Categories
ತೀರ್ಥಹಳ್ಳಿ

ಜಾತ್ರೆಯಲ್ಲಿ ಕಳ್ಳರಿದ್ದಾರೆ ಹುಷಾರ್..!

ಜಾತ್ರೆಯಲ್ಲಿ ಕಳ್ಳರಿದ್ದಾರೆ ಹುಷಾರ್..!
– ಲಕ್ಷ ಜನ ಸೇರುವ ಕಾರಣ ಜಾಗೃತಿ ಇರಲಿ
– ತೀರ್ಥಹಳ್ಳಿ ಪೊಲೀಸರಿಂದ ಎಲ್ಲೆಡೆ ಅಲರ್ಟ್
– ರಥ ಬೀದಿ ಸೇರಿ ಎಲ್ಲೆಡೆ ಸಿಸಿಟಿವಿ ಕಣ್ಣು

NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ಪಟ್ಟಣಕ್ಕೆ ಲಕ್ಷ ಜನರು ಸೇರುವುದರಿಂದ ಜೇಬು ಕಳ್ಳರು ಸರಗಳ್ಳರು ಹಾಗೂ ಕಳ್ಳರು ಆಗಮಿಸುವ ಸಾಧ್ಯತೆ ಇದೆ. ಈ ಬಗ್ಗೆ ಪೊಲೀಸ್ ಇಲಾಖೆ ಮಾಹಿತಿ ನೀಡಿದೆ. ಹೀಗಾಗಿ ಜನರು ತಮ್ಮ ಪರ್ಸ್ ಹಾಗೂ ಮೊಬೈಲ್, ಬಂಗಾರ ಹಾಗೂ ಒಡವೆಗಳ ಬಗ್ಗೆ ಜಾಗೃತಿ ವಹಿಸಬೇಕು. ತಮ್ಮ ಅಮೂಲ್ಯವಾದ ವಸ್ತುಗಳನ್ನ ಸುರಕ್ಷಿತವಾಗಿ ಮನೆಯಲ್ಲಿಯೇ ಇಟ್ಟು ಬರಬೇಕಾಗಿದೆ. ಇದು ನಮ್ಮೂರ ಎಕ್ಸ್ಪ್ರೆಸ್ ಕಾಳಜಿ

ಎಲ್ಲೆಡೆ ಪೊಲೀಸ್ ಭದ್ರತೆ..!

ಪೊಲೀಸ್ ಸಿಬ್ಬಂದಿ ವರ್ಗದವರಿಗೆ ತೀರ್ಥಹಳ್ಳಿ ಡಿ ವೈ ಎಸ್ ಪಿ ಗಜಾನನ ವಾಮನಸುತಾರ ನೇತೃತ್ವದಲ್ಲಿ ಪೊಲೀಸ್ ಸಿಬ್ಬಂದಿ ಇಡೀ ಪಟ್ಟಣದಲ್ಲಿ ಭದ್ರತೆಯನ್ನು ಒದಗಿಸುತ್ತಿದ್ದಾರೆ. ಇನ್ನು ಪಟ್ಟಣದ ಎಲ್ಲಾ ಕಡೆಯಲ್ಲಿ ಸಿಸಿಟಿವಿ ಅಳವಡಿಸಲಾಗಿದೆ. ಕಳ್ಳರು ಮತ್ತು ಇತರೆ ಘಟನೆಗಳ ಬಗ್ಗೆ ಕಣ್ಣಿಡಲಾಗಿದೆ.

ಎಲ್ಲೆಂದರಲ್ಲಿ ವಾಹನ ನಿಲ್ಲಿಸಿದರೆ ಸೀಜ್!

ಇನ್ನು ವಾಹನಗಳ ಪಾರ್ಕಿಂಗ್ ವ್ಯವಸ್ಥೆಯ ಮೇಲೂ ಪೊಲೀಸ್ ಇಲಾಖೆ ಕಣ್ಣಿಟ್ಟಿದ್ದು ನಿಗದಿತ ಜಾಗದಲ್ಲಿ ಪಾರ್ಕಿಂಗ್ ಮಾಡಬೇಕಾಗಿದೆ ಇಲ್ಲವಾದಲ್ಲಿ ವಾಹನಗಳನ್ನ ಪೋಲಿಸ್ ಇಲಾಖೆಯ ವಶ ಪಡಿಸಿಕೊಳ್ಳುವ ಸಾಧ್ಯತೆ ಇದೆ. ಹೀಗಾಗಿ ಜನರು ತಮ್ಮ ವಾಹನಗಳನ್ನು ನಿರ್ದಿಷ್ಟ ಜಾಗದಲ್ಲಿ ಮಾತ್ರ ಪಾರ್ಕಿಂಗ್ ಮಾಡಬೇಕಾಗಿದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.