Categories
ಚಿಕ್ಕಮಗಳೂರು

ಸಿರಿಮನೆ ಜಲಪಾತ ಪ್ರವಾಸಿಗರಿಗೆ ಮುಕ್ತ!

ಸಿರಿಮನೆ ಜಲಪಾತ ಪ್ರವಾಸಿಗರಿಗೆ ಮುಕ್ತ!
– ತೀವ್ರ ಮಳೆ ಕಾರಣ ಜಲಪಾತ ಪ್ರವೇಶ ನಿಷೇಧ ಆಗಿತ್ತು
– ಮಲೆನಾಡಲ್ಲಿ ಹೆಚ್ಚಿದ ಪ್ರವಾಸಿಗರ ಸಂಖ್ಯೆ

NAMMUR EXPRESS NEWS
ಶೃಂಗೇರಿ: ತೀವ್ರ ಮಳೆಯ ಕಾರಣದಿಂದ ಮುಚ್ಚಲ್ಪಟ್ಟಿದ್ದ , ಸಿರಿಮನೆ ಜಲಪಾತವನ್ನು ಶುಕ್ರವಾರ ತೆರೆಯಲಾಗಿದ್ದು , ಪ್ರವಾಸಿಗರಿಗೆ ಪ್ರವೇಶ ನೀಡಲಾಗುತ್ತಿದೆ. ಕಳೆದ 15 ದಿನಗಳಿಂದ ಮಳೆಯ ಕಾರಣ ಈ ಸಿರಿಮನೆ ಫಾಲ್ಸ್ ಪ್ರವೇಶ ನಿಷೇಧ ಮಾಡಲಾಗಿತ್ತು. ಇತ್ತೀಚಿಗೆ ಕೊಡಚಾದ್ರಿ ಪ್ರವಾಸ ಪ್ರವಾಸಿಗರಿಗೆ ಮುಕ್ತವಾಗಿತ್ತು. ಮಳೆ ಕಡಿಮೆ ಹಿನ್ನೆಲೆ ಪ್ರವಾಸಿಗರು ಮಲೆನಾಡ ಕಡೆ ಲಗ್ಗೆ ಹಾಕುತ್ತಿದ್ದೂ, ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಯ ಪ್ರವಾಸಿ ತಾಣಗಳಲ್ಲಿ ಪ್ರವಾಸಿಗರು ಹೆಚ್ಚಾಗಿರುವುದು ಕಂಡು ಬಂತು. ಕುಪ್ಪಳಿ, ಕುಂದಾದ್ರಿ, ಕವಲೆದುರ್ಗಾ, ಶೃಂಗೇರಿ, ಹೊರನಾಡು, ಸಿಗಂದೂರು, ಶಿವಮೊಗ್ಗ, ಮುಳ್ಳಯ್ಯನಗಿರಿ, ಕೆಮ್ಮಣ್ಣುಗುಂಡಿ ಸೇರಿ ಎಲ್ಲೆಡೆ ಪ್ರವಾಸಿಗರು ಹೆಚ್ಚಾಗಿರುವುದು ಕಂಡು ಬರುತ್ತಿದೆ.

ಹೋಂ ಸ್ಟೇ, ಹೋಟೆಲ್ ರಶ್ ರಶ್

ಶಿವಮೊಗ್ಗ, ಚಿಕ್ಕಮಗಳೂರು, ತೀರ್ಥಹಳ್ಳಿ, ಶೃಂಗೇರಿ, ಹೊರನಾಡು ಭಾಗದಲ್ಲಿ ವೀಕೆಂಡ್ ಪ್ರವಾಸೋದ್ಯಮ ಹೆಚ್ಚುತ್ತಿದೆ. ಹೋಂ ಸ್ಟೇ, ಹೋಟೆಲ್, ಲಾಡ್ಜ್ ವ್ಯವಹಾರ ಕೊಂಚ ಏರಿಕೆ ಆಗುತ್ತಿದೆ.

ಒಂದು ವಾರದಿಂದ ಮಳೆಯೇ ಇಲ್ಲ

ಮಲೆನಾಡ ಬಹುತೇಕ ಕಡೆ ಒಂದು ವಾರದಿಂದ ಮಳೆಯೇ ಇಲ್ಲದಾಗಿದೆ. ಬಿಸಿಲು ಕಾಣುತ್ತಿದೆ. ಹೀಗಾಗಿ ಜನ ಮಲೆನಾಡ ಕಡೆ ಬರುತ್ತಿದ್ದಾರೆ.

ಇದನ್ನೂ ಓದಿ : ರೇಷನ್ ಕಾರ್ಡ್‌ನಲ್ಲಿ ಮನೆ ಯಜಮಾನಿ ತಿದ್ದುಪಡಿಗೆ 4 ದಿನ ಅವಕಾಶ

Categories
ತೀರ್ಥಹಳ್ಳಿ

ವಿದುಷಿ ಅನಘ ಆಚಾರ್ಯ ರಂಗ ಪ್ರವೇಶ

ವಿದುಷಿ ಅನಘ ಆಚಾರ್ಯ ರಂಗ ಪ್ರವೇಶ
– ಆ.20ರಂದು ತೀರ್ಥಹಳ್ಳಿಯಲ್ಲಿ ಭರತ ನಾಟ್ಯ ರಂಗ ಪ್ರವೇಶ
– ನಾಟ್ಯ, ಸಂಗೀತ, ನಟನೆ ಎಲ್ಲದಕ್ಕೂ ಸೈ

NAMMUR EXPRESS NEWS
ತೀರ್ಥಹಳ್ಳಿ: ಸುಮುಖ ಸಂಗೀತ ಮತ್ತು ನೃತ್ಯ ಶಾಲೆ (ರಿ.) ರಥಬೀದಿ, ತೀರ್ಥಹಳ್ಳಿಯ ವಿದುಷಿ ಶ್ರೀಲತಾ ಪ್ರೀತಮ್ ಗಂಧರ್ವ ಇವರ ಶಿಷ್ಯೆ, ತೀರ್ಥಹಳ್ಳಿ ಪ್ರಸಿದ್ಧ ಜ್ಯುವೆಲ್ಲರ್ ಗಾಯತ್ರಿ ಜ್ಯುವೆಲ್ಲರ್ ಮಾಲೀಕರಾದ ಶ್ರೀ ಅನಂತಪದ್ಮನಾಭ ಮತ್ತು ಶ್ರೀಮತಿ ಮೋಹಿನಿ ಅವರ ಪುತ್ರಿ ವಿದುಷಿ ಕು. ಅನಘ ಆಚಾರ್ಯ ಅವರ ಭರತ ನಾಟ್ಯ ರಂಗ ಪ್ರವೇಶ ಕಾರ್ಯಕ್ರಮ ಆ.20ರಂದು ತೀರ್ಥಹಳ್ಳಿಯಲ್ಲಿ ನಡೆಯಲಿದೆ. ತೀರ್ಥಹಳ್ಳಿಯ ಸೊಪ್ಪುಗುಡ್ಡೆಯ ಶ್ರೀ ಶಾಂತವೇರಿ ಗೋಪಾಲಗೌಡ ರಂಗಮಂದಿರದಲ್ಲಿ ಆ.20ರ ಭಾನುವಾರ ಸಂಜೆ 5:30ರಿಂದ ನಡೆಯಲಿರುವ ಕಾರ್ಯಕ್ರಮಕ್ಕೆ ಸರ್ವರನ್ನು ಸ್ವಾಗತಿಸಲಾಗಿದೆ.

ಭೀಮೇಶ್ವರ ಜೋಶಿ ದಂಪತಿಗಳ ಆಗಮನ

ಭರತ ನಾಟ್ಯ ರಂಗಪ್ರವೇಶ ಕಾರ್ಯಕ್ರಮದಲ್ಲಿ ಶ್ರೀ ಭೀಮೇಶ್ವರ ಜೋಶಿ ಧರ್ಮಕರ್ತರು, ಶ್ರೀ ಆದಿಶಕ್ಯಾತ್ಮಕ ಅನ್ನಪೂರ್ಣೇಶ್ವರಿ ದೇವಸ್ಥಾನ, ಶ್ರೀ ಕ್ಷೇತ್ರ ಹೊರನಾಡು ಮತ್ತು ಶ್ರೀಮತಿ ರಾಜಲಕ್ಷ್ಮಿ ಬಿ. ಜೋಶಿ, ಶ್ರೀ ಕ್ಷೇತ್ರ ಹೊರನಾಡು ಇವರು ಆಶೀರ್ವಚನ ನೀಡಲಿದ್ದಾರೆ. ಶ್ರೀ ಶಂಕರ ನಾರಾಯಣ ಎಂ. ಎಸ್‌. ಅಧ್ಯಕ್ಷರು ಶ್ರೀ ಸುಮುಖ ಸಂಗೀತ ಮತ್ತು ನೃತ್ಯ ಶಾಲೆ (ರಿ.) ಇವರು ಅಧ್ಯಕ್ಷತೆ ವಹಿಸಲಿದ್ದಾರೆ. ವಿಶೇಷ ಆಹ್ವಾನಿತರಾಗಿ ವಿದುಷಿ ಪ್ರತಿಮಾ ಶ್ರೀಧರ್, ವಿದ್ವಾನ್ ಶ್ರೀಧರ್ ಹೊಳ್ಳ (ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತ ದಂಪತಿಗಳು) ನಿರ್ದೇಶಕರು, ಭರತಾಂಜಲಿ ನೃತ್ಯ ಸಂಸ್ಥೆ, ಮಂಗಳೂರು ಇವರು ಭಾಗವಹಿಸಲಿದ್ದಾರೆ.

ಅನಘ ಆಚಾರ್ಯ ಬಗ್ಗೆ….

ವಿದುಷಿ ಅನಘ ಆಚಾರ್ಯ ತನ್ನ ಮೂರನೇ ವಯಸ್ಸಿನಿಂದ ಬಾಲ ಪ್ರತಿಭೆಯಾಗಿ ಗುರುತಿಸಿಕೊಂಡಿದ್ದಾರೆ. ಇವರ ಪ್ರತಿಭೆಗೆ ಹೆತ್ತವರ ಪ್ರೋತ್ಸಾಹವೇ ಪುಷ್ಟಿ. ತಂದೆ ಶ್ರೀ ಅನಂತ ಪದ್ಮನಾಭ ಆಚಾರ್ಯ, ತಾಯಿ ಶ್ರೀಮತಿ ಮೋಹಿನಿ ಅನಂತ ಆಚಾರ್ಯ,ಹಾಗೂ ಸಹೋದರ ಚಿ ಅಮೋಘ ಆಚಾರ್ಯ ಅವರ ಸಹಕಾರ ಇದೆ. ಅನಘ ಆಚಾರ್ಯ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣವನ್ನು ವಾಗ್ದೇವಿ ಆಂಗ್ಲ ಮಾಧ್ಯಮ ಪ್ರೌಢಶಾಲೆ ತೀರ್ಥಹಳ್ಳಿ, ಪದವಿ ಪೂರ್ವ ಶಿಕ್ಷಣವನ್ನು ಆಳ್ವಾಸ್ ಶಿಕ್ಷಣ ಸಂಸ್ಥೆಯಲ್ಲಿ, ಪದವಿ ಶಿಕ್ಷಣವನ್ನು (ಬಿ ಎಸ್ ಸಿ ಸೈಕಾಲಜಿ) ಜೆಎಸ್ ಎಸ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ಅಂಡ್ ರಿಸರ್ಚ್ ಮೈಸೂರಿನಲ್ಲಿ ಪೂರ್ಣಗೊಳಿಸಿದ್ದಾರೆ.

ಅನೇಕ ಸ್ಪರ್ಧೆ ಗೆಲುವು, ಪ್ರಶಸ್ತಿ

ಭರತನಾಟ್ಯ ತರಬೇತಿಯನ್ನು ಕಳೆದ 18 ವರ್ಷಗಳಿಂದ ತೀರ್ಥಹಳ್ಳಿಯ ಪ್ರತಿಷ್ಠಿತ ಶ್ರೀ ಸುಮುಖ ಸಂಗೀತ ಮತ್ತು ನೃತ್ಯ ಶಾಲೆಯ ವಿದುಷಿ ಶ್ರೀಲತಾ ಪ್ರೀತಮ್ ಗಂಧರ್ವ ಇವರಿಂದ ಪಡೆಯುತ್ತಿದ್ದು ನಿರಂತರ ಪರಿಶ್ರಮ ಮತ್ತು ಸತತ ಅಭ್ಯಾಸದಿಂದ ಜೂನಿಯರ್ ಸೀನಿಯರ್ ವಿದ್ವತ್ ಪೂರ್ವ ಮತ್ತು ವಿದ್ವತ್ ಅಂತಿಮ ಪರೀಕ್ಷೆಯಲ್ಲಿ ಉನ್ನತ ದರ್ಜೆಯ ತೆರ್ಗಡೆ ಹೊಂದಿದ್ದಾರೆ. ಜಿಲ್ಲೆಗೆ ತೃತೀಯ ಸ್ಥಾನ ಪಡೆದಿದ್ದಾರೆ. ಕರ್ನಾಟಕ ಶಾಸ್ತ್ರೀಯ ಸಂಗೀತವನ್ನು ಶ್ರೀಮತಿ ಲಕ್ಷ್ಮಿ ಶಂಕರ ನಾರಾಯಣ ಇವರ ಬಳಿ ಅಭ್ಯಾಸಿಸಿ ಜೂನಿಯರ್ ಹಂತದ ಪರೀಕ್ಷೆಯಲ್ಲಿ ಉತ್ತಮ ದರ್ಜೆಯಲ್ಲಿ ತೇರ್ಗಡೆ ಹೊಂದಿದ್ದಾರೆ. ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ಶಿಷ್ಯವೇತರ ಪಡೆದಿದ್ದಾರೆ.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಡೆಸಿ ಬಾಲ ಪ್ರತಿಭೆ ಕಲಾ ಪ್ರತಿಭೋತ್ಸವ ಸ್ಪರ್ಧೆ, ಗುರುದೇವ ಡ್ಯಾನ್ಸ್ ಅಂಡ್ ಮ್ಯೂಸಿಕ್ ನ್ಯಾಷನಲ್ ಫೆಸ್ಟಿವಲ್ ಹೆಜ್ಜೆಗೊಂದು ಗೆಜ್ಜೆ, ಸ್ವರ ಸನ್ನಿಧಿ ಟ್ರಸ್ಟ್ ಬೆಂಗಳೂರು ನಿಸಾರ್ ಗೀತಾ ಸಂಭ್ರಮೋತ್ಸವ, ಶಂಕರ ವಾಹಿನಿ ರಾಜ್ಯಮಟ್ಟದ ಪ್ರತಿಭಾ ಕಾರಂಜಿ ಮುಂತಾದ ಸ್ಪರ್ಧೆಗಳಲ್ಲಿ ಭಾಗವಹಿಸಿ ಹಿರಿಯ ಕಲಾವಿದರಿಗಳಿಂದ ಮೆಚ್ಚುಗೆಗೆ ಆಶೀರ್ವಾದ ಪಡೆದು ಬಹುಮಾನಗಳಿಸಿದ ಕೀರ್ತಿ ಇವರಿಗೆ ಸಂದಿವೆ.

ಕರ್ನಾಟಕ ಸರ್ಕಾರ ನಡೆಸಿದ ಕಲಾ ಶ್ರೀ ಪುರಸ್ಕಾರ ವಿಭಾಗಕ್ಕೆ ಆಯ್ಕೆಯಾಗಿದ್ದಾರೆ. ಜೀ ವಾಹಿನಿ ನಡೆಸುವ ಡ್ಯಾನ್ಸ್ ಇಂಡಿಯಾ ಡ್ಯಾನ್ಸ್ ರಿಯಾಲಿಟಿ ಶೋ ನಲ್ಲಿ ಭಾಗವಹಿಸಿದ್ದಾಳೆ. ಪ್ರೀತಿಯಿಂದ ಧಾರಾವಾಹಿ, ಶೇಷು, ಅಮ್ಮ ನನ್ ರಾಂಗ್ ಬರ್ತೀನಿ ಚಲನಚಿತ್ರಗಳಲ್ಲಿ ಉತ್ತಮ ಪಾತ್ರ ನಿರ್ವಹಿಸಿದ್ದಾರೆ.

ಸುಮುಖ ಸಂಸ್ಥೆಯ ಸಾಧನೆ

ಸುಮುಖ ಸಂಸ್ಥೆಯ ವತಿಯಿಂದ ಚಂದನ ವಾಹಿನಿಯ ಈ ಮಣ್ಣು ನಮ್ಮದು ಕಾರ್ಯಕ್ರಮ, ಶ್ರೀ ಕ್ಷೇತ್ರ ಕೈವಾರ, ಉಡುಪಿ,, ಹಾಸನ, ಚಿತ್ರದುರ್ಗ, ಹೊರನಾಡು, ಶೃಂಗೇರಿ ತೀರ್ಥಹಳ್ಳಿ ಸೇರಿದಂತೆ ಅನೇಕ ಕಾರ್ಯಕ್ರಮ ನೀಡಿದ್ದಾರೆ. ಕಾಳಿಂಗ ಮರ್ಧನ, ಗೀತ-ಗೋವಿಂದ -ಸೀತಾ ಕಲ್ಯಾಣ,ಲವ-ಕುಶ,ಪರಶುರಾಮ ಮುಂತಾದ ನೃತ್ಯ ರೂಪಗಳಲ್ಲಿ ಪ್ರಮುಖ ಪಾತ್ರ ವಹಿಸಿದ್ದಾಳೆ. ಪುಣ್ಯಕೋಟಿ ನೃತ್ಯ ರೂಪಕದಲ್ಲಿ ಕರುವಿನ ಪಾತ್ರ ನಿರ್ವಹಿಸಿ ಉತ್ತಮ ಪ್ರದರ್ಶನ ನೀಡಿ ಅಪಾರ ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ವಿದುಷಿ ಶ್ರೀಲತಾ ಪ್ರೀತಮ್ ಗಂಧರ್ವ ಕಲಾ ಸಾಧನೆ

ವಿದುಷಿ ಶ್ರೀಲತಾ ಪ್ರೀತಮ್ ಗಂಧರ್ವ ಇವರಿಗೆ ನೃತ್ಯ ಕಲೆಯೆಂದರೆ ಬಾಲ್ಯ ದಿನಗಳಿಂದಲೇ ಅಚ್ಚುಮೆಚ್ಚು ಇವರ ಪ್ರಾರಂಭದ ಭರತನಾಟ್ಯ ಕಲಿಕೆಯ ನೃತ್ಯ ಗುರುಗಳಾದ ವಿದ್ವಾನ್ ಕೇಶವಕುಮಾರ್ ಇವರಲ್ಲಿ ಜೂನಿಯರ್ ತರಬೇತಿ ಗುರು ವಿದ್ವಾನ್ ರವಿದಾತಾರ್,, ವಿದುಷಿ ಗೌತಮಿ ವಿದ್ವಾನ್ ನಾರಾಯಣ್ ಇವರಲ್ಲಿ ಸೀನಿಯರ್ ತರಬೇತಿ, ನಂತರ ಚೆನ್ನೈ ಕಲಾಕೇತ್ರದ ಗುರುವಿದ್ವಾನ್ ಹರಿಪದ್ಮನ್ ಮತ್ತು ವಿದುಷಿ ದಿವ್ಯ ಹರಿಪದ್ಮನ್ ಇವರಲ್ಲಿ ಅಭ್ಯಾಸಿಸಿ ವಿದ್ವತ್ ಪೂರ್ವ ಅಂತಿಮ ಪರೀಕ್ಷೆಗಳನ್ನು ಪೂರೈಸಿದ್ದಾರೆ. ಕಲೈ ಕಾವೇರಿ ಕಾಲೇಜ್ ಆಫ್ ಫೈನ್ ಆರ್ಟ್ಸ್, ದಾಸನ್ ಯೂನಿವರ್ಸಿಟಿಯಲ್ಲಿ ಪ್ರಿಯಾಶ್ರೀರಾಮ್ ಇವರ ಮಾರ್ಗದರ್ಶನದಲ್ಲಿ ಭರತನಾಟ್ಯ ಎಂಎ ಪದವಿ ಪಡೆದಿದ್ದಾರೆ.

ವಿದ್ವಾನ್ ನುಗ್ಗಿ ಮಕ್ಕಿ ರಾಮಚಂದ್ರರಾವ್ ಇವರಲ್ಲಿ ಐದು ವರ್ಷಗಳ ಕಾಲ ಮೃದಂಗ ಅಭ್ಯಾಸ ಹಾಗೂ ತಾಯಿಯವರಾದ ಶ್ರೀಮತಿ ಲಕ್ಷ್ಮೀನಾರಾಯಣ ಇವರಲ್ಲಿ ಸಂಗೀತ ಅಭ್ಯಾಸ ನಡೆಸುತ್ತಿದ್ದು,ಉತ್ತಮ ಅಂಕಗಳೊಂದಿಗೆ ತೆರ್ಗಡೆ ಹೊಂದಿದ್ದಾರೆ.
2013 ರಲ್ಲಿ ಗುರುವಿದ್ವಾನ್ ಮತ್ತು ಮತ್ತು ವಿದುಷಿ ದಿವ್ಯಹರಿಪದ್ಮನ್ ಇವರ ಮಾರ್ಗದರ್ಶನದಲ್ಲಿ ರಂಗ ಪ್ರವೇಶ ಪೂರೈಸಿ ನೃತ್ಯ ಜೀವನಕ್ಕೆ ತಮ್ಮನ್ನು ಸಮರ್ಪಿಸಿಕೊಂಡ ವಿದುಷಿ ಶ್ರೀಲತಾ ಅವರು ಸುಮುಖ ಸಂಗೀತ ನೃತ್ಯ ಶಾಲೆಯಲ್ಲಿ ನೂರಾರು ಮಕ್ಕಳಿಗೆ ನೃತ್ಯ ತರಬೇತಿಯನ್ನು ಕಳೆದ 18 ವರ್ಷಗಳಿಂದ ನೀಡುತ್ತಿತ್ತು ಉತ್ತಮ ಶಿಕ್ಷಕಿ ಮತ್ತು ಕಲಾವಿದ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಅನೇಕರ ನೃತ್ಯ ಬಂಧಗಳನ್ನು ಹಾಗೂ ನೃತ್ಯ ರೂಪಗಳನ್ನು ಸ್ವಯಂ ನಿರ್ದೇಶಿಸಿದ್ದಾರೆ ಇದರಲ್ಲಿ ದಶಾವತಾರ, ಗೀತ ಗೋವಿಂದ, ಪುಣ್ಯಕೋಟಿ.ನವದುರ್ಗೆ,ಪರಶುರಾಮ,ಸೀತಾಕಲ್ಯಾಣ,ಪ್ರಮುಖ ನೃತ್ಯ ರೂಪಕಗಳು.
ಇವರು ಸಂಗೀತ ವೃತ್ತಿ ಅಕಾಡೆಮಿಯ ಶಿಷ್ಯವೇತನ, ಸೆಂಟರ್ ಫಾರ್ ಕಲ್ಚರ್ ರಿಸೋರ್ಸ್ ಅಂಡ್ ಟ್ರೈನಿಂಗ್ ವತಿಯಿಂದ ಏಳು ವರ್ಷ ಶಿಷ್ಯವೇತನ ಪಡೆದಿದ್ದಾರೆ. ದೂರದರ್ಶನ’ ಬಿ ‘ಗ್ರೇಡ್ ಕಲಾವಿದರಾಗಿದ್ದು ಬೆಂಗಳೂರು,ಮೈಸೂರು, ಶ್ರೀಕ್ಷೇತ್ರ ಕೈವಾರ ಉಡುಪಿ ರಜಾ0ಗಣ, ಹಾಸನ, ಸೇರಿದಂತೆ ಹೊರ ರಾಜ್ಯಗಳಾದ ದಿಯು -ದಾಮನ್ ನವದೆಹಲಿ,ಮಧುರೈ,ಚೆನ್ನೈ, ಕೇರಳ ಸೇರಿದಂತೆ ಹಲವಾರು ನೃತ್ಯ ಕಾರ್ಯಕ್ರಮಗಳನ್ನು ನೀಡಿದ್ದಾರೆ.

ಪಕ್ಕವಾದ್ಯ

ಹಾಡುಗಾರಿಕೆ: ವಿದುಷಿ ಡಾ. ಪ್ರಿಯಾ ಶ್ರೀ ರಾವ್,ಬೆಂಗಳೂರು
ನಟುವಾಂಗ : ವಿದುಷಿ ಶ್ರೀಲತಾ ಪ್ರೀತಮ್ ಗಂಧರ್ವ ಶಿವಮೊಗ್ಗ
ಮೃದಂಗ : ವಿದ್ವಾನ್ ಬಾಲಚಂದ್ರ ಭಗವತ್ ಉಡುಪಿ,
ವೈಲಿನ್: ವಿದ್ವಾನ್ ಶ್ರೀ ಗಣರಾಜು ಕಾರ್ಲೆ ಕಾಸರಗೋಡು
ಕೊಳಲು : ವಿದ್ವಾನ್ ಶ್ರೀ ದೀಪಕ್ ಹೆಬ್ಬಾರ್ ಬೆಂಗಳೂರು,

ಸಹಕಾರ

ನಿರೂಪಣೆ: ವಿದ್ವಾನ್ ಚಿ,ಆದಿತ್ಯ ಜಿ.ಎಸ್ ವಿದುಷಿ ಕುಮಾರಿ ಸಿಂಧು ಪಿ ಭಟ್
ವಸ್ತು ಅಲಂಕಾರ : ಪ್ರಭಾತ್ ವಸ್ತ್ರ ವೈಭವ ಬೆಂಗಳೂರು, ಪ್ರಸಿದ್ಧಿ ಕಾಸ್ಟ್ಯೂಮ್ ಬೆಂಗಳೂರು,
ಸ್ಥಳಾವಕಾಶ : ಪಟ್ಟಣ ಪಂಚಾಯಿತಿ ತೀರ್ಥಹಳ್ಳಿ,
ಧ್ವನಿ : ಶ್ರೀ ಗುರುರಾಜ್ ಸೌಂಡ್ಸ್ ತೀರ್ಥಹಳ್ಳಿ
ಬೆಳಕು: ಶ್ರೀ ಶಿವಕುಮಾರ್ ತೀರ್ಥಹಳ್ಳಿ,
ಛಾಯಾಚಿತ್ರ: ಅರ್ಜುನ್ ಜಿತ್ ಬೆಂಗಳೂರು,
ಛಾಯಾಗ್ರಹಣ : ಡಿಜಿ ಗೋ ತೀರ್ಥಹಳ್ಳಿ
ಮುದ್ರಣ: ಪ್ರಸಾದ್ ಗ್ರಾಫಿಕ್ಸ್ ಬೆಂಗಳೂರು

ಸರ್ವರಿಗೂ ಆದರದ ಸ್ವಾಗತ: ಅಧ್ಯಕ್ಷರು ಮತ್ತು ಅಧ್ಯಕ್ಷರು ಶಿಕ್ಷಣ ಮತ್ತು ವಿದ್ಯಾರ್ಥಿ ವೃಂದ, ಶ್ರೀ ಸುಮುಖ ಸಂಗೀತ ಮತ್ತು ನೃತ್ಯ ಶಾಲೆ ಶ್ರೀ ಅನಂತ ಪದ್ಮನಾಭ ಆಚಾರ್ಯ, ಶ್ರೀಮತಿ ಮೋಹಿನಿ ಎಂ ಆಚಾರ್ಯ, ಶ್ರೀ ಗಾಯತ್ರಿ ಜುವೆಲರ್ಸ್ ರಥ ಬೀದಿ ತೀರ್ಥಹಳ್ಳಿ

ಇದನ್ನೂ ಓದಿ : ರೇಷನ್ ಕಾರ್ಡ್‌ನಲ್ಲಿ ಮನೆ ಯಜಮಾನಿ ತಿದ್ದುಪಡಿಗೆ 4 ದಿನ ಅವಕಾಶ

Categories
ರಾಜ್ಯ

ಟಾಪ್ ನ್ಯೂಸ್ ಕರ್ನಾಟಕ 18-08-2023

ಹೃದಯಾಘಾತಕ್ಕೆ ಬಲಿಯಾದ ಯುವ ನಟ!
– ಹಿಂದಿ, ತಮಿಳು ಕಿರುತೆರೆಯಲ್ಲಿ ಹೆಸರು ಮಾಡಿದ್ದ ಕನ್ನಡಿಗ
– ಕಾಡಾನೆಯ ದಾಳಿಗೆ 60 ವರ್ಷದ ವ್ಯಕ್ತಿ ಬಲಿ
– 1500 ಎಳೆ ನೀರು ಕದ್ದವರು ಗೂಗಲ್ ಪೇ ಮೂಲಕ ಸಿಕ್ಕಿ ಬಿದ್ದರು!
– ಸಾಲ: ಪತ್ರ ಬರೆದು ನಾಪತ್ತೆಯಾದ ಅಧಿಕಾರಿ!

NAMMUR EXPRESS NEWS
ಮಂಡ್ಯ: ಇತ್ತೀಚಿಗೆ ತಾನೇ ವಿಜಯ ರಾಘವೇಂದ್ರ ಪತ್ನಿ ಹೃದಯಾಘಾತವಾಗಿ ಮೃತಪಟ್ಟ ಘಟನೆ ಮಾಸುವ ಮುನ್ನವೇ 24 ವರ್ಷ ಯುವ ನಟ ಹೃದಯಾಘಾತದಿಂದ ದುರ್ಮರಣಕ್ಕೀಡಾದ ಘಟನೆ ನಡೆದಿದೆ. ಮೃತನನ್ನು ಪವನ್ ಎಂದು ಗುರುತಿಸಲಾಗಿದೆ. ಮೂಲತಃ ಇವರು ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲೂಕಿನ ಹರಿಹರಪುರ ಗ್ರಾಮದವರಾಗಿದ್ದು, ತಂದೆ ನಾಗರಾಜು, ತಾಯಿ ಸರಸ್ವತಿಯೊಂದಿಗೆ ಮುಂಬೈನಲ್ಲಿ ನೆಲೆಸಿದ್ದರು. ಮೃತ ಪವನ್ ಹಿಂದಿ ಹಾಗೂ ತಮಿಳು ಕಿರುತೆರೆಯಲ್ಲಿ ಕಲಾವಿದರಾಗಿ ಹೊರಹೊಮ್ಮುತ್ತಿದ್ದರು. ಅಲ್ಲದೆ ಬೆಳ್ಳಿ ತೆರೆ ಚಿತ್ರಗಳಲ್ಲಿ ಅಭಿನಯಿಸುವ ಕನಸು ಕೂಡ ಕಂಡಿದ್ದರು. ಆದರೆ ಪವನ್ ಗುರುವಾರ ನಸುಕಿನ ಜಾವ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.

ಕಾಡಾನೆಯ ದಾಳಿಗೆ 60 ವರ್ಷದ ವ್ಯಕ್ತಿ ಬಲಿ!

ಕಾಡಾನೆ ದಾಳಿಗೆ ವ್ಯಕ್ತಿಯೋರ್ವ ಮೃತಪಟ್ಟಿರುವ ಘಟನೆ ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ತೋಕೆರೆ ಸಮೀಪ ನಡೆದಿದೆ. ಹನೂರು ತಾಲೂಕಿನ ಮಾರ್ಟಳ್ಳಿ ಗ್ರಾಮದ ಚೆನ್ನ ಮಾದಯ್ಯ (60)ಮೃತಪಟ್ಟ ದುರ್ದೈವಿ. ಚೆನ್ನಮಾದಯ್ಯ ಅನ್ಯ ಕಾರ್ಯ ನಿಮಿತ್ತ ತೋಕೆರೆ ಗ್ರಾಮಕ್ಕೆ ತೆರಳಿ ವಾಪಸ್ ಗ್ರಾಮಕ್ಕೆ ಬರುತ್ತಿದ್ದ ವೇಳೆ ಕಾಡಾನೆ ದಾಳಿ ನಡೆಸಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಈ ಸಂಬಂಧ ರಾಮಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

1500 ಎಳೆ ನೀರು ಕದ್ದವರು ಗೂಗಲ್ ಪೇ ಮೂಲಕ ಸಿಕ್ಕಿ ಬಿದ್ದರು!

ಬೆಂಗಳೂರಿನ ಜಯನಗರ ರಾಷ್ಟ್ರೀಯ ವಿದ್ಯಾಲಯ ಮೆಟ್ರೋ ನಿಲ್ದಾಣದ ಬಳಿ ರಾತ್ರೋರಾತ್ರಿ ಟಾಟಾ ಏಸ್ ವಾಹನದಲ್ಲಿ ಬಂದ ಖದೀಮರು ರಸ್ತೆ ಬದಿಯಲ್ಲಿ ಇಟ್ಟಿದ್ದ ಬರೋಬ್ಬರಿ 1,500 ಎಳನೀರನ್ನು ಕದ್ದುಕೊಂಡು ಹೋಗಿರುವ ಘಟನೆ ಆಗಸ್ಟ್ 7ರಂದು ಮುಂಜಾನೆ ಕಳ್ಳತನ ನಡೆದಿರುವುದು ವರದಿಯಾಗಿದೆ. ಈ ಬಗ್ಗೆ ಜಯನಗರ ಪೊಲೀಸ್ ಠಾಣೆಯಲ್ಲಿ ಮಾಲೀಕ ಸಲೀಂ ದೂರು ದಾಖಲಿಸಿದ್ದಾರೆ. ಕ್ಯಾಂಟರ್ ನಲ್ಲಿ ಬಂದ ಕಳ್ಳರು ಸುಮಾರು 1,500 ಎಳನೀರನ್ನು ಕಳ್ಳತನ ಮಾಡಿದ್ದಾರೆ. ನಂಬರ್ ಪ್ಲೇಟ್‌ಗೆ ಮಸಿ ಬಳಿದು ಖದೀಮರು ಕೃತ್ಯ ಎಸಗಿದ್ದಾರೆ.ಮೊದಲಿಗೆ ಇದನ್ನು ಸಣ್ಣ ಕೇಸ್ ಎಂದು ಪೊಲೀಸರು ಕಡೆಗಣಿಸಿದ್ದರು. ಆದರೆ ಬಳಿಕ ಯಾವುದೇ ಸುಳಿವೂ ಸಿಗದ ಆರೋಪಿಗಳನ್ನು ಬಂಧಿಸಿದ್ದೇ ರೊಚಕ ಎನಿಸಿಕೊಂಡಿದೆ.ಘಟನಾ ಸ್ಥಳದಲ್ಲಿ ಆರೋಪಿಗಳು ಯಾವುದೇ ಸುಳಿವು ಬಿಟ್ಟಿರಲಿಲ್ಲ. ಬಳಿಕ ಪೊಲೀಸರು ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿದಾಗ ಗೂಗಲ್ ಪೇ ಬ್ಲೂ ದೊರೆತಿದೆ.

ಖದೀಮರ ಸೆರೆಗಾಗಿ ಪೊಲೀಸರು ಸುಮಾರು 60ಕ್ಕೂ ಹೆಚ್ಚು ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿದ್ದಾರೆ. ಈ ವೇಳೆ ಕಳ್ಳರು ಮುಂಜಾನೆ ಉತ್ತರಹಳ್ಳಿ ಬಳಿ ಟೀ ಕುಡಿದ ದೃಶ್ಯ ಪತ್ತೆಯಾಗಿತ್ತು. ಅದೇ ಜಾಗದಲ್ಲಿ ಗೂಗಲ್ ಪೇನಲ್ಲಿ ಹಣ ಪಾವತಿ ಮಾಡಿದ್ದರು. ಬಳಿಕ ಅಲ್ಲಿಗೆ ತೆರಳಿದ ಪೊಲೀಸರು ಗೂಗಲ್ ಪೇ ನಂಬರ್ ಪಡೆದು ಯಾವ ಬ್ಯಾಂಕ್ ಖಾತೆಯಿಂದ ಹಣ ಸಂದಾಯ ಆಗಿದೆ ಎಂದುಪರಿಶೀಲಿಸಿದ್ದಾರೆ. ಈ ಮೂಲಕ ಪೊಲೀಸರು ಕಳ್ಳರ ಸುಳಿವನ್ನು ಪಡೆದಿದ್ದರು.ಘಟನೆಗೆ ಸಂಬಂಧಿಸಿದಂತೆ ತನಿಖೆ ನಡೆಸಿದ ಪೊಲೀಸರು ಇದೀಗ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಗೌತಮ್, ರಘು ಹಾಗೂ ಮಣಿಕಂಠ ಬಂಧಿತ ಆರೋಪಿಗಳು. ಈ ಮೂವರ ಮೇಲೆ ಈ ಹಿಂದೆ ಕೂಡಾ ಹಲವಾರು ಕೇಸ್‌ಗಳು ದಾಖಲಾಗಿವೆ. ರಘು ಮೇಲೆ ಕೊಲೆ ಯತ್ನ ಪ್ರಕರಣ ಕೂಡಾ ದಾಖಲಾಗಿದೆ.

ಸಾಲ: ಪತ್ರ ಬರೆದು ನಾಪತ್ತೆಯಾದ ಅಧಿಕಾರಿ!

ಚಾಮರಾಜನಗರ ತಾಲ್ಲೂಕು ಬಾನಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜೀವಿಶ್ ಕುಮಾರ್ ಪತ್ರ ಬರೆದಿಟ್ಟು ನಾಪತ್ತೆಯಾಗಿರುವ ಘಟನೆ ನಡೆದಿದೆ. ಯಳಂದೂರು ತಾಲ್ಲೂಕು ಗೂಳಿಪುರ ಗ್ರಾಮದ ಜೀವಿಶ್ ಕುಮಾರ್ ನಾಪತ್ತೆಯಾದವರಾಗಿದ್ದಾರೆ. ಸಾಲದ ಒತ್ತಡ ತಡೆಯಲು ಆಗುತ್ತಿಲ್ಲ, ನನ್ನನ್ನು ಹುಡುಕಬೇಡಿ, ಎಲ್ಲರಿಗೂ ಧನ್ಯವಾದಗಳು ಎಂದು ಅವರು ಪತ್ರ ಬರೆದಿಟ್ಟಿದ್ದಾರೆ. ಜೀವಿಶ್ ಕುಮಾರ್ ಬೆಳಗ್ಗೆಯಿಂದ ನಾಪತ್ತೆಯಾಗಿದ್ದಾರೆ. ಇವರು ಕಳೆದ ಇಪ್ಪತ್ತು ವರ್ಷಗಳಿಂದ ಕೃಷಿ ಪತ್ತಿನ ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆಲಸ ಮಾಡುತ್ತಿದ್ದರು.

ಇದನ್ನೂ ಓದಿ : ರೇಷನ್ ಕಾರ್ಡ್‌ನಲ್ಲಿ ಮನೆ ಯಜಮಾನಿ ತಿದ್ದುಪಡಿಗೆ 4 ದಿನ ಅವಕಾಶ

Categories
ಬೆಂಗಳೂರು

ಶೀಘ್ರದಲ್ಲೇ ಓಡಲಿವೆ ಕೆ. ಎಸ್. ಆರ್. ಟಿ. ಸಿ ಲಾರಿಗಳು!

ಶೀಘ್ರದಲ್ಲೇ ಓಡಲಿವೆ ಕೆ. ಎಸ್. ಆರ್. ಟಿ. ಸಿ ಲಾರಿಗಳು!
– ಲಾಜಿಸ್ಟಿಕ್ಸ್‌ ಸೇವೆಗೆ ಪೂರ್ಣಪ್ರಮಾಣದಲ್ಲಿ ಲಗ್ಗೆ
– ಏನಿದು ಹೊಸ ಪ್ಲಾನ್.. ನಿಮ್ಮ ಮನೆಗೂ ಬರುತ್ತೆ ಪಾರ್ಸಲ್!

NAMMUR EXPRESS NEWS
ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ(ಕೆಎಸ್‌ಆರ್‌ಟಿಸಿ)ವು ಸರಕು ಸಾಗಣೆಗಾಗಿಯೇ ಪ್ರತ್ಯೇಕ ವಾಹನಗಳನ್ನು ರಸ್ತೆಗಿಳಿಸಲು ಮುಂದಾಗಿದೆ. ಈ ಮೂಲಕ ಲಾಜಿಸ್ಟಿಕ್ಸ್‌ ಸೇವೆಗೆ ಪೂರ್ಣ ಪ್ರಮಾಣದಲ್ಲಿ ಲಗ್ಗೆ ಇಡಲಿದೆ.
ಹೌದು. ಕೆಎಸ್‌ಆರ್‌ಟಿಸಿಯು ಪ್ರಯಾಣಿಕರನ್ನು ಸಾಗಿಸುವ ಬಸ್‌ಗಳಲ್ಲೇ ಪಾರ್ಸೆಲ್‌ ಸೇವೆಗಳನ್ನು ಒದಗಿಸುತ್ತಿದೆ. ಅದಕ್ಕೆ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಸರಕು ಸಾಗಣೆ ಉದ್ದೇಶಕ್ಕಾಗಿಯೇ ಮೊದಲ ಹಂತದಲ್ಲಿ ಅಂದಾಜು ಹತ್ತು ಲಾರಿಗಳನ್ನು ರಸ್ತೆಗಿಳಿಸಲು ಮುಂದಾಗಿದೆ.
ಒಟ್ಟು 20 ಲಾರಿಗಳ ಖರೀದಿಗೆ ಟೆಂಡರ್‌ ಕರೆಯಲಾಗಿದ್ದು, ಅತ್ಯಂತ ಕಡಿಮೆ ಮೊತ್ತದಲ್ಲಿ ಲಾರಿಗಳನ್ನು ಪೂರೈಸುವ ತಯಾರಿಕಾ ಕಂಪೆನಿಗೆ ಟೆಂಡರ್‌ ನೀಡಲಿದೆ. ಅಂದುಕೊಂಡಂತೆ ಎಲ್ಲವೂ ನಡೆದರೆ ಎರಡು ತಿಂಗಳಲ್ಲಿ ಕೆಎಸ್‌ಆರ್‌ಟಿಸಿ ಸರಕು ಸಾಗಣೆ ಲಾರಿಗಳು ಕಾರ್ಯಾಚರಣೆ ಆರಂಭಿಸಲಿವೆ. ಇದು ಆರ್ಥಿಕ ಸಂಕಷ್ಟದಲ್ಲಿರುವ ನಿಗಮವನ್ನು ಲಾಭದ ಹಳಿಗೆ ತರುವ ಭಾಗವೇ ಆಗಿದೆ ಎಂದು ತಿಳಿಸಿವೆ.

ಪ್ರಸ್ತುತ ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಪರಿಚಯಿಸಿರುವ ಪಾರ್ಸೆಲ್‌ ವ್ಯವಸ್ಥೆಯಲ್ಲಿ ಕನಿಷ್ಠ 100 ಕೆಜಿಯಿಂದ ಗರಿಷ್ಠ 500 ಕೆಜಿವರೆಗೆ ವಿವಿಧ ಪ್ರಕಾರದ ವಸ್ತಗಳನ್ನು ಸಾಗಿಸಲು ಅವಕಾಶ ಇದೆ. ಪ್ರಯಾಣಿಕರೊಂದಿಗೆ ಕೊಂಡೊಯ್ಯುವುದರಿಂದ ಸಹಜವಾಗಿ ಬಸ್‌ಗಳಲ್ಲಿ ವಸ್ತುಗಳು ಮತ್ತು ಗಾತ್ರಗಳಿಗೆ ನಿರ್ಬಂಧಗಳಿವೆ. ವಿವಿಧ ವಿಭಾಗಗಳಿಗೆ ಬಂದುಬೀಳುವ ಪಾರ್ಸೆಲ್‌ಗ‌ಳನ್ನು ನಾನಾ ಮಾರ್ಗಗಳಿಗೆ ತೆರಳುವ ಬಸ್‌ಗಳಲ್ಲಿಟ್ಟು ಕಳುಹಿಸಲಾಗುತ್ತದೆ. ಅವುಗಳನ್ನು ಡಿಪೋ ಅಥವಾ ನಿಲ್ದಾಣಗಳಲ್ಲಿ ತಲುಪಿಸುವ ವ್ಯವಸ್ಥೆ ಇದೆ. ಅಲ್ಲಿ ಸಂಬಂಧಪಟ್ಟವರು ಬಂದು ತೆಗೆದುಕೊಂಡು ಹೋಗುತ್ತಾರೆ. ಇದರಿಂದ ನಿತ್ಯ ನಿಗಮಕ್ಕೆ ಸರಾಸರಿ 4 ಲಕ್ಷ ರೂ. ಆದಾಯ ಬರುತ್ತಿದೆ.

ಲಾರಿಗಳನ್ನು ರಸ್ತೆಗಿಳಿಸಿದರೆ 5-6 ಟನ್‌ವರೆಗೆ ಒಮ್ಮೆಲೇ ಸಾಗಿಸಬಹುದು. ಎಲ್ಲೆಲ್ಲಿ ಬೇಡಿಕೆ ಇದೆ ಎಂಬುದರ ಬಗ್ಗೆ ಅಧ್ಯಯನ ಮಾಡಲಾಗುತ್ತಿದೆ. ಉತ್ತರ ಕರ್ನಾಟಕ, ಕಲ್ಯಾಣ ಕರ್ನಾಟಕ ಭಾಗದಲ್ಲಿ ಇದಕ್ಕೆ ವಿಪುಲ ಅವಕಾಶಗಳಿದ್ದು, ಸಾಧಕ-ಬಾಧಕಗಳ ಬಗ್ಗೆ ಪರಿಶೀಲಿಸಲಾಗುತ್ತಿದೆ. ಅಗತ್ಯಬಿದ್ದರೆ ನೆರೆರಾಜ್ಯಗಳಿಗೂ ಪರಿಚಯಿಸುವ ಚಿಂತನೆ ಇದೆ. ಕೆಎಸ್‌ಆರ್‌ಟಿಸಿ ಚಾಲಕರನ್ನೇ ಲಾರಿಗಳಿಗೂ ನಿಯೋಜಿಸಲಾಗುತ್ತದೆ. ಇದಕ್ಕಾಗಿ ಹೊಸದಾಗಿ ನೇಮಕಾತಿ ಮಾಡಿಕೊಳ್ಳುವ ಅಗತ್ಯ ಇರದು ಎಂದು ಹೆಸರು ಹೇಳಿಚ್ಛಿಸದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಸರಕು ಸಾಗಣೆ ಜತೆಗೆ ಗ್ರಾಹಕರ ಮನೆಬಾಗಿಲಿಗೇ ವಸ್ತುಗಳನ್ನು ತಲುಪಿಸುವ ನಿಟ್ಟಿನಲ್ಲೂ ಕೆಎಸ್‌ಆರ್‌ಟಿಸಿ ಚಿಂತಿಸಿದೆ. ನಿಗಮದ ನಿಲ್ದಾಣಗಳಿಗೆ ಬಂದಿಳಿಯುವ ವಸ್ತುಗಳನ್ನು ಸ್ಥಳೀಯ ಸಿಬಂದಿ ಮೂಲಕ ಪೋರ್ಟರ್‌ ಮಾದರಿಯಲ್ಲಿ ಆಯಾ ಮನೆಗಳಿಗೆ ತಲುಪಿಸಲು ಅವಕಾಶಗಳಿವೆ. ಅದಕ್ಕೆ ಪ್ರತ್ಯೇಕ ಶುಲ್ಕ ವಿಧಿಸಿ, ಸೇವೆಗಳನ್ನು ಕಲ್ಪಿಸಲು ಸಾಧ್ಯವಿದೆ. ಈ ಕುರಿತು ಇನ್ನೂ ಆಲೋಚನೆ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ : ರೇಷನ್ ಕಾರ್ಡ್‌ನಲ್ಲಿ ಮನೆ ಯಜಮಾನಿ ತಿದ್ದುಪಡಿಗೆ 4 ದಿನ ಅವಕಾಶ

Categories
ಶಿವಮೊಗ್ಗ

ಶಿವಮೊಗ್ಗ ಟಾಪ್ ನ್ಯೂಸ್ 17-08-2023

– ಶಿವಮೊಗ್ಗದಲ್ಲಿ ಸಂಸದ ರಾಘವೇಂದ್ರ ಹುಟ್ಟಿದ ಸಂಭ್ರಮ
– ಸಾಗರದಲ್ಲಿ ಪರೀಕ್ಷೆ ಮುಂದೂಡುವಂತೆ ಕೋರಿ ಕುವೆಂಪು ವಿಶ್ವವಿದ್ಯಾಲಯದ ಕುಲಪತಿಗಳಿಗೆ ಮನವಿ
– ಹೊಸನಗರದಲ್ಲಿ ಮರಳು ಮಾಫಿಯಾಕ್ಕೆ ಬ್ರೇಕ್?
– ತೀರ್ಥಹಳ್ಳಿಯಲ್ಲಿ ಜಮೀನು ಗಲಾಟೆ: ಹಲ್ಲೆ

NAMMUR EXPRESS NEWS
ಶಿಕಾರಿಪುರ: ಸಂಸದ ಬಿವೈ ರಾಘವೇಂದ್ರ ಅವರ 50ನೇ ವರ್ಷದ ಜನ್ಮದಿನವನ್ನು ತವರು ಶಿಕಾರಿಪುರದಲ್ಲಿ ಬಿಜೆಪಿ ಕಾರ್ಯಕರ್ತರು ಸಂಭ್ರಮದಿಂದ ಆಚರಿಸಿದ್ದರು. ಪಟ್ಟಣದ ಆರಾಧ್ಯದೈವ ಶ್ರೀ ಹುಚ್ಚರಾಯಸ್ವಾಮಿ ದೇವಸ್ಥಾನದಲ್ಲಿ ಕಾರ್ಯಕರ್ತರು ವಿಷೇಶ ಪೂಜೆ ಸಲ್ಲಿಸಿದರು ನಂತರ ವಿಕಲಚೇತನರಿಗೆ ವಾಹನ ವಿತರಣೆ ನಡೆಸಿದರು. ರಾಜ್ಯದ ವಿವಿಧ ಜಿಲ್ಲೆ ತಾಲೂಕುಗಳಿಂದ ಕಾರ್ಯಕರ್ತರು ಮುಖಂಡರು ಆಗಮಿಸಿ ಬಿವೈ ರಾಘವೇಂದ್ರ ಅವರಿಗೆ ಜನ್ಮದಿನ ಶುಭಾಶಯ ತಿಳಿಸಿದ್ದರು. ಈ ಸಂದರ್ಭದಲ್ಲಿ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ, ಶಾಸಕ ಬಿವೈ ವಿಜಯೇಂದ್ರ ಸೇರಿದಂತೆ ಸ್ಥಳೀಯ ಮುಖಂಡರು ಕಾರ್ಯಕರ್ತರು ಇದ್ದರು.

ಕುವೆಂಪು ವಿವಿ ಪರೀಕ್ಷೆ ಮುಂದೂಡುವಂತೆ ಪಟ್ಟು

ಸಾಗರ : ಸೆಪ್ಟೆಂಬರ್ 9 ರಿಂದ 11ರವರೆಗೆ ಇರುವ ಪರೀಕ್ಷೆಗಳನ್ನು ಮುಂದೂಡುವಂತೆ ಕೋರಿ ಸಾಗರ ಉಪ ವಿಭಾಗ ಅಧಿಕಾರಿಗಳ ಮೂಲಕ ಕುವೆಂಪು ವಿಶ್ವವಿದ್ಯಾಯದ ಕುಲಪತಿಗಳಿಗೆ ವಿದ್ಯಾರ್ಥಿ ಒಕ್ಕೂಟದಿಂದ ಮನವಿ ನೀಡಲಾಯಿತು. ಕುವೆಂಪು ವಿಶ್ವವಿದ್ಯಾಲಯದ ಪರೀಕ್ಷೆಗಳು ವಿದ್ಯಾರ್ಥಿಗಳ ಭವಿಷ್ಯಕ್ಕೆ ಅಗತ್ಯವಾದ ಪಿಜಿಸಿ ಇಟ್ ಪರೀಕ್ಷೆಗಳು ಒಟ್ಟಾಗಿ ಬಂದಿರುವುದರಿಂದ ವಿದ್ಯಾರ್ಥಿಗಳು ಇಕ್ಕಟ್ಟಿನ ಪರಿಸ್ಥಿತಿಯಲ್ಲಿ ಸಿಲುಕಿದ್ದಾರೆ.

ಇದು ಎಲ್ಲಾ ವಿದ್ಯಾರ್ಥಿಗಳಿಗೆ ಒತ್ತಡ ಮತ್ತು ಆತಂಕವನ್ನು ಉಂಟು ಮಾಡಿದೆ ಸೆಪ್ಟೆಂಬರ್ ಹತ್ತರಂದು ಪಿಜಿಸಿ ಇಟ್ ಪರೀಕ್ಷೆ ಇರುವ ಹಿನ್ನಲೆಯಲ್ಲಿ ವಿದ್ಯಾರ್ಥಿಗಳಿಗೆ ಪರೀಕ್ಷೆ ಕೇಂದ್ರವು ಶಿವಮೊಗ್ಗ ಮತ್ತು ಬೆಂಗಳೂರಿನಲ್ಲಿ ಇರುವುದರಿಂದ ವಿದ್ಯಾರ್ಥಿಗಳಿಗೇ ಸರಿಯಾದ ಸಮಯಕ್ಕೆ ಹಿಂತಿರುಗಿ ಬಂದು ಕುವೆಂಪು ವಿಶ್ವವಿದ್ಯಾಲಯ ಪರೀಕ್ಷೆಯನ್ನು ಬರೆಯುವುದಕ್ಕೆ ಅನಾನುಕೂಲ ಆಗುವುದರಿಂದ ಕುವೆಂಪು ವಿಶ್ವವಿದ್ಯಾಲಯದ ಪರೀಕ್ಷೆಯು ಈ ಸದರಿ ದಿನಾಂಕದಲ್ಲಿ ಇದ್ದು ದಿನಾಂಕ ಬದಲಾಯಿಸುವಂತೆ ಮನವಿಯನ್ನು ಕೇಳಿಕೊಳ್ಳಲಾಗಿದೆ.ಸಾಗರ ತಾಲೂಕು ವಿದ್ಯಾರ್ಥಿ ಒಕ್ಕೂಟದ ಅಧ್ಯಕ್ಷ ಸಿಎಂ ಚಿನ್ಮಯ್ ಅವರು ಮಾತನಾಡಿದ್ದಾರೆ. ಕೆಲವೊಂದಿಷ್ಟು ವಿದ್ಯಾರ್ಥಿಗಳು ಹಾಜರಿದ್ದರು ಲಿಖಿತ್, ಅಕ್ಷಯ್, ಮನೋಜ್, ಪ್ರವೀಣ್, ಸ್ವಾತಿ, ಲತಾ ಸ್ವಸ್ತಿಕ್ ಇನ್ನೂ ಉಳಿದ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಅಕ್ರಮ ಮರಳು ಸಾಗಾಣಿಕೆ: 2 ಟಿಪ್ಪರ್ ವಶ!

ಖಚಿತ ಮಾಹಿತಿ ಮೇರೆಗೆ ನಗರ ವಲಯ ಅರಣ್ಯ ಇಲಾಖೆ ಸಿಬ್ಬಂದಿಗಳು ದಾಳಿ ನಡೆಸಿ ಅಕ್ರಮ ಮರಳು ಸಾಗಾಟ ಮಾಡುತ್ತಿದ್ದ ಎರಡು ಟಿಪ್ಪರ್ ವಾಹನ ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ.
ನಗರ ವಲಯ ಅರಣ್ಯಾಧಿಕಾರಿ ಬಿ.ಎಸ್.ಸಂಜಯ್ ಮಾರ್ಗದರ್ಶನದಲ್ಲಿ ದಾಳಿ ಮಾಡಿ ಸುತ್ತ ಗ್ರಾಮದ ಶರಾವತಿ ನದಿಯಿಂದ ಮರಳು ಸಾಗಣಿಕೆ ಮುಂದಾಗಿದ್ದ, ಟಿಪ್ಪರ್ ಚಾಲಕ ಜಯನಗರ ಪುನೀತ್ ಹಾಗೂ ಗೊರಗೋಡು ಮನುಜಿತ್ ವಿರುದ್ಧ ಪ್ರಕರಣ ದಾಖಲಾಗಿದೆ. ಕಾರ್ಯಚರಣೆಯಲ್ಲಿ ಉಪವಲಯ ಅರಣ್ಯಧಿಕಾರಿಗಳಾದ ನರೇಂದ್ರ ಕುಮಾರ್, ಸತೀಶ್, ಗಸ್ತು ಅರಣ್ಯ ಪಾಲಕ ಯೋಗರಾಜ್, ಚಾಲಕ ರಾಮು ಭಾಗವಹಿದ್ದರು.

ಜಮೀನಿನ ವಿಚಾರದಲ್ಲಿ ಗಲಾಟೆ: ವ್ಯಕ್ತಿ ಮೇಲೆ ಹಲ್ಲೆ

ಜಮೀನಿನ ವಿಚಾರದಲ್ಲಿ ಗಲಾಟೆಯಾಗಿದ್ದು, ವ್ಯಕ್ತಿ ಮೇಲೆ ಕತ್ತಿಯಿಂದ ಹಲ್ಲೆ ನಡೆಸಿರುವ ಘಟನೆ ತೀರ್ಥಹಳ್ಳಿ ತಾಲೂಕಿನ ಹೊನ್ನೇತಾಳು ಗ್ರಾಮಪಂಚಾಯಿತಿ ವ್ಯಾಪ್ತಿಯ ಹೊಸಕೊಪ್ಪ ಗ್ರಾಮದಲ್ಲಿ ನಡೆದಿದೆ.
ಅರುಣ್ (37) ಹಲ್ಲೆಗೊಳಗಾಗಿ ಗಾಯಗೊಂಡ ವ್ಯಕ್ತಿಯಾಗಿದ್ದಾನೆ. ಶ್ರೀಕಂಠ (55) ಹಲ್ಲೆ ನಡೆಸಿದ ಆರೋಪಿಯಾಗಿದ್ದಾನೆ. ಗಾಯಾಳು ಅರುಣ್ ತೀರ್ಥಹಳ್ಳಿ ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದು, ಘಟನೆ ಕುರಿತು ಆಗುಂಬೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ : ರೇಷನ್ ಕಾರ್ಡ್‌ನಲ್ಲಿ ಮನೆ ಯಜಮಾನಿ ತಿದ್ದುಪಡಿಗೆ 4 ದಿನ ಅವಕಾಶ

Categories
ಚಿಕ್ಕಮಗಳೂರು

ಚಿಕ್ಕಮಗಳೂರು ಜಿಲ್ಲೆ ಟಾಪ್ ನ್ಯೂಸ್

– ಲೋಡ್ ಶೆಡ್ಡಿಂಗ್ ವಿರುದ್ಧ ಬೀದಿಗಳಿದ ರೈತರು!
– ಚಿಕ್ಕಮಗಳೂರು ನಗರದಲ್ಲಿ ರೈತ ಸಂಘದ ಹೋರಾಟ
– ಮೂಡಿಗೆರೆ: ಅರಣ್ಯಾಧಿಕಾರಿಗಳ ಕಾಲಲ್ಲೇ ಕಿತ್ತಾಟ: ವೈರಲ್
– ದೇವರಮನೆ ಗುಡ್ಡ ಪ್ರವಾಸಿ ಮಾರ್ಗದಲ್ಲಿ ಅನೈತಿಕ ಚಟುವಟಿಕೆ
– ಏಟಿಎಂ ಒಡೆದು 15 ಲಕ್ಷ ದೋಚಿದರು!

NAMMUR EXPRESS NEWS
ಚಿಕ್ಕಮಗಳೂರು: ಎಲ್ಲೆಡೆ ಈಗ ಲೋಡ್ ಶೆಡ್ಡಿಂಗ್ ಗಲಾಟೆ ಶುರುವಾಗಿದೆ. ಅನಿಯಂತ್ರಿತ ಲೋಡ್ ಶೆಡ್ಡಿಂಗ್‌ನಿಂದಾಗಿ ಪದೇ ಪದೇ ವಿದ್ಯುತ್ ಕಡಿತ ಉಂಟಾಗುತ್ತಿರುವುದರಿಂದ ರೈತರು, ಸಾರ್ವಜನಿಕರಿಗೆ ತೀವ್ರ ತೊಂದರೆ ಆಗುತ್ತಿದೆ ಎಂದು ಆರೋಪಿಸಿ ರೈತ ಸಂಘದ ಕಾರ್ಯಕರ್ತರು ಚಿಕ್ಕಮಗಳೂರಿನಲ್ಲಿ ನಗರದಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಶೆಡ್ಡಿಂಗ್‌ನಿಂದಾಗಿ ಪದೇ ಪದೇ ವಿದ್ಯುತ್ ಕಡಿತ ಉಂಟಾಗುತ್ತಿರುವುದರಿಂದ ರೈತರು, ಸಾರ್ವಜನಿಕರಿಗೆ ತೀವ್ರ ತೊಂದರೆ ಆಗುತ್ತಿದೆ ಎಂದು ಆರೋಪಿಸಿ ಚಿಕ್ಕಮಗಳೂರು ನಗರದ ತಾಲ್ಲೂಕು ಕಚೇರಿಯಿಂದ ಮೆಸ್ಕಾಂ ಕಚೇರಿ ವರೆಗೆ ಮೆರವಣಿಗೆ ನಡೆಸಿ ಘೋಷಣೆಗಳನ್ನು ಕೂಗಿದ್ದಲ್ಲದೆ ಕೂಡಲೇ ಲೋಡ್ ಶೆಡ್ಡಿಂಗ್ ಸ್ಥಗಿತಗೊಳಿಸಿ ನಿರಂತರ ವಿದ್ಯುತ್ ಪೂರೈಕೆ ಮಾಡಬೇಕು ಎಂದು ಆಗ್ರಹಿಸಿದರು.
ರೈತ ಸಂಘದ ಪ್ರಧಾನ ಕಾರ್ಯದರ್ಶಿ ಡಿ.ಮಹೇಶ, ರೈತ ಸಂಘದ ಜಿಲ್ಲಾಧ್ಯಕ್ಷ ಗುರುಶಾಂತಪ್ಪ,ಮುಖಂಡರುಗಳಾದ ಎಂ.ಸಿ.ಬಸವರಾಜು, ಕೆ.ಬಿಲೋಕೇಶ್, ಪರ್ವತೇಗೌಡ, ಶಂಕರಪ್ಪ ಇತರರು ಭಾಗವಹಿಸಿದ್ದರು.

ಕುಡಿದ ಮತ್ತಿನಲ್ಲಿ ಕರ್ತವ್ಯ ಮರೆತ ಅಧಿಕಾರಿಗಳು!

ಕುಡಿದ ಮತ್ತಿನಲ್ಲಿ ಕರ್ತವ್ಯ ಮರೆತ ಅಧಿಕಾರಿಗಳಿಂದ ಪರಸ್ಪರ ನಿಂದನೆ, ಕಿತ್ತಾಟ ನಡೆಸಿದ್ದು ಫೋನ್ ಸಂಭಾಷಣೆಯ ಆಡಿಯೋ ವೈರಲ್ ಆಗಿದೆ. ವಸತಿಗೃಹದ ಶೌಚಾಲಯದಲ್ಲಿನ ಪೈಪ್ ಒಡೆದು ಹೋಗಿದ್ದ ವಿಚಾರಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳಿಬ್ಬರು ಕಿತ್ತಾಡಿಕೊಂಡಿದ್ದು, ಇಬ್ಬರು ಅಧಿಕಾರಿಗಳ ವಿರುದ್ಧ ಸ್ಥಳೀಯರು ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ವಲಯ ಅರಣ್ಯಾಧಿಕಾರಿ ಮೋಹನ್ ಹಾಗೂ ಉಪ ವಲಯ ಅರಣ್ಯಾಧಿಕಾರಿ ನವೀನ್ ಕಿತ್ತಾಟದ ಫೋನ್ ಸಂಭಾಷಣೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಅವಾಚ್ಯ ಶಬ್ದಗಳಿಂದ ಸಣ್ಣ ಮಕ್ಕಳಂತೆ ವರ್ತಿಸಿದ್ದಾರೆ ಎನ್ನಲಾಗಿದೆ.

ದೇವರಮನೆ ಗುಡ್ಡ ಪ್ರವಾಸಿ ಮಾರ್ಗದಲ್ಲಿ ಅನೈತಿಕ ಚಟುವಟಿಕೆ

ಇತಿಹಾಸ ಪ್ರಸಿದ್ಧ ದೇವರಮನೆಗುಡ್ಡ ಪ್ರವಾಸಿ ತಾಣದ ಬಳಿ ಪ್ರವಾಸಿಗರು ಮದ್ಯ ಸೇವಿಸಿ ರಸ್ತೆ ಬದಿ ಕುಣಿದು ಮೋಜು ಮಸ್ತಿ ಮಾಡಿದ ಘಟನೆ ಇದೀಗ ಭಾರೀ ಆಕ್ರೋಶಕ್ಕೆ ಕಾರಣ ಆಗಿದೆ. ಮೂಡಿಗೆರೆ ತಾಲೂಕಿನ ಪ್ರವಾಸಿ ತಾಣವಾದ ದೇವರಮನೆಗುಡ್ಡಗೆ ನಿತ್ಯ ನೂರಾರು ಪ್ರವಾಸಿಗರು ಭೇಟಿ ನೀಡುತ್ತಾರೆ. ಕುಟುಂಬ ಸಮೇತ ಭೇಟಿ ನೀಡುವ ಸುಂದರ ಸೊಬಗಿನ ತಾಣ ಇದಾಗಿದ್ದು ಪ್ರವಾಸಿಗರ ವರ್ತನೆಗೆ ಇಲ್ಲಿ ಬಂದ ಇತರ ಪ್ರವಾಸಿಗರಿಗೆ ಇರುಸು ಮುರಿಸು ಆದಂತಾಗಿದೆ.
ರಸ್ತೆ ಬದಿ ಮದ್ಯ ಸೇವಿಸಿ ಪ್ರವಾಸಿಗರು ನೃತ್ಯ ಮಾಡಿದ್ದು ಅಲ್ಲಿದ್ದ ಪ್ರವಾಸಿಗರು ತಮ್ಮ ಮೊಬೈಲ್ ನಲ್ಲಿ ಯುವಕರ ವರ್ತನೆಯನ್ನು ಸೆರೆ ಹಿಡಿದಿದ್ದಾರೆ ಅಲ್ಲದೆ ಪ್ರವಾಸಿ ತಾಣಗಳಲ್ಲಿ ಈ ರೀತಿ ದುರ್ವರ್ತನೆ ತೋರಿದ ಪ್ರವಾಸಿಗರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.

ಏಟಿಎಂಯಿಂದ 14 ಲಕ್ಷ ದೋಚಿದ ಖದೀಮರು

ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಎಟಿಎಂ ಲೂಟಿ ಮಾಡಲಾಗಿದೆ. ರಾತ್ರೋರಾತ್ರಿ ಕೆನರಾ ಬ್ಯಾಂಕ್ ಏಟಿಎಂಗೆ ನುಗ್ಗಿದ ಖದೀಮರು ತಮ್ಮ ಕೈಚಳಕ ತೋರಿಸಿದ್ದಾರೆ. ಚಿಕ್ಕಮಗಳೂರು ನಗರದ ಹೌಸಿಂಗ್‌ ಬೋರ್ಡ್ ನಲ್ಲಿ ಇರುವ ಏಟಿಎಂನಲ್ಲಿದ್ದ 14 ಲಕ್ಷ ಹಣ ಲೂಟಿ ಮಾಡಿ ಪರಾರಿಯಾಗಿದ್ದಾರೆ. ಇನ್ನು ಈ ಖದೀಮರು ಸಿಸಿ ಟಿವಿ ನಿಷ್ಕ್ರಿಯಗೊಳಿಸಿದ್ದಾರೆ. ಸದ್ಯ ಸ್ಥಳಕ್ಕೆ ಪೊಲೀಸರು ಆಗಮಿಸಿ ಕೆನರಾ ಬ್ಯಾಂಕ್ ಅಧಿಕಾರಿಗಳ ಭೇಟಿ ಮಾಡಿ ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ : ರೇಷನ್ ಕಾರ್ಡ್‌ನಲ್ಲಿ ಮನೆ ಯಜಮಾನಿ ತಿದ್ದುಪಡಿಗೆ 4 ದಿನ ಅವಕಾಶ

Categories
ಸಾಗರ

ಕಾಗೋಡು ತಿಮ್ಮಪ್ಪನವರಿಗೆ ಡಿ.ದೇವರಾಜ ಅರಸ್ ಪ್ರಶಸ್ತಿ

ಕಾಗೋಡು ತಿಮ್ಮಪ್ಪನವರಿಗೆ ಡಿ.ದೇವರಾಜ ಅರಸ್ ಪ್ರಶಸ್ತಿ
– ರಾಜ್ಯದ ಹಿರಿಯ ನಾಯಕನಿಗೆ ಒಲಿದ ಗೌರವ

NAMMUR EXPRESS NEWS
ಸಾಗರ: ರಾಜ್ಯ ಸರ್ಕಾರವು ನೀಡುವ 2023-24ನೇ ಸಾಲಿನ ದಿವಂಗತ ಡಿ.ದೇವರಾಜ ಅರಸ್ ಪ್ರಶಸ್ತಿಯನ್ನು ಮಾಜಿ ಸಚಿವ, ಮಾಜಿ ಸ್ಪೀಕರ್, ಸಾಗರ ಮಾಜಿ ಶಾಸಕ ಕಾಗೋಡು ತಿಮ್ಮಪ್ಪನವರಿಗೆ ಘೋಷಿಸಿದೆ. ರಾಜ್ಯದ ಮುಂಚೂಣಿ ಹೋರಾಟಗಾರರಾಗಿ, ಕಾಗೋಡು ತಿಮ್ಮಪ್ಪನವರು ಬಡವರ ಸೇವೆ ಮಾಡಿದ್ದಾರೆ. ರಾಜ್ಯದ ಹಿರಿಯ ನಾಯಕರಾಗಿದ್ದು, ಅವರಿಗೆ ಸಂದ ಗೌರವವಾಗಿದೆ.

ಇದನ್ನೂ ಓದಿ : ರೇಷನ್ ಕಾರ್ಡ್‌ನಲ್ಲಿ ಮನೆ ಯಜಮಾನಿ ತಿದ್ದುಪಡಿಗೆ 4 ದಿನ ಅವಕಾಶ

Categories
ತೀರ್ಥಹಳ್ಳಿ

ರಕ್ತದಾನದ ಮೂಲಕ ಸ್ವಾತಂತ್ರ್ಯ ದಿನ ಆಚರಿಸಿದ ನಿವೃತ್ತ ಯೋಧರು!

ರಕ್ತದಾನದ ಮೂಲಕ ಸ್ವಾತಂತ್ರ್ಯ ದಿನ ಆಚರಿಸಿದ ನಿವೃತ್ತ ಯೋಧರು!
– ತೀರ್ಥಹಳ್ಳಿ ಮಾಜಿ ಸೈನಿಕರ ಸಂಘದವರಿಂದ ಸ್ವಯಂ ಪ್ರೇರಿತ ರಕ್ತದಾನ

NAMMUR EXPRESS NEWS
ತೀರ್ಥಹಳ್ಳಿ: ಸ್ವಾತಂತ್ರೋತ್ಸವದ ಆಚರಣೆ ಪ್ರಯುಕ್ತ ಮಾಜಿ ಸೈನಿಕರ ಸಂಘ ತೀರ್ಥಹಳ್ಳಿ ಇದರ ಸದಸ್ಯರು ರಕ್ತದಾನ ಮಾಡಿ ಸ್ವಾತಂತ್ರ್ಯ ದಿನ ಆಚರಿಸಿದರು. ರೋಟರಿ ಐಎಂಎ ರಕ್ತನಿಧಿ ಕೇಂದ್ರಲ್ಲಿ ನಡೆದ ರಕ್ತದಾನ ಶಿಬಿರದಲ್ಲಿ ಮಾಜಿ ಸೈನಿಕರ ಸಂಘದ ಅಧ್ಯಕ್ಷರಾದ ಶಿವಪ್ಪ ಮತ್ತು ಕಾರ್ಯದರ್ಶಿ ಮೂರ್ತಿ ಇವರ ಮಾರ್ಗದರ್ಶನದಲ್ಲಿ ಮಾಜಿ ಸೈನಿಕರಾದ ಕೃಷ್ಣಕುಮಾರ್, ಕವೀಶ್, ಸುಧಾಕರ್,ಕಾರ್ತಿಕ್, ಕುಮಾರ್, ಯುವರಾಜ್, ಸಂತೋಷ್ ಉಪಸ್ಥಿತರಿದ್ದು ರಕ್ತದಾನ ಮಾಡಿದರು.

ಭಾರತದ ಸೈನ್ಯದ ಸೇವೆಯ ನಂತರದ ದಿನಗಳಲ್ಲಿ ಮಾಜಿ ಸೈನಿಕರು ರಕ್ತದಾನ ಮಾಡುವುದು ಪ್ರಸಂಶನೀಯ ಮತ್ತು ಇತರೆ ರಕ್ತದಾನಿಗಳಿಗೆ ಮಾದರಿ ಎಂದು ರೊ ಕೆ ಪಿ ಎಸ್ ಸ್ವಾಮಿ ,ಸಾರ್ವಜನಿಕ ಸಂಪರ್ಕಾಧಿಕಾರಿ ,ರೋಟರಿ ಐಎಮ್ಎ ರಕ್ತನಿಧಿ ಕೇಂದ್ರ, ತೀರ್ಥಹಳ್ಳಿ ಇವರು ಮಾಜಿ ಸೈನಿಕರಿಗೆ ಶುಭ ಕೋರಿ, ಧನ್ಯವಾದಗಳನ್ನು ತಿಳಿಸಿದರು. ರಕ್ತ ನಿಧಿ ಕೇಂದ್ರದ ತಂತ್ರಜ್ಞಾರಾದ ಅರುಣ್ ,ಪವಿತ್ರ ಈ ಸಂದರ್ಭದಲ್ಲಿ ಸಹಕರಿಸಿದರು.

ಇದನ್ನೂ ಓದಿ : ರೇಷನ್ ಕಾರ್ಡ್‌ನಲ್ಲಿ ಮನೆ ಯಜಮಾನಿ ತಿದ್ದುಪಡಿಗೆ 4 ದಿನ ಅವಕಾಶ

Categories
ಕರಾವಳಿ

ಕರಾವಳಿ ಟಾಪ್ ನ್ಯೂಸ್

ಉಡುಪಿ ವೀಡಿಯೋ ರೆಕಾರ್ಡಿಂಗ್: ಮೊದಲ ಹಂತದ ತನಿಖೆ ಪೂರ್ಣ
– ಬಂಟ್ವಾಳ: ಬಾವಿಗೆ ಹಾರಿ ಯುವಕ ಆತ್ಮಹತ್ಯೆ
– ಕೇರಳದಿಂದ ತಂದು ಬರುತ್ತಿದೆ ಶೌಚಾಲಯ ತ್ಯಾಜ್ಯ

NAMMUR EXPRESS NEWS
ಯುವಕನೋರ್ವ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯ ಪೆರಾಜೆಯಲ್ಲಿ ನಡೆದಿದೆ. ಪ್ರಶಾಂತ್ ನಾಯ್ಕ (29) ಆತ್ಮಹತ್ಯೆ ಮಾಡಿಕೊಂಡ ಯುವಕ. ಪ್ರಶಾಂತ್ ನೇರಳಕಟ್ಟೆ ಅಗ್ರಿ ಎಂಬ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದು, ಕಳೆದ ಒಂದು ವರ್ಷಗಳ ಹಿಂದೆ ಮದುವೆಯಾಗಿದ್ದ. ಬಿಜೆಪಿಯ ಸಕ್ರೀಯ ಕಾರ್ಯಕರ್ತನಾಗಿದ್ದು, ಪೆರಾಜೆ ಯುವ ವೇದಿಕೆಯ ಕಾರ್ಯದರ್ಶಿಯಾಗಿ ಕೆಲಸ ಮಾಡಿದ್ದ ಈತ ಸದಸ್ಯನಾಗಿ ಸೇವೆ ಮಾಡುತ್ತಿದ್ದ. ಕೌಟುಂಬಿಕ ಕಲಹ ಪ್ರಶಾಂತ್ ಆತ್ಮಹತ್ಯೆಗೆ ಕಾರಣವಾಗಿರಬೇಕು ಎಂದು ಶಂಕಿಸಲಾಗಿದೆ. ವಿಟ್ಲ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.

ಶೌಚಾಲಯದ ತ್ಯಾಜ್ಯ ಕೇರಳದಿಂದ ಕರ್ನಾಟಕಕ್ಕೆ!

ಶೌಚಾಲಯದ ತ್ಯಾಜ್ಯವನ್ನು ಕೇರಳದಿಂದ ತಂದು ವಿಟ್ಲ ಪರಿಸರದಲ್ಲಿ ಸುರಿಯುವ ಲಾರಿಯನ್ನು ಬೆನ್ನಟ್ಟಿದ ಸಾರ್ವಜನಿಕರು ಚಾಲಕನ ಸಹಿತ ಉಕ್ಕುಡ ಬಳಿ ತಡೆಹಿಡಿದು ವಿಟ್ಲ ಪೊಲೀಸರು ವಶಕ್ಕೆ ಒಪ್ಪಿಸಿದ್ದಾರೆ. ಹದಿನೈದು ದಿನಗಳ ಹಿಂದಷ್ಟೇ ಇದೇ ರೀತಿ ಶೌಚಾಲಯದ ತ್ಯಾಜ್ಯ ಹೊತ್ತ ಟ್ಯಾಂಕರ್ ಕೇಪು ಗ್ರಾಮದ ಚೆಲ್ಲಡ್ಕ ಪರಿಸರದಲ್ಲಿ ಸುರಿದು ರಾದ್ಧಾಂತಕ್ಕೆ ಕಾರಣವಾಗಿತ್ತು. ಆ ಸಂದರ್ಭ ಸಾರ್ವಜನಿಕರು ಹಿಡಿದು ವಾಹನವನ್ನು ಪೊಲೀಸರ ವಶಕ್ಕೆ ನೀಡಿದ್ದರು. ಇದೀಗ ಮತ್ತೆ ದುಷ್ಕೃತ್ಯ ಎಸಗಲು ಬಂದ ಟ್ಯಾಂಕರ್ ಚಾಲಕ ಅದೇ ರೀತಿ ಶೌಚಾಲಯದ ತ್ಯಾಜ್ಯವನ್ನು ವಿಟ್ಲ ಪರಿಸರಕ್ಕೆ ತರುತ್ತಿರುವ ಮಾಹಿತಿ ಸಾರ್ವಜನಿಕರಿಗೆ ಬಂದಿತ್ತು. ಸಾರಡ್ಕ ಚೆಕ್‌ ಪೋಸ್ಟ್ ಪಾಸಾಗುತ್ತಿದ್ದಂತೆ ಎಚ್ಚೆತ್ತ ಸಾರ್ವಜನಿಕರು ವಾಹನವನ್ನು ಬೆನ್ನಟ್ಟಿ ಉಕ್ಕುಡ ದರ್ಬೆಯಲ್ಲಿ ತಡೆದು ವಿಟ್ಲ ಪೊಲೀಸರ ವಶಕ್ಕೆ ನೀಡಿದ್ದಾರೆ.

ವೀಡಿಯೋ ರೆಕಾರ್ಡಿಂಗ್: ಮೊದಲ ಹಂತದ ತನಿಖೆ ಪೂರ್ಣ

ಉಡುಪಿ ನೇತ್ರಜ್ಯೋತಿ ಪ್ಯಾರಾ ಮೆಡಿಕಲ್ ಕಾಲೇಜಿನ ಶೌಚಾಲಯದಲ್ಲಿ ಮುಸ್ಲಿಮ್ ಹೆಣ್ಣುಮಕ್ಕಳು ಹಿಂದು ಹುಡುಗಿಯರಿರುವಾಗ ವೀಡಿಯೋ ರೆಕಾರ್ಡ್ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಸಿಐಡಿ ಮೊದಲ ಹಂತದ ತನಿಖೆಯನ್ನು ಪೂರ್ಣಗೊಳಿಸಿದ್ದು, ಅಧಿಕಾರಿಗಳು ಬೆಂಗಳೂರಿಗೆ ತೆರಳಿದ್ದಾರೆ. ತನಿಖಾಧಿಕಾರಿ(ಐಒ) ಸಿಐಡಿ ಡಿವೈಎಸ್ಪಿ ಅಂಜುಮಾಲಾ ನಾಯಕ್ ನೇತೃತ್ವದ ತನಿಖಾ ತಂಡ, ಈಗಾಗಲೇ ಉಡುಪಿಯ ನೇತ್ರ ಜ್ಯೋತಿ ಇನ್‌ಸ್ಟಿಟ್ಯೂಟ್ ಆಫ್ ಅಲೈಡ್ ಹೆಲ್ತ್ ಸೈನ್ಸಸ್‌ನಿಂದ ಸಾಕ್ಷ್ಯಗಳನ್ನು ಸಂಗ್ರಹಿಸಿದೆ ಮತ್ತು ಸಂತ್ರಸ್ತೆ ಆರೋಪಿಗಳು ಹಾಗೂ ಕಾಲೇಜು ಆಡಳಿತ ಮಂಡಳಿಯ ಪ್ರತಿನಿಧಿಗಳ ಹೇಳಿಕೆ ದಾಖಲಿಸಿದೆ.

ವಿಧಿ-ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿದ್ದ ಆರೋಪಿ ವಿದ್ಯಾರ್ಥಿನಿಯರಿಂದ ವಶಪಡಿಸಿಕೊಂಡ ಮೂರು ಮೊಬೈಲ್ ಫೋನ್, ಸಿಸಿಟಿವಿ ದೃಶ್ಯಾವಳಿ ಸಹಿತ ಕೆಲ ತಾಂತ್ರಿಕ ವಿಚಾರಗಳ ಎಫ್‌ಎಸ್‌ಎಲ್ ವರದಿಗೆ ಸಿಐಡಿ ಅಧಿಕಾರಿಗಳು ಕಾಯುತ್ತಿದ್ದು ಈ ವರದಿ ಕೆಲವೇ ದಿನಗಳಲ್ಲಿ ಸಿಐಡಿಗೆ ಸಿಗಲಿದೆ. ಘಟನೆಯ ಬಗ್ಗೆ ಸಂತ್ರಸ್ತೆ ಅಧಿಕೃತವಾಗಿ ದೂರು ನೀಡದಿದ್ದರೂ, ಉಡುಪಿ ಪೊಲೀಸರು ಸ್ವಯಂಪ್ರೇರಿತವಾಗಿ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ ಮತ್ತು ಡಿವೈಎಸ್ಪಿ ಮಟ್ಟದ ತನಿಖೆ ಪ್ರಾರಂಭಿಸಿದ್ದರು. ಆದರೆ ಬಿಜೆಪಿ ಪ್ರತಿಭಟನೆ ಮುಂದುವರಿಸಿದ ನಂತರ ಪ್ರಕರಣವನ್ನು ಸಿಐಡಿಗೆ ಹಸ್ತಾಂತರಿಸಲಾಗಿದೆ.

ಇದನ್ನೂ ಓದಿ : ರೇಷನ್ ಕಾರ್ಡ್‌ನಲ್ಲಿ ಮನೆ ಯಜಮಾನಿ ತಿದ್ದುಪಡಿಗೆ 4 ದಿನ ಅವಕಾಶ

Categories
ಮೈಸೂರು

ಬಿಯರ್ ಕುಡಿಯೋರಿಗೆ ಶಾಕಿಂಗ್ ಸುದ್ದಿ!

ಬಿಯರ್ ಕುಡಿಯೋರಿಗೆ ಶಾಕಿಂಗ್ ಸುದ್ದಿ!
– 25 ಕೋಟಿ ಮೌಲ್ಯದ ಮದ್ಯ ವಶ: ಬಿಯರ್‌ನಲ್ಲಿ ಅಪಾಯಕಾರಿ ಅಂಶ
– ರಾಜ್ಯದ ಹಲವೆಡೆ ಮದ್ಯದ ಬಾಕ್ಸ್ ಸೀಜ್

NAMMUR EXPRESS NEWS
ಮೈಸೂರು: ನಂಜನಗೂಡಿನಲ್ಲಿರುವ ಕಂಪನಿ ತಯಾರಿಸಿದ್ದ ಬಿಯರ್‌ನಲ್ಲಿ ಸೆಡಿಮೆಂಟ್ ಎಂಬ ವಿಶಕಾರಕ ಅಂಶ ಕಂಡುಬಂದಿದೆ. ಕಂಪನಿಯ ಹಾಗೂ ಅಲ್ಟಾಲ್ಯಾಗರ್ ಈ ಅಂಶ ಗೋಚರಿಸಿದೆ. ಪ್ರಸಿದ್ದ ಬಿಯರ್ ಬ್ರಾಂಡ್ ವೊಂದರಲ್ಲಿ ಅಪಾಯಕಾರಿ ರಾಸಾಯನಿಕ ಅಂಶ ಪತ್ತೆಯಾಗಿದೆ. ಹೀಗಾಗಿ, 25 ಕೋಟಿ ರೂಪಾಯಿ ಮೌಲ್ಯದ 78,678 ಬಾಕ್ಸ್ ಮದ್ಯವನ್ನು ವಶಪಡಿಸಿಕೊಂಡಿರುವ ಮೈಸೂರು ಅಬಕಾರಿ ಪೊಲೀಸರು, ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅಬಕಾರಿ ಇಲಾಖೆಯ ಉಪ ಆಯುಕ್ತ ಎ.ರವಿಶಂಕರ್ ಪ್ರತಿಕ್ರಿಯಿಸಿ,“ಕಂಪನಿಯವರು ಪ್ರತಿಕ್ರಿಯೆ ನೀಡಿದ್ದಾರೆ. ಇನ್‌ಹೌಸ್ ಕೆಮಿಸ್ಟ್ ಅವರು ಕೊಟ್ಟಿರುವ ವರದಿಯಲ್ಲಿ ಈ ಬಿಯರ್ ಅನ್ನು ಮನುಷ್ಯರು ಕುಡಿಯಲು ಯೋಗ್ಯವಲ್ಲ ಎಂದು ಬಂದಿರುವ ವರದಿ ಆದರಿಸಿ ಕ್ರಮ
ತೆಗೆದುಕೊಳ್ಳಲಾಗಿದೆ’ ಎಂದು ಹೇಳಿದರು.

ಮಾಹಿತಿ ತಿಳಿದ ಕೂಡಲೇ ಬಿಯರ್ ಮಾದರಿಯನ್ನು ಕೆಮಿಕಲ್ ಲ್ಯಾಬ್‌ಗೆ ಕಳುಹಿಸಲಾಗಿತ್ತು. ಈ ಕುರಿತು (2-08-2023ರಂದು) ಕೆಮಿಕಲ್ ವರದಿ ಬಂದಿದ್ದು ‘ಅನ್‌ಫಿಟ್ ಫಾರ್ ಹ್ಯುಮನ್ ಕನ್ಸಂಪ್ಪನ್’ ಎಂದು ತಿಳಿಸಲಾಗಿದೆ. ಇದೇ ಅವಧಿಯಲ್ಲಿ ಒಟ್ಟು 78,678 ಬಾಕ್ಸ್ ಬಿಯರ್ ಬಾಕ್ಸ್ ಸರಬರಾಜಾಗಿತ್ತು. ಅಷ್ಟೊತ್ತಿಗೆ ಎಲ್ಲ ಬಾಕ್ಸ್‌ಗಳನ್ನೂ ತಡೆಹಿಡಿಯಲಾಗಿದೆ. ಕೆಲವು ಡಿಪೋದಿಂದ ಅಂಗಡಿಗಳಿಗೂ ವಿತರಣೆಯಾಗಿತ್ತು. ರಿಟೈಲ್‌ನಲ್ಲೂ ಮಾರಾಟವಾಗದಂತೆ ತಡೆಹಿಡಿಯಲಾಗಿದೆ. ಗುಣಮಟ್ಟದ ಬಿಯರ್ ತಯಾರಿಸದ ಕಂಪನಿಯ ವಿರುದ್ಧ ಎಫ್‌ಐಆರ್ ದಾಖಲು ಮಾಡಲಾಗಿದೆ.

ಎಣ್ಣೆ ಕೊಡಿಯೋರ್ ಎಚ್ಚರ!

ಇತ್ತೀಚಿಗೆ ಅನೇಕ ಮದ್ಯದ ಬಾಟಲಿಗಳಲ್ಲಿ ಕೆಮಿಕಲ್ ಪತ್ತೆಯಾಗುತ್ತಿದೆ. ಅಲ್ಲದೆ ಮದ್ಯದ ಅಕ್ರಮ, ದಂಧೆ ಎಲ್ಲಿಲ್ಲದೇ ಸಾಗುತ್ತಿದೆ. ಹೀಗಾಗಿ ಎಣ್ಣೆ ಕುಡಿಯೋರು ಎಚ್ಚರ ವಹಿಸಬೇಕಿದೆ.

ಇದನ್ನೂ ಓದಿ : ರೇಷನ್ ಕಾರ್ಡ್‌ನಲ್ಲಿ ಮನೆ ಯಜಮಾನಿ ತಿದ್ದುಪಡಿಗೆ 4 ದಿನ ಅವಕಾಶ