ಕುಕ್ಕರ್ ಬಾಂಬ್ ಸ್ಫೋಟದ ಉಗ್ರ ಶಾರಿಕ್‌ಗಿಂತ ಸಿ.ಟಿ.ರವಿ ಒಂದು ಕೈಮೇಲು!
– ಡಿಕೆಶಿ ವಿರುದ್ಧದ ಹೇಳಿಕೆಗೆ ಸಚಿನ್ ಮೀಗಾ ಗರಂ
– ದರ್ಗಾ, ದೇಗುಲ ದ್ವಂಸ ಮಾಡಿದ್ದಾರೆ ಎಂಬ ಆರೋಪ
NAMMUR EXPRESS NEWS
ಕೊಪ್ಪ: ಬಿಜೆಪಿ ನಾಯಕ ಸಿ.ಟಿ.ರವಿ ರಾಜಕಾರಣದಲ್ಲಿ ಮಾಸ್ಟರ್ ಮೈಂಡ್ ಉಗ್ರ. ಅಲ್ಲದೆ, ಕುಕ್ಕರ್ ಬಾಂಬ್ ಸ್ಫೋಟ ಉಗ್ರ ಶಾರಿಕ್‌ಗಿಂತ ಒಂದು ಕೈಮೇಲು ಎಂದು ಹೇಳುವ ಮೂಲಕ ಕೆಪಿಸಿಸಿ ಕಿಸಾನ್ ಘಟಕದ ಅಧ್ಯಕ್ಷ ಸಚಿನ್ ಮೀಗಾ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ. ಕೊಪ್ಪ ಪಟ್ಟಣದಲ್ಲಿ ಮಾತನಾಡಿದ ಅವರು, ರಾಜಕಾರಣದಲ್ಲಿ ಮಾಸ್ಟರ್ಮೈಂಡ್ ಉಗ್ರ ಇದ್ದರೆ ಅದು ಸಿ.ಟಿ.ರವಿ ಎಂದು ಹೇಳಿದರು. ರಾಜಕೀಯದಲ್ಲಿ ಸಿ.ಟಿ.ರವಿ ಹಲವರನ್ನು ಬಲಿ ಕೊಟ್ಟಿದ್ದಾರೆ ಎಂದು ಹೇಳಿದ ಸಚಿನ್ ಮೀಗಾ, ಘೋರಿ, ದರ್ಗಾಗಳನ್ನು ಸಂಚಿನಲ್ಲಿ ಧ್ವಂಸ ಮಾಡಿಸಿದ್ದರೆ ಅದು ಸಿ.ಟಿ.ರವಿ. ಮಹೇಂದ್ರ ಕುಮಾರ್ ಬಳಸಿಕೊಂಡು ದರ್ಗಾ, ದೇಗುಲ ದ್ವಂಸ ಮಾಡಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
ಮಾಜಿ ಶಾಸಕ ಸಿ.ಟಿ.ರವಿ ಪದೇ ಪದೆ ತಮ್ಮ ನಾಲಿಗೆ ಹರಿಬಿಡುತ್ತಿದ್ದಾರೆ. ಈ ಹಿಂದೆ ಸಿದ್ದರಾಮಯ್ಯರನ್ನು ಸಿದ್ರಾಮುಲ್ಲಾ ಖಾನ್ ಎಂದು ಹೇಳಿದ್ದರು. ಇದೀಗ ಡಿಸಿಎಂ ಡಿಕೆ ಶಿವಕುಮಾರ್ ಹೆಸರಿಗೆ ಕೊತ್ವಾಲ್ ಹೆಸರನ್ನು ಸೇರಿಸಿದ್ದಾರೆ. ಇಂತಹ ಹೇಳಿಕೆಯನ್ನು ನೀಡುವ ಸಿಟಿ ರವಿ ಅವರನ್ನು ಚಿಕ್ಕಮಗಳೂರು ಕ್ಷೇತ್ರದ ಜನರು ಮನೆಗೆ ಕಳುಹಿಸಿದ್ದಾರೆ ಎಂದರು. ಅಲ್ಲದೆ, ಉಗ್ರ ಸಿ.ಟಿ.ರವಿಯನ್ನು ಗಡಿಪಾರು ಮಾಡಬೇಕೆಂದು ಒತ್ತಾಯ ಮಾಡುತ್ತೇನೆ ಎಂದು ಹೇಳಿದ್ದಾರೆ.
ಇದನ್ನೂ ಓದಿ : ಜನರ ಕಿವಿಗೆ ಹೂ ಮುಡಿಸುತ್ತಿರುವ ಕಾಂಗ್ರೆಸ್ ಸರ್ಕಾರ!
[embedyt] https://www.youtube.com/watch?v=p9w93rFeg28%5B/embedyt%5D
