Categories
ಶಿವಮೊಗ್ಗ

ನಗರದ ನಿತಿನ್ ಮತ್ತು ಸಹೋದರರ ಮೇಲೆ ಹಲ್ಲೆ..!

ನಗರದ ನಿತಿನ್ ಮತ್ತು ಸಹೋದರರ ಮೇಲೆ ಹಲ್ಲೆ..!
– ಕಾಂಗ್ರೆಸ್ ಫೇಲ್ಸ್ ಕರ್ನಾಟಕ- ವಿಜಯೇಂದ್ರ ಟ್ವಿಟ್

NAMMUR EXPRESS NEWS
ಶಿವಮೊಗ್ಗ: ಹೊಸನಗರ ತಾಲೂಕು ಬಿಜೆಪಿ ಯುವಮೋರ್ಚಾದ ಅಧ್ಯಕ್ಷ ನಗರ ನಿತಿನ್ ಮತ್ತು ಸಹೋದರನ ಮೇಲೆ ದಾಳಿಯಾಗಿರುವುದಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಟ್ವಿಟ್ ಮೂಲಕ ಕಾಂಗ್ರೆಸ್ ಪಕ್ಷವನ್ನ ಕಟುವಾಗಿ ಟೀಕಿಸಿದ್ದಾರೆ. ಹ್ಯಾಷ್ ಟ್ಯಾಗ್ ಬಳಸಿ ಕಾಂಗ್ರೆಸ್ ಫೇಲ್ಸ್ ಕರ್ನಾಟಕ ಎಂದು ಬಣ್ಣಿಸಿದ್ದಾರೆ. ಡಿ.31 ರಾತ್ರಿ ಹೊಸನಗರ ತಾಲೂಕು ಬಿಜೆಪಿ ಯುವಮೋರ್ಚಾದ ಅಧ್ಯಕ್ಷ ನಗರ ನಿತಿನ್ ಮತ್ತು ಸಹೋದರ ನವೀನ್ ಮೇಲೆ ಹಲ್ಲೆ ನಡೆದಿತ್ತು. ಈ ಹಲ್ಲೆಯು ಕಾಂಗ್ರೆಸ್‌ ಪಕ್ಷದ ಪ್ರಕಾಶ್‌ ಮತ್ತಿತರಿಂದ ನಡೆದಿದೆ ಎಂದು ನಗರ ನಿತಿನ್ ಮಾಧ್ಯಮ ಹೇಳಿಕೆ ನೀಡಿದ್ದರು. ಶಾಸಕ ಚೆನ್ನಬಸಪ್ಪ ಮೆಗ್ಗಾನ್ ಆಸ್ಪತ್ರೆಯಲ್ಲಿ ಇವರನ್ನು ಭೇಟಿಯಾಗಿ ನಿತಿನ್ ಸಹೋದರರ ಆರೋಗ್ಯ ವಿಚಾರಿಸಿ ಮಾಧ್ಯಮ ಹೇಳಿಕೆ ನಿಡಿದ್ದರು. ಜಿಲ್ಲೆಯಲ್ಲಿ ಅಘೋಷಿತ ಗೂಂಡಾ ಜಾರಿಯಲ್ಲಿದೆ ಎಂದು ಆರೋಪಿಸಿದ್ದರು.

ಅದರ ಬೆನ್ನ ಹಿಂದೆ ವಿಜಯೇಂದ್ರರು ಸಹ ಹ್ಯಾಷ್ ಟ್ಯಾಗ್ ಬಳಸಿ ಆರೋಪಿಸಿದ್ದಾರೆ. ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ಬಿಜೆಪಿ ಹಾಗೂ ಹಿಂದೂ ಕಾರ್ಯಕರ್ತರ ಮೇಲಿನ ಹಲ್ಲೆ ಪ್ರಕರಣಗಳು ನಿರಂತರವಾಗಿ ನಡೆಯುತ್ತಲೇ ಇವೆ. ನಮ್ಮ ಶಿವಮೊಗ್ಗ ಜಿಲ್ಲೆಯಲ್ಲಂತೂ ಇದು ಮರುಕಳಿಸುತ್ತಲೇ ಇದೆ. ಹೊಸನಗರ ತಾಲ್ಲೂಕಿನ ಯುವ ಮೋರ್ಚಾ ಅಧ್ಯಕ್ಷ ನಿತಿನ್ ಅವರ ಮೇಲೆ ಕಾಂಗ್ರೆಸ್ ಗೂಂಡಾಗಳಿಂದ ನಡೆದ ಹಲ್ಲೆ ಅತ್ಯಂತ ಖಂಡನಾರ್ಹ. ದಿನೇ ದಿನೇ ಗೂಂಡಾಗಳ ವರ್ತನೆ ಗಮನಿಸಿದರೆ, ಕಾಂಗ್ರೆಸ್ ಸರ್ಕಾರ ಗೂಂಡಾಗಳ ಪೋಷಣೆಗೆ ನಿಂತಂತಿದೆ. ತಕ್ಷಣ ಪೋಲಿಸರು ಕಿಡಿಗೇಡಿಗಳನ್ನು ಬಂಧಿಸಿ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ಆಗ್ರಹಿಸುತ್ತೇನೆ. ಇಂಥಾ ಘಟನೆಗಳು ಮತ್ತೆ ಮತ್ತೆ ಮರುಕಳಿಸುವ ಪರಿಸ್ಥಿತಿ ಮುಂದುವರೆದರೆ, ಬಿಜೆಪಿ ಹೋರಾಟದ ಸ್ವರೂಪ ತೀವ್ರಗೊಳಿಸಬೇಕಾದೀತು ಎಂದು ಎಚ್ಚರಿಸುತ್ತಿದ್ದೇನೆ. #CongressFailsKarnataka ಎಂದು ಟ್ವಿಟ್ ಮಾಡಿದ್ದಾರೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.