Categories
ಬೆಂಗಳೂರು

ಸ್ಪಂದನಾ ನೆನಪು: ಇಂದು ಉತ್ತರ ಕ್ರಿಯೆ

ಸ್ಪಂದನಾ ನೆನಪು: ಇಂದು ಉತ್ತರ ಕ್ರಿಯೆ
– ಮರೆಯಾದ ಸಂಗಾತಿ ನೆನೆದು ವಿಜಯ ರಾಘವೇಂದ್ರ ಭಾವುಕ
– ಬೆಂಗಳೂರಲ್ಲಿ ಎರಡು ಕುಟುಂಬದಿಂದ ಕಾರ್ಯ

NAMMUR EXPRESS NEWS
ಬೆಂಗಳೂರು: ಥಾಯ್ಲೆಂಡ್‌ ಪ್ರವಾಸಕ್ಕೆ ತೆರಳಿದ್ದ ವೇಳೆಯಲ್ಲಿ ಹೃದಯಾಘಾತವಾಗಿ ಮೃತಪಟ್ಟ ವಿಜಯ ರಾಘವೇಂದ್ರ ಪತ್ನಿ ಸ್ಪಂದನಾ ಅವರ ಉತ್ತರ ಕ್ರಿಯೆ ಬೆಂಗಳೂರಿನಲ್ಲಿ ಮಂಗಳವಾರ ನಡೆಯುತ್ತಿದೆ. ಆ.6ರ ಭಾನುವಾರದಂದು ನಿಧನವಾಗಿದ್ದು, ಉತ್ತರ ಕ್ರಿಯೆಯನ್ನು ದಿನಾಂಕ 16-08-2023 ರ ಬುಧವಾರದಂದು ಮಲ್ಲೇಶ್ವರದ ಸ್ವಗೃಹದಲ್ಲಿ ಬೆಳಗ್ಗೆ 8 ಗಂಟೆಯಿಂದ ನಡೆಸಲಾಗುತ್ತಿದೆ. ಬಳಿಕ ಕೋದಂಡರಾಮಪುರದ ಯಂಗ್ ಸ್ಟಾರ್ಸ್ ಕಬಡ್ಡಿ ಆಟದ ಮೈದಾನದಲ್ಲಿ ( ಬಿಬಿಎಂಪಿ ಮೈದಾನ ) ಭೋಜನವನ್ನು ಹಮ್ಮಿಕೊಳ್ಳಲಾಗಿದೆ. ಸ್ಪಂದನಾ ತವರು ಬಿ.ಕೆ ಶಿವರಾಂ ಹಾಗೂ ಎಸ್. ಎ.ಚೆನ್ನೇಗೌಡರು ಮತ್ತು ಸಮಸ್ತ ಕುಟುಂಬಸ್ಥರು ಭಾಗಿಯಾಗಿದ್ದಾರೆ.

ಇದನ್ನೂ ಓದಿ : ಜನರ ಕಿವಿಗೆ ಹೂ ಮುಡಿಸುತ್ತಿರುವ ಕಾಂಗ್ರೆಸ್ ಸರ್ಕಾರ!

[embedyt] https://www.youtube.com/watch?v=p9w93rFeg28%5B/embedyt%5D

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.