Categories
ಚಿಕ್ಕಮಗಳೂರು

ಕಾಫಿನಾಡಲ್ಲಿ ಮೊಳಗಿದ ದೇಶ ಭಕ್ತಿ..!

ಕಾಫಿನಾಡಲ್ಲಿ ಮೊಳಗಿದ ದೇಶ ಭಕ್ತಿ..!
– ಎಲ್ಲಾ ತಾಲೂಕಲ್ಲಿ ಸ್ವಾತಂತ್ರ್ಯ ಹಬ್ಬದ ಆಚರಣೆ
– ಉಸ್ತುವಾರಿ ಸಚಿವ ಜಾರ್ಜ್ ಧ್ವಜಾರೋಹಣ
– ಮಕ್ಕಳ ಪಥ ಸಂಚಲನ: ಎಲ್ಲೆಡೆ ವಿವಿಧ ಕಾರ್ಯಕ್ರಮ

NAMMUR EXPRESS NEWS
ಚಿಕ್ಕಮಗಳೂರು: ಚಿಕ್ಕಮಗಳೂರಿನಲ್ಲಿ ಸ್ವಾತಂತ್ರೋತ್ಸವದ ಅಂಗವಾಗಿ ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ ಜಾರ್ಜ್ ಧ್ವಜಾರೋಹಣ ನೇರವೇರಿಸಿದರು. ಚಿಕ್ಕಮಗಳೂರು ನಗರದ ಸುಭಾಷ್ ಚಂದ್ರಬೋಸ್ ಆಟದ ಮೈದಾನದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದ್ದು ಶಾಸಕ ತಮ್ಮಯ್ಯ, ಡಿ.ಸಿ ಮೀನಾ ನಾಗರಾಜ್, ಎಸ್ಪಿ ಉಮಾ ಪ್ರಶಾಂತ್ ಸೇರಿ ಹಲವರು ಭಾಗಿಯಾಗಿದ್ದರು. ಸ್ಥಳೀಯ ಜನಪ್ರತಿನಿಧಿಗಳು, ಶಾಲಾ ಕಾಲೇಜು ಮಕ್ಕಳು ಭಾಗವಹಿಸಿದ್ದರು.

ಶೃಂಗೇರಿಯಲ್ಲಿ ಎಬಿವಿಪಿ ಬೃಹತ್ ತಿರಂಗ ಮೆರವಣಿಗೆ!

ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿಯಲ್ಲಿ ಎಬಿವಿಪಿಯ ನೂರಾರು ಕಾರ್ಯಕರ್ತರು ಧ್ವಜ ಹಿಡಿದು ತಿರಂಗದ ಮೆರವಣಿಗೆ ಭಾಗವಹಿಸಿ ಸ್ವಾತಂತ್ರ್ಯ ದಿನವನ್ನು ವಿಶೇಷವಾಗಿ ಆಚರಿಸಿದರು.

ಕೊಪ್ಪದಲ್ಲಿ ಸ್ವಾತಂತ್ರ್ಯ ದಿನಾಚರಣೆ

ಕೊಪ್ಪದಲ್ಲಿ ಸ್ವಾತಂತ್ರ್ಯ ದಿನಾಚರಣೆಯನ್ನು ಸಂಭ್ರಮ ಸಡಗರದಿಂದ ಆಚರಣೆ ಮಾಡಲಾಯಿತು.ಆಟೋ ಚಾಲಕರು, ಶಾಲಾ, ಕಾಲೇಜು ವಿದ್ಯಾರ್ಥಿಗಳು ಸ್ವಾತಂತ್ರ್ಯ ದಿನಾಚರಣೆಯಲ್ಲಿ ಭಾಗಿಯಾದರು.

ಉಜಿರೆಯಲ್ಲಿ ಸ್ವಾತಂತ್ರ್ಯ ದಿನ ಆಚರಿಸಿದ ರಾಜೇಗೌಡ!

ಉಜಿರೆಯಲ್ಲಿ ನ್ಯಾಚುರೋಪತಿ ಚಿಕಿತ್ಸೆ ಪಡೆಯಲು ಹೋಗಿದ್ದ ಶೃಂಗೇರಿ ಶಾಸಕ ರಾಜೇಗೌಡ ಅವರು ಅಲ್ಲಿಯೇ ಧ್ವಜಾರೋಹಣ ಮಾಡಿದರು. ಕಾಲೇಜಿನ ವಿದ್ಯಾರ್ಥಿಗಳು, ಸಿಬ್ಬಂದಿ ಭಾಗವಹಿಸಿದ್ದರು.

ಇದನ್ನೂ ಓದಿ : ಜನರ ಕಿವಿಗೆ ಹೂ ಮುಡಿಸುತ್ತಿರುವ ಕಾಂಗ್ರೆಸ್ ಸರ್ಕಾರ!

[embedyt] https://www.youtube.com/watch?v=p9w93rFeg28%5B/embedyt%5D

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.