ಜೂನಿಯರ್ ಕಾಲೇಜು ಬಳಿ ಚರಂಡಿಯಲ್ಲಿ ಕಸವೋ ಕಸ!
– ವಿದ್ಯಾರ್ಥಿಗಳಿಗೆ ಸ್ವಚ್ಛತೆ ಇಲ್ಲದೇ ತೊಂದರೆ: ತೀರ್ಥಹಳ್ಳಿ ಪಟ್ಟಣದ ಹಲವು ಕಡೆ ಸ್ವಚ್ಛತೆ ಮಾಯ
– ಹೊಸನಗರ: 11 ಅಡಿ ಕಾಳಿಂಗ ಹಿಡಿದ ಶೌರ್ಯ ತಂಡ: ಸ್ಥಳೀಯರ ಮೆಚ್ಚುಗೆ
NAMMUR EXPRESS NEWS
ತೀರ್ಥಹಳ್ಳಿ: ಜೂನಿಯರ್ ಕಾಲೇಜು ಸಮೀಪದ ಒಳಚರಂಡಿಯಲ್ಲಿ ಕಸ ತುಂಬಿಕೊಂಡು ವಿದ್ಯಾರ್ಥಿಗಳಿಗೆ ಸಾಕಷ್ಟು ತೊಂದರೆ ಆಗುತ್ತಿದೆ. ಪದೇ ಪದೇ ಇಲ್ಲಿ ಈ ಸಮಸ್ಯೆ ಎದುರಾಗುತ್ತಿದೆ. ಈಗ ಪಟ್ಟಣ ಪಂಚಾಯಿತಿಯವರು ಸ್ವಚ್ಛತೆ ಮಾಡಿದ್ದಾರೆ ಆದರೆ ಚರಂಡಿಯನ್ನ ಸ್ವಚ್ಛ ಮಾಡಿರುವ ಕಸ ಅಲ್ಲೇ ಇದೆ.
ಜೂನಿಯರ್ ಕಾಲೇಜಿನಲ್ಲಿ 2000ಕ್ಕೂ ಹೆಚ್ಚು ವಿದ್ಯಾರ್ಥಿಗಳು ಇದ್ದಾರೆ. ವಿದ್ಯಾರ್ಥಿಗಳಿಗೆ ಇದರಿಂದ ತೊಂದರೆ ಎದುರಾಗಿದೆ ಆದ್ದರಿಂದ ಪಟ್ಟಣ ಪಂಚಾಯಿತಿಯವರು ಇದರ ಕಡೆ ಗಮನ ಹರಿಸಬೇಕು ಎಂಬ ಅಗ್ರಹ ವ್ಯಕ್ತವಾಗಿದೆ. ತೀರ್ಥಹಳ್ಳಿಯ ಬಹುತೇಕ ಭಾಗದಲ್ಲಿ ಕಸದ ವಿಲೇವಾರಿ ಇಲ್ಲದೆ ತೊಂದರೆ ಆಗುತ್ತಿದೆ.. ಪಟ್ಟಣ ಪಂಚಾಯಿತಿಯವರು ಇದರ ಕಡೆ ಗಮನ ಹರಿಸಬೇಕು ಎಂದು ಸ್ಥಳೀಯರು ಆಕ್ರೋಶ ಹೊರ ಹಾಕಿದ್ದಾರೆ.
ಹೊಸನಗರ: 11 ಅಡಿ ಕಾಳಿಂಗ ಸರ್ಪ ಸೆರೆ
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಶೌರ್ಯ ತಂಡದ ಹಾಲಿಗೆ ನರೇಶ್ ಹಾಗೂ ಉರಗ ತಜ್ಞ ಚಂದ್ರು ಅವರ ಕಾರ್ಯಾಚರಣೆಯೊಂದಿಗೆ ಹೊಸನಗರ ತಾಲೂಕಿನ ಕಟ್ಟೆಕೊಪ್ಪ ಗ್ರಾಮದ ಹಾಲಿಗೆಯ ಮುನಿಯಮ್ಮ ಎಂಬುವರ ಮನೆಯಲ್ಲಿ ಸುಮಾರು 11 ಅಡಿ ಉದ್ದದ ಕಾಳಿಂಗ ಸರ್ಪವನ್ನು ಭಾನುವಾರ ರಾತ್ರಿ ಸೆರೆಹಿಡಿದು ಸುರಕ್ಷಿತ ಸ್ಥಳಕ್ಕೆ ಬಿಡಲಾಯಿತು.
