ಬಂಟ್ವಾಳದ 47 ಮಂದಿ ಹಿಮಾಚಲ ಪ್ರದೇಶದಲ್ಲಿ ಸೇಫ್!
– ಮನಾಲಿಗಳ ಹೆದ್ದಾರಿಯಲ್ಲಿ ಭೂಕುಸಿತ: ಭಾರೀ ದುರಂತ
– ಬಂಟ್ವಾಳದಿಂದ ತೀರ್ಥಕ್ಷೇತ್ರಕ್ಕೆಂದು ತೆರಳಿದ್ದ ಯಾತ್ರಿಕರು
ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ಬಂಟ್ವಾಳ: ಹಿಮಾಚಲ ಪ್ರದೇಶದ ಶಿಮ್ಲಾ ಮನಾಲಿಗಳ ಹೆದ್ದಾರಿಯಲ್ಲಿ ಭೂಕುಸಿತ ಸಂಭವಿಸಿದ್ದು, ಕೆಲವಷ್ಟು ವಾಹನಗಳು ಮಣ್ಣಿನಡಿಗೆ ಸಿಲುಕಿದೆ ಎನ್ನಲಾಗಿದೆ. ಈ ಸಂದರ್ಭದಲ್ಲಿ ಬಂಟ್ವಾಳದಿಂದ ತೀರ್ಥಕ್ಷೇತ್ರಕ್ಕೆಂದು ತೆರಳಿದ್ದ ನಲವತ್ತೇಳು ಮಂದಿ ಬ್ಲಾಕ್ ನಲ್ಲಿ ಸಿಲುಕಿಕೊಂಡಿದ್ದು, ಯಾರಿಗೂ ಅಪಾಯವಾಗದೆ ಸುರಕ್ಷಿತವಾಗಿದ್ದಾರೆ ಎಂಬ ಮಾಹಿತಿ ತಿಳಿದು ಬಂದಿದೆ. ಅಂದರೆ ಭೂಕುಸಿತ ನಡೆದ ಸ್ಥಳದಿಂದ, ಬಂಟ್ವಾಳದಿಂದ ತೆರಳಿದ್ದ ಪ್ರವಾಸಿಗರ ವಾಹನವು ಬಹು ದೂರದಲ್ಲಿರುವ ಕಾರಣ ಯಾವುದೇ ಸಮಸ್ಯೆ ಎದುರಾಗಿಲ್ಲ ಎಂದಿದ್ದಾರೆ. ಮೂರು ಕಿ.ಮೀ ವರೆಗೂ ವಾಹನಗಳು ಸಾಲುಗಟ್ಟಿ ನಿಂತಿದ್ದು, ಮಣ್ಣನ್ನು ತೆರವುಗೊಳಿಸುವ ಕಾರ್ಯ ತೀವ್ರಗತಿಯಲ್ಲಿ ಸಾಗಿದೆ. ಅಲ್ಲದೆ ನಡುವೆ ಅಂಗಡಿ ಮುಂಗಟ್ಟುಗಳು ಇರುವ ಕಾರಣ ಪ್ರಯಾಣಿಕರ ಊಟ, ತಿಂಡಿಗಳಿಗೆ ಯಾವುದೇ ರೀತಿಯ ತೊಂದರೆ ಉಂಟಾಗಿಲ್ಲ ಎನ್ನುವ ಮಾಹಿತಿ ಲಭಿಸಿದೆ.