಹಿಂಡು
* ಮಲೆನಾಡಿನಾದ್ಯಂತ ನಿಲ್ಲದ ಕಾಡಾನೆಗಳ ಹಾವಳಿ
* ಶಾಸಕ ಟಿ.ಡಿ ರಾಜೇಗೌಡರ ಊರು ಬಸಾಪುರಕ್ಕೆ ಆನೆಗಳ ಎಂಟ್ರೀ
NAMMMUR EXPRESS NEWS
ಚಿಕ್ಕಮಗಳೂರು/ಖಾಂಡ್ಯ: ಜಿಲ್ಲೆಯಾದ್ಯಂತ ಕಾಡಾನೆಗಳ ಹಾವಳಿ ಜಾಸ್ತಿಯಾಗಿದ್ದು,ದಿನೇ ದಿನೇ ಕಾಡು ಪ್ರಾಣಿಗಳ ದಾಳಿಯಿಂದ ಜನ ಹೈರಾಣಾಗಿದ್ದಾರೆ,ರೈತರು ಬೆಳೆದ ಬೆಳೆ ಉಳಿಸಿಕೊಳ್ಳಲು ಪರದಾಡುವಂತಾಗಿದೆ.
ಮೊನ್ನೆಯಷ್ಟೇ ಕೊಪ್ಪ ತಾಲೂಕಿನ ಜಯಪುರ ಸಮೀಪದ ಗ್ರಾಮವೊಂದರಲ್ಲಿ ಒಂಟಿ ಕಾಡಾನೆಯೊಂದು ಓಡಾಡಿ ಜನರಲ್ಲಿ ಆತಂಕ ಸೃಷ್ಠಿಸಿತ್ತು, ಇದರ ಬೆನ್ನಲ್ಲೇ ಈಗ ಸುಮಾರು 10 ಆನೆಗಳ ಗುಂಪೊಂದು ಶೃಂಗೇರಿ ಕ್ಷೇತ್ರದ ಶಾಸಕರ ಟಿ.ಡಿ ರಾಜೇಗೌಡರ ಸ್ವಗ್ರಾಮ ಚಿಕ್ಕಮಗಳೂರು ತಾಲೂಕಿನ ಬಸಾಪುರಕ್ಕೆ ಎಂಟ್ರಿ ಕೊಟ್ಟಿದೆ. ಬಸಾಪುರ,ಕಾಡ್‌ಬೈಲ್ ಗ್ರಾಮಕ್ಕೆ ಬಂದಿರುವ ಕಾಡಾನೆಗಳು ತೋಟಕ್ಕೆ ನುಗ್ಗಿ ದಾಂಧಲೆ ನಡೆಸಿವೆ,ಕಾಫಿ ತೋಟ ಹಾಗೂ ಬೆಳೆಯನ್ನು ಸಂಪೂರ್ಣ ನಾಶಮಾಡುತ್ತಿವೆ. ಪದೇ ಪದೇ ಕಾಡಾನೆಗಳ ದಾಳಿಯಿಂದ ಕಂಗೆಟ್ಟ ಸ್ಥಳೀಯರು ಅರಣ್ಯ ಇಲಾಖೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು ಕೂಡಲೇ ಆನೆಗಳನ್ನು ಸೆರೆಹಿಡಿದು ಸ್ಥಳಾಂತರಿಸುವಂತೆ ಒತ್ತಾಯಿಸಿದ್ದಾರೆ.
