ಟಾಪ್ 5 ನ್ಯೂಸ್ ಮಲ್ನಾಡ್
ಚಿಕ್ಕಮಗಳೂರು: ಬೈಕ್ ಅಪಘಾತ ಯುವಕ ಸ್ಥಳದಲ್ಲೇ ಸಾವು !
– ಯುವತಿಯ ನಾಲಿಗೆ ಕಟ್!?
– ಚಿಕ್ಕಮಗಳೂರು: ಕೆರೆಯಲ್ಲಿ ಈಜಲು ತೆರಳಿದ ಬಾಲಕ ಸಾವು
– ಸಾಗರ: ಪೊಲೀಸರಿಂದ ಐವರು ಅಡಕೆ ಕಳ್ಳರ ಬಂಧನ, ಮಾಲು ವಶ
– ತರೀಕೆರೆ : ಹಾವು ಕಡಿತ ಮುಳ್ಳು ಚುಚ್ಚಿದೆ ಎಂದು ನಿರ್ಲಕ್ಷಿಸಿದ ವ್ಯಕ್ತಿ ಸಾವು!
– ಸೊರಬ : ಜಾನುವಾರು ಮೇಯಿಸಲು ಹೋದ ಬಾಲಕ ಕೃಷಿ ಹೊಂಡಕ್ಕೆ ಬಿದ್ದು ಸಾವು !
NAMMUR EXPRESS NEWS
ಚಿಕ್ಕಮಗಳೂರು : ಬೈಕ್-ಕ್ಯಾಂಟರ್ ಮಧ್ಯೆ ಮುಖಾಮುಖಿ ಡಿಕ್ಕಿಯಾಗಿ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಚಿಕ್ಕಮಗಳೂರು ತಾಲೂಕಿನ ಮೂಗ್ತಿಹಳ್ಳಿ ಬಳಿ ಅಪಘಾತ ನಡೆದಿದ್ದು, ಬೈಕ್ ಸವಾರ ಶಿವರಾಜ್ (26) ಮೃತಪಟ್ಟಿದ್ದಾರೆ. ಬೈಕ್ ಹಿಂಬದಿಯಲ್ಲಿದ್ದ ಲಾವಣ್ಯ ಎಂಬುವವರ ನಾಲಿಗೆ ಕಟ್ ಆಗಿದೆ. ಶಿವರಾಜ್-ಲಾವಣ್ಯ ಇಬ್ಬರು ಅರಸೀಕೆರೆ ತಾಲೂಕಿನ ಬಂದೂರು ಮೂಲದವರಾಗಿದ್ದು, ಲಾವಣ್ಯ ಚಿಕ್ಕಮಗಳೂರಿನ ಪ್ಯಾರಾ ಮೆಡಿಕಲ್ ಕಾಲೇಜಿನಲ್ಲಿ ಓದುತ್ತಿದ್ದರು. ಈ ಕುರಿತು ಚಿಕ್ಕಮಗಳೂರು ಜಿಲ್ಲೆಯ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
– ಚಿಕ್ಕಮಗಳೂರು: ಕೆರೆಯಲ್ಲಿ ಈಜಲು ತೆರಳಿದ ಬಾಲಕ ಸಾವು
ಚಿಕ್ಕಮಗಳೂರು : ಕೆರೆಯಲ್ಲಿ ಈಜಲು ಹೋದ ಬಾಲಕ ಮೃತಪಟ್ಟ ಘಟನೆ ನಗರದಲ್ಲಿ ನಡೆದಿದೆ. ಚಿಕ್ಕಮಗಳೂರು ನಗರದ ಕೋಟೆ ಕೆರೆಯಲ್ಲಿ ಈಜಲು ತೆರಳಿದ್ದ ಬಾಲಕ ಶಶಾಂಕ್, ಕೆರೆಯಲ್ಲಿ ಕಾಲು ಹೂತು ಸಾವನ್ನಪ್ಪಿದ್ದಾನೆ. ನಾಲ್ವರು ಸ್ನೇಹಿತರು ಕೆರೆಯಲ್ಲಿ ಈಜು ಕಲಿಯಲು ತೆರಳಿದ್ದಾಗ ಈ ಘಟನೆ ನಡೆದಿದೆ. ಮೃತ ಬಾಲಕನ ಶವವನ್ನು ಅಗ್ನಿಶಾಮಕ ಸಿಬ್ಬಂದಿಗಳು ಮೇಲೆತ್ತಿದ್ದಾರೆ. ಪ್ರಸ್ತುತ ಎಂಟನೇ ತರಗತಿ ಓದುತ್ತಿದ್ದ ಶಶಾಂಕ್, ನಗರದ ಗಾಂಧಿನಗರ ಬಡಾವಣೆಯವನಾಗಿದ್ದಾನೆ. ಈ ಸಂಬಂಧ ಚಿಕ್ಕಮಗಳೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು,ಬಾಲಕನ ಮೃತದೇಹ ಕಂಡು ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.
– ಸಾಗರ: ಪೊಲೀಸರಿಂದ ಐವರು ಅಡಕೆ ಕಳ್ಳರ ಬಂಧನ, ಮಾಲು ವಶ
ಸಾಗರ: ಗ್ರಾಮಾಂತರ ಪೊಲೀಸ್ ರು ಐವರು ಅಡಿಕೆ ಕಳ್ಳರನ್ನು ಬಂಧಿಸಿ, 8 ಪ್ರಕರಣಗಳನ್ನು ಪತ್ತೆ ಮಾಡಿ, ಅಂದಾಜು ಮೌಲ್ಯ 15,19,000/- (ಹದಿನೈದು ಲಕ್ಷದ ಹತ್ತೊಂಬತ್ತು ಸಾವಿರ) ರೂಗಳ ಮಾಲು ವಶಪಡಿಸಿಕೊಂಡಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಠ ಜಿ. ಕೆ. ಮಿಥುನ್ ಕುಮಾರ್ ,ಸಾಗರ ಗ್ರಾಮಾಂತರ ಪೊಲೀಸ್ ಠಾಣೆ, ಆನಂದಪುರ ಪೊಲೀಸ್ ಠಾಣೆ, ಕಾರ್ಗಲ್ ಪೊಲೀಸ್ ಠಾಣೆ, ಸೊರಬ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇತ್ತೀಚಿನ ದಿನಗಳಲ್ಲಿ ಅಡಿಕೆ ಕಳವು ಪ್ರಕರಣಗಳು ನಡೆದಿದ್ದವು. ಈ ಪ್ರಕರಣಗಳಲ್ಲಿ ಕಳುವಾದ ಮಾಲು ಮತ್ತು ಆರೋಪಿತರ ಪತ್ತೆಗೆ ವಿಶೇಷ ತನಿಖಾ ತಂಡವನ್ನು ರಚಿಸಲಾಗಿತ್ತೆಂದರು. ಬಂಧಿತರು ಶಿಕಾರಿಪುರ ಗ್ರಾಂಮಾಂತರದ ಹರಗುವಳ್ಳಿ ಯವರಾಗಿದ್ದಾರೆ.
ಅವರೆಂದರೆ 1) ತುಕ್ರಾಜ್, 24 ವರ್ಷ, ಹರಗುವಳ್ಳಿ ಗ್ರಾಮ, 2) ಹನುಮಂತಪ್ಪ, 24 ವರ್ಷ, ಹರಗುವಳ್ಳೀ, 3) ರಾಕೇಶ್, 20 ವರ್ಷ, ಹರಗುವಳ್ಳಿ 4) ಅಭಿಶೇಕ್, 20 ವರ್ಷ, ಹರಗುವಳ್ಳಿ 5) ಶಿವಕುಮಾರ್, 23 ವರ್ಷ, ಹರಗುವಳ್ಳಿ ಡಿಎಸ್ ಪಿ ಗೋಪಾಲಕೃಷ್ಣ ನಾಯ್ಕ ಟಿ. , ಸಿಪಿಐ ಮಹಾಬಲೇಶ್ವರ ಎಸ್.ಎನ್, ಎಸ್ ಐ ಮುಂದಿನಮನಿ ಪಿಎಸ್ಐ ಹಾಗೂ ಸಿಬ್ಬಂದಿಯವರಾದ ಸಿಹೆಚ್ಸಿ, ಸನಾವುಲ್ಲಾ, ಷೇಖ್ ಫೈರೋಜ್ ಅಹಮದ್, ಸಿಪಿಸಿ ರವಿಕುಮಾರ್, ಪ್ರವೀಣ್ ಕುಮಾರ್, ಗುರುಬಸವರಾಜ, ಚಾಲಕರಾದ ಎ.ಹೆಚ್.ಸಿ ಗಿರೀಶ್ ಬಾಬು ಹಾಗೂ ಜಿಲ್ಲಾ ಪೊಲೀಸ್ ಕಛೇರಿಯ ತಾಂತ್ರಿಕ ಸಿಬ್ಬಂಧಿಗಳಾದ ಗುರುರಾಜ, ಇಂದ್ರೇಶ್ ಮತ್ತು ವಿಜಯ್ ಕುಮಾರ್ ತನಿಖಾ ತಂಡದಲ್ಲಿದ್ದರು.
– ತರೀಕೆರೆ : ಹಾವು ಕಡಿತ ಮುಳ್ಳು ಚುಚ್ಚಿದೆ ಎಂದು ನಿರ್ಲಕ್ಷಿಸಿದ ವ್ಯಕ್ತಿ ಸಾವು!
ತರೀಕೆರೆ: ಹಾವು ಕಚ್ಚಿದ್ದರೂ ಮುಳ್ಳು ಚುಚ್ಚಿದೆ ಎಂದು ನಿರ್ಲಕ್ಷಿಸಿದ ವ್ಯಕ್ತಿ ಸಾವನ್ನಪ್ಪಿರುವ ಘಟನೆ ತಾಲೂಕಿನ ಕರಕುಚ್ಚಿ ಗ್ರಾಮದಲ್ಲಿ ನಡೆದಿದೆ. ಗಂಗಪ್ಪ (48) ಎಂಬ ವ್ಯಕ್ತಿಗೆ ಜಮೀನಿನಲ್ಲಿ ಕೆಲಸ ಮಾಡುವಾಗ ಎರಡು ಬಾರಿ ಹಾವು ಕಚ್ಚಿದೆ. ಮುಳ್ಳು ಚುಚ್ಚಿರಬೇಕೆಂದು ಇದನ್ನು ನಿರ್ಲಕ್ಷಿಸಿದ್ದರು. ಬಳಿಕ ಮನೆಗೆ ಬಂದು ಮಲಗಿದ್ದರು. ಮುಳ್ಳು ಚುಚ್ಚಿದೆ ಎಂದು ಊಟ ಮಾಡಿ ಮಲಗಿದ್ದವರು ಅಲ್ಲಿಯೇ ಸಾವನ್ನಪ್ಪಿದ್ದಾರೆ. ಮಲಗಿದ್ದ ಗಂಗಪ್ಪನನ್ನು ಮನೆಯವರು ಎಬ್ಬಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಲಕ್ಕವಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
– ಸೊರಬ : ಜಾನುವಾರು ಮೇಯಿಸಲು ಹೋದ ಬಾಲಕ ಕೃಷಿ ಹೊಂಡಕ್ಕೆ ಬಿದ್ದು ಸಾವು !
ಸೊರಬ: ಜಾನುವಾರು ಮೇಯಿಸಲು ಹೋದ ಬಾಲಕನೋರ್ವ ಕೃಷಿ ಹೊಂಡಕ್ಕೆ ಬಿದ್ದು ಮೃತಪಟ್ಟ ಘಟನೆ ತಾಲೂಕಿನ ಕ್ಯಾಸನೂರು – ತಲಕಾಲಕೊಪ್ಪ ಗ್ರಾಮದಲ್ಲಿ ನಡೆದಿದೆ. ಸುರೇಶ್ ಎಂಬುವವರ ಪುತ್ರ ಸಾತ್ವಿಕ್ (14) ಮೃತ ದುರ್ದೈವಿ. ಸಾತ್ವಿಕ್ ಶಾಲೆ ರಜೆ ಇರುವ ಹಿನ್ನೆಲೆ ಜಾನುವಾರು ಮೇಯಿಸಲು ತೆರಳಿದಾಗ ಗ್ರಾಮದ ಫಾತೀಮ ಎಂಬುವರ ಕೃಷಿ ಹೊಂಡಕ್ಕೆ ಆಕಸ್ಮಿಕವಾಗಿ ಕಾಲುಜಾರಿ ಬಿದ್ದು ಮೃತಪಟ್ಟಿದ್ದಾನೆ. ಘಟನಾ ಸ್ಥಳದಲ್ಲಿ ಪೋಷಕರ ಆಕ್ರಂದನ ಮುಗಿಲು ಮುಟ್ಟಿತ್ತು. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಬಾಲಕನ ಶವ ಮೇಲೆತ್ತಿದ್ದಾರೆ. ಈ ಘಟನೆ ಸಂಬಂಧ ಸೊರಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.