ಟಾಪ್ 3 ನ್ಯೂಸ್ ಮಲ್ನಾಡ್
– ಮಳೆ ಶುರುವಾಗುತ್ತಿದ್ದಂತೆ ಆಕ್ಸಿಡೆಂಟ್..!
– ಒಂದು ವಾರದಲ್ಲಿ ಹಲವೆಡೆ ಅಪಘಾತ: ಕುಪ್ಪಳಿ ಬಳಿ ಕಾರು ಅಪಘಾತ
– ತೀರ್ಥಹಳ್ಳಿ: ಉಳುಕೊಪ್ಪ ಬಳಿ ಲಾರಿ- ಟ್ಯಾಂಕರ್ ನಡುವೆ ಅಪಘಾತ
– ಎನ್. ಆರ್ ಪುರ: ಅಕ್ರಮ ಗೋ ಸಾಗಾಟ ಅರೋಪಿಗಳು ಅಂದರ್
– ಶಿವಮೊಗ್ಗ: ಒಟ್ಟಿಗೆ ಎಣ್ಣೆ ಕುಡಿಯುತ್ತಾ ಸ್ನೇಹಿತನನ್ನೇ ಕೊಂದ!
NAMMUR EXPRESS NEWS
ತೀರ್ಥಹಳ್ಳಿ : ಮಾಸ್ತಿಕಟ್ಟೆ ಕುಂದಾಪುರ ಹೊಗುವ ರಾಜ್ಯ ಹೆದ್ದಾರಿ ಮಾರ್ಗದ ಮಧ್ಯ ಉಳುಕೊಪ್ಪ ಕ್ರಾಸ್ ಬಳಿ ಮಂಗಳವಾರ ಬೆಳಗ್ಗೆ ಟ್ಯಾಂಕರ್ ಮತ್ತು ಲಾರಿ ನಡುವೆ ಮುಖಾಮುಖಿ ಡಿಕ್ಕಿಯಾಗಿ ಲಾರಿ ಪಲ್ಟಿಯಾಗಿ ನಡುರಸ್ತೆಯಲ್ಲಿ ಅಡ್ಡಲಾಗಿ ಬಿದ್ದಿದೆ.
ರಸ್ತೆಯಲ್ಲಿ ಲಾರಿ ಬಿದ್ದ ಕಾರಣ ರಸ್ತೆ ಸಂಚಾರಕ್ಕೆ ತೊಂದರೆಯಾಗಿದ್ದು ಈ ಮಾರ್ಗದಲ್ಲಿ ಓಡಾಡುವ ವಾಹನಗಳಿಗೆ ಅಡಚಣೆ ಆಗಿದ್ದು ಸಂಪೂರ್ಣ ಟ್ರಾಫಿಕ್ ಜಾಮ್ ಆಗಿದೆ. ಇತ್ತೀಚಿಗೆ ಮಂಡಗದ್ದೆ, ಯಡೂರು ಬಳಿ ಅಪಘಾತ ಆಗಿತ್ತು.
ಕುಪ್ಪಳಿ ಬಳಿ ಕಾರು ಅಪಘಾತ: ತೀರ್ಥಹಳ್ಳಿ ತಾಲೂಕು ಕುಪ್ಪಳಿ ಸಮೀಪದ ಹಡಗಿನ ಮಕ್ಕಿ ಎಂಬಲ್ಲಿ ಕಾರು ಏಕಾಏಕಿ ಧರೆಗೆ ಅಪ್ಪಳಿಸಿ ಅಪಘಾತ ಸಂಭವಿಸಿದೆ. ಘಟನೆ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ.
– ಎನ್. ಆರ್ ಪುರ: ಅಕ್ರಮ ಗೋ ಸಾಗಾಟ ಅರೋಪಿಗಳು ಅಂದರ್
ಎನ್. ಆರ್ ಪುರ: ವರ್ಕಾಟೆ ಗ್ರಾಮದ ಬಳಿ ಅಕ್ರಮ ಗೋ ಸಾಗಾಣಿಕೆ ಮಾಡುತ್ತಿದ್ದವರನ್ನು ಪೊಲೀಸರು ಬಂಧಿಸಿದ್ದಾರೆ. ಅಜ್ಜರ್ ಆಲಿ ಮತ್ತು ಬಾಳೆಕೊಪ್ಪದ ಪ್ರಕಾಶ್ ಎಂಬುವವರನ್ನು ಬಂಧಿಸಲಾಗಿದೆ. ಪಿ.ಎಸ್ಸೆ ಬಿ.ಎಸ್.ನಿರಂಜನಗೌಡ, ಎಸ್.ಐ. ತಮ್ಮಯ್ಯ, ಗಿರೀಶ್ ಕುಮಾರ್, ಯುವರಾಜ,ದೇವರಾಜ, ಸ್ವರೂಪ್ ತಂಡ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ್ದಾರೆ. ಈ ವೇಳೆ ಎರಡು ದನ ಹಾಗೂ ಗೂಡ್ಸ್ ಆಟೋವನ್ನು ವಶ ಪಡಿಸಿಕೊಂಡಿದ್ದಾರೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಧೀಶರು ಜೂ.28 ವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ರಕ್ಷಿಸಿದ ಎರಡು ದನಗಳನ್ನು ಬಸ್ಥಿಮಠದ ಗೋಶಾಲೆಗೆ ನೀಡಲಾಗಿದೆ.
– ಶಿವಮೊಗ್ಗ : ಒಟ್ಟಿಗೆ ಎಣ್ಣೆ ಕುಡಿಯುತ್ತಾ ಸ್ನೇಹಿತನನ್ನೇ ಕೊಂದ!
ಶಿವಮೊಗ್ಗ: ಮಾರಕಾಸ್ತ್ರಗಳಿಂದ ಕೊಚ್ಚಿ ತಲೆ ಮೇಲೆ ಕಲ್ಲು ಎತ್ತಿಹಾಕಿ ಯುವಕನನ್ನು ಬರ್ಬರವಾಗಿ ಹತ್ಯೆಗೈದ ಘಟನೆ ಶಿವಮೊಗ್ಗದ ಆಯನೂರು ಗೇಟ್ ಬಳಿ ಸ್ಮಶಾನದಲ್ಲಿ ನಡೆದಿದೆ. ಜೆ.ಪಿ ನಗರ ನಿವಾಸಿ ರಾಜುನಾಯ್ಕ್ ಹಾಗೂ ವಿಕ್ರಮ್ ಇಬ್ಬರೂ ಸ್ನೇಹಿತರು ಕಂಠಪೂರ್ತಿ ಮದ್ಯ ಸೇವಿಸಿದ್ದು, ಕುಡಿದ ಮತ್ತಿನಲ್ಲಿ ಇಬ್ಬರ ನಡುವೆ ಗಲಾಟೆ ಶುರುವಾಗಿದೆ. ಮಾತಿಗೆ ಮಾತು ಬೆಳೆದು ವಿಕ್ರಮ್ ಎಂಬಾತನು ರಾಜುನಾಯ್ಕ್ (30) ನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ತಲೆ ಮೇಲೆ ಕಲ್ಲು ಎತ್ತಿಹಾಕಿ ಕೊಲೆಗೈದಿದ್ದಾನೆ. ಕುಡಿದ ಮತ್ತಿನಲ್ಲಿ ವೈಯಕ್ತಿಕ ವಿಚಾರ ಪ್ರಸ್ತಾಪವಾಗಿ ಇಬ್ಬರ ನಡುವೆ ಜಗಳ ಶುರುವಾಗಿದ್ದು ನಂತರ ವಿಕೋಪಕ್ಕೆ ತಿರುಗಿದ್ದು ಕೊಲೆಯಲ್ಲಿ ಅಂತ್ಯವಾಗಿದೆ. ಸದ್ಯ ಆರೋಪಿ ವಿಕ್ರಮ್ ನನ್ನು ಪೊಲೀಸರು ಬಂಧಿಸಿದ್ದಾರೆ. ತುಂಗಾನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
