ಮೂಡಿಗೆರೆಯಲ್ಲಿ ಶ್ರೀ ಜಗದ್ಗುರು ರೇಣುಕಾಚಾರ್ಯ ಹಾಗೂ ಜಗಜ್ಯೋತಿ ಬಸವೇಶ್ವರ ಜಯಂತಿ
* ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದಿಂದ ಕಾರ್ಯಕ್ರಮ ಆಯೋಜನೆ
* ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮತ್ತು ಮಹಿಳಾ ಹಾಗೂ ಯುವ ಘಟಕ ಪದಗ್ರಹಣ
NAMMMUR EXPRESS NEWS
ಮೂಡಿಗೆರೆ : ಮೂಡಿಗೆರೆ ಮಹಾಂತಿನ ಮಠ ಆವರಣದಲ್ಲಿ ವತಿಯಿಂದ ಜಗದ್ಗುರು ರೇಣುಕಾಚಾರ್ಯ ಜಯಂತಿ ಹಾಗೂ ಕರ್ನಾಟಕ ಸಾಂಸ್ಕೃತಿಕ ನಾಯಕ ವಿಶ್ವಗುರು ಬಸವೇಶ್ವರ ಜಯಂತಿ ಕಾರ್ಯಕ್ರಮವನ್ನು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದಿಂದ ಆಯೋಜಿಸಲಾಗಿತ್ತು.
ಜಗದ್ಗುರು ರೇಣುಕಾಚಾರ್ಯ ಹಾಗೂ ಜಗಜ್ಯೋತಿ ಬಸವೇಶ್ವರ ಈ ಸಮಾಜದ ಎರಡು ಕಣ್ಣುಗಳು ಇದ್ದಹಾಗೆ ಎಂದು ಮಾಚಗೊಂಡನ ಹಳ್ಳಿ ಬೇರುಗಂಡಿ ಬ್ರಹನ್ಮಠದ ಷ.ಬ್ರ.ಶ್ರೀ ರೇಣುಕಾ ಮಹಾಂತ ಶಿವಾಚಾರ್ಯ ಸ್ವಾಮಿ ಗಳು ಹೇಳಿದರು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮತ್ತು ಮಹಿಳಾ ಹಾಗೂ ಯುವ ಘಟಕ ಪದಗ್ರಹಣ ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದರು.
ಪ್ರತಿಯೊಬ್ಬರು ವೀರಶೈವ ಧರ್ಮದ ಮಹಾನ್ ಶರಣ ಮತ್ತು ಗುರುಗಳಲ್ಲಿ ಒಬ್ಬರು ಇವರ ತತ್ವ ಬದುಕಿನ ಚರಿತ್ರೆ ಮತ್ತು ಧಾರ್ಮಿಕ ಸಾಧನೆಗಳು ಮತ್ತು ಬಸವಣ್ಣನವರ ಸಾಮಾಜಿಕ ನ್ಯಾಯ, ಕಾಯಕ, ಯೋಗ, ಮಹಿಳಾ ಸಬಲೀಕರಣ, ವಿಚಾರಧಾರೆ,ಚಿಂತನೆ ಸಂದೇಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಮಾನವ ಧರ್ಮಕ್ಕೆ ಜಯವಾಗಲಿ ಧರ್ಮದಿಂದಲೇ ವಿಶ್ವಕ್ಕೆ ಶಾಂತಿ ಎಂಬ ಸಂದೇಶಗಳನ್ನು ಜಗದ್ಗುರು ರೇಣುಕಾಚಾರ್ಯರು ಜಗತ್ತಿಗೆ ಸಾರಿದ್ದಾರೆ ವಿಶ್ವ ಕಂಡ ಮೇರು ವ್ಯಕ್ತಿತ್ವದ ದಾರ್ಶನಿಕರಾದ ರೇಣುಕಾಚಾರ್ಯ ಹಾಗೂ ಬಸವಣ್ಣ ಇಂತಹ ಮಹನೀಯರು ಸದಾ ಸ್ಮರಣೆ ಮಾಡಬೇಕು ಎಂದರು.
ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾ ಕಾರ್ಯನಿರ್ವಾಹಕ ನಿರ್ದೇಶಕ ಡಾ.ಮೋಹನ್ ರಾಜಣ್ಣ ಪ್ರಾಸ್ತಾವಿಕವಾಗಿ ಮಾತನಾಡುತ್ತಾ ರೇಣುಕಾಚಾರ್ಯರು ವೀರಶೈವ ಧರ್ಮ ಸ್ಥಾಪಿಸಿದರೆ ನಂತರ ಇದನ್ನು ಬಸವಣ್ಣನವರು ಶರಣ ಸಂಸ್ಕೃತಿ ಎಂದು ಪ್ರತಿ ಪಾದಿಸಿದರು ಎಂದರು.
ಅಖಿಲಭಾರತ ವೀರಶೈವ ಲಿಂಗಾಯತ ಮಹಾಸಭಾ ಚಿಕ್ಕಮಗಳೂರು ಜಿಲ್ಲಾ ಅಧ್ಯಕ್ಷ ಹೆಚ್.ಎಂ.ಲೋಕೇಶ್ ರವರು ಮಹಿಳಾ ಘಟಕ ಮತ್ತು ಯುವ ಘಟಕದ ನೂತನ ಅಧ್ಯಕ್ಷರು ಮತ್ತು ಪದಾಧಿಕಾರಿಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಿ ಮಾತನಾಡಿದರು.
ಆಧುನಿಕ ವಚನಕಾರರಾದ ಶ್ರೀ ರುದ್ರಮೂರ್ತಿ ಎಲೆ ರಾಂಪುರ ಇವರಿಂದ ಸರಳ ವಚನಗಳಲ್ಲಿ ವೀರಶೈವ ಲಿಂಗಾಯತ ಧರ್ಮ ಎಂಬ ವಿಷಯದ ಕುರಿತು ಅತ್ಯುತ್ತಮವಾಗಿ ಉಪನ್ಯಾಸ ನೆಡೆಯಿತು.
ಮಹಿಳಾ ಘಟಕದ ಅಧ್ಯಕ್ಷರಾಗಿ ರಾಜಲಕ್ಸ್ಮಿ ಕಾಂತರಾಜ್ ಮತ್ತು ಯುವ ಘಟಕದ ಅಧ್ಯಕ್ಷರಾಗಿ ಎ.ಎನ್. ಪ್ರತಾಪ್ರವರು ಹಾಗೂ ಅವರ ತಂಡದವರು ಜವಾಬ್ದಾರಿ ಸ್ವೀಕರಿಸಿದರು.
ರಾಜ್ಯ ಕಾರ್ಯನಿರ್ವಾಹಕ ನಿರ್ದೇಶಕ ಎಂ.ಆರ್ ಪೂರ್ಣೇಶ್ ಮೂರ್ತಿ ಮತ್ತು ಮಹಿಳಾ ಘಟಕದ ಅಧ್ಯಕ್ಷೆ ರಾಜಲಕ್ಷ್ಮೀ ಕಾಂತರಾಜ ಮಾತನಾಡಿದರು.
ಎಸ್ಎಸ್ಎಲ್ಸಿ ಮತ್ತು ಪಿ.ಯು.ಸಿ ಅತೀ ಹೆಚ್ಚು ಅಂಕ ಗಳಿಸಿದ 16 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.
ಜಿಲ್ಲಾ ಯುವ ಘಟಕದ ಅಧ್ಯಕ್ಷ ಶಿವಕುಮಾರ್
ಚಿಕ್ಕಮಗಳೂರು, ತಾಲ್ಲೂಕು ಅಧ್ಯಕ್ಷ.ಕೆ.ಸಿ. ನಿಶಾಂತ್,
ರಾಜ್ಯ ಮಹಿಳಾ ನಿರ್ದೇಶಕಿ
ಶ್ರೀಮತಿ ಕಲಾರುದ್ರೇಶ್,
ಜಿಲ್ಲಾ ಉಪಾಧ್ಯಕ್ಷರಾದ ಶ್ರೀಮತಿ ಶಾಲಿನಿ ಅನಿಲ್, ಕೆ .ಆರ್ ದ್ರುವ ಕುಮಾರ್,ಶ್ರೀ ರುದ್ರಮುನಿ, ಜಿಲ್ಲಾ ನಿರ್ದೇಶಕರಾದ ಎಂ.ಡಿ.ಇಂದ್ರೇಶ್,ಲತಾ ರವಿ,ಜ್ಯೋತಿ ಪ್ರಭು ಕುಮಾರ್,ಬಿ.ಬಸವರಾಜ್,ಅಶೋಕ್, ಶಿವಕುಮಾರ್,ಕಡೂರು ರೇಣುಕಪ್ಪ,ಎಂ.ಸಿ.ಆದರ್ಶ,ಬಿ. ಕೆ.ಚಂದ್ರಶೇಖರ್,ಸಿ.ಎಸ್.ಚಂದ್ರಶೇಖರ್ ಹಾಗೂ ಮುಂತಾದವರು ಉಪಸ್ಥಿತರಿದ್ದರು.
