Categories
ಕರಾವಳಿ ಮಂಗಳೂರು ಸಿನಿಮಾ

ಕೊರಮ್ಮ ತುಳು ಸಿನಿಮಾ ಸ್ವಾಗತಕ್ಕೆ ಸಜ್ಜು!

ಕೊರಮ್ಮ ತುಳು ಸಿನಿಮಾ ಸ್ವಾಗತಕ್ಕೆ ಸಜ್ಜು!
– ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆ.11ಕ್ಕೆ ಬಿಡುಗಡೆ
– ಶಿವಧ್ವಜ್ ಶೆಟ್ಟಿ ನಿರ್ದೇಶನದ ಬಹು ನಿರೀಕ್ಷೆಯ ತುಳು ಸಿನಿಮಾ

NAMMUR EXPRESS NEWS
ಮಂಗಳೂರು: ತುಳುನಾಡ ಸಂಸ್ಕೃತಿ, ಆಚಾರ- ವಿಚಾರ, ನಡೆ-ನುಡಿ, ಜೀವನ ಪದ್ಧತಿ, ಇವೆಲ್ಲವುಗಳೊಂದಿಗೆ ಮನೋರಂಜನೆಯನ್ನು ಬೆರಸಿಕೊಂಡು ಕುತೂಹಲ ಹುಟ್ಟಿಸುವ ಕಥೆ ಹೆಣೆದು ಸುಂದರವಾಗಿ ಮೂಡಿಬಂದಿರುವ ತುಳು ಸಿನೆಮಾ ‘ಕೊರಮ್ಮ’, ಇದೇ ಆಗಸ್ಟ್ 11 ರ ಶುಕ್ರವಾರದಂದು ಬಿಡುಗಡೆಗೊಳ್ಳಲಿದೆ. ಚಿತ್ರದ ನಿರ್ದೇಶಕ ಶಿವಧ್ವಜ್ ಶೆಟ್ಟಿ ಕಲ್ಪನೆಯಲ್ಲಿ ಬಂದ ಸಿನಿಮಾ ಮಂಗಳೂರು, ಸುರತ್ಕಲ್, ಪುತ್ತೂರು, ಪಡುಬಿದ್ರೆ ಮುಂತಾದ ಕಡೆಗಳಲ್ಲಿ ಬಿಡುಗಡೆಯಾಗಲಿದೆ. ಇನ್ನು ಹಲವು ಚಿತ್ರಮಂದಿರಗಳಲ್ಲಿ ತೆರೆ ಕಾಣುವ ಸಾಧ್ಯತೆ ಇದೆ. ಸಫೈರ್ ಪ್ರೊಡಕ್ಷನ್ ಹೌಸ್ ನಿರ್ಮಾಣ ಸಂಸ್ಥೆಯ ಮೂಲಕ ಅಡ್ಯಾರ್ ಮಾಧವ ನಾಯ್ಕ್ ಅರ್ಪಿಸಿದ್ದಾರೆ.

ಅಡ್ಯಾರ್ ಮಾಧವ ನಾಯ್ಕ್, ಈಶ್ಚರಿದಾಸ್ ಶೆಟ್ಟಿ ಮತ್ತು ರಾಜೇಶ್ವರ ರೈ ನಿರ್ಮಾಪಕರಾಗಿದ್ದು, ಸಂಗೀತ ಶಿನೋಯ್ ಎ. ಜೋಸೆಫ್, ಛಾಯಾಗ್ರಹಣ ಸುರೇಶ್‌ ಬೈರಸಂದ್ರ, ಸಂಕಲನ ಗಣೇಶ್ ನೀರ್ಚಾಲ್, ಸಂಭಾಷಣೆ ಶ್ರೀನಿಧಿ ಭಟ್, ಅನುವಾದ ಮತ್ತು ಸಾಹಿತ್ಯ ಕೆ. ಮಹೇಂದ್ರನಾಥ್ ಸಾಲೆತ್ತೂರು, ಕಲೆ ಸಂತೋಷ ಪೂಜಾರಿ ವೇಣೂರು, ಸಹ ನಿರ್ದೇಶನ ಹರ್ಷೀವ ಭಗೀರ, ಪ್ರಸಾಧನ ಕುಮಾರ್ ನೋಣವಿನಕೆರೆ ಮಾಡಿದ್ದಾರೆ. ದೀಪಕ್ ಸಿನಿ ಗ್ಯಾಲಕ್ಸಿ ಹಂಚಿಕೆ ಮಾಡುತ್ತಿದ್ದಾರೆ.

ಸಿನಿಮಾ ತಾರಾಗಣದಲ್ಲಿ ಯುವ ನಟ ನಟಿಯರು!

ಸಿನಿಮಾದ ತಾರಾಗಣದಲ್ಲಿ ಗುರುಹೆಗ್ಡೆ, ರೂಪಶ್ರೀ ವರ್ಕಾಡಿ, ಮೋಹನ್‌ ಶೇಣಿ, ಬಿಂದುರಕ್ಷಿದಿ, ಜಿನಪ್ರಸಾದ್‌, ದಿವ್ಯಶ್ರೀ, ನಾಯಕ್, ಲಕ್ಷ್ಮಣ್ ಕುಮಾರ್ ಮಲ್ಲೂರು, ನಮಿತಾ ಕೂಳೂರು, ಸುಮನ ಮಂಗಳೂರು, ಹರೀಶ್‌ ಜೋಡುರಸ್ತೆ ಮತ್ತಿರರಿದ್ದಾರೆ. ತುಳು ನಾಡ ಕ್ರಿಯಾಶೀಲ ಕಲಾವಿದರ ತಂಡ ಸಿನಿಮಾದಲ್ಲಿದೆ.

ತುಳುನಾಡ ಬದುಕಿನ ಚಿತ್ರಣದ ಪ್ರತಿಬಿಂಬ

ಕೊರಮ್ಮ ಚಿತ್ರದ ಹಾಡಿನ ದೃಶ್ಯದಲ್ಲಿ ತುಳುನಾಡಿನ ಪೂರ್ವಜರ ಬದುಕು ಮಾರ್ಮಿಕವಾಗಿ ಪ್ರತಿಬಿಂಬಿತವಾಗಿದೆ. ತುಳುವರ ಹಿರಿಯರ ಕಾಲದ ಪರಿಕರಗಳನ್ನು ಸಮರ್ಥವಾಗಿ ಬಳಸಿಕೊಂಡು ಮಾಡಿರುವ ಈ ಸಿನೆಮಾದ ಕಥೆ-ಚಿತ್ರಕಥೆ-ನಿರ್ದೇಶನ ಮಾಡಿದ್ದಾರೆ ಗಗ್ಗರ ಸಿನಿಮಾ ಮೂಲಕ ರಾಷ್ಟ್ರ ಪ್ರಶಸ್ತಿ ಪಡೆದ ಚಿತ್ರ ನಿರ್ದೇಶಕ ಶಿವಧ್ವಜ್ ಶೆಟ್ಟಿ. ತುಳು ಚಿತ್ರರಂಗಕ್ಕೆ ಬದಲಾವಣೆ ಕೊಡಬಲ್ಲ ಮೌಲ್ಯಯುತವಾದ ಕಥಾವಸ್ತುವನ್ನು ‘ಕೊರಮ್ಮ’ ಚಲನಚಿತ್ರ ಹೊಂದಿದೆ ಎನ್ನುವುದು ಚಿತ್ರ ತಂಡದ ಮಾತು.

ಕಾರ್ಕಳದ ಬೈಲೂರಲ್ಲಿ ಶೂಟಿಂಗ್!

ಕಾರ್ಕಳದ ಬೈಲೂರಿನ ಸುಂದರ ತಾಣದಲ್ಲಿ ಒಂದೇ ಹಂತದಲ್ಲಿ ಚಿತ್ರೀಕರಣವಾಗಿರುವ ಈ ‘ಕೊರಮ್ಮ’ ತುಳುಚಿತ್ರ ಈಗ ತುಳು ನಾಡಲ್ಲಿ ಭಾರೀ ಭರವಸೆ ಮೂಡಿಸಿದೆ.

ಇದನ್ನೂ ಓದಿ : ಭೂತಾನ್ ಅಡಿಕೆ ಬಂದ್ರೂ ತೊಂದರೆ ಇಲ್ಲ- ಆರಗ ಜ್ಞಾನೇಂದ್ರ

[embedyt] https://www.youtube.com/watch?v=rTGqP21dgrM%5B/embedyt%5D

HOW TO APPLY : NEET-UG COUNSELLING 2023

Categories
ಕರಾವಳಿ

ಕರಾವಳಿ ಟಾಪ್ ನ್ಯೂಸ್ 10-08-2023

– ಅಮಲು ಪದಾರ್ಥ ಸೇವಿಸಿ ಅನುಚಿತ ವರ್ತನೆ: ಅರೆಸ್ಟ್
– ಅಕ್ರಮ ಮದ್ಯ ಮಾರಾಟ ಮಾಡುತ್ತಿದ್ದ ವ್ಯಕ್ತಿ ಸೆರೆ
– ಬ್ಯಾಟರಿ ಕಳ್ಳರ ಹಿಡಿದ ಮಾಡಿದ ಬಜಪೆ ಪೊಲೀಸರು
– ಕಾರ್ಕಳ : ಗಾಂಜಾ ಸೇವೆನೆ ನಾಲ್ವರ ಬಂಧನ
– ಕಾರವಾರದಲ್ಲಿ ತಪ್ಪಿದ ಬಾರಿ ಅನಾಹುತ

NAMMUR EXPRESS NEWS
ಉಪ್ಪಿನಂಗಡಿ: ಸಾರ್ವಜನಿಕ ಸ್ಥಳದಲ್ಲಿ ಅಮಲು ಪದಾರ್ಥ ಸೇವಿಸಿ ಅನುಚಿತವಾಗಿ ವರ್ತಿಸುತ್ತಿದ್ದ ವ್ಯಕ್ತಿ ಈಗ ಪೊಲೀಸರ ಅತಿಥಿಯಾಗಿದ್ದಾನೆ. ಬೆಳ್ತಂಗಡಿ ಇಳಂತಿಲ ಗ್ರಾಮದ ನಿವಾಸಿ ಮಹಮ್ಮದ್ ಶಾಫಿ(30) ಎನ್ನಲಾಗಿದೆ.ಉಪ್ಪಿನಂಗಡಿ ಸಿ ಎ ಬ್ಯಾಂಕ್ ಬಳಿ ಆರೋಪಿ ಮಹಮ್ಮದ್ ಶಾಫಿ ಅಮಲು ಪದಾರ್ಥ ಸೇವನೆ ಮಾಡಿ ಅನುಚಿತವಾಗಿ ವರ್ತಿಸುತ್ತಿದ್ದ. ಉಪ್ಪಿನಂಗಡಿ ಪೊಲೀಸರು ವಿಚಾರಿಸಿದಾಗ ಮಾದಕದ್ರವ್ಯ ಗಾಂಜಾ ಸೇವನೆ ಮಾಡಿರುವುದನ್ನು ಒಪ್ಪಿಕೊಂಡಿದ್ದು, ವಶಕ್ಕೆ ಪಡೆದು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದಾಗ ಗಾಂಜಾ ಸೇವನೆ ಮಾಡಿರುವುದು ದೃಢಪಟ್ಟಿದೆ. ಬಂಧಿತ ವ್ಯಕ್ತಿಯಿಂದ ಅಂದಾಜು 5,000/-ಮೌಲ್ಯದ ಮೊಬೈಲ್‌ನನ್ನು ವಶ ಪಡಿಸಿಕೊಳ್ಳಲಾಗಿದೆ. ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರಸ್ತೆ ಬದಿಯಲ್ಲೇ ಎಣ್ಣೆ ಮಾರಾಟ: ಬಂಧನ

ರಸ್ತೆ ಬದಿಯಲ್ಲಿ ಯಾವುದೇ ಪರವಾನಿಗೆ ಇಲ್ಲದೆ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ವಿಟ್ಲ ಪೊಲೀಸರು ವಶಕ್ಕೆ ಪಡೆದುಕೊಂಡ ಘಟನೆ ನೆಟ್ಟ ಮುನ್ನೂರು ಗ್ರಾಮದ ಗಣೇಶ್ ನಗರ ಎಂಬಲ್ಲಿ ನಡೆದಿದೆ.
ಆರೋಪಿಯನ್ನು ಬಂಟ್ವಾಳ ಮುಡೂರು ಗ್ರಾಮದ ನಿವಾಸಿ ಶಶಿಧರ ಶೆಟ್ಟಿ ಎನ್ನಲಾಗಿದೆ. ಆರೋಪಿಯಿಂದ ಅಂದಾಜು ರೂ. 1,516.21/- ಮೌಲ್ಯದ ವಿವಿಧ ಕಂಪೆನಿಯ ಒಟ್ಟು ಪ್ರಮಾಣ 2.880 ಲೀಟರ್ ಅಕ್ರಮ ಮದ್ಯದ ಸ್ಯಾಚೆಟ್ ಗಳು ಹಾಗೂ ಮದ್ಯ ಮಾರಾಟದಿಂದ ಬಂದ ರೂಪಾಯಿ 550/- ವಶಕ್ಕೆ ಪಡೆದುಕೊಂಡಿದ್ದಾರೆ. ಆರೋಪಿಯು ಅನಂತಾಡಿ ಗ್ರಾಮದ ಗೋಳಿಕಟ್ಟೆ ಎಂಬಲ್ಲಿಎಂಬಲ್ಲಿರುವ ಮದಿರಾ ವೈನ್ ಶಾಪ್‌ನಿಂದ ಮದ್ಯವನ್ನು ಖರೀದಿಸಿ ಹೆಚ್ಚಿನ ಬೆಲೆ ಮಾರಾಟ ಮಾಡುವುದಾಗಿ ಒಪ್ಪಿಕೊಂಡಿದ್ದು ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬ್ಯಾಟರಿ ಕಳ್ಳತನ ಮಾಡುತಿದ್ದ ಕುಖ್ಯಾತ ಕಳ್ಳರ ಬಂಧನ

ಬಜಪೆ ಪೊಲೀಸ್ ಠಾಣಾ ವ್ಯಾಪ್ತಿಯ ಅಡೂರು, ಕೈಕಂಬ ಮತ್ತು ಗುರುಪುರ ಭಾಗದಲ್ಲಿ ನಿಲ್ಲಿಸಿದ್ದ ಟಿಪ್ಪರ್ ಲಾರಿ, ಜೆ.ಸಿ.ಬಿ ಮತ್ತು ಇತರ ವಾಹನಗಳಿಂದ ಬ್ಯಾಟರಿಗಳನ್ನು ಕದ್ದವರು ಈಗ ಸಿಕ್ಕಿ ಬಿದ್ದಿದ್ದಾರೆ. ಬಜಪೆ ಪೊಲೀಸ್ ಠಾಣೆಯಲ್ಲಿ 2 ಪ್ರತ್ಯೇಕ ಪ್ರಕರಣಗಳು ದಾಖಲಾಗಿದ್ದು ಈ ಪ್ರಕರಣಗಳಲ್ಲಿ ತನಿಖೆ ನಡೆಸಿದ ಬಜಪೆ ಪೊಲೀಸ್ ನಿರೀಕ್ಷಕರಾದ ಪ್ರಕಾಶ ರವರ ತಂಡ ದಿನಾಂಕ 08-08-2023 ಮಂಗಳೂರು ತಾಲೂಕು ಬಜಪೆ ಗ್ರಾಮದ ಒಡ್ಡಿದ ಕಲ ಎಂಬಲ್ಲಿ ಬ್ಯಾಟರಿಗಳನ್ನು ಕಳವು ಮಾಡಿಕೊಂಡು ಕಾರಿನಲ್ಲಿ ಮಾರಾಟ ಮಾಡಲು ಸಾಗಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.ಆರೋಪಿಗಳಿಂದ ಸರಿ-ಸುಮಾರು 4 ಲಕ್ಷ ರೂಪಾಯಿ ಮೌಲ್ಯದ ಒಂದು ಕಾರು ಮತ್ತು 1.50 ಲಕ್ಷ ರೂಪಾಯಿ ಮೌಲ್ಯದ ಒಟ್ಟು 17 ಅಮ್ರಾನ್ ಬ್ಯಾಟರಿಗಳನ್ನು ಸ್ವಾಧೀನಪಡಿಸಿಕೊಂಡು ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

ಗಾಂಜಾ ಸೇವನೆ: ನಾಲ್ವರು ಪೊಲೀಸರ ವಶ

ಗಾಂಜಾ ಸೇವನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರ್ಕಳ ಹೆಬ್ರಿಯಲ್ಲಿ ನಾಲ್ವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಮಿಯ್ಯಾರು ಗ್ರಾಮದ ನೆಲ್ಲಿಗುಡ್ಡೆಯ ಕಂಬಳ ನಡೆಯುವ ಸ್ಥಳದ ಬಳಿ ಗಾಂಜಾವನ್ನು ಪೇಪರ್‌ನಲ್ಲಿ ಸೇರಿಸಿ ಸಿಗರೇಟ್‌ನಂತೆ ರೋಲ್ ಮಾಡಿ ಸೇದುತ್ತಿದ್ದ ನೆಲ್ಲಿಗುಡ್ಡೆ ಅಡ್ಡರಸ್ತೆಯ ವೇಲುಮುರುಗನ್ ಎಂಬಾತನನ್ನು ಆ. 6ರಂದು ಕಾರ್ಕಳ ನಗರ ಪೊಲೀಸ್ ಪಿಎಸ್‌ಐ ಸಂದೀಪ್ ಕುಮಾರ್ ಶೆಟ್ಟಿ ಬಂಧಿಸಿದ್ದಾರೆ. ವೈದ್ಯಕೀಯ ಪರೀಕ್ಷೆಯಲ್ಲಿ ಈತ ಗಾಂಜಾ ಸೇವಿಸಿರುವುದು ದೃಢಪಟ್ಟಿದೆ. ಕಸಬಾ ಗ್ರಾಮದ ಚತುರ್ಮುಖ ಬಸದಿ ಬಳಿ ಮಾದಕ ವಸ್ತುವನ್ನು ಸುರುಳಿ ಸುತ್ತಿ ಸಿಗರೆಟಿನಂತೆ ಸೇವಿಸುತ್ತಿದ್ದ ವ್ಯಕ್ತಿಯನ್ನು ಆ.7 ರಂದು ಸಂದೀಪ್‌ಕುಮಾರ್ ಶೆಟ್ಟಿ ಬಂಧಿಸಿದ್ದು, ಆರೋಪಿ ಗಾಂಜಾ ಸೇವಿಸಿದ್ದು ವೈದ್ಯಕೀಯ ಪರೀಕ್ಷೆಯಲ್ಲಿದೃಢಪಟ್ಟಿದೆ. ಕಾರ್ಕಳ ನಗರ ಠಾಣೆಯಲ್ಲಿ ದೂರು ದಾಖಲಾಗಿದೆ.

ಇನ್ನೊಂದು ಪ್ರಕರಣದಲ್ಲಿ ಕಸಬಾ ಗ್ರಾಮದ ಆನೆಕೆರೆ ಬಳಿ ಮಂಗಳವಾರ ಗಾಂಜಾ ಸೇವಿಸುತ್ತಿದ್ದ ವ್ಯಕ್ತಿಯನ್ನು ಪಿಎಸ್‌ಐ ಸಂದೀಪ್ ಕುಮಾರ್ ಶೆಟ್ಟಿ ಬಂಧಿಸಿದ್ದು, ವೈದ್ಯಕೀಯ ಪರೀಕ್ಷೆಯಲ್ಲಿ ಆರೋಪಿ ಗಿರೀಶ ಎಂಬಾತ ಗಾಂಜಾ ಸೇವಿಸಿರುವುದು ದೃಢಪಟ್ಟಿದೆ. ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆ.7 ರಂದು ಖಚಿತ ಮಾಹಿತಿ ಆಧಾರದ ಮೇರೆಗೆ ಹೆಬ್ರಿ ಪೊಲೀಸ್ ಠಾಣೆಯ ಪೊಲಿಸ್ ಉಪನಿರೀಕ್ಷಕ ಸುದರ್ಶನ ದೊಡಮನಿ ದಾಳಿ ನಡೆಸಿ ಬಚ್ಚಪ್ಪು ನಿಲ್ದಾಣದ ಬಳಿ ಗಾಂಜಾ ಸೇವಿಸುತ್ತಿದ್ದ ನಿತೇಶ್ ಎಂಬಾತನನ್ನು ವಶಕ್ಕೆ ಪಡೆದಿದ್ದಾರೆ. ಬಳಿಕ ಆತನನ್ನು ವೈದಕೀಯ ಪರೀಕ್ಷೆಗೆ ಒಳಪಡಿಸಿದಾಗ ಗಾಂಜಾ ಸೇವನೆ ಮಾಡಿರುವುದು ಖಚಿತಗೊಂಡಿರುತ್ತದೆ. ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನೌಕಾನೆಲೆಯಲ್ಲಿ ಬೋಟ್ ಇಂಜಿನ್‍ಗೆ ಬೆಂಕಿ: ತಪ್ಪಿದ ಅನಾಹುತ

ಬೋಟ್‍ನ ಇಂಜಿನ್‍ನಲ್ಲಿ ಬೆಂಕಿ ಕಾಣಿಸಿಕೊಂಡು ಆತಂಕಕ್ಕೆ ಕಾರಣವಾದ ಘಟನೆ ಕಾರವಾರದ ಕದಂಬ ನೌಕಾನೆಲೆಯಲ್ಲಿ ನಡೆದಿದೆ. ಕಾರವಾರದ ನೌಕಾನೆಲೆಯಲ್ಲಿ ಹಡಗುಗಳನ್ನು ಡಾಕ್ ಯಾರ್ಡ್ ಗೆ ಎಳೆದು ತರುವ ತೇಜ್ ಹೆಸರಿನ ಟಗ್ ಬೋಟ್‍ನ ಇಂಜಿನ್‍ನಲ್ಲಿ ಬೆಂಕಿ ಕಾಣಿಸಿಕೊಂಡಿದೆ.

ಸಮುದ್ರದಿಂದ ಯುದ್ಧದ ಹಡಗನ್ನು ರಿಪೇರಿಗಾಗಿ ಎಳೆದು ತರಲು ತೆರಳಿದ್ದಾಗ ಬೋಟ್‌ ಇಂಜಿನ್‌ನಲ್ಲಿ ಸಮಸ್ಯೆ ಉಂಟಾಗಿದೆ. ಇದರಿಂದ ಇಂಜಿನ್‍ಗೆ ಬೆಂಕಿ ತಗುಲಿದೆ ಎನ್ನಲಾಗಿದೆ. ಬೋಟ್‍ನ ಒಳಭಾಗದ ಇಂಜಿನ್ ಸಂಪೂರ್ಣ ಸುಟ್ಟು ಹೋಗಿದೆ. ಇದರಿಂದಾಗಿ ನೌಕಾ ನೆಲೆಯ ಡಾಕ್ ಯಾರ್ಡ್‍ನಲ್ಲಿ ಬಾರೀ ಹೊಗೆ ಆವರಿಸಿಕೊಂಡು ಕೆಲ ಕಾಲ ಜನರಲ್ಲಿ ಆತಂಕ ಮನೆ ಮಾಡಿತ್ತು. ತಕ್ಷಣವೇ ಅಗ್ನಿಶಾಮಕ ಸಿಬ್ಬಂದಿಗಳಿಗೆ ಮಾಹಿತಿ ನೀಡಲಾಗಿದೆ. ಬಳಿಕ ನೌಕಾ ದಳದ ಸಿಬ್ಬಂದಿ ಹಾಗೂ ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬೋಟ್‍ನಲ್ಲಿದ್ದ ಸಿಬ್ಬಂದಿ ಸುರಕ್ಷಿತವಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.‌

ಇದನ್ನೂ ಓದಿ : ಭೂತಾನ್ ಅಡಿಕೆ ಬಂದ್ರೂ ತೊಂದರೆ ಇಲ್ಲ- ಆರಗ ಜ್ಞಾನೇಂದ್ರ

[embedyt] https://www.youtube.com/watch?v=rTGqP21dgrM%5B/embedyt%5D

HOW TO APPLY : NEET-UG COUNSELLING 2023

Categories
ಕೊಪ್ಪ ಚಿಕ್ಕಮಗಳೂರು

ಶೃಂಗೇರಿ ಶಾಸಕ ರಾಜೇಗೌಡರಿಗೆ ಮಹತ್ವದ ಹುದ್ದೆ!

ಶೃಂಗೇರಿ ಶಾಸಕ ರಾಜೇಗೌಡರಿಗೆ ಮಹತ್ವದ ಹುದ್ದೆ!
– ಸಾರ್ವಜನಿಕ ಉದ್ದಿಮೆ ಸಮಿತಿ ಸದಸ್ಯರಾಗಿ ಆಯ್ಕೆ
– ಯಾರು ಯಾರು ಇದ್ದಾರೆ ಈ ಸಮಿತಿಯಲ್ಲಿ…?

NAMMUR EXPRESS NEWS
ಶೃಂಗೇರಿ: ವಿಧಾನ ಸಭೆಯ ಸಾರ್ವಜನಿಕ ಉದ್ದಿಮೆ ಸಮಿತಿ ಸದಸ್ಯರಾಗಿ ರಾಜೇಗೌಡ ಅವರು ನೇಮಕವಾಗಿದ್ದಾರೆ.
ವಿಧಾನಸಭೆಯ ಸದಸ್ಯರಾಗಿರುವ ತನ್ವೀರ್ ಸೇಠ್ ಅಧ್ಯಕ್ಷರಾಗಿರುವ ಸಮಿತಿಯಲ್ಲಿ ಶಾಸಕರಾದ ಬಸನಗೌಡ ಆರ್ ಪಾಟೀಲ್, ಜಿಕೆ ವೆಂಕಟಶಿವಾರೆಡ್ಡಿ, ಡಾ. ಸಿ ಎನ್ ಅಶ್ವಥ್ ನಾರಾಯಣ್, ಎಂ ಸತೀಶ್ ರೆಡ್ಡಿ, ಯು ಬಿ ಬಣಕಾರ್, ಡಾ. ಅಜಯ್ ಧರ್ಮಸಿಂಗ್, ಡಿ. ಜಿ ಶಾಂತನಗೌಡ, ಎಆರ್ ಕೃಷ್ಣಮೂರ್ತಿ, ಎಬಿ ರಮೇಶ ಬಂಡಿಸಿದ್ದೇಗೌಡ, ವಿನಯ್ ಕುಲಕರ್ಣಿ, ಬಿ ಎ ಬಸವರಾಜ, ಕಾಶಪ್ಪನವರ್ ಶಿವಶಂಕರಪ್ಪ ವಿಜಯಾನಂದ, ಟಿಡಿ ರಾಜೇಗೌಡ, ಜಿ ಜನಾರ್ದನ್ ರೆಡ್ಡಿ ಆಯ್ಕೆಯಾಗಿದ್ದಾರೆ.

ವಿಧಾನ ಪರಿಷತ್ನ ಸದಸ್ಯರಾಗಿ ಪ್ರಕಾಶ್ ಬಾಬಣ್ಣ ಹುಕ್ಕೇರಿ, ಎಸ್ ರವಿ, ನಿರಾಣಿ ಹನುಮಂತ ರುದ್ರಪ್ಪ, ಸಿ ಎನ್ ಮಂಜೇಗೌಡ, ಚಲವಾದಿ ಟಿ ನಾರಾಯಣಸ್ವಾಮಿ ಆಯ್ಕೆಯಾಗಿದ್ದಾರೆ. ಕರ್ನಾಟಕ ವಿಧಾನಸಭೆಯ ಕಾರ್ಯ ವಿಧಾನ ಮತ್ತು ನಡವಳಿಕೆಯ ನಿಯಮ 211(2) ರ ಮೇರೆಗೆ, ಮಾನ್ಯ ಸಭಾಧ್ಯಕ್ಷರು ಶ್ರೀ ತನ್ವೀರ್ ಸೇಠ್ ಅವರನ್ನು ಸಮಿತಿಯ ಅಧ್ಯಕ್ಷರನ್ನಾಗಿ ನೇಮಕ ಮಾಡಿರುತ್ತಾರೆ.

ಇದನ್ನೂ ಓದಿ : ಭೂತಾನ್ ಅಡಿಕೆ ಬಂದ್ರೂ ತೊಂದರೆ ಇಲ್ಲ- ಆರಗ ಜ್ಞಾನೇಂದ್ರ

[embedyt] https://www.youtube.com/watch?v=rTGqP21dgrM%5B/embedyt%5D

HOW TO APPLY : NEET-UG COUNSELLING 2023

Categories
ಚಿಕ್ಕಮಗಳೂರು

ಕಾಲೇಜಿನ ತರಗತಿಯಲ್ಲಿ ಹಿಜಾಬ್, ಬುರ್ಖಾ?

ಕಾಲೇಜಿನ ತರಗತಿಯಲ್ಲಿ ಹಿಜಾಬ್, ಬುರ್ಖಾ?
– ಚಿಕ್ಕಮಗಳೂರು ಕಾಲೇಜಿನಲ್ಲಿ ವಿವಾದ
– ಉಡುಪಿ ಕಾಲೇಜಿಗೆ ಆಗಮಿಸಿದ ಸಿಐಡಿ ತನಿಖೆ ಶುರು
– ಇಡೀ ಪ್ರಕರಣ ಮರುಸೃಷ್ಟಿ ಮಾಡಿ ತನಿಖೆ

NAMMUR EXPRESS NEWS
ಚಿಕ್ಕಮಗಳೂರು: ಚಿಕ್ಕಮಗಳೂರಿನ ಐ.ಡಿ.ಎಸ್.ಜಿ ಕಾಲೇಜಿನಲ್ಲಿ ವಿದ್ಯಾರ್ಥಿನಿಯರು ಬುರ್ಖಾ ಹಾಗೂ ಹಿಜಾಬ್ ಧರಿಸಿ ತರಗತಿಯಲ್ಲಿ ಕುಳಿತಿರುವ ಹಾಗೂ ಕಾಲೇಜು ಕಾರಿಡಾರಿನಲ್ಲಿ ಓಡಾಡುತ್ತಿರುವ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದೆ. ಇದೀಗ ಸದ್ಯಕ್ಕೆ ವಿವಾದ ಸೃಷ್ಟಿ ಮಾಡಿದೆ.
ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ಸ್ಥಳಕ್ಕೆ ಎಎಸ್‌ಪಿ ಹಾಗೂ ಡಿವೈಎಸ್‌ಪಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಹಾಗೂ ಹಲವು ಮಂದಿ ಪೊಲೀಸರು ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದಾರೆ.

ಉಡುಪಿ ವಿಡಿಯೋ ಪ್ರಕರಣ: ಹೊಸ ತನಿಖೆ ಶುರು

ಉಡುಪಿಯ ನೇತ್ರಜ್ಯೋತಿ ಪ್ಯಾರಾ ಮೆಡಿಕಲ್ ಕಾಲೇಜಿನ ಶೌಚಾಲಯದ ವಿಡಿಯೋ ಪ್ರಕರಣದ ಸಂತ್ರಸ್ಥೆ ವಿದ್ಯಾರ್ಥಿನಿಯಿಂದ ಬುಧವಾರ ಸಿಐಡಿ ಪೊಲೀಸರು ಹೇಳಿಕೆಯನ್ನು ಪಡೆದುಕೊಂಡಿದ್ದಾರೆ. ಉಡುಪಿ ಪೊಲೀಸರು ತನಿಖೆ ನಡೆಸುತ್ತಿದ್ದ ಈ ಪ್ರಕರಣವನ್ನು ರಾಜ್ಯ ಸರ್ಕಾರ ಸೋಮವಾರ ಹಠಾತ್ ಸಿಐಡಿಗೆ ಒಪ್ಪಿಸಿದೆ. ಸಿಐಡಿ ತಂಡ ಮಂಗಳವಾರ ಉಡುಪಿಗೆ ಆಗಮಿಸಿ ತನಿಖೆ ಆರಂಭಿಸಿದೆ. ಬುಧವಾರ ಸಿಐಡಿ ಎಸ್ಪಿ ರಾಘವೇಂದ್ರ ಹೆಗಡೆ ಅವರು ಕಾಲೇಜಿಗ ಭೇಟಿ ನೀಡಿ ಘಟನಾ ಸ್ಥಳವನ್ನು ಪರಿಶೀಲಿಸಿದರು. ನಂತರ ಸಂತ್ರಸ್ಥೆಯನ್ನು ಕಾಲೇಜಿಗೆ ಬರ ಮಾಡಿಕೊಂಡು ಆಕೆಯಿಂದ ಹೇಳಿಕೆಯನ್ನೂ ಪಡೆದರು. ಆಳೆತ್ತರದ ಗೊಂಬೆಯನ್ನು ಕಾಲೇಜಿನ ಶೌಚಾಲಯದ ಎದುರು ನಿಲ್ಲಿಸಿ ಘಟನೆಯ ಮರುಸೃಷ್ಟಿ ಮಾಡುವುದರ ಮೂಲಕ ತನಿಖೆಯನ್ನು ನಡೆಸಲಾಯಿತು.

ಸಂತ್ರಸ್ಥೆ ಇನ್ನೂ ತನ್ನ ಮೇಲಾಗಿರುವ ದೌರ್ಜನ್ಯದ ಬಗ್ಗೆ ದೂರು ನೀಡಿಲ್ಲ. ಆದ್ದರಿಂದ ಆಕೆಯ ಹೇಳಿಕೆಯೇ ಈಗ ಸಿಐಡಿಗೆ ಮುಖ್ಯ ಸಾಕ್ಷ್ಯವಾಗಲಿದೆ. ಸಿಐಡಿಯ ಇನ್ನೊಂದು ತಂಡ ಉಡುಪಿ ಪೊಲೀಸರು ಹಸ್ತಾಂತರಿಸಿರುವ ಕಾಲೇಜಿನ ಮತ್ತು ಅಕ್ಕಪಕ್ಕದ ಸಿಸಿ ಕ್ಯಾಮೆರಾಗಳ ದೃಶ್ಯಾವಳಿಗಳನ್ನು ಪರಿಶೀಲಿಸಿತು.ಎಫ್ ಎಸ್ ಎ ವರದಿ ಬಂದಿಲ್ಲ ಕಾಲೇಜಿನ ಶೌಚಾಲಯದಲ್ಲಿ ಮೂವರು ಮುಸ್ಲಿಂ ವಿದ್ಯಾರ್ಥಿನಿಯರು ಹಿಂದೂ ವಿದ್ಯಾರ್ಥಿಯೊಬ್ಬಳ ಖಾಸಗಿ ವಿಡಿಯೋ ಮಾಡಿದ್ದಾರೆ ಎಂಬ ಈ ಪ್ರಕರಣದಲ್ಲಿ, ಆರೋಪಿಗಳಿಂದ ವಶಪಡಿಸಿಕೊಳ್ಳಲಾದ 3 ಐಫೋನ್ ಗಳನ್ನು ಹೈದರಾಬಾದಿನ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದ್ದು, ಅದರ ವರದಿ ಇನ್ನೂ ಬಂದಿಲ್ಲ. ಆದ್ದರಿಂದ ಪ್ರಕರಣಕ್ಕೆ ಸಂಬಂಧಿಸಿದ ಪ್ರಮುಖ ಸಾಕ್ಷ್ಯ ವಿಡಿಯೋ ಸಿಗದೇ ಪ್ರಕರಣದ ಬಗ್ಗೆ ಇದುವರೆಗೆ ಯಾವುದೇ ಸ್ಪಷ್ಟತೆ ಸಿಗುತ್ತಿಲ್ಲ.

ಇದನ್ನೂ ಓದಿ : ಭೂತಾನ್ ಅಡಿಕೆ ಬಂದ್ರೂ ತೊಂದರೆ ಇಲ್ಲ- ಆರಗ ಜ್ಞಾನೇಂದ್ರ

[embedyt] https://www.youtube.com/watch?v=rTGqP21dgrM%5B/embedyt%5D

HOW TO APPLY : NEET-UG COUNSELLING 2023

Categories
ತೀರ್ಥಹಳ್ಳಿ

ಶಿವನ ದೇಗುಲದಲ್ಲಿ ವಿಸ್ಮಯ!

ಶಿವನ ದೇಗುಲದಲ್ಲಿ ವಿಸ್ಮಯ!
– ದೇವರ ಲಿಂಗದ ಮೇಲೆ 5 ನಿಮಿಷಗಳ ಕಾಲ ಬಿತ್ತು ಸೂರ್ಯನ ಕಿರಣ
– ತೀರ್ಥಹಳ್ಳಿ ಕಿತ್ತನಗದ್ದೆಯ ಶ್ರೀಸಾಂಬ ಸದಾಶಿವ ದೇಗುಲ

NAMMUR EXPRESS
ತೀರ್ಥಹಳ್ಳಿ: ತೀರ್ಥಹಳ್ಳಿ ಸಮೀಪದ ಕಿತ್ತನಗದ್ದೆಯ ಶ್ರೀಸಾಂಬ ಸದಾಶಿವ ಮತ್ತು ಮಹಿಷ ಮರ್ದಿನಿ ದೇವಸ್ಥಾನದಲ್ಲಿ ಇದೀಗ ವಿಶೇಷ ಘಟನೆಯೊಂದು ನಡೆದಿದೆ. ಸೂರ್ಯ ದೇವರ ಕ್ಷಕಿರಣದ ಬೆಳಕು ಶ್ರೀ ಸಾಂಬ ಸದಾಶಿವ ದೇವರ ಲಿಂಗದ ಮೇಲೆ 5 ನಿಮಿಷಗಳ ಕಾಲ ಪ್ರಜ್ವಲಿಸಿದ್ದು ಇದೀಗ ಭಕ್ತ ವಲಯದಲ್ಲಿ ಕುತೂಹಲ ಮೂಡಿಸಿದೆ. ದೇವಸ್ಥಾನದ ಪುನರ್ ಪ್ರತಿಸ್ಥಾಪನೆ ಬ್ರಹ್ಮಕುಂಭಾಭಿಷೇಕ ಸಮಾರಂಭವು ಇದೆ ಜೂನ್ 12ರಂದು ವೈಭವಪೂರಿತವಾಗಿ ನೆರವೇರಿತ್ತು. ಅಂದಿನಿಂದ ಪ್ರತಿ ದಿವಸ ಬೆಳಿಗ್ಗೆ ಹಾಗೂ ಸಂಜೆ ಅರ್ಚಕರಾದ ಶ್ರೀರಾಮ ಪ್ರಸಾದ ಭಟ್ಟರು ಪೂಜಾ ವಿಧಿ ವಿಧಾನಗಳನ್ನು ನೆರವೇರಿಸಿಕೊಂಡು ಬರುತ್ತಿದ್ದರು.

ಆ.10ರ ಗುರುವಾರ ಬೆಳಿಗ್ಗೆ 8:00 ಘಂಟೆಯಿಂದ ಪೂಜೆ ನಡೆಯಿತ್ತಿರುವಾಗ 8:20ರ ಸಮಯದ ದಕ್ಷಿಣಾಯನ ಪುಣ್ಯ ಕಾಲದ ಘಳಿಗೆಯಲ್ಲಿ ಭಗವಾನ್ ಸೂರ್ಯ ದೇವರ ಕ್ಷಕಿರಣದ ಬೆಳಕು ಶ್ರೀ ಸಾಂಬ ಸದಾಶಿವ ದೇವರ ಲಿಂಗದ ಮೇಲೆ 5 ನಿಮಿಷಗಳ ಕಾಲ ಪ್ರಜ್ವಲಿಸಿತ್ತು. ಇದು ಒಂದು ಶುಭಸಂದರ್ಭದ ವಿಸ್ಮಯಕಾರಿ ಘಳಿಗೆಯಾಗಿದೆ. ಇದೀಗ ಈ ಘಟನೆ ಭಕ್ತರಲ್ಲಿ ಪುಳಕ ಉಂಟು ಮಾಡಿದೆ.

ಇದನ್ನೂ ಓದಿ : ಭೂತಾನ್ ಅಡಿಕೆ ಬಂದ್ರೂ ತೊಂದರೆ ಇಲ್ಲ- ಆರಗ ಜ್ಞಾನೇಂದ್ರ

[embedyt] https://www.youtube.com/watch?v=rTGqP21dgrM%5B/embedyt%5D

HOW TO APPLY : NEET-UG COUNSELLING 2023

Categories
ತೀರ್ಥಹಳ್ಳಿ

ರಾಜಕೀಯ ಆಟದಲ್ಲೂ ವಿಧಾತ ಅನಿಲ್ ದಿಗ್ವಿಜಯ!

ರಾಜಕೀಯ ಆಟದಲ್ಲೂ ವಿಧಾತ ಅನಿಲ್ ದಿಗ್ವಿಜಯ!
– ತ್ರಿಯಂಬಕಪುರ ಗ್ರಾಪಂ ಅಧ್ಯಕ್ಷರಾಗಿ ಮರು ಆಯ್ಕೆ: ಉಪಾಧ್ಯಕ್ಷರಾಗಿ ಲಕ್ಷೀದೇವಿ

NAMMUR EXPRESS NEWS
ತೀರ್ಥಹಳ್ಳಿ: ತ್ರಿಯಂಬಕಪುರ ಗ್ರಾಮ ಪಂಚಾಯತಿಯ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕಾಗಿ ನಡೆದ ಚುನಾವಣೆಯಲ್ಲಿ ಗೆಲುವು ಸಾಧಿಸಿ ಅಧ್ಯಕ್ಷರಾಗಿ ವಿಧಾತ ಅನಿಲ್ ಎರಡನೇ ಬಾರಿಗೆ ಮರು ಆಯ್ಕೆಯಾಗಿದ್ದಾರೆ. ಈ ಮೂಲಕ ರಾಜಕೀಯ ಆಟದಲ್ಲೂ ವಿಧಾತ ಅನಿಲ್ ದಿಗ್ವಿಜಯ ಸಾಧಿಸಿದ್ದಾರೆ. ಇನ್ನು ಉಪಾಧ್ಯಕ್ಷರಾಗಿ ಲಕ್ಷೀದೇವಿ ಆಯ್ಕೆಯಾಗಿದ್ದಾರೆ. ಆ.10ರಂದು ನಡೆದ ಚುನಾವಣೆಯಲ್ಲಿ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ತೀವ್ರ ಪೈಪೋಟಿ ಏರ್ಪಟ್ಟಿತ್ತು. ಕಳೆದ ಬಾರಿ ವಿಧಾನ ಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ನಿಂದ ಬಿಜೆಪಿ ಸೇರ್ಪಡೆಗೊಂಡ ಇರ್ವರು ಮಹಿಳಾ ಸದಸ್ಯರೂ ಸೇರಿದಂತೆ ಹಾಲಿ ಬಿಜೆಪಿ ಬೆಂಬಲಿತ 8 ಮಂದಿ ಸದಸ್ಯರುಗಳಿದ್ದೂ ಉಪಾಧ್ಯಕ್ಷ ಸ್ಥಾನಕ್ಕಾಗಿ ನಡೆದ ಪೈಪೋಟಿಯಲ್ಲಿ ಲಾಭಿ ಮಾಡಲು ಹೊರಟ ಕಾಂಗ್ರೆಸ್ ಹಣದ ಹೊಳೆಯನ್ನೇ ಹರಿಸಿತ್ತಾದರೂ ಸಂಘಟನಾ ಶಕ್ತಿಯ ಮುಂದೆ ಮುಖಭಂಗಕ್ಕೀಡಾಗಿದೆ.

ಅಧ್ಯಕ್ಷ ಸ್ಥಾನಕ್ಕೆ ಬಿಸಿಎಂ-ಬಿ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಬಿಸಿಎಂ-ಎ (ಮಹಿಳೆ) ಮೀಸಲಾತಿ ನಿಗದಿಯಾಗಿತ್ತು.ಬಿಜೆಪಿ ಬೆಂಬಲಿತರಲ್ಲೇ ಬಿಸಿಎಂ-ಎ ಮೂವರು ಮಹಿಳಾ ಸದಸ್ಯರಿದ್ದು ಉಪಾಧ್ಯಕ್ಷ ಸ್ಥಾನಕ್ಕಾಗಿ ತೀವ್ರ ಹಣಾಹಣಿ ಏರ್ಪಟ್ಟಿತ್ತು.ಅಧ್ಯಕ್ಷ ಸ್ಥಾನಕ್ಕಾಗಿ ವಿಧಾತ ಅನಿಲ್ ಮತ್ತು ಹುಲ್ಲತ್ತಿ ದಿನೇಶ್ ಹಾಗೂ ಉಪಾಧ್ಯಕ್ಷ ಸ್ಥಾನಕ್ಕಾಗಿ ಲಕ್ಷೀದೇವಿ-ರೇಖಾ ಮಂಜುನಾಥ್ ನಡುವೆ ಚುನಾವಣೆ ನಡೆದು ತಲಾ 6 ಮತಗಳಿಂದ ವಿಧಾತ ಅನಿಲ್-ಲಕ್ಷ್ಮೀದೇವಿ ಜಯಗಳಿಸಿದ್ದು 5 ಮತಗಳನ್ನು ಪಡೆದು ಹುಲ್ಲತ್ತಿ ದಿನೇಶ್- ರೇಖಾ ಮಂಜುನಾಥ್ ಪರಾಭವಗೊಂಡಿದ್ದಾರೆ.

ಇದನ್ನೂ ಓದಿ : ಭೂತಾನ್ ಅಡಿಕೆ ಬಂದ್ರೂ ತೊಂದರೆ ಇಲ್ಲ- ಆರಗ ಜ್ಞಾನೇಂದ್ರ

[embedyt] https://www.youtube.com/watch?v=rTGqP21dgrM%5B/embedyt%5D

HOW TO APPLY : NEET-UG COUNSELLING 2023

Categories
ತೀರ್ಥಹಳ್ಳಿ

ಹೊದಲ, ನೊಣಬೂರು ಬಿಜೆಪಿ ಬೆಂಬಲಿತರಿಗೆ ಹುದ್ದೆ

ಹೊದಲ, ನೊಣಬೂರು ಬಿಜೆಪಿ ಬೆಂಬಲಿತರಿಗೆ ಹುದ್ದೆ
– ಹೊದಲ ಗ್ರಾಪಂ ಅಧ್ಯಕ್ಷರಾಗಿ ಅನಿತಾ ಶ್ರೀಧರ್, ಉಪಾಧ್ಯಕ್ಷರಾಗಿ ಕವಿತಾ ಶ್ರೀಧರ್
– ನೊಣಬೂರು: ಅಧ್ಯಕ್ಷರಾಗಿ ನಾಗರಾಜ್ ಶಿರಿಗಾರು, ಉಪಾಧ್ಯಕ್ಷರಾಗಿ ಕವಿತಾ ರಮೇಶ್

NAMMUR EXPRESS NEWS
ತೀರ್ಥಹಳ್ಳಿ: ಹೊದಲ ಅರಳಾಪುರ ಗ್ರಾಮ ಪಂಚಾಯತಿ ಅಧ್ಯಕ್ಷರಾಗಿ ಬಿಜೆಪಿ ಬೆಂಬಲಿತ ಸದಸ್ಯೆ ಅನಿತಾ ಶ್ರೀಧರ್ ಹಾಗೂ ಉಪಾಧ್ಯಕ್ಷರಾಗಿ ಬಿಜೆಪಿ ಬೆಂಬಲಿತ ಸದಸ್ಯೆ ಕವಿತಾ ಶ್ರೀಧರ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಈ ಸಂದರ್ಭದಲ್ಲಿ ತಾಲ್ಲೂಕು ಪಂಚಾಯತ್ ಮಾಜಿ ಸದಸ್ಯರಾದ ಕುಕ್ಕೆ ಪ್ರಶಾಂತ್ ಹಾಗೂ ಶ್ರೀಮತಿ ಗೀತಾ ಶೆಟ್ಟಿ ಉಪಸ್ಥಿತರಿದ್ದರು. ಮುಖಂಡರಾದ ದಿನೇಶ್ ಹೊದಲ, ಶ್ರೀ ಹರ್ಷ ಆರಳಾಪುರ,ಗಂಗಾಧರ್ ತಲವಡಗ, ಚಂದ್ರಶೇಖರ್ ಹೆಗ್ಡೆ, ಕೀರ್ತಿರಾಜ್ ಹೊದಲ, ಸಂತೋಷ್ ತುಡ್ಕಿ, ವಿಶ್ವನಾಥ್ ಪ್ರಭು ಹೊದಲ ಉಪಸ್ಥಿತರಿದ್ದರು.

ನೊಣಬೂರು: ಅಧ್ಯಕ್ಷರಾಗಿ ನಾಗರಾಜ್ ಶಿರಿಗಾರು, ಉಪಾಧ್ಯಕ್ಷರಾಗಿ ಕವಿತಾ ರಮೇಶ್ ಆಯ್ಕೆ

ತೀರ್ಥಹಳ್ಳಿ ತಾಲೂಕು ನೊಣಬೂರು ಗ್ರಾಮ ಪಂಚಾಯತಿ ಅಧ್ಯಕ್ಷರಾಗಿ ನಾಗರಾಜ್ ಶಿರಿಗಾರು ಹಾಗೂ ಉಪಾಧ್ಯಕ್ಷರಾಗಿ ಕವಿತಾ ರಮೇಶ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಬುಧವಾರ ನಡೆದ ಅಧ್ಯಕ್ಷರ ಮತ್ತು ಉಪಾಧ್ಯಕ್ಷರ ಚುನಾವಣೆಯಲ್ಲಿ ಗ್ರಾಮ ಪಂಚಾಯತಿಯ ಒಟ್ಟು ಸದಸ್ಯ ಬಲದ ಒಂಬತ್ತರಲ್ಲಿ ಏಳು ಬಿಜೆಪಿ ಬೆಂಬಲಿತ ಸದಸ್ಯರ ಪೈಕಿ ಅಧ್ಯಕ್ಷರಾಗಿ ನಾಗರಾಜ್ ಶಿರಿಗಾರು ಹಾಗೂ ಉಪಾಧ್ಯಕ್ಷರಾಗಿ ಕವಿತಾ ರಮೇಶ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ವೀಕ್ಷಕರಾಗಿ ಮುಖ್ಯ ಇಂಜಿನಿಯರ್ ಅಣ್ಣಪ್ಪ ಆಗಮಿಸಿದ್ದರು.

ಮುಖಂಡರುಗಳಾದ ಚಂದುವಳ್ಳಿ ಸೋಮಶೇಖರ್, ಎಂ. ಸಿ ಶ್ರೀಧರ್, ಸಿ. ಎಂ ಪ್ರಕಾಶ್, ಅನಂತರಾಮಯ್ಯ, ಶಿವಕುಮಾರ್, ಎಂ. ಎಸ್. ಶ್ರೀಧರ್, ರವಿ ಶೆಟ್ಟಿ, ಸುದೀಪ್, ಕೆ ಕುಮಾರ್, ಸಹಕಾರಿ ಸಂಘದ ನಿರ್ದೇಶಕರಾದ ಪರಮೇಶ್, ಉಪಾಧ್ಯಕ್ಷರಾದ ರಾಘವೇಂದ್ರ ಬಂದ್ಯಾ ಸೇರಿದಂತೆ ಪಂಚಾಯತ್ ಎಲ್ಲಾ ಸದಸ್ಯರು, ಹಿರಿಯ ಮುಖಂಡರುಗಳು, ಸಹಕಾರ ಸಂಘದ ನಿರ್ದೇಶಕರು, ಊರಿನ ಗ್ರಾಮಸ್ಥರು, ಕಾರ್ಯ ಕರ್ತರು ಉಪಸ್ಥಿತರಿದ್ದರು.

ಇದನ್ನೂ ಓದಿ : ಭೂತಾನ್ ಅಡಿಕೆ ಬಂದ್ರೂ ತೊಂದರೆ ಇಲ್ಲ- ಆರಗ ಜ್ಞಾನೇಂದ್ರ

[embedyt] https://www.youtube.com/watch?v=rTGqP21dgrM%5B/embedyt%5D

HOW TO APPLY : NEET-UG COUNSELLING 2023

Categories
ತೀರ್ಥಹಳ್ಳಿ

ಕೋಣಂದೂರು ಗ್ರಾಮ ಪಂಚಾಯ್ತಿ ಕೈ ವಶ!

ಕೋಣಂದೂರು ಗ್ರಾಮ ಪಂಚಾಯ್ತಿ ಕೈ ವಶ!
– ಅಧ್ಯಕ್ಷರಾಗಿ ಮಂಗಳ ಗೋಪಿ, ಉಪಾಧ್ಯಕ್ಷರಾಗಿ ಸುಜಾತಾ ಚೂಡಾಮಣಿ ಆಯ್ಕೆ
– ಬಿಜೆಪಿ ಕೈಯಲ್ಲಿದ್ದ ಆಡಳಿತ ಈಗ ಕಾಂಗ್ರೆಸ್ ಬೆಂಬಲಿತರ ಪಾಲು

NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ತಾಲೂಕಿನ ಪ್ರತಿಷ್ಠಿತ ಕೋಣಂದೂರು ಗ್ರಾಮಪಂಚಾಯತಿ ಅಧ್ಯಕ್ಷ ಉಪಾಧ್ಯಕ್ಷ ರ ಚುನಾವಣೆ ಪ್ರಕ್ರಿಯೆಯಲ್ಲಿ ಎರಡೂ ಹುದ್ದೆಯನ್ನು ಕಾಂಗ್ರೆಸ್ ಬೆಂಬಲಿತರು ಪಡೆದಿದ್ದಾರೆ. ಗ್ರಾಮ ಪಂಚಾಯತ್ ಅಧ್ಯಕ್ಷರಾಗಿ ಕಾಂಗ್ರೆಸ್‌ ಮುಖಂಡ ಎಂ. ಆರ್.ಸತೀಶ್ ( ಮಂಗಳ ಗೋಪಿ) ಗೆಲುವು ಸಾಧಿಸಿದ್ದಾರೆ. ಇವರು ಗುಡ್ಡೆಕೊಪ್ಪ ಗ್ರಾಮ ಪಂಚಾಯ್ತಿಯಲ್ಲಿ ಈ ಹಿಂದೆ ಮೂರು ಅವಧಿ ಅದ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು. ಉಪಾಧ್ಯಕ್ಷರಾಗಿ ಕಾಂಗ್ರೇಸ್ ಮುಖಂಡ ಚುಡಾಮಣಿಯವರ ಪತ್ನಿ ಸುಜಾತ ಚುಡಾಮಣಿಯವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಈ ಹಿಂದೆ ಬಿಜೆಪಿ ಬೆಂಬಲಿತರ ಆಡಳಿತದಲ್ಲಿ ಇದ್ದ ಪಂಚಾಯ್ತಿ ಅಧಿಕಾರ ಕಾಂಗ್ರೇಸ್ ತೆಕ್ಕೆಗೆ ಬಂದಿದೆ. ಇನ್ನು ಚುನಾವಣೆಯಲ್ಲಿ ಬಿಜೆಪಿ ಸದಸ್ಯರು ಗೈರಾಗಿದ್ದರು.

ಇದನ್ನೂ ಓದಿ : ಭೂತಾನ್ ಅಡಿಕೆ ಬಂದ್ರೂ ತೊಂದರೆ ಇಲ್ಲ- ಆರಗ ಜ್ಞಾನೇಂದ್ರ

[embedyt] https://www.youtube.com/watch?v=rTGqP21dgrM%5B/embedyt%5D

HOW TO APPLY : NEET-UG COUNSELLING 2023

Categories
ರಾಜ್ಯ

ಟೊಮೆಟೊ ಕಡಿಮೆಯಾಯ್ತು, ಅರಿಶಿಣಕ್ಕೆ ದಾಖಲೆ ಬೆಲೆ!

ಟೊಮೆಟೊ ಕಡಿಮೆಯಾಯ್ತು, ಅರಿಶಿಣಕ್ಕೆ ದಾಖಲೆ ಬೆಲೆ!
– 80-90 ರೂ.ಸನಿಹಕ್ಕೆ ಬಂದ ಟೊಮೆಟೊ ದರ
– ಶುಂಠಿ ಬಳಿಕ ಈಗ ಅರಿಶಿಣಕ್ಕೆ ಭಾರೀ ಡಿಮ್ಯಾಂಡ್!
– ಕೃಷಿ ಬೆಲೆ ಏರಿಕೆ: ರೈತರಿಗೆ ಸಿಕ್ತಾ ಇದ್ಯಾ ಹಣ..?

ಗುಂಡ್ಲುಪೇಟೆ/ ಕೋಲಾರ: ಟೊಮೆಟೊ, ಈರುಳ್ಳಿ, ಕೊಬರಿ, ಶುಂಠಿ ಬಳಿಕ ಈಗ ಅರಿಶಿಣದ ಬೆಲೆ ಏರಿಕೆ ಆಗಿದೆ.
300 ರೂ. ಗಡಿಯಲ್ಲಿದ್ದ ಟೊಮೆಟೊ ದರ ನಿಧಾನಕ್ಕೆ ಕುಸಿಯುತ್ತಿದ್ದು 80-90 ಅಸುಪಾಸಿಗೆ ಬಂದಿದೆ. ಇನ್ನು ಶುಂಠಿ ದರ ಕೂಡ ಹೆಚ್ಚಾಗಿರುವ ನಡುವೆ ಈಗ ಅರಿಶಿಣಕ್ಕೆ ಡಿಮ್ಯಾಂಡ್ ಬಂದಿದೆ. ಬೆಲೆ ಕುಸಿತ, ಕನಿಷ್ಠ ಬೆಂಬಲ ಬೆಲೆಯೂ ಇಲ್ಲದೆ ನಿರೀಕ್ಷಿತ ಪ್ರಮಾಣದಲ್ಲಿ ವೈಜ್ಞಾನಿಕ ಬೆಲೆ ಸಿಗುತ್ತಿಲ್ಲವೆಂದು ನಿರಾಸೆಗೊಂಡಿದ್ದ ಅರಿಶಿಣ ಬೆಳೆಗಾರರಿಗೆ ಈಗ ಅದೃಷ್ಟ ಕೂಡಿ ಬಂದಿದ್ದು, ಬೆಲೆ ದಿಢೀರ್ ಏರಿಕೆಯಾಗಿದೆ. ಹೊರ ಮಾರುಕಟ್ಟೆಯಲ್ಲಿ ಭಾರೀ ಡಿಮ್ಯಾಂಡ್!: ಬೆಳಗಾವಿ ಗಡಿಗೆ ಹೊಂದಿಕೊಂಡ ಮಹಾರಾಷ್ಟ್ರದ ಸಾಂಗ್ಲಿ ಮಾರುಕಟ್ಟೆಯಲ್ಲಿ ಅತಿದಪ್ಪ, ದಪ್ಪ ಮತ್ತು ಸಾಮಾನ್ಯ ಎಂದು ವಿಂಗಡನೆ ಮಾಡಿದ ಅರಿಶಿಣವನ್ನು ಕ್ವಿಂಟಾಲ್‌ಗೆ 22 ಸಾವಿರ ರೂ. ಬೆಲೆಗೆ ಮಾರಾಟ ಮಾಡಲಾಗಿದೆ.

ತಮಿಳುನಾಡಿನ ಈರೋಡು ಮಾರುಕಟ್ಟೆಯಲ್ಲಿ ಪ್ರಸ್ತುತ ವಿಂಗಡನೆ ಆಧಾರದಲ್ಲಿ ಪಾಲಿಶ್ ಮಾಡಿದ ಅರಿಶಿಣ ಕ್ವಿಂಟಾಲ್‌ಗೆ 15 ಸಾವಿರ `ದವರೆಗೂ ಮಾರಾಟವಾಗುತ್ತಿದೆ. ಆದರೆ, ಈಗಾಗಲೇ ಕ್ವಿಂಟಾಲ್‌ ಗೆ 6,500 ರಿಂದ 7,000 ರೂ.ಗೆ ಮಾರಾಟ ಮಾಡಿರುವ ರೈತರು, ಈಗಿನ ಧಾರಣೆ ನೋಡಿ ಬೇಸರಿಸಿಕೊಂಡಿದ್ದಾರೆ. ಉತ್ತರ ಕರ್ನಾಟಕದಲ್ಲಿ ತಡವಾಗಿ ಮುಂಗಾರು ಆಗಮನವಾದ ಹಿನ್ನೆಲೆಯಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಅರಿಶಿಣ ನಾಟಿ ಮಾಡಿಲ್ಲ. ಬೆಲೆ ಕುಸಿತದ ಹಿನ್ನೆಲೆಯಲ್ಲಿ ಬೆಳೆ ಪ್ರದೇಶ ಅರ್ಧದಷ್ಟು ಕಡಿಮೆಯಾಗಿದೆ.

ರೈತರಿಗೆ ಸಿಗುತ್ತಾ ಹಣ?

ಯಾವುದೇ ಬೆಳೆ ಬೆಲೆ ಏರಿಕೆ ಆದಾಗ ರೈತರಿಗೆ ಬೆಲೆ ಸಂಪೂರ್ಣ ಸಿಗಲ್ಲ. ಕೃತಕ ಮಾರುಕಟ್ಟೆ, ದಲ್ಲಾಳಿ ವ್ಯವಸ್ಥೆ ಬಹುತೇಕ ಲಾಭ ಪಡೆಯುತ್ತಿದೆ. ಈಗಲೂ ಹಾಗೆ ಆಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ.

ಇದನ್ನೂ ಓದಿ : ಭೂತಾನ್ ಅಡಿಕೆ ಬಂದ್ರೂ ತೊಂದರೆ ಇಲ್ಲ- ಆರಗ ಜ್ಞಾನೇಂದ್ರ

[embedyt] https://www.youtube.com/watch?v=rTGqP21dgrM%5B/embedyt%5D

HOW TO APPLY : NEET-UG COUNSELLING 2023

Categories
ತೀರ್ಥಹಳ್ಳಿ

ಬಿದರಗೋಡು ಗ್ರಾಪಂ ಅಧ್ಯಕ್ಷ ಸ್ಥಾನಕ್ಕೆ ಸೂಚಕರೇ ಇಲ್ಲ!

ಬಿದರಗೋಡು ಗ್ರಾಪಂ ಅಧ್ಯಕ್ಷ ಸ್ಥಾನಕ್ಕೆ ಸೂಚಕರೇ ಇಲ್ಲ!
– ತೀರ್ಥಹಳ್ಳಿ ತಾಲೂಕಿನ ಬಿದರಗೋಡು: ರೋಚಕ ಫಲಿತಾಂಶ
– ಪಕ್ಷೇತರ ಸದಸ್ಯ ಗಾಯನ್ ವಿಶ್ವಾಸಕ್ಕೆ ತೆಗೆದುಕೊಳ್ಳದ ನಾಯಕರು
– ಉಪಾಧ್ಯಕ್ಷರಾಗಿ ಯುವ ಮುಖಂಡ ಅಮೃತ್ ರಾಜ್ ಆಯ್ಕೆ

NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ತಾಲೂಕಿನ ಬಿದರಗೋಡು ಗ್ರಾಮ ಪಂಚಾಯತ್ ಅಧ್ಯಕ್ಷರ ಆಯ್ಕೆ ಚುನಾವಣೆ ಭಾರೀ ಕುತೂಹಲ ಫಲಿತಾಂಶಕ್ಕೆ ಕಾರಣವಾಗಿದೆ. ಗುರುವಾರ ಬಿದರಗೊಡು ಗ್ರಾಮ ಪಂಚಾಯಿತಿ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆ ಇತ್ತು. ಆದರೆ ಗ್ರಾಮ ಪಂಚಾಯತ್ ಸದಸ್ಯರ ವಿಶ್ವಾಸ ತೆಗೆದುಕೊಳ್ಳುವಲ್ಲಿ ವಿಫಲವಾದ ಕಾರಣ ಕಾಂಗ್ರೆಸ್ ಕೈಯಲ್ಲಿದ್ದ ಆಡಳಿತವನ್ನು ಪಡೆದುಕೊಳ್ಳುವಲ್ಲಿ ಎಡವಿದೆ. ಈ ಭಾಗದ ಯುವ ನಾಯಕ, ಮಾಜಿ ಅಧ್ಯಕ್ಷ ಗಾಯನ್ ಅವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವಲ್ಲಿ ಕಾಂಗ್ರೆಸ್ ಮುಖಂಡರು ವಿಫಲರಾಗಿದ್ದು ಕೊನೆ ಕ್ಷಣದಲ್ಲಿ ಕಾಂಗ್ರೆಸ್ ಬೆಂಬಲಿತ ಕಾವ್ಯ ಶ್ರೀಕಾಂತ್ ಅವರಿಗೆ ಅಧಿಕಾರ ತಪ್ಪಿದೆ. ಇನ್ನು ಮೂರು ತಿಂಗಳು ಕಾಯಬೇಕಿದೆ. ಉಪಾಧ್ಯಕ್ಷರಾಗಿ ಯುವ ಮುಖಂಡ ಬಿಜೆಪಿ ಬೆಂಬಲಿತ ಅಮೃತ್ ರಾಜ್ ಆಯ್ಕೆ ಆಗಿದ್ದಾರೆ.

ಕಾವ್ಯ ಶ್ರೀಕಾಂತ್ ಅವರಿಗೆ ಅದೃಷ್ಟ ಬಂದಿತ್ತು!

ತೀರ್ಥಹಳ್ಳಿ ಗಡಿ ಭಾಗದ ಬಿದರಗೋಡು ಗ್ರಾಮ ಪಂಚಾಯತ್ ಅಲ್ಲಿ ಆರು ಜನ ಸದಸ್ಯರ ಬಲವಿದೆ. ಬಿದರಗೋಡು ಗ್ರಾಮ ಪಂಚಾಯಿತಿಯಲ್ಲಿ ಬಿಜೆಪಿ ಬೆಂಬಲಿತ 4, ಕಾಂಗ್ರೆಸ್ ಬೆಂಬಲಿತ 1, ಪಕ್ಷೇತರ 1 ಸದಸ್ಯರಿದ್ದಾರೆ. ಅಧ್ಯಕ್ಷ ಸ್ಥಾನಕೆ ಬಿಸಿಎಂ ಎ ಮೀಸಲಾತಿ ಬಂದಿದ್ದು ಇಲ್ಲಿ ಈ ಹಿಂದೆ ಉಪಾಧ್ಯಕ್ಷರಾಗಿದ್ದ ಕಾವ್ಯ ಶ್ರೀಕಾಂತ್ ಒಬ್ಬರೇ ಇದ್ದಾರೆ. ಆದರೆ ಅವರು ಯಾರ ವಿಶ್ವಾಸ ಪಡೆದುಕೊಂಡಿಲ್ಲ ಎನ್ನಲಾಗಿದೆ. , ಚುನಾವಣೆ ಆಯ್ಕೆ ಪ್ರಕ್ರಿಯೆ ಸಂದರ್ಭದಲ್ಲಿ ಅಧ್ಯಕ್ಷರ ನಾಮಪತ್ರ ಸಲ್ಲಿಕೆಗೆ ಸೂಚಕರ ಸಹಿ ಇರದ ಕಾರಣ ಚುನಾವಣೆ ನಡೆಯಲೇ ಇಲ್ಲ.

ಗಾಯನ್ ಇಲ್ಲಿ ಕಿಂಗ್ ಮೇಕರ್!

ಬಿದರಗೋಡು ಗ್ರಾಮ ಪಂಚಾಯತ್ ಪಕ್ಷೇತರ ಸದಸ್ಯ ಗಾಯನ್ ವಿಶ್ವಾಸ ತೆಗೆದುಕೊಳ್ಳುವಲ್ಲಿ ಅಧ್ಯಕ್ಷೆ ಆಕಾಂಕ್ಷಿ ಹಾಗೂ ಕಾಂಗ್ರೆಸ್ ಪಕ್ಷದ ಸ್ಥಳೀಯ ಹಾಗೂ ತಾಲೂಕು ನಾಯಕರು ವಿಫಲರಾಗಿದ್ದಾರೆ. ಆದ್ದರಿಂದ ಸೂಚಕರ ಸಹಿ ಇಲ್ಲದೆ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಲಿಲ್ಲ.

ಅಮೃತ್ ರಾಜ್ ಅವರಿಗೆ ಉಪಾಧ್ಯಕ್ಷ ಹುದ್ದೆ!

ಆಗುಂಬೆ ಹೋಬಳಿಯ ಯುವ ಪ್ರಮುಖ ಬಿಜೆಪಿಯ ಬೆಂಬಲಿತ ಸದಸ್ಯ ಅಮೃತ್ ರಾಜ್ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಕಾಂಗ್ರೆಸ್ ಗಾಯನ ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡಿದ್ದರೆ ಅಧ್ಯಕ್ಷ ಸ್ಥಾನ ಕಾಂಗ್ರೆಸ್ ಬೆಂಬಲಿತ ಸದಸ್ಯೆ ಪಾಲಾಗುತ್ತಿತ್ತು.
ಈ ಹಿಂದಿನ ಅವಧಿಯಲ್ಲಿ ವೆಂಕಟೇಶ್ ಅಧ್ಯಕ್ಷರಾಗಿ ಹಾಗೂ ಕಾವ್ಯ ಶ್ರೀಕಾಂತ್ ಉಪಾಧ್ಯಕ್ಷರಾಗಿ ಕೆಲಸ ಮಾಡಿದ್ದರು. ಚುನಾವಣೆ ಸಂದರ್ಭದಲ್ಲಿ ಬಿಜೆಪಿ ಪ್ರಮುಖರಾದ ಸುಧಾಕರ್, ಹಸಿರಿಮನೆ ನಂದನ್, ಜಗದೀಶ್ ಮಳಲಿ, ಮೋಹನ್, ಚೊಕ್ಕಡಬೈಲು ರಾಘವೇಂದ್ರ, ಸ್ಥಳೀಯರು ಇದ್ದರು.

ಇದನ್ನೂ ಓದಿ : ಭೂತಾನ್ ಅಡಿಕೆ ಬಂದ್ರೂ ತೊಂದರೆ ಇಲ್ಲ- ಆರಗ ಜ್ಞಾನೇಂದ್ರ

[embedyt] https://www.youtube.com/watch?v=rTGqP21dgrM%5B/embedyt%5D

HOW TO APPLY : NEET-UG COUNSELLING 2023