Categories
ಪ್ರತಿಭೆಗಳು ಮಲ್ನಾಡ್ ಸಿನಿಮಾ

ಮಲೆನಾಡು ಕಲಾವಿದರು, ತಂತ್ರಜ್ಞರ ಕಿರುಚಿತ್ರ ಉಷಾ ಬಿಡುಗಡೆ

ಮಲೆನಾಡು ಕಲಾವಿದರು, ತಂತ್ರಜ್ಞರ ಕಿರುಚಿತ್ರ ಉಷಾ ಬಿಡುಗಡೆ
– Satya picture ಯೂಟ್ಯೂಬ್ ಅಲ್ಲಿ ಬಿಡುಗಡೆ
– ನಾಗರಾಜ್ ಕುರುವಳ್ಳಿ, ಪೃಥ್ವಿ ಚಿಕ್ಕಮಗಳೂರು ನಟನೆ
– ಜಿಲ್ಸನ್, ಕಾರ್ತಿಕ್ ಸೇರಿ ಅನೇಕರ ಕರಾಮತ್ತು

NAMMUR EXPRESS NEWS
ಮಲೆನಾಡು: ಮಲೆನಾಡು ಕಲಾವಿದರು ಮತ್ತು ತಂತ್ರಜ್ಞರ ತಂಡದ ಹೊಸ ಕಿರುಚಿತ್ರ ಉಷಾ ಶುಕ್ರವಾರ ತತೆರೆ ಕಂಡಿದೆ.
ಯುವ ಸಂಘಟಕ ಕುರುವಳ್ಳಿ ನಾಗರಾಜ್ ಅವರು ಹೀರೋ ಆಗಿ ನಟಿಸಿದ್ದು, ಪೃಥ್ವಿ ಚಿಕ್ಕಮಗಳೂರು ನಾಯಕಿಯಾಗಿದ್ದಾರೆ. ಖ್ಯಾತ ನಿರ್ದೇಶಕ ಮಡೋನಾ ಪ್ರೊಡಕ್ಷನ್ ಮಾಲೀಕ ಜಿಲ್ಸನ್ ಜೋಸಫ್ ನಿರ್ದೇಶನ ಮಾಡಿದ್ದಾರೆ. ಮಡೋನಾ ಪ್ರೊಡಕ್ಷನ್ ಸಿನಿಮಾ ನಿರ್ಮಾಣ ಮಾಡಿದೆ. ತೀರ್ಥಹಳ್ಳಿ ಸೇರಿ ಮಲೆನಾಡಿನ ವಿವಿಧ ಭಾಗದಲ್ಲಿ ಚಿತ್ರೀಕರಣ ಮಾಡಲಾಗಿದ್ದು, ಸ್ಥಳೀಯ ಕಲಾವಿದರಾದ ನಿತಿನ್ ಹೆಗ್ಡೆ, ಕಾರ್ತಿಕ್ ಕುರ್ಕುರೆ ನಟಿಸಿದ್ದಾರೆ. ಪ್ರತಿಭಾ ಮ್ಯಾಸಿಕ್ ಮಲಯಾಳಮ್ ಖ್ಯಾತ ಸಂಗೀತ ನಿರ್ದೇಶಕ ಶ್ರೀರಾಮಸುರೇಂದರ್ ಸಂಗೀತ ನಿರ್ದೇಶಕರಾಗಿದ್ದು, ಸಾಹಿತ್ಯ ಪ್ರವೀಣ್ ಭಟ್ ಮಾಡಿದ್ದಾರೆ.

ಕೆ ಜಿ ಎಫ್ ಖ್ಯಾತಿಯ ಹಾಡುಗಾರ್ತಿ ವರ್ಷ ಆಚಾರ್ಯ ಹಾಡಿದ್ದಾರೆ. ತೀರ್ಥಹಳ್ಳಿ, ಮಾಸ್ತಿಕಟ್ಟೆ, ರಥಬೀದಿ ಪ್ರಮುಖ ಜಾಗದಲ್ಲಿ ಚಿತ್ರೀಕರಣ ಕ್ಯಾಮರಾಮ್ಯಾನ್ ಕಿಟ್ಟಿ ಎಡಿಟಿಂಗ್ ಅಲ್ಲಿ ಹಾನೂ ಸಿಂಗ್ ಕೆಲಸ ಮಾಡಿದ್ದಾರೆ.
ಉಷಾ ಕಿರು ಚಿತ್ರ Satya pictures ಯೂಟ್ಯೂಬ್ ಚಾನೆಲ್ ಅಲ್ಲಿ ಬಿಡುಗಡೆಗೊಂಡಿದೆ. ಚಿತ್ರ ವೀಕ್ಷಣೆಗೆ Satya picture ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ..!

[embedyt] https://www.youtube.com/watch?v=_dOZ5PpTTJ0%5B/embedyt%5D

ಇದನ್ನೂ ಓದಿ : ಭೂತಾನ್ ಅಡಿಕೆ ಬಂದ್ರೂ ತೊಂದರೆ ಇಲ್ಲ- ಆರಗ ಜ್ಞಾನೇಂದ್ರ

[embedyt] https://www.youtube.com/watch?v=rTGqP21dgrM%5B/embedyt%5D

HOW TO APPLY : NEET-UG COUNSELLING 2023

Categories
ಕಾರ್ಕಳ

ಕಂಪೆನಿ ಸೆಕ್ರೆಟರಿ ಅರ್ಹತಾ ಪರೀಕ್ಷೆಯಲ್ಲಿ ಸಾಧನೆ

ಕಂಪೆನಿ ಸೆಕ್ರೆಟರಿ ಅರ್ಹತಾ ಪರೀಕ್ಷೆಯಲ್ಲಿ ಸಾಧನೆ
– ಕಾರ್ಕಳ ಕ್ರಿಯೇಟಿವ್ ಕಾಲೇಜಿನ ವಿದ್ಯಾರ್ಥಿಗಳು ತೇರ್ಗಡೆ
– ಕಾಲೇಜಿನ ಆಡಳಿತ ಮಂಡಳಿ, ಬೋಧಕರ ಅಭಿನಂದನೆ

NAMMUR EXPRESS NEWS
ಕಾರ್ಕಳ: ಕಾರ್ಕಳ ಕ್ರಿಯೇಟಿವ್‌ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಂದ ಸಿ.ಎಸ್‌ (ಕಂಪೆನಿ ಸೆಕ್ರೆಟರಿ) ಪರೀಕ್ಷೆಯಲ್ಲೂ ಉತ್ತಮ ಸಾಧನೆ ಆಗಿದೆ. ಕಂಪೆನಿ ಸೆಕ್ರೆಟರಿ ಸಂಸ್ಥೆಗಳಿಗೆ ನಡೆದ ಸ್ಪರ್ಧಾತ್ಮಕ ಅರ್ಹತಾ ಪರೀಕ್ಷೆಯಲ್ಲಿ ಕ್ರಿಯೇಟಿವ್‌ ಕಾಲೇಜಿನ ವಿದ್ಯಾರ್ಥಿಗಳಾದ ಪ್ರಜ್ವಲ್‌, ಮಂಜುನಾಥ ಭಟ್‌, ಶ್ರೀಯಾ ಕೆ ಎಸ್‌, ಶ್ರಾವ್ಯ ಭಟ್‌ ಎಸ್‌, ಪ್ರಣೀತಾ, ಧನುಷ್‌ ಡಿ ಡಿ ಮುಂದಿನ ಹಂತಕ್ಕೆ ತೇರ್ಗಡೆ ಹೊಂದಿದ್ದಾರೆ. ವಿದ್ಯಾರ್ಥಿಗಳ ಕಠಿಣ ಪರಿಶ್ರಮ, ಅನುಭವಿ ಉಪನ್ಯಾಸಕರ ತಂಡದೊಂದಿಗೆ ಕಾರ್ಯ ಪ್ರವೃತ್ತವಾಗಿರುವ ಸಂಸ್ಥೆ ತನ್ನ ಮೊದಲ ದಿನಗಳಿಂದಲೂ ವಾಣಿಜ್ಯ ವಿಭಾಗದಲ್ಲಿ ಸಿ.ಎ, ಸಿ.ಎಸ್‌ ಮತ್ತು ಬ್ಯಾಂಕಿಂಗ್‌ ಪರೀಕ್ಷೆಗಳಿಗೆ ವಿಶೇಷ ತರಗತಿ ಮತ್ತು ತರಬೇತಿ ನೀಡುತ್ತಾ ಬಂದಿದ್ದು ಅತ್ಯುತ್ತಮ ಫಲಿತಾಂಶವೂ ದಾಖಲಾಗಿರುವುದನ್ನು ಸ್ಮರಿಸಬಹುದಾಗಿದೆ. ವಿದ್ಯಾರ್ಥಿಗಳ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು ಹಾಗೂ ಉಪನ್ಯಾಸಕ ವರ್ಗದವರು ಸಂಯೋಜಕರು ಹರ್ಷ ವ್ಯಕ್ತಪಡಿಸಿ ಅಭಿನಂದನೆ ಸಲ್ಲಿಸಿದ್ದಾರೆ.

ಇದನ್ನೂ ಓದಿ : ಭೂತಾನ್ ಅಡಿಕೆ ಬಂದ್ರೂ ತೊಂದರೆ ಇಲ್ಲ- ಆರಗ ಜ್ಞಾನೇಂದ್ರ

[embedyt] https://www.youtube.com/watch?v=rTGqP21dgrM%5B/embedyt%5D

HOW TO APPLY : NEET-UG COUNSELLING 2023

Categories
ತೀರ್ಥಹಳ್ಳಿ

ಕಾಂಗ್ರೆಸ್ ತೆಕ್ಕೆಗೆ ಮಂಡಗದ್ದೆ, ಬೆಜ್ಜವಳ್ಳಿ ಗ್ರಾಮ ಪಂಚಾಯತ್!

ಕಾಂಗ್ರೆಸ್ ತೆಕ್ಕೆಗೆ ಮಂಡಗದ್ದೆ, ಬೆಜ್ಜವಳ್ಳಿ ಗ್ರಾಮ ಪಂಚಾಯತ್!
– ಮಂಡಗದ್ದೆ ಗ್ರಾಪಂ ಅಧ್ಯಕ್ಷರಾಗಿ ಜ್ಯೋತಿ, ಉಪಾಧ್ಯಕ್ಷರಾಗಿ ಸುನಿತಾ ನಾಯ್ಕ್ ಆಯ್ಕೆ
– ಬೆಜ್ಜವಳ್ಳಿ ಗ್ರಾಪಂ ಪ್ರಶಾಂತ್.ಡಿ.ಎಸ್ ಹಾಗೂ ಉಪಾಧ್ಯಕ್ಷರಾಗಿ ಬಿ.ಎಸ್ ಸುಬ್ರಮಣ್ಯ ಶೆಟ್ಟಿ ಆಯ್ಕೆ

NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ತಾಲೂಕು ಮಂಡಗದ್ದೆ ಗ್ರಾಮ ಪಂಚಾಯತ್ ಅಧ್ಯಕ್ಷರಾಗಿ ಜ್ಯೋತಿ, ಉಪಾಧ್ಯಕ್ಷರಾಗಿ ಸುನಿತಾ ನಾಯ್ಕ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಮುಡುಬ ರಾಘವೇಂದ್ರ, ಯುವ ಕಾಂಗ್ರೆಸ್ ಅಧ್ಯಕ್ಷ ಪುಟ್ಟೋಡ್ಲು ರಾಘವೇಂದ್ರ, ಪ್ರಮುಖರಾದ ಪ್ರಶಾಂತ್, ಸಿಂಧೂವಾಡಿ ಸತೀಶ್, ಸಿಂಧೂವಾಡಿ ದೀಪು,ಜುಲ್ಫಿಕರ್, ರುದ್ರಮೂರ್ತಿ, ಸೇರಿದಂತೆ ಗ್ರಾಮ ಪಂಚಾಯತ್ ಸದಸ್ಯರು, ಪಕ್ಷದ ಮುಖಂಡರು ಹಾಗೂ ಪ್ರಮುಖರು ಹಾಜರಿದ್ದರು.

ಬೆಜ್ಜವಳ್ಳಿ ಗ್ರಾಪಂ ಅಧ್ಯಕ್ಷರಾಗಿ ಪ್ರಶಾಂತ್.ಡಿ.ಎಸ್, ಉಪಾಧ್ಯಕ್ಷರಾಗಿ ಬಿ.ಎಸ್ ಸುಬ್ರಮಣ್ಯ ಶೆಟ್ಟಿ ಆಯ್ಕೆ

ಬೆಜ್ಜವಳ್ಳಿ ಗ್ರಾಮ ಪಂಚಾಯಿತಿಯಲ್ಲಿ ನಡೆದ ಎರಡನೇ ಅವಧಿಯ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಯುವ ಮುಖಂಡ ಪ್ರಶಾಂತ್.ಡಿ.ಎಸ್ ಹಾಗೂ ಉಪಾಧ್ಯಕ್ಷರಾಗಿ ಬಿ.ಎಸ್ ಸುಬ್ರಮಣ್ಯ ಶೆಟ್ಟಿ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಇವರಿಗೆ ಎಲ್ಲಾ ಸದಸ್ಯರು ಮತ್ತು ಸಿಬ್ಬಂದಿ ವರ್ಗದವರಿಂದ ಅಭಿನಂದನೆ ಸಲ್ಲಿಸಲಾಯಿತು.

ಇದನ್ನೂ ಓದಿ : ಭೂತಾನ್ ಅಡಿಕೆ ಬಂದ್ರೂ ತೊಂದರೆ ಇಲ್ಲ- ಆರಗ ಜ್ಞಾನೇಂದ್ರ

[embedyt] https://www.youtube.com/watch?v=rTGqP21dgrM%5B/embedyt%5D

HOW TO APPLY : NEET-UG COUNSELLING 2023

Categories
ತೀರ್ಥಹಳ್ಳಿ ಸಿನಿಮಾ

ಚಿತ್ರಕವಿ ಕವಿರಾಜ್ ಅವರಿಗೆ ಜನ್ಮ ದಿನ!

ಚಿತ್ರಕವಿ ಕವಿರಾಜ್ ಅವರಿಗೆ ಜನ್ಮ ದಿನ!
– 2000 ಹಾಡು ಬರೆದ ಕನ್ನಡ ಸಿನಿಮಾ ರಂಗದ ಮೇರು ಪ್ರತಿಭೆ
– ತೀರ್ಥಹಳ್ಳಿಯ ಹೆಮ್ಮೆಯ ಕಲಾವಿದನಿಗೆ ಶುಭಾಶಯಗಳು

NAMMUR EXPRESS NEWS
ಬೆಂಗಳೂರು/ತೀರ್ಥಹಳ್ಳಿ: ಕನ್ನಡ ಸಿನಿಮಾ ಗೀತ ರಚನೆಯಲ್ಲಿ ಸಾಕಷ್ಟು ಹೆಸರು ಮಾಡಿರುವ ಸಾಹಿತಿಗಳಲ್ಲಿ ಕವಿರಾಜ್ ಅವರ ಹೆಸರು ಟಾಪ್. ತಮ್ಮ ಇಂಪಾದ ಸಾಹಿತ್ಯದ ಮೂಲಕ ಕನ್ನಡಿಗರ ಹೃದಯ ಗೆದ್ದ ಚಿತ್ರ ಸಾಹಿತಿ. ತೀರ್ಥಹಳ್ಳಿ ಮೂಲದ ಕವಿರಾಜ್ ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳು. ಚಾಲೆಂಜಿಂಗ್ ಸ್ಟಾರ್ ದರ್ಶನ್ ಜತೆ ಜತೆಗೆ ಸಿನಿಮಾ ಇಂಡಸ್ಟ್ರಿಗೆ ಬಂದ ಕವಿರಾಜ್ ಯುವ ಜನತೆಯ ಮನಸ್ಸು ಮುಟ್ಟುವಂತಹ ಹಾಡುಗಳನ್ನು ಬರೆಯುವುದರಲ್ಲಿ ಮೊದಲಿಗರು. ಹಾಡುಗಳನ್ನು ಬರೆಯುವುದರ ಜೊತೆಯಲ್ಲಿ ಸಿನಿಮಾ ನಿರ್ದೇಶಕರಾಗಿಯೂ ಗುರುತಿಸಿಕೊಂಡಿರುವ ಕವಿರಾಜ್ ಬಹುಬೇಡಿಕೆಯ ಚಿತ್ರ ಸಾಹಿತಿ.

ಸಿನಿಮಾಕ್ಕೂ ಸೈ… ಸಮಾಜ ಸೇವೆಗೂ ಸೈ!

ಕನ್ನಡ ಸಿನಿಮಾಗಳಿಗೆ ಸುಮಾರು ಎರಡು ಸಾವಿರಕ್ಕೂ ಹೆಚ್ಚಿನ ಹಾಡುಗಳನ್ನು ಬರೆದು ಕನ್ನಡ ಸಿನಿಮಾದ ಪ್ರಸಿದ್ಧ ಚಿತ್ರ ಸಾಹಿತಿಯಾಗಿರುವ ಬುಲ್ ಬುಲ್ ಚಿತ್ರದ ನಿರ್ಮಾಪಕರು, ದರ್ಶನ್ ಅವರ ಆಪ್ತ ಬಳಗದಲೊಬ್ಬರು, ನಿರ್ದೇಶಕರಾಗಿ ಕೂಡ ಕೆಲಸ ಮಾಡಿದಂತವರು, ತೀರ್ಥಹಳ್ಳಿಯ ಹೆಮ್ಮೆ, ಉಸಿರು ಎಂಬ ಸಂಸ್ಥೆ ಮೂಲಕ ಅದೆಷ್ಟೋ ಜನರಿಗೆ ಉಸಿರುಕೊಟ್ಟವರು, ಸ್ನೇಹ ಜೀವಿ ಕವಿರಾಜ್.

ಕನ್ನಡ ಪ್ರೇಮಕ್ಕೆ ಕಂಕಣ!

ಕನ್ನಡ ಭಾಷೆ ಎಲ್ಲರ ಬಾಯಲ್ಲೂ ಬರಬೇಕು ಎಂದು ಪ್ರತಿ ನಿತ್ಯ ಹೋರಾಟ ಮಾಡುತ್ತಾರೆ. ಅದಕ್ಕಗಿಯೇ ಸಮಯ ಮೀಸಲಿಟ್ಟು ‘ಕಂಕಣ’ ಎನ್ನುವ ತಂಡ ಕಟ್ಟಿಕೊಂಡು ಬೆಂಗಳೂರಿನ ಮಾಲ್ ಗಳಲ್ಲಿ ಐಟಿ ಬಿಟಿ ಕಂಪನಿಗಳ ಮುಂದೆ ನಿಂತು ವಿಭಿನ್ನ ರೀತಿಯಲ್ಲಿ ಭಾಷೆಯ ಮೇಲಿರುವ ತಮ್ಮ ಅಭಿಮಾನ ಹಾಗೂ ಗೌರವವನ್ನು ವ್ಯಕ್ತಪಡಿಸುತ್ತಾರೆ. ಸಿನಿಮಾ ನಿರ್ದೇಶಕ ಹಾಗೂ ಚಿತ್ರ ಸಾಹಿತಿ ಕವಿರಾಜ್ ಕನ್ನಡ ಚಿತ್ರರಂಗದ ಗೀತೆ ರಚನೆಕಾರರಲ್ಲೊಬ್ಬರು. 2003ರಲ್ಲಿ ಪ್ರೇಮ್ ನಿರ್ದೇಶನದ ಕರಿಯ ಚಿತ್ರದ ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸಿದರು. ಆ ಚಿತ್ರದ ‘ನನ್ನಲಿ ನಾನಿಲ್ಲ, ಮನದಲಿ ಏನಿಲ್ಲ’ ಗೀತೆಯು ಕವಿರಾಜ್ ಅವರ ಮೊದಲ ಚಿತ್ರಗೀತೆ. ಅಲ್ಲಿಂದ ಹಿಂತಿರುಗಿ ನೋಡಲೇ ಇಲ್ಲ. ತಮ್ಮ ಸಾಹಿತ್ಯದ ಪಯಣದ ಜತೆ ಸಿನಿಮಾ ರಂಗದಲ್ಲಿ ನೂರಾರು ಪ್ರಶಸ್ತಿ ಗಳಿಸಿದ್ದಾರೆ. ನಿರ್ದೇಶಕರಾಗಿ, ನಿರ್ಮಾಪಕರಾಗಿಯೂ ಹೆಸರು ಮಾಡಿದ್ದಾರೆ.

ಹ್ಯಾಪಿ ಬರ್ತ್ಡೇ ಕವಿರಾಜ್…

ಇದನ್ನೂ ಓದಿ : ಭೂತಾನ್ ಅಡಿಕೆ ಬಂದ್ರೂ ತೊಂದರೆ ಇಲ್ಲ- ಆರಗ ಜ್ಞಾನೇಂದ್ರ

[embedyt] https://www.youtube.com/watch?v=rTGqP21dgrM%5B/embedyt%5D

HOW TO APPLY : NEET-UG COUNSELLING 2023

Categories
ಕರಾವಳಿ

ಕರಾವಳಿ ಟಾಪ್ ನ್ಯೂಸ್ 11-08-2023

– ಕರಾವಳಿಯಲ್ಲಿ ಮಳೆ, ಗಾಳಿ ಅಲರ್ಟ್!
– ಮಂಗಳೂರು ರೈಲು ನಿಲ್ದಾಣದಲ್ಲಿ ಗಾಂಜಾ ಬ್ಯಾಗ್ ಪತ್ತೆ!
– ಕುಂದಾಪುರ ಅಪಘಾತ: ಮಹಿಳೆಗೆ ಗಾಯ
– ಬಂಟ್ವಾಳ: ಬಸ್, ಬೈಕ್ ಡಿಕ್ಕಿ: ಸವಾರನಿಗೆ ಗಾಯ

NAMMUR EXPRESS KARAVALI : ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಭಾರಿ ಮಳೆಯಾಗಲಿದೆ, ಬೆಳಗಾವಿ, ಬೀದರ್, ಧಾರವಾಡ, ಗದಗ, ಹಾವೇರಿ, ಕಲಬುರಗಿ, ಕೊಪ್ಪಳ, ರಾಯಚೂರು, ಬಳ್ಳಾರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಹಾಸನ, ಕೊಡಗು, ಕೋಲಾರ, ಮಂಡ್ಯ ಮೈಸೂರು, ರಾಮನಗರ, ಶಿವಮೊಗ್ಗ, ತುಮಕೂರು ಜಿಲ್ಲೆಗಳಲ್ಲಿ ಆಗಸ್ಟ್ 17ರವರೆಗೂ ಮಳೆಯಾಗಲಿದೆ ಮಂಡ್ಯ ಮೈಸೂರು, ರಾಮನಗರ, ಶಿವಮೊಗ್ಗ, ತುಮಕೂರು ಜಿಲ್ಲೆಗಳಲ್ಲಿ ಆಗಸ್ಟ್ 17ರವರೆಗೂ ಮಳೆಯಾಗಲಿದೆ. ಎಂದು ಭಾರತೀಯ ಹವಾಮಾನ ಇಲಾಖೆ ವರದಿ ನೀಡಿದೆ. ಕರಾವಳಿಯ ಕೆಲವು ಕಡೆಗಳಲ್ಲಿ ಬಹಳಷ್ಟು ಮಳೆಯಾಗುವ ಸಾಧ್ಯತೆ ಇದೆ, ದಕ್ಷಿಣ ಒಳನಾಡಿನ ಕೆಲವು ಕಡೆಗಳಲ್ಲಿ ಮತ್ತು ಉತ್ತರ ಒಳನಾಡಿನ ಒಂದೆರಡು ಕಡೆಗಳಲ್ಲಿ ಮಳೆ-ಗುಡುಗು ಸಹಿತ ಮಲೆಯಾಗುವ ಸಾಧ್ಯತೆ ಇದೆ.

ಮಂಗಳೂರು ರೈಲು ನಿಲ್ದಾಣದಲ್ಲಿ ಗಾಂಜಾ ಬ್ಯಾಗ್ ಪತ್ತೆ!

ಮಂಗಳೂರು ಜಂಕ್ಷನ್ ರೈಲು ನಿಲ್ದಾಣದಲ್ಲಿ ಅನಾಮಧೇಯ ಬ್ಯಾಗ್‌ ದೊರೆತಿದ್ದು, ಗಾಂಜಾವನ್ನು ರೈಲ್ವೇ ಪೊಲೀಸರು ವಶಕ್ಕೆ ಪಡೆದಿದ್ದಾರೆ. ರೈಲು ನಿಲ್ದಾಣದ ಎರಡನೇ ಫ್ಲಾಟ್ ಫಾರಂನಲ್ಲಿ ಗುರುವಾರ ಕಾರವಾರ-ಯಶವಂತಪುರ (ನಂ.16516) ಎಕ್ಸ್‌ಪ್ರೆಸ್ ರೈಲಿನಲ್ಲಿ 3,16,650 ರೂ,ಮೌಲ್ಯದ 6.333 ಕೆ.ಜಿ. ತೂಕದ ಒಣ ಗಾಂಜಾ ಪತ್ತೆಯಾಗಿತ್ತು. ರೈಲಿನ ನಿಯಮಿತ ತಪಾಸಣೆ ವೇಳೆ ಪತ್ತೆಯಾದ ಅನಾಮಧೇಯ ಬ್ಯಾಗ್‌ನಲ್ಲಿ ಗಾಂಜಾ ಕಂಡು ಬಂದಿದೆ. ಮಂಗಳೂರು ಪೂರ್ವ ಅಬಕಾರಿ ವಿಭಾಗದಲ್ಲಿ ಎಸ್‌ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.

ಕುಂದಾಪುರ ಅಪಘಾತ: ಮಹಿಳೆಗೆ ಗಾಯ

ಚಾಲಕನ ನಿರ್ಲಕ್ಷತನದ ಚಾಲನೆಯಿಂದ ಗೂಡ್ಸ್ ವಾಹನದ ಹಿಂಬದಿಯಲ್ಲಿ ನಿಂತುಕೊಂಡಿದ್ದ ಗುಲಾಬಿ ಅವರು ಏಕಾಏಕಿ ವಾಹನದಿಂದ ಹೊರಗೆ ಎಸೆಯಲ್ಪಟ್ಟು, ರಸ್ತೆಗೆ ಬಿದ್ದು, ಗಾಯಗೊಂಡ ಘಟನೆ ಕುಂಭಾಶಿ ಗ್ರಾಮದ ಕೊರವಡಿಯಲ್ಲಿ ಆ. 10ರಂದು ಬೆಳಗ್ಗೆ ಸಂಭವಿಸಿದೆ. ಗಾಯಗೊಂಡ ಗುಲಾಬಿ ಅವರನ್ನು ಉಡುಪಿಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಗೂಡ್ಸ್‌ ಚಾಲಕ ಶ. ಚಂದ್ರಹಾಸ ವಿರುದ್ಧ ಕುಂದಾಪುರ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬಂಟ್ವಾಳ: ಬಸ್, ಬೈಕ್ ಡಿಕ್ಕಿ: ಸವಾರನಿಗೆ ಗಾಯ

ಬಂಟ್ವಾಳ: ಕೆ.ಎಸ್.ಅರ್.ಟಿ.ಸಿ.ಬಸ್ ಹಾಗೂ ಬೈಕ್‌ ನಡುವೆ ಡಿಕ್ಕಿ ಹೊಡೆದ ಪರಿಣಾಮವಾಗಿ ಬೈಕ್ ಸವಾರ ಗಾಯಗೊಂಡು ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಾದ ಘಟನೆ ಬಂಟ್ವಾಳ ಬೈಪಾಸ್ ಜಂಕ್ಷನ್ ಎಂಬಲ್ಲಿ ನಡೆದಿದೆ. ರಾಯಿ ನಿವಾಸಿ ಫ್ರಾನ್ಸಿಸ್ ಲೊಬೋ ಗಾಯಗೊಂಡ ವ್ಯಕ್ತಿ, ಫ್ರಾನ್ಸಿಸ್ ಲೋಬೋ ಅವರು ಬಂಟ್ವಾಳ ಪೇಟೆಯ ಕಡೆಯಿಂದ ಮೂಡಬಿದಿರೆಯ ಕಡೆ ಹೋಗುವ ವೇಳೆ ನಾಲ್ಕು ಮಾರ್ಗ ಕೂಡುವ ಬೈಪಾಸ್ ಜಂಕ್ಷನ್ ನಲ್ಲಿ ಅಪಘಾತ ನಡೆದಿದೆ. ಬೈಕ್ ಸವಾರ ಬಂಟ್ವಾಳದಿಂದ ಹೈವೆಯ ಮೂಲಕ ಮೂಡಬಿದಿರೆ ರಸ್ತೆಗೆ ಏಕಾಏಕಿ ನುಗ್ಗಿಸಿದ ಪರಿಣಾಮವಾಗಿ ಬಸ್ ಚಾಲಕನಿಗೆ ಬೈಕ್ ಬರುವುದು ಗೊತ್ತಾಗದೇ ಬಸ್ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ. ಸರಕಾರಿ ಬಸ್ ಚಾಲಕ ಅಪಘಾತ ತಪ್ಪಿಸಲು ಬ್ರೇಕ್ ಹಾಕಿ ಸಾಕಷ್ಟು ಪ್ರಯತ್ನ ಪಟ್ಟ ಬಗ್ಗೆ ಅಲ್ಲಿನ ಸ್ಥಳೀಯರು ತಿಳಿಸಿದ್ದಾರೆ. ಅಪಘಾತ ನಡೆದ ಸ್ಥಳಕ್ಕೆ ಮೆಲ್ಕಾರ್ ಟ್ರಾಫಿಕ್ ಪೋಲೀಸರು ಭೇಟಿ ನೀಡಿದ್ದು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಇದನ್ನೂ ಓದಿ : ಭೂತಾನ್ ಅಡಿಕೆ ಬಂದ್ರೂ ತೊಂದರೆ ಇಲ್ಲ- ಆರಗ ಜ್ಞಾನೇಂದ್ರ

[embedyt] https://www.youtube.com/watch?v=rTGqP21dgrM%5B/embedyt%5D

HOW TO APPLY : NEET-UG COUNSELLING 2023

Categories
ತೀರ್ಥಹಳ್ಳಿ

ರಸ್ತೆಯಲ್ಲೇ ನೆಟ್ಟಿ ಮಾಡಿದ ಗ್ರಾಮಸ್ಥರು!

ರಸ್ತೆಯಲ್ಲೇ ನೆಟ್ಟಿ ಮಾಡಿದ ಗ್ರಾಮಸ್ಥರು!
– ತೀರ್ಥಹಳ್ಳಿ ಪಟ್ಟಣದ ಸಮೀಪದಲ್ಲೇ ರಸ್ತೆ ಅವ್ಯವಸ್ಥೆ
– ಇಂದಾವರ -ಕೊರೋಡಿ, ಮಕ್ಕಿಮನೆ ಗ್ರಾಮಸ್ಥರಿಂದ ಪ್ರತಿಭಟನೆ
– ಮುಂದಿನ ಚುನಾವಣೆ ಬಹಿಷ್ಕಾರದ ಎಚ್ಚರಿಕೆ

NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ಪಟ್ಟಣದ ಸಮೀಪದ ಇಂದಾವರ -ಕೊರೋಡಿ ಮತ್ತು ಮಕ್ಕಿಮನೆ ಗ್ರಾಮಸ್ಥರು ತಮ್ಮ ಊರಿಗೆ ಹೋಗುವ ರಸ್ತೆ ಅವ್ಯವಸ್ಥೆ ಬಗ್ಗೆ ವಿನೂತನವಾಗಿ ಪ್ರತಿಭಟನೆ ನಡೆಸಿದ್ದಾರೆ. ತೀರ್ಥಹಳ್ಳಿ ಪಟ್ಟಣದ ಬೆಟ್ಟಮಕ್ಕಿ ಕಿತ್ತಿನಗದ್ದೆ ಕಡೆಯಿಂದಇಂದಾವರ -ಕೊರೋಡಿ ಮತ್ತು ಮಕ್ಕಿಮನೆಗೆ ಸಂಪರ್ಕ ಕಲ್ಪಿಸುವ ರಸ್ತೆ ಸಂಪೂರ್ಣ ಹೊಂಡ ಗುಂಡಿಗಳಿದ್ದು ಓಡಾಡುವುದು ತುಂಬಾ ಕಷ್ಟ ಆಗಿದೆ. ವಾಹನಗಳು, ಮಕ್ಕಳು ಇದರಿಂದ ತೊಂದರೆಗೆ ಒಳಗಾಗಿದ್ದಾರೆ. ಈ ಬಗ್ಗೆ ಅಧಿಕಾರಿಗಳಿಗೆ ಮನವಿ ಮಾಡಿದರೂ, ದೂರು ಕೊಟ್ಟರೂ ಗಮನ ವಹಿಸಲಿಲ್ಲ. ಗ್ರಾಮಸ್ಥರು ರಸ್ತೆಯಲ್ಲಿ ಸಸಿ ನೆಡುವ ಮೂಲಕ ಪ್ರತಿಭಟನೆ ಮಾಡಿ ಸೌಲಭ್ಯಕ್ಕಾಗಿ ಅಗ್ರಹಿಸಿದ್ದಾರೆ. ಎಲ್ಲಾ ಗ್ರಾಮಗಳ ಸುಮಾರು 150ಕ್ಕೂ ಹೆಚ್ಚು ಮಂದಿ ಭಾಗಿಯಾಗಿದ್ದರು.

ಮುಂದಿನ ಚುನಾವಣೆ ಬಹಿಷ್ಕಾರದ ಎಚ್ಚರಿಕೆ

ರಸ್ತೆ ಅವ್ಯವಸ್ಥೆ ಇರುವ ಗ್ರಾಮಗಳಿಗೆ ರಸ್ತೆ ಸರಿಪಡಿಸದಿದ್ದಲ್ಲಿ ಮುಂದಿನ ಲೋಕ ಸಭೆ, ತಾಲೂಕು ಪಂಚಾಯತ್, ಜಿಲ್ಲಾ ಪಂಚಾಯತ್ ಚುನಾವಣೆ ಬಹಿಷ್ಕಾರ ಮಾಡುವುದಾಗಿ ಗ್ರಾಮಸ್ತರು ಎಚ್ಚರಿಸಿದ್ದಾರೆ.

ಇದನ್ನೂ ಓದಿ : ಭೂತಾನ್ ಅಡಿಕೆ ಬಂದ್ರೂ ತೊಂದರೆ ಇಲ್ಲ- ಆರಗ ಜ್ಞಾನೇಂದ್ರ

[embedyt] https://www.youtube.com/watch?v=rTGqP21dgrM%5B/embedyt%5D

HOW TO APPLY : NEET-UG COUNSELLING 2023

Categories
ತೀರ್ಥಹಳ್ಳಿ

ಸಾಲದ ತಲೆಬಿಸಿಗೆ ಹೊಳೆಗೆ ಹಾರಿದ ಯುವಕ!

ಸಾಲದ ತಲೆಬಿಸಿಗೆ ಹೊಳೆಗೆ ಹಾರಿದ ಯುವಕ!
– ತೀರ್ಥಹಳ್ಳಿಯ ರಂಜದಕಟ್ಟೆ ಬಳಿ ನಡೆದ ಘಟನೆ
– ಸ್ಥಳೀಯರು, ಪೊಲೀಸರಿಂದ ಶವ ಶೋಧ

NAMMUR EXPRESS NEWS
ತೀರ್ಥಹಳ್ಳಿ: ಮದ್ಯಪಾನದ ಚಟ ಮತ್ತು ಸಾಲದ ತಲೆಬಿಸಿಗೆ ಹೆದರಿ ಹೊಳೆಗೆ ಹಾರಿ ಯುವಕ ಆತ್ಮಹತ್ಯೆ ಮಾಡಿಕೊಂಡ ಘಟನೆ ತೀರ್ಥಹಳ್ಳಿ ತಾಲೂಕು ರಂಜದಕಟ್ಟೆ ಬಳಿ ಗುರುವಾರ ಸಂಜೆ ನಡೆದಿದೆ. ತೀರ್ಥಹಳ್ಳಿಯ ರಂಜದಕಟ್ಟೆ ಬಳಿ ತುಂಗಾ ನದಿಗೆ ಬಿದ್ದು ಮಳಲೂರು ಗ್ರಾಮದ ಮೇಕೇರಿ ಶಿವಶಂಕರ್( 38) ಎಂಬಾತ ತುಂಗಾ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಸ್ಥಳೀಯರು ನೋಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ : ಭೂತಾನ್ ಅಡಿಕೆ ಬಂದ್ರೂ ತೊಂದರೆ ಇಲ್ಲ- ಆರಗ ಜ್ಞಾನೇಂದ್ರ

[embedyt] https://www.youtube.com/watch?v=rTGqP21dgrM%5B/embedyt%5D

HOW TO APPLY : NEET-UG COUNSELLING 2023

Categories
ಅಪರಾಧ ಮಂಗಳೂರು

ವಿದ್ಯಾರ್ಥಿನಿ ಮೇಲೆ ರೇಪ್: ನಕಲಿ ಪೊಲೀಸ್ ಅರೆಸ್ಟ್

ಇನ್ಸ್ಟಾಗ್ರಾಮ್ ಹುಡುಗಿಯರೇ ಹುಷಾರ್..!
– ಇನ್ ಸ್ಟಾಗ್ರಾಂನಲ್ಲಿ ಪೊಲೀಸ್ ಎಂದು ಪರಿಚಯ
– ವಿದ್ಯಾರ್ಥಿನಿ ಮೇಲೆ ರೇಪ್: ನಕಲಿ ಪೊಲೀಸ್ ಅರೆಸ್ಟ್
– ಲೋನ್ ಕೇಳಲು ಬಂದ.. ಚಾಕು ತೋರಿಸಿ ಬೆದರಿಸಿದ!

NAMMUR EXPRESS NEWS
ಮಂಗಳೂರು: ತಾನು ಪೊಲೀಸ್‌ ಎಂದು ಪರಿಚಯಿಸಿಕೊಂಡ ಯುವಕನೊಬ್ಬ ವಿದ್ಯಾರ್ಥಿನಿಯನ್ನು ಲಾಡ್ಜ್ ಗೆ ಕರೆದೊಯ್ದು ವಿದ್ಯಾರ್ಥಿನಿಯನ್ನು ಅತ್ಯಾಚಾರ ಮಾಡಿ ಆಕೆಯೊಂದಿಗಿರುವ ಫೊಟೋಗಳನ್ನು ಇತರರಿಗೆ ಶೇರ್ ಮಾಡಿ ಆ ಫೊಟೋಗಳನ್ನು ಡಿಲೀಟ್ ಮಾಡಬೇಕಾದ್ರೆ ಹಣದ ಬೇಡಿಕೆಯನ್ನು ಮುಂದಿಟ್ಟ ಘಟನೆ ಮಂಗಳೂರಲ್ಲಿ ನಡೆದಿದೆ. ನಕಲಿ ಪೊಲೀಸ್ ನನ್ನು ಮಂಗಳೂರು ಮಹಿಳಾ ಠಾಣಾ ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ರಾಯಚೂರು ಮೂಲದ ಯಮನೂರ (22) ಎಂದು ಗುರುತಿಸಲಾಗಿದೆ. ಆರೋಪಿಗೆ ಎರಡು ವಾರಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ಮಂಗಳೂರು ನಗರದ ಇಂಜಿನಿಯರಿಂಗ್ ಕಾಲೇಜಿನ 19ರ ಹರೆಯದ ವಿದ್ಯಾರ್ಥಿನಿಯನ್ನು ಇನ್ನಾ ಗ್ರಾಮ್ ಮೂಲಕ ಗೆಳೆತನ ಮಾಡಿ ಕೊಂಡ ಆರೋಪಿಯು ತನ್ನನ್ನು ವಾಮಂಜೂರು ಠಾಣೆಯ ಎಸೈ ಎಂದು ವಿದ್ಯಾರ್ಥಿನಿಯನ್ನು ಇನ್ನಾ ಗ್ರಾಮ್ ಮೂ ಲಕ ಗೆಳೆತನ ಮಾಡಿ ಕೊಂಡ ಆರೋಪಿಯು ತನ್ನನ್ನು ವಾಮಂಜೂರು ಠಾಣೆಯ ಎ ಎಂದು ಪರಿಚಯ ಮಾಡಿಕೊಂಡ. ಅಲ್ಲದೇ 2023ರ ಮೇ ತಿಂಗಳಲ್ಲಿ ನಗರದ ಕದ್ರಿ ದೇವಸ್ಥಾನದಲ್ಲಿ ಭೇಟಿ ಮಾಡಿ ಬಳಿಕ ತಣ್ಣೀರುಬಾವಿಯ ಬೀಚ್‌ಗೆ ಕರೆದೊಯ್ದು ಫೋಟೊ ತೆಗೆದುಕೊಂಡು ಬಳಿಕ ಅದನ್ನು ವೈರಲ್ ಮಾಡುವುದಾಗಿ ಬೆದರಿಸಿದ್ದ ಎಂದು ಆರೋಪಿಸಲಾಗಿದೆ.

ಅಲ್ಲದೆ ಬೆಂಗಳೂರು ಮತ್ತು ಕಿನ್ನಿಗೋಳಿಯ ಲಾಡ್ಜ್‌ಗೆ ಕರೆದೊಯ್ದು ಅತ್ಯಾಚಾರ ಎಸಗಿದ್ದಲ್ಲದೆ ಆ ಫೋಟೊಗಳನ್ನು ಆಕೆಯ ಮನೆಯವರಿಗೆ ಮತ್ತು ಸ್ನೇಹಿತರ ಮೊಬೈಲ್‌ಗೆ ಕಳುಹಿಸಿ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಿದ್ದಾನೆ. ಈ ಫೋಟೊಗಳನ್ನು ಅಳಿಸಿ ಹಾಕಬೇಕಿದ್ದರೆ 1.50 ಲಕ್ಷ ರೂಪಾಯಿ ನೀಡಬೇಕು ಎಂದು ಬೇಡಿಕೆ ಇಟ್ಟಿದ್ದಾನೆ ಎಂದು ಪೊಲೀಸ್ ದೂರಿನಲ್ಲಿ ತಿಳಿಸಲಾಗಿದೆ. ಈ ಬಗ್ಗೆ ವಿದ್ಯಾರ್ಥಿನಿಯು ಪೊಲೀಸರಿಗೆ ದೂರು ನೀಡಿದ ಕಾರಣ ಕಾರ್ಯಾಚರಣೆ ನಡೆಸಿದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಸಾಲ ಕೇಳಲು ಬಂದು ಚಾಕು ತೋರಿಸಿದ!

ಸಾಲ ಕೇಳಲು ಬಂದಿದ್ದ ವ್ಯಕ್ತಿಯಿಂದ ಬ್ಯಾಂಕ್ ಮ್ಯಾನೇಜರ್‌ಗೆ ಜೀವ ಬೆದರಿಕೆ ಹಾಕಿರುವ ಆರೋಪ ಶಿವಮೊಗ್ಗ ತಾಲೂಕಿನ ಹೊಸಳ್ಳಿ ಶಾಖೆಯ ಯುನಿಯನ್ ಬ್ಯಾಂಕ್‌ನಲ್ಲಿ ನಡೆದಿದೆ. ಮ್ಯಾನೇಜರ್ ಒಬ್ಬರಿಗೆ ವ್ಯಕ್ತಿಯೋರ್ವ ಚಾಕು ತೋರಿಸಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಘಟನೆ ವರದಿಯಾಗಿದೆ. ಅಲ್ಲದೇ ಸಾಲ ನೀಡದಿದ್ದರೆ ಕೊಲೆ ಮಾಡುವುದಾಗಿ ಬೆದರಿಕೆ ಒಡ್ಡಿದ್ದಾನೆ ಎಂದು ಆರೋಪಿಸಲಾಗಿದೆ. ಆ.7ರಂದು ಮಧ್ಯಾಹ್ನ ವ್ಯಕ್ತಿಯೊಬ್ಬ ಬ್ಯಾಂಕಿಗೆ ಬಂದಿದ್ದು, ಹಸು ಸಾಲಕ್ಕೆ ಆಗ್ರಹಿಸಿದ್ದಾರೆ. ಅಲ್ಲದೆ ಬ್ಯಾಂಕ್ ಮ್ಯಾನೇಜರ್ ನಿರಂಜನ್‌ಗೆ ಚಾಕು ತೋರಿಸಿ, ಜೀವ ಬೆದರಿಕೆ ಒಡ್ಡಿದ್ದಾನೆ ಎಂದು ತಿಳಿದುಬಂದಿದೆ.
ಚಾಕು ತೋರಿಸಿದ ವ್ಯಕ್ತಿಯನ್ನು ಅದೇ ಮೊದಲು ನೋಡಿದ್ದು ಆತ ಯಾವುದೇ ಸಾಲಕ್ಕೆ ಬ್ಯಾಂಕಿನಲ್ಲಿ ಅರ್ಜಿ ಸಲ್ಲಿಸಿಲ್ಲ ಎಂದು ಮ್ಯಾನೇಜರ್ ದೂರಿನಲ್ಲಿ ಆರೋಪಿಸಿದ್ದಾರೆ. ರೇವು ನಾಯ್ಕ ಎಂಬಾತನ ವಿರುದ್ಧ ತುಂಗಾ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ : ಭೂತಾನ್ ಅಡಿಕೆ ಬಂದ್ರೂ ತೊಂದರೆ ಇಲ್ಲ- ಆರಗ ಜ್ಞಾನೇಂದ್ರ

[embedyt] https://www.youtube.com/watch?v=rTGqP21dgrM%5B/embedyt%5D

HOW TO APPLY : NEET-UG COUNSELLING 2023

Categories
ಬೆಂಗಳೂರು

ಕೆ.ಎಸ್.ಆರ್. ಟಿ. ಸಿಗೆ ಏಷ್ಯಾದ ಅತ್ಯುತ್ತಮ ಉದ್ಯೋಗದಾತ ಪ್ರಶಸ್ತಿ

ಕೆ.ಎಸ್.ಆರ್. ಟಿ. ಸಿಗೆ ಏಷ್ಯಾದ ಅತ್ಯುತ್ತಮ ಉದ್ಯೋಗದಾತ ಪ್ರಶಸ್ತಿ
– ಆ.17ರಂದು ಸಿಂಗಾಪೂರದಲ್ಲಿ ಪ್ರಶಸ್ತಿ ಪ್ರದಾನ
– ಶಕ್ತಿ ಯೋಜನೆಯಿಂದ ನಷ್ಟದಲ್ಲಿದ್ದ ಸಂಸ್ಥೆಗೆ ಶಕ್ತಿ?!

NAMMUR EXPRESS NEWS : ಬೆಂಗಳೂರು: ಕರ್ನಾಟಕದ ಹೆಮ್ಮೆಯ ಸರ್ಕಾರಿ ಸಾರಿಗೆ ಸಂಸ್ಥೆ ಕೆ.ಎಸ್.ಆರ್. ಟಿ. ಸಿಗೆ ಏಷ್ಯಾದ ಅತ್ಯುತ್ತಮ ಉದ್ಯೋಗದಾತ ಬ್ರಾಂಡ್ ಪ್ರಶಸ್ತಿ ಲಭಿಸಿದೆ. ಕೆ.ಎಸ್.ಆರ್. ಟಿ. ಸಿಯು 2023ನೇ ಸಾಲಿನ ಏಷ್ಯಾದ ಅತ್ಯುತ್ತಮ ಉದ್ಯೋಗದಾತ ಬ್ರಾಂಡ್ ಪ್ರಶಸ್ತಿಗೆ ಮಾನವ ಸಂಪನ್ಮೂಲ ಉಪಕ್ರಮಗಳ ಅನುಷ್ಠಾನ ವರ್ಗದಲ್ಲಿ ಆಯ್ಕೆಯಾಗಿದೆ. ಮಂಗಳವಾರ 14ನೇ ಆವೃತ್ತಿಯ 18ನೇ ಉದ್ಯೋಗದಾತ ಬ್ರಾಂಡಿಂಗ್ ಪ್ರಶಸ್ತಿಯನ್ನು ಪ್ರಕಟಿಸಲಾಗಿದ್ದು, ನಿಗಮವು ಈ ಪ್ರಶಸ್ತಿಗೆ ಆಯ್ಕೆಯಾಗಿ ರುತ್ತದೆ. ಪ್ರಶಸ್ತಿ ಪ್ರದಾನ ಸಮಾರಂಭವು ಆ.17ರಂದು ಸಿಂಗಾಪೂರ್ ನಲ್ಲಿ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.

2023ನೇ ಸಾಲಿನ “ಏಷ್ಯಾದ ಅತ್ಯುತ್ತಮ ಉದ್ಯೋಗದಾತ ಬ್ಯಾಂಡ್‌’ಗೆ ಕೆಎಸ್‌ಆರ್‌ಟಿಸಿ ಆಯ್ಕೆಯಾಗಿದೆ. ಬಿಜೆಪಿ ಅವಧಿಯಲ್ಲಿ ನಷ್ಟದ ಹಾದಿಯಲ್ಲಿದ್ದ ಕೆ.ಎಸ್.ಆರ್. ಟಿ. ಸಿಗೆ ನಮ್ಮ ಸರ್ಕಾರ ಶಕ್ತಿ ಯೋಜನೆಯ ಮೂಲಕ ಚೈತನ್ಯ ತುಂಬಿದೆ. ಈ ಹಿಂದೆ ನಮ್ಮಸರ್ಕಾರದ ಅವಧಿಯಲ್ಲಿ ರಾಜ್ಯದ ಸಾರಿಗೆ ಸಂಸ್ಥೆಗೆ ಹಲವು ರಾಷ್ಟ್ರೀಯ ಅಂತರ್ರಾಷ್ಟ್ರೀಯ ಪ್ರಶಸ್ತಿಗಳು ಲಭಿಸಿದ್ದವು, ಈಗ ಮತ್ತೊಮ್ಮೆ ಸಚಿವ ರಾಮಲಿಂಗಾ ರೆಡ್ಡಿ ಅವರ ಸಾರಥ್ಯದಲ್ಲಿ ಸಾರಿಗೆ ಇಲಾಖೆ ತನ್ನ ವೈಭವದ ದಿನಗಳನ್ನು ಮರಳಿ ಪಡೆಯುತ್ತಿದೆ. ‘ಹಳೆಯ ಬಸ್ಸುಗಳ ನವೀಕರಣ, ಹೊಸ ಬಸ್ ಗಳ ಖರೀದಿ, 13 ಸಾವಿರ ಸಿಬ್ಬಂದಿ ನೇಮಕದಂತಹ ನಿರ್ಧಾರಗಳಿಂದ ಮುಂದಿನ ದಿನಗಳಲ್ಲಿ ರಾಜ್ಯದ ಸಾರಿಗೆ ಇಲಾಖೆ ದೇಶಕ್ಕೆ ಮಾದರಿಯಾಗಿ ಹೊರಹೊಮ್ಮುವುದು ನಿಶ್ಚಿತ ಎಂದು ಕಾಂಗ್ರೆಸ್ ಟ್ವಿಟ್ ಮಾಡಿದೆ.

ಇದನ್ನೂ ಓದಿ : ಭೂತಾನ್ ಅಡಿಕೆ ಬಂದ್ರೂ ತೊಂದರೆ ಇಲ್ಲ- ಆರಗ ಜ್ಞಾನೇಂದ್ರ

[embedyt] https://www.youtube.com/watch?v=rTGqP21dgrM%5B/embedyt%5D

HOW TO APPLY : NEET-UG COUNSELLING 2023

Categories
Uncategorized

ಪ್ರತಿ ಪಕ್ಷಗಳಿಗೆ ನನ್ನ ಮೇಲೆ ಅನುಮಾನ ಜಾಸ್ತಿ : ಯು. ಟಿ. ಖಾದರ್

ಪ್ರತಿ ಪಕ್ಷಗಳಿಗೆ ನನ್ನ ಮೇಲೆ ಅನುಮಾನ ಜಾಸ್ತಿ : ಯು. ಟಿ. ಖಾದರ್
– ಸಿಂದಗಿಯಲ್ಲಿ ನಡೆದ ಸನ್ಮಾನ ಸಮಾರಂಭದಲ್ಲಿ ಹೇಳಿಕೆ 
– ತಾಲೂಕು ಶಿಕ್ಷಣ ಪ್ರಸಾರಕ ಮಂಡಳಿ ವತಿಯಿಂದ ವಿಧಾನ ಸಭಾಧ್ಯಕ್ಷ ಯು. ಟಿ.ಕೆ ಗೆ ಸನ್ಮಾನ
NAMMUR EXPRESS SINDAGI : ನಾನು ಪ್ರತಿ ಪಕ್ಷಗಳ ಮಿತ್ರ ವಿಧಾನ ಸಭೆಯಲ್ಲಿ ಎರಡೂ ಪಕ್ಷಗಳಿಗೆ ಸಮಾನ ಅವಕಾಶ ಕೊಟ್ಟು ನನ್ನ ಹುದ್ದೆಯ ಜವಾಬ್ದಾರಿಯನ್ನು ನಿರ್ವಹಿಸಿರುವೆ ಎಂದು ವಿಧಾನಸಭೆಯ ಸಭಾಧ್ಯಕ್ಷ ಯು.ಟಿ.ಖಾದರ್ ಹೇಳಿದರು.  ಪಟ್ಟಣದ ತಾಲೂಕು ಶಿಕ್ಷಣ ಪ್ರಸಾರಕ ಮಂಡಳಿ ವತಿಯಂದ ಹೆಚ್.ಜಿ.ಪದವಿ ಪೂರ್ವ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಸನ್ಮಾನ ಸಮಾರಂಭದಲ್ಲಿ ಮಾತನಾಡಿದ ಅವರು ಪ್ರತಿ ಪಕ್ಷಗಳು ಆಡಳಿತ ಪಕ್ಷದ ಮೇಲೆ ವಿರೋಧ ಮಾಡುವದರ ಜೊತೆಗೆ ನನ್ನ ಮೇಲೆಯೂ ಆರೋಪ ಹೋರಿಸುತ್ತಾರೆ. ನನ್ನ ಮೇಲೆ ಪ್ರತಿ ಪಕ್ಷಗಳಿಗೆ ಅನುಮಾನ ಜಾಸ್ತಿ ಎಂದು ಹೇಳಿದರು.
ಸಂವಿಧಾನ ಗಟ್ಟಿಯಾದರೆ ಭಾರತ ಗಟ್ಟಿಯಾಗುತ್ತದೆ. ನಮ್ಮ ದೇಶ ವಿದೇಶಗಳಿಗಿಂತ ಭಿನ್ನ ನಮ್ಮಲ್ಲಿ ಸಂವಿಧಾನವು ವಾಸ್ತವತೆಯ ಆಶಯವಾಗಿದೆ. ಸಹೋದರತ್ವದ ಮುಖೇನ ಸಂವಿಧಾನದ ಉಳಿಸಬೇಕಾಗಿದೆ. ನಮ್ಮಲ್ಲಿರುವ ಭಾತೃತ್ವದ ಮೂಲಕ ಭಾರತ ಕನಸನ್ನು ನನಸು ಮಾಡಿ ವಿಶ್ವಕ್ಕೆ ಮಾದರಿ ದೇಶವನ್ನು ಕಟ್ಟುವ ನಿಟ್ಟಿನಲ್ಲಿ ನಾವುಗಳು ಕಾರ್ಯ ನಿರ್ವಹಿಸಬೇಕಿದೆ ಎಂದರು.  ಶಾಸಕ, ತಾಶಿಪ್ರ ಮಂಡಳಿ ಅಧ್ಯಕ್ಷ  ಅಶೋಕ ಮನಗೂಳಿ ಮಾತನಾಡಿದರು. ಸಭಾಧ್ಯಕ್ಷ  ಯು.ಟಿ.ಖಾದರ್ ಹಾಗೂ ಹೆಲ್ತ್ಕೇರ್ ಎಕ್ಸಲೆನ್ಸ್-೨೦೨೩ರ ಗೌರವಕ್ಕೆ ಪಾತ್ರರಾದ ವೈದ್ಯ ಡಾ.ಶಾಂತವೀರ ಮನಗೂಳಿ ಅವರನ್ನು ಸಂಸ್ಥೆಯ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಮುಖ್ಯ ಅತಿಥಿಗಳಾಗಿ ಜಿಲ್ಲಾಧಿಕಾರಿ ಟಿ.ಭೂಬಾಲನ್ ಮಾತನಾಡಿದರು. ವೇದಿಕೆಯಲ್ಲಿ ಜಿಪಂ ಸಿಇಒ ರಾಹುಲ್ ಶಿಂಧೆ ಸಂಸ್ಥೆಯ ನಿರ್ದೇಶಕ ಶಿವಪ್ಪಗೌಡ ಬಿರಾದಾರ, ಅಂಜುಮನ್ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಎಸ್.ಎಂ.ಪಾಟೀಲ ಇದ್ದರು.

ಇದನ್ನೂ ಓದಿ : ಭೂತಾನ್ ಅಡಿಕೆ ಬಂದ್ರೂ ತೊಂದರೆ ಇಲ್ಲ- ಆರಗ ಜ್ಞಾನೇಂದ್ರ

[embedyt] https://www.youtube.com/watch?v=rTGqP21dgrM%5B/embedyt%5D

HOW TO APPLY : NEET-UG COUNSELLING 2023