ಅನ್ನಪೂರ್ಣೇಶ್ವರಿ ಟೈಲ್ಸ್ & ಗ್ರಾನೈಟ್ಸ್ ಉದ್ಘಾಟನೆ
– ತೀರ್ಥಹಳ್ಳಿ ಟೈಲ್ಸ್ & ಗ್ರಾನೈಟ್ಸ್ ಉದ್ಯಮಕ್ಕೆ ಸುರೇಶ್ ಮಾಲೀಕತ್ವದ ಸಂಸ್ಥೆ ಎಂಟ್ರಿ
– ಕಜಾರಿಯಾ ಶೋ ರೂಂ ಉದ್ಘಾಟನೆ ಉದ್ಘಾಟಿಸಿದ ವಿನಯ್ ಗುರೂಜಿ
ಮಲೆನಾಡಿನ ಕಟ್ಟಡ ನಿರ್ಮಾಣ ಉದ್ಯಮ ಕ್ಷೇತ್ರದಲ್ಲಿ ಛಾಪು ಮೂಡಿಸಿರುವ ಕೊಪ್ಪದ ಅನ್ನಪೂರ್ಣೇಶ್ವರಿ ಟೈಲ್ಸ್ & ಗ್ರಾನೈಟ್ಸ್ ಸಂಸ್ಥೆ
ಇದೀಗ ತೀರ್ಥಹಳ್ಳಿಯ ಎಪಿಎಂಸಿ ಸಮೀಪ ದೊಡ್ಡ ಮನೆ ಕೇರಿಯಲ್ಲಿ ತನ್ನ ನೂತನ ಎರಡನೇ ಶೋ ರೂಂ ಕಜಾರಿಯ ಶೋ ರೂಂ ಅನ್ನು ಆರಂಭ ಮಾಡಿದೆ.
ಗೌರಿಗದ್ದೆ ಆಶ್ರಮದ ಅವಧೂತ ವಿನಯ್ ಗುರೂಜಿ ಅವರು ಶೋ ರೂಂ ಅನ್ನು ಉದ್ಘಾಟನೆ ಮಾಡಿದರು. ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ, ಕೊಪ್ಪದ ಬಿಜೆಪಿ ನಾಯಕ ರಾಮಸ್ವಾಮಿ, ಕಜಾರಿಯ ಸಂಸ್ಥೆಯ ಜನರಲ್ ಮ್ಯಾನೇಜರ್ ಪ್ರವೀಣ್ ಸಿಂಗ್, ಮಾಲೀಕ ಸುರೇಶ್ ಕಣಗಲ್, ಪುಣ್ಯಪಾಲ್ ಸೇರಿ ಹಲವರು ಇದ್ದರು.
ಸುರೇಶ್ ಅವರು ಎಲ್ಲರಿಗೂ ಧನ್ಯವಾದ ಅರ್ಪಿಸಿ ತೀರ್ಥಹಳ್ಳಿ ಭಾಗದ ಸಮಸ್ತ ಜನತೆಗೆ ಸ್ವಾಗತಿಸಿದರು. ಅತ್ಯುತ್ತಮ ಗುಣಮಟ್ಟದ ಸೇವೆ ನೀಡುವುದಾಗಿ ಭರವಸೆ ನೀಡಿದರು.
ಪ್ರವೀಣ್ ಸಿಂಗ್ ಮಾತನಾಡಿ, ಸುರೇಶ್ ಅವರು ಉದ್ಯಮದಲ್ಲಿ ಜನರ ವಿಶ್ವಾಸ ಗಳಿಸಿದ್ದಾರೆ. ಒಳ್ಳೆ ಉದ್ಯಮಿ ಕೂಡ ಹೌದು. ತೀರ್ಥಹಳ್ಳಿಯಲ್ಲಿ ಅವರ ಉದ್ಯಮಕ್ಕೆ ಶುಭ ಅಗಲಿ ಎಂದರು. ಸುರೇಶ್ ಅವರ ಪತ್ನಿ ವೀಣಾ ಸುರೇಶ್ ಕಣಗಲ್, ಮಕ್ಕಳಾದ ಪ್ರಾರ್ಥನಾ, ಪರೀಕ್ಷಿತ್ ಕಣಗಲ್
ಇತರರು ಇದ್ದರು.
ತೀರ್ಥಹಳ್ಳಿ ಅಭಿವೃದ್ಧಿಗೆ ಅಡಿಕೆ ವರ: ಆರಗ
ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ ಮಾತನಾಡಿ, ಅನ್ನಪೂರ್ಣೇಶ್ವರಿ ಟೈಲ್ಸ್ & ಗ್ರಾನೈಟ್ಸ್ ಸಂಸ್ಥೆ ಎರಡನೇ ಶೋ ರೂಂ ನಮ್ಮೂರಲ್ಲಿ ಶುರುವಾಗಿದೆ. ಅದು ಹೆಮ್ಮೆಯ ವಿಷಯ. ಇದೀಗ ವಾಹನ ಮತ್ತು ಮನೆ ಜನರ ಅಧ್ಯತೆ. ತೀರ್ಥಹಳ್ಳಿ ಸೇರಿ ಮಲೆನಾಡು ಅಭಿವೃದ್ಧಿ ಆಗುತ್ತಿದೆ. ಈಗ ಎಲ್ಲಿಯೂ ಹುಲ್ಲಿನ ಗುಡಿಸಲು ಕಾಣುತ್ತಿಲ್ಲ. ಅಡಿಕೆ ಇನ್ನು 10 ವರ್ಷ ಹೀಗೆ ಇದ್ದರೆ ನಮ್ಮ ಊರುಗಳು ಅಭಿವೃದ್ಧಿ ಆಗುತ್ತವೆ. ಭಗವಂತ ನಮ್ಮ ಊರಿಗೆ ಕರುಣೆ ತೋರಿದ್ದಾನೆ. ಅಡಿಕೆ ನಮ್ಮ ಬದುಕು ಬದಲಿಸಿದೆ ಇಂತಹ ಶೋ ರೂಂ ತೀರ್ಥಹಳ್ಳಿ ಅಭಿವೃದ್ಧಿಗೆ ಕೊಡುಗೆ ನೀಡಲಿವೆ.
ತೀರ್ಥಹಳ್ಳಿಗೆ ಕಜಾರಿಯಾ ಬ್ರಾಂಡ್ ಅನ್ನಪೂರ್ಣೇಶ್ವರಿ ಟೈಲ್ಸ್ & ಗ್ರಾನೈಟ್ಸ್ ಬಂದಿದೆ. ಎಲ್ಲರಿಗೂ ಅನುಕೂಲ ಆಗುತ್ತಿದೆ ಎಂದರು.
ಉದ್ಯೋಗ ಹುಡುಕುವ ಬದಲು ಉದ್ಯೋಗ ಕೊಡಿ: ವಿನಯ್ ಗುರೂಜಿ
ಅವಧೂತ ವಿನಯ್ ಗುರೂಜಿ ಮಾತನಾಡಿ, ತೀರ್ಥಹಳ್ಳಿ ಪವಿತ್ರ ಊರು. ರಾಜ್ಯದಲ್ಲಿ ಹೊಸತು ಏನೇ ಬಂದರೂ ತೀರ್ಥಹಳ್ಳಿಗೆ ಬರುತ್ತದೆ. ಇಲ್ಲಿಯ ಜನ ಸಾಧಕರು. ಯುವ ಜನತೆ ಉದ್ಯೋಗ ಹುಡುಕುವ ಬದಲು ಉದ್ಯೋಗ ಕೊಡಿ. ನಮ್ಮ ಕೊಪ್ಪದ ವಿಕಾಸ್ ಬೇಗಾನೆ ಕೂಡ ಸಾವಿರಾರು ಜನರಿಗೆ ಉದ್ಯೋಗ ಕೊಟ್ಟಿದ್ದಾರೆ. ಮನಸ್ಸಿದ್ದರೆ ಮಾರ್ಗ ಇದೆ. ಉದ್ಯಮ ಮಾತ್ರವಲ್ಲ, ಸಮಾಜ ಸೇವೆಯನ್ನು ಮಾಡಬೇಕು. ಉದ್ಯೋಗ ಸೃಷ್ಟಿಗೆ ಎಲ್ಲರೂ ಬೆಂಬಲಿಸಬೇಕು. ಸುರೇಶ್ ಅವರ ಎರಡು ಶೋ ರೂಂ ಉದ್ಘಾಟನೆ ಮಾಡಿದ್ದೇನೆ. ಇನ್ನು 6 ಕೂಡ ನಾನೆ ಮಾಡುತ್ತೇನೆ ಎಂದರು.
ತೀರ್ಥಹಳ್ಳಿ ಸಮಸ್ತ ಗ್ರಾಹಕರು ಹಾಗೂ ಸರ್ವರಿಗೂ ಸುಸ್ವಾಗತ
ಅನ್ನಪೂರ್ಣೇಶ್ವರಿ ಟೈಲ್ಸ್ ಅಂಡ್ ಗ್ರಾನೈಟ್ಸ್, ಕೊಪ್ಪ ಮತ್ತು ತೀರ್ಥಹಳ್ಳಿ
ಕುಟುಂಬದವರು ಮತ್ತು ಸಿಬ್ಬಂದಿ ವರ್ಗಾವಣೆ.
ಮೊಬೈಲ್: 9448545362, 8762897364.
