ಜು.13ರಂದು ನೆಂಪೆ ದೇವರಾಜ್ ಅವರ ಕಾಳಿಂಗ ಕಥನ ಪುಸ್ತಕ ಬಿಡುಗಡೆ
– ತೀರ್ಥಹಳ್ಳಿ ಬಂಟರ ಭವನದಲ್ಲಿ ಕಾರ್ಯಕ್ರಮ
– ಸಾಹಿತ್ಯಾಸಕ್ತರಿಗೆ ಸಮಾರಂಭಕ್ಕೆ ಆತ್ಮೀಯವಾಗಿ ಆಹ್ವಾನ
NAMMUR EXPRESS NEWS
ತೀರ್ಥಹಳ್ಳಿ: ಸಾಹಿತಿ, ಪತ್ರಕರ್ತ ನೆಂಪೆ ದೇವರಾಜ್ ಬರೆದ ‘ಕಾಳಿಂಗ ಕಥನ’ ಪುಸ್ತಕದ ಬಿಡುಗಡೆ ಸಮಾರಂಭ ಜು.13ರ ಶನಿವಾರ ಸಂಜೆ 4 ಗಂಟೆಗೆ ತೀರ್ಥಹಳ್ಳಿ ಬಂಟರ ಭವನದಲ್ಲಿ ಜರುಗಲಿದೆ. ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಡಾ.ಎಲ್.ಎನ್. ಮುಕುಂದರಾಜ್ ಪುಸ್ತಕ ಬಿಡುಗಡೆಗೊಳಿಸುವರು. ಮೈಸೂರು ಮಹಾರಾಣಿ ಕಲಾಕಾಲೇಜು ಪ್ರಾಧ್ಯಾಪಕರಾದ ಡಾ.ಜಯಶಂಕರ ಹಲಗೂರ ಪುಸ್ತಕದ ಕುರಿತು ಮಾತನಾಡುವರು. ತೀರ್ಥಹಳ್ಳಿ ತಾಲ್ಲೂಕು ಕ.ಸಾ.ಪ ಅಧಕ್ಷ ಟಿ.ಕೆ.ರಮೇಶ್ ಶೆಟ್ಟಿ ಸಮಾರಂಭದ ಅಧ್ಯಕ್ಷತೆ ವಹಿಸುವರು. ಜಿಲ್ಲಾ ಕಸಾಪ ಅಧ್ಯಕ್ಷ ಡಿ.ಮಂಜುನಾಥ್, ಸಾಹಿತ್ಯಾಸಕ್ತರ ಬಳಗದ ಕಡಿದಾಳು ದಯಾನಂದ, ತೀರ್ಥಹಳ್ಳಿ ಅನಘ ಸಹಕಾರ ಸಂಸ್ಥೆಯ ಅಧ್ಯಕ್ಷೆ ಮಮತಾ ಸಾಯಿನಾಥ್, ಸಾಹಿತಿ ಡಾ.ಕಲೀಮ್ ಉಲ್ಲಾ, ಪತ್ರಕರ್ತ ಶಿವಾನಂದ ಕರ್ಕಿ, ಕೃತಿಯ ಲೇಖಕ ನೆಂಪೆ ದೇವರಾಜ್ ಉಪಸ್ಥಿತರಿರುವರು. ಸಾಹಿತ್ಯಾಸಕ್ತರನ್ನು ಸಮಾರಂಭಕ್ಕೆ ಆತ್ಮೀಯವಾಗಿ ಆಹ್ವಾನಿಸಲಾಗಿದೆ.
