ಶಾಸಕ ಟಿ.ಡಿ ರಾಜೇಗೌಡ ಮೇಲೆ ಎಫ್‌ಐಆರ್‌ಗೆ ಆದೇಶ
* ಶಾಸಕ,ಪತ್ನಿ,ಮಗನ ಮೇಲೆ ಎಫ್‌ಐಆರ್ ದಾಖಲಿಸಲು ಕೋರ್ಟ್ ಆದೇಶ
* ದಿನೇಶ್ ಹೊಸೂರು ಲೋಕಾಯುಕ್ತಕ್ಕೆ ನೀಡಿದ ದೂರಿನನ್ವಯ ಎಫ್‌ಐಆರ್
NAMMMUR EXPRESS NEWS
ಶೃಂಗೇರಿ: ಪದೇ ಪದೇ ಸಂಕಷ್ಟಕ್ಕೆ ಸಿಲುಕುತ್ತಿರುವ ಶೃಂಗೇರಿ ಕ್ಷೇತ್ರದ ಶಾಸಕ ಟಿ.ಡಿ ರಾಜೇಗೌಡರಿಗೆ ಈಗ ಮತ್ತೊಂದು ಸಂಕಷ್ಟ ಎದುರಾಗಿದೆ. ಅಕ್ರಮ ಆಸ್ತಿಗಳಿಕೆ ಆರೋಪದಡಿಯಲ್ಲಿ ಟಿ.ಡಿ ರಾಜೇಗೌಡ ಸೇರಿದಂತೆ ಪತ್ನಿ,ಮಗನ ಮೇಲೆ ಎಫ್ಐಆರ್ ದಾಖಲಿಸುವಂತೆ ಹಾಗೂ ನವೆಂಬರ್ 17 ರೊಳಗೆ ವರದಿ ಸಲ್ಲಿಸುವಂತೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಆದೇಶಿಸಿದೆ.
2022 ರಲ್ಲಿ ದಿನೇಶ್ ಹೊಸೂರು ಲೋಕಾಯುಕ್ತಕ್ಕೆ ಶಾಸಕರ ಅಕ್ರಮ ಆಸ್ತಿಗಳಿಕೆ ಆರೋಪ ಮಾಡಿ ದೂರು ಸಲ್ಲಿಸಿದ್ದರು. ಆದರೆ ಯಾವುದೇ ತನಿಖೆ ಮಾಡದೇ ಲೋಕಾಯುಕ್ತ ಕ್ಲೀನ್ ಚಿಟ್ ನೀಡಿತ್ತು,ಇದನ್ನು ಪಶ್ನಿಸಿ ದಿನೇಶ್ ಹೊಸೂರು ಜನಪ್ರತಿನಿಧಿಗಳ ನ್ಯಾಯಾಲಯದಲ್ಲಿ ದೂರು ದಾಖಲಿಸಿದ್ದರು, ದಾಖಲೆಗಳನ್ನು ಪರಿಶೀಲಿಸದ ನ್ಯಾಯಾಲಯವು, ಪ್ರಕರಣದ ಈ ದೂರಿನನ್ವಯ ಎಫ್‌ಐಆರ್ ದಾಖಲಿ ತನಿಖೆ ಮಾಡುವಂತೆ ಕೋರ್ಟ್ ಆದೇಶಿಸಿದೆ. ಕಳೆದ ವಾರವಷ್ಟೇ ಮಾಜಿ ಶಾಸಕ ಡಿ ಎನ್ ಜೀವರಾಜ್ ಸಲ್ಲಿಸಿದ್ದ ಚುನಾವಣಾ ಅರ್ಜಿಯನ್ನು ವಜಾಗೊಳಿಸುವಂತೆ ಟಿ ಡಿ ರಾಜೇಗೌಡ ಹೈಕೋರ್ಟ್‌ನಲ್ಲಿ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿತ್ತು. ಇದು ಶಾಸಕ ರಾಜೇಗೌಡಗೆ ತೀವ್ರ ಹಿನ್ನಡೆಯಾಗಿತ್ತು ಈಗ ಕೋರ್ಟ್‌ನ ಈ ಆದೇಶ ಶಾಸಕರಿಗೆ ಮತ್ತೊಂದು ಸಂಕಷ್ಟವನ್ನು ತಂದಿದೆ.
