Categories
ತೀರ್ಥಹಳ್ಳಿ

ತೀರ್ಥಹಳ್ಳಿ ಹೊಸ ಸೇತುವೆ ಮೇಲೆ ಲಾಂಗು ಮಚ್ಚು ಹಿಡಿದು ರೌಡಿಸಂ!?

– ಮಧ್ಯರಾತ್ರಿ ರೌಡಿಸಂಗೆ ಬೆದರಿದ ಪ್ರಯಾಣಿಕರು
– ತೀರ್ಥಹಳ್ಳಿಯಲ್ಲಿ ತಡ ರಾತ್ರಿ ನಡೆದ ಘಟನೆ

NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ಹೊಸ ಸೇತುವೆ ಮೇಲೆ ಮಧ್ಯರಾತ್ರಿ ಯುವಕರ ಗುಂಪು ಒಂದು ದಾಂದಲೆ ಮಾಡಿರುವ ಘಟನೆ ಇದೀಗ ವರದಿಯಾಗಿದೆ. ತೀರ್ಥಹಳ್ಳಿ ಪಟ್ಟಣದಲ್ಲಿ ಬಾಳೇಬೈಲಿನಲ್ಲಿ ನೂತನವಾಗಿ ನಿರ್ಮಾಣವಾಗಿರುವ ಹೊಸ ಸೇತುವೆಯ ಮೇಲೆ ಕಳೆದ ಶನಿವಾರ ಅಡ್ಡಡ್ಡ ಮಲಗಿದ ಯುವಕರು ಲಾಂಗು ಮಚ್ಚು ಹಿಡಿದುಕೊಂಡು ಭಯ ಭೀತಿ ಸೃಷ್ಟಿಸುವ ವಾತಾವರಣ ನಿರ್ಮಿಸಿದ್ದು ಓರ್ವನ ಮೇಲೆ ದಾಳಿ ಕೂಡ ಮಾಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಓಮ್ನಿ ಕಾರಿನಲ್ಲಿ ಬಂದ ಗುಂಪು ಈ ಕೃತ್ಯ ಎಸಗಿದೆ. ಮಧ್ಯರಾತ್ರಿಯ ವೇಳೆ ಭಯದ ರೀತಿಯ ವಾತಾವರಣ ಸೃಷ್ಟಿ ಮಾಡಿದೆ.ಜೊತೆಗೆ ಕೆಲವು ಸ್ಥಳೀಯರ ಮೇಲೂ ಕೂಡ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ. ಈ ಘಟನೆಗೆ ಕಾರಣಕರ್ತರಾದವರು ಯಾರು? ಏನು? ಎತ್ತ ಎನ್ನುವ ಬಗ್ಗೆ ಇನ್ನು ಮಾಹಿತಿ ಲಭ್ಯವಾಗಿಲ್ಲ. ಪೊಲೀಸರು ಈ ಬಗ್ಗೆ ತನಿಖೆ ನಡೆಸಿ ತೀರ್ಥಹಳ್ಳಿ ಹೊಸ ಸೇತುವೆಯ ಮೇಲೆ ಆಗುತ್ತಿರುವಂತಹ ಇಂತಹ ಘಟನೆ ತಡೆಯಬೇಕು ಎಂದು ಸಾರ್ವಜನಿಕರಿಂದ ಆಗ್ರಹ ವ್ಯಕ್ತವಾಗಿದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.