Categories
ಮಲ್ನಾಡ್

ವರಮಹಾಲಕ್ಷ್ಮಿ ಹಬ್ಬದ ಸಂಭ್ರಮ ಜೋರು!

ವರಮಹಾಲಕ್ಷ್ಮಿ ಹಬ್ಬದ ಸಂಭ್ರಮ ಜೋರು!
– ದೇಗುಲದಲ್ಲಿ ಭಕ್ತರ ಸಾಲು ಸಾಲು: ಮನೆಯಲ್ಲಿ ಹಬ್ಬದ ವಾತಾವರಣ
– ಮಲೆನಾಡಲ್ಲಿ ಕಳೆಗಟ್ಟಿದ ವರ ಮಹಾಲಕ್ಷ್ಮಿ ಹಬ್ಬ

NAMMUR EXPRESS NEWS
ಮಲೆನಾಡು: ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಯಲ್ಲಿ ವರಮಹಾಲಕ್ಷ್ಮಿ ಹಬ್ಬದ ಸಂಭ್ರಮ ಎಲ್ಲೆಲ್ಲು ಮನೆ ಮಾಡಿದೆ. ಮನೆ, ದೇವಸ್ಥಾನದಲ್ಲಿ ಲಕ್ಷ್ಮಿ ಪೂಜೆಗೆ ಸಿದ್ಧತೆ ನಡೆಯುತ್ತಿದೆ. ಎಲ್ಲಾ ಕಡೆ ಖರೀದಿ ಜೋರಾಗಿದೆ. ಶಿವಮೊಗ್ಗದ ಗಾಂಧಿ ಬಜಾರ್‌, ಶಿವಪ್ಪನಾಯಕ ಪ್ರತಿಮೆ ಎದುರಿನ ರಸ್ತೆಯಲ್ಲಿ ಗುರುವಾರ ಮಧ್ಯಾಹ್ನದಿಂದಲೂ ಖರೀದಿ ಭರಾಟೆ ಜೋರಿದೆ. ಶ್ರಾವಣ ಮಾಸದ ಪ್ರಮುಖ ಹಬ್ಬವಾಗಿರುವುದರಿಂದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಮಾರುಕಟ್ಟೆಗೆ ಲಗ್ಗೆ ಇಟ್ಟಿದ್ದಾರೆ.
ಲಕ್ಷ್ಮಿ ದೇವಿಯನ್ನು ಪ್ರತಿಷ್ಠಾಪಿಸಿ ಪೂಜೆ ಮಾಡುತ್ತಾರೆ. ಈ ಹಿನ್ನೆಲೆ ಅಲಂಕಾರಿಕ ವಸ್ತುಗಳು, ಸೀರೆ, ಬಾಳೆ ಕಂದು, ಹಣ್ಣು, ಪೂಜಾ ಸಾಮಗ್ರಿಗಳು, ಸಿಹಿ ತಿನಿಸುಗಳ ಡಿಮ್ಯಾಂಡ್ ಹೆಚ್ಚಿದೆ. ಜನ ಹೆಚ್ಚಾಗಿ ಖರೀದಿ ಮಾಡುತ್ತಿರುವುದರಿಂದ ಅಂಗಡಿ ಮಾಲೀಕರ ಮೊಗದಲ್ಲಿ ಮಂದಹಾಸ ಮೂಡಿದೆ. ಮಲೆನಾಡಿನ ಎಲ್ಲಾ ತಾಲೂಕು ಕೇಂದ್ರದಲ್ಲಿ ಜನರ ಖರೀದಿ ಹೆಚ್ಚಿದೆ.

ಇದನ್ನೂ ಓದಿ : ಚಂದ್ರನಂಗಳದಲ್ಲಿ ಭಾರತದ ಮುದ್ರೆ!

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.