Categories
ಕರಾವಳಿ ಮಂಗಳೂರು

ಕರಾವಳಿಯ ಬಾಲ ಪ್ರತಿಭೆಗೆ ಕರ್ನಾಟಕ ರಾಜ್ಯೋತ್ಸವ ಬಾಲ ಪ್ರಶಸ್ತಿ!

ಕರಾವಳಿಯ ಬಾಲ ಪ್ರತಿಭೆಗೆ ಕರ್ನಾಟಕ ರಾಜ್ಯೋತ್ಸವ ಬಾಲ ಪ್ರಶಸ್ತಿ!
– ತುಳು ಹಾಗೂ ಕನ್ನಡ ಸಿನಿಮಾದಲ್ಲಿ ನಟಿಸಿ ಮನ ಗೆದ್ದ ತನ್ಮಯ್‌ ಆ‌ರ್ ಶೆಟ್ಟಿ.
– ಬಾಲ ನಟನಾಗಿ ಮಾಡಿದ ಸಾಧನೆಗೆ ದಕ್ಕಿದ ಪುರಸ್ಕಾರ!

NAMMUR EXPRESS NEWS
ಮಂಗಳೂರು : ಬಾಲನಟ ತನ್ಮಯ್‌ ಆ‌ರ್. ಶೆಟ್ಟಿ ಅವರು ಕರ್ನಾಟಕ ರಾಜ್ಯೋತ್ಸವ ಬಾಲ ಪ್ರಶಸ್ತಿಗೆ ಆಯ್ಕೆಯಾಗಿದ್ದು, ಮಂಗಳೂರಿನ ಲೂರ್ಡ್ಸ್ ಸೆಂಟ್ರಲ್ ಸ್ಕೂಲ್‌ನ 8ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ತನ್ಮಯ್‌ ಆ‌ರ್. ಶೆಟ್ಟಿ ಸಿನಿಮಾ ರಂಗದಲ್ಲಿ ಬಾಲ ನಟನಾಗಿ ಮಾಡಿದ ಸಾಧನೆಗಾಗಿ ಈ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ತುಳು ಹಾಗೂ ಕನ್ನಡದ ಹಲವು ಸಿನಿಮಾದಲ್ಲಿ ನಟಿಸಿ ಜನರ ಮನ ಗೆದ್ದ ತನ್ಮಯ್‌ ಆ‌ರ್ ಶೆಟ್ಟಿ ಅವರು, ಮಗನೇ ಮಹಿಷ (ತುಳು), ಅಪರಾಧಿ ನಾನಲ್ಲ (ತುಳು), ಅಬತರ (ತುಳು), ಬನ್-ಟೀ (ಕನ್ನಡ), ಕರಿ ಹೈದಕರಿ ಅಜ್ಜ (ಕನ್ನಡ, ತುಳು. ಮಲಯಾಳಂ). ಸ್ಕೂಲ್ ಲೀಡರ್ (ಕನ್ನಡ) ಸೇರಿದಂತೆ ನಾನಾ ಸಿನಿಮಾಗಳಲ್ಲಿ ನಟಿಸಿ ಗಮನ ಸೆಳೆದಿದ್ದಾರೆ. ಬನ್-ಟೀ ಎಂಬ ಸಿನಿಮಾದಲ್ಲಿ ಲೀಡ್‌ ರೋಲ್‌ನಲ್ಲಿ ಕಾಣಿಸಿಕೊಂಡು, ಪ್ರೇಕ್ಷಕರ ಗಮನ ಸೆಳೆದು ತನ್ನ ನಟನಾ ಸಾಮರ್ಥ್ಯವನ್ನು ಸಾಬೀತು ಪಡಿಸಿದ್ದಾರೆ.

ಬಹುಮುಖ ಪ್ರತಿಭೆ ತನ್ಮಯ್‌:

ದೇವ್‌ದಾಸ್ ಕಾಪಿಕ್ಕಾಡ್ ಅವರ ಪುದರ್ ದೀತಿಜಿ ನಾಟಕದಲ್ಲಿಯೂ ನಟಿಸಿ, ರಂಗ ಭೂಮಿಯಲ್ಲೂ ಸೈ ಅನಿಸಿಕೊಂಡಿದ್ದಾರೆ. ಜತೆಗೆ ಯಕ್ಷಗಾನ, ಚೆಸ್, ಸೈಟಿಂಗ್, ಸ್ವಿಮ್ಮಿಂಗ್, ಚಿತ್ರಕಲೆ ಇತ್ಯಾದಿಗಳಲ್ಲೂ ತನ್ನನ್ನು ತೊಡಗಿಸಿಕೊಂಡಿದ್ದು, ಬಹುಮುಖ ಪ್ರತಿಭೆಯಾಗಿ ಗುರುತಿಸಿಕೊಂಡಿದ್ದಾರೆ. ಇದೀಗ ಇವರ ಸರ್ವತೋಮುಖ ಸಾಧನೆಯನ್ನು ಗುರುತಿಸಿ ಕರ್ನಾಟಕ ರಾಜ್ಯೋತ್ಸವ ಬಾಲ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದ್ದು, ಮಂಗಳೂರಿನ ಇನ್ವೆಂಜರ್ ಫೌಂಡೇಶನ್, ಕಟಪಾಡಿ ಪ್ರಥಮ್ ಮ್ಯಾಜಿಕ್ ವರ್ಲ್ಡ್ ಸಂಯುಕ್ತ ಆಶ್ರಯದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಡುಪಿ ಜಿಲ್ಲೆ ಸಹಯೋಗದಲ್ಲಿ ಕರ್ನಾಟಕ ಸುವರ್ಣ ಮಹೋತ್ಸವದ ಅಂಗವಾಗಿ 31-12-2023ರ ಭಾನುವಾರ ನಡೆದ ರಾಜ್ಯೋತ್ಸವ ಬಾಲ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಈ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.