Categories
ಅಪಘಾತ ತೀರ್ಥಹಳ್ಳಿ

ಮಧ್ಯರಾತ್ರಿ ಭೀಕರ ಅಪಘಾತ: ದೇವರು ದೊಡ್ಡವನು!

ಮಧ್ಯರಾತ್ರಿ ಭೀಕರ ಅಪಘಾತ: ದೇವರು ದೊಡ್ಡವನು!

– ಸಣ್ಣಪುಟ್ಟ ಗಾಯದಿಂದ ಪ್ರಯಾಣಿಕರು ಪಾರು
– ಮಂಡಗದ್ದೆ ರಸ್ತೆಯಲ್ಲಿ ಮಿತಿ ಹೆಚ್ಚಿದ ಅಪಘಾತ

NAMMUR EXPRESS NEWS
ತೀರ್ಥಹಳ್ಳಿ: ಖಾಸಗಿ ಲಾರಿ ಹಾಗೂ ಕೆ.ಎಸ್.ಆರ್.ಟಿ.ಸಿ. ಬಸ್ ನಡುವೆ ಮುಖಾಮುಖಿ ಡಿಕ್ಕಿಯಾದ ಘಟನೆ ಜೂ.16ರ ಭಾನುವಾರ ಮಧ್ಯರಾತ್ರಿ ಮಂಡಗದ್ದೆ ಸಮೀಪ ನಡೆದಿದೆ.

ತೀರ್ಥಹಳ್ಳಿ ತಾಲೂಕಿನ ಮಂಡಗದ್ದೆಯ ರಾಷ್ಟ್ರೀಯ ಹೆದ್ದಾರಿಯಲ್ಲಿ ತೀರ್ಥಹಳ್ಳಿಯಿಂದ ಬೆಂಗಳೂರಿಗೆ ತೆರಳುತ್ತಿದ್ದ ಕೆ.ಎಸ್.ಆರ್.ಟಿ.ಸಿ. ಬಸ್ ಹಾಗೂ ಶಿವಮೊಗ್ಗದಿಂದ ತೀರ್ಥಹಳ್ಳಿ ಕಡೆಗೆ ಬರುತ್ತಿದ್ದ ಖಾಸಗಿ ಲಾರಿ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ. ಈ ಪರಿಣಾಮ ಕೆಲವರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಶಿವಮೊಗ್ಗ ಆಸ್ಪತ್ರೆಗೆ ರವಾನಿಸಲಾಗಿದೆ.ಕೆ.ಎಸ್.ಆರ್.ಟಿ.ಸಿ. ಬಸ್ ಹಾಗೂ ಲಾರಿಯ ಮುಂಭಾಗ ಸಂಪೂರ್ಣ ನುಜ್ಜುಗುಜ್ಜಾಗಿದೆ. ಮಾಳೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ಮಂಡಗದ್ದೆ ವ್ಯಾಪ್ತಿಯಲ್ಲಿ ಹೆಚ್ಚಿದ ಅಪಘಾತ: ಅನೇಕ ಸಾವು

ಮಂಡಗದ್ದೆ ರಸ್ತೆಯಲ್ಲಿ ದಿನ ನಿತ್ಯ ಒಂದಲ್ಲ ಒಂದು ಅಪಘಾತ ಸಂಭವಿಸುತ್ತಿದೆ. ವಾಹನಗಳ ಅತೀ ವೇಗ ಅಪಘಾತಕ್ಕೆ ಕಾರಣವಾಗುತ್ತಿದೆ. ಬೈಕ್, ಕಾರು ಈ ಭಾಗದಲ್ಲಿ ಅತೀ ವೇಗ ಚಾಲನೆ ಮಾಡುತ್ತಿದ್ದು ಹೆದ್ದಾರಿ ಇಲಾಖೆ ಇಲ್ಲಿ ವಾಹನ ವವೇಗ ನಿಯಂತ್ರಣಕ್ಕೆ ಯೋಜನೆ ರೂಪಿಸಬೇಕಿದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.