Categories
ತೀರ್ಥಹಳ್ಳಿ

ತೀರ್ಥಹಳ್ಳಿ ಐಕಾನ್ ಬಿಲ್ಡಿಂಗ್: ಜ್ಞಾನೇಂದ್ರ ಅವರೇ ಫೋಕಸ್!

ತೀರ್ಥಹಳ್ಳಿ ಐಕಾನ್ ಬಿಲ್ಡಿಂಗ್: ಜ್ಞಾನೇಂದ್ರ ಅವರೇ ಫೋಕಸ್!
– ಜ್ಞಾನೇಂದ್ರ 5 ಬಾರಿ ಗೆದ್ದು ಏನು ಮಾಡಿದ ಅಂತ ಅಭಿವೃದ್ಧಿ ಹೇಳುತ್ತೆ..!
– ರಾಜಕೀಯ ಮಾಡಲ್ಲ, ಎಲ್ಲರೂ ಒಟ್ಟಾಗಿ ಕೆಲಸ ಮಾಡೋಣ

ತೀರ್ಥಹಳ್ಳಿ: 13.5 ಕೋಟಿ ವೆಚ್ಚದಲ್ಲಿ ತೀರ್ಥಹಳ್ಳಿ ತಾಲೂಕು ಪಂಚಾಯತ್ ಕಟ್ಟಡ ಸೋಮವಾರ ಉದ್ಘಾಟನೆಗೊಂಡಿದ್ದು,
ಶಾಸಕ ಆರಗ ಜ್ಞಾನೇಂದ್ರ ಇಡೀ ಕಾರ್ಯಕ್ರಮದ ಫೋಕಸ್ ಆದರು. ತಮ್ಮ ಹಠ ಬಿಡದ ಛಲದಿಂದ ಎಲ್ಲಾ ಇಲಾಖೆ, ಸಚಿವರ ಸಹಾಯ ಪಡೆದು ಈ ಕಟ್ಟಡ ತೀರ್ಥಹಳ್ಳಿಯ ಐಕಾನಿಕ್ ಕಟ್ಟಡವಾಗಿ ಮಾಡಿದ್ದಾರೆ. ಈ ಕಟ್ಟಡ ಉದ್ಘಾಟನೆ ವೇಳೆ ಸಚಿವ ಮಧು ಬಂಗಾರಪ್ಪ, ಸಂಸದ ರಾಘವೇಂದ್ರ, ಎಂಎಡಿಬಿ ಅಧ್ಯಕ್ಷರಾದ ಮಂಜುನಾಥ ಗೌಡ, ಎಂಎಲ್ಸಿ ರುದ್ರೇಗೌಡ, ಮಾಜಿ ಶಾಸಕ ಕಡಿದಾಳ್ ದಿವಾಕರ್, ಅಧಿಕಾರಿಗಳಾದ ಇಒ ಶೈಲಾ, ಪ್ರಮುಖರಾದ ಗಣೇಶ್, ವಿಜಯಕುಮಾರ್ ಇತರರು ಇದ್ದರು.

ಮಾಜಿ ಗೃಹ ಸಚಿವ, ಶಾಸಕ ಆರಗ ಜ್ಞಾನೇಂದ್ರ ಮಾತನಾಡಿ, ಅಂದು ತಾಲೂಕು ಪಂಚಾಯತ್ ಕಟ್ಟಡ ಕಳಚಿಬಿತ್ತು. ಆಗ ನನಗೆ ನೋವಾಯಿತು. ಅಂದು ಗುಜ್ಜುಕೊಟ್ಟು ನಿಲ್ಲಿಸಿದ್ದ ಫೋಟೋ ಅಂದು ಸಿಎಂ ಯಡಿಯೂರಪ್ಪ ಅವರಿಗೆ ಕೊಟ್ಟೆ. ಹೊಸ ಕಟ್ಟಡ ಆಗಲೇಬೇಕು ಎಂದೂ ಪತ್ರ ಕೊಟ್ಟೆ. 3 ಕೋಟಿ ಕೊಟ್ಟರು. ಕೋವಿಡ್ ಬಂತು ಆಗ ಏನು ಮಾಡಲು ಆಗಲಿಲ್ಲ. ಬಳಿಕ 10.5 ಕೋಟಿ ಲೋಕೋಪಯೋಗಿ ಇಲಾಖೆಯಿಂದ ತಂದೆ ಇದು ನನ್ನ ಕನಸಿನ ಕಟ್ಟಡ ಮಾತ್ರ ಅಲ್ಲ, ತಾಲೂಕಿನ ಜನರ ಕನಸಿನ ಕಟ್ಟಡ ಎಂದರು.

ಬಿಜೆಪಿ ನಾಯಕ ದಿ.ಡಾ. ವಿ. ಎಸ್. ಆಚಾರ್ಯ ಕಟ್ಟಿಸಿದ್ದ ಉಡುಪಿ ಜಿಲ್ಲಾಧಿಕಾರಿ ಕಚೇರಿ ಕಟ್ಟಡ ಅಷ್ಟು ಚೆನ್ನಾಗಿತ್ತು. ನನಗೂ ಅಂತಹ ಕಟ್ಟಡ ಕಟ್ಟಬೇಕು ಎಂಬ ಅಸೆ ಇತ್ತು. ಇಂಜಿನಿಯರ್ ಜತೆ ಚರ್ಚೆ ಮಾಡಿ ಇಂತಹ ಪ್ಲಾನ್ ಮಾಡಿದೆವು. ಈ ಭವ್ಯ ಕಟ್ಟಡ ತಲೆಯೆತ್ತಿದೆ. ಈಗ ಎಲ್ಲರೂ ಲಿಫ್ಟ್ ಬಳಕೆ ಮಾಡಬೇಡಿ. ಎಲ್ಲಾ ಮಹಡಿಯಲ್ಲೂ ಶೌಚಾಲಯ ಇದೆ. ಅತ್ಯುತ್ತಮ ಕಟ್ಟಡ. ಎಲ್ಲಾ ಅಧಿಕಾರಿಗಳಿಗೂ ಧನ್ಯವಾದ ಅರ್ಪಿಸುತ್ತೇವೆ ಎಂದರು.

150 ಮಂದಿ ಸಿಬ್ಬಂದಿ ಸಂಭ್ರಮದಿಂದ ಕೆಲಸ ಮಾಡುತ್ತಿದ್ದಾರೆ. ಎಲ್ಲಾ ಮಾಜಿ ಶಾಸಕರಿಗೆ ಗೌರವಿಸುವ ಪ್ಲಾನ್ ಮಾಡಿದ್ದೆವು. ಕಿಮ್ಮನೆ ರತ್ನಾಕರ್ ಅವರು ಕೂಡ ಅನಿವಾರ್ಯ ಕಾರಣದಿಂದ ಬರಲಾಗಲಿಲ್ಲ. ರಾಜಕಾರಣದಲ್ಲಿ ತೀವ್ರ ವಯುಕ್ತಿಕ ಇಳಿಯಬಾರದು. ಸಂತೋಷದಿಂದ ಒಬ್ಬರು ಒಬ್ಬರು ನೋಡಿಕೊಳ್ಳಬೇಕು. ನನ್ನಗೂ ಹಿಂದಿನದು ಯೋಚನೆ ಮಾಡಿದ್ರೆ ನಾಚಿಕೆ ಆಗುತ್ತೆ.ನಾವು ದಾಯಾದಿಗಳಲ್ಲ, ನಾವೆಲ್ಲರೂ ಸೇರಿ ಕೆಲಸ ಮಾಡಬೇಕು. ಎಲ್ಲಾ ಶಾಸಕರನ್ನು ನೆನೆಯೋಣ. ಕಿಮ್ಮನೆ ಕೂಡ ಒಳ್ಳೆ ಕೆಲಸ ಮಾಡಿದ್ದಾರೆ. ಇದು ಜನರ ಸೌಧ. ಜನಪ್ರತಿನಿಧಿಗಳ ಸೌಧ. ತಾಲೂಕು ಪಂಚಾಯತ್ ಮ್ಯಾನೇಜರ್ ರಾಘವೇಂದ್ರ ನೇತೃತ್ವದಲ್ಲಿ ಎಲ್ಲರನ್ನು ಸತ್ಕಾರ ಮಾಡಲಾಗಿದೆ. ಯಾರನಾದ್ರೂ ಬಿಟ್ಟಿದ್ರೆ ಕ್ಷಮೆ ಯಾಚಿಸುತ್ತೇನೆ.

ಜ್ಞಾನೇಂದ್ರ ಏನು ಮಾಡಿದ ಅಂತ ಅಭಿವೃದ್ಧಿ ಹೇಳುತ್ತೆ…

5 ಬಾರಿ ಶಾಸಕರಾದ ಜ್ಞಾನೇಂದ್ರ ಏನು ಮಾಡಿದ. ಸೇತುವೆ, ರಸ್ತೆ, ಕಾಲೇಜು, ರಂಗ ಮಂದಿರ, ಈ ಕಟ್ಟಡ ಸೇರಿ ನೂರಾರು ಯೋಜನೆ, ಪಟ್ಟಣಕ್ಕೆ 24/7 ನೀರು, ಎಲ್ಲಾ ಕಡೆ ಕೆಲಸ ಆಗುತ್ತಿದೆ. ಭೀಮೇಶ್ವರ ಸಂಗಮದಲ್ಲಿ ಸ್ವಲ್ಪ ತೊಂದರೆ ಆಯಿತು. ಅಲಗೇಶ್ವರದಲ್ಲಿ ನೀರು ಎತ್ತಲ್ಲ. ವಾರಾಹಿ ಬ್ಯಾಕ್ ವಾಟರ್ ಭಾಗದಲ್ಲಿ ನೀರು ಎತ್ತಲು ನಾವು ಪ್ಲಾನ್ ಮಾಡಿದ್ದೇವೆ. 10 ಕೋಟಿ ಹೆಚ್ಚಾಗುತ್ತದೆ. ಅನಾವಶ್ಯಕ ಗೊಂದಲ ಸೃಷ್ಟಿ ಮಾಡಬೇಡಿ. ಕುಡಿಯುವ ನೀರು ಕೊಡುವ ಯೋಜನೆ. ಸುಮ್ಮನೆ ಗೊಂದಲ ಬೇಡ, ಯಾರಿಗೂ ತೊಂದರೆ ಆಗಲ್ಲ. ರೈತರು ಸಹಾಯ ಮಾಡಬೇಕು. ನಿಮಗೆ ಕೆಟ್ಟದಾಗಲ್ಲ. ಎಂದರು.

ಜನ ನನ್ನ ಕೈಬಿಡಲಿಲ್ಲ…ಅವರ ಸೇವೆ ಮಾಡ್ತೇವೆ…

ಜನ ನನ್ನ ಕೈ ಬಿಡಲಿಲ್ಲ. ಇಬ್ಬರು ಸೇರಿ ಕೆಲಸ ಮಾಡಿದ್ರು ನನಗೆ ಆಶೀರ್ವಾದ ಮಾಡಿದರು. ಜನರ ಹಿತಕ್ಕಾಗಿ ಕೆಲಸ ಮಾಡುವೆ. 2 ವರ್ಷ ಮಂತ್ರಿ ಆದಾಗ ನಾನು ಮಂತ್ರಿ ಆಗಿದ್ದಾಗ ಇಲಾಖೆ ಕೆಲಸ ಮಾಡಿದ್ದೇವೆ. ಎಲ್ಲಾ ಇಲಾಖೆ ಬಳಸಿಕೊಂಡು ಅಭಿವೃದ್ಧಿ ಕೆಲಸ ಮಾಡಿದ್ದೇವೆ. ಪಕ್ಷ ಪಂಗಡ ಬಿಟ್ಟು ಅಭಿವೃದ್ಧಿ ಮಾಡಿದ್ದೇವೆ. ಗಡ್ಕರಿ ಅವರಿಗೆ ಆಗುಂಬೆ ಸುರಂಗ ಮಾರ್ಗ ಮನವಿ ಕೊಟ್ಟಿದ್ದೇವೆ. ಭಗವಂತ ಕೊಟ್ಟ ಅವಕಾಶ ತಾಲೂಕಿನ ಅಭಿವೃದ್ಧಿಗಾಗಿ. ನಿಮ್ಮೆಲರ ಹಾರೈಕೆ ಇರಲಿ. ತಾಲೂಕಿಗೆ ಇನ್ನಷ್ಟು ಶಕ್ತಿ ತುಂಬುವ ಕೆಲಸ ಆಗಲಿ ಎಂದು ಆಶಿಸಿದರು.

ಎಸಿಸಿ ಕೃಷ್ಣಮೂರ್ತಿ ಅವರಿಗೆ ಗೌರವ

ಕಟ್ಟಡವನ್ನು ಖ್ಯಾತ ಗುತ್ತಿಗೆದಾರರಾದ ಎಸಿಸಿ ಕೃಷ್ಣಮೂರ್ತಿ ಮಾಡಿದ್ದು ಅವರಿಗೆ ವೇದಿಕೆಯಲ್ಲಿ ಗಣ್ಯರು ಗೌರವಿಸಿದರು. ಜ್ಞಾನೇಂದ್ರ ತಮ್ಮ ಮಾತಲ್ಲಿ ಕಟ್ಟಡ ಚಂದ ಮಾಡುವ ಬಗ್ಗೆ ಅವರಿಗೆ ಪದೇ ಪದೇ ಎಚ್ಚರಿಕೆ ನೀಡಿದ್ದೇವೆ. ಈ ಕಟ್ಟಡ ನನಗೆ ಮತ್ತು ನಿನಗೆ ಹೊಸ ಇಮೇಜ್ ಕೊಡಲಿದೆ. ಉತ್ತಮ ಕಾಮಗಾರಿ ಮಾಡಿದ್ದಾರೆ. ಯಾವುದೇ ನೂನ್ಯತೆ ಇಲ್ಲ ಎಂದರು.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.