Categories
ತೀರ್ಥಹಳ್ಳಿ

ತೀರ್ಥಹಳ್ಳಿ ಶ್ರೀ ವಿಶ್ವಕರ್ಮ ಸೌಹಾರ್ಧ ಸಹಕಾರಿ ಸಂಘಕ್ಕೆ ನೂತನ ಸಾರಥಿಗಳು!

ತೀರ್ಥಹಳ್ಳಿ ಶ್ರೀ ವಿಶ್ವಕರ್ಮ ಸೌಹಾರ್ಧ ಸಹಕಾರಿ ಸಂಘಕ್ಕೆ ನೂತನ ಸಾರಥಿಗಳು!
– ಶ್ರೀ ವಿಶ್ವಕರ್ಮ ಸಹಕಾರಿ ವೇದಿಕೆಯಿಂದ ಸಮಸ್ತರಿಗೆ ಧನ್ಯವಾದ

NAMMUR EXPRESS NEWS
( Thirthahalli ) ಶ್ರೀ ವಿಶ್ವಕರ್ಮ ಸಹಕಾರಿ ವೇದಿಕೆ” ತೀರ್ಥಹಳ್ಳಿ ತಾಲ್ಲೂಕಿನಿಂದ ತೀರ್ಥಹಳ್ಳಿ ತಾಲ್ಲೂಕು ಶ್ರೀ ವಿಶ್ವಕರ್ಮ ಸೌಹಾರ್ಧ ಸಹಕಾರಿ ಸಂಘ ನಿ.,ತೀರ್ಥಹಳ್ಳಿ ಇದರ ಆಡಳಿತ ಮಂಡಳಿ ನಿರ್ದೇಶಕರ ಚುನಾವಣೆಗೆ ಸ್ಪರ್ಧಿಸಿದ್ದ ಅಭ್ಯರ್ಥಿಗಳು ಅತ್ಯಧಿಕ ಮತಗಳಿಂದ ಜಯಶಾಲಿಯಾದರು.

ನೂತನ ನಿರ್ದೇಶಕರು ಇವರು

ಉಪೇಂದ್ರ ಆಚಾರ್ ಮೇಲಿನ ಕುರುವಳ್ಳಿ , ಶಂಕರಾಚಾರ್ ಬಿ.ಜಿ. ಆರಗ ಗೇಟ್ ನಾಗಪ್ಪಾಚಾರ್ ಎನ್.ಎಸ್. ನಾಡ್ತಿ-ಸೊಪ್ಪುಗುಡ್ಡೆ, ಭಾಸ್ಕರಾಚಾರ್ ಪಿ. ಹೈಸ್ಕೂಲ್ ರೋಡ್-ತೀರ್ಥಹಳ್ಳಿ , ಮೋಹನ್ ಎಸ್.ಜಿ. ಶೇಡ್ಗಾರ್, ಜ್ಯೋತಿ ಎಸ್. ತುಂಬೇಸರ, ಶಾರದ ಬಳಗೋಡು, ರಾಘವೇಂದ್ರ ಎನ್ ಗುಡ್ಡೇಕೊಪ್ಪ, ಮನೋಜ್ ಕುಮಾರ್ ಮೊನೊ ಆರ್ಟ್ಸ್ ತೀರ್ಥಹಳ್ಳಿ, ಚಂದ್ರಶೇಖರ ಜಿ. ಮಂಡಗದ್ದೆ, ಮಂಜುನಾಥ ಎಲ್. ತ್ಯಾರಂದೂರು, ರಾಘವೇಂದ್ರ ಪಿ. ಕುಂಬಾರದಡಿಗೆ ಆಯ್ಕೆಯಾಗಿದ್ದಾರೆ.

ಸಮಸ್ತರಿಗೆ ಅಭಿನಂದನೆಗಳು

ನೂತನ ನಿರ್ದೇಶಕರು ತಮ್ಮ ಅತ್ಯಮೂಲ್ಯ ಮತ ನೀಡಿ ಜಯಶಾಲಿಯಾಗಲು ಸಹಕರಿಸಿದ ತೀರ್ಥಹಳ್ಳಿ ತಾಲ್ಲೂಕಿನ ವಿಶ್ವಕರ್ಮ ಬಂಧುಗಳಿಗೆ ಹೃತ್ಪೂರ್ವಕ ಧನ್ಯವಾದಗಳನ್ನು ಸಮರ್ಪಿಸಿದ್ದಾರೆ.

ಇದನ್ನೂ ಓದಿ : ರೇಷನ್ ಕಾರ್ಡ್‌ನಲ್ಲಿ ಮನೆ ಯಜಮಾನಿ ತಿದ್ದುಪಡಿಗೆ 4 ದಿನ ಅವಕಾಶ

Categories
ಬೆಂಗಳೂರು

ಬೆಳಿಗ್ಗೆಯೇ ಭ್ರಷ್ಟರಿಗೆ ಲೋಕಾಯುಕ್ತ ಶಾಕ್!

ಬೆಳಿಗ್ಗೆಯೇ ಭ್ರಷ್ಟರಿಗೆ ಲೋಕಾಯುಕ್ತ ಶಾಕ್!
– ಸರ್ಕಾರಿ ಅಧಿಕಾರಿಗಳ ಮನೆ, ಕಚೇರಿ ಮೇಲೆ ದಾಳಿ
– ಪೊಲೀಸ್ ಕಾನ್ಸ್ಟೇಬಲ್ ಸೇರಿ ಅನೇಕ ಅಧಿಕಾರಿಗಳಿಗೆ ಗಾಳ!

NAMMUR EXPRESS NEWS ಬೆಂಗಳೂರು: ಭ್ರಷ್ಟರ ಬೇಟೆ ಮುಂದುವರಿಸಿರುವ ಲೋಕಾಯುಕ್ತ ಪೊಲೀಸರು ತಮ್ಮ ಕಾರ್ಯಾಚರಣೆಗೆ ಇನ್ನಷ್ಟು ಚುರುಕು ನೀಡಿದ್ದು, ಆ.17ರ ಬೆಳ್ಳಂಬೆಳಗ್ಗೆಯೇ ಬೆಂಗಳೂರಿನ 10 ಕಡೆ ಸೇರಿದಂತೆ ರಾಜ್ಯದ ಹಲವೆಡೆ ಸರ್ಕಾರಿ ಅಧಿಕಾರಿಗಳ ಮನೆ ಹಾಗೂ ಕಚೇರಿಗಳ ಮೇಲೆ ದಾಳಿ ಮಾಡಿದ್ದಾರೆ. ಈ ಮೂಲಕ ಭ್ರಷ್ಟ ಅಧಿಕಾರಿಗಳಿಗೆ ಶಾಕ್ ನೀಡಿದ್ದಾರೆ. ಆದಾಯಕ್ಕೂ ಮೀರಿ ಅಕ್ರಮ ಆಸ್ತಿ ಸಂಪಾದನೆ ಮಾಡಿದ್ದಾರೆ ಎಂದು ದೂರು ದಾಖಲಾಗಿರುವ ಹಿನ್ನೆಲೆ ಈ ದಾಳಿಯಾಗಿದೆ.

ರಾಜ್ಯದ ರಾಜಧಾನಿಯಲ್ಲಿ ನಾಲ್ಕು ಎಫ್‌ಐಆರ್ ಸಂಬಂಧ ಹತ್ತು ಕಡೆಗಳಲ್ಲಿ ಲೋಕಾಯುಕ್ತ ದಾಳಿಯಾಗಿದೆ. ವಿವಿಧ ಸರ್ಕಾರಿ ಅಧಿಕಾರಿಗಳಿಗೆ ಸಂಬಂಧಿಸಿದಂತೆ ಲೋಕಾಯುಕ್ತ ಪೊಲೀಸರು ದಾಳಿ ಮಾಡಿದ್ದಾರೆ. ಮಹದೇವಪುರ ವಲಯದ ಆರ್. ಐ ನಟರಾಜ್ ಮನೆಯ ಮೇಲೂ ದಾಳಿಯಾಗಿದೆ. ಈ ಹಿಂದೆ ಹಣ ಪಡೆಯುವಾಗ ಈ ನಟರಾಜ್ ಲೋಕಾಯುಕ್ತ ಬಲೆಗೆ ಬಿದ್ದಿದ್ದರು. ನಟರಾಜ್ ಅವರ ಬನಶಂಕರಿಯ ನಿವಾಸದ ಮೇಲೆ ಲೋಕಾ ಪೊಲೀಸರು ದಾಳಿ ಮಾಡಿದ್ದಾರೆ.ಹೊಳಲ್ಕೆರೆ ಸಣ್ಣ ನೀರಾವರಿ ಇಲಾಖೆಯ ಇಂಜಿನಿಯರ್ ಕೆ.ಮಹೇಶ್ ಮನೆ ಮೇಲೂ ದಾಳಿಯಾಗಿದೆ. ಮಹೇಶ್ ಅವರ ಪತ್ನಿ ಎಚ್.ಭಾರತಿ ಬಿಬಿಎಂಪಿ ಎಇ ಆಗಿದ್ದಾರೆ. ದಾವಣಗೆರೆ ನಗರದ ಜಯನಗರದಲ್ಲಿನ ಮಹೇಶ್ ಅವರ ಮನೆ ಮೇಲೆ ದಾಳಿಯಾಗಿದೆ.

ಮಹೇಶ್ ಅವರು ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ಸಣ್ಣ ನೀರಾವರಿ ಇಲಾಖೆಯಲ್ಲಿ ಇಂಜಿನಿಯರ್ ಆಗಿದ್ದಾರೆ.ಎಚ್.ಭಾರತಿ ಅವರ ಬೆಂಗಳೂರಿನ ಬಿಬಿಎಂಪಿ ಕಚೇರಿ ಮೇಲೂ ದಾಳಿಯಾಗುವ ಸಾಧ್ಯತೆ ಇದೆ. ಲೋಕಾಯುಕ್ತ ಎಸ್ಪಿ ವಾಸುದೇವರಾವ್ ಹಾಗೂ ಡಿವೈಎಸ್ಪಿ ಮೃತ್ಯುಂಜಯ ನೇತೃತ್ವದಲ್ಲಿ ದಾಳಿ ನಡೆದಿದ್ದು, ಕಡತಗಳ ಪರಿಶೀಲನೆ ನಡೆಯುತ್ತಿದೆ. ಹೊಳಲ್ಕೆರೆ ಸಣ್ಣ ನೀರಾವರಿ ಇಲಾಖೆಯಲ್ಲಿ ಸಿಬ್ಬಂದಿ ಬಂದ ನಂತರ ಲೋಕಾಯುಕ್ತ ಅಧಿಕಾರಿಗಳು ಶೋಧ ಕಾರ್ಯ ನಡೆಸಲಿದ್ದಾರೆ.ಸದ್ಯ ದಾವಣಗೆರೆ ಮನೆಯಲ್ಲಿ 15 ಲಕ್ಷ ನಗದು ಹಾಗೂ ಅರ್ಧ ಕೆಜಿ ಬಂಗಾರ ಸಿಕ್ಕಿರುವ ಸಾಧ್ಯತೆ ಇದೆ.

ಕೊಡಗಿನಲ್ಲಿ ಅಪರ ಜಿಲ್ಲಾಧಿಕಾರಿ ನಂಜುಂಡೇಗೌಡ ಅವರ ಮನೆ ಮೇಲೆ ಡಿವೈಎಸ್ಪಿ ಪವನ್ ಕುಮಾರ್ ನೇತೃತ್ವದಲ್ಲಿ ಮೂವರು ಇನ್ಸ್ಪೆಕ್ಟರ್ ಮತ್ತು 10ಕ್ಕೂ ಹೆಚ್ಚು ಸಿಬ್ಬಂದಿ ದಾಳಿ ಮಾಡಿದ್ದಾರೆ. ಕೊಡಗು ಮತ್ತು ಮೈಸೂರು ಜಿಲ್ಲೆ ಲೋಕಾಯುಕ್ತ ಪೊಲೀಸರ ಜಂಟಿ ಕಾರ್ಯಾಚರಣೆ ಇದಾಗಿದೆ. ಮಡಿಕೇರಿಯ ಕಾರ್ಯಪ್ಪ ವೃತ್ತದ ಬಳಿಯಿರುವ ನಂಜುಂಡೇಗೌಡರ ವಸತಿಗೃಹದ ಮೇಲೆ ದಾಳಿಯಾಗಿದ್ದು, ಕಡತಗಳ ಪರಿಶೀಲನೆ ನಡೆಯುತ್ತಿದೆ.ಪಿರಿಯಾಪಟ್ಟಣ ತಾಲೂಕಿನ ಮಾಕನಳ್ಳಿಯಲ್ಲಿರುವ ಮಾವನ ಮನೆ ಹಾಗೂ ಮೈಸೂರಿನಲ್ಲಿರುವ ಭಾವನ ಮನೆಯಲ್ಲೂ ಶೋಧ ಕಾರ್ಯ ನಡೆಯುತ್ತಿದೆ. ಮಡಿಕೇರಿ ಮನೆಯಲ್ಲಿ ಚಿನ್ನಾಭರಣ ಹಾಗೂ ನಗದು ಪತ್ತೆಯಾಗಿದೆ.ನಂಜುಂಡೇಗೌಡ ಅವರ ಮನೆ ಜಿಲ್ಲಾಧಿಕಾರಿ ಮನೆ ಸಮೀಪವೇ ಇದೆ.

ಪೊಲೀಸ್ ಕಾನ್ಸೆಬಲ್ ಮನೆ ಮೇಲೆ ದಾಳಿ:

ಬೀದರ್ನಲ್ಲೂ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಪೊಲೀಸ್ ಕಾನ್ಸೆಬಲ್ ವಿಜಯಕುಮಾರ್ ಎಂಬುವರ ಮನೆ ಮೇಲೆ ದಾಳಿ ನಡೆದಿದೆ. ವಿಜಯಕುಮಾರ್ ಚಿಟಗುಪ್ಪ ಪೋಲಿಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಅವರಿಗೆ ಸಂಬಂಧಿಸಿದ ಹುಮ್ನಾಬಾದ ಪಟ್ಟಣದ ಟೀಚರ್ ಕಾಲೋನಿ ಹಾಗೂ ಹುಚಕನಳ್ಳಿ ಗ್ರಾಮದ ಮನೆಗಳ ಮೇಲೆ ದಾಳಿ ನಡೆಸಿದ್ದಾರೆ. ಅಕ್ರಮ ಆಸ್ತಿ ಗಳಿಕೆ ಆರೋಪವಿದ್ದು, ಮಹತ್ವದ ದಾಖಲೆಗಳನ್ನು ಅಧಿಕಾರಿಗಳು ಪರಿಶಿಲನೆ ಮಾಡುತ್ತಿದ್ದಾರೆ.ಡಿವೈಎಸ್ಪಿ ಓಲೇಕಾರ ನೇತೃತ್ವದಲ್ಲಿ ದಾಳಿಯಾಗಿದೆ.

ಬೆಳಗಾವಿ ಪಾಲಿಕೆ ಸಹಾಯಕ ಆಯುಕ್ತರಿಗೆ ಶಾಕ್ :

ಧಾರವಾಡದಲ್ಲಿಯೂ ಲೋಕಾಯುಕ್ತ ದಾಳಿ ನಡೆದಿದೆ.ಬೆಳಗಾವಿ ಪಾಲಿಕೆ ಸಹಾಯಕ ಆಯುಕ್ತ ಸಂತೋಷ ಆನಿಶೆಟ್ಟರ್ ಅವರ ಧಾರವಾಡದ ನಿವಾಸದ ಮೇಲೆ ದಾಳಿಯಾಗಿದೆ. ನಗರದ ಸಪ್ತಾಪುರ ಬಡಾವಣೆಯ ಮಿಚಿಗನ್ ಲೇಔಟ್ನಲ್ಲಿ ಆನಿಶೆಟ್ಟರ್ ನಿವಾಸ ಇದೆ. ಆನಿಶೆಟ್ಟರ್ ಈ ಮೊದಲು ಹು-ಧಾ ಪಾಲಿಕೆಯಲ್ಲಿದ್ದರು. ಕೆಲ ವರ್ಷಗಳ ಹಿಂದಷ್ಟೇ ಬೆಳಗಾವಿಗೆ ವರ್ಗಾವಣೆ ಆಗಿದ್ದರು. ಮನೆಯಲ್ಲಿ ದಾಖಲೆಗಳ ಪರಿಶೀಲನೆ ಆರಂಭವಾಗಿದೆ. ಮನೆ, ಲಾಡ್ಜ್ ಮೇಲೆ ದಾಳಿ ಕೊಪ್ಪಳದಲ್ಲಿ ನಿರ್ಮಿತಿ ಕೇಂದ್ರದ ಕಚೇರಿ ವ್ಯವಸ್ಥಾಪಕ ಮಂಜುನಾಥ್ ಬನ್ನಿಕೊಪ್ಪ ಮನೆ ಮೇಲೆ ಲೋಕಾಯುಕ್ತದಾಳಿ ನಡೆದಿದೆ.

ನಗರದ ಮಂಗಲಾ ಆಸ್ಪತ್ರೆ ಹಿಂಭಾಗದಲ್ಲಿರುವ ಮನೆ, ನಿರ್ಮಿತಿ ಕೇಂದ್ರ ಹಾಗೂ ಹುಲಗಿಯಲ್ಲಿನ ಲಾಡ್ಜ್ ಮೇಲೆ ಲೋಕಾಯುಕ್ತ ದಾಳಿಯಾಗಿದೆ. ಅಪಾರ ಪ್ರಮಾಣದ ಅಕ್ರಮ ಆಸ್ತಿ ಸಂಪಾದನೆ ಆರೋಪದ ಹಿನ್ನಲೆಯಲ್ಲಿ ರಾಯಚೂರು ಲೋಕಾಯುಕ್ತ ಎಸ್ಪಿ ಆರ್.ಎಲ್ ಅರಸಿದ್ದಿ ನೇತೃತ್ವದಲ್ಲಿ ದಾಳಿ ನಡೆದಿದೆ. ತುಮಕೂರು ನಗರಾಭಿವೃದ್ಧಿ ಪ್ರಾಧಿಕಾರದ ಜಂಟಿ ನಿರ್ದೇಶಕ ನಾಗರಾಜು ಮನೆ ಮೇಲೆ ದಾಳಿಯಾಗಿದೆ. ತುಮಕೂರಿನ ಸಪ್ತಗಿರಿ ಬಡಾವಣೆಯಲ್ಲಿರುವ ನಿವಾಸದಲ್ಲಿ ಲೋಕಾಯುಕ್ತ ಅಧಿಕಾರಿಗಳು ದಾಖಲಾತಿಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ. ಟೂಡಾ ಕಚೇರಿ ಮೇಲೆ ಹಾಗೂ ಅರಸಿಕೆರೆಯ ನಿವಾಸದ ಮೇಲೂ ದಾಳಿಯಾಗಿದೆ. ಬೆಳಗ್ಗೆ 6 ಗಂಟೆಗೆ ಒಟ್ಟು ಮೂರು ತಂಡದಿಂದ ದಾಳಿಯಾಗಿದೆ.

ಇದನ್ನೂ ಓದಿ : ರೇಷನ್ ಕಾರ್ಡ್‌ನಲ್ಲಿ ಮನೆ ಯಜಮಾನಿ ತಿದ್ದುಪಡಿಗೆ 4 ದಿನ ಅವಕಾಶ

Categories
ರಾಷ್ಟ್ರೀಯ ವಾರ್ತೆ

ಸಮುದ್ರದ ಆಳದಲ್ಲಿ ಹಾರಾಡಿದ ತ್ರಿವರ್ಣ ಧ್ವಜ!

ಸಮುದ್ರದ ಆಳದಲ್ಲಿ ಹಾರಾಡಿದ ತ್ರಿವರ್ಣ ಧ್ವಜ!
– ಭಾರತೀಯ ಕೋಸ್ಟ್ ಗಾರ್ಡ್ ವಿಶೇಷ ಧ್ವಜವಂದನೆ
– ಮೇರಾ ಭಾರತ್ ಮಹಾನ್..ವಂದೇ ಮಾತರಂ

NAMMUR EXPRESS NEWS
ಚೆನ್ನೈ: ಭಾರತದ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ, ಭಾರತೀಯ ಕೋಸ್ಟ್ ಗಾರ್ಡ್ ಸದಸ್ಯರು ನೀರಿನ ಅಡಿಯಲ್ಲಿ ರಾಷ್ಟ್ರಧ್ವಜವನ್ನು ಹಿಡಿದು ವಂದಿಸುವ ಮೂಲಕ ತಮ್ಮದೇಶಭಕ್ತಿಯ ಉತ್ಸಾಹವನ್ನು ಪ್ರದರ್ಶಿಸಿದರು. ತಮಿಳುನಾಡಿನ ರಾಮೇಶ್ವರಂ ಬಳಿ ಈ ಘಟನೆ ನಡೆದಿದ್ದು, ಈ ಮಹತ್ವದ ಕೃತ್ಯವನ್ನು ಸೆರೆಹಿಡಿಯುವ ವಿಡಿಯೋ ಆನ್‌ಲೈನ್‌ನಲ್ಲಿ ಜನಪ್ರಿಯತೆಯನ್ನು ಗಳಿಸಿದೆ.

ವೀಡಿಯೊದಲ್ಲಿ, ಧೈರ್ಯಶಾಲಿ ಭಾರತೀಯ ಕೋಸ್ಟ್ ಗಾರ್ಡ್‌ ಸಿಬ್ಬಂದಿ ನೀರಿನ ಅಡಿಯಲ್ಲಿ ನಿಂತಿರುವುದನ್ನು ಗಮನಿಸಬಹುದು. ಅದರಲ್ಲಿ ಅವರು ತ್ರಿವರ್ಣ ಧ್ವಜದ ಬಗ್ಗೆ ಅವರ ಗೌರವವನ್ನು ಪ್ರದರ್ಶಿಸಿದ್ದಾರೆ. ಏಳು ಸೆಕೆಂಡ್‌ಗಳ ವೀಡಿಯೊವು ನಾಲ್ಕು ಭಾರತೀಯ ಕೋಸ್ಟ್ ಗಾರ್ಡ್ ಸದಸ್ಯರ ಗುಂಪನ್ನು ಸಮುದ್ರದಆಳದಲ್ಲಿ ತೋರಿಸುತ್ತದೆ. ಅವರಲ್ಲಿ ಒಬ್ಬ ಗಾರ್ಡ್ ಭಾರತೀಯ ಧ್ವಜವನ್ನು ಹಿಡಿದಿರುವುದು ಕಂಡುಬಂದರೆ, ಉಳಿದ ಸದಸ್ಯರು ರಾಷ್ಟ್ರಧ್ವಜಕ್ಕೆ ವಂದನೆ ಸಲ್ಲಿಸುತ್ತಿದ್ದಾರೆ.

ಇದನ್ನೂ ಓದಿ : ರೇಷನ್ ಕಾರ್ಡ್‌ನಲ್ಲಿ ಮನೆ ಯಜಮಾನಿ ತಿದ್ದುಪಡಿಗೆ 4 ದಿನ ಅವಕಾಶ

Categories
ಸಿನಿಮಾ

ಕನ್ನಡ ಸಿನಿ ಪ್ರಿಯರೇ ಬರ್ತಿದ್ದಾನೆ ಟೋಬಿ!

ಕನ್ನಡ ಸಿನಿ ಪ್ರಿಯರೇ ಬರ್ತಿದ್ದಾನೆ ಟೋಬಿ!
– ಆ.25ರಂದು ಟೋಬಿ ತೆರೆಗೆ: ಭಾರೀ ಕುತೂಹಲ
– ರಾಜ್ ಬಿ ಶೆಟ್ಟಿ ನಟನೆಯ ಹೊಸ ಟ್ರೆಂಡ್

NAMMUR EXPRESS NEWS
ರಾಜ್ ಬಿ ಶೆಟ್ಟಿ ತಮ್ಮ ಪ್ರತಿಭೆ ಮೂಲಕವೇ ಸ್ಯಾಂಡಲ್ ವುಡ್ ಅಲ್ಲಿ ತಮ್ಮ ಹೆಸರನ್ನು ಮೂಡಿಸಿದ ನಟ. ಇದೀಗ ಅವರ ಬಹು ನಿರೀಕ್ಷೆಯ ಚಿತ್ರ ಟೋಬಿ ಆ.25ಕ್ಕೆ ತೆರೆ ಕಾಣಲಿದೆ. ಒಂದು ಮೊಟ್ಟೆಯ ಕಥೆ ಹಾಗೂ ಗರುಡ ಗಮನ ವೃಷಭ ವಾಹನ ಸಿನಿಮಾ ಮೂಲಕ ಕನ್ನಡ ಸಿನೆಮಾ ಲೋಕದಲ್ಲಿ ಹೊಸ ಟ್ರೆಂಡ್‌ ಹುಟ್ಟು ಹಾಕಿರುವ ರಾಜ್‌ ಬಿ. ಶೆಟ್ಟಿ ಅವರ ನೇತೃತ್ವದಲ್ಲಿ “ಟೋಬಿ’ ಕನ್ನಡ ಸಿನೆಮಾ ಆ. 25ರಂದು ರಾಜ್ಯಾದ್ಯಂತ ತೆರೆಕಾಣಲಿದೆ. ಈಗಾಗಲೇ ಈ ಸಿನಿಮಾಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಟೋಬಿ ಸಿನಿಮಾ ಕಥೆ ಮೊದಲು ಪುನೀತ್ ರಾಜ್ ಕುಮಾರ್, ಆಮೇಲೆ ರಿಷಬ್ ಶೆಟ್ಟಿ ಅವರಿಗೆ ಈ ಸಿನಿಮಾ ಕಥೆ ಹೋಗಿತ್ತು. ಆದರೆ ಆ ಬಳಿಕ ಇಬ್ಬರೂ ಒಪ್ಪದಿದ್ದಾಗ ರಾಜ್ ಬಿ ಶೆಟ್ಟಿ ಈ ಕಥೆ ಒಪ್ಪಿಕೊಂಡಿದ್ದರು.

ಗರುಡ ಗಮನ ವೃಷಭ ವಾಹನಕ್ಕೂ ಸಂಬಂಧ ಇಲ್ಲ

ಇಲ್ಲೂ ಟ್ರೇಲರ್‌ನಲ್ಲಿ ನಾನು ಲುಂಗಿ ಉಟ್ಟಿರುವುದರಿಂದ ಜಿಜಿವಿವಿ ಚಿತ್ರದ ಛಾಯೆ ಇದರಲ್ಲಿ ಕಂಡಿರಬಹುದು. ಜಿಜಿವಿವಿ ನಮ್ಮ ಹೊಸ ಪ್ರಯತ್ನವಾದ್ದರಿಂದ ಜನರನ್ನು ಸೆಳೆಯಲು ಟ್ರೇಲರ್‌ನಲ್ಲಿ ಚಿತ್ರದ ಮುಖ್ಯಾಂಶಗಳನ್ನು ಹಾಕಿದ್ದೆವು, ಆದರೆ “ಟೋಬಿ’ ಟ್ರೇಲರ್‌ನಲ್ಲಿ ಚಿತ್ರದ ಯಾವುದೇ ಕಥೆಯ ಸುಳಿವು ಕೂಡ ಕೊಟ್ಟಿಲ್ಲ. ಹಾಗಾಗಿ ಇದಕ್ಕೂ ಜಿಜಿವಿವಿಗೂ ಯಾವುದೇ ಲಿಂಕ್‌ ಇರುವುದಿಲ್ಲ ಎಂದು ಪತ್ರಿಕಾಗೋಷ್ಠಿಯಲ್ಲಿ ರಾಜ್‌ ಬಿ. ಶೆಟ್ಟಿ ಸ್ಪಷ್ಟಪಡಿಸಿದ್ದಾರೆ. ಜಿಜಿವಿವಿಗೆ ಹೋಲಿಸಿದರೆ ಟೋಬಿ ಹತ್ತು ಪಟ್ಟು ಹೆಚ್ಚು ಪ್ರಯತ್ನ, ವೆಚ್ಚ, ಶ್ರಮ ಹಾಕಿರುವ ಚಿತ್ರ. ಜಿಜಿವಿವಿ ಯಲ್ಲಿ ಹರಿ, ಶಿವ ಇಬ್ಬರೂ ಕುಟುಂಬದಿಂದ ವಿಮುಖರಾದವರು, ಟೋಬಿಹಾಗಿಲ್ಲ, ಇದು ಕೌಟುಂಬಿಕ ಬಾಂಧವ್ಯ ಇರುವ ಚಿತ್ರ ಎರಡೂ ಬೇರೆಯೇ ಆಗಿವೆ ಎಂದರು.

ಅಗತ್ಯವಿದ್ದರೆ ಮಾತ್ರ ಡಬ್ಬಿಂಗ್‌ ಟೋಬಿಯನ್ನು ನಮ್ಮ ಜನರಿಗೆ ತಲಪಿಸಬೇಕು ಎಂಬ ಬಯಕೆ ಹೊಂದಿದ್ದೇವೆ, ಟ್ರೇಲರ್‌ ನೋಡಿದವರು, ತೆಲುಗು ತಮಿಳು ಚಿತ್ರ ವಿತರಕರು ಆ ಭಾಷೆಗಳಿಗೂ ಡಬ್‌ ಮಾಡಬೇಕು ಎಂದು ಕೇಳಿ ದ್ದಾರೆ, ನಮ್ಮ ಜನರ ಸ್ಪಂದನೆ ನೋಡಿಕೊಂಡು ಮುಂದಿನ ಕೆಲಸ ಮಾಡುತ್ತೇವೆ ಎಂದರು.

ಹೊಸ ಮುಖಗಳ ಎಂಟ್ರಿ!

ನಿರ್ಮಾಪಕ ರವಿ ರೈ ಕಳಸ, ರಾಜ್‌ ದೀಪಕ್‌ ರೈ, ಯತೀಶ್‌ ಬೈಕಂಪಾಡಿ, ನಟಿ ಚೈತ್ರಾ ಆಚಾರ್‌, ಬಾಸಿಲ್‌ ಅಲ್ಚಾಲಕ್ಕಲ್‌ ನಿರ್ದೇಶನವಿರುವ ಚಿತ್ರಕ್ಕೆ ಮಿಥುನ್‌ ಮುಕುಂದನ್‌ ಹಿನ್ನೆಲೆ ಸಂಗೀತ, ಪ್ರವೀಣ್‌ ಶ್ರೀಯಾನ್‌ ಛಾಯಾಗ್ರಹಣವಿದೆ. ಸಂಯುಕ್ತ ಹೊರನಾಡು, ಗೋಪಾಲಕೃಷ್ಣ ದೇಶಪಾಂಡೆ ನಟಿಸಿದ್ದಾರೆ

ಇದನ್ನೂ ಓದಿ : ರೇಷನ್ ಕಾರ್ಡ್‌ನಲ್ಲಿ ಮನೆ ಯಜಮಾನಿ ತಿದ್ದುಪಡಿಗೆ 4 ದಿನ ಅವಕಾಶ

Categories
ಬೆಂಗಳೂರು

ಅಯ್ಯೋ ಇನ್ನು ಅಕ್ಕಿ ಕೊಳ್ಳುವ ಹಾಗಿಲ್ಲ!

ಅಯ್ಯೋ ಇನ್ನು ಅಕ್ಕಿ ಕೊಳ್ಳುವ ಹಾಗಿಲ್ಲ!
– ಈಗ ದುಬಾರಿ ಆಯ್ತು ಅಕ್ಕಿ: ಅಕ್ಕಿಗೆ ಹೆಚ್ಚಿದ ಬೇಡಿಕೆ
– ಅಕ್ಕಿ ಬೆಳೆಯುವ ಪ್ರಮಾಣ ಕಡಿಮೆ ಕಾರಣ

NAMMUR EXPRESS NEWS
ಬೆಂಗಳೂರು: ಅಕ್ಕಿ ಬೆಲೆ ಗಗನಮುಖಿ ಆಗುತ್ತಿದೆ. ದಿನೇ ದಿನೇ ಅಕ್ಕಿ ದರ ಏರಿಕೆ ಆಗುತ್ತಿರುವುದು ಆತಂಕ ಸೃಷ್ಟಿ ಮಾಡಿದೆ.
ರಾಜ್ಯದ ಪ್ರಮುಖ ಆಹಾರ ಬೆಳೆ ಅಕ್ಕಿ ಕಳೆದ ಕೆಲವು ವಾರಗಳಿಂದ ಸರಾಸರಿ 15% ರಷ್ಟು ಏರಿಕೆ ಕಂಡಿದೆ. ಅದರಲ್ಲೂ ಇಡೀ ಏಷ್ಯಾದಲ್ಲಿ ಅಕ್ಕಿ ಬೆಲೆ ದಾಖಲೆ ಏರಿಕೆ ಕಂಡಿದ್ದು, ಕಳೆದ 15 ವರ್ಷಗಳಲ್ಲೇ ಅತಿ ಹೆಚ್ಚಿನ ಮಟ್ಟಕ್ಕೆ ಜಿಗಿದಿದೆ. ಇದರಿಂದ ರಾಜ್ಯದ ಹಲವೆಡೆ ಅಕ್ಕಿ ದರ ಹೆಚ್ಚಿದೆ. ಅಕ್ಕಿಯನ್ನು ಪ್ರಧಾನವಾಗಿ ಸೇವಿಸುವ ಪ್ರದೇಶಗಳಲ್ಲಿನ ಜನರಿಗೆ ಅಕ್ಕಿ ದರ ಏರಿಕೆ ಶಾಕ್ ಕೊಟ್ಟಿದೆ. ಕಳೆದ ವರ್ಷ ಭಾರೀ ಮಳೆಯಿಂದಾಗಿ ಅಕ್ಕಿ ಉತ್ಪಾದನೆ ಕಡಿಮೆಯಾಗಿದೆ. ಇದರ ಜೊತೆಗೆ ಈ ವರ್ಷ ಮುಂಗಾರು ಮಳೆ ವಿಳಂಬ ಮತ್ತು ಭತ್ತದ ಕನಿಷ್ಠ ಬೆಂಬಲ ಬೆಲೆಯಲ್ಲಿ ಸಾಮಾನ್ಯ ಏರಿಕೆಯು ಅಕ್ಕಿ ಬೆಲೆಯಲ್ಲಿ ಹೆಚ್ಚಳಕ್ಕೆ ಕಾರಣವಾಗಿದೆ.

ರಿಟೇಲ್ ದರ ಸಾಮಾನ್ಯವಾಗಿ ಹೋಲ್ ಸೇಲ್ ಬೆಲೆಗಿಂತ ಕನಿಷ್ಠ 10% ಹೆಚ್ಚಾಗಿದೆ. ಕಳೆದ ವರ್ಷ ಭಾರಿ ಮಳೆಯಿಂದಾಗಿ ಕಡಿಮೆ ಉತ್ಪಾದನೆ, ಈ ವರ್ಷ ಮುಂಗಾರು ವಿಳಂಬದಿಂದಾಗಿ ಕಡಿಮೆ ಉತ್ಪಾದನೆಯ ಭಯ ಮತ್ತು ಭತ್ತಕ್ಕೆ ಕನಿಷ್ಠ ಬೆಂಬಲ ಬೆಲೆಯಲ್ಲಿ ಸಾಮಾನ್ಯ ಏರಿಕೆ ಸೇರಿದಂತೆ ಹಲವಾರು ಕಾರಣಗಳು ಅಕ್ಕಿಯ ಬೆಲೆ ಏರಿಕೆಗೆ ಕಾರಣವಾಗಿವೆ ಎಂದು ಉದ್ಯಮದ ತಜ್ಞರು ಹೇಳುತ್ತಾರೆ. ನವೆಂಬರ್ ವೇಳೆಗೆ ಬೆಲೆ ಇಳಿಕೆಯಾಗುವ ನಿರೀಕ್ಷೆಯಿದೆ ಎಂದು ಉದ್ಯಮದ ಮೂಲಗಳು ತಿಳಿಸಿವೆ.

ಮಲೆನಾಡಲ್ಲಿ ಕಡಿಮೆಯಾದ ಭತ್ತದ ಗದ್ದೆಗಳು!

ಮಲೆನಾಡಿನಲ್ಲಿ ಭತ್ತದ ಗದ್ದೆಗಳು ಕಡಿಮೆ ಆಗಿರುವುದು ಇದೀಗ ಮತ್ತಷ್ಟು ಬೇಡಿಕೆ ಸೃಷ್ಟಿ ಮಾಡಿದೆ. ಅಡಿಕೆ ತೋಟಗಳು ಭತ್ತದ ಗದ್ದೆಯನ್ನು ಅವರಿಸಿವೆ. ಹೀಗಾಗಿ ಭತ್ತದ ದರ ಹೆಚ್ಚಿದೆ. ದೇಶಿಯ ತಳಿ ಅಕ್ಕಿಗೆ ಇನ್ನು ಹೆಚ್ಚಾಗಿದೆ.

ಇದನ್ನೂ ಓದಿ : ರೇಷನ್ ಕಾರ್ಡ್‌ನಲ್ಲಿ ಮನೆ ಯಜಮಾನಿ ತಿದ್ದುಪಡಿಗೆ 4 ದಿನ ಅವಕಾಶ

Categories
ಕರಾವಳಿ

ತಿಂಗಳ ಅಂತ್ಯದವರೆಗೂ ಕರಾವಳಿಯ ಪ್ರವಾಸ ಕಷ್ಟ!

ತಿಂಗಳ ಅಂತ್ಯದವರೆಗೂ ಕರಾವಳಿಯ ಪ್ರವಾಸ ಕಷ್ಟ!
– ವಿವಿಧ ಪ್ರವಾಸಿ ತಾಣಗಳ ಭೇಟಿಗೆ ನಿರ್ಬಂಧ
– ಮಳೆ ಹೆಚ್ಚುವ ಭೀತಿ ಹಿನ್ನೆಲೆ ನಿರ್ಧಾರ

NAMMUR EXPRESS NEWS
ಉಡುಪಿ: ಉಡುಪಿ ಜಿಲ್ಲೆಯಲ್ಲಿ ಪ್ರವಾಸೋದ್ಯಮ ಸ್ಥಳಗಳಿಗೆ ಪ್ರವಾಸಿಗರು ಹಾಗೂ ಸಾರ್ವಜನಿಕರ ಭೇಟಿಗೆ ಜಿಲ್ಲಾಡಳಿತ ವಿಧಿಸಿರುವ ನಿರ್ಬಂಧವನ್ನು ಆಗಸ್ಟ್‌ ಅಂತ್ಯದವರೆಗೂ ವಿಸ್ತರಿಸಿದೆ. ಕೊಲ್ಲೂರು ಸಮೀಪದ ಅರಶಿನ ಗುಂಡಿ ಜಲಪಾತದಲ್ಲಿ ನಡೆದ ದುರ್ಘ‌ಟನೆಯ ಅನಂತರದಲ್ಲಿ ಬೀಚ್‌ ಸಹಿತ ಜಲಪಾತ ಹಾಗೂ ಮಳೆಗಾಲದಲ್ಲಿ ಅಪಾಯಕಾರಿಯಾಗಿ ಪರಿಣಮಿಸುವ ಪ್ರವಾಸಿ ತಾಣಗಳಿಗೆ ಪ್ರವಾಸಿಗರು ಮತ್ತು ಸಾರ್ವಜನಿಕರ ಪ್ರವೇಶಕ್ಕೆ ಜಿಲ್ಲಾಡಳಿತ ನಿರ್ಬಂಧ ಹೇರಿತ್ತು. ಇದೀಗ ಉಡುಪಿ ಜಿಲ್ಲಾದ್ಯಂತ ಮಳೆ ಕಡಿಮೆಯಾಗಿದ್ದರೂ ನಿರ್ಬಂಧವನ್ನು ವಾಪಸ್‌ ಪಡೆದಿಲ್ಲ. ಈ ತಿಂಗಳ ಅಂತ್ಯದವರೆಗೂ ನಿರ್ಬಂಧ ಇರಲಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.

ಮಳೆಗಾಲದಲ್ಲಿ ಯಾವಾಗ ಬೇಕಾದರೂ ಮಳೆಯ ಪ್ರಮಾಣ ಹೆಚ್ಚಾಗಬಹುದು. ನಿರ್ಬಂಧ ವಾಪಸ್‌ ಪಡೆದ ಅನಂತರದಲ್ಲಿ ಪುನಃ ಪರಿಸ್ಥಿತಿ ನಿಯಂತ್ರಿಸುವುದು ತತ್‌ಕ್ಷಣದಲ್ಲಿ ಕಷ್ಟವೂ ಆಗಬಹುದು. ಹೀಗಾಗಿ ಮಾಸಾಂತ್ಯದಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳ ಸಭೆ ನಡೆಸಿ ನಿರ್ಬಂಧ ತೆರವುಗೊಳಿಸುವ ಬಗ್ಗೆ ತೀರ್ಮಾನಿಸಲಿದ್ದೇವೆ ಎಂದು ಜಿಲ್ಲಾಧಿಕಾರಿ ಡಾ.ವಿದ್ಯಾ ಕುಮಾರಿ ತಿಳಿಸಿದ್ದಾರೆ.

ಇದನ್ನೂ ಓದಿ : ರೇಷನ್ ಕಾರ್ಡ್‌ನಲ್ಲಿ ಮನೆ ಯಜಮಾನಿ ತಿದ್ದುಪಡಿಗೆ 4 ದಿನ ಅವಕಾಶ

Categories
ಕರಾವಳಿ

ಕರಾವಳಿ ಟಾಪ್ ನ್ಯೂಸ್

ವೈದ್ಯರ ನಿರ್ಲಕ್ಷ್ಯಕ್ಕೆ ಬಾಲಕ ಬಲಿ: ಆಸ್ಪತ್ರೆ ಎದುರು ಧರಣಿ
– ಮಗ ಆತ್ಮಹತ್ಯೆ; ಮನನೊಂದ ತಂದೆಯೂ ಆತ್ಮಹತ್ಯೆ
– ಮೂಡಬಿದರೆ: ಒಮಿನಿ ಗ್ಯಾಸ್ ಟ್ಯಾಂಕರ್ ಅಲ್ಲಿ ಬೆಂಕಿ
– ಮಂಗಳೂರು: ಮಾದಕ ವಸ್ತು ಮಾರಾಟಗಾರರ ಸೆರೆ
– ಬೈಂದೂರು: ಕೆಲಸಕ್ಕೆ ಬಂದ ಯುವತಿ ನಾಪತ್ತೆ!

NAMMUR EXPRESS NEWS
ಪುತ್ತೂರು: ವೈದ್ಯರ ನಿರ್ಲಕ್ಷ್ಯಕ್ಕೆ ಬಾಲಕ ಮೃತಪಟ್ಟಿರುವುದಾಗಿ ಆರೋಪ. ಮಾಡಿ ಶವವಿಟ್ಟು ಆಸ್ಪತ್ರೆ ಮುಂಭಾಗ ಧರಣಿ ನಡೆಸಿದ ಘಟನೆ ನಡೆದಿದೆ. ವೈದ್ಯರ ನಿರ್ಲಕ್ಷ್ಯಕ್ಕೆ ಬಾಲಕ ಬಲಿ ಆಸ್ಪತ್ರೆ ಮುಂಭಾಗ ಶವವಿಟ್ಟು ಪ್ರತಿಭಟನೆಹೊಟ್ಟೆ ನೋವಿನಿಂದ ಬಳಲುತ್ತಿದ್ದ ಬಾಲಕನನ್ನು ಕೊನೆಯುಸಿರೆಳೆದ ಹಿನ್ನಲೆಯಲ್ಲಿ ಆಕ್ರೋಶಗೊಂಡ ಪೋಷಕರು, ಕುಟುಂಬಸ್ಥರು
ಪುತ್ತೂರಿನ ಖಾಸಗಿ ಆಸ್ಪತ್ರೆಯ ನಿರ್ಲಕ್ಷ್ಯವೇ ಬಾಲಕನ ಸಾವಿಗೆ ಕಾರಣ ಎಂದು ಆರೋಪಿಸಿ ದಲಿತ ಸಂಘರ್ಷ ಸಮಿತಿ ಸದಸ್ಯರ ನೇತೃತ್ವದಲ್ಲಿ ಪುತ್ತೂರಿನ ಖಾಸಗಿ ಆಸ್ಪತ್ರೆ ಎದುರು ಧರಣಿ ನಡೆಸಿದರು ಮೃತರನ್ನು ಸುಳ್ಯದ ಕಸಬಾ ಗ್ರಾಮದ ಶ್ರೀಜಿತ್ (17) ಎಂದು ಗುರುತಿಸಲಾಗಿದೆ. ಆ.14ರಂದು ನಡೆದ ಬಾಲಕನ ಸಾವಿಗೆ ಸಂಬಂಧಿಸಿದಂತೆ ಪುತ್ತೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಚಲಿಸುತ್ತಿದ್ದ ಓಮ್ನಿ ಕಾರಿನ ಗ್ಯಾಸ್ ಟ್ಯಾಂಕ್ ಸ್ಫೋಟ!

ಮೂಡುಬಿದಿರೆ ತಾಲೂಕು ಹಂಡೇಲು ಬಳಿಯಲ್ಲಿ ಚಲಿಸುತ್ತಿದ್ದ ಕಾರಿನ ಗ್ಯಾಸ್ ಟ್ಯಾಂಕ್ ಸ್ಫೋಟಗೊಂಡು, ಬೆಂಕಿ ಕಾಣಿಸಿಕೊಂಡಿದ್ದು, ತಕ್ಷಣ ಸ್ಥಳಕ್ಕಾಗಮಿಸಿದ ಅಗ್ನಿಶಾಮಕದಳದವರು ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಮಂಗಳೂರಲ್ಲಿ ಮಾದಕ ವಸ್ತು ಮಾರಾಟಗಾರರ ಸೆರೆ

ಮಂಗಳೂರು: ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಎಂಡಿಎಂಎ ಮಾದಕ ವಸ್ತು ಮಾರಾಟ ಮಾಡುತ್ತಿದ್ದ ನಾಲ್ವರನ್ನು ಬಂಧಿಸಿರುವ ಸಿಸಿಬಿ ಪೊಲೀಸರು ಅವರಿಂದ ಸುಮಾರು 15 ಲ.ರೂ. ಮೌಲ್ಯದ ಮಾದಕ ವಸ್ತು ವಶಪಡಿಸಿಕೊಂಡಿದ್ದಾರೆ.
ಡ್ರಗ್ಸ್‌ ಫ್ರಿ ಮಂಗಳೂರು ಮಾಡುವ ನಿಟ್ಟಿನಲ್ಲಿ ಮಂಗಳೂರು ಸಿಸಿಬಿ ಪೊಲೀಸರು ಕಮೀಷನರೇಟ್ ವ್ಯಾಪ್ತಿಯ ಮಂಗಳೂರು ಉತ್ತರ ಪೊಲೀಸ್‌ ಠಾಣೆ ಹಾಗೂ ಕಂಕನಾಡಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಎರಡು ಪ್ರತ್ಯೇಕ ಕಾರ್ಯಾಚರಣೆ ನಡೆಸಿದ್ದಾರೆ. ನಾಲ್ವರನ್ನು ಬಂಧಿಸಿದ ಪೊಲೀಸರು 200 ಗ್ರಾಂ ಎಂಡಿಎಂಎ ಮಾದಕ ವಸ್ತುವನ್ನು ವಶಪಡಿಸಿಕೊಂಡಿರುತ್ತಾರೆ.

ಬೆಂಗಳೂರಿನಿಂದ ಎಂಡಿಎಂಎ ಮಾದಕ ವಸ್ತುವನ್ನು ಖರೀದಿಸಿಕೊಂಡು ತಂದು ಮಂಗಳೂರು ನಗರದ ಉತ್ತರ ಠಾಣಾ ವ್ಯಾಪ್ತಿಯ ಫಳೀರ್ ಪರಿಸರದಲ್ಲಿ ಕಾರಿನಲ್ಲಿ ಮೂವರು ವ್ಯಕ್ತಿಗಳು ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿ ಪಡೆದ ಮಂಗಳೂರು ಸಿಸಿಬಿ ಘಟಕದ ಎಸಿಪಿ ಪಿ.ಎ. ಹೆಗಡೆ ನೇತೃತ್ವದ ಸಿಸಿಬಿ ಪೊಲೀಸರು ದಾಳಿ ನಡೆಸಿ ಮಾದಕ ವಸ್ತುವನ್ನು ಸಹಿತ ಇತರ ಸೊತ್ತುಗಳೊಂದಿಗೆ ನಾಲ್ವರನ್ನು ಬಂಧಿಸಿದ್ದಾರೆ.

ಮೊದಲ ಪ್ರಕರಣದಲ್ಲಿ 100 ಗ್ರಾಂ ತೂಕದ ರೂ. 5,00,000 ಮೌಲ್ಯದ ಎಂಡಿಎಂಎ ಮಾದಕ ವಸ್ತು ನಗದು ರೂ. 4000, ಕಾರು-1, ಮೊಬೈಲ್ ಫೋನುಗಳು-3, ಡಿಜಿಟಲ್ ತೂಕ ಮಾಪನವನ್ನು ವಶಪಡಿಸಿಕೊಳ್ಳಲಾಗಿದೆ. ವಶಪಡಿಸಿಕೊಂಡ ಸೊತ್ತುಗಳ ಒಟ್ಟು ಮೌಲ್ಯ ರೂ 10,94,500 ರೂ.ಎಂದು ಪೊಲೀಸರು ತಿಳಿಸಿದ್ದಾರೆ.

ಯುವತಿ ನಾಪತ್ತೆ : ತಂದೆಯಿಂದ ದೂರು

ಉದ್ಯೋಗಕ್ಕೆಂದು ಮಂಗಳೂರಿಗೆ ಬಂದಿದ್ದ ಯುವತಿ ನಾಪತ್ತೆಯಾಗಿರುವ ಬಗ್ಗೆ ಆಕೆಯ ತಂದೆ ಕದ್ರಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಹೊನ್ನಾವರದ ಸೋನಿಯಾ ರೋಡ್ರಿಗಸ್ (23) ನಾಪತ್ತೆಯಾಗಿರುವ ಯುವತಿಯಾಗಿದ್ದಾಳೆ.ಈಕೆ ಸುಮಾರು 8 ತಿಂಗಳ ಹಿಂದೆ ಉದ್ಯೋಗಕ್ಕಾಗಿ ಮಂಗಳೂರಿಗೆ ಬಂದಿದ್ದು, ಸೋನಿಯಾ ಬೆಂದೂರಿನ ಅಪಾರ್ಟ್‌ಮೆಂಟ್‌ವೊಂದರಲ್ಲಿ ವಾಸವಿರುವುದಾಗಿ ತಿಳಿಸಿದ್ದಳು. ಇತ್ತೀಚೆಗೆ ಕರೆಗಳನ್ನು ಸ್ವೀಕರಿಸದ ಹಿನ್ನೆಲೆಯಲ್ಲಿ ಅಪಾರ್ಟ್‌ಮೆಂಟ್‌ಗೆ ಬಂದು ವಿಚಾರಿಸಿದಾಗ ಆಕೆಯ ಬಗ್ಗೆ ಯಾವುದೇ ಮಾಹಿತಿ ಇಲ್ಲವೆಂದು ಅಪಾರ್ಟ್ ಮೆಂಟ್‌ನ ನಿವಾಸಿಗಳು ಹೇಳಿದ್ದಾರೆ ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ. ಈ ಕುರಿತು ನಾಪತ್ತೆ ಪ್ರಕರಣ ದಾಖಲಾಗಿದೆ.

ಮಗ ಆತ್ಮಹತ್ಯೆ; ಮನನೊಂದ ತಂದೆಯೂ ಆತ್ಮಹತ್ಯೆ

ಉಳ್ಳಾಲ: ಪುತ್ರನ ಅಗಲುವಿಕೆಯಿಂದ ಮನನೊಂದ ತಂದೆ 32 ದಿನಗಳ ನಂತರ ಆತ್ಮಹತ್ಯೆ ಶರಣಾದ ಮನಕಲುಕುವ ಘಟನೆ ವರದಿಯಾಗಿದೆ. ಆತ್ಮಹತ್ಯೆ ಮಾಡಿಕೊಂಡ ಕೇರಳ ಕುಂಬಳೆ ಬಳಿಯ ಬಂಬ್ರಾಣ ಕಲ್ಕುಲ ನಿವಾಸಿ ಕಲ್ಲಿನ ಮೇಸ್ತ್ರಿ ಕೆಲಸ ಮಾಡುತ್ತಿದ್ದ ಲೋಕೇಶ್ (52) ಎಂಬವರ ಮೃತದೇಹ ಆ.14 ರಂದು ಬೆಳಿಗ್ಗೆ ಉಳ್ಳಾಲ ಕಡಲ ಕಿನಾರೆಯಲ್ಲಿ ಪತ್ತೆಯಾಗಿದೆ.
ಪುತ್ರ ರಾಜೇಶ್ (26) ಕಳೆದ ಜು. 10 ರಂದು ನಾಪತ್ತೆಯಾಗಿದ್ದು, ಬಳಿಕ ರಾಜೇಶ್ ನ ಮೃತದೇಹ 12 ರಂದು ಬೆಳಗ್ಗೆ ಮಂಗಳೂರು ಬೆಂಗರೆ ನೇತ್ರಾವತಿ ನದಿ ತೀರದಲ್ಲಿ ಪತ್ತೆಯಾಗಿತ್ತು. ಮಗನ ಅಂತ್ಯಕ್ರಿಯೆ ಕಳೆದ ಬಳಿಕ ತಂದೆ ಲೋಕೇಶ್ ನೊಂದುಕೊಂಡಿದ್ದು, ಅಲ್ಲದೆ ಮಗನ ಸಾವಿನ ಬಳಿಕ ಮಾನಸಿಕವಾಗಿ, ಕುಗ್ಗಿ ಹೋಗಿದ್ದರು. ಆ.13 ರಂದು ಬೆಳಗ್ಗೆ 9.00 ಗಂಟೆಯ ವೇಳೆ ಪರಿಸರದ ಕೆಲವು ಮಂದಿಗೆ ಲೋಕೇಶ್ ರವರು ಮೊಬೈಲ್ ಮೂಲಕ ವಾಟ್ಸಪ್ ಸಂದೇಶ ಕಳುಹಿಸಿ “ನಾನು ಈಗ ಸೋಮೇಶ್ವರಕ್ಕೆ ಹೋಗಿ ಸಮುದ್ರಕ್ಕೆ ಹಾರುತ್ತೇನೆ. ನನ್ನ ಹೆಣ ಉಳ್ಳಾಲದಲ್ಲಿ ಸಿಗಬಹುದು” ನಾನು ಮೊಬೈಲ್ ಕೊಂಡು ಹೋಗುವುದಿಲ್ಲ ಮನೆಯಲ್ಲಿ ಇಟ್ಟು ಹೋಸ್ತೇನೆ ಎಂದು ಹೇಳಿ ಮನೆಯಿಂದ ತೆರಳಿದ್ದರು.

ವಾಟ್ಸಪ್ ಸಂದೇಶ ಕೇಳಿದ ಕೂಡಲೇ ಪರಿಸರದವರು ಕರೆ ಮಾಡಿದಾಗ ಮನೆ ಮಂದಿ ಕಾಲ್ ರಿಸೀವ್ ಮಾಡಿದ್ದರು. ಆಗ ಮನೆ ಮಂದಿ ಲೋಕೇಶ್ ರವರು ಮೊಬೈಲ್ ಮನೆಯಲ್ಲಿ ಇಟ್ಟು ಹೊರ ಹೋದ ಬಗ್ಗೆ ಮಾಹಿತಿ ನೀಡಿದ್ದರು. ಕೂಡಲೇ ಈ ವಿಷಯವನ್ನು ಉಳ್ಳಾಲ ಠಾಣೆಗೆ ಮನೆಯವರು ಹಾಗೂ ಪರಿಸರ ನಿವಾಸಿಗಳು ತಿಳಿಸಿದ್ದರು. ಲೋಕೇಶ್ ಅವರ ಮೃತದೇಹ ಉಳ್ಳಾಲದಲ್ಲಿ ಮೀನುಗಾರರಿಗೆ ಸಿಕ್ಕಿದೆ. ಬಳಿಕ ಮೃತದೇಹವನ್ನು ಉಳ್ಳಾಲ ಪೊಲೀಸರು ದೇರಳಕಟ್ಟೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಮರಣೋತ್ತರ ಪರೀಕ್ಷೆ ನಡೆಸಿದರು. ನಂತರ ಮನೆಯವರಿಗೆ ಬಿಟ್ಟು ಕೊಟ್ಟರು. ಪ್ರಕರಣ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

ಇದನ್ನೂ ಓದಿ : ರೇಷನ್ ಕಾರ್ಡ್‌ನಲ್ಲಿ ಮನೆ ಯಜಮಾನಿ ತಿದ್ದುಪಡಿಗೆ 4 ದಿನ ಅವಕಾಶ

Categories
ತೀರ್ಥಹಳ್ಳಿ

ಹೊಸಹಳ್ಳಿ ಗ್ರಾಮ ಪಂಚಾಯತ್ ನೂತನ ಅಧ್ಯಕ್ಷರಾಗಿ ನೇತ್ರಾವತಿ ಗಿರೀಶ್, ಉಪಾಧ್ಯಕ್ಷರಾಗಿ ರಮೇಶ್ ಆಯ್ಕೆ

ಹೊಸಹಳ್ಳಿ ಗ್ರಾಮ ಪಂಚಾಯತ್ ನೂತನ ಅಧ್ಯಕ್ಷರಾಗಿ ನೇತ್ರಾವತಿ ಗಿರೀಶ್, ಉಪಾಧ್ಯಕ್ಷರಾಗಿ ರಮೇಶ್ ಆಯ್ಕೆ
– ಗ್ರಾಮ ಪಂಚಾಯತ್ ಸದಸ್ಯರು, ಗ್ರಾಮಸ್ಥರ ಅಭಿನಂದನೆ

NAMMUR EXPRESS NEWS
ತೀರ್ಥಹಳ್ಳಿ: ಹೊಸಹಳ್ಳಿ ಗ್ರಾಮ ಪಂಚಾಯತ್ ನೂತನ ಅಧ್ಯಕ್ಷರಾಗಿ ನೇತ್ರಾವತಿ ಗಿರೀಶ್, ಉಪಾಧ್ಯಕ್ಷರಾಗಿ ರಮೇಶ್ ಆಯ್ಕೆ ಆಗಿದ್ದಾರೆ. ಆಯ್ಕೆ ವೇಳೆ ಗ್ರಾಮ ಪಂಚಾಯತ್ ಸದಸ್ಯರು ಮಾಜಿ ಅಧ್ಯಕ್ಷರಾದ ರಾಜೇಶ್,ಲತಾ ಪುರುಷೋತ್ತಮ್, ಮಮತ, ಸುಮಿತ್ರ, ನಾರಾಯಣ ಮೂರ್ತಿ, ಕಾಂಗ್ರೆಸ್ ನಾಯಕರಾದ ಕಾಂಗ್ರೆಸ್ ನಾಯಕರಾದ ಶಶಿಧರ್ ಈಚಲಬೈಲು, ಬಾಳೆಹಳ್ಳಿ ಪ್ರಭಾಕರ್, ವೆಂಕಟೇಶ್ ಹೆಗಡೆ, ಚಂದ್ರಹಾಸ ಬಾಳೆಹಳ್ಳಿ, ಸಂತೋಷ್ ಹೆಗ್ಡೆ ಕೈಮರ, ಶ್ರೀನಿವಾಸ್ ಕೊರನಕೋಟೆ ಸೇರಿದಂತೆ ಹಲವರು ಇದ್ದರು. 7 ಕಾಂಗ್ರೆಸ್, 2 ಬಿಜೆಪಿ, 1 ಪಕ್ಷೇತರ ಸದಸ್ಯರು ಗ್ರಾಮ ಪಂಚಾಯತ್ ಅಲ್ಲಿದ್ದಾರೆ. ಇದೀಗ ಕಾಂಗ್ರೆಸ್ ಬೆಂಬಲಿತರು ಆಯ್ಕೆ ಆಗಿದ್ದಾರೆ.

ಇದನ್ನೂ ಓದಿ : ಜನರ ಕಿವಿಗೆ ಹೂ ಮುಡಿಸುತ್ತಿರುವ ಕಾಂಗ್ರೆಸ್ ಸರ್ಕಾರ!

[embedyt] https://www.youtube.com/watch?v=p9w93rFeg28%5B/embedyt%5D

Categories
ಮಾಹಿತಿ

ರೇಷನ್ ಕಾರ್ಡ್‌ನಲ್ಲಿ ಮನೆ ಯಜಮಾನಿ ತಿದ್ದುಪಡಿಗೆ 4 ದಿನ ಅವಕಾಶ

ರೇಷನ್ ಕಾರ್ಡ್‌ನಲ್ಲಿ ಮನೆ ಯಜಮಾನಿ ತಿದ್ದುಪಡಿಗೆ 4 ದಿನ ಅವಕಾಶ
– ಗೃಹಲಕ್ಷ್ಮಿ ಹಣ ಪಡೆಯಲು ಮನೆ ಯಜಮಾನಿ ಹೆಸರು ಕಡ್ಡಾಯ

NAMMUR EXPRESS NEWS

ರೇಷನ್ ಕಾರ್ಡ್ನಲ್ಲಿ ಮನೆ ಯಜಮಾನಿ ಎಂದು ಇದ್ದವರಿಗೆ ಮಾತ್ರ ಗೃಹಲಕ್ಷ್ಮಿ ಹಣ ಸಿಗಲಿದೆ. ಆ.16ರಿಂದ 19ರವರೆಗೆ 4 ದಿನಗಳ ಕಾಲ ಸಮಯ ಬೆಳಿಗ್ಗೆ 10 ರಿಂದ ಸಂಜೆ 4 ಗಂಟೆಯವರೆಗೆ ಅವಕಾಶವಿದ್ದು, ರೇಷನ್ ಅಂಗಡಿಗೆ ಹೋಗಿ ತಿದ್ದುಪಡಿ ಮಾಡಿಕೊಂಡು ಅರ್ಜಿ ಸಲ್ಲಿಸಲು ಅವಕಾಶ ಇದೆ. ರಾಜ್ಯದಲ್ಲಿ 1.53 ಕೋಟಿ ಮಂದಿ ಪಡಿತರ ಚೀಟಿ ಹೊಂದಿದ್ದಾರೆ. ಗೃಹಲಕ್ಷ್ಮಿ ಯೋಜನೆ ಹಣ ಪಡೆಯಲು ಪಡಿತರ ಚೀಟಿಯಲ್ಲಿ ಮಹಿಳೆ ಮುಖ್ಯಸ್ಥೆ ಆಗಿರಬೇಕು. 1.22 ಕೋಟಿ ಪಡಿತರ ಚೀಟಿಯಲ್ಲಿ ಮಾತ್ರ ಮಹಿಳಾ ಮುಖ್ಯಸ್ಥರು ಎಂದಿದ್ದು, ಇವರು ಯೋಜನೆಯ ಲಾಭ ಪಡೆಯಲು ಅರ್ಹರಾಗಿರುತ್ತಾರೆ. ಉಳಿದ ಪಡಿತರ ಚೀಟಿಗಳಲ್ಲಿ ಪುರುಷರು ಮುಖ್ಯಸ್ಥರಾಗಿರುವುದರಿಂದ ಪಡಿತರ ಚೀಟಿಯಲ್ಲಿ ಯಜಮಾನಿ ಎಂದು ನಮೂದಿಸಲು ಅವಕಾಶ ನೀಡಲಾಗಿದೆ.

ರೇಷನ್ ಅಂಗಡಿಗೆ ಭೇಟಿ ನೀಡಿ ಮುಖ್ಯಸ್ಥರ ಹೆಸರು ಬದಲಾವಣೆ (ಹೆಚ್ಚುವರಿ ಫಲಾನುಭವಿಗಳ ಹೆಸರನ್ನು ಸೇರಿಸುವುದು) ಅರ್ಜಿ ಭರ್ತಿ ಮಾಡಿ ಅಗತ್ಯ ದಾಖಲೆಗಳೊಂದಿಗೆ ಸಲ್ಲಿಸಬೇಕು. ಬಯೋಮೆಟ್ರಿಕ್ ದೃಢೀಕರಣ ಮೂಲಕ ದಾಖಲೆಗಳನ್ನು ದೃಢೀಕರಿಸಿ ಆನ್‌ಲೈನ್‌ ಮೂಲಕ ಅಪ್ಲೋಡ್ ಮಾಡಿ ಸ್ವೀಕೃತಿ ಪಡೆಯಬೇಕು.

ಆಹಾರ ಇಲಾಖೆ ಕಚೇರಿಯಿಂದ ಎಸ್‌ಎಂಎಸ್ ಬರಲಿದ್ದು, ಬಳಿಕ ಸ್ವೀಕೃತಿ ಪತ್ರ ನೀಡಿ ಮನೆಯ ಯಜಮಾನಿ ಹೆಸರು ಬದಲಿಸಿದ, ಸೇರ್ಪಡೆ ಮಾಡಿದ ಪಡಿತರ ಚೀಟಿ ಪಡೆಯಬಹುದು. ಆನ್‌ಲೈನ್‌ನಲ್ಲಿ ಪಡಿತರ ಚೀಟಿ ತಿದ್ದುಪಡಿಗಾಗಿ ಈ ಕೆಳಗಿನ ವೆಬ್ ಸೈಟ್ ಗಮನಿಸಬಹುದು. http://ahara.kar.nic.in/ ಇ- ಸೇವೆಗಳ ಮೇಲೆ ಕ್ಲಿಕ್ ಮಾಡಿ, ತಿದ್ದುಪಡಿ/ ಹೊಸ ಸೇರ್ಪಡೆ ಆಯ್ಕೆ ಕ್ಲಿಕ್ ಮಾಡಿ, ಜಿಲ್ಲೆ ಆಯ್ಕೆ ಮಾಡಿ, ಅಗತ್ಯ ಮಾಹಿತಿ ಭರ್ತಿ ಮಾಡಿ ಅಗತ್ಯ ದಾಖಲೆಗಳ ಸ್ಕ್ಯಾನ್ ಪ್ರತಿ ಅಪ್ಲೋಡ್ ಮಾಡಿದ ನಂತರ ಫಾರ್ಮ್ ಸಭ್ಮಿಟ್ ಕೊಡಿ. ಅರ್ಜಿ ಸಲ್ಲಿಕೆಯ ರಿಜಿಸ್ಟರ್ ನಂಬರ್ ಸಿಗಲಿದೆ. ಈ ನಂಬ‌ರ್ ಮೂಲಕ ಅರ್ಜಿಯ ಸ್ಟೇಟಸ್ ಟ್ರ್ಯಾಕ್ ಮಾಡಬಹುದಾಗಿದೆ.

ಇದನ್ನೂ ಓದಿ : ಜನರ ಕಿವಿಗೆ ಹೂ ಮುಡಿಸುತ್ತಿರುವ ಕಾಂಗ್ರೆಸ್ ಸರ್ಕಾರ!

[embedyt] https://www.youtube.com/watch?v=p9w93rFeg28%5B/embedyt%5D

Categories
ತೀರ್ಥಹಳ್ಳಿ

ಅರೇಹಳ್ಳಿ ಗ್ರಾಮ ಪಂಚಾಯತ್ ಬಿಜೆಪಿ ಪಾಲು!

ಅರೇಹಳ್ಳಿ ಗ್ರಾಮ ಪಂಚಾಯತ್ ಬಿಜೆಪಿ ಪಾಲು!
– ನೂತನ ಅಧ್ಯಕ್ಷರಾಗಿ ಸವಿತಾ ಸುರೇಂದ್ರ, ಉಪಾಧ್ಯಕ್ಷರಾಗಿ ಗಿರೀಶ್ ಆಯ್ಕೆ

NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ತಾಲೂಕು ಅರೆಹಳ್ಳಿ ಗ್ರಾಮ ಪಂಚಾಯತ್ ಬಿಜೆಪಿ ಬೆಂಬಲಿತ ಅಧ್ಯಕ್ಷರಾಗಿ ಸವಿತಾ ಸುರೇಂದ್ರ ಹಾಗೂ ಉಪಾಧ್ಯಕ್ಷರಾಗಿ ಗಿರೀಶ್ ಕೆ.ಟಿ (ಗುಂಡ )ಆಯ್ಕೆಯಾಗಿದ್ದಾರೆ. ಅರೇಹಳ್ಳಿ ಗ್ರಾಮ ಪಂಚಾಯತ್ 10 ಮಂದಿ ಸದಸ್ಯರ ಪೈಕಿ 9 ಮಂದಿ ಬಿಜೆಪಿ, 1 ಕಾಂಗ್ರೆಸ್ ಇದ್ದು, ಈ ಹಿಂದೆ ಸಿದ್ದಾರ್ಥ ಉಂಟುಗೋಡು, ಶ್ರೀಲತಾ ಉಪಾಧ್ಯಕ್ಷರಾಗಿದ್ದರು.
ಆಯ್ಕೆ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಸದಸ್ಯರಾದ ಅರೆಹಳ್ಳಿ ಗ್ರಾಮ ಪಂಚಾಯತ್ ನೂತನ ಅಧ್ಯಕ್ಷರು ಉಪಾಧ್ಯಕ್ಷರ ಆಯ್ಕೆವೇಳೆ ಪ್ರಮುಖರಾದ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಭಾಸ್ಕರ್ ಹಾಗೂ ಸಿದ್ದಾರ್ಥ, ಉಪಾಧ್ಯಕ್ಷರಾದ ಶ್ರೀಲತಾ, ಸದಸ್ಯರು ಹಾಗೂ ಮುಖಂಡರಾದ ಯಶಸ್ವಿ ಕಡ್ತುರು, ಅವಿನಾಶ್, ಸುಬ್ರಹ್ಮಣ್ಯ, ಶಿವಕುಮಾರ್, ಯೋಗೀಶ್ ಹಾಗೂ ಪಕ್ಷದ ಪ್ರಮುಖರಾದ ರಾಘವೇಂದ್ರ ಚೊಕ್ಕಡ ಬೈಲು, ಕೇಶವ, ಮಹೇಶ್ ಕುಡ್ತನಹಳ್ಳಿ, ಅಭಿನಂದನ್ ಕೇಳೂರು, ಆದರ್ಶ ಮೇಕೇರಿ ಸೇರಿದಂತೆ ಹಲವರು ಇದ್ದರು. ನೂತನ ಅಧ್ಯಕ್ಷರು ಉಪಾಧ್ಯಕ್ಷರಿಗೆ ಮುಖಂಡರು ಹಾಗೂ ಗ್ರಾಮಸ್ಥರು ಅಭಿನಂದನೆ ಸಲ್ಲಿಸಿದರು.

ಇದನ್ನೂ ಓದಿ : ಜನರ ಕಿವಿಗೆ ಹೂ ಮುಡಿಸುತ್ತಿರುವ ಕಾಂಗ್ರೆಸ್ ಸರ್ಕಾರ!

[embedyt] https://www.youtube.com/watch?v=p9w93rFeg28%5B/embedyt%5D