Categories
ತೀರ್ಥಹಳ್ಳಿ

ದೇವಂಗಿ-ಹಿಲಿಕೆರೆ ಗಣೇಶೋತ್ಸವ ರಂಗು!

ದೇವಂಗಿ-ಹಿಲಿಕೆರೆ ಗಣೇಶೋತ್ಸವ ರಂಗು!
– ದೇವಂಗಿ ಸರ್ಕಲ್ ಅಲ್ಲಿ ಪಟಾಕಿ, ಕಲೆ ಕಲರವ
– 5000ಕ್ಕೂ ಹೆಚ್ಚು ಜನರ ಸಮಾಗಮ

NAMMUR EXPRESS NEWS
ತೀರ್ಥಹಳ್ಳಿ ತಾಲೂಕಿನಲ್ಲಿ ಗಮನ ಸೆಳೆದ ಹಿಲಿಕೆರೆ ಹಾಗೂ ದೇವಂಗಿ ಗಣಪತಿ ಉತ್ಸವ ಸಂಭ್ರಮದಿಂದ ತೆರೆ ಕಂಡಿದೆ. ಸುಮಾರು 5000 ಭಕ್ತರ ಸಮ್ಮುಖದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಾವಿರಾರು ಪಟಾಕಿಗಳು ಅಗಸದ ಎತ್ತರದಲ್ಲಿ ಬೆಳಕಿನ ಚಿತ್ತಾರ ಮೂಡಿಸಿದವು. ವಾಟಿಗಾರು-ಹಿಲಿಕೆರೆ ಗಣಪತಿ ಮತ್ತು ದೇವಂಗಿ ಗಣಪತಿಗಳ ಸಂಗಮ ಇಡೀ ತಾಲೂಕಿನಲ್ಲಿ ಅತೀ ಹೆಚ್ಚು ಜನ ಸೇರುವ ಮೂಲಕ ಮಕ್ಕಳಿಂದ ಹಿಡಿದು ವಯೋವೃದ್ಧರಾದಿಯಾಗಿ ಸಾಕ್ಷಿಯಾದರು.
ದೇವಂಗಿಯಲ್ಲಿ 99ನೇ ವರ್ಷದ ಗಣಪತಿ ಉತ್ಸವ ಅತ್ಯಂತ ಸಂಭ್ರಮದಿಂದ ನಡೆದರೆ, ಹಿಲಿಕೆರೆಯಲ್ಲಿ 49ನೇ ವರ್ಷದ ಗಣಪತಿ ಉತ್ಸವ ನಡೆಯಿತು. ಎರಡು ಗಣಪತಿಗಳು ತಾಲೂಕಿನ ಪ್ರತಿಷ್ಠಿತ ಗಣಪತಿಗಳಾಗಿದ್ದು ತಮ್ಮ ಅಲಂಕಾರದ ಮೂಲ ಹಾಗೂ ಪಟಾಕಿ ಮೂಲಕ ಗಮನ ಸೆಳೆದವು.
ಬೆಂಕಿ ಕುಣಿತ, ಡಿ.ಜೆ. ಹಾಗೂ ನಾಸಿಕ್ ವಾದ್ಯ, ಸಿಡಿಮದ್ದು ಪ್ರದರ್ಶನದೊಂದಿಗೆ ಪುಷ್ಪಾಲಂಕೃತ, ವಿದ್ಯುದ್ದೀಪಾಲಂಕೃತ ಭವ್ಯ ಮಂಟಪದಲ್ಲಿ ರಾಜಬೀದಿ ಉತ್ಸವ ನಡೆಯಿತು. ಹಿಲಿಕೆರೆ ಗಣಪತಿಗೆ ಕೊಪ್ಪದ ತಾಜ್ ಇವೆಂಟ್ಸ್ ಸೌಂಡ್ಸ್ ನೀಡಿದ್ದು, ದೇವಂಗಿ ಗಣಪತಿಗೆ ತಪಸ್ವಿ ನೇತೃತ್ವದ ಎಸ್ ಸಿ ಎಸ್ ಸೌಂಡ್ಸ್ ಸೌಂಡ್ಸ್ ನೀಡಿದೆ. ಪೊಲೀಸ್ ಇಲಾಖೆ ಸಿಪಿಐ ಇಮ್ರಾನ್ ಬೇಗ್ ನೇತೃತ್ವದಲ್ಲಿ ಭದ್ರತೆ ಒದಗಿಸಲಾಗಿತ್ತು.

ಮುಂದಿನ ವರ್ಷ ದೇವಂಗಿ 100ನೇ ವರ್ಷ ಹಾಗೂ ಹಿಲಿಕೆರೆ 50ನೇ ವರ್ಷದ ಗಣೇಶೋತ್ಸವ ಆಚರಣೆ ಮಾಡಲಿವೆ.

ತೀರ್ಥಹಳ್ಳಿ ತಾಲೂಕು ಸೇರಿ ಮಲೆನಾಡಿನ ಎಲ್ಲಾ ನ್ಯೂಸ್, ವಿಡಿಯೋ ಪಡೆಯಲು nammurexpress ಇನ್ಸ್ಟಾಗ್ರಾಮ್ ಕ್ಲಿಕ್ ಮಾಡಿ ಜಾಯಿನ್ ಆಗಿರಿ..!

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.