Categories
ಮಲ್ನಾಡ್

ಟಾಪ್ 4 ನ್ಯೂಸ್ ಮಲ್ನಾಡ್

ಟಾಪ್ 4 ನ್ಯೂಸ್ ಮಲ್ನಾಡ್

ಅನಾಮಿಕ ಯುವಕನಿಗೆ ಹಣ ಕೊಟ್ಟು ಕೊಲೆಯಾದ ಮಹಿಳೆ!
– ಶಿವಮೊಗ್ಗದ ಮಹಿಳೆಯನ್ನು ಕೊಲೆ ಮಾಡಿ ನದಿಗೆ ಎಸೆದ ಯುವಕ!

– ಕಳಸ : ಅಂಬಾ ತೀರ್ಥದಲ್ಲಿ ಮುಳುಗಿ ಯುವಕ ಸಾವು?!
– ಶಿವಮೊಗ್ಗ : ಗಾಂಜಾ ಮಾರಾಟ ಮಾಡುತಿದ್ದ ಇಬ್ಬರ ಬಂಧನ
– ಶಿವಮೊಗ್ಗ ಗಾಂಜಾ ಕೇಸ್ ನಾಲ್ವರು ಯುವಕರಿಗೆ 10 ವರ್ಷ ಜೈಲು
– ರಿಪ್ಪನ್‌ಪೇಟೆ : ಅಕ್ರಮ ಗೋ ಸಾಗಾಟ ಮೂವರು ಅರೆಸ್ಟ್!
– ರಿಪ್ಪನ್ ಪೇಟೆ: ನಾಗರಹಳ್ಳಿಯಲ್ಲಿ ಕಾಡುಕೋಣಗಳ ಮಾರಣಹೋಮ
– ಶಿವಮೊಗ್ಗ : ಅಸ್ವಸ್ಥ ಮಹಿಳೆ ನೇಣು ಬಿಗಿದುಕೊಂಡು ಆತ್ಮಹತ್ಯೆ

NAMMUR EXPRESS NEWS
ಶಿವಮೊಗ್ಗ: ಬಿಜಾಪುಕ್ಕೆ ಹೋಗಿ ಬರುತ್ತೇನೆ ಎಂದು ಹೇಳಿ ನಾಪತ್ತೆಯಾಗಿದ್ದ ಮಹಿಳೆ ಶವವಾಗಿ ಪತ್ತೆಯಾಗಿದ್ದು, ಆಕೆಯನ್ನ ಕೊಲೆ ಮಾಡಲಾಗಿದೆ. ಕೋಟೆ ಪೊಲೀಸ್ ಠಾಣಾ ವ್ಯಾಪ್ತಿಯ ವಿದ್ಯಾನಗರ 4ನೇ ಕ್ರಾಸ್ ವಾಸಿ ಟೈಲರ್ ಕೆಲಸ ಮಾಡಿಕೊಂಡಿದ್ದ ಮಮತಾ ಶ್ರೀಧರ್ ಎಂಬ 48 ವರ್ಷದ ಮಹಿಳೆ ಜೂ.02 ರಿಂದ ಕಾಣೆಯಾಗಿದ್ದರು. ತನ್ನ ಮನೆಯಿಂದ ಜೂನ್ 02 ರಂದು ಬಿಜಾಪುರಕ್ಕೆ ಹೋಗುತ್ತಿರುವುದಾಗಿ ತಂಗಿಯೊಂದಿಗೆ ಹೇಳಿ ಹೋದವರು ಮಮತಾ ವಾಪಾಸ್ ಆಗಿರಲಿಲ್ಲ. ಈ ಬಗ್ಗೆ ಕೋಟೆ ಪೊಲೀಸ್ ಠಾಣೆಯಲ್ಲಿ ಮಿಸ್ಸಿಂಗ್ ಕಂಪ್ಲೇಂಟ್ ದಾಖಲಾಗಿತ್ತು. ಈಕೆಯ ಫೋನ್ ಸ್ವಿಚ್‍ಆಪ್ ಆಗಿರುತ್ತದೆ. ಈ ಪ್ರಕರಣವನ್ನ ಬೇಧಿಸಿದ ಕೋಟೆ ಪೊಲೀಸರಿಗೆ ಆರೋಪಿಯೇ ಬಾಯಿ ಬಿಟ್ಟಿದ್ದಾನೆ. ರೇವಣ ಸಿದ್ದಯ್ಯ (27) ವರ್ಷದ ಯುವಕನನ್ನ ತೋರಿಸಿದೆ.

ಆಕೆಯ ಕೊನೆಯ ಫೋನ್ ಕಾಲು ಈತನಿಗೆ ಆದುದರಿಂದ ಪೊಲೀಸರು ಬೀಳಗಿಯಿಂದ ಶಿವಮೊಗ್ಗದ ಕೋಟೆ ಪೊಲೀಸ್ ಠಾಣೆಗೆ ಕರೆದುಕೊಂಡು ಬಂದಿದ್ದಾರೆ. ಯಾವುದೇ ಕಾರಣಕ್ಕೂ ಪೊಲೀಸರ ಮುಂದೆ ಬಾಯಿ ಬಿಡದ ರೇವಣ ಸಿದ್ದಯ್ಯ ಕೋಟೆ ಪೊಲೀಸರ ಖಡಕ್ ವಿಚಾರಣೆಯಲ್ಲಿ ಬಾಯಿ ಬಿಟ್ಟಿದ್ದಾನೆ. ಬೀಳಗಿಯಲ್ಲಿ ಕೊಲೆ ಮಾಡಿ ಕೃಷ್ಣ ನದಿಗೆ ಬಿಸಾಕಿರುವುದಾಗಿ ಬಾಯಿ ಬಿಟ್ಟಿದ್ದಾನೆ. ಈ ಯುವಕ ಮಮತಾರಿಗೆ ಸಾಮಾಜಿಕ ಜಾಲತಾಣದಲ್ಲಿ ಪರಿಚಯವಾಗಿದ್ದನೋ ಅಥವಾ ಬೇರೆ ರೀತಿ ಫೋನ್ ಸಂಪರ್ಕಕ್ಕೆ ಬಂದಿದ್ದ ರೇವಣ ಸಿದ್ದಯ್ಯನಿಗೆ ಮಮತಾ ಆನ್ ಲೈನ್ ನಲ್ಲಿ ಹಣ ವರ್ಗಾವಣೆ ಮಾಡಿದ್ದಳು. ಹಣ ವರ್ಗಾವಣೆ ಮಾಡಿದ್ದ ಮಮತಾ ಹಣ ವಾಪಾಸ್ ಪಡೆಯುವುದಾಗಿ ಬಿಜಾಪುರಕ್ಕೆ ಜೂ.02 ರಂದು ಬಂದಿದ್ದಳು!. ಜೂನ್.04 ರಂದು ಆಕೆಯನ್ನ ಕೊಲೆ ಮಾಡಿ ಕೃಷ್ಣ ನದಿಗೆ ಬಿಸಾಕಿದ್ದಾನೆ. ಬೀಳಗಿ ಪೊಲೀಸರಿಗೆ ಈ ಮೃತದೇಹ ಪತ್ತೆಯಾದರು ಗುರುತು ಸಿಗದ ಕಾರಣ ಅಪರಿಚಿತ ಶವ ಪತ್ತೆ ಎಂದು ದೂರು ದಾಖಲಿಸಿಕೊಂಡಿದ್ದರು.

ಕಳಸ : ಅಂಬಾ ತೀರ್ಥದಲ್ಲಿ ಮುಳುಗಿ ಯುವಕ ಸಾವು?!

ಕಳಸ: ಅಂಬಾ ತೀರ್ಥದಲ್ಲಿ ಸ್ನಾನಕ್ಕೆ ಇಳಿದ ಮಧ್ಯಪ್ರದೇಶದ ವ್ಯಕ್ತಿ ಸಾವನ್ನಪ್ಪಿದ್ದಾನೆ ಎನ್ನಲಾಗುತ್ತಿದೆ. ಮಧ್ಯಪ್ರದೇಶದ ಸಾಗರ್ ( 19 ) ಎಂದು ಸ್ನಾನಕ್ಕೆಂದು ಮೃತಪಟ್ಟಿದ್ದಾರೆ ಶಂಕಿಸಲಾಗಿದೆ. ಮೃತ ಸಾಗ‌ರ್ ಸಮೀಪದ ಎಸ್ಟೇಟ್ ನಲ್ಲಿ ಕೆಲಸ ಮಾಡುತ್ತಿದ್ದ. ಭಾನುವಾರ ತೋಟಕ್ಕೆ ರಜಾ ಇದ್ದ ಕಾರಮ ಅಂಬಾತೀರ್ಥದಲ್ಲಿ ಸ್ನಾನಕ್ಕೆ ಇಳಿದಿದ್ದಾರೆ ಎನ್ನಲಾಗಿದೆ. ಈ ವೇಳೆ ಅಂಬುತೀರ್ಥದಲ್ಲಿ ಮುಳುಗಿದ್ದಾರೆ.

-ಶಿವಮೊಗ್ಗ : ಗಾಂಜಾ ಮಾರಾಟ ಮಾಡುತಿದ್ದ ಇಬ್ಬರ ಬಂಧನ

ಗಾಂಜಾ ಗಿರಾಕಿಗಳ ಹೆಡೆಮುರಿ ಕಟ್ಟುವಲ್ಲಿ ಶಿವಮೊಗ್ಗ ಪೊಲೀಸರು ಯಶಸ್ವಿಯಾಗಿದ್ದು ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.

ಶಿವಮೊಗ್ಗ ನಗರದ ಹರ್ಷ ಫರ್ನ್ ಹತ್ತಿರದ ಪುರುದಾಳು ರಸ್ತೆಯಲ್ಲಿ ಇಬ್ಬರು ವ್ಯಕ್ತಿಗಳು ಬೈಕ್ ನಿಲ್ಲಿಸಿಕೊಂಡು ಗಾಂಜಾ ಮಾರುತ್ತಿದ್ದಾರೆ ಎಂಬ ಮಾಹಿತಿಯೊಂದು ಪೊಲೀಸರಿಗೆ ಲಭ್ಯವಾಗಿದೆ. ಸರ್ಕಲ್ ಇನ್ಸ್‌ ಪೆಕ್ಟರ್ ಮಂಜುನಾಥ್ ಬಿ ಮತ್ತು ಶಿವಪ್ರಸಾದ್, ಪಿಎಸ್‌ಐ ತುಂಗಾನಗರ ಪೊಲೀಸ್‌ ಠಾಣೆಯ ನೇತೃತ್ವದ ಸಿಬ್ಬಂದಿ ದಾಳಿ ನಡೆಸಿದ್ದಾರೆ. ದಾಳಿಯಲ್ಲಿ 1) ಮಾಲತೇಶ ಜೆ, 32 ವರ್ಷ, ವಿನೋಬನಗರ, ಶಿವಮೊಗ್ಗ ಮತ್ತು 2) ರಮೇಶ ವಿ, 25 ವರ್ಷ, ಶರಾವತಿ ನಗರ, ಶಿವಮೊಗ್ಗ ಇವರನ್ನು ದಸ್ತಗಿರಿ ಮಾಡಿದ್ದಾರೆ. ಆರೋಪಿತರಿಂದ ಅಂದಾಜು ಮೌಲ್ಯ 14,000/- ರೂಗಳ 260 ಗ್ರಾಂ ತೂಕದ ಒಣ ಗಾಂಜಾ ಮತ್ತು ಕೃತ್ಯಕ್ಕೆ ಬಳಸಿದ ಬೈಕ್ ವಶಪಡಿಸಿಕೊಳ್ಳಲಾಗಿದೆ.

ಶಿವಮೊಗ್ಗ: ಗಾಂಜಾ ಕೇಸ್ ನಾಲ್ವರು ಯುವಕರಿಗೆ ಜೈಲು

ಶಿವಮೊಗ್ಗ : ಗಾಂಜಾ ಪ್ರಕರಣವೊಂದರಲ್ಲಿ ನಾಲ್ವರು ಯುವಕರಿಗೆ 10 ವರ್ಷ ಕಠಿಣ ಜೈಲು ಶಿಕ್ಷೆ ವಿಧಿಸಿ, ಶಿವಮೊಗ್ಗದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜೂ. 15 ರಂದು ತೀರ್ಪು ನೀಡಿದೆ. ಇಂದಿರಾನಗರ ನಿವಾಸಿಗಳಾದ ದೌಲತ್ ಯಾನೆ ಗುಂಡು (27), ಮುಜೀಬ್ ಯಾನೆ ಬಸ್ಟ್ (27), ಕಡೇಕಲ್ ನಿವಾಸಿಗಳಾದ ಶೋಹೇಬ್ ಯಾನೆ ಚೂಡಿ (24) ಹಾಗೂ ಮಹಮ್ಮದ್ ಜಫ್ರುಲ್ಲಾ (24) ಶಿಕ್ಷೆಗೊಳಗಾದವರೆಂದು ಗುರುತಿಸಲಾಗಿದೆ. ಶಿಕ್ಷೆಯ ಜೊತೆಗೆ ಅಪರಾಧಿಗಳಿಗೆ ತಲಾ 1,05,000 ರೂ. ದಂಡ ವಿಧಿಸಲಾಗಿದೆ. ದಂಡ ಕಟ್ಟಲು ವಿಫಲವಾದಲ್ಲಿ ಹೆಚ್ಚುವರಿಯಾಗಿ 1 ವರ್ಷ ಸಾದಾ ಕಾರಾಗೃಹ ಶಿಕ್ಷೆ ಅನುಭವಿಸುವಂತೆ ನ್ಯಾಯಾಧೀಶರು ಆದೇಶಿಸಿದ್ದಾರೆ. ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಮಂಜುನಾಥ್ ನಾಯಕ್ ಅವರು ಈ ತೀರ್ಪು ನೀಡಿದ್ದಾರೆ. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕರಾದ ಸುರೇಶ್ ಕುಮಾರ್ ಎ. ಎಂ. ಅವರು ವಾದ ಮಂಡಿಸಿದ್ದರು. 11-12-2021 ರಂದು ಆಂಧ್ರಪ್ರದೇಶದಿಂದ ನಗರಕ್ಕೆ ಗಾಂಜಾ ಸಾಗಾಣೆ ಮಾಡಲಾಗುತ್ತಿದೆ ಎಂಬ ಖಚಿತ ವರ್ತಮಾನ ಶಿವಮೊಗ್ಗದ ತುಂಗಾನಗರ ಠಾಣೆ ಪೊಲೀಸರಿಗೆ ಲಭಿಸಿತ್ತು.

ಇದರ ಆಧಾರದ ಮೇಲೆ ಅಂದಿನ ಠಾಣೆ ಇನ್ಸ್‌’ಪೆಕ್ಟ‌ರ್ ದೀಪಕ್ ಎಂ. ಎಸ್. ನೇತೃತ್ವದ ಪೊಲೀಸ್ ತಂಡ ಕಾರ್ಯಾಚರಣೆಗಿಳಿದಿತ್ತು. ಲಕ್ಕಿನಕೊಪ್ಪ ಕ್ರಾಸ್ ಬಳಿಯ ಹಾಲ್ ಲಕ್ಕವಳ್ಳಿ ಕಡೆಗೆ ಹೋಗುತ್ತಿದ್ದ ಇನ್ನೋವಾ ಕಾರನ್ನು ತಡೆದು ಪರಿಶೀಲಿಸಿದ್ದರು. ಈ ವೇಳೆ ಕಾರಿನ ಸ್ಟೆಪ್ರಿ, ಹಿಂಭಾಗ ಹಾಗೂ ಮುಂಭಾಗದ ಡೋರ್ ಗಳು ಮತ್ತು ಬಾನೆಟ್ ನ ಒಳಗೆ ಗಾಂಜಾ ಪ್ಯಾಕೇಟ್ ಗಳು ದೊರೆತಿದ್ದವು. 6,50,000 ರೂ ಮೌಲ್ಯದ 21 ಕೆ. ಜಿ 315 ಗ್ರಾಂ ತೂಕ ಗಾಂಜಾ, ಕಾರನ್ನು ವಶಕ್ಕೆ ಪಡೆದುಕೊಂಡಿದ್ದರು. ಈ ಸಂಬಂಧ ನಾಲ್ವರನ್ನು ವಶಕ್ಕೆ ಪಡೆದು ಎನ್.ಡಿ.ಪಿ.ಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದರು. ನಂತರ ಸದರಿ ಪ್ರಕರಣದ ಕುರಿತಂತೆ ಆಗಿನ ಸಬ್ ಇನ್ಸ್’ಪೆಕ್ಟ‌ರ್ ಭಾರತಿ, ಬಿ ಹೆಚ್. ಅವರು ನ್ಯಾಯಾಲಯಕ್ಕೆ ಆರೋಪ ಪಟ್ಟಿ ದಾಖಲಿಸಿದ್ದರು.

– ರಿಪ್ಪನ್‌ಪೇಟೆ : ಗೋ ಸಾಗಾಟ ಮೂವರು ಆರೋಪಿಗಳ ಬಂಧನ

ರಿಪ್ಪನ್‌ಪೇಟೆ : ಅಕ್ರಮವಾಗಿ ಜಾನುವಾರು ಗಳನ್ನು ಸಾಗಿಸುತ್ತಿದ್ದಾಗ ಖಚಿತ ಮಾಹಿತಿ ಮೆರೆಗೆ ಪೊಲೀಸರು ಟಾಟಾ ದೋಸ್ತ್ ವಾಹನದಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 3 ಜಾನುವಾರುಗಳನ್ನು ರಕ್ಷಿಸಿದ್ದಾರೆ. ಅಕ್ರಮವಾಗಿ ಜಾನುವಾರು ಸಾಗಿಸುತ್ತಿದ್ದ ಪ್ರಮುಖ ಆರೋಪಿಗಳಾದ ಸೈಯದ್ ಖೈಜರ್ (45), ರಾಹಿದ್ (18) ಮತ್ತು ಫಾಜಿಲ್ (48)ರನ್ನು ಬಂಧಿಸಿ 3 ಜಾನುವಾರುಗಳನ್ನು ರಕ್ಷಿಸಲಾಗಿದೆ. ಸಿದ್ದಪ್ಪನಗುಡಿ ಬಳಿಯಲ್ಲಿ ಟಾಟಾ ದೋಸ್ತ್ (KA -37-A 2314) ವಾಹನದಲ್ಲಿ ಅಕ್ರಮವಾಗಿ ಸಾಗಿಸುತಿದ್ದ ಜಾನುವಾರನ್ನು ಪಿಎಸ್‌ಐ ಪ್ರವೀಣ್ ನೇತ್ರತ್ವದ ಸಿಬ್ಬಂದಿಗಳು ರಕ್ಷಿಸಿ ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.

ರಿಪ್ಪನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಚಾಲಕ ಸಮೇತ ಮೂರು ಜನ ವ್ಯಕ್ತಿಗಳಿದ್ದು, ವಾಹನದಲ್ಲಿದ್ದ ಚಾಲಕನ ಹೆಸರು ವಿಳಾಸ ಕೇಳಲಾಗಿ 1)ಸೈಯದ್ ಬೈಜರ್ ಬಿನ್ ಸೈಯದ್ 2) ರಾಹಿದ್ 3) ಫಾಜಿಲ್ ಹಾರಳ್ಳಿ ಗ್ರಾಮ, ಶಿವಮೊಗ್ಗ ತಾಲೂಕು ಎಂದು ತಿಳಿಸಿದ್ದು,ವಾಹನದ ಹಿಂಬದಿ ಹೋಗಿ ನೋಡಿದಾಗ ವಾಹನದಲ್ಲಿ 03 ಜಾನುವಾರು ಹೋರಿ ಕರುಗಳಿದ್ದು,ಅವುಗಳಿಗೆ ಹಿಂಸೆಪಡಿಸುವ ರೀತಿಯಲ್ಲಿ ಹಗ್ಗದಿಂದ ಬಿಗಿದು,ಒತ್ತೊತ್ತಾಗಿ ಕಟ್ಟಿಕೊಂಡಿರುವುದು ಕಂಡು ಬಂದಿರುತ್ತದೆ. ಸ್ಥಳಕ್ಕೆ ತೆರಳಿದ ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.

ಕಾಡುಕೋಣಗಳ ಮಾರಣಹೋಮ!

ರಿಪ್ಪನಪೇಟೆ : ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಹುಂಚ ವ್ಯಾಪ್ತಿಯ ನಾಗರಹಳ್ಳಿ ಗ್ರಾಮದಲ್ಲಿ ಕಾಡು ಕೋಣಗಳ ಮಾರಣಹೋಮ ನಡೆದಿರುವ ಬಗ್ಗೆ ವರದಿಯಾಗಿದೆ. ಹುಂಚವ್ಯಾಪ್ತಿಯ ನಾಗರಹಳ್ಳಿ ವ್ಯಾಪ್ತಿಯಲ್ಲಿ ಕೆಲವು ಕಿಡಿಗೇಡಿಗಳು ನಾಲ್ಕಕ್ಕೂ ಹೆಚ್ಚು ಕಾಡುಕೋಣಗಳನ್ನು ಅಕ್ರಮ ಬಂದೂಕು ಬಳಸಿ ಹತ್ಯೆಗೈದಿದ್ದಾರೆ, ಈ ಭಾಗದಲ್ಲಿ ಹತ್ತಕ್ಕೂ ಹೆಚ್ಚು ಕಾಡುಕೋಣಗಳು ಕೆಲವೊಮ್ಮೆ ಪ್ರತ್ಯಕ್ಷಗೊಳ್ಳುತಿದ್ದವು ಆದರೆ ಈಗ ಗುಂಪಿನಲ್ಲಿ ನಾಲೈದು ಮಾತ್ರ ಇದೆ ಕಾಡುಕೋಣಗಳ ಮಾರಣಹೋಮವೇ ನಡೆದಿದೆ ಎಂಬ ಆರೋಪ ಕೇಳಿಬಂದಿತ್ತು. ಕಾಡು ಪ್ರದೇಶಗಳಲ್ಲಿ ಹುಡುಕಾಟ ನಡೆಸಿದಾಗ ಕಾಡುಕೋಣದ ಕಳೇಬರಗಳು ದೊರಕಿದ್ದು ಕಾಡುಕೋಣಗಳ ಮಾರಣಹೋಮ ನಡೆದಿರುವುದು ಖಚಿತವಾದ ಹಿನ್ನಲೆಯಲ್ಲಿ ಈ ಬಗ್ಗೆ ಅರಣ್ಯ ಇಲಾಖೆಯ ಡಿಸಿಎಫ್ ಸಂತೋಷ್ ಕೆಂಚಪ್ಪಣ್ಣನವ‌ರ್, RFO ರಾಘವೇಂದ್ರ ರವರಿಗೆ ಮಾಹಿತಿ ತಿಳಿಸಲಾಯಿತು.

ಕೂಡಲೇ ಸ್ಥಳಕ್ಕಾಗಮಿಸಿದ ಅರಣ್ಯಾಧಿಕಾರಿ ಸಂತೋಷ್ ಕೆಂಚಣ್ಣನವರ್ ಹಾಗೂ Rfo ರಾಘವೇಂದ್ರ ಸ್ಥಳ ಪರಿಶೀಲನೆ ನಡೆಸಿ ಕಾಡುಕೋಣದ ಕಳೇಬರಗಳನ್ನು ಪರೀಕ್ಷೆಗಾಗಿ ಲ್ಯಾಬ್ ಗೆ ಕಳುಹಿಸಿಕೊಟ್ಟಿದ್ದಾರೆ. ನಂತರದಲ್ಲಿ ಇನ್ನೂ ಹಲವು ಕಾಡುಕೋಣಗಳ ಕಳೇಬರಕ್ಕೆ ಹುಡುಕಾಟ ನಡೆಸಲಾಗಿದ್ದು ನಾಳೆಯೂ ಹುಡುಕಾಟ ಆರೋಪಿಗಳು ಕಾಡುಕೋಣಗಳನ್ನು ಮಾಂಸಕ್ಕಾಗಿಯೋ ಅಥವಾ ಬೆಳೆ ನಾಶ ಪಡಿಸಿದ್ದಕ್ಕಾಗಿ ಹತ್ಯೆ ಮಾಡಿದ್ದಾರಾ ಎನ್ನುವುದು ತನಿಖೆಯಲ್ಲಿ ತಿಳಿದುಬರಬೇಕಾಗಿದೆ. ಕಾಡು ಕೋಣಗಳ ಹತ್ಯೆಗೆ ಕಳ್ಳಕೋವಿಗಳನ್ನು ಬಳಸಿದ್ದಾರೆ ಎನ್ನಲಾಗುತ್ತಿದೆ. ಪ್ರಭಾವಿ ವ್ಯಕ್ತಿಗಳು ಭಾಗಿಯಾಗಿದ್ದಾರೆ ಎನ್ನಲಾಗುತ್ತಿರುವ ಈ ಪ್ರಕರಣ ಲೋಕಸಭಾ ಚುನಾವಣೆಯ ಪ್ರಾರಂಭವಾದಗಿನಿಂದ ನಡೆಯುತಿದ್ದು ತಮ್ಮ ಪ್ರಭಾವದ ಮೂಲಕ ಮುಚ್ಚಿಹಾಕುವ ಯತ್ನ ನಡೆಸಿದ್ದಾರೆ ಎನ್ನಲಾಗುತ್ತಿದೆ. ಸುಮಾರು ನಾಲ್ಕಕ್ಕೂ ಹೆಚ್ಚು ಕಾಡುಕೋಣಗಳನ್ನು ಹತ್ಯೆಗೈಯಲಾಗಿದೆ.

– ಶಿವಮೊಗ್ಗ : ಅಸ್ವಸ್ಥ ಮಹಿಳೆ ನೇಣು ಬಿಗಿದುಕೊಂಡು ಆತ್ಮಹತ್ಯೆ

ಶಿವಮೊಗ್ಗ: ಮಾನಸಿಕ ಅಸ್ವಸ್ಥ ವಿವಾಹಿತ ಮಹಿಳೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರದ ಮಿಷನ್ ಕಾಂಪೌಂಡ್ ನಲ್ಲಿ ನಡೆದಿದೆ. ಸರಸ್ವತಿ ಎಂಬ 35 ವರ್ಷದ ಮಹಿಳೆ ನೇಣಿಗೆ ಶರಣಾಗಿದ್ದಾರೆ. ಮದುವೆಯಾಗಿ 15 ವರ್ಷ ಸಂಸಾರ ನಡೆಸಿದ್ದ ಮಹಿಳೆ ಬೆಳಿಗ್ಗೆ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಮಾನಸಿಕಾಸ್ವಸ್ಥಳಾಗಿ ಚಿಕಿತ್ಸೆ ಪಡೆಯುತ್ತಿದ್ದ ಮಹಿಳೆ ಬೇಸತ್ತು ಈ ರೀತಿ ನೇಣಿಗೆ ಶರಣಾಗಿರುವುದಾಗಿ ಆರೋಪಿಸಿದ್ದಾರೆ. ಮಹಿಳೆಗೆ ಒಂದು ಮಗುವಿತ್ತು ಎಂದು ಹೇಳಲಾಗುತ್ತಿದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.