Categories
ಚಿಕ್ಕಮಗಳೂರು

ಚಿತ್ರ ೧ (ಬಿ.ಎಲ್.ಆರ್.ಪಿ)ಬೇಲೂರು ಪಟ್ಟಣದ ಬಸ್ ನಿಲ್ದಾಣ ಮುಂಭಾಗದ ಶಿಥಿಲವಾದ ವಾಣಿಜ್ಯ ಮಳಿಗೆ ಬಳಿ ಪೇಪರ್ ಜೊಡಿಸುತ್ತಿರುವ ಪತ್ರಿಕಾ ವಿತರಕರು.

ಚಿತ್ರ ೧ (ಬಿ.ಎಲ್.ಆರ್.ಪಿ)ಬೇಲೂರು ಪಟ್ಟಣದ ಬಸ್ ನಿಲ್ದಾಣ ಮುಂಭಾಗದ ಶಿಥಿಲವಾದ ವಾಣಿಜ್ಯ ಮಳಿಗೆ ಬಳಿ ಪೇಪರ್ ಜೊಡಿಸುತ್ತಿರುವ ಪತ್ರಿಕಾ ವಿತರಕರು.

ಬೇಲೂರು.ಮಾರ್ಚ್.೧೯.

“ಪತ್ರಿಕಾ ವಿತರಕರಿಗೆ ನೆಲೆ ಕಲ್ಪಿಸುವಂತೆ ವಿತರಕರಿಂದ ಒತ್ತಾಯ”
;-ಮಳೆ,ಚಳಿ ಎನ್ನದೆ ಪ್ರತಿನಿತ್ಯ ಓದುಗರು ಮತ್ತು ಸುದ್ದಿಮನೆಯ ಕೊಂಡಿಯಾಗಿ ಕಾರ್ಯನಿರ್ವಹಿಸುವ ಪತ್ರಿಕಾ ವಿತರಕರ ಪಾತ್ರ ಹಿರಿದು, ಆದರೆ ಒಂದು ಕಡೆಯಲ್ಲಿ ಕುಳಿತುಕೊಂಡು ಪೇಪರ್ ಜೋಡಿಸಲು ನೆಲೆ ಇಲ್ಲದಿರುವುದು ನಿಜಕ್ಕೂ ಶೋಚನೀಯ, ಸಂಬAಧ ಪಟ್ಟ ಪುರಸಭೆ ಮತ್ತು ಶಾಸಕರು ಈ ಬಗ್ಗೆ ಗಮನ ನೀಡುವ ಮೂಲಕ ಶಾಶ್ವತವಾದ ಪರಿಹಾರ ಕಲ್ಪಿಸಬೇಕು ಎಂದು ಪತ್ರಿಕಾ ವಿತರಕರು ಹಾಗೂ ಓದುಗರು ಒತ್ತಾಯಿಸಿದ್ದಾರೆ.
ಕೊರೆಯುವ ಬಳಿಯಿರಲಿ, ಬಿರುಮಳೆ ಸುರಿಯುತ್ತಿರಲಿ ಮನೆ-ಮನೆಗೆ ಪತ್ರಿಕೆಗಳನ್ನು ತಲುಪಿಸುವ ಕಾಯಕವನ್ನು ಮಾಡುವ ಪತ್ರಿಕಾ ವಿತರಕರು ಸುದ್ದಿಮನೆಯಲ್ಲಿ ಅತ್ಯಂತ ಪ್ರಾಮುಖ್ಯತೆ ಹೊಂದಿದ್ದಾರೆ. ಇಂತಹ ಪತ್ರಿಕಾ ವಿತರಕರ ಅತಂತ್ರ ಬದುಕಿಗೆ ಈಗಾಗಲೇ ಸಂಘಟನೆ ಆರಂಭವಾಗಿ ಸರ್ಕಾರದಿಂದ ಸವಲತ್ತುಗಳನ್ನು ಪಡೆಯಲು ಹರಸಾಹಸ ಮಾಡುತ್ತಿದ್ದಾರೆ. ಇದರ ಬೆನ್ನಲ್ಲೆ ಬೇಲೂರು ಪಟ್ಟಣದಲ್ಲಿ ಪ್ರತಿನಿತ್ಯ ಮಳೆ,ಚಳಿ ಎನ್ನದೆ ಪತ್ರಿಕೆಗಳನ್ನು ಮನೆ-ಮನೆಗೆ ನೀಡುವ ಇಲ್ಲಿನ ಪತ್ರಿಕಾ ವಿತರಕರ ಬವಣೆ ಹೇಳತೀರದು. ಮೊನ್ನೆ ಮೊನ್ನೆ ತಾನೆ ಬಸ್ ನಿಲ್ದಾಣದ ಮುಂಭಾಗದಲ್ಲಿ ಪಾಳುಬಿದ್ದ ಸಜ್ಜೆ ಕುಸಿದು ಮೂವರು ಮೃತರಾದ ಸ್ಥಳದಲ್ಲಿಯೇ ಬೇಲೂರಿನ ಪತ್ರಿಕಾ ವಿತರಕರು ಬೆಳಿಗ್ಗೆ ಪೇಪರ್ ಜೊಡಿಸುವ ಕಾರ್ಯಕ ಮಾಡುತ್ತಿದ್ದರು. ಸದ್ಯ ಪಾಳುಬಿದ್ದ ಮಳಿಗೆ ಬಳಿ ಪ್ರವೇಶ ನಿಷೇಧಿಸಿದ ಕಾರಣದಿಂದ ಪುರಸಭಾ ವಾಣಿಜ್ಯ ಮಳಿಗೆ ಮುಂಭಾಗದಲ್ಲಿ ಪೇಪರ್ ಜೋಡಿಸಲು ಮುಂದಾಗಿದ್ದಾರೆ. ದುರಂತವೆಂದರೆ ಪುರಸಭಾ ವಾಣುಜ್ಯ ಮಳಿಗೆಗಳು ಕೂಡ ಶಿಥಿಲವಾಗಿದ್ದು ಪತ್ರಿಕಾ ವಿತರಕರು ನಮಗೆ ಶಾಶ್ವತವಾದ ತಾಣವನ್ನು ನೀಡಬೇಕು ಎಂದು ಇಲ್ಲಿನ ಪತ್ರಿಕಾ ವಿತರಕರಾದ ಗಣೇಶ್, ಲೋಹಿತ್ ಮತ್ತು ಮಹೇಶ್ ಆಗ್ರಹಿಸಿದ್ದಾರೆ.
,,,,,,,,,,,,,,,,,,,,,,,,,,,,,,,,,,,,,,,,,,,,,,,,
ಬಾಕ್ಸ್ ನ್ಯೂಸ್
ಎ.ಆರ್.ಆಶೋಕ್, ಅಧ್ಯಕ್ಷರು ಪುರಸಭೆ ಬೇಲೂರು.
ಪ್ರಜಾಪ್ರಭುತ್ವದಲ್ಲಿ ಪತ್ರಿಕಾರಂಗಕ್ಕೆ ತನ್ನದೆಯಾದ ಸ್ಥಾನವಿದೆ. ಹಾಗೇಯೆ ಪತ್ರಿಕಾ ವಿತರಕರ ಪಾತ್ರದ ಬಗ್ಗೆ ಖುದ್ದು ತಿಳಿದಿರುವೆ. ಇಲ್ಲಿನ ಪತ್ರಿಕಾವಿರಕರಿಗೆ ಖಾಯಂ ಸ್ಥಳ ನೀಡಲು ನಾವುಗಳು ಬದ್ದವಾಗಿದ್ದು, ಅವರಿಗೆ ಅನುಕೂಲವಾಗುವ ಜಾಗದ ಬಗ್ಗೆ ಪುರಸಭೆಗೆ ಮನವಿ ನೀಡಿದರೆ ಸದಸ್ಯರ ಮತ್ತು ಅಧಿಕಾರಿಗಳ ಅಭಿಪ್ರಾಯ ಪಡೆದು ವ್ಯವಸ್ಥೆ ಕಲ್ಪಿಸಲಾಗುತ್ತದೆ ಎಂದರು.

,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,
ಬಾಕ್ಸ್ ನ್ಯೂಸ್
ಬಿ.ಬಿ.ಶಿವರಾಜ್, ಕಾರ್ಯದರ್ಶಿ ತಾ.ಪತ್ರಕರ್ತರ ಸಂಘ ಬೇಲೂರು.
;-ಸೂರ್ಯ ಉದಯಿಸುವ ಮುನ್ನವೇ ಮನೆಗಳಿಗೆ ಸುದ್ದಿಮನೆಯ ಸುದ್ದಿಗಳನ್ನು ತಿಳಿಸುವ ಪತ್ರಿಕಾ ವಿತರಕರಿಗೆ ಬೇಲೂರಿನಲ್ಲಿ ಖಾಯಂ ಜಾಗವಿಲ್ಲದೆ ಪರದಾಟವಾಗಿದೆ. ಮೊದಲೆ ಶಿಥಿಲವಾದ ವಾಣಿಜ್ಯ ಮಳಿಗೆಯಲ್ಲಿ ನಿತ್ಯ ಪೇಪರ್ ಜೋಡಿಸುತ್ತಿದ್ದಾರೆ ಪುರಸಭೆ ಅಧ್ಯಕ್ಷರು ಈ ಬಗ್ಗೆ ಗಮನ ನೀಡಿ ಶಾಶ್ವತ ಪರಿಹಾರ ನೀಡಬೇಕು ಎಂದು ಮನವಿ ಮಾಡಿದರು.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.