Categories
ಮಲ್ನಾಡ್

ಶಿಕಾರಿಪುರ: ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಚಿಮುಟದಿಂದ ಚುಚ್ಚಿ ಹೆಂಡತಿಯ ಕೊಲೆ ಮಾಡಿದ ಗಂಡ..!!

ಮಲ್ನಾಡ್ ಟಾಪ್ 3 ನ್ಯೂಸ್

ಶಿಕಾರಿಪುರ: ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಚಿಮುಟದಿಂದ ಚುಚ್ಚಿ ಹೆಂಡತಿಯ ಕೊಲೆ ಮಾಡಿದ ಗಂಡ..!!
– ತೀರ್ಥಹಳ್ಳಿ: ವಾಹನದ ಪರಿಣಾಮದಿಂದ ಆಗುಂಬೆ ಘಾಟಿ ಸಂಚಾರ ಅಸ್ತವ್ಯಸ್ಥ!
– ಸೊರಬ : ನಾಯಿ ದಾಳಿಗೆ ಜಿಂಕೆ ಬಲಿ..!!!

NAMMUR EXPRESS NEWS
ಶಿಕಾರಿಪುರ: ಕೌಟುಂಬಿಕ ಕಲಹದ ಹಿನ್ನೆಲೆ ಚಿಮುಟ ಬಳಸಿ ಗಂಡನೇ ಹೆಂಡತಿಯ ಹತ್ಯೆ ಮಾಡಿದ್ದಾನೆ. ಶಿಕಾರಿಪುರ ಪಟ್ಟಣದ ಸೊಸೈಟಿ ಕೇರಿಯಲ್ಲಿ ಘಟನೆ ಸಂಭವಿಸಿದೆ. ಲಾರಿ ಚಾಲಕ ಬಸವರಾಜು ಎಂಬಾತ ತನ್ನ ಪತ್ನಿ ಮಂಜುಳಾ (32) ಎಂಬುವವರ ಹತ್ಯೆ ಮಾಡಿದ್ದಾನೆ. ಚಿಮುಟದಿಂದ ಕುತ್ತಿಗೆಗೆ ಚುಚ್ಚಿ ಕೊಲೆ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ. ಬಸವರಾಜು ಮತ್ತು ಮಂಜುಳಾ ಮದುವೆಯಾಗಿ 15 ವರ್ಷವಾಗಿದೆ. ದಂಪತಿಗೆ ಇಬ್ಬರು ಹೆಣ್ಣು , ಓರ್ವ ಗಂಡು ಮಗ ಇದ್ದಾನೆ. ಮಂಜುಳಾ ಗಾರ್ಮೆಂಟ್ಸ್‌ನಲ್ಲಿ ಕೆಲಸ ಮಾಡುತ್ತಿದ್ದರು. ಶಿಕಾರಿಪುರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.

– ತೀರ್ಥಹಳ್ಳಿ: ವಾಹನದ ಪರಿಣಾಮದಿಂದ ಆಗುಂಬೆ ಘಾಟಿ ಸಂಚಾರ ಅಸ್ತವ್ಯಸ್ಥ!

ತೀರ್ಥಹಳ್ಳಿ : ರಾಜ್ಯ ಹೆದ್ದಾರಿ 169 ಎ ಶಿವಮೊಗ್ಗ – ತೀರ್ಥಹಳ್ಳಿ – ಆಗುಂಬೆ – ಮಂಗಳೂರು ಸಂಪರ್ಕಿಸುವ ಆಗುಂಬೆ ಘಾಟಿಯಲ್ಲಿ ವಾಹನವೊಂದರ ಆಕ್ಸೆಲ್ ಕಡಿತವಾದ್ದರಿಂದ ಘಾಟಿಯ ರಸ್ತೆಯ ಮಧ್ಯದಲ್ಲೇ ಕೆಟ್ಟು ನಿಂತ ಪರಿಣಾಮ ವಾಹನ ಸಂಚಾರಕ್ಕೆ ತೀವ್ರ ತೊಂದರೆಯಾಗಿದೆ. ಘಾಟಿಯ ಎಂಟನೇ ತಿರುವಿನಲ್ಲಿ ವಾಹನ ಕೆಟ್ಟು ನಿಂತ ಪರಿಣಾಮ ಆಗುಂಬೆ ಘಾಟಿಯ ಎರಡು ಬದಿಯಲ್ಲಿ ಕಿಲೋಮೀಟರ್ ಗಟ್ಟಲೆ ವಾಹನಗಳು ನಿಂತಿದ್ದು ನಿನ್ನೆಯಿಂದ ಸಿಕ್ಕಾಪಟ್ಟೆ ಮಳೆ ಬೀಳುತ್ತಿದ್ದು ವಾಹನ ಸವಾರರು ಪರದಾಟ ನಡೆಸುತ್ತಿದ್ದಾರೆ. ಘಾಟಿಯ ಎಂಟನೇ ತಿರುವಿನಲ್ಲಿ ವಾಹನ ಕೆಟ್ಟು ನಿಂತ ಪರಿಣಾಮ ಆಗುಂಬೆ ಘಾಟಿಯ ಎರಡು ಬದಿಯಲ್ಲಿ ಕಿಲೋಮೀಟರ್ ಗಟ್ಟಲೆ ವಾಹನಗಳು ನಿಂತಿದ್ದು ಬುಧವಾರದಿಂದ ಸಿಕ್ಕಾಪಟ್ಟೆ ಮಳೆ ಬೀಳುತ್ತಿದ್ದು ವಾಹನ ಸವಾರರು ಪರದಾಟ ನಡೆಸುತ್ತಿದ್ದಾರೆ.

– ಸೊರಬ : ನಾಯಿ ದಾಳಿಗೆ ಜಿಂಕೆ ಬಲಿ..!!!

ಸೊರಬ : ಬೀದಿ ನಾಯಿಗಳ ಹಾವಳಿಯಿಂದ ಗಂಡು ಜಿಂಕೆವೊಂದು ಮೃತಪಟ್ಟಿರುವಘಟನೆ ತಾಲೂಕಿನ ಚಂದ್ರಗುತ್ತಿಸಮೀಪದ ಶಿವಪುರ ನಡೆದಿದೆ. ಗ್ರಾಮದ ಬಳಿ ಕಾಣಿಸಿಕೊಂಡಿದ್ದ ಜಿಂಕೆಯನ್ನು ಬೀದಿ ನಾಯಿಗಳು ಅಟ್ಟಾಡಿಸಿದ್ದವು. ಸ್ಥಳೀಯರು ನಾಯಿಗಳನ್ನು ಓಡಿಸಿ ಜಿಂಕೆಯನ್ನು ಹಿಡಿದು ರಕ್ಷಿಸಿದ್ದರು ನಂತರ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದರು. ಸ್ಥಳಕ್ಕೆ ಬಂದ ಅಧಿಕಾರಿಗಳು ಜಿಂಕೆಗೆ ಪಶು ವೈದ್ಯರಿಂದ ಪ್ರಥಮ ಚಿಕಿತ್ಸೆ ನೀಡಿದ್ದರು ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗ ಮಧ್ಯೆ ಜಿಂಕೆ ಕೊನೆ ಉಸಿರು ಎಳೆದಿದೆ ನಾಯಿಗಳ ದಾಳಿಯಿಂದ ಗಾಬರಿಗೊಂಡಿದ್ದ ಜಿಂಕೆ ಆಘಾತಕ್ಕೆ ಒಳಗಾಗಿತ್ತು ಜಿಂಕೆ ಮರಣೋತ್ತರ ಪರೀಕ್ಷೆ ನಡೆಸಿ ಅಂತ್ಯ ಸಂಸ್ಕಾರ ನಡೆಸಲಾಯಿತು ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಮಾಧ್ಯಮ ಒಂದಕ್ಕೆ ಮಾಹಿತಿ ನೀಡಿದ್ದರು.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.