ಚಿಕ್ಕಮಗಳೂರು ಟಾಪ್ ನ್ಯೂಸ್
* ಒಂದು ವರ್ಷದ ಮಗುವಿನ ಮೇಲೆ ಬಿಸಿ ಸುರಿದ ವಿಶೇಷ ದತ್ತು ಸಂಸ್ಥೆ ಸಿಬ್ಬಂದಿ
* ಅಪ್ರಾಪ್ತ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ,ಪೋಕ್ಸೋ ಕೇಸ್ ದಾಖಲು
NAMMMUR EXPRESS NEWS
* ಒಂದು ವರ್ಷದ ಮಗುವಿನ ಮೇಲೆ ಬಿಸಿ ಸುರಿದ ವಿಶೇಷ ದತ್ತು ಸಂಸ್ಥೆ ಸಿಬ್ಬಂದಿ
ಚಿಕ್ಕಮಗಳೂರು: ಒಂದು ವರ್ಷ ಮೂರು ತಿಂಗಳ ಮಗುವಿನ ಮೇಲೆ ಬಿಸಿನೀರು ಸುರಿದ ಹೃದಯ ವಿದ್ರಾವಿಕ ಘಟನೆ ನಡೆದಿದೆ.
ಶಿಶು ಆರೈಕಾ ಸಿಬ್ಬಂದಿ ಎಡವಟ್ಟಿನಿಂದಾಗಿ ಹೆಣ್ಣು ಮಗುವೊಂದು ನರಳುವಂತಾಗಿದೆ. ಒಂದು ವರ್ಷ ಮೂರು ತಿಂಗಳ ಹೆಣ್ಣು ಮಗುವಿನ ಮೇಲೆ ಸಿಬ್ಬಂದಿ ಕುದಿಯುವ ಬಿಸಿ ನೀರು ಸುರಿದ ಪರಿಣಾಮ ಸೊಂಟದ ಕೆಳಭಾಗ ಸಂಪೂರ್ಣ ಸುಟ್ಟು ಹೋಗಿದೆ. ಮಲ ವಿಸರ್ಜನೆ ಮಾಡಿದ್ದ ಮಗುವನ್ನು ಸ್ವಚ್ಛ ಮಾಡುವಾಗ ದುರ್ಘಟನೆ ಸಂಭವಿಸಿದೆ.ನಗರದ ಗಾಂಧಿ ನಗರದಲ್ಲಿರುವ ಸರ್ಕಾರಿ ವಿಶೇಷ ದತ್ತು ಸಂಸ್ಥೆ ಮಕ್ಕಳ ರಕ್ಷಣಾ ನಿರ್ದೇಶನಾಲಯದ ಅಡಿಯಲ್ಲಿ ಬರಲಿದೆ. ಅನಾಥ ಮಕ್ಕಳನ್ನು ರಕ್ಷಣೆ ಮಾಡಿ ಆರೈಕೆ ಮಾಡುವ ಜವಾಬ್ದಾರಿ ಹೊಂದಿದೆ. ಆದರೆ ಸಿಬ್ಬಂದಿಗಳ ಬೇಜವಾಬ್ದಾರಿಗೆ ಮಗು ನರಳಾಡುವಂತಾಗಿದೆ.
* ಅಪ್ರಾಪ್ತ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ,ಪೋಕ್ಸೋ ಕೇಸ್ ದಾಖಲು
ಶೃಂಗೇರಿ: ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪದ ಮೇರೆಗೆ ತಾಲೂಕಿನ ಕಾಂಚೀನಗರದ ನಿವಾಸಿ ಯುವಕ ಸಚಿನ್ ವಿರುದ್ಧ ಶೃಂಗೇರಿ ಪೊಲೀಸ್ ಠಾಣೆಯಲ್ಲಿ ಪೊಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ಶಿಶು ಅಭಿವೃದ್ಧಿ ಯೋಜನಾಧಿಕಾರಿಯ ದೂರಿನ ಅನ್ವಯ,ಬಾಲಕಿಯ ಹೇಳಿಕೆ ಆಧರಿಸಿ ಸಚಿನ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಬಾಲಕಿಯು ಅನುತೀರ್ಣಳಾಗಿದ್ದು, ಮನೆಯಲ್ಲೇ ಇದ್ದುದರಿಂದ ಆಕೆಯನ್ನು ಮತ್ತೆ ಶಾಲೆಗೆ ತೆರಳುವಂತೆ ಪ್ರೇರೇಪಿಸಲು ಶಿಶು ಅಭಿವೃದ್ಧಿ ಯೋಜನೆಯ ಮೇಲ್ವಿಚಾರಕರ ತಂಡ ಬಾಲಕಿಯ ಮನೆಗೆ ತೆರಳಿತ್ತು. ಮಹಿಳಾ ಸಾಂತ್ವನ ಕೇಂದ್ರದ ಆಪ್ತ ಸಮಾಲೋಚಕರ ಜೊತೆ ಬಾಲಕಿ ಸರಿಯಾಗಿ ಪ್ರತಿಕ್ರಿಯಿಸದೆ ಇದ್ದುದರಿಂದ ಬಾಲಕಿ ಮತ್ತು ಅವಳ ತಾಯಿಯನ್ನು ಮಹಿಳಾ ಸಾಂತ್ವನ ಕೇಂದ್ರದಲ್ಲಿ ಆಪ್ತ ಸಮಾಲೋಚನೆ ಮಾಡಿದಾಗ ಆಕೆ ಗರ್ಭಿಣಿಯಾಗಿರುವುದು ಗೊತ್ತಾಗಿದೆ. ಬಾಲಕಿಯ ಆರೋಗ್ಯ ತಪಾಸಣೆ ನಡೆಸಿದಾಗ ಆಕೆ 2 ತಿಂಗಳ ಗರ್ಭಿಣಿಯಾಗಿರುವುದು ಗೊತ್ತಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.