ನನ್ನನ್ನು ಕೆಣಕಿದರೆ ಬಿಡುವ ಮನುಷ್ಯನೇ ಅಲ್ಲ: ಕಿಮ್ಮನೆ ಗರಂ!
– ದೇವರ ವಿಷಯದಲ್ಲಿ ರಾಜಕೀಯ ಬೇಡ, ಜ್ಞಾನೇಂದ್ರ ಕ್ಷೇತ್ರಕ್ಕೆ ಏನು ಮಾಡಿದ್ದಾರೆ?
– ಜ್ಞಾನೇಂದ್ರ ಯಾವ ದೇವಸ್ಥಾನಕ್ಕೆ ಹಣ ಕೊಟ್ಟಿದ್ದಾರೆ?
NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ಕ್ಷೇತ್ರಕ್ಕೆ ಜ್ಞಾನೇಂದ್ರ ಅವರ ಕೊಡುಗೆ ಏನು ಇಲ್ಲ. ತೀರ್ಥಹಳ್ಳಿ ಶ್ರೀರಾಮೇಶ್ವರ ಎಳ್ಳಮಾವಾಸ್ಯೆ ಜಾತ್ರೆಗೆ ನನ್ನ ಸಂಪೂರ್ಣ ಬೆಂಬಲ ಮತ್ತು ಸಹಕಾರವಿದೆ ಎಂದು ಹೇಳಿರುವ ಮಾಜಿ ಸಚಿವರು ಕಿಮ್ಮನೆ ರತ್ನಾಕರ್, ದೇವರ ವಿಷಯದಲ್ಲಿ ರಾಜಕೀಯ ಬೇಡ ಎಂದು ಮನವಿ ಮಾಡಿದರು.
ಕಾಂಗ್ರೆಸ್ ಕಚೇರಿ ಗಾಂಧಿ ಭವನದಲ್ಲಿ ಡಿ.9ರಂದು ಕಿಮ್ಮನೆ ರತ್ನಾಕರ್ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ, ಶಾಸಕರಿಗೆ ಯಾವುದೇ ಕಲ್ಯಾಣ ಗುಣವಿಲ್ಲ, ಅವರು ಮಾಡಿದ ಯಾವುದಾದರೂ ಕಾರ್ಯ ಕಲ್ಯಾಣ ಗುಣವೆಂದು ಹೇಳಲು ಸಾಧ್ಯವೇ? . ನಾನು 10 ವರ್ಷ ಶಾಸಕನಾಗಿದ್ದಾಗ ಶ್ರೀರಾಮೇಶ್ವರ ದೇವಸ್ಥಾನ ಜೀರ್ಣೋದ್ಧಾರ ಹಾಗೂ ಜಾತ್ರೆಯ ಸಮಿತಿ ವಿಚಾರದಲ್ಲಿ ಹಾಗೂ ಸಂಚಾಲಕರ ವಿಚಾರದಲ್ಲಿ ಯಾವುದೇ ರಾಜಕೀಯ ಹಸ್ತಕ್ಷೇಪ ಮಾಡಿಲ್ಲ, ನನ್ನ ಅವಧಿಯಲ್ಲಿ ಶ್ರೀರಾಮೇಶ್ವರ ದೇವಸ್ಥಾನ ಜಾತ್ರಾ ಮಹೋತ್ಸವದ ಸಂಚಾಲಕರಾಗಿ ಸೊಪ್ಪುಗುಡ್ಡೆ ರಾಘವೇಂದ್ರ, ಅವರೇ ನೇಮಕ ಆಗಿದ್ದರು. ಆದರೆ ಜ್ಞಾನೇಂದ್ರ ಅವರು ಮಾತ್ರ ಜಾತ್ರಾ ಸಮಿತಿಯಲ್ಲಿ ನಮ್ಮವರೇ ಇರಬೇಕು ನಮ್ಮವರೇ ಜಾತ್ರೆಯನ್ನು ನಡೆಸಬೇಕು ಎಂದು ಪಕ್ಷದ ವಿಚಾರ ಮಾತಾಡಿ ಕಲ್ಯಾಣ ಗುಣಗಳನ್ನು ತೋರಿಸುತ್ತಿದ್ದಾರೆ. ದೇವರ ವಿಷದಲ್ಲೂ ತಾರತಮ್ಯ ಮಾಡಿ ರಾಜಕೀಯ ಮಾಡುವುದು ಸರಿಯಲ್ಲ ಇವರು ನಮ್ಮ ತೀರ್ಥಹಳ್ಳಿಯ ದೌರ್ಭಾಗ್ಯನೆ ಸರಿ. ಇವರ ಹತ್ತು ಹಲವು ಕಲ್ಯಾಣ ಗುಣಗಳ ಸರಿಪಡಿಸಿಕೊಂಡು ಹೋದರೆ ಕ್ಷೇತ್ರದ ಗೌರವ ಘನತೆ ಉಳಿಯುತ್ತದೆ ಎಂದರು.
ನನ್ನನ್ನು ಕೆಣಕಿದರೆ ನಾನು ಬಿಡುವ ಮನುಷ್ಯನೇ ಅಲ್ಲ!
ಜ್ಞಾನೇಂದ್ರ ಅವರು , ಹಿಂದೂ ಹಿಂದೂ ಎಂದು ಹೇಳಿಕೊಳ್ಳುತ್ತಾರೆ. ಆದರೆ ಯಾವ್ಯಾವ ದೇವಸ್ಥಾನಕ್ಕೆ ಎಷ್ಟೆಷ್ಟು ಹಣ ಕೊಟ್ಟಿದ್ದಾರೆ, ಪಟ್ಟಿ ಕೊಡಲಿ ಮತ್ತು ರಾಮೇಶ್ವರ ದೇವಸ್ಥಾನಕ್ಕೆ ಎಷ್ಟು ಹಣ ಕೊಟ್ಟಿದ್ದಾರೆ ತಿಳಿಸಲಿ, “ರಾಮೇಶ್ವರ ದೇವಸ್ಥಾನಕ್ಕೆ ನಾನು ಒಂದು ಲಕ್ಷ ಹಣ ಚೆಕ್ ಮುಖಾಂತರ ಕೊಟ್ಟಿದ್ದೇನೆ, ಅವರ ಹತ್ತು ಪಟ್ಟು ನಾನು ಜಾಸ್ತಿ ನೀಡಿದ್ದೇನೆ ಮತ್ತು ಹತ್ತು ಹಲವು ದೇವಸ್ಥಾನಕ್ಕೆ ದೇಣಿಗೆ ರೂಪದಲ್ಲಿ ಹಣವನ್ನು ನೀಡಿದ್ದೇನೆ ನಾನು ಕೂಡ ಒಂದು ಹಿಂದೂನೇ ಅವರು ನೀಡಿದ ದೇಣಿಗೆ ಎಷ್ಟು?” ಎಂದು ಪ್ರಶ್ನಿಸಿದರು. ಸುಖ ಸುಮ್ಮನೆ ನನ್ನನ್ನು ಕೆಣಕಿದರೆ ನಾನು ಬಿಡುವ ಮನುಷ್ಯನೇ ಅಲ್ಲ ಅದಕ್ಕೆ ತಕ್ಕ ಉತ್ತರ ಕೊಟ್ಟೆ ಕೊಡುತ್ತೇನೆ ನಾನು ಹೋರಾಟ ಮಾಡಿಕೊಂಡು ‘ಸಾರ್ವಜನಿಕ ಪರ ಇರುವ ವ್ಯಕ್ತಿ ಹೋರಾಟವೇ ನನ್ನ ಜೀವನ’ ಎಂದರು. ಆರಗ ಜ್ಞಾನೇಂದ್ರ ಅವರಿಗೆ ಬಿಜೆಪಿ ಪಕ್ಷದಲ್ಲಿ ಮಾತ್ರ ಹೆಗ್ಗಳಿಕೆ ಬಿಟ್ಟರೆ ರಾಜ್ಯಮಟ್ಟದಲ್ಲಿ ಯಾರು ಇವರ ಬಗ್ಗೆ ಒಳ್ಳೆಯ ಅಭಿಪ್ರಾಯವಿಲ್ಲ ಎಂದು ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಪಟ್ಟಣ ಪಂಚಾಯಿತಿ ಅಧ್ಯಕ್ಷ ರಹಮತುಲ್ಲಾ ಅಸಾದಿ, ಉಪಾಧ್ಯಕ್ಷ ಗೀತಾ ರಮೇಶ್, ಕೆಸ್ತೂರು ಮಂಜುನಾಥ್,ಯುವ ಕಾಂಗ್ರೆಸ್ ಅಧ್ಯಕ್ಷ ಅಮರನಾಥ ಶೆಟ್ಟಿ, ಪಟ್ಟಣ ಪಂಚಾಯಿತಿ ಸದಸ್ಯ ಬಿ.ಗಣಪತಿ, ರತ್ನಾಕರ್ ಶೆಟ್ಟಿ, ವಿಲಿಯಂ, ಹಾಗೂ ಪ್ರಮುಖರು ಉಪಸ್ಥಿತಿತದ್ದರು.
