Categories
ಮಲ್ನಾಡ್

ಟಾಪ್ 3 ನ್ಯೂಸ್ ಮಲ್ನಾಡ್

ಟಾಪ್ 3 ನ್ಯೂಸ್ ಮಲ್ನಾಡ್
– ಚಿಕ್ಕಮಗಳೂರು: ಕೆರೆಯಲ್ಲಿ ವಿದ್ಯಾರ್ಥಿ ನೀರುಪಾಲು
– ಕಳಸ: ಕಾಲೇಜು ವಿದ್ಯಾರ್ಥಿನಿ ‌ಆತ್ಮಹತ್ಯೆಗೆ ಶರಣು
– ಶಿವಮೊಗ್ಗ: ಲ್ಯಾಂಡ್ ಮಾಡಲಾಗದೇ ಹೈದರಾಬಾದ್‌’ಗೆ ಹಿಂದಿರುಗಿದ ವಿಮಾನ!
– ಶೃಂಗೇರಿ: ಪ್ರವಾಸಿಗರ ಮೇಲೆ ಹಲ್ಲೆ?!: ಏನಿದು ಕಿರಿಕ್?

NAMMUR EXPRESS NEWS
ಶೃಂಗೇರಿ: ಕಾರು ಪಾರ್ಕಿಂಗ್ ವಿಷಯಕ್ಕೆ ಸಂಬಂಧಿಸಿದಂತೆ ಬೆಂಗಳೂರು ಪೊಲೀಸ್ ಪೇದೆಯ ಮೇಲೆ ಹಲ್ಲೆ ಮಾಡಿದ್ದ ಶೃಂಗೇರಿ ಯುವಕನನ್ನು ಬಂಧಿಸಲಾಗಿದೆ. ಶೃಂಗೇರಿ ಪಟ್ಟಣದ ಸ್ಪರ್ಶಿತ್ ಬಂಧಿತ ಆರೋಪಿ. ಶೃಂಗೇರಿ ಪ್ರವಾಸಕ್ಕೆಂದು ಕುಟುಂಬದೊಂದಿಗೆ ಬಂದಿದ್ದ ಬೆಂಗಳೂರಿನ ರಾಜಗೋಪಾಲನಗರ ಠಾಣೆಯ ಪೇದೆ ರಾಜೇಗೌಡ, ಪತ್ನಿ ಕುಸುಮ ಹಾಗೂ ಅಣ್ಣ-ಅತ್ತಿಗೆ ಉಳಿಯಲು ಲಾಡ್ಜ್ ಕೇಳಲು ಹೋಗಿದ್ದ ವೇಳೆ ಸ್ಕೂಟಿಯಲ್ಲಿ ಬಂದ ಇಬ್ಬರು ಹಾಗೂ ದೇವಾಲಯದ ಮುಂಭಾಗವಿದ್ದ ಮತ್ತಿಬ್ಬರಿಂದ ದೇವಸ್ಥಾನದ ಮುಂಭಾಗ ನಿಲ್ಲಿಸಿದ್ದ ಕಾರ್ ತೆಗೆಯುವಂತೆ ಖ್ಯಾತೆ ತೆಗೆದಿದ್ದಾರೆ. ಅಲ್ಲದೆ ಕಬ್ಬಿಣದ ರಾಡ್ ನಿಂದ ಪೇದೆ ರಾಜೇಗೌಡ ಅವರಿಗೆ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

ಹಲ್ಲೆ ತಪ್ಪಿಸಲು ಬಂದ ಪೇದೆ ರಾಜೇಗೌಡ ಅಣ್ಣ ಉಮೇಶ್ ಮೇಲೂ ಕೂಡ ಹಲ್ಲೆ ಮಾಡಿ ಎಲ್ಲರನ್ನೂ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ. ಈ ಸಂಬಂಧ ಹಲ್ಲೆ ಮಾಡಿರುವ ನಾಲ್ವರು ಯುವಕ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಶೃಂಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿತ್ತು. ಇದೀಗ ಹಲ್ಲೆ ಮಾಡಿದ್ದ ಓರ್ವ ಆರೋಪಿ ಸ್ಪರ್ಶಿತ್ ನನ್ನು ಬಂಧಿಸಲಾಗಿದೆ.

– ಚಿಕ್ಕಮಗಳೂರು: ಕೆರೆಯಲ್ಲಿ ಈಜಲು ಹೋದ ವಿದ್ಯಾರ್ಥಿ ನೀರುಪಾಲು

ಚಿಕ್ಕಮಗಳೂರು: ಕೆರೆಗೆ ಈಜಲು ತೆರಳಿದ ಬಾಲಕನೋರ್ವ ನೀರುಪಾಲಾದ ಘಟನೆ ಚಿಕ್ಕಮಗಳೂರು ನಗರದ ಕೋಟೆ ಕೆರೆಯಲ್ಲಿ ನಡೆದಿದೆ. ನಾಲ್ವರು ವಿದ್ಯಾರ್ಥಿಗಳು ಜೊತೆಗೂಡಿ ಕೋಟೆ ಕೆರೆಗೆ ಈಜಲು ತೆರಳಿದ್ದಾರೆ ಈ ವೇಳೆ ಶಶಾಂಕ್ ನೀರಿನಡಿ ಕೆಸರಿನಲ್ಲಿ ಕಾಲು ಸಿಲುಕಿಕೊಂಡು ಮೇಲೆ ಬರಲಾಗದೆ ಮೃತಪಟ್ಟಿದ್ದಾನೆ ಕೂಡಲೇ ಜೊತೆಗಿದ್ದ ಇತರರು ವಿಚಾರವನ್ನು ಸ್ಥಳೀಯರಿಗೆ ಹೇಳಿದ್ದಾರೆ. ಸ್ಥಳೀಯರು ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದು ಘಟನಾ ಸ್ಥಳಕ್ಕೆ ಪೊಲೀಸರು ಹಾಗೂ ಅಗ್ನಿಶಾಮಕ ತಂಡ ದೌಡಾಯಿಸಿ ನೀರಿನಲ್ಲಿ ಮುಳುಗಿದ್ದ ಬಾಲಕನನ್ನು ಮೇಲಕ್ಕೆತ್ತಿದ್ದಾರೆ ಆದರೆ ದುರಾದೃಷ್ಟವಶಾತ್ ಬಾಲಕ ಸಾವನ್ನಪ್ಪಿದ್ದಾನೆ. ಬಾಲಕನ ಮೃತದೇಹ ನೀರಿನಿಂದ ಹೊರತರುತ್ತಿದ್ದಂತೆ ಪೋಷಕರ ಆಕ್ರಂದನ ಮುಗಿಲು ಮುಟ್ಟಿತ್ತು. ಈ ಕುರಿತು ಚಿಕ್ಕಮಗಳೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

– ಕಳಸ: ಕಾಲೇಜು ವಿದ್ಯಾರ್ಥಿನಿ ‌ಆತ್ಮಹತ್ಯೆಗೆ ಶರಣು

ಕಳಸ: ಪದವಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿಯೋರ್ವಳು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನ ಹಳುವಳ್ಳಿಯಲ್ಲಿ ನಡೆದಿದೆ. ತಾರಿಕೊಂಡ ರಮೇಶ್ ಎಂಬುವವರ ಪುತ್ರಿ ರಮ್ಯಾ (21) ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ. ಕಳಸ ಸರ್ಕಾರಿ ಪದವಿ ಕಾಲೇಜಿನಲ್ಲಿ ಅಂತಿಮ ವರ್ಷದ ಪದವಿ ವ್ಯಾಸಂಗ ಮಾಡುತ್ತಿದ್ದ ರಮ್ಯಾ ಶನಿವಾರವಷ್ಟೆ ತನ್ನ 21ನೇ ವರ್ಷದ ಹುಟ್ಟು ಹಬ್ಬವನ್ನು ಆಚರಿಸಿಕೊಂಡಿದ್ದರು ಎನ್ನಲಾಗಿದೆ. ಭಾನುವಾರ ಪೋಷಕರೆಲ್ಲ ಸಂಬಂಧಿಕರ ಮದುವೆ ಕಾರ್ಯಕ್ರಮಕ್ಕೆ ಹೋಗಿದ್ದರು. ಮದುವೆ ಮುಗಿಸಿಕೊಂಡು ಮನೆಗೆ ಬಂದಾಗ ರಮ್ಯಾ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದು ಗೊತ್ತಾಗಿದೆ. ಮದುವೆಗೆ ಹೋಗುವಾಗ ಸೀರೆಯ ವಿಚಾರಕ್ಕಾಗಿ ರಮ್ಯಾ ಮತ್ತು ಸಹೋದರಿ ನಡುವೆ ಜಗಳ ಆಗಿತ್ತು, ಇದರಿಂದ ಮದುವೆಗೆ ಹೋಗದೇ ರಮ್ಯಾ ಮನೆಯಲ್ಲೇ ಉಳಿದಿದ್ದಳು ಎನ್ನಲಾಗಿದೆ. ಮನೆಯವರೆಲ್ಲಾ ಮದುವೆಗೆ ತೆರಳಿದ ನಂತರ ರಮ್ಯಾ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಶಿವಮೊಗ್ಗ ಲ್ಯಾಂಡ್ ಮಾಡಲಾಗದೇ ಹೈದರಾಬಾದ್‌’ಗೆ ಹಿಂದಿರುಗಿದ ವಿಮಾನ

ಹವಾಮಾನ ವೈಪರೀತ್ಯದಿಂದ ಲ್ಯಾಂಡ್ ಮಾಡಲಾಗದೇ ಶಿವಮೊಗ್ಗ ವಿಮಾನ ನಿಲ್ದಾಣದಿಂದ ಹೈದರಾಬಾದ್‌’ಗೆ ಹಿಂದಿರುಗಿರುವ ಘಟನೆ ನಡೆದಿದೆ. ಶನಿವಾರ ಮಧ್ಯಾಹ್ನ ತಿರುಪತಿಯಿಂದ ಶಿವಮೊಗ್ಗದ ಕಡೆಗೆ ಬಂದ ವಿಮಾನವನ್ನು ಲ್ಯಾಂಡ್ ಮಾಡಲು ಸಾಧ್ಯವಾಗಲಿಲ್ಲ. ನಿಲ್ದಾಣ ಮೇಲೆಯೇ ಸುಮಾರು 2-3 ಸುತ್ತು ಹಾರಾಟ ನಡೆಸಿದರೂ ಲ್ಯಾಂಡ್ ಮಾಡಲು ಹವಾಮಾನ ವೈಪರೀತ್ಯ ಅಡ್ಡಿಯಾಯಿತು. ಪ್ರತಿಕೂಲ ಹವಾಮಾನದ ಹೊಂದಾಣಿಕೆಯಾಗದೇ ರನ್ ವೇ ಕಾಣದ ಹಿನ್ನೆಲೆಯಲ್ಲಿ ಲ್ಯಾಂಡ್ ಮಾಡಲು ಸಾಧ್ಯವಾಗದೇ ಹೈದರಾಬಾದ್‌’ಗೆ ತೆರಳಿದೆ. ಆನಂತರ ಸುಮಾರು 1 ಗಂಟೆಯ ನಂತರ ಹೈದರಾಬಾದ್‌’ನಿಂದ ಹೊರಟು, ಸಂಜೆ 4.30ರ ವೇಳೆಗೆ ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಗಿದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.