Categories
ಬೆಂಗಳೂರು

ಪೊಲೀಸ್ ಇಲಾಖೆ: ವರ್ಗಾವಣೆ ಅರ್ಧ ಆಯ್ತು, ಅರ್ಧ ಆಗಿಲ್ಲ!

ಪೊಲೀಸ್ ಇಲಾಖೆ: ವರ್ಗಾವಣೆ ಅರ್ಧ ಆಯ್ತು, ಅರ್ಧ ಆಗಿಲ್ಲ!
– 3 ಡಿವೈಎಸ್ಪಿ 28 ಪೋಲಿಸ್‌ಇನ್‌ಸ್ಪೆಕ್ಟರ್‌ಗಳ ವರ್ಗಾವಣೆ
– 3 ಡಿವೈಎಸ್ಪಿ12 ಪೋಲಿಸ್‌ಇನ್‌ಸ್ಪೆಕ್ಟರ್‌ಗಳ ವರ್ಗಾವಣೆ ರದ್ದು

NAMMUR EXPRESS NEWS
ಬೆಂಗಳೂರು: ರಾಜ್ಯ ಪೊಲೀಸ್ ಇಲಾಖೆಯಲ್ಲಿ ಬುಧವಾರ 3 ಡಿವೈಎಸ್‌ಪಿ ಹಾಗೂ 28 ಪೊಲೀಸ್ ಇನ್‌ಸ್ಪೆಕ್ಟರ್‌ಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ. ಕಳೆದ ವಾರ ವರ್ಗಾವಣೆ ಮಾಡಿದ್ದ ಮೂವರು ಡಿವೈಎಸ್‌ಪಿ ಹಾಗೂ 12 ಮಂದಿ ಇನ್‌ಸ್ಪೆಕ್ಟರ್‌ಗಳ ವರ್ಗಾವಣೆ ಆದೇಶ ರದ್ದುಗೊಳಿಸಲಾಗಿದೆ.

ವರ್ಗಾವಣೆಗೊಂಡ ಡಿವೈಸ್ಪಿ ಗಳು :

ಎಂ.ಎಚ್.ಮಂಜುನಾಥ್ ಚೌಧರಿ, ಸಿಸಿಬಿ, ಬೆಂಗಳೂರು ನಗರ; ಟಿ.ರಂಗಪ್ಪ, ಸಂಪಿಗೆಹಳ್ಳಿ ಉಪ ವಿಭಾಗ, ಬೆಂಗಳೂರು ನಗರ; ಪಿ.ರವಿ, ದೊಡ್ಡಬಳ್ಳಾಪುರ ಉಪ ವಿಭಾಗ, ಬೆಂಗಳೂರು ಜಿಲ್ಲೆ.

ವರ್ಗಾವಣೆ ರದ್ದುಗೊಂಡ ಡಿ ವೈ ಎಸ್ ಪಿ ಗಳು :

ಮೈಸೂರಿನ ಕೆಪಿಎನಿಂದ ಮೈಸೂರು ಸಂಚಾರ ಉಪ ವಿಭಾಗ ವರ್ಗಾವಣೆ ಮಾಡಲಾಗಿದ್ದ ಮೊಹಮ್ಮದ್ ಹಸ್ಮಯ್ ಖಾನ್ಸ್., ಬಾಗಲಕೋಟೆಯಿಂದ ಹುನಗುಂದ ಉಪ ವಿಭಾಗಕ್ಕೆ ವರ್ಗವಾಗಿದ್ದ ಪ್ರಶಾಂತ್ ಜಿ. ಮುನೋಳ್ಳಿ, ರಾಜ್ಯ ಗುಪ್ತವಾರ್ತೆಯಿಂದ ಸಂಪಿಗೆಹಳ್ಳಿ ವಿಭಾಗಕ್ಕೆ ವರ್ಗಾವಣೆಗೊಂಡಿದ್ದ ಎಂ. ಮುರುಗೇಂದ್ರಯ್ಯ ಅವರ ವರ್ಗಾವಣೆ ಆದೇಶವನ್ನು ರದ್ದು ಪಡಿಪಡಿಸಲಾಗಿದೆ.

ವರ್ಗಾವಣೆಯಾದ ಪೊಲೀಸ್ ಇನ್‌ಸ್ಪೆಕ್ಟರ್‌ಗಳು :

ಎ.ಡಿ.ಪ್ರೀತಂ, ಬೊಮ್ಮನಹಳ್ಳಿ; ಎಚ್.ಸಂದೀಪ್, ಸಿಟಿ ಮಾರುಕಟ್ಟೆ ಪಿ.ಎಂ.ಹರೀಶ್ ಕುಮಾರ್, ಎಚ್ಎಸ್ಎಆರ್ ಲೇಔಟ್; ಎಸ್.ಪ್ರಶಾಂತ್, ಹಲಸೂರು ಸಂಚಾರ ಪೊಲೀಸ್ ಠಾಣೆ; ಹನುಮಂತ ಕೆ. ಭಜಂತ್ರಿ, ಹಲಸೂರು ಗೇಟ್, ಸಲೀಂ ಸಿ. ನದಾಫ್, ಹೆಬ್ಬಾಳ ಸಂಚಾರ ಪೊಲೀಸ್ ಠಾಣೆ, ಎಂ.ಎಸ್.ರವಿ, ಜ್ಞಾನಭಾರತಿ ಐ.ರಹೀಂ, ಕೆ.ಜಿ.ಹಳ್ಳಿ; ಎಸ್.ಶ್ರೀಧರ್, ಕೆ.ಜಿ.ಹಳ್ಳಿ ಸಂಚಾರ ಪೊಲೀಸ್ ಠಾಣೆ. ಸಿ.ಜೆ.ಚೈತನ್ಯ, ಕೆ.ಆರ್.ಪುರ ಸಂಚಾರ ಪೊಲೀಸ್ ಠಾಣೆ; ಎ.ಕೆ.ರಕ್ಷಿತ್, ಕೆಂಪೇಗೌಡ ನಗರ; ಜಿ.ಪಿ.ರಾಜು, ಮಾಗಡಿ ರಸ್ತೆ; ಎಂ.ಎಸ್.ಅನಿಲ್‌ಕುಮಾರ್, ಪೀಣ್ಯ, ಎಸ್.ಲಕ್ಷ್ಮಣಗೌಡ, ರಾಜಾಜಿನಗರ; ಎಂ.ಎಲ್.ಕೃಷ್ಣಮೂರ್ತಿ, ಯಲಹಂಕ, ಬಿ.ಚಿದಾನಂದ, ಯಶವಂತಪುರ ಸಂಚಾರ ಪೊಲೀಸ್ ಠಾಣೆ; ಬಿ.ಆರ್.ರಾಘವೇಂದ್ರ, ಜಯನಗರ; ಹೇಮಂತ್‌ಕುಮಾರ್, ವಿಜಯನಗರ; ಕೆಂಪೇಗೌಡ, ಜೆಜೆ ನಗರ; ಬಿ.ಎಂ.ಶಿವಕುಮಾರ್, ರಾಜರಾಜೇಶ್ವರಿ ನಗರ. ಟಿ.ಎಲ್.ಪ್ರವೀಣ್ ಕುಮಾರ್, ಸಿಇಎನ್, ಬೆಂಗಳೂರು ಜಿಲ್ಲೆ ಬಿ.ಎಸ್.ಮಂಜುನಾಥ್, ಜಿಗಣಿ; ಟಿ.ಶ್ರೀನಿವಾಸ್, ವಿಶ್ವನಾಥಪುರ, ಬೆಂಗಳೂರು ಜಿಲ್ಲೆ; ಬಿ.ಎನ್.ಪುನೀತ್, ಕಾಮಾಕ್ಷಿಪಾಳ್ಯ ಕೆ.ಬಿ.ರವಿ, ಅಶೋಕನಗರ; ಎಂ.ಕೆ.ಮುರಳೀಧರ್, ಮಾದನಾಯಕನಹಳ್ಳಿ,

ವರ್ಗಾವಣೆ ರದ್ದುಗೊಂಡ ಇನ್‌ಸ್ಪೆಕ್ಟರ್‌ಗಳು:

ಇನ್‌ಸ್ಪೆಕ್ಟರ್‌ಗಳಾದ ನವೀನ್‌ಚಂದ್ರ ಜೋಗಿ, ವಜ್ರಮುನಿ ಕೆ., ಭಾಗ್ಯವತಿ ಜಿ. ಬಂಟಿ, ಜೆ. ಅಶ್ವತ್‌ಗೌಡ, ಎಚ್.ಬಿ.ಸುನಿಲ್, ಮೋಹನ್ ಎನ್. ಹೆಡ್ಡಣ್ಣವರ್, ಎಸ್.ಪಾರ್ವತಮ್ಮ ಶ್ರೀಧರ್ ಶಾಸ್ತ್ರಿ ಟಿ. ಗುಡಗಟ್ಟಿ, ಎಂ.ಗೋವಿಂದರಾಜು, ಎಚ್.ಎ.ಮಂಜು, ಸಿ.ಪಿ.ನವೀನ್, ಎಸ್.ಎಡ್ರಿನ್ ಪ್ರದೀಪ್ ಅವರ ವರ್ಗಾವಣೆ ಆದೇಶವನ್ನು ರದ್ದುಪಡಿಸಲಾಗಿದೆ. ಈ 12 ಇನ್‌ಸ್ಪೆಕ್ಟರ್‌ಗಳನ್ನು ಬೆಂಗಳೂರು ನಗರವು ಸೇರಿದಂತೆ ವಿವಿಧೆಡೆಗೆ ವರ್ಗಾವಣೆ ಮಾಡಲಾಗಿತ್ತು.

ಇದನ್ನೂ ಓದಿ : ಜಲಪಾತ ಸಿನಿಮಾಕ್ಕೆ ವಿಜಯಪ್ರಕಾಶ್ ಎಂಟ್ರಿ!

HOW TO APPLY : NEET-UG COUNSELLING 2023

Categories
ರಾಜ್ಯ

ಟಾಪ್ ನ್ಯೂಸ್ ಕರ್ನಾಟಕ 10-08-2023

– ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್:
ಓಪಿಎಸ್ ಜಾರಿ?
– ಕರಾವಳಿ ಭಾಗದಲ್ಲಿ ಮತ್ತೆ ಮಳೆ!?
– ಹಾರಲಿದೆ ಪ್ರತಿ ಮನೆಯಲ್ಲೂ ತ್ರಿವರ್ಣ ಧ್ವಜ

NAMMUR EXPRESS NEWS : ರಾಜ್ಯದಲ್ಲಿ ಎನ್‌ಪಿಎಸ್ ರದ್ದತಿ ಕೋರಿ ಹಲವು ವರ್ಷಗಳಿಂದಲೂ ರಾಜ್ಯ ಸರಕಾರಿ ನೌಕರರು ಹೋರಾಟ ನಡೆಸುತ್ತಿದ್ದಾರೆ. ಆದರೆ ರಾಜ್ಯ ಸರಕಾರ ವಿಧಾನಸಭಾ ಕಲಾಪದಲ್ಲಿ ಹೊಸ ಪಿಂಚಣಿ ವ್ಯವಸ್ಥೆಯನ್ನು ರದ್ದುಗೊಳಿಸಿ, ಹಳೆ ಪಿಂಚಣಿ ವ್ಯವಸ್ಥೆ ಜಾರಿ ಮಾಡುವ ಯಾವುದೇ ಪ್ರಸ್ತಾಪ ಇಲ್ಲ ಎಂದು ಹೇಳಿತ್ತು. ಇದೀಗ ಓಪಿಎಸ್ ಜಾರಿ ಕುರಿತ ಕಡತಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ಆರ್ಥಿಕ ಇಲಾಖೆ ಮಾಹಿತಿ ನೀಡಿದೆ.
ಎನ್‌ಪಿಎಸ್ ರದ್ದತಿ ಕೋರಿ ಹಲವು ಮನವಿಗಳು ಸ್ವೀಕೃತವಾಗಿದ್ದು ಪರಿಶೀಲನೆ ನಡೆಸಲಾಗುತ್ತಿದೆ ಎಂದು ಆರ್ಥಿಕ ಇಲಾಖೆ ಮಾಹಿತಿ ಹಕ್ಕು ಅಧಿನಿಯಮದ ಅಡಿಯಲ್ಲಿ ವೆಂಕಟಾಚಲಯ್ಯ ಅವರು ಸಲ್ಲಿಸಿದ್ದ ಅರ್ಜಿಗೆ ಮಾಹಿತಿಯನ್ನು ನೀಡಿದೆ.
ಕಾಂಗ್ರೆಸ್ ಸರಕಾರ ತಮ್ಮ ಚುನಾವಣಾ ಪ್ರನಾಳಿಕೆಯಲ್ಲಿ ಎನ್‌ಪಿಎಸ್ ರದ್ದು ಮಾಡುವುದಾಗಿ ಭರವಸೆ ನೀಡಿತ್ತು. ಇನ್ನು ಬಿಜೆಪಿ ಸರಕಾರ ಎನ್‌ಪಿಎಸ್ ರದ್ದು ಮಾಡುವ ಕುರಿತು ಸಮಿತಿಯೊಂದನ್ನು ರಚನೆ ಮಾಡಲಾಗಿತ್ತು.ಇದೀಗ ರಾಜ್ಯ ಸರಕಾರಿ ನೌಕರರು ಎನ್‌ಪಿಎಸ್ ರದ್ದತಿ ಕೋರಿ ರಾಜ್ಯ ಸರಕಾರಕ್ಕೆ ಸಾಕಷ್ಟು ಮನವಿಯನ್ನು ಮಾಡಿದ್ದಾರೆ. ರಾಜ್ಯ ಸರಕಾರ ಕೂಡ ಶೀಘ್ರದಲ್ಲಿಯೇ ಈ ಕುರಿತು ಚಿಂತನೆ ನಡೆಸಲಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಕರಾವಳಿ ಜಿಲ್ಲೆಗಳಲ್ಲಿ ಆ.16ರವರೆಗೂ ಮಳೆ

ಕರಾವಳಿ ಜಿಲ್ಲೆಗಳಲ್ಲಿ ಮಳೆ ಚುರುಕುಗೊಂಡಿದೆ. ಹವಾಮಾನ ಇಲಾಖೆ ವರದಿ ಪ್ರಕಾರ, ರಾಜ್ಯದ ಕರಾವಳಿ ಹಾಗೂ ದಕ್ಷಿಣ ಒಳನಾಡು ಸೇರಿದಂತೆ ಹಲವಡೆ ಆಗಸ್ಟ್‌ 16ರವರೆಗೂ ಮಳೆಯಾಗಲಿದೆ. ರಾಜ್ಯದ ಕರಾವಳಿ ಹಲವು ಪ್ರದೇಶಗಳಲ್ಲಿ ಮುಂದಿನ 48 ಗಂಟೆಗಳಲ್ಲಿ, ಒಳನಾಡಿನ ಕೆಲವಡೆ ಹಾಗೂ ಉತ್ತರ ಒಳನಾಡಿನ ಒಂದೆರಡು ಕಡೆಗಳಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ರಾಜ್ಯದಾದ್ಯಂತ ಒಂಡೆರಡು ಕಡೆಗಳಲ್ಲಿ ಬಿರುಗಾಳಿಯ ವೇಗವು ಗಂಟೆಗೆ 30 ರಿಂದ 40 ಕಿ.ಮೀ ಬೀಡುವ ಸಾಧ್ಯತೆ ಇದೆ. ಹೀಗಾಗಿ ಕರಾವಳಿ ಪ್ರದೇಶಗಳಲ್ಲಿ ವಾಸಿಸುವ ಸ್ಥಳೀಯರು, ಪ್ರವಾಸಿಗರು ಹಾಗೂ ಮೀನುಗಾರರಿಗೆ ಎಚ್ಚರಿಕೆ ನೀಡಲಾಗಿದೆ. ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ಅಲ್ಲಿಲ್ಲಿ ಮೋಡ ಚದುರಿದಂತೆ ಉತ್ತಮ ಮಳೆಯಾಗಲಿದೆ.

ಹರ್ ಘರ್ ತಿರಂಗ ಪ್ರತಿ ಮನೆಯಲ್ಲೂ ತ್ರಿವರ್ಣ ಧ್ವಜ

ಭಾರತೀಯ ಅಂಚೆ ಇಲಾಖೆಯು ಕಳೆದ ಸಾಲಿನಂತೆ ಈ ವರ್ಷವು ಸಹ ತ್ರಿವರ್ಣ ಧ್ವಜವನ್ನು ನಿಮ್ಮ ಮನೆ ಬಾಗಿಲಿಗೆ ತಲುಪಿಸುವ ಮಹತ್ವದ ಕಾರ್ಯವನ್ನು ಮಾಡಲಿದೆ.2023 ನೇ ವರ್ಷದ ಸ್ವಾತಂತ್ರ್ಯ ದಿನವನ್ನು ಹೆಮ್ಮೆ ಮತ್ತು ದೇಶಭಕ್ತಿಯೊಂದಿಗೆ ಆಚರಿಸಲು ನಿಮ್ಮ ಸಮೀಪದ ಅಂಚೆ ಕಚೇರಿಯಲ್ಲಿ ಕೇವಲ ರೂ.25/- ಪಾವತಿಸಿ ತ್ರಿವರ್ಣ ಧ್ವಜ ಪಡೆದುಕೊಳ್ಳಬಹುದು. ಆನ್‌ಲೈನ್ www.indiapost.gov.in ರಲ್ಲಿ ನೊಂದಣಿ ಮಾಡು ವುದರ ಮೂಲಕ ಮನೆ ಬಾಗಿಲಿನಲ್ಲಿಯೇ ಪಡೆಯಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಸಮೀಪದ ಅಂಚೆ ಕಚೇರಿಯನ್ನು ಸಂಪರ್ಕಿಸುವಂತೆ ಇಲಾಖೆ ಪ್ರಕಟಣೆ ತಿಳಿಸಿದೆ.

ಇದನ್ನೂ ಓದಿ : ಜಲಪಾತ ಸಿನಿಮಾಕ್ಕೆ ವಿಜಯಪ್ರಕಾಶ್ ಎಂಟ್ರಿ!

HOW TO APPLY : NEET-UG COUNSELLING 2023

Categories
ಶಿವಮೊಗ್ಗ

ಶಿವಮೊಗ್ಗ ಜಿಲ್ಲೆ ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಎಷ್ಟು?

ಶಿವಮೊಗ್ಗ ಜಿಲ್ಲೆ ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಎಷ್ಟು?
– ಸೀಮಾ ನಿರ್ಣಯ ಆಯೋಗದ ಪಟ್ಟಿಯಲ್ಲಿ ಏನಿದೆ?
– 31 ಜಿಪಂ, 113 ತಾಪಂ ಕ್ಷೇತ್ರ ಫೈನಲ್ ಆಗುತ್ತಾ?

NAMMUR EXPRESS NEWS
ಶಿವಮೊಗ್ಗ: ಶಿವಮೊಗ್ಗ ಜಿಲ್ಲೆಯ ತಾಲ್ಲೂಕು ಪಂಚಾಯಿತಿ ಜಿಲ್ಲಾ ಪಂಚಾಯಿತಿ ಕ್ಷೇತ್ರಗಳ ಪುನರ್ ವಿಂಗಡಣೆಯ ಕುರಿತಾಗಿ ಮಹತ್ವದ ಬೆಳವಣಿಗೆಯೊಂದು ನಡೆದಿದೆ. ಪ್ರಸ್ತುತ ವಿಚಾರದ ಸಂಬಂಧ ಕರ್ನಾಟಕ ಪಂಚಾಯತ್ ರಾಜ್ ಸೀಮಾ ನಿರ್ಣಯ ಆಯೋಗ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ. ಕಳೆದ 15-07-2023 ರಂದು ರವಾನೆ ಮಾಡಿರುವ ಮಾರ್ಗಸೂಚಿಯಲ್ಲಿ ಶಿವಮೊಗ್ಗ ಜಿಲ್ಲಾ ಪಂಚಾಯತ್ ಕ್ಷೇತ್ರಗಳು ಹಾಗೂ ತಾಲ್ಲೂಕು ಪಂಚಾಯಿತಿ ಕ್ಷೇತ್ರಗಳ ಮಿತಿಯನ್ನು ಸಹ ನಿಗದಿಪಡಿಸಿದೆ.

ಶಿವಮೊಗ್ಗ ಜಿಲ್ಲೆಯ ತಾಲ್ಲೂಕು ಹಾಗೂ ಜಿಲ್ಲಾಪಂಚಾಯಿತಿಗಳ ಚುನಾಯಿತ ಸದಸ್ಯರ ಸಂಖ್ಯೆ ನಿಗದಿ ಹಾಗೂ ಪ್ರಾದೇಶಿಕ ಚುನಾವಣಾ ಕ್ಷೇತ್ರಗಳ ವ್ಯಾಪ್ತಿಯನ್ನು ನಿರ್ಣಯಿಸುವ ಕುರಿತು ಸೀಮಾ ನಿರ್ಣಯ ಆಯೋಗ ಕಳುಹಿಸಿರುವ ಪತ್ರದಲ್ಲಿ ತಾಲ್ಲೂಕು ಪಂಚಾಯತಿ ಮತ್ತು ಜಿಲ್ಲಾ ಪಂಚಾಯತಿಗಳ ಸೀಮಾ ನಿರ್ಣಯವನ್ನು ಪುನರ್‌ ನಿಗದಿಪಡಿಸಲು ಉಲ್ಲೇಖ (3) ರಲ್ಲಿ ದಿನಾಂಕ 10.07.2023 ರಂದು ಕರ್ನಾಟಕ ಪಂಚಾಯತ್ ರಾಜ್ ಸೀಮಾ ನಿರ್ಣಯ ಆಯೋಗವನ್ನು ರಚಿಸಲಾಗಿದೆ. ಉಲ್ಲೇಖ (4) ರ ಸೀಮಾ ನಿರ್ಣಯ ಆಯೋಗದ ಸಭೆಯಲ್ಲಿ ನಿಗದಿಪಡಿಸಿರುವ ಚುನಾಯಿತ ಸದಸ್ಯರ ಸಂಖ್ಯೆಗಳಿಗೆ ಅನುಗುಣವಾಗಿ ಪ್ರಾದೇಶಿಕ ಚುನಾವಣಾ ಕ್ಷೇತ್ರಗಳ ಸೀಮಾಗಡಿ ನಿರ್ಣಯಿಸಿ ಆಯೋಗಕ್ಕೆ 7 ದಿನಗಳೊಳಗೆ ಪ್ರಸ್ತಾವನೆಯನ್ನು ಸಲ್ಲಿಸಲು ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಸೂಚಿಸಿದೆ.

ಈ ಸಂಬಂಧ ಕೋಷ್ಟಕವೊಂದನ್ನ ನೀಡಿರುವ ಸೀಮಾ ನಿರ್ಣಯ ಆಯೋಗ, ಪಟ್ಟಿಯಲ್ಲಿ ನೀಡಿರುವ ತಾಲ್ಲೂಕು ಪಂಚಾಯತಿ ಮತ್ತು ಜಿಲ್ಲಾ ಪಂಚಾಯತಿಗಳ ಸದಸ್ಯರ ಸಂಖ್ಯೆಗಳಿಗೆ ಅನುಗುಣವಾಗಿ, ಇದರೊಂದಿಗೆ ಲಗತ್ತಿಸಿರುವ ಪರಿಷ್ಕೃತ ಮಾರ್ಗಸೂಚಿಗಳನುಸಾರ ಸೀಮಾ/ಗಡಿ ನಿರ್ಣಯವನ್ನು ರಚಿಸತಕ್ಕದ್ದು, ತಮ್ಮ ಜಿಲ್ಲೆಯ ಸಾರ್ವಜನಿಕರು ಹಾಗೂ ಸ್ಥಳೀಯ ಪ್ರತಿನಿಧಿಗಳೊಂದಿಗೆ ಚರ್ಚಿಸಿ ಯಾವುದಾದರೂ ಬದಲಾವಣೆ ಅವಶ್ಯಕತೆ ಇದ್ದಲ್ಲಿ ಅಥವಾ ಇಲ್ಲದಿದ್ದಲ್ಲಿ ಉಲ್ಲೇಖ (6) ರ ಪತ್ರಗಳಲ್ಲಿ ನೀಡಿರುವ ನಿರ್ದೇಶನದಂತೆ, ನಿಗದಿತ ನಮೂನೆಯಲ್ಲಿ (ಅನುಬಂಧ 1,2,3 ಮತ್ತು 4 ರಲ್ಲಿ ಹಾಗೂ ನಕಾಶೆಯೊಂದಿಗೆ ಪರಿಷ್ಕೃತ ಪುಸ್ತಾವನೆಯನ್ನು 7 ದಿನಗಳೊಳಗೆ ಕರ್ನಾಟಕ ಪಂಚಾಯತ್ ರಾಜ್ ಸೀಮಾ ನಿರ್ಣಯ ಆಯೋಗಕ್ಕೆ ಸಲ್ಲಿಸಬೇಕೆಂದು ಸೂಚಿಸಿದೆ.

ಸದ್ಯ ಈ ಸಂಬಂಧ ಸೀಮಾ ನಿರ್ಣಯ ಆಯೋಗಕ್ಕೆ ಯಾವುದೇ ಉತ್ತರ ಇದುವರೆಗೂ ರವಾನಿಸಿಲ್ಲ, ಆದಾಗ್ಯು ಸೀಮಾ ನಿರ್ಣಯ ಆಯೋಗ ನೀಡಿರುವ ಮಾರ್ಗಸೂಚಿ ಅನ್ವಯ ಪುನರ್‌ ವಿಂಗಡಣೆ ಪ್ರಕ್ರಿಯೆ ಕೈಗೊಳ್ಳುವಂತೆ ಆಯಾ ತಾಲ್ಲೂಕು ಆಡಳಿತಕ್ಕೆ ಜಿಲ್ಲಾಡಳಿತ ಸುಚಿಸಿದೆ ಎನ್ನಲಾಗಿದೆ. ಬಹುತೇಕ ಜಿಲ್ಲಾಪಂಚಾಯಿತಿ ಹಾಗೂ ತಾಲ್ಲೂಕು ಪಂಚಾಯಿತಿ ಕ್ಷೇತ್ರಗಳ ಸಂಖ್ಯೆ ಸೀಮಾ ನಿರ್ಣಯ ಆಯೋಗ ನೀಡಿರುವ ಪಟ್ಟಿಗೆ ಅನುಗುಣವಾಗಿಯೇ ನಿರ್ಣಯವಾಗಲಿದೆ ಎನ್ನಲಾಗುತ್ತಿದೆ.ಸೀಮಾ ನಿರ್ಣಯ ಆಯೋಗ ನೀಡಿರುವ ಪಟ್ಟಿಯನ್ನು ಆಧರಿಸಿ ಹೇಳುವುದಾದರೆ, ಶಿವಮೊಗ್ಗ ಜಿಲ್ಲೆಯಲ್ಲಿ ಜಿಲ್ಲಾ ಪಂಚಾಯತ್ ಒಟ್ಟು ಕ್ಷೇತ್ರಗಳ ಸಂಖ್ಯೆ 35 ರಿಂದ 31 ಕ್ಕೆ ಇಳಿಕೆಯಾಗಲಿದೆ. ಇನ್ನೂ ತಾಲ್ಲೂಕು ಪಂಚಾಯತ್‌ಗಳ ಒಟ್ಟು ಕ್ಷೇತ್ರಗಳ 90 ರಿಂದ 113 ಕ್ಷೇತ್ರಗಳಿಗೆ ಏರಿಕೆಯಾಗುವ ಸಾಧ್ಯತೆ ಇದೆ.

ಇದನ್ನೂ ಓದಿ : ಜಲಪಾತ ಸಿನಿಮಾಕ್ಕೆ ವಿಜಯಪ್ರಕಾಶ್ ಎಂಟ್ರಿ!

HOW TO APPLY : NEET-UG COUNSELLING 2023

Categories
ತೀರ್ಥಹಳ್ಳಿ ಹೊಸನಗರ

ರಾತ್ರಿ ಕಾಳಿಂಗ ಸರ್ಪ ಹಿಡಿಯುವ ಆಪರೇಷನ್!

ರಾತ್ರಿ ಕಾಳಿಂಗ ಸರ್ಪ ಹಿಡಿಯುವ ಆಪರೇಷನ್!
– ಯಡೂರು ಕೊಳವಾಡಿ ಗ್ರಾಮದಲ್ಲಿ ಘಟನೆ
– 12 ಅಡಿ ಕಾಳಿಂಗ ಸರ್ಪ ಹಿಡಿದ ಸ್ನೇಕ್ ಚಂದ್ರು, ಶೌರ್ಯ ಟೀಮ್
– ಕಾಳಿಂಗ ಹಿಡಿದಿದ್ದು ಹೇಗೆ… ಇಲ್ಲಿದೆ ನೋಡಿ ರಿಪೋರ್ಟ್

NAMMUR EXPRESS NEWS
ತೀರ್ಥಹಳ್ಳಿ: ( Thirthahalli ) ಹಾವು ಕಂಡರೆ ಭಯವೇ ಹೆಚ್ಚು. ಅದ್ರಲ್ಲೂ ಹಗಲು ಹಾವು ಕಂಡ್ರೆ ಬಿದ್ದು ಓಡುತ್ತೇವೆ. ಆದರೆ ಯಡೂರು ಬಳಿ ರಾತ್ರಿ ಕಾಳಿಂಗ ಸರ್ಪ ಹಿಡಿದು ಕಾಡಿಗೆ ಬಿಡಲಾಗಿದೆ. ಹೌದು. ( Yadur ) ಯಡೂರು ಕೊಳವಾಡಿ ( Kolavadi ) ಗ್ರಾಮದಲ್ಲಿ ಬುಧವಾರ ಘಟನೆ ನಡೆದಿದ್ದು 12 ಅಡಿ ಕಾಳಿಂಗ ಸರ್ಪ ಹಿಡಿದ ಸ್ನೇಕ್ ಚಂದ್ರು, ಶೌರ್ಯ ಟೀಮ್ ಸ್ಥಳೀಯರ ಆತಂಕ ದೂರ ಮಾಡಿದ್ದಾರೆ.

ಕಾಳಿಂಗ ಹಿಡಿದಿದ್ದು ಹೇಗೆ?: ಯಡೂರು ಕೊಳವಾಡಿಯ ರಾಜೇಗೌಡ ಎಂಬುವರ ಮನೆಯಲ್ಲಿ ಕಾಳಿಂಗ ಸರ್ಪ ಸೇರಿಕೊಂಡಿತ್ತು. ತೀರ್ಥಹಳ್ಳಿ ಕೈಮರದ ಸ್ನೇಕ್ ಚಂದ್ರು, ಶೌರ್ಯ ಟೀಮ್ ತಕ್ಷಣ ಸ್ಪಂದಿಸಿ ಸ್ಥಳಕ್ಕೆ ಹೋಗಿ ರಾತ್ರಿಯೆ ಹಾವನ್ನು ಹಿಡಿದಿದ್ದಾರೆ.

ಇದನ್ನೂ ಓದಿ : ಜಲಪಾತ ಸಿನಿಮಾಕ್ಕೆ ವಿಜಯಪ್ರಕಾಶ್ ಎಂಟ್ರಿ!

HOW TO APPLY : NEET-UG COUNSELLING 2023

Categories
ತೀರ್ಥಹಳ್ಳಿ ಮಲ್ನಾಡ್

ಭೂತಾನ್ ಅಡಿಕೆ ಬಂದ್ರೂ ತೊಂದರೆ ಇಲ್ಲ!

ಭೂತಾನ್ ಅಡಿಕೆ ಬಂದ್ರೂ ತೊಂದರೆ ಇಲ್ಲ!
– ಕಳೆದ 4ವರ್ಷದಿಂದ 1ಹೋಳುಕೂಡಾ ಬಂದಿಲ್ಲ!
– ದೇಶೀಯ ಅಡಿಕೆ ಬೆಲೆ ಏರಿಕೆ ಕಾಣಲಿದೆ: ಆರಗ ಜ್ಞಾನೇಂದ್ರ
– ಅಡಿಕೆ ಮಾರಾಟ ಸಂಸ್ಥೆಗಳಿಂದಲೂ ಅಭಯ

NAMMUR EXPRESS NEWS
ತೀರ್ಥಹಳ್ಳಿ: ಭೂತಾನ್‌ನಿಂದ ಅಡಿಕೆ ಬರುತ್ತದೆ, ಇದರಿಂದ ದೇಶೀಯ ಅಡಿಕೆ ಬೆಲೆ ಇಳಿಯುತ್ತದೆ ಎಂಬ ವದಂತಿಗಳನ್ನು ಪದೇ ಪದೇ ಹರಿಬಿಡಲಾಗುತ್ತಿದೆ. ಇದು ಅಡಿಕೆ ವ್ಯಾಪಾರಸ್ಥರ ತಂತ್ರಗಾರಿಕೆ ಅಷ್ಟೇ . ರೈತರು ಆತಂಕಕ್ಕೆ ಒಳಗಾಗಬೇಕಿಲ್ಲ. ಡಿಬಿಡಿ ಮಾಡಿ ಅಡಿಕೆ ಮಾರುವ ಅಗತ್ಯವೂ ಇಲ್ಲ ಮುಂದಿನ ದಿನಗಳಲ್ಲಿ ಅಡಿಕೆ ಧಾರಣೆ ಇನ್ನಷ್ಟು ಏರಲಿದೆ ಎಂದು ಅಡಿಕೆ ಬೆಳೆಗಾರರ ಪರ ನಿರಂತರ ಹೋರಾಟ ನಡೆಸುತ್ತಾ ಬಂದಿರುವ ರಾಜ್ಯ ಅಡಿಕೆ ಟಾಸ್ಕ್‌ ಫೋರ್ಸ್‌ನ ಮಾಜಿ ಅಧ್ಯಕ್ಷರೂ ಆದ ಶಾಸಕ ಆರಗ ಜ್ಞಾನೇಂದ್ರ ರೈತರಿಗೆ ಸಲಹೆ ನೀಡಿದ್ದಾರೆ.

ಒಪ್ಪಂದ ಆಗಿದ್ದು ಹೌದು ಆದರೆ ಒಂದು ಹೋಳು ಅಡಿಕೆಯೂ ಬಂದಿಲ್ಲ, ಅಂತರಾಷ್ಟ್ರೀಯ ಒಪ್ಪಂದಗಳ ಅನ್ವಯ ಭೂತಾನ್‌ನಿಂದ 17ಸಾವಿರ ಟನ್ ಅಡಿಕೆ ಆಮದಿಗೆ ಅವಕಾಶ ನೀಡಿರುವುದು ಸತ್ಯ. ಆದರೆ ಅದು ಸಂಸ್ಕರಿಸದ ಹಸಿ ಅಡಿಕೆಗೆ ಮಾತ್ರ ಒಣ ಅಡಿಕೆ ತರುವಂತಿಲ್ಲ ತೆರಿಗೆ ಏರಿಸಲಾಗಿದೆ ಮತ್ತು ಕೇವಲ 2 ಬಂದರುಗಳ ಮೂಲಕ ಅಡಿಕೆ ತರಲು ಅವಕಾಶ ಕೊಟ್ಟಿದೆ. ಹಸಿ ಅಡಿಕೆ 6-7 ದಿನಗಳಿಗಿಂತಾ ಜಾಸ್ತಿ ಉಳಿಯುವುದಿಲ್ಲ. ಹಡಗುಗಳ ಮೂಲಕ ಕೇವಲ 2 ಬಂದರುಗಳು ಆಡಿಕೆ ತಂದರೆ ಅದಕ್ಕೆ ಕನಿಷ್ಟ 15ರಿಂದ 20 ದಿನ ತಗಲುತ್ತದೆ. ಅಷ್ಟರಲ್ಲಿ ಹಸಿ ಅಡಿಕೆ ಕೊಳೆತು ಗೊಬ್ಬರವಾಗುತ್ತದೆ.

ಇದೇ ಕಾರಣದಿಂದ ಕಳೆದ 4 ವರ್ಷದಿಂದ ಭೂತಾನ್ ಅಡಿಕೆ ಭಾರತಕ್ಕೆ ಬಂದಿಲ್ಲ. ಲೋಕಸಭೆ ಪ್ರಶೋತ್ತರ ವೇಳೆಯಲ್ಲಿ ಕೇಳಲಾಗಿದ್ದ ಪ್ರಶ್ನೆಯೊಂದಕ್ಕೆ ಉತ್ತರಿಸುವಾಗ ಸಚಿವರು ಭೂತಾನ್‌ನಿಂದ 17 ಸಾವಿರ ಟನ್ ಅಡಿಕೆ ಆಮದಿಗೆ ಅವಕಾಶ ಇದೆ ಎಂಬ ಉತ್ತರ ನೀಡಿದ್ದರು. ಅದೇ ಈಗ ವದಂತಿ ರೂಪ ಪಡೆದು ಗೊಂದಲಕ್ಕೆ ಕಾರಣವಾಗುತ್ತಿದೆ. ಅಡಿಕೆ ಬೆಳೆಗಾರರು ಈ ವಾಸ್ತವವನ್ನು ತಿಳಿಯಬೇಕು. ಯಾರೂ ಆತಂಕಕ್ಕೆ ಒಳಗಾಗುವ ಅಗತ್ಯ ಇಲ್ಲ ಎಂದು ಜ್ಞಾನೇಂದ್ರರು ನಿಖರ ಮಾಹಿತಿ ನೀಡಿದ್ದಾರೆ.

ಅಡಿಕೆ ಮಾರಾಟ ಸಂಸ್ಥೆಗಳಿಂದಲೂ ಅಭಯ

ಅಡಿಕೆ ಮಾರಾಟ ಸಂಸ್ಥೆಗಳಿಂದಲೂ ಅಡಿಕೆ ಬೆಲೆ ಕಡಿಮೆ ಆಗಲ್ಲ. ಭಯ ಬೇಡ ಎಂದು ಮ್ಯಾಮ್ಕೋಸ್, ಕ್ಯಾ0ಪ್ಕೋ ಸಂಸ್ಥೆಗಳು ಕೂಡ ಈ ಬಗ್ಗೆ ಸ್ಪಷ್ಟನೆ ನೀಡಿದ್ದು ರೈತರು ಆತಂಕಕ್ಕೆ ಒಳಗಾಗೋದು ಬೇಡ ಎಂದಿದ್ದಾರೆ.

ಇದನ್ನೂ ಓದಿ : ಜಲಪಾತ ಸಿನಿಮಾಕ್ಕೆ ವಿಜಯಪ್ರಕಾಶ್ ಎಂಟ್ರಿ!

HOW TO APPLY : NEET-UG COUNSELLING 2023

Categories
ಕಾರ್ಕಳ

ಬ್ಯಾಂಕ್ ದಿಗ್ಗಜ ಜಯರಾಂ ಭಟ್ ಇನ್ನಿಲ್ಲ!

ಬ್ಯಾಂಕ್ ದಿಗ್ಗಜ ಜಯರಾಂ ಭಟ್ ಇನ್ನಿಲ್ಲ!
– ಮಂಗಳೂರು ವಿಮಾನ ನಿಲ್ದಾಣದಲ್ಲೇ ಕುಸಿದು ಆಸ್ಪತ್ರೆಯಲ್ಲಿ ವಿಧಿವಶ
– ರಾಜ್ಯದಲ್ಲಿ ಹೃದಯಾಘಾತಕ್ಕೆ ಮತ್ತೊಬ್ಬರು ಬಲಿ!

NAMMUR EXPRESS NEWS
ಕಾರ್ಕಳ: ರಾಜ್ಯದ ಬ್ಯಾಂಕಿಂಗ್ ಕ್ಷೇತ್ರದ ದಿಗ್ಗಜರಲ್ಲಿ ಒಬ್ಬರಾದ ಕರ್ಣಾಟಕ ಬ್ಯಾಂಕ್ ನಿವೃತ್ತ ವ್ಯವಸ್ಥಾಪಕ ನಿರ್ದೇಶಕ ಪೊಳಲಿ ಜಯರಾಂ ಭಟ್ (71) ಅವರು ಆ. 9 ರಂದು ನಿಧನ ಹೊಂದಿದ್ದಾರೆ. ಆ.9ರಂದು ಮಧ್ಯಾಹ್ನ ಮಂಗಳೂರು ವಿಮಾನ ನಿಲ್ದಾಣದಲ್ಲಿ ಹೃದಯಾಘಾತದಿಂದ ಕುಸಿದಿದ್ದರು. ಅವರನ್ನು ಚಿಕಿತ್ಸೆಗಾಗಿ ನಗರದ ಆಸ್ಪತ್ರೆಗೆ ದಾಖಲಿಸಲಾಗಿತ್ತು, ಆದರೆ, ಚಿಕಿತ್ಸೆ ಫಲಕಾರಿಯಾಗದೆ ಅವರು ನಿಧನ ಹೊಂದಿದ್ದಾರೆ. ಅವರು ಮುಂಬಯಿನಲ್ಲಿ ಯುನಿವರ್ಸಲ್ ಸೋಂಪೋ ವಿಮಾ ಕಂಪನಿಯ ಮಂಡಳಿ ಸಭೆಯಲ್ಲಿ ಭಾಗವಹಿಸಿ, ಊರಿಗೆ ಮರಳುತ್ತಿದ್ದರು ಎಂದು ತಿಳಿದು ಬಂದಿದೆ. ಮೃತರು ಪತ್ನಿ ಓರ್ವ ಪುತ್ರ ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ.

ಜಯರಾಂ ಭಟ್ ಅವರು ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳ ತಾಲ್ಲೂಕು ಪೊಳಲಿಯ ಅವರು, ಮೈಸೂರು ವಿಶ್ವವಿದ್ಯಾಲಯದಲ್ಲಿ ಎಂ.ಎಸ್ಸಿ ಸ್ನಾತಕೋತ್ತರ ಪದವಿಯಲ್ಲಿ ಪ್ರಥಮ ಬ್ಯಾಂಕ್ ಗಳಿಸಿದ್ದರು. 1973ರಲ್ಲಿ ಪ್ರೊಬೇಷನರಿ ಅಧಿಕಾರಿಯಾಗಿ ಕರ್ಣಾಟಕ ಬ್ಯಾಂಕ್ ಸೇರಿದ್ದ ಅವರು, 1975ರಲ್ಲಿ ಶಾಖಾ ವ್ಯವಸ್ಥಾಪಕರಾಗಿ, ನಂತರ ವಿವಿಧ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿ 2005ರಲ್ಲಿ ಪ್ರಧಾನ ವ್ಯವಸ್ಥಾಪಕರಾಗಿ ನೇಮಕಗೊಂಡಿದ್ದರು. 2009ರಲ್ಲಿ ಅವರಿಗೆ ಕರ್ಣಾಟಕ ಬ್ಯಾಂಕ್‌ನ ವ್ಯವಸ್ಥಾಪಕ ನಿರ್ದೇಶಕ ಹಾಗೂ ಸಿಇಒ ಹುದ್ದೆ ಒಲಿಯಿತು. 2017ರಲ್ಲಿ ಬ್ಯಾಂಕ್‌ನ ಅಧ್ಯಕ್ಷರಾದ ಅವಧಿಯಲ್ಲಿ ಇ-ಲಾಬಿ, ಮೊಬೈಲ್ ಬ್ಯಾಂಕಿಂಗ್, ಪಿಒಎಸ್ ಅನ್‌ಲೈನ್ ಟ್ರೇಡಿಂಗ್ ಅಕೌಂಟ್, ಟ್ರಾವೆಲ್ ಕಾರ್ಡ್, ಇನ್ನೂ ಅನೇಕ ಯೋಜನೆಗಳನ್ನು ಪರಿಚಯಿಸಿ, ಗ್ರಾಹಕರ ಮೆಚ್ಚುಗೆ ಗಳಿಸಿದರು.

ಬ್ಯಾಂಕಿಂಗ್ ಕ್ಷೇತ್ರದಲ್ಲಿ ಐದು ದಶಕಗಳ ಅನುಭವ ಹೊಂದಿದ್ದ ಅವರಿಗೆ 20ಕ್ಕೂ ಹೆಚ್ಚು ಪ್ರಶಸ್ತಿಗಳು ಲಭಿಸಿದ್ದವು.
ಆ.10 ರಂದು ಬೆಳಿಗ್ಗೆ 8ರಿಂದ 9 ಗಂಟೆಯವರೆಗೆ ಮಂಗಳೂರಿನ ಎ.ಜೆ. ಆಸ್ಪತ್ರೆಯಲ್ಲಿ ಮೃತರ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು.

ಇದನ್ನೂ ಓದಿ : ಜಲಪಾತ ಸಿನಿಮಾಕ್ಕೆ ವಿಜಯಪ್ರಕಾಶ್ ಎಂಟ್ರಿ!

HOW TO APPLY : NEET-UG COUNSELLING 2023

Categories
ತೀರ್ಥಹಳ್ಳಿ

ತೀರ್ಥಹಳ್ಳಿ ಯಲ್ಲೂ ಗಾಂಜಾ ಜಾಲ ಪತ್ತೆ!

ತೀರ್ಥಹಳ್ಳಿ ಯಲ್ಲೂ ಗಾಂಜಾ ಜಾಲ ಪತ್ತೆ!
– ಕೋಣಂದೂರು ಸಮೀಪ ಗಾಂಜಾ ಗಿಡ
– ಮನೆಯ ತೋಟದಲ್ಲೇ ಗಾಂಜಾ ಬೆಳೆದವರು ಅರೆಸ್ಟ್!
– ಕೋಣಂದೂರು ಭಾಗದಲ್ಲಿ ಹೆಚ್ಚಿದ ನಶೆ ಜಗತ್ತು!

NAMMUR EXPRESS NEWS
ತೀರ್ಥಹಳ್ಳಿ: ಮಲೆನಾಡಲ್ಲಿ ಗಾಂಜಾ ಮತ್ತು ಮಾಧಕ ವಸ್ತು ಜಾಲ ಸಕ್ರಿಯವಾಗಿ ಕೆಲಸ ಮಾಡುತ್ತಿದೆ. ಯುವ ಸಮುದಾಯ ತಮ್ಮ ಅಮೂಲ್ಯ ಬದುಕನ್ನು ಕಳೆದುಕೊಳ್ಳುತ್ತಿದೆ. ಶಾಂತಿಯ ಊರಲ್ಲಿ ಅಪರಾಧ ಹೆಚ್ಚಳಕ್ಕೆ ಈ ಗಾಂಜಾ ದಂಧೆ ಕಾರಣ ಆಗಿದೆ. ಇದೀಗ ತೀರ್ಥಹಳ್ಳಿ ಪೊಲೀಸರು ಕೋಣಂದೂರು ಸಮೀಪ ತೋಟದಲ್ಲೇ ಗಾಂಜಾ ಬೆಳೆದ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ. ಕೋಣಂದೂರು ಗ್ರಾಮ ಪಂಚಾಯತ್ ಕೋಲಿಗೆ ಗ್ರಾಮದ ಸುದೀಪ್ ಅಲಿಯಾಸ್ ಸುನೀಲ್ ಬಿನ್ ಶ್ರೀನಿವಾಸ್, ಕಾರ್ತೀಕ ಅಲಿಯಾನ್ ಕೆನ್ನಬಿನ್ ನಾಗೇಶ್ ಆರೋಪಿಗಳು. ಇಬ್ಬರು ಅಂದಾಜು 30 ವರ್ಷ ವಯಸ್ಸಿನವರು. ಕೋಣಂದೂರಲ್ಲಿ ಕಳೆದ ಕೆಲ ವರ್ಷದ ಹಿಂದೆ ಓರ್ವನನ್ನು ಅರೆಸ್ಟ್ ಮಾಡಲಾಗಿತ್ತು.

ತೀರ್ಥಹಳ್ಳಿ ತಾಲೂಲ್ಲಿ ಹೆಚ್ಚಿದ ಗಾಂಜಾ ಸಪ್ಲೈ!

ತೀರ್ಥಹಳ್ಳಿ ತಾಲೂಕಿನಲ್ಲಿ ಇತ್ತೀಚಿಗೆ ಗಾಂಜಾ ದಂಧೆ ಹೆಚ್ಚಿದೆ. ಪಟ್ಟಣ ಮತ್ತು ಗ್ರಾಮೀಣ ಪ್ರದೇಶದ ಕೆಲ ಯುವಕರಲ್ಲಿ ಗಾಂಜಾ ಚಟವಾಗಿದೆ. ಹೊರ ಭಾಗದಿಂದಲೂ ಇಲ್ಲಿಗೆ ಭಾರೀ ಪ್ರಮಾಣದ ಸರಬರಾಜು ಮಾಡಲಾಗುತ್ತಿದೆ ಎಂಬ ಆರೋಪ ಇದೆ.

ಪೋಷಕರೇ ಎಚ್ಚರ ಎಚ್ಚರ..ಮಕ್ಕಳ ಭವಿಷ್ಯ ಹೋಗುತ್ತೆ!

ಕೋಣಂದೂರು ಕಾಲೇಜು ಮತ್ತು ಸುತ್ತ ಮುತ್ತಲಿನ ವಾತಾವರಣ ಇದೀಗ ಗಾಂಜಾ, ಅಕ್ರಮ ಚಟುವಟಿಕೆ, ರಾಜಕೀಯ ಪ್ರೇರಿತ ಪ್ರಕರಣಗಳಿಂದ ಕಲುಷಿತಗೊಳ್ಳುತ್ತಿದೆ ಎಂಬ ಆರೋಪ ಸ್ಥಳೀಯರಿಂದ ಕೇಳಿ ಬಂದಿದೆ. ಇಲ್ಲಿನ ಡಿಗ್ರಿ, ಪಿಯುಸಿ ಮಕ್ಕಳನ್ನು ಆಮಿಷ ಹಾಗೂ ಕೆಟ್ಟ ಚಟುವಟಿಕೆಗೆ ಕೆಲವರು ಹೊರ ಭಾಗದವರು ಇಲ್ಲಿಗೆ ಬಂದು ಪ್ರೆರೇಪಿಸುತ್ತಿದ್ದಾರೆ ಎಂಬ ಆರೋಪ ಇದೆ.

ಇದನ್ನೂ ಓದಿ : ಜಲಪಾತ ಸಿನಿಮಾಕ್ಕೆ ವಿಜಯಪ್ರಕಾಶ್ ಎಂಟ್ರಿ!

HOW TO APPLY : NEET-UG COUNSELLING 2023

Categories
ರಾಜ್ಯ

ಕಿನ್ನಿಗೋಳಿ ಭೀಕರ ರಸ್ತೆ ಅಪಘಾತ: ಓರ್ವನ ದುರ್ಮರಣ!

ಕಿನ್ನಿಗೋಳಿ ಭೀಕರ ರಸ್ತೆ ಅಪಘಾತ: ಓರ್ವನ ದುರ್ಮರಣ!
– ಆ.14ಕ್ಕೆ ಪುತ್ತಿಲ ಪರಿವಾರದಿಂದ ಬೃಹತ್ ಕಾಲ್ನಡಿಗೆ
– ತೆಂಗಿನ ಮರದಿಂದ ಬಿದ್ದು ಮಹಿಳೆ ಸಾವು
– ಯುವತಿಯರ ಫೋಟೋಗಳನ್ನು ಅಶ್ಲೀಲವಾಗಿ ಎಡಿಟ್: ಓರ್ವ ಅರೆಸ್ಟ್

NAMMUR EXPRESS NEWS
ಕಿನ್ನಿಗೋಳಿ: ಲಾರಿ ಮತ್ತು ಕಾರಿನ ನಡುವೆ ಭೀಕರ ಅಪಘಾತ ನಡೆದು ಒಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆ ಕಿನ್ನಿಗೋಳಿಯಲ್ಲಿ ನಡೆದಿದೆ. ಕಿನ್ನಿಗೋಳಿಯ ಮೂರು ಕಾವೇರಿ ರೋಟರಿ ಆಂಗ್ಲ ಮಾಧ್ಯಮ ಶಾಲೆಯ ಬಳಿ ಟಿಪ್ಪರ್ ಹಾಗೂ ಕಾರು ನಡುವೆ ಅಪಘಾತ ಸಂಭವಿಸಿದೆ. ಅಪಘಾತದ ತೀವ್ರತೆಗೆ ಒಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದು, ಇನ್ನೊಬ್ಬರು ಗಂಭೀರ ಸ್ವರೂಪದ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.

ಆ.14ಕ್ಕೆ ಪುತ್ತಿಲ ಪರಿವಾರದಿಂದ ಬೃಹತ್ ಕಾಲ್ನಡಿಗೆ

ಸೌಜನ್ಯ ನ್ಯಾಯಕ್ಕಾಗಿ ಅಗ್ರಹಿಸಿ ಆ. 14ರ ಸೋಮವಾರದಂದು ಬೆಳಿಗ್ಗೆ 9.30 ಕ್ಕೆ ದರ್ಬೆ ವೃತ್ತದಿಂದ ಕಾಲ್ನಡಿಗೆ ಜಾಥ ಪುತ್ತೂರು ಬಸ್ ನಿಲ್ದಾಣದವರೆಗೆ ತೆರಳಿ ಅಲ್ಲಿ ರಸ್ತೆ ತಡೆ ಮತ್ತು ಬೃಹತ್ ಪ್ರತಿಭಟನಾ ಸಭೆ ನಡೆಯಲಿದೆ.ಮನವಿ- ಪುತ್ತೂರು ಪೇಟೆಯ ವರ್ತಕರು ಸಹೋದರಿ ಸೌಜನ್ಯಳ ಸಾವಿಗೆ ನ್ಯಾಯಕ್ಕಾಗಿ ತಮ್ಮ ಅಂಗಡಿಮುಂಗಟ್ಟುಗಳನ್ನು ಅಂದು ಬೆಳಿಗ್ಗೆ 10 ಗಂಟೆಯಿಂದ 11 ಗಂಟೆಯವರೆಗೆ ಸ್ವಯಂಪ್ರೇರಿತ ಬಂದ್ ಮಾಡುವಂತೆ ಪುತ್ತಿಲ ಪರಿವಾರ ವತಿಯಿಂದ ಪುತ್ತೂರಿನ ಸಮಸ್ತ ವ್ಯಾಪಾರಸ್ಥರಲ್ಲಿ ಮನವಿ ಮಾಡಿದ್ದಾರೆ. ಆ.8 ರ ಪೂರ್ವಭಾವಿ ಸಭೆಯಲ್ಲಿ ಅರುಣ್ ಕುಮಾರ್ ಪುತ್ತಿಲ, ಪುತ್ತಿಲ ಪರಿವಾರದ ಅಧ್ಯಕ್ಷರಾದ ಪ್ರಸನ್ನ ಕುಮಾರ್ ಮಾರ್ತಾ, ನಗರ ಅಧ್ಯಕ್ಷರಾದ ಅನಿಲ್ ತೆಂಕಿಲ, ಪ್ರಧಾನ ಕಾರ್ಯದರ್ಶಿ ಉಮೇಶ್ ವೀರಮಂಗಲ, ಪ್ರಮುಖರಾದ ಸುನೀಲ್ ಬೋರ್ಕರ್, ರವಿ ಕುಮಾರ್ ಕೆದಂಬಾಡಿ ಮಠ, ಪ್ರವೀಣ್ ಶೆಟ್ಟಿ ತಿಂಗಳಾಡಿ, ಕೃಷ್ಣಪ್ರಸಾದ್ ಶೆಟ್ಟಿ, ಚಂದ್ರಹಾಸ್ ಈಶ್ವರಮಂಗಲ, ಪ್ರೇಮ್ ರಾಜ್ ಆರ್ಲಪದವು ಸಹಿತ ಹಲವು ಪ್ರಮುಖರು ಉಪಸ್ಥಿತರಿದ್ದರು.

ಯುವತಿಯರ ಫೋಟೋಗಳನ್ನು ಅಶ್ಲೀಲವಾಗಿ ಎಡಿಟ್: ಓರ್ವ ಅರೆಸ್ಟ್

ಕಾಲೇಜು ಯುವತಿಯರ ಫೋಟೋಗಳನ್ನು ಅಶ್ಲೀಲವಾಗಿ ಎಡಿಟ್ ಮಾಡಿ, ಅವುಗಳನ್ನು ಇನ್‌ಸ್ಟಾಗ್ರಾಮ್ ಮೂಲಕ ಹರಿಬಿಟ್ಟ ಪ್ರಕರಣದಲ್ಲಿ ಹುಬ್ಬಳ್ಳಿಯ ಸಮರ್ಥ ಕಾಲೇಜಿನಲ್ಲಿ ಓರ್ವ ವಿದ್ಯಾರ್ಥಿಯನ್ನು ಬಂಧಿಸಲಾಗಿದೆ
ಹುಬ್ಬಳ್ಳಿಯ ವಿದ್ಯಾನಗರದಲ್ಲಿರುವ ಸಮರ್ಥ ಶಿಕ್ಷಣ ಸಂಸ್ಥೆಯ ಕಾಲೇಜಿನಲ್ಲಿ ಈ ಘಟನೆ ನಡೆದಿದ್ದು, ಕಾಲೇಜಿನಲ್ಲಿ ನಾಲ್ಕು ಜನ ವಿದ್ಯಾರ್ಥಿನಿಯ ಫೋಟೋಗಳನ್ನು ಅಶ್ಲೀಲವಾಗಿ ಮಾರ್ಪ್ ಮಾಡಿ ಇನ್‌ಸ್ಟಾಗ್ರಾಮ್ ಖಾತೆಯೆ ಮೂಲಕ ಅಪ್ಲೋಡ್ ಮಾಡಲಾಗಿತ್ತು. ಈ ಬಗ್ಗೆ ನಾಲ್ವರು ವಿದ್ಯಾರ್ಥಿನಿಯರು ಹುಬ್ಬಳ್ಳಿಯ ಸೈಬರ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಇದೀಗ ಯುವತಿಯರ ಫೋಟೋಗಳನ್ನು ಅಶ್ಲೀಲವಾಗಿ ಎಡಿಟ್ ಮಾಡಿ, ಅಪ್ಲೋಡ್ ಮಾಡುತ್ತಿದ್ದ ಕಿರಾತಕನನ್ನ ಬಂಧಿಸಲಾಗಿದೆ ಎಂದು ಹುಬ್ಬಳ್ಳಿ ಧಾರವಾಡ ಪೊಲೀಸ ಕಮಿಷನರ್ ಸಂತೋಷ ಬಾಬು ಮಾಹಿತಿ ನೀಡಿದ್ದಾರೆ.

ತೆಂಗಿನ ಮರದಿಂದ ಬಿದ್ದು ಮಹಿಳೆ ಸಾವು

ಪುತ್ತೂರು ತಾಲೂಲಕು ಸವಣೂರು ಸಮೀಪದ ಪುಣ್ಚಪ್ಪಾಡಿ ಗ್ರಾಮದಲ್ಲಿ ತೆಂಗಿನಕಾಯಿ ಕೀಳುವ ಕಾಯಕದಲ್ಲಿ ಖ್ಯಾತಿ ಪಡೆದಿದ್ದ ಸುಚಿತ್ರ( 30) ಎಂಬಾಕೆ ತೆಂಗಿನ ಮರದಿಂದ ಬಿದ್ದು ಮೃತಪಟ್ಟ ಘಟನೆ ನಡೆದಿದೆ. ಸ್ಥಳೀಯ ಪ್ರಮೋದ್ ಬೊಳ್ಳಾಜೆಯವರ ಪತ್ನಿಯಾಗಿದ್ದ ಸುಚಿತ್ರ ರವರು ತೆಂಗಿನ ಮರ ಹತ್ತಿ ತೆಂಗಿನಕಾಯಿ ಕೀಳುವ ಕಾಯಕದಲ್ಲಿ ಖ್ಯಾತಿ ಪಡೆದಿದ್ದರು. ಸುಚಿತ್ರ ರವರ ಈ ಕಾಯಕಕ್ಕೆ ಮೆಚ್ಚುಗೆ ವ್ಯಕ್ತ ಪಡಿಸಿ ಹಲವಾರು ಸಂಘ-ಸಂಸ್ಥೆಗಳು ಪ್ರಶಸ್ತಿ ನೀಡಿ ಗೌರವಿಸಿತ್ತು.ಮೃತರು ಪತಿ, ಇಬ್ಬರು ಮಕ್ಕಳು ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ

ಇದನ್ನೂ ಓದಿ : ಜಲಪಾತ ಸಿನಿಮಾಕ್ಕೆ ವಿಜಯಪ್ರಕಾಶ್ ಎಂಟ್ರಿ!

HOW TO APPLY : NEET-UG COUNSELLING 2023

Categories
ತೀರ್ಥಹಳ್ಳಿ

ವಿಕಲಚೇತನ ಮಕ್ಕಳಿಗೆ ಬ್ಯಾಗ್, ನೋಟ್ ಬುಕ್

ವಿಕಲಚೇತನ ಮಕ್ಕಳಿಗೆ ಬ್ಯಾಗ್, ನೋಟ್ ಬುಕ್
– ಸುಕ್ಷೇಮ ಗ್ರಾಮೀಣಾಭಿವೃದ್ಧಿ ಟ್ರಸ್ಟ್ ಕುಡುಮಲ್ಲಿಗೆ ಆಯೋಜನೆ
– ಸಮಸ್ಯೆ ಬಂದಾಗ ದುಶ್ಚಟಗಳ ಕಡೆ ಹೋಗಬಾರದು: ಕುಡುಮಲ್ಲಿಗೆ ಸುರೇಶ್

NAMMUR EXPRESS NEWS
ತೀರ್ಥಹಳ್ಳಿ: ವಿಶೇಷ ಚೇತನ ಮಕ್ಕಳ ತಂದೆ ತಾಯಿಗಳಿಗೆ ಮಾನಸಿಕ ಆರೋಗ್ಯ ಮತ್ತು ಆತ್ಮವಿಶ್ವಾಸ ಬಹಳ ಮುಖ್ಯ. ಮಕ್ಕಳ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸುವ ಜಾಣ್ಮೆ ಪೋಷಕರಲ್ಲಿ ಇರಬೇಕು ಎಂದು ಶಿವಮೊಗ್ಗ ಮೆಗ್ಗಾನ್ ಬೋಧನಾ ಜಿಲ್ಲಾ ಆಸ್ಪತ್ರೆಯ ಮನೋವೈದ್ಯಕೀಯ ವಿಭಾಗದ ಸಾಮಾಜಿಕ ಮನಶಾಸ್ತ್ರಜ್ಞ ಕುಡುಮಲ್ಲಿಗೆ ಸುರೇಶ್ ತಿಳಿಸಿದರು.
ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ತೀರ್ಥಹಳ್ಳಿ, ಕ್ಷೇತ್ರ ಸಂಪನ್ಮೂಲ ಕೇಂದ್ರ ತೀರ್ಥಹಳ್ಳಿ ಇವರು ಸುಕ್ಷೇಮ ಗ್ರಾಮೀಣಾಭಿವೃದ್ಧಿ ಟ್ರಸ್ಟ್ ಕುಡುಮಲ್ಲಿಗೆ ಇವರ ಸಹಯೋಗದಲ್ಲಿ ಏರ್ಪಡಿಸಿದ ವಿಕಲಚೇತನ ಮಕ್ಕಳಿಗೆ ಉಚಿತ ಬ್ಯಾಗ್ ಮತ್ತು ನೋಟ್ ಬುಕ್ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಮಾನಸಿಕ ಆರೋಗ್ಯದ ಕುರಿತು ಮಕ್ಕಳಿಗೆ ಹಾಗೂ ತಂದೆ ತಾಯಿಗಳಿಗೆ ಆತ್ಮವಿಶ್ವಾಸ ಬಹಳ ಮುಖ್ಯ, ಅತಿ ಒತ್ತಡ ಇರಬಾರದು, ಸಮಸ್ಯೆಗಳನ್ನು ನೋಡುವ ರೀತಿ ಬಹಳ ಮುಖ್ಯ, ಸಮಸ್ಯೆ ಬಂದಾಗ ದುಶ್ಚಟಗಳ ಕಡೆ ಹೋಗಬಾರದು. ಸಮಸ್ಯೆ ಇದ್ದಾಗ ಪರಿಹಾರವನ್ನು ದೊರೆಯುವ ಸ್ಥಳ ಹುಡುಕಿ ಪರಿಹಾರ ಕಂಡುಕೊಳ್ಳಬೇಕು. ಅಗತ್ಯವಿದ್ದಾಗ ವೈದ್ಯರನ್ನ ಭೇಟಿ ಮಾಡಿ ಸಲಹೆ ಪಡೆದುಕೊಳ್ಳಬೇಕು ಒತ್ತಡದಲ್ಲಿ ಜೀವನ ನಡೆಸಬಾರದು. ದಿನನಿತ್ಯ ಬದುಕಲು ಸೂಕ್ತ ವೇಳಾಪಟ್ಟಿ ಮತ್ತು ಜೀವನ ಕೌಶಲ್ಯ ಅಗತ್ಯ, ಉತ್ತಮವಾದ ವ್ಯಾಯಾಮ ಹಾಗೂ ಉತ್ತಮ ಆಹಾರ ಕ್ರಮಗಳಿಂದ ಜೀವನವನ್ನು ಗೆಲ್ಲಲು ಸಾಧ್ಯ ಎಂದು ತಿಳಿಸಿದರು. ವಿಕಲಚೇತನ ಮಕ್ಕಳ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸುವಂತಹ ಕೆಲಸ ತಂದೆ ತಾಯಿ ಮತ್ತು ಸಮಾಜದ ಜನರಿಂದ ಆಗಬೇಕು. ಇದರಿಂದ ವಿಕಲಚೇತನ ಮಕ್ಕಳು ಸಹ ಉತ್ತಮ ಸಾಧನೆ ಮಾಡಬಹುದೆಂದು ಉದಾಹರಣೆ ಸಹಿತ ತಿಳಿಸಿದರು.

ವಿಶೇಷ ಚೇತನ ಮಕ್ಕಳಿಗೆ ಸರ್ಕಾರದಿಂದ ದೊರೆಯುವ ಸೌಲಭ್ಯಗಳ ಬಗ್ಗೆ ಮಾಹಿತಿಯನ್ನು ನೀಡಿದರು. ವಿಶೇಷ ಚೇತನ ಮಕ್ಕಳಿಗೆ ಟ್ರಸ್ಟ್ ದಾನಿಗಳಾದ ಸಂಧ್ಯಾ ವೆಂಕಟೇಶ್ ಮತ್ತು ವೆಂಕಟೇಶ್ ಟಿ ಆರ್ ತೀರ್ಥಹಳ್ಳಿ ಇವರು ಉಚಿತ ಬ್ಯಾಗ್ ಮತ್ತು ನೋಟ್ ಪುಸ್ತಕವನ್ನು ವಿತರಿಸಿದರು. ಸಮಾರಂಭದಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ಜಯಂತಿ, ಬಿ ಆರ್ ಸಿ ಸಮನ್ವಯಾಧಿಕಾರಿ ಗಣೇಶ್, ಉಪಾಧ್ಯಕ್ಷರು ಹಾಗೂ ಸುಕ್ಷೇಮ ಟ್ರಸ್ಟ್ ಕಾರ್ಯದರ್ಶಿ ಮೂಕಾಂಬಿಕಾ, ಬಿ ಇ ಐ ಆರ್ ಟಿ ವಿಭಾಗದ ಹನುಮಂತಪ್ಪ ಪೂರ್ಣಿಮಾ ಮತ್ತು ಶಿಕ್ಷಕರು , ಶಿಕ್ಷಕರ ಸಂಘದ ಪದಾಧಿಕಾರಿಗಳು ಮತ್ತು ಸದಸ್ಯರು ಉಪಸ್ಥಿತರಿದ್ದರು.

ಇದನ್ನೂ ಓದಿ : ಅಡಿಕೆ ಮಾರುಕಟ್ಟೆ: ಎಷ್ಟಿದೆ ದರ?

HOW TO APPLY : NEET-UG COUNSELLING 2023

Categories
ಬೆಂಗಳೂರು

ಸ್ಪಂದನಾ ವಿದಾಯ!

ಸ್ಪಂದನಾ ವಿದಾಯ!
– ಪಂಚಭೂತಗಳಲ್ಲಿ ಲೀನವಾದ ಸ್ಪಂದನಾ
– ಕುಟುಂಬದವರು, ಚಿತ್ರರಂಗದ ಕಣ್ಣೀರು

NAMMUR EXPRESS NEWS
ಬೆಂಗಳೂರು: ನಟ ವಿಜಯ್ ರಾಘವೇಂದ್ರ ಪತ್ನಿ ಸ್ಪಂದನಾ ಅಂತ್ಯಸಂಸ್ಕಾರ ಬೆಂಗಳೂರಿನ ಶ್ರೀರಾಂಪುರದ ಹರಿಶ್ಚಂದ್ರಘಾಟ್ ನಲ್ಲಿ ನೆರವೇರಿತು. ಈಡಿಗ ಸಂಪ್ರದಾಯದಂತೆ ಅಂತ್ಯಸಂಸ್ಕಾರ ನಡೆಸಲಾಯಿತು. ಪತಿ ವಿಜಯ ರಾಘವೇಂದ್ರ ಹಾಗೂ ಪುತ್ರ ಶೌರ್ಯ ಅಂತಿಮ ವಿಧಿವಿಧಾನಗಳನ್ನು ನೆರವೇರಿಸಿದರು. ಮಲ್ಲೇಶ್ವರಂನಿಂದ ಹರಿಶ್ಚಂದ್ರಘಾಟ್​ವರೆಗೆ ಸ್ಪಂದನಾ ಅವರ ಪಾರ್ಥಿವ ಶರೀರದ ಮೆರವಣಿಗೆ ನಡೆಸಲಾಯಿತು. ಅಂತಿಮಯಾತ್ರೆಯ ವೇಳೆ ರಸ್ತೆಯುದ್ದಕ್ಕೂ ನೂರಾರು ಜನ ಸ್ಪಂದನಾ ಅವರ ಅಂತಿಮದರ್ಶನ ಪಡೆದರು. ಸ್ಪಂದನಾ ಅವರಿಗೆ ಕುಟುಂಬಸ್ಥರು, ಸಂಬಂಧಿಕರು, ಸ್ನೇಹಿತ ವರ್ಗ, ಸಿನಿಮಾ ರಂಗದ ತಾರೆಯರು ಅಂತಿಮ ವಿದಾಯ ಹೇಳಿದರು.

ಇದನ್ನೂ ಓದಿ : ಅಡಿಕೆ ಮಾರುಕಟ್ಟೆ: ಎಷ್ಟಿದೆ ದರ?

HOW TO APPLY : NEET-UG COUNSELLING 2023