ಟಾಪ್ 3 ನ್ಯೂಸ್ ತೀರ್ಥಹಳ್ಳಿ
ಅಡಿಕೆ ಔಷಧಿಗೆ ವಿಷ ಬೆರೆಸಿದ ಕಿಡಿಗೇಡಿಗಳು..!!
– ತೀರ್ಥಹಳ್ಳಿ ತಾಲೂಕಿನ ಹೆಗ್ಗೋಡಿನಲ್ಲಿ 300ಕ್ಕೂ ಹೆಚ್ಚು ಅಡಿಕೆ ಮರಗಳು ಸುಟ್ಟು ಹಾನಿ
ತೀರ್ಥಹಳ್ಳಿಯ ದೇಮ್ಲಾಪುರ ಗ್ರಾಪಂನಲ್ಲಿ ಆವಿಶ್ವಾಸ!
– ದ್ರಾಕ್ಷಾಯಿಣಿ ರಮೇಶ್ ಕೇಸಿನಮನೆ ನೂತನ ಅಧ್ಯಕ್ಷರಾಗಿ ಆಯ್ಕೆ
ತೀರ್ಥಹಳ್ಳಿ ತಾಲೂಕಲ್ಲಿ ಭಾರೀ ಮಳೆ!
– ಎಲ್ಲೆಡೆ ಮಳೆಯಿಂದ ತೋಟಗಳು ಹಾನಿ: ರೈತರಿಗೆ ಆತಂಕ
NAMMUR EXPRESS NEWS
ತೀರ್ಥಹಳ್ಳಿ : ಅಡಿಕೆ ಮರಕ್ಕೆ ಔಷಧಿ ಹೊಡೆಯಲು ಇಟ್ಟಿದ್ದ ಡ್ರಮ್ಮಿಗೆ ಕಿಡಿಗೇಡಿಗಳು ಸುಣ್ಣ ಮತ್ತು ರಾಳಕ್ಕೆ ಪಾಯಿಸನ್ ಕೀಟನಾಶಕವನ್ನು ಔಷಧಕ್ಕೆ ಮಿಶ್ರಣ ಮಾಡಿರುವುದರಿಂದ ಗೊತ್ತಿಲ್ಲದೆ ಔಷಧಿಯನ್ನು ಸಿಂಪಡಣೆ ಮಾಡಿರುವುದರಿಂದ 300ಕ್ಕೂ ಹೆಚ್ಚು ಫಸಲು ಬರುವ ಅಡಿಕೆ ಮರಗಳು ಸುಟ್ಟು ಹೋದ ಘಟನೆ ತೀರ್ಥಹಳ್ಳಿ ತಾಲೂಕಿನ ಹೆಗ್ಗೋಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗುಡ್ಡೇ ಕೊಪ್ಪ ಗ್ರಾಮದಲ್ಲಿ ನಡೆದಿದೆ. ಗುಡ್ಡೇಕೊಪ್ಪ ಗ್ರಾಮದ ಶಂಕ್ರಪ್ಪ ಗೌಡ ಎಂಬುವವರ ತೋಟದಲ್ಲಿ ಔಷಧಿ ಹೊಡೆಯಲು ಸುಣ್ಣ ಮತ್ತು ರಾಳವನ್ನು ಮಿಶ್ರಿತ ಮಾಡಿ ಇಡಲಾಗಿತ್ತು. ಈ ಮಿಶ್ರಿತ ಡ್ರಮ್ ಗೆ ಕಿಡಿಗೇಡಿಗಳು ವಿಷವನ್ನು ಬೆರೆಸಿರುವುದರಿಂದ ಗೊತ್ತಾಗದೆ ಕೊನೆಗಾರರು ಔಷಧಿಯನ್ನು ಹೊಡೆದಿದ್ದಾರೆ. ಔಷಧಿ ಹೊಡೆದು ಎರಡು ಮೂರು ದಿನಕ್ಕೆ ಅಡಿಕೆ ಗಿಡಗಳು ಸುಟ್ಟು ಹೋಗುತ್ತಿರುವುದನ್ನು ಗಮನಿಸಿದ ಮನೆಯ ಮಾಲೀಕರು ತೋಟದ ಔಷಧಿಯವರಿಗೆ ಮಾಹಿತಿ ನೀಡಿದ್ದಾರೆ, ಈ ಬಗ್ಗೆ ಪರಿಶೀಲಿಸಿದಾಗ ಸುಣ್ಣ ಮತ್ತು ರಾಳ ಮಿಶ್ರಿತ ಡ್ರಮ್ ಗೆ ಕಿಡಿಗೇಡಿಗಳು ಬೇರೆ ಪಾಯಿಸನ್ ವಸ್ತು ಸೇರ್ಪಡೆಯಾಗಿರುವುದು ತಿಳಿದು ಬಂದಿದೆ ಈ ಬಗ್ಗೆ ಆಗುಂಬೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಹಿಂದೆ ಕೂಡ ಈ ಭಾಗದಲ್ಲಿ ಇಂತಹ ಘಟನೆಗಳು ನಡೆದಿತ್ತು ಎಂಬ ಮಾಹಿತಿ ಲಭ್ಯವಾಗಿದೆ. ಏನೇ ಆಗಲಿ ಅಡಿಕೆ ಪಸಲು ಬರುವ ಮರಗಳು ಹಾನಿಯಾಗಿರುವುದು ಇದೀಗ ರೈತರ ಬದುಕಿಗೆ ಕಷ್ಟವಾಗಿದೆ. ಸ್ವಾರ್ಥ ಅಥವಾ ಪ್ರತಿಷ್ಠೆ, ಹೊಟ್ಟೆ ಕಿಚ್ಚು ಏನೇ ಇರಲಿ ಇಂತಹ ಘಟನೆಗಳು ನಡೆಯಬಾರದು ಎಂದು ಸ್ಥಳೀಯರು ಹೇಳಿದ್ದಾರೆ.
ತೀರ್ಥಹಳ್ಳಿಯ ದೇಮ್ಲಾಪುರ ಗ್ರಾಪಂನಲ್ಲಿ ಆವಿಶ್ವಾಸ!
ತೀರ್ಥಹಳ್ಳಿ :ತೀರ್ಥಹಳ್ಳಿ. ತಾಲೂಕಿನ ದೇಮ್ಲಾಪುರ ಗ್ರಾಮ ಪಂಚಾಯತಿಯಲ್ಲಿ ಜುಲೈ 18ರಂದು ಅಧ್ಯಕ್ಷರನ್ನು ಆವಿಶ್ವಾಸ ನಿರ್ಣಯದಿಂದ ಕೆಳಗಿಳಿಸಲಾಗಿದೆ.
ಹಿರೇಕಲ್ಲಹಳ್ಳಿ ಲೋಕಪ್ಪ ಪಂಚಾಯಿತಿಯ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಅಧಿಕಾರವನ್ನು ಸ್ವೀಕರಿಸಿದ ದಿನದಿಂದಲೂ ಪಕ್ಷಪಾತ, ಉಳಿದ ಸದಸ್ಯರು ಗಳಿಗೆ ಅಗೌರದಿಂದ ನಡೆದುಕೊಳ್ಳುವುದು ಸರ್ವಾಧಿಕಾರಿ ಧೋರಣೆ, ಸದಸ್ಯರುಗಳ ಮೇಲೆ ದಬ್ಬಾಳಿಕೆಯಿಂದ ನಡೆದುಕೊಳ್ಳುವುದು, ಹಾಗೂ ಪಂಚಾಯತ್ ರಾಜ್ ವ್ಯವಸ್ಥೆಗೆ ಗೌರವ ನೀಡದೆ ಇರುವುದನ್ನು ಮನಗಂಡು ಈ ಪ್ರಕ್ರಿಯೆಯಿಂದ ಬೇಸತ್ತ ಉಳಿದ ಆರು ಜನ ಸದಸ್ಯರುಗಳು ಸಹಿ ಹಾಕಿ, ಶಿವಮೊಗ್ಗ ಉಪವಿಭಾಗಾಧಿಕಾರಿಗಳಿಗೆ ಪತ್ರ ಬರೆದು ಇವರ ಆಡಳಿತದಿಂದ ಗ್ರಾಮದ ಅಭಿವೃದ್ಧಿಯು ಹೊಂದುವುದಿಲ್ಲ ಹಾಗೂ ಸಾರ್ವಜನಿಕರಿಗೆ ಕಿರಿಕಿರಿ ಆಗಬಾರದೆಂದು ಲೋಕಪ್ಪ ಅವರನ್ನು ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಬೇಕೆಂದು ಮನವಿ ಮಾಡಿಕೊಂಡಿದ್ದರು. ಲೋಕಪ್ಪ ಅವರಿಗೆ ಗ್ರಾಮ ಪಂಚಾಯಿತಿಯ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಡಿ ಎಂದು ಪತ್ರ ಕಳಿಸಿದರೂ ಸಹ ಅವರು ಬಾರದ ಕಾರಣ ಇನ್ನೋರ್ವ ಸದಸ್ಯರಾದ ದ್ರಾಕ್ಷಾಯಿಣಿ ರಮೇಶ್ ಕೇಸಿನಮನೆ ಅವರು ಅವಿರೋಧ ಆಯ್ಕೆಯಿಂದ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ತೀರ್ಥಹಳ್ಳಿ ತಾಲೂಕಲ್ಲಿ ಭಾರೀ ಮಳೆ!
– ಎಲ್ಲೆಡೆ ಮಳೆಯಿಂದ ತೋಟಗಳು ಹಾನಿ: ರೈತರಿಗೆ ಆತಂಕ
ತೀರ್ಥಹಳ್ಳಿ ತಾಲೂಕಿನಲ್ಲಿ ಭಾರೀ ಮಳೆ ಆಗುತ್ತಿದ್ದು ಭಾರೀ ಆತಂಕ ಸೃಷ್ಟಿ ಆಗಿದೆ. ರೈತರು ಅಡಿಕೆ ಫಸಲು ಕಡಿಮೆ ಆಗುವ ಭೀತಿ ಎದುರಾಗಿದೆ. ಈಗಾಗಲೇ 5-6 ಬಾರಿ ಔಷಧಿ ಹೊಡೆದಿದ್ದಾರೆ. ಆದ್ರೂ ಮಳೆ ಹೆಚ್ಚಾಗಿರುವುದರಿಂದ ಕೊಳೆ ಭೀತಿ ಎದುರಾಗಿದೆ.
