ತೀರ್ಥಹಳ್ಳಿ ಪಟ್ಟಣದ ಚರಂಡಿ ಸರಿಯಿಲ್ಲ ಮಾರ್ರೆ!
– ಹಲವೆಡೆ ಮೋರಿ ತುಂಡಾಗಿ ಕೊಳಕು ಕೊಳಕು
– ಪಟ್ಟಣದ ಅಂದ ಹಾಳಾಗೋದು ಬೇಡ..!
NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ಪಟ್ಟಣದ ಸುತ್ತಮುತ್ತಲಿನ ಡ್ರೈನೇಜ್ (ನೀರಿನ ಮೋರಿ) ತುಂಡಾದ ಸ್ಥಿತಿ ಯಲ್ಲಿ ಜನಸಾಮಾನ್ಯರಿಗೆ ಪಾದಚಾರಿಗಳಿಗೆ, ವಾಹನ ಚಾಲಕರಿಗೆ ಹಾಗೂ ಮುಖ್ಯವಾಗಿ ಶಾಲಾ ಮಕ್ಕಳಿಗೆ ಅಪಾಯ ತಂದೊಡ್ಡುವ ರೂಪದಲ್ಲಿ ಹಾಳಾಗಿ ಹೋಗಿದೆ. ತೀರ್ಥಹಳ್ಳಿಯ ಜನವಾಸಿ ಪ್ರದೇಶಗಳಾದ ಕೊಳಿಕಾಳುಗುಡ್ದ, ಸೊಪ್ಪುಗುಡ್ದೆ, ವಿನಾಯಕಚಿತ್ರ ಮಂದಿರ ರಸ್ತೆ ಹೀಗೆ ನಗರದ ಸರಿ ಸುಮಾರು ಕಡೆಗಳಲ್ಲಿ ಇಂತಹ ಹಲವು ಡ್ರೈನೇಜ್ ನ ಮುಚ್ಚಿಗೆ ಕುಸಿದಿರುವ , ಹಾಳಾಗಿರುವ, ಅರ್ಧಂಬರ್ಧ ಕಾಮಗಾರಿ ಪೂರ್ಣಗೊಳ್ಳದೆ ಜನ ಸಾಮಾನ್ಯರಿಗೆ ಶಾಲಾ ಮಕ್ಕಳಿಗೆ, ವಾಹನ ಚಾಲಕರಿಗೆ ತಲೆ ನೋವಾಗಿದೆ.
ಪ್ರತಿ ವರ್ಷ ಮಳೆಗಾಲದಲ್ಲಿ ಆಗದಿರುವ ಕೆಲವು ಸರ್ಕಾರಿ ಕೆಲಸಗಳು ಮಳೆಗಾಲ ಮುಗಿದ ಮೇಲಾದರೂ ಜನರು ಆಗಬಹುದು ಎಂದುಕೊಂಡರೆ ಈಗ ಮಳೆಗಾಲ ಕಳೆದು 4-5 ತಿಂಗಳು ಕಳೆದರೂ ಸಂಬಂಧಪಟ್ಟವರ ಇಲಾಖೆ, ಜನ ನಾಯಕರು, ಸರ್ಕಾರದ ಸಿಬ್ಬಂದಿ ತಲೆ ಕೆಡಿಸಿಕೊಳ್ಳುತ್ತಿಲ್ಲ. ಜನಸಾಮಾನ್ಯರು ಛೀ ಮಾರಿ ಹಾಕುವ ಸ್ಥಿತಿ ಬಂದಿದ್ದರೂ ಏನೂ ಕೆಲಸ ಆಗದೆ ಉಳಿದಿದೆ. ಇನ್ನಾದರೂ ಜನರಿಗೆ ಯಮ ಸ್ವರೂಪ ತೋರುವ ಮೊದಲೇ ಪಟ್ಟಣ ಪಂಚಾಯತಿ ಸಿಬ್ಬಂದಿ ಹಾಗೂ ಜನ ನಾಯಕರು, ಸಂಬಂಧಪಟ್ಟವರು ಬೇಗ ಎಚ್ಚೆತ್ತುಕೊಳ್ಳಿ ಎಂಬುದು ನಮ್ಮೂರ್ ಎಕ್ಸ್ಪ್ರೆಸ್ ಸಾಮಾಜಿಕ ಕಾಳಜಿ.