Categories
ಕರಾವಳಿ

• ಕಾಪು: ಪಾದಾಚಾರಿಗೆ ಡಿಕ್ಕಿ ಹೊಡೆದ ಕಾರು; ಗಂಭೀರ ಗಾಯ

• ಕಾಪು: ಪಾದಾಚಾರಿಗೆ ಡಿಕ್ಕಿ ಹೊಡೆದ ಕಾರು; ಗಂಭೀರ ಗಾಯ

• ಕುಂದಾಪುರ: ಮುಗಿಯದ ಜಾನುವಾರು ಕಳ್ಳತನ

• ಪುತ್ತೂರು: ಖಾಸಗಿ ಜಮೀನಿನಲ್ಲಿ ರಸ್ತೆ ನಿರ್ಮಾಣ

• ಮಂಗಳೂರು: ಯುವತಿ ನಾಪತ್ತೆ.

• ಬೆಳ್ತಂಗಡಿ: ಮತ್ತೆ ವಿಫಲಗೊಂಡ ಶೋಧನಾ ಕಾರ್ಯ

•ಕಾಪು: ಪಾದಾಚಾರಿಗೆ ಡಿಕ್ಕಿ ಹೊಡೆದ ಕಾರ್; ಗಂಭೀರ ಗಾಯ

ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್

ಕಾಪು:ಪಡುಬಿದ್ರಿಯ ಇಂದಿರಾ ನಗರದ ನಿವಾಸಿ ಶಂಶುದ್ದೀನ್ ಎನ್ನುವವರು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ, ಕಾರ್ ವೊಂದು ಬಂದು, ಡಿಕ್ಕಿ ಹೊಡೆದುದರ ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದಾರೆ.‌ ಪ್ರಜ್ಞಾಹೀನರಾಗಿ ಬಿದ್ದಿದ್ದ ಶಂಶುದ್ದೀನ್ ಅವರನ್ನು ಸ್ಥಳೀಯರು ಆಸ್ಪತ್ರೆಗೆ ಸಾಗಿಸಿದ್ದಾರೆ. ಊರಿನ ಎರ್ಮಾಳು ಮಸೀದಿಯ ಬಳಿ ಇವರು ಹೆಚ್ಚಾಗಿ ಇರುತ್ತಿದ್ದರು ಎಂದು ಕೆಲವರು ಗುರುತಿಸಿದ್ದಾರೆ. ಅಪಘಾತವನ್ನು ಮಾಡಿರುವ ಕಾರ್ ರಸ್ತೆಯ ವಿಭಾಜಕವನ್ನೇರಿ ನಿಂತಿದೆ. ಹೀಗಾಗಿ ಹೆಜಮಾಡಿ ಟೋಲ್ ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿ, ಸಂಚಾರಕ್ಕೆ ಅಡ್ಡಿಪಡಿಸಿರುವ ಕಾರ್ ಅನ್ನು ತೆರವುಗೊಳಿಸುವ ಮೂಲಕ, ಉಳಿದ ವಾಹನಗಳ ಸಂಚಾರಕ್ಕೆ ಮತ್ತು ಪಾದಾಚಾರಿಗಳಿಗೆ ಅನುವು ಮಾಡಿಕೊಟ್ಟಿದ್ದಾರೆ. ಇನ್ನು ಅಪಘಾತಕ್ಕೆ ಒಳಗಾದ ಶಂಶುದ್ದೀನ್ ಅವರ ತಲೆಗೆ ಗಂಭೀರ ಗಾಯವಾಗಿದ್ದು, ಕಾಲಿನ ಎಲುಬು ತುಂಡಾಗಿದೆ ಎನ್ನುವ ಸಂಗತಿ ತಿಳಿದು ಬಂದಿದೆ.

• ಕುಂದಾಪುರ: ಮುಗಿಯದ ಜಾನುವಾರು ಕಳ್ಳತನ

ಕುಂದಾಪುರ: ಗಂಗೊಳ್ಳಿಯ ರಸ್ತೆ ಬದಿಯೊಂದರಲ್ಲಿ ಮಲಗಿದ್ದ ಹಸುವನ್ನು ಬಲವಂತವಾಗಿ ಎತ್ತಿಕೊಂಡು ಹೋಗಿ, ಕಾರಿನಲ್ಲಿ ತುರುಕಿಕೊಂಡು, ಅಕ್ರಮ ಸಾಗಾಟ ಮಾಡಲು ತೆಗೆದುಕೊಂಡು ಹೋಗಲಾಗಿತ್ತು.‌ ಆರೋಪಿಗಳನ್ನು ಪತ್ತೆ ಹಚ್ಚಲು ಪೊಲೀಸರು ವಿಶೇಷ ತಂಡವೊಂದನ್ನು ರಚಿಸಿದ್ದರು. ಇದೀಗ ಪೊಲೀಸರು ಕೂಳೂರು ಮೂಲದ ಆರೋಪಿ ಮೊಹಮ್ಮದ್ ಅನ್ಸಾರ್ ನನ್ನು ಬಂಧಿಸಿದ್ದಾರೆ. ಜೊತೆಗೆ ಕಳ್ಳತನಕ್ಕೆ ಆತ ಬಳಸಿದ ಕಾರನ್ನು ಸಹ ವಶಪಡಿಸಿಕೊಳ್ಳಲಾಗಿದೆ.‌ ಅನ್ಸಾರ್ ನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದಾಗ ಉಡುಪಿ, ದಕ್ಷಿಣ ಕನ್ನಡ, ಚಿಕ್ಕಮಗಳೂರು ಮತ್ತು ಹಾಸನ ಸೇರಿದಂತೆ ಸುಮಾರು ಹದಿಮೂರು ಪ್ರಕರಣಗಳು ದಾಖಲಾಗಿವೆ ಎನ್ನುವ ಸಂಗತಿ ತಿಳಿದುಬಂದಿದೆ. ಅನ್ಸಾರ್ ಗೆ ಅಪರಾಧದಲ್ಲಿ ಸಹಕಾರ ನೀಡಿದ ಇನ್ನುಳಿದ ಮೂವರು ಆರೋಪಿಗಳ ಹುಡುಕಾಟದಲ್ಲಿ ಪೊಲೀಸರು ಕಾರ್ಯನಿರತರಾಗಿದ್ದಾರೆ.

• ಪುತ್ತೂರು: ಖಾಸಗಿ ಜಮೀನಿನಲ್ಲಿ ರಸ್ತೆ ನಿರ್ಮಾಣ

ಪುತ್ತೂರು: ಖಾಸಗಿ ಜಮೀನಿನಲ್ಲಿ ರಸ್ತೆ ನಿರ್ಮಿಸಲು, ಅಕ್ರಮವಾಗಿ ಜಾಗವನ್ನು ಒಳಗೆ ಹಾಕಿಕೊಂಡಿದ್ದಾರೆ ಎನ್ನುವ ಹಿನ್ನೆಲೆಯಲ್ಲಿ ಕೃಷ್ಣಭಟ್ ಎನ್ನುವವರು ನ್ಯಾಯಾಲಯಕ್ಕೆ ದೂರು ನೀಡಿದ್ದು, ಅದರ ಆಧಾರದ ಮೇಲೆ ಸಂಪ್ಯ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ. ದೂರಿನಲ್ಲಿ “ನಾನು ಬಲ್ನಾಡಿನಲ್ಲಿ ಜಮೀನನ್ನು ಹೊಂದಿದ್ದು, ನನ್ನ ಜಮೀನಿನ ಸುತ್ತ ತಂತಿ ಬೇಲಿಯನ್ನು ಹಾಕಿಕೊಂಡಿದ್ದೇನೆ. ಮತ್ತು ದಕ್ಷಿಣ ದಿಕ್ಕಿನಲ್ಲಿ ಮೂರು ಅಡಿ ಅಗಲದ ಜಾಗವನ್ನು ಮಾತ್ರ ಕಾಲುದಾರಿಗಾಗಿ ಬಿಟ್ಟಿದ್ದೇನೆ. ಆದರೆ ಆರೋಪಿಗಳು ಆ ಕಾಲುದಾರಿಯನ್ನೂ ಸಹ ಬಿಡದೆ, ಅದನ್ನು ರಸ್ತೆ ನಿರ್ಮಾಣಕ್ಕೆ ಬಳಸಿಕೊಳ್ಳುವ ಕುತಂತ್ರ ಮಾಡುತ್ತಿದ್ದಾರೆ” ಎಂದು ತಿಳಿಸಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಪುತ್ತೂರಿನ ಪ್ರಧಾನ ವ್ಯವಹಾರಿಕ ನ್ಯಾಯಾಲಯದಲ್ಲಿ ಒಂದು ಮತ್ತು ಎರಡನೇ ಆರೋಪಿತರ ವಿರುದ್ಧ ದಾವೆಯನ್ನು ದಾಖಲಿಸಿಕೊಂಡಿದ್ದಾರೆ. ಈ ಹಿಂದೆ ಬಲ್ನಾಡು ಗ್ರಾಮದ ಅಜಕ್ಕಲ ಎಂಬ ಪ್ರದೇಶದಲ್ಲಿ ನ್ಯಾಯಾಲಯದಿಂದ ಪ್ರತಿಬಂಧಕಾಜ್ಞೆಯ ಆದೇಶವಿದ್ದರೂ, ಅದನ್ನು ವಿರೋಧಿಸಿ ಅಕ್ರಮ ಚಟುವಟಿಕೆ ನಡೆಸಿದ ಹಿನ್ನೆಲೆಯಲ್ಲಿ, ಆರೋಪಿಗಳಾದ ವೆಂಕಪ್ಪ ನಾಯ್ಕ, ಕೊಗ್ಗು ನಾಯ್ಕ, ವಿಶ್ವನಾಥ ರೈ, ಚಂದ್ರಶೇಖರ್, ಗಿರಿಧರ ನಾಯ್ಕ ಎನ್ನುವವರ ವಿರುದ್ಧ ನ್ಯಾಯಾಲಯದ ಆದೇಶದಂತೆ 189 (2), 19೦, 324 (4), 329 (4), 191(2) 2023ರ ಅನ್ವಯ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದೆ.

• ಮಂಗಳೂರು: ಶಾಹಿನಾ ಬಾನು ಎನ್ನುವ  ಯುವತಿ ನಾಪತ್ತೆ                     

ಮಂಗಳೂರು: ಯುವತಿಯು ಗುರುವಾರದಂದು ಸ್ನೇಹಿತರೊಂದಿಗೆ ಪೇಟೆಗೆ ಹೋಗಿ, ತಿರುಗಾಡಿಕೊಂಡು ಬರುತ್ತೇನೆಂದು ಮನೆಯಿಂದ ಬೆಳಿಗ್ಗೆ ಹನ್ನೊಂದು ಗಂಟೆಗೆ ತೆರಳಿದವರು, ಪುನಃ ಹಿಂದಿರುಗಲಿಲ್ಲ. ಶಾಹಿನಾ ತಾಯಿಯು ಕರೆ ಮಾಡಿದಾಗ ಆಕೆಯ ಮೊಬೈಲ್ ಸ್ವಿಚ್ ಆಫ್ ಎಂದು ಬಂದಿದೆ. ನಂತರ ಶಾಹೀನಾಳ ಸ್ನೇಹಿತರನ್ನೆಲ್ಲಾ ಸಂಪರ್ಕಿಸಿ ವಿಚಾರಿಸಿದಾಗ ಯಾವುದೇ ಮಾಹಿತಿ ತಿಳಿದುಬಂದಿಲ್ಲ.‌ ಇದಕ್ಕೆ ಸಂಬಂಧಿಸಿದಂತೆ ಪಾಂಡೇಶ್ವರ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

• ಬೆಳ್ತಂಗಡಿ: ಮತ್ತೆ ವಿಫಲಗೊಂಡ ಶೋಧನ ಕಾರ್ಯ.

ಬೆಳ್ತಂಗಡಿ: ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ಶುಕ್ರವಾರವು ಶೋಧನಾಕಾರ್ಯ ಮುಂದುವರಿದಿದ್ದು, ಬೊಳಿಯಾರ್ ಗೋಂಕ್ರತಾರ್ ಬಳಿ ಎಸ್ಐಟಿ ತಂಡವು ದೂರುದಾರನೊಂದಿಗೆ ಕಾರ್ಯಾಚರಣೆಯನ್ನು ನಡೆಸಿದರು.‌ ಮಧ್ಯಾಹ್ನ ಹನ್ನೆರಡರಿಂದ ಐದೂವರೆವರೆಗೆ ಶೋಧನಾಕಾರ್ಯವನ್ನು ಕೈಗೊಂಡರೂ ಹೂತಿಟ್ಟ ಕಳೆಬರಗಳಿಗೆ ಸಂಬಂಧಿಸಿದಂತೆ ಯಾವುದೇ ಸುಳಿವು ಪತ್ತೆಯಾಗಲಿಲ್ಲ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.