Categories
ಚಿಕ್ಕಮಗಳೂರು

ಟಾಪ್ ನ್ಯೂಸ್ ಚಿಕ್ಕಮಗಳೂರು

ಟಾಪ್ ನ್ಯೂಸ್ ಚಿಕ್ಕಮಗಳೂರು

– ಕಾಫಿ ನಾಡ ಬಿ.ಎಸ್.ಎನ್.ಎಲ್ ಟವರ್ ಸಮಸ್ಯೆಗೆ ಮುಕ್ತಿ!
– ಅಧಿಕಾರಿಗಳೊಂದಿಗೆ ಸಂಸದ ಶ್ರೀನಿವಾಸ್ ಪೂಜಾರಿ ಸಭೆ
– ಬಿಜೆಪಿ ಫಲಾನುಭವಿ ಪ್ರಕೋಷ್ಟರಾಜ್ಯ ಸಮಿತಿ ಸದಸ್ಯರಾಗಿ ಪ್ರವೀಣ್ ಖಾಂಡ್ಯ
– ಶೃಂಗೇರಿ: ಸರ್ಕಾರಿ ಡಿಗ್ರಿ ಕಾಲೇಜಲ್ಲಿ ಸಾಂಪ್ರದಾಯಿಕ ದಿನ!

NAMMUR EXPRESS NEWS

ಚಿಕ್ಕಮಗಳೂರು: ಚಿಕ್ಕಮಗಳೂರು ಜಿಲ್ಲೆಯಲ್ಲಿ ಮೊಬೈಲ್ ಟವರ್ ಸಮಸ್ಯೆಗಳ ಬಗ್ಗೆ ಬಿ.ಎಸ್.ಎನ್.ಎಲ್ ನ ಹಿರಿಯ ಅಧಿಕಾರಿಗಳೊಂದಿಗೆ ಬೆಂಗಳೂರಿನ ಗೃಹ ಕಛೇರಿಯಲ್ಲಿ ಪೂರ್ವಬಾವಿ ಸಭೆ ನಡೆಸಲಾಯಿತು.
ಅಧಿಕಾರಿಗಳು ಎಲ್ಲಾ ತಾಲೂಕುವಾರು ಟವರ್‌ಗಳ ಸಮಸ್ಯೆ ಬಗ್ಗೆ ಮಾಹಿತಿ ಒದಗಿಸಿ ರಾಷ್ಟ್ರೀಯ ಹೆದ್ದಾರಿ ಅಗೆಯುವಿಕೆಯಿಂದ ಅಗುತ್ತಿರುವ ತೊಂದರೆ, ಟವರ್‌ಗಳಿಗೆ ವಿದ್ಯತ್ ಪೂರೈಸುವಲ್ಲಿ ಮೆಸ್ಕಾಂನಿಂದ ಅಗುತ್ತಿರುವ ಸಮಸ್ಯೆ, ಅರಣ್ಯ ಇಲಾಖೆಯ ಅನುಮತಿಯ ವಿಳಂಬದಿಂದ ಅಗುವ ತೊಡಕುಗಳ ಬಗ್ಗೆ ಮಾಹಿತಿ ನೀಡಿದರು.
ಅಧಿಕಾರಿಗಳು ಒದಗಿಸಿದ ಮಾಹಿತ ಆಲಿಸಿ ಚಿಕ್ಕಮಗಳೂರು ಜಿಲ್ಲೆಯ ಜಿಲ್ಲಾಧಿಕಾರಿಗಳೊಂದಿಗೆ ದೂರವಾಣಿಯಲ್ಲಿ ಮಾತನಾಡಿ ಜಿಲ್ಲಾಧಿಕಾರಿಗಳ ಸಮಕ್ಷಮದಲ್ಲಿ ದಿನಾಂಕ 05-07-24 ಶುಕ್ರವಾರದಂದು ಟವರ್‌ಗಳ ಸಮಸ್ಯೆ ಪರಿಹಾರದ ಕುರಿತು ಸಂಬಂಧಿಸಿದ ಎಲ್ಲಾ ಇಲಾಖಾ ಅಧಿಕಾರಿಗಳೊಂದಿಗೆ ಸಭೆ ನಡೆಯಲಿದೆ.
ಸಭೆಯಲ್ಲಿ ಬಿ.ಎಸ್.ಎನ್.ಎಲ್ ನ ಹಿರಿಯ ಅಧಿಕಾರಿಗಳಾದ, ಸುಜಿತ್ ಕುಮಾರ್, ಪ್ರಿನ್ಸಿಪಲ್ ಜನರಲ್ ಮ್ಯಾನೆಜರ್, ಅಲ್‌ಖೇಶ್ ದೇಸಾಯಿ. ಅಡಿಷನಲ್‌ ಜನರಲ್ ಮ್ಯಾನೆಜರ್, ಎಸ್. ಪಿ ಜಗದಾಳೆ, ಡೆಪ್ಯೂಟಿ ಜನರಲ್ ಮ್ಯಾನೆಜ‌ರ್, ಅನಂದ ಕೃಷ್ಣಾ, ಅಸಿಸ್ಟೆಂಟ್ ಜನರಲ್ ಮ್ಯಾನೆಜರ್ ಹಾಗೂ ಕೆ.ಆ‌ರ್. ಧರ್ಮಪ್ಪ ಸಂಸದರ ಆಪ್ತ ಕಾರ್ಯದರ್ಶಿಗಳು ಉಪಸ್ಥಿತರಿದ್ದರು.

ಫಲಾನುಭವಿ ಪ್ರಕೋಷ್ಟರಾಜ್ಯ ಸಮಿತಿ ಸದಸ್ಯರಾಗಿ ಪ್ರವೀಣ್ ಖಾಂಡ್ಯ

ಭಾರತೀಯ ಜನತಾ ಪಾರ್ಟಿ ಫಲಾನುಭವಿಗಳ ಪ್ರಕೋಷ್ಟದ ರಾಜ್ಯ ಸಮಿತಿ ಸದಸ್ಯರಾಗಿ ಪ್ರವೀಣ್ ಖಾಂಡ್ಯರವರು ಆಯ್ಕೆಯಾಗಿದ್ದಾರೆ.

ಶೃಂಗೇರಿಯಲ್ಲಿ ವಿದ್ಯಾರ್ಥಿಗಳಿಗಾಗಿ ಸಾಂಪ್ರದಾಯಿಕ ದಿನ

ಶೃಂಗೇರಿ: ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಶೃಂಗೇರಿಯಲ್ಲಿ ವಿದ್ಯಾರ್ಥಿಗಳಿಗಾಗಿ ಸಾಂಪ್ರದಾಯಿಕ ದಿನವನ್ನು ಏರ್ಪಡಿಸಲಾಗಿತ್ತು.ವಿದ್ಯಾರ್ಥಿಗಳಲ್ಲಿ ಭಾರತೀಯ ಸಂಪ್ರದಾಯದ ಮಹತ್ವ ಹಾಗೂ ಅನುಕರಣೆಯನ್ನು ಪ್ರೇರೇಪಿಸಲು ಕಾಲೇಜಿನ ಪ್ರಾಂಶುಪಾಲರಾದ ಭಾರತೀಯವರ ಅಧ್ಯಕ್ಷತೆಯಲ್ಲಿ ಹಾಗೂ ಸಾಂಸ್ಕೃತಿಕ ವೇದಿಕೆಯ ಸಂಚಾಲಕರಾದ ಅಶಾ ಮತ್ತು ಕಾಲೇಜಿನ ಎಲ್ಲಾ ಉಪನ್ಯಾಸಕ ವರ್ಗದ ಸಹಯೋಗದಲ್ಲಿ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ವಿದ್ಯಾರ್ಥಿಗಳು ಸಾಂಪ್ರದಾಯಿಕ ಉಡುಗೆತೊಟ್ಟು ಕಾಲೇಜಿನಲ್ಲಿ ಹಬ್ಬದ ವಾತಾವಾರಣ ಸೃಷ್ಠಿಸಿ ಸಂಭ್ರಮಿಸಿದರು.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.