Categories
ಮಲ್ನಾಡ್

ಟಾಪ್ ನ್ಯೂಸ್ ಮಲ್ನಾಡ್

ಟಾಪ್ ನ್ಯೂಸ್ ಮಲ್ನಾಡ್
ಚಿಕ್ಕಮಗಳೂರು: ಕಡಿಮೆ ಬಡ್ಡಿದರದಲ್ಲಿ ಸಾಲ ನೀಡುವುದಾಗಿ ವಂಚನೆ
– ಶಿರಸಿ : ಕ್ರಿಕೆಟ್ ಆಡುವ ವೇಳೆ ಸಿಡಿಲು ಬಡಿದು ಬಾಲಕ ಮೃತ್ಯು
– ಶಿವಮೊಗ್ಗ : ಪ್ರೀತಿ ವಿಚಾರದಲ್ಲಿ ನಡೆಯಿತು ಹಲ್ಲೆ
– ಶಿವಮೊಗ್ಗ : ಗೋಮಾಂಸ ಮಾರಾಟದ ಮೇಲೆ ದಾಳಿ
– ಆಗುಂಬೆ ಘಾಟಿ, ಸೋಮೇಶ್ವರದಲ್ಲಿ KSRTC ಬಸ್‌ ಅಡ್ಡಗಟ್ಟಿದ ಕೇರಳದ ಯುವಕರು, ಡ್ರೈವರ್‌ ಮೇಲೆ ಹಲ್ಲೆ
– ರಿಪ್ಪನ್ ಪೇಟೆ : ಸರ್ಕಾರಿ ಬಸ್‌ಗೆ ಬೈಕ್ ಡಿಕ್ಕಿ, ಮೂವರಿಗೆ ಗಂಭೀರ ಗಾಯ !

NAMMUR EXPRESS NEWS
ಚಿಕ್ಕಮಗಳೂರು: ಕಡಿಮೆ ಬಡ್ಡಿದರದಲ್ಲಿ ಸಾಲ ಒದಗಿಸುವುದಾಗಿ ನಂಬಿಸಿ ವ್ಯಕ್ತಿಯೊಬ್ಬರಿಗೆ 1,10,250 ರೂ ಹಣ ಪಡೆದು ವಂಚಿಸಿದ ಘಟನೆ ಚಿಕ್ಕಮಗಳೂರಿನಲ್ಲಿ ಸಂಭವಿಸಿದ್ದು, ಈ ಬಗ್ಗೆ ಚಿಕ್ಕಮಗಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಚಿಕ್ಕಮಗಳೂರಿನ ಅವಿನಾಶ್ ಮೋಸ ಹೋದ ವ್ಯಕ್ತಿ. ಮೇ.14 ರಂದು ಅವಿನಾಶ್ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ dhani finance pvt.ltd ನಲ್ಲಿ online personal loan ಅನ್ನು ಕಡಿಮೆ ಬಡ್ಡಿದರದಲ್ಲಿ ನೀಡುವುದಾಗಿ ನಂಬಿಸಿ ವಿವಿಧ ಶುಲ್ಕ(charges) ಎಂದು ಹಂತ ಹಂತವಾಗಿ ಆನ್ ಲೈನ್ ಮುಖಾಂತರ 1,10, 250 ರೂ ಗಳನ್ನು ವರ್ಗಾವಣೆ ಮಾಡಿ ವಂಚಿಸಿದ್ದಾರೆ. ವಂಚಿಸಿದ ವ್ಯಕ್ತಿಗಳನ್ನು ಪತ್ತೆ ಮಾಡಿ, ಅವರುಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಚಿಕ್ಕಮಗಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

– ಶಿರಸಿ : ಕ್ರಿಕೆಟ್ ಆಡುವ ವೇಳೆ ಸಿಡಿಲು ಬಡಿದು ಬಾಲಕ ಮೃತ್ಯು.

ಶಿರಸಿ: ತಾಲ್ಲೂಕಿನ ಬನವಾಸಿಯಲ್ಲಿ ಸಂಜೆ ವೇಳೆ ಆಟವಾಡುತ್ತಿದ್ದ ಬಾಲಕನೊಬ್ಬ ಸಿಡಿಲು ಬಡಿದು ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ. ಮೃತಪಟ್ಟ ಬಾಲಕ ಸಾಜೀದ್ ಅಷ್ಪಾಕ್ ಅಲಿ ಶೇಖ್(17). ಸ್ನೇಹಿತರ ಜತೆಗೂಡಿ ಇಲ್ಲಿನ ಜಯಂತಿ ಪ್ರೌಢಶಾಲೆ ಸಮೀಪದ ಬಯಲಿನಲ್ಲಿ ಕ್ರಿಕೆಟ್ ಆಡುವ ವೇಳೆ ಸಿಡಿಲು ಬಡಿದಿದೆ. ಸಿಡಿಲಿನ ಅಬ್ಬರಕ್ಕೆ ಭಯಗೊಂಡ ಸ್ನೇಹಿತರು ದೂರ ಓಡಿದ್ದು, ಅಷ್ಫಾಕ್ ಅಲಿ ಅಲ್ಲೇ ಕುಸಿದು ಬಿದ್ದಿದ್ದಾನೆ. ತಕ್ಷಣ ಶಿರಸಿಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ, ಆತನ ಪ್ರಾಣ ಹೋಗಿದ್ದನ್ನು ವೈದ್ಯರು ದೃಢೀಕರಿಸಿದ್ದಾರೆ. ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಬನವಾಸಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

– ಶಿವಮೊಗ್ಗ : ಪ್ರೀತಿ ವಿಚಾರದಲ್ಲಿ ನಡೆಯಿತು ಹಲ್ಲೆ

ಶಿವಮೊಗ್ಗ: ಕೆಲಸ ಕೊಟ್ಟ ಮಾಲೀಕನ ಪ್ರೀತಿಯ ವಿಚಾರದಲ್ಲಿ ಹಲ್ಲೆಯಾಗಿದೆ. ದುರ್ಗಿಗುಡಿಯ ಕನ್ಸರ್ವೆನ್ಸಿಗೆ ಕರೆದೊಯ್ದು ಹಲ್ಲೆ ಮಾಡಲಾಗಿದೆ. ಪ್ರಕರಣ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಅಣ್ಣಾನಗರದ ಸಹೋರಾದ ಮನೋಜ್ ಮತ್ತು ಇವರ ಸಹೋದರರು ಅಶೋಕನಗರದ ರಾಘವೇಂದ್ರ ಎಂಬುವರ ಜೊತೆ ಕೆಲಸಕ್ಕೆ ಇದ್ದರು. ರಾಘವೇಂದ್ರರಿಗೆ ಬಿಬಿಸ್ಟ್ರೀಟ್ ನ ಯುವತಿಯೊಂದಿಗೆ ಲವ್ ಇತ್ತು.

ಆಕೆಯನ್ನ ಮದುವೆಯಾಗಬೇಕೆಂದು ಕೊಂಡಿದ್ದ ರಾಘವೇಂದ್ರರಿಗೆ ಯುವತಿಯ ಸಹೋದರ ದೀಪು ಎಂಬುವರಿಗೆ ಇವರ ನಡುವಿನ ಪ್ರೀತಿ ಮತ್ತು ಮದುವೆಯಾಗುವುದು ಇಷ್ಟವಿರಲಿಲ್ಲ. ಇವರಿಬ್ಬರ ನಡುವಿನ ಗಲಾಟೆಯನ್ನ ಮನೋಜ್ ತಪ್ಪಿಸಿ ಎಲ್ಲವನ್ನೂ ಕುಳಿತುಕೊಂಡು ಮಾತನಾಡಿ ಬಗೆಹರಿಸೋಣವೆಂದು ಹೇಳಿದ್ದರು. ಪ್ರತಿಸುತ್ತಿದ್ದ ಯುವತಿಯನ್ನ ರಾಘವೇಂದ್ರ ಬಿಬಿಸ್ಟ್ರೀಟ್ ನಿಂದ ದುರ್ಗಿಗುಡಿಯ ಪಿಜಿಗೆ ಸೇರಿಸಿದ್ದರು. ಇದರಿಂದ ಕೋಪಗೊಂಡ ದೀಪು ಮನೋಜ್ ರಾಘವೇಂದ್ರರಿಗೆ ಸಪೋರ್ಟ್ ಮಾಡುತ್ತಿದ್ದಾನೆ ತಿಳಿದು ತನ್ನ ಸ್ನೇಹಿತರಾದ ದಾಸ ಯಾನೆ ದರ್ಶನ್ ರನ್ನ ಮನೋಜ್ ಮನೆಗೆ ಕಳುಹಿಸಿದ್ದಾನೆ.

ಮೇ.15 ರಂದು ದಾಸ ಯಾನೆ ದರ್ಶನ್ ಮನೋಜ್ ನನ್ನ ದುರ್ಗಿಗುಡಿಯ ಪಂಚಮುಖಿ ದೇವಸ್ಥಾನದ ಬಳಿಯ ಕನ್ಸರ್ವೆನ್ಸಿಯಲ್ಲಿ ಕರೆದುಕೊಂಡು ಬಂದು ಹೊಡೆದಿದ್ದಾನೆ ಎಂದು ಆರೋಪಿಸಲಾಗಿದೆ. ಸುಮಾರು 6-30ರ ವೇಳೆಗೆ ಕಾರ್ತಿಕ್ ನನ್ನ ಕರೆದುಕೊಂಡು ಹೋಗಿ ರಾಘವೇಂದ್ರನನ್ನ ಕರೆಯಿಸು ಇಲ್ಲ ನಿನ್ನನ್ನ ಸುಮ್ಮನೆ ಬಿಡೊಲ್ಲ ಎಂದು ಬೆದರಿಕೆಸಹ ಹಾಕಲಾಗಿದೆ ಎಂದು ಮನೋಜ್ ದಾಖಲಿಸಿದ ದೂರಿನಲ್ಲಿ ಉಲ್ಲೇಖಿಸಲಾಗಿದೆ. ಮನೋಜ್ ನ ಬಲಗಣ್ಣು ಮತ್ತು ತುಟಿಗೆ ಗಾಯವಾಗಿದೆ. ದಾಸ ಯಾನೆ ದರ್ಶನ್, ಕಾರ್ತಿಕ್ @ ಸಿಂಗ್, ದೀಪು ಮತ್ತು ಇತರೆ ಇಬ್ಬರ ವಿರುದ್ಧ ದೂರು ದಾಖಲಾಗಿದೆ.

– ಶಿವಮೊಗ್ಗ : ಗೋಮಾಂಸ ಮಾರಾಟದ ಮೇಲೆ ದಾಳಿ

ಶಿವಮೊಗ್ಗ: ಇಲಿಯಾಜ್ ನಗರದಲ್ಲಿ ದನಗಳನ್ನ ಖರೀದಿಸಿ ಮಾಂಸಕ್ಕೆ ಮಾರಾಟ ಮಾಡುತ್ತಿದ್ದ ಅಡ್ಡ ಮೇಲೆ ನಿನ್ನೆ ದೊಡ್ಡಪೇಟೆ ಪೊಲೀಸರು ದಾಳಿ ನಡೆಸಿದ್ದಾರೆ. ದಾಳಿಯಲ್ಲಿ ಇಬ್ಬರನ್ನ ಬಂಧಿಸಲಾಗಿದೆ. 60 ಕೆಜಿ ದನದ ಮಾಂಸ,ಮಾರಾಟಕ್ಕೆ ಬೇಕಾದ ಉಪಕರಣಗಳನ್ನ ವಶಕ್ಕೆ ಪಡೆಯಲಾಗಿದೆ. ಇಲಿಯಾಜ್ ನಗರದ ಖಾಜಿ ನಗರದಲ್ಲಿ ಅಪ್ಸರ್ ಶರೀಫ್ ರವರ ಬಾಡಿಗೆ ಮನೆಯಲ್ಲಿ ಇಬ್ವರು ವ್ಯಕ್ತಿಗಳು ದನಗಳನ್ನ ಖರೀದಿಸಿ ಅದರ ಮಾಂಸಗಳನ್ನ ಮಾರಾಟ ಮಾಡುತ್ತಿದ್ದರು ಎಂಬ ಖಚಿತ ಮಾಹಿತಿಯ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ದಾಳಿಯಲ್ಲಿ ಅಪ್ಸರ್ ಶರೀಫ್, ಮೊಹಮದ್ ಫರಾಜ್ ರನ್ನ‌ಬಂಧಿಸಲಾಗಿದೆ.

ದನದ ಮಾಂಸವನ್ನ ವಶಕ್ಕೆ ಪಡೆಯಲಾಗಿದೆ. ಮಾಂಸ ಮಾಡಲು ಬೇಕಾದ ಮಚ್ಚು, ಹುಕ್ಕು, ವಶಕ್ಕೆ ಪಡೆಯಲಾಗಿದೆ. ಅಪ್ಸರ್ ಶರೀಪ್ ಹಳ್ಳಿಗಳ ಮೇಲೆ ತೆರಳಿ ದನಗಳನ್ನ ಹಿಡಿದುಕೊಂಡು ಬರುತ್ತಿದ್ದಾನೆ ಎಂದು ತಿಳಿದುಬಂದಿದೆ. ದನದ ಮಾಂಸ ಮಾರುತ್ತಿದ್ದನೋ ಅಥವಾ ಎಮ್ಮೆ ಮಾಂಸ ಮಾರಾಟ ಮಾಡುತ್ತಿದ್ದನೋ ಎಂಬುದರ ಬಗ್ಗೆ ಪಶುವೈದ್ಯರ ವರದಿ ಕೇಳಲಾಗಿದ್ದು ಪಶುವೈದ್ಯರು ಇದು ದನದ ಮಾಂಸ ಎಂದು ವರದಿ ನೀಡಿದ ಮೇರೆಗೆ ಮುಂದಿನ ಕ್ರಮ ಜರುಗಿಸಲಾಗಿದೆ.

– ಆಗುಂಬೆ ಘಾಟಿ, ಸೋಮೇಶ್ವರದಲ್ಲಿ KSRTC ಬಸ್‌ ಅಡ್ಡಗಟ್ಟಿದ ಕೇರಳದ ಯುವಕರು, ಡ್ರೈವರ್‌ ಮೇಲೆ ಹಲ್ಲೆ

ಘಾಟಿಯಲ್ಲಿ ಕೆಎಸ್‌ಆರ್‌ಟಿಸಿ ಬಸ್‌ ಅಡ್ಡಗಟ್ಟಿ ಡ್ರೈವರ್‌ ಮತ್ತು ಕಂಡಕ್ಟರ್‌ ಮೇಲೆ ಹಲ್ಲೆ ನಡೆಸಲಾಗಿದೆ. ಈ ಸಂಬಂಧ ಉಡುಪಿ ಜಿಲ್ಲೆ ಹೆಬ್ರಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಶಿವಮೊಗ್ಗದಿಂದ ಉಡುಪಿಗೆ ಆಗುಂಬೆ ಮಾರ್ಗವಾಗಿ ಬಸ್ಸು ತೆರಳುತ್ತಿತ್ತು. ಘಾಟಿಯ ಆರನೇ ತಿರುವು ಮತ್ತು ಏಳನೆ ತಿರುವಿನಲ್ಲಿ ಹಿಂಬದಿಯಿಂದ ಬಂದ ಕಾರೊಂದು ನಿರಂತರ ಹಾರನ್‌ ಮಾಡಿದೆ. ಸೋಮೇಶ್ವರ ಸಮೀಪ ಬಸ್ಸನ್ನು ಹಿಂದಿಕ್ಕಿದ ಕೇರಳ ನೋಂದಣಿಯ ಕಾರಿನಿಂದ ಕೆಳಗಿಳಿದ ಉಡುಪಿಯ ಜುನೈದ್‌ ಮೊಹಮ್ಮದ್‌, ಕೇರಳದ ಕಾಸರಗೋಡಿನ ಅಬೂಬಕರ್‌ ಅರ್ಶೋಕ್‌, ರಿಜಾಖಾನ್‌ ಶೀಲ್‌ ಎಂಬುವವರು ಬಸ್‌ ಚಾಲಕನನ್ನು ಬಸ್ಸಿನಿಂದ ಕೆಳಗೆಳೆದು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಕೆಎಸ್‌ಆರ್‌ಟಿಸಿ ಚಾಲಕ ಶಿವಾನಂದ ಶಿವಲಿಂಗ ಖೋತ್‌ ಮೇಲೆ ಹಲ್ಲೆ ನಡೆಸಲಾಗಿದೆ. ಉಡುಪಿ ಜಿಲ್ಲೆ ಹೆಬ್ರಿ ಠಾಣೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

– ರಿಪ್ಪನ್ ಪೇಟೆ : ಸರ್ಕಾರಿ ಬಸ್‌ಗೆ ಬೈಕ್ ಡಿಕ್ಕಿ, ಮೂವರಿಗೆ ಗಂಭೀರ ಗಾಯ !

ರಿಪ್ಪನ್‌ಪೇಟೆ : ಸರ್ಕಾರಿ ಬಸ್‌ಗೆ ಬೈಕ್ ಡಿಕ್ಕಿಯಾಗಿ ಮೂವರು ಗಂಭೀರವಾಗಿ ಗಾಯಗೊಂಡ ಘಟನೆ ಕೋಡೂರು ಬಳಿಯ ಶಾಂತಪುರದಲ್ಲಿ ನಡೆದಿದೆ. ಗಾಯಾಳುಗಳನ್ನು ಕೋಡೂರು ಗ್ರಾಪಂ ವ್ಯಾಪ್ತಿಯ ಮತ್ತಿಘಟ್ಟ ನಿವಾಸಿಗಳಾದ ಯಶವಂತ್, ಲೋಕೇಶ್ ಮತ್ತು ಶಶಿಕುಮಾರ್ ಎಂದು ಗುರುತಿಸಲಾಗಿದೆ. ಬಾವಿ ಕೆಲಸಕ್ಕೆಂದು ಬೈಕಿನಲ್ಲಿ ತೆರಳುತ್ತಿದ್ದಾಗ ಹೊಸನಗರ ಕಡೆಯಿಂದ ಶಿವಮೊಗ್ಗ ಕಡೆಗೆ ಚಲಿಸುತ್ತಿದ್ದ ಸರ್ಕಾರಿ ಬಸ್‌ಗೆ ಬೈಕ್ ಮುಖಾಮುಖಿ ಡಿಕ್ಕಿಯಾಗಿದೆ. ಈ ಘಟನೆಯಲ್ಲಿ ಬೈಕ್ ಸವಾರರಲ್ಲಿ ಓರ್ವನ ಕಾಲು ತುಂಡಾಗಿದ್ದು ಮತ್ತಿಬ್ಬರಿಗೂ ಗಂಭೀರ ಸ್ವರೂಪದ ಗಾಯಗಳಾಗಿದ್ದು ಅಂಬ್ಯುಲೆನ್ಸ್ ಮೂಲಕ ಶಿವಮೊಗ್ಗ ಆಸ್ಪತ್ರೆಗೆ ರವಾನಿಸಲಾಗಿದೆ. ಈ ಘಟನೆ ಸಂಬಂಧ ರಿಪ್ಪನ್‌ಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.