Categories
ತೀರ್ಥಹಳ್ಳಿ

ಆಗುಂಬೆ ಗ್ರಾಮ ಪಂಚಾಯತಲ್ಲಿ ಕಮಲದ ನಗೆ!

ಆಗುಂಬೆ ಗ್ರಾಮ ಪಂಚಾಯತಲ್ಲಿ ಕಮಲದ ನಗೆ!
– ನೂತನ ಅಧ್ಯಕ್ಷರಾಗಿ ಜಯಪ್ರಕಾಶ್ ದೋಣಿಹಕ್ಲು, ಉಪಾಧ್ಯಕ್ಷರಾಗಿ ಸರಸ್ವತಿ ಕೃಷ್ಣ: ಪ್ರಮುಖರ ಅಭಿನಂದನೆ

NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ತಾಲೂಕು ಆಗುಂಬೆ ಗ್ರಾಮ ಪಂಚಾಯತ್ ನೂತನ ಅಧ್ಯಕ್ಷರಾಗಿ ಬಿಜೆಪಿ ಬೆಂಬಲಿತ ಜಯಪ್ರಕಾಶ್ ದೋಣಿಹಕ್ಲು ಹಾಗೂ ಉಪಾಧ್ಯಕ್ಷರಾಗಿ ಸರಸ್ವತಿ ಕೃಷ್ಣ ಆಯ್ಕೆಯಾಗಿದ್ದಾರೆ. ಮಂಗಳವಾರ ನಡೆದ ಚುನಾವಣೆಯಲ್ಲಿ ಈ ಆಯ್ಕೆ ನಡೆದಿದ್ದು ಈ ವೇಳೆ ಬಿಜೆಪಿ ಯುವ ನಾಯಕ ಹಸಿರುಮನೆ ನಂದನ್, ಮಾಜಿ ತಾಲೂಕು ಪಂಚಾಯತ್ ಸದಸ್ಯ ಹೊಸಹಳ್ಳಿ ಸುಧಾಕರ್, ಪ್ರಮುಖರಾದ ವಾಟೆಹಳ್ಳ ರವಿ, ಚಕ್ಕೂಡಬೈಲು ರಾಘವೇಂದ್ರ, ಸಂದೀಪ್ ಇತರರು ಇದ್ದರು.

ಇದನ್ನೂ ಓದಿ : ಅಡಿಕೆ ಮಾರುಕಟ್ಟೆ: ಎಷ್ಟಿದೆ ದರ?

HOW TO APPLY : NEET-UG COUNSELLING 2023

Categories
ಶಿಕ್ಷಣ

ಎಸ್ಸೆಸ್ಸೆಲ್ಸಿ ಪರೀಕ್ಷೆ ಈ ವರ್ಷದಿಂದ ಫುಲ್ ಸ್ಟ್ರಿಕ್ಟ್!

ಎಸ್ಸೆಸ್ಸೆಲ್ಸಿ ಪರೀಕ್ಷೆ ಈ ವರ್ಷದಿಂದ ಫುಲ್ ಸ್ಟ್ರಿಕ್ಟ್!
– ಪರೀಕ್ಷಾ ಅಕ್ರಮ ತಡೆಗಟ್ಟಲು ಮುಂದಾದ ಶಿಕ್ಷಣ ಇಲಾಖೆ
– ಕೆಲವು ಕಠಿಣ ನಿಯಮ: ಏನಿದು ಹೊಸ ನಿಯಮ?

NAMMUR EXPRESS NEWS
ಬೆಂಗಳೂರು: ರಾಜ್ಯದಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷಾ ಮಾರ್ಗಸೂಚಿ ಬದಲಾವಣೆಗಳೊಂದಿಗೆ ಪರೀಕ್ಷಾ ಅಕ್ರಮಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಶಾಲಾ ಶಿಕ್ಷಣ ಇಲಾಖೆ ಒಂದಷ್ಟು ಹೊಸ ನಿಯಮಗಳನ್ನು ಜಾರಿಗೊಳಿಸಲು ಮುಂದಾಗಿದೆ.
ಇದರಿಂದ ಪರೀಕ್ಷಾ ಪಾವಿತ್ರ್ಯತೆ ಉಳಿಯಲಿದೆ ಎಂಬುದು ಒಂದಡೆಯಾದರೆ, ಇನ್ನೊಂದೆಡೆ ಪೊಲೀಸರನ್ನಿಟ್ಟು ಪರೀಕ್ಷೆ ನಡೆಸುವುದು, ಬಿಗಿ ಬಂದೋಬಸ್ತ್ ಹತ್ತಾರು ನಿಯಮಗಳನ್ನು ಹೇರಿ ಪರೀಕ್ಷೆ ನಡೆಸಲು ಮುಂದಾಗಿರುವ ಕ್ರಮಕ್ಕೆ ಸಾಕಷ್ಟು ವಿರೋಧ ವ್ಯಕ್ತವಾಗುತ್ತಿದೆ.

ಬದಲಾವಣೆ ಏಕೆ ?

ಗ್ರಾಮೀಣ ಭಾಗದಲ್ಲಿ ನಕಲು, ಉತ್ತರ ಕರ್ನಾಟಕದ ಕೆಲವೆಡೆ ಸಾಮೂಹಿಕ ನಕಲು ಅಕ್ರಮ ಜತೆಗೆ, ಶಿಕ್ಷಕರೇ ಉತ್ತರಗಳನ್ನು ಹೇಳಿ ಕೊಡುತ್ತಿದ್ದಾರೆಂಬ ಆರೋಪ ಇದೆ. ಇದರಿಂದಾಗಿ ವಿದ್ಯಾರ್ಥಿಗಳಿಗೆ ಅನ್ಯಾಯವಾಗುತ್ತಿದ್ದು, ಫಲಿತಾಂಶವು ವರ್ಷದಿಂದ ವರ್ಷಕ್ಕೆ ಬದಲಾವಣೆಯಾಗುತ್ತಿದೆ. ಕಾಲೇಜು ಶಿಕ್ಷಣ ಇಲಾಖೆಗೂ ಇದರಿಂದ ಸಮಸ್ಯೆಯಾಗುತ್ತಿದೆ ಎಂಬೆಲ್ಲ ಕಾರಣಕ್ಕೆ ಪರೀಕ್ಷೆಯ ಕಟ್ಟುಪಾಡುಗಳನ್ನು ಬದಲಿಸಲು ಶಾಲಾ ಶಿಕ್ಷಣ ಇಲಾಖೆ ಮುಂದಾಗಿದೆ. ಎಸ್ಸೆಸ್ಸೆಲ್ಸಿ ಪರೀಕ್ಷೆ ನಕಲು ಸಂಬಂಧ ಈಗಾಗಲೇ 38 ಶಿಕ್ಷಕರು ಅಮಾನತುಗೊಂಡಿದ್ದಾರೆ. ವಿಜಯಪುರ, ಯಾದಗಿರಿ, ಬೆಳಗಾವಿ, ಬೀದರ್, ಚಿಕ್ಕೋಡಿ ಜಿಲ್ಲೆಗಳಲ್ಲಿ ಅತೀ ಹೆಚ್ಚಿನ ಪ್ರಮಾಣದಲ್ಲಿ ನಕಲು ನಡೆಯುತ್ತಿದೆ ಎಂಬೆಲ್ಲಅಂಶ ಇಲಾಖೆಯ ಸಭೆಯಲ್ಲಿ ಬಹಿರಂಗೊಂಡಿವೆ.

ಏನೇನು ಹೊಸ ನಿಯಮ?

ಕ್ಷೇತ್ರ ಶಿಕ್ಷಣಾಧಿಕಾರಿಗಳ ಹಂತದಲ್ಲಿ13, ಶಾಲೆ ಮುಖ್ಯೋಪಾಧ್ಯಯರ ಹಂತದಲ್ಲಿ 4 ಹಾಗೂ ಡಯಟ್ ಹಂತದಲ್ಲಿ2 ನಿಯಮ ಜಾರಿಗೆ ಶಿಕ್ಷಣ ಇಲಾಖೆ ಮುಂದಾಗಿದೆ. ಇದಕ್ಕಾಗಿ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿಇತ್ತಿಚೆಗೆ ಸಭೆಯು ನಡೆದಿದೆ. ಮುಂದಿನ ವರ್ಷದಿಂದ ಜಾರಿಗೆ ಬರುವಂತೆ (23-24ನೇ ಸಾಲಿಗೆ) ರಾಜ್ಯದಲ್ಲಿನಡೆಯುವ ಎಸ್ಸೆಸ್ಸೆಲ್ಸಿ ಪರೀಕ್ಷಾ ಕೇಂದ್ರಗಳನ್ನು ನೆಲಮಹಡಿಯಿಂದ ಮೊದಲನೆ ಮಹಡಿಗೆ ಸ್ಥಳಾಂತರ ಮಾಡುವುದು, ವಿದ್ಯಾರ್ಥಿಗಳ ಪೋಷಕರು ಪರೀಕ್ಷೆಗೆ ಸಂಬಂಧಿಸಿದ ಯಾವುದೇ ಕೆಲಸದಲ್ಲಿ ಭಾಗಿಯಾಗದಂತೆ ನೋಡಿಕೊಳ್ಳುವುದು, ಮಾರ್ಗದರ್ಶನಕ್ಕಾಗಿ ತಾಲೂಕು ಹಂತದಲ್ಲಿ ಸಹಾಯವಾಣಿ ತೆರೆಯುವುದು, ಶಿಕ್ಷಕರ ಬದಲಿಗೆ ಪಿಡಿಒಗಳನ್ನು ಪರೀಕ್ಷಾ ಕೇಂದ್ರಗಳ ಸ್ಥಾನಿಕ ಜಾಗೃತ ದಳದ ಅಧಿಕಾರಿಗಳನ್ನಾಗಿ ನೇಮಿಸುವುದು, ಪೊಲೀಸ್ ಇಲಾಖೆಯ ಸಿಬ್ಬಂದಿಗಳು ಮಪ್ತಿಯಲ್ಲಿ ಪರೀಕ್ಷೆಯ ವಿಡಿಯೋ ರೆರ್ಕಾಡ್ ಮಾಡುವುದು, ಪರೀಕ್ಷೆ ದಿನಗಳಂದು ಹೈಸ್ಕೂಲ್ ಶಿಕ್ಷಕರನ್ನು ಡೆಯಟ್ ಹಂತದಲ್ಲಿ ತರಬೇತಿಗೆ ನಿಯೋಜಿಸಿ, ಪ್ರಾಥಮಿಕ ಶಾಲಾ ಶಿಕ್ಷಕರನ್ನು ಕೊಠಡಿ ಮೇಲ್ವಿಚಾರಕನಾಗಿ ನೇಮಿಸುವುದು, ಪರೀಕ್ಷಾ ಕೇಂದ್ರಗಳ ಪ್ರತಿ ಕೊಠಡಿಯಲ್ಲಿನ ಸಿಸಿ ಟಿವಿ ಮತ್ತು ಡಿವಿಆರ್‌ಗಳನ್ನು ಡಯಟ್ ಅಧಿಕಾರಿಗಳು ಪರೀಶಿಲಿಸಬೇಕು. ಪರೀಕ್ಷಾ ಬಂಡಲ್‌ಗಳನ್ನು ತೆರೆಯುವುದು, ಕೊನೆಯಲ್ಲಿಸೀಲ್ ಮಾಡುವುದನ್ನು ವೆಬ್ ಕಾಸ್ಟಿಂಗ್ ಮಾಡುವುದು ಸೇರಿ ಅನೇಕ ಹೊಸ ನಿಯಮ ಬರಲಿದೆ.

ಮಕ್ಕಳನ್ನೇ ಕಳ್ಳರಂತೆ ನೋಡುವುದು ಸರಿಯೇ?

ಎಂಬಿಬಿಎಸ್, ಎಂಜಿನಿಯರಿಂಗ್ ಪರೀಕ್ಷೆಗಳನ್ನೆ ಆಯಾ ಕಾಲೇಜು, ಆಯಾ ಬೋಧಕರ ನೇತೃತ್ವದಲ್ಲೇ ನಡೆಸಲಾಗುತ್ತದೆ. ಹೀಗಿರುವಾಗ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಏಕೆ ಇಷ್ಟೊಂದು ನಿಯಮ. ಸರಕಾರದ ದಾಖಲೆಗಳಿಗೆ, ಕ್ಲರಿಕಲ್ ಪೋಸ್ಟ್‌ಗಳಿಗೆ ಏಳನೇ ತರಗತಿಯೇ ಸಾಕು. ಇನ್ನು ಪೊಲೀಸು, ಎಸ್‌ಡಿಎ ಕೆಲಸಕ್ಕೆ ದ್ವಿತಿಯ ಪಿಯುಸಿ ಪಾಸಾಗಿದ್ದರೆ ಸಾಕು. ಎಸ್ಸೆಸ್ಸೆಲ್ಸಿ ಪರೀಕ್ಷೆ ಯಾವ ಕೆಲಸಕ್ಕೂ ಮಾನದಂಡವೇ ಅಲ್ಲ. ಹೀಗಿರುವಾಗ ವಿದ್ಯಾರ್ಥಿಗಳಿಗೆ ಭಯ ಹುಟ್ಟಿಸಿ ಪರೀಕ್ಷೆ ನಡೆಸುವ ಉದ್ದೇಶವಾದರೂ ಏನು ಎಂಬುದು ಕೆಲವರ ವಾದ. ಇದು ಶಿಕ್ಷಣ ನೀತಿಗಳಿಗೆ ವಿರುದ್ಧವಾಗಿದೆ. ಶಿಕ್ಷಣ ಕಲಿಕಾ ಕೇಂದ್ರಿತವಾಗಿರಬೇಕು. ಆದರೆ, ಇದು ಪರೀಕ್ಷಾ ಕೇಂದ್ರಿತವಾಗಿದೆ. ಮಕ್ಕಳನ್ನು ಕಳ್ಳರ ರೀತಿ ನೋಡುವಂತಾಗಿದೆ. ಮೊದಲು ಖಾಲಿ ಇರುವ ಶಿಕ್ಷಕರ ನೇಮಕ, ಕುಸಿದು ಬೀಳುವ ಹಂತದಲ್ಲಿನ ಕಟ್ಟಡಗಳನ್ನು ನವೀಕರಿಸಲಿ. ಸಿಸಿ ಕ್ಯಾಮರಾ ಖರೀದಿ ನೆಪದಲ್ಲಿಹಣ ಪೋಲು ಮಾಡಲಾಗುತ್ತಿದೆ. ಮಕ್ಕಳಿಗೆ ಪರೀಕ್ಷೆ ಬಗ್ಗೆ ಆತ್ಮಸ್ಥೆರ್ಯ ತುಂಬಲಿ ಎಂಬ ಅಸಮಾಧಾನ ವ್ಯಕ್ತವಾಗಿದೆ.

ಇದನ್ನೂ ಓದಿ : ಅಡಿಕೆ ಮಾರುಕಟ್ಟೆ: ಎಷ್ಟಿದೆ ದರ?

HOW TO APPLY : NEET-UG COUNSELLING 2023

Categories
ರಾಜ್ಯ

ರಾಷ್ಟ್ರಗೀತೆ ಹಾಡುವ ವೇಳೆ ಉಸಿರು ನಿಲ್ಲಿಸಿದ ಬಾಲಕಿ!

ರಾಷ್ಟ್ರಗೀತೆ ಹಾಡುವ ವೇಳೆ ಉಸಿರು ನಿಲ್ಲಿಸಿದ ಬಾಲಕಿ!
– ಹೃದಯಾಘಾತದಿಂದ ಎಸ್. ಎಸ್. ಎಲ್. ಸಿ ವಿದ್ಯಾರ್ಥಿನಿ ಸಾವು
– ಹಾಸನದಲ್ಲಿ ರೇವಣ್ಣ ಆತ್ಮೀಯನ ಮರ್ಡರ್
– ಶಿವಮೊಗ್ಗದಲ್ಲಿ ನಟ ಪ್ರಕಾಶ್ ರೈಗೆ ಟಕ್ಕರ್…!

NAMMUR EXPRESS NEWS
ಚಾಮರಾಜ ನಗರ: ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆಯ ಸಿಎಂಎಸ್ ಅನಾಥಾಲಯದಲ್ಲಿ ಶಾಲಾ ವಿದ್ಯಾರ್ಥಿನಿಯೋರ್ವಳು ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ಪಟ್ಟಣದ ಬುಧವಾರ ಬೆಳಗ್ಗೆ ನಡೆದಿದೆ.
ಪಟ್ಟಣದ ನಿರ್ಮಲ ಕಾನ್ವೆಂಟ್ ನಲ್ಲಿ ಎಸ್ಎಸ್ ಎಲ್ ಸಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿ ಫಿಲಿಶ್ (15) ಹೃದಯಾಘಾತದಿಂದ ಸಾವನ್ನಪ್ಪಿದ್ದಾಳೆ ಎಂದು ತಿಳಿದುಬಂದಿದೆ. ಶಾಲೆಯಲ್ಲಿ ರಾಷ್ಟ್ರಗೀತೆ ಹಾಡುವಾಗ ಪೆಲಿಸಾ ಏಕಾಏಕಿ ಕುಸಿದುಬಿದ್ದಿದ್ದಾಳೆ. ಕೂಡಲೇ ಶಾಲಾ ಸಿಬ್ಬಂದಿ ಆಕೆಯನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ವೈದ್ಯರು ತಪಾಸಣೆಗೆ ಒಳಪಡಿಸಿದ ವೇಳೆ ಹೃದಯಾಘಾತದಿಂದ ಮೃತಪಟ್ಟಿದ್ದಾಳೆ ಎಂದು ವೈದ್ಯರು ಧೃಡಪಡಿಸಿದ್ದಾರೆ. ಮೃತ ವಿದ್ಯಾರ್ಥಿನಿ ಫಿಲಿಶ್ ಮೂಲತಃ ಬೆಂಗಳೂರಿನ ನಿವಾಸಿಯಾಗಿದ್ದು, ತಂದೆ ಪ್ರಭು ಕಳೆದ ಐದಾರು ವರ್ಷಗಳಿಂದ ವ್ಯಾಸಂಗಕ್ಕಾಗಿ ಪಟ್ಟಣದ ಸಿಎಂಎಸ್ ಅನಾಥಾಲಯಕ್ಕೆ ತಂದು ಸೇರಿಸಿದ್ದರು.

ಹಾಸನದಲ್ಲಿ ಅತ್ಯಾಪ್ತನ ಮರ್ಡರ್

ಹಾಸನ ಗ್ರಾಮಾಂತರ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಹಾಡಹಗಲೇ ಗ್ರಾನೈಟ್ ಉದ್ಯಮಿಯೊಬ್ಬರ ಕೊಲೆಯಾಗಿದೆ.
ಕೊಲೆಯಾದ ವ್ಯಕ್ತಿ ಮಾಜಿ ಸಚಿವ ಎಚ್.ಡಿ ರೇವಣ್ಣ ಅತ್ಯಾಪ್ತ ಶ್ರೀರಾಮ ಮಾರ್ಬಲ್ಸ್ ಮಾಲೀಕ ಜೆಡಿಎಸ್ ಮುಖಂಡ ಕೃಷ್ಣಗೌಡ (55) ಎಂದು ಹೇಳಲಾಗುತ್ತಿದೆ. ಹೊರವಲಯದ ನಾಗತವಳ್ಳಿ ಗ್ರಾಮದ ಬಳಿ ಘಟನೆ ನಡೆದಿದ್ದು, ಇನ್ನೋವಾ ಕಾರಿನಲ್ಲಿ ಬಂದು ಕೊಲೆ ಮಾಡಿ ಹಂತಕರು ಎಸ್ಕೆಪ್ ಆಗಿದ್ದಾರೆ. ಗ್ರಾನೈಟ್ ಫ್ಯಾಕ್ಟರಿಯ ಎದುರೇ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ, ಪರಿಶೀಲನೆ ನಡೆಸಿದ್ದಾರೆ.
ಕೊಲೆಗೆ ಕಾರಣ ಇನ್ನೂ ತಿಳಿದುಬಂದಿಲ್ಲ. ಈ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ತನಿಖೆಯನ್ನು ಆರಂಭಿಸಿದ್ದಾರೆ ಎಂದು ತಿಳಿದುಬಂದಿದೆ.

ಭದ್ರಾವತಿಯಲ್ಲಿ ನಟ ಪ್ರಕಾಶ್ ರಾಜ್ ಅವರಿಗೆ ಟಕ್ಕರ್

ನಟ ಪ್ರಕಾಶ್ ರಾಜ್ ಭೇಟಿ ಕೊಟ್ಟಿದ್ದ ಕಾಲೇಜಿನಲ್ಲಿ ವಿದ್ಯಾರ್ಥಿಗಳು ಗೋಮೂತ್ರ, ನೀರು ಹಾಕಿ ಶುದ್ದೀಕರಣ ಮಾಡಿರುವುದು ಶಿವಮೊಗ್ಗ ಜಿಲ್ಲೆ ಭದ್ರಾವತಿಯಲ್ಲಿ ನಡೆದಿದೆ. ಕಾರ್ಯಕ್ರಮಕ್ಕೂ ಮುನ್ನಾ ನಟ ಪ್ರಕಾಶ್ ರಾಜ್ ಆಗಮನ ವಿರೋಧಿಸಿ ಪ್ರತಿಭಟನೆ ನಡೆಸಿದ್ದ ವಿದ್ಯಾರ್ಥಿಗಳು, ಬಳಿಕ ನಟ ಓಡಾಡಿದ್ದ ಜಾಗವನ್ನು ಗೋಮೂತ್ರ, ನೀರಿನ ಮೂಲಕ ಶುದ್ದೀಕರಣ ಮಾಡಿ ಆಕ್ರೋಶ ಹೊರಹಾಕಿದ್ದಾರೆ.

ಭದ್ರಾವತಿಯ ಸರ್ ಎಂ.ವಿ ಕಲಾ ಮತ್ತು ವಾಣಿಜ್ಯ ಕಾಲೇಜಿನಲ್ಲಿ ಮಂಗಳವಾರ ಪ್ರಗತಿಪರ ಸಂಘಟನೆಗಳ ಒಕ್ಕೂಟದಿಂದ ರಂಗಭೂಮಿ, ಸಿನಿಮಾ ಮತ್ತು ಸಮಾಜ ಎಂಬ ಸಂವಾದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದಲ್ಲಿ ಖ್ಯಾತ ಬಹುಭಾಷಾ ನಟ ಪ್ರಕಾಶ್ ರಾಜ್ ಭಾಗಿಯಾಗಿದ್ದರು. ಹೀಗಾಗಿ ನಟನ ಆಗಮನ ವಿರೋಧಿಸಿ ವಿದ್ಯಾರ್ಥಿಗಳು ಗೋ ಮೂತ್ರ, ನೀರು ಹಾಕಿ ಶುದ್ದೀಕರಣ ಮಾಡಿದ್ದಾರೆ

ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದರಿಂದ ಪೊಲೀಸರು ಪರಿಸ್ಥಿತಿ ತಿಳಿಗೊಳಿಸಿದರು. ನಂತರ ಪ್ರತಿಭಟನೆ ಮಾಡಿದ ವಿದ್ಯಾರ್ಥಿಗಳನ್ನು ಹೊರಗಿಟ್ಟು ಕಾರ್ಯಕ್ರಮ ಮಾಡಲಾಗಿದೆ. ಪ್ರತಿಭಟನೆ ನಡೆಸುತ್ತಿದ್ದ ವಿದ್ಯಾರ್ಥಿಗಳಿಗೆ ತಾಲೂಕು ಬಿಜೆಪಿ ಅಧ್ಯಕ್ಷ ಧರ್ಮಪ್ರಸಾದ್ ಸಾಥ್ ನೀಡಿದರು.

ಪ್ರಕಾಶ್ ರಾಜ್ ಏನಂದರು?

ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನಕಾರಿ ಪೋಸ್ಟ್ ಮಾಡುವವರನ್ನು ಪ್ರೀತಿಸಬೇಕು. ಭಿನ್ನಾಭಿಪ್ರಾಯಗಳು ಇರಬೇಕು, ಅದನ್ನು ನಾವು ಎದುರಿಸಲೇಬೇಕು. ಕಲಾವಿದನಾಗಿರುವುದು ಕೇವಲ ನನ್ನ ಪ್ರತಿಭೆಯಿಂದಲ್ಲ, ನನ್ನನ್ನು ಪ್ರೀತಿಸಿದ ಪ್ರೇಕ್ಷಕರು ಹಾಗೂ ನಿರ್ದೇಶಕರಿಂದ ನಾನು ಕಲಾವಿದನಾಗಿದ್ದೇನೆ. ನಾನು ಲೆಫ್ಟಿಸ್ಟ್, ರೈಟಿಸ್, ಸೆಂಟರಿಸ್ಟ್ ಅಲ್ಲ. ನಾನು ಕೇವಲ ಮನುಷ್ಯ ಎಂದು ನಟ ಪ್ರಕಾಶ್ ರಾಜ್ ತಿಳಿಸಿದರು. ಪತ್ರಿಕಾ ಸಂವಾದಲ್ಲಿ ಮಾತನಾಡಿದ ಅವರು, ಮಾನವ ಜೀವನ ತುಳಿಯುವ ಶಕ್ತಿಗಳ ವಿರುದ್ಧ ನಮ್ಮ ಹೋರಾಟ ಇದೆ. ಯಾವುದೇ ವಿಷಯದ ಬಗ್ಗೆ ಮಾತುಕತೆ, ಸಂವಾದ ಅಗತ್ಯವಿದೆ, ಜಗಳವಲ್ಲ. ಮನುಷ್ಯನ ಮೇಲಾದ ಗಾಯ ವಾಸಿಯಾಗುತ್ತದೆ, ಅದೇ ದೇಶ, ಸಮಾಜಕ್ಕೆ ಆದ ಗಾಯ ಹಾಗೆ ಬಿಟ್ಟರೆ ಹೆಚ್ಚುತ್ತದೆ ಎಂದರು.

ಇದನ್ನೂ ಓದಿ : ಅಡಿಕೆ ಮಾರುಕಟ್ಟೆ: ಎಷ್ಟಿದೆ ದರ?

HOW TO APPLY : NEET-UG COUNSELLING 2023

Categories
ತೀರ್ಥಹಳ್ಳಿ

ಕುಡುಮಲ್ಲಿಗೆ, ಆರಗ ಗ್ರಾಪಂ ಅಲ್ಲಿ ಬಿಜೆಪಿ ಅಧಿಕಾರ!

ಕುಡುಮಲ್ಲಿಗೆ, ಆರಗ ಗ್ರಾಪಂ ಅಲ್ಲಿ ಬಿಜೆಪಿ ಅಧಿಕಾರ!
– ಕುಡುಮಲ್ಲಿಗೆ ಗ್ರಾಪಂ ಅಧ್ಯಕ್ಷರಾಗಿ ಭೆಕ್ಷೆ ರಾಜೇಶ್, ಉಪಾಧ್ಯಕ್ಷರಾಗಿ ಮಮತಾ ಮೋಹನ್ ಆಯ್ಕೆ
– ಆರಗ ಗ್ರಾಪಂ ಅಧ್ಯಕ್ಷರಾಗಿ ಚಂದ್ರಶೇಖರ್, ಉಪಾಧ್ಯಕ್ಷರಾಗಿ ರೇವತಿ ಗಣೇಶ್

NAMMUR EXPRESS NEWS
ತೀರ್ಥಹಳ್ಳಿ: ಕುಡುಮಲ್ಲಿಗೆ ಗ್ರಾಮ ಪಂಚಾಯತ್ ನೂತನ ಅಧ್ಯಕ್ಷರಾಗಿ ಬಿಜೆಪಿ ಬೆಂಬಲಿತ ರಾಜೇಶ್ ಬೆಕ್ಷೆ ಹಾಗೂ ಉಪಾಧ್ಯಕ್ಷರಾಗಿ ಮಮತಾ ಮೋಹನ್ ಅವರು ಆಯ್ಕೆಯಾಗಿದ್ದಾರೆ. ಪ್ರಮುಖ ನಾಯಕರಾದ ರಾಘವೇಂದ್ರ ಬಾಳೆಬೈಲು, ಕವಿರಾಜ್ ಬೇಗುವಳ್ಳಿ, ಕುಕ್ಕೆ ಪ್ರಶಾಂತ್, ಅಂಜೂರ ಗೌಡ, ಗಬಡಿ ಪ್ರದೀಪ್ ಸೇರಿದಂತೆ ಸ್ಥಳೀಯ ನಾಯಕರು, ಪ್ರಮುಖರು ಇದ್ದರು.

ಆರಗದಲ್ಲಿ ಬಿಜೆಪಿ ಬೆಂಬಲಿತರಿಗೆ ಗೆಲುವು

ಆರಗ ಗ್ರಾಪಂ ಅಧ್ಯಕ್ಷರಾಗಿ ಚಂದ್ರಶೇಖರ್, ಉಪಾಧ್ಯಕ್ಷರಾಗಿ ರೇವತಿ ಗಣೇಶ್ ಆಯ್ಕೆಯಾಗಿದ್ದಾರೆ. ಬುಧವಾರ ನಡೆದ ಚುನಾವಣೆಯಲ್ಲಿ ಇಬ್ಬರೂ ಆಯ್ಕೆಯಾಗಿದ್ದಾರೆ. ತಾಲೂಕು ಪಂಚಾಯತ್ ಮಾಜಿ ಸದಸ್ಯ ಚಂದವಳ್ಳಿ ಸೋಮಶೇಖರ್, ಭಾರತಿ ಸುರೇಶ, ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಜಗದೀಶ್, ಬೀಸು ರಾಜಶೇಖರ್, ಪ್ರಮುಖರಾದ ತ್ರಿಮೂರ್ತಿ, ಉಮೇಶ್ ಸೇರಿದಂತೆ ಹಲವರು ಇದ್ದರು.

ಇದನ್ನೂ ಓದಿ : ಅಡಿಕೆ ಮಾರುಕಟ್ಟೆ: ಎಷ್ಟಿದೆ ದರ?

HOW TO APPLY : NEET-UG COUNSELLING 2023

Categories
ತೀರ್ಥಹಳ್ಳಿ

ಸೋಲಿಲ್ಲದ ಸರದಾರ ಬಂಡೆ ವೆಂಕಟೇಶ್ ಅವರಿಗೆ ಗ್ರಾಪಂ ಅಧ್ಯಕ್ಷಗಿರಿ!

ಸೋಲಿಲ್ಲದ ಸರದಾರ ಬಂಡೆ ವೆಂಕಟೇಶ್ ಅವರಿಗೆ ಗ್ರಾಪಂ ಅಧ್ಯಕ್ಷಗಿರಿ!
– ಮೇಲಿನ ಕುರುವಳ್ಳಿ ಗ್ರಾಮ ಪಂಚಾಯತ್ ನೂತನ ಅಧ್ಯಕ್ಷರಾಗಿ ಬಂಡೆ ವೆಂಕಟೇಶ್
– ಉಪಾಧ್ಯಕ್ಷರಾಗಿ ಯುವ ನಾಯಕಿ ಅನಿತಾ ಪ್ರವೀಣ್ ಆಯ್ಕೆ

NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿಯ ಪ್ರತಿಷ್ಠಿತ ಗ್ರಾಮ ಪಂಚಾಯತ್ ಒಂದಾಗಿರುವ ತೀರ್ಥಹಳ್ಳಿ ಪಟ್ಟಣಕ್ಕೆ ಹೊಂದಿಕೊಂಡಿರುವ ಮೇಲಿನ ಕುರುವಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷರಾಗಿ ಬಂಡೆ ವೆಂಕಟೇಶ್ ಆಯ್ಕೆಯಾಗಿದ್ದಾರೆ ಉಪಾಧ್ಯಕ್ಷರಾಗಿ ಯುವ ನಾಯಕಿ ಅನಿತಾ ಪ್ರವೀಣ್ ಆಯ್ಕೆ ಆಗಿದ್ದಾರೆ. 15 ಸದ್ಯಸರ ಬಲ ಹೊಂದಿರುವ ತಾಲ್ಲೂಕಿನ ಅತೀ ದೊಡ್ಡ ಗ್ರಾಮ ಪಂಚಾಯತ್ ಮೇಲಿನ ಕುರುವಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಧ್ಯಕ್ಷ ಸ್ಥಾನಕ್ಕೆ ಯು.ಡಿ.ವೆಂಕಟೇಶ್ ಸ್ಪರ್ಧೆ ಮಾಡಿದ್ದರು. ಬಿಜೆಪಿಯಿಂದ ಶೋಭಾ ದಿನೇಶ್ ಸ್ಪರ್ಧೆ ,
ವೆಂಕಟೇಶ್ ಅವರಿಗೆ ಕಾಂಗ್ರೆಸ್ 8 ಸದಸ್ಯರ ಜೊತೆ ಪಕ್ಷೇತರ ಸದಸ್ಯ ನಿಶ್ಚಲ್ ಜಾದೂಗಾರ್,ಹಾಗೇ ಬಿಜೆಪಿ ಬೆಂಬಲಿತ 3 ಸದ್ಯಸರು ಅವರು ಬೆಂಬಲಿಸಿದ್ದಾರೆ. ವೆಂಕಟೇಶ್ ಅವರು ಒಟ್ಟು 12 ಮತ ಪಡೆದಿದ್ದಾರೆ. ಉಪಾಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಬೆಂಬಲಿತ ಅನಿತಾ ಪ್ರವೀಣ್, ಬಿಜೆಪಿಯಿಂದ ಸುಧಾ ಕೃಷ್ಣಕುಮಾರ್ ಸ್ಪರ್ಧೆ ಮಾಡಿದ್ದು ಅನಿತಾ ಅವರಿಗೆ 9, ಸುಧಾ ಕೃಷ್ಣ ಕುಮಾರ್ ಅವರಿಗೆ 6 ಮತ ಬಂದಿದೆ.

ನೂತನ ಅಧ್ಯಕ್ಷರು, ಉಪಾಧ್ಯಕ್ಷರಿಗೆ ಅಭಿನಂದನೆ

ನೂತನ ಅಧ್ಯಕ್ಷರಾದ ಬಂಡೆ ವೆಂಕಟೇಶ್ ಹಾಗೂ ಉಪಾಧ್ಯಕ್ಷೆ ಅನಿತಾ ಪ್ರವೀಣ್ ಅವರಿಗೆ ಮಾಜಿ ಸಚಿವ ಕಿಮ್ಮನೆ ರತ್ನಾಕರ್, ಸಹಕಾರಿ ನಾಯಕ ಡಾ.ಆರ್.ಎಂ.ಮಂಜುನಾಥ ಗೌಡ ಸೇರಿದಂತೆ ಎಲ್ಲಾ ಕಾಂಗ್ರೆಸ್ ನಾಯಕರು, ಮುಖಂಡರು, ಜನತೆ ಅಭಿನಂದನೆ ಸಲ್ಲಿಸಿದ್ದಾರೆ.

ಸೋಲಿಲ್ಲದ ಸರದಾರ ಬಂಡೆ ವೆಂಕಟೇಶ್!

ಬಂಡೆ ವೆಂಕಟೇಶ್ ತೀರ್ಥಹಳ್ಳಿ ತಾಲೂಕಿನ ಪ್ರಬಲ ನಾಯಕ. ಎಲ್ಲಾ ಜಾತಿ, ಧರ್ಮ, ಪಕ್ಷದಲ್ಲೂ ತಮ್ಮದೇ ಬಳಗ ಹೊಂದಿರುವ ರಾಜಕಾರಣಿ. ಎಲ್ಲಾ ಕಡೆ ಗೆಲುವು ಸಾಧಿಸಿದ್ದು ಇದೀಗ ಗ್ರಾಮ ಪಂಚಾಯತ್ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

ಇದನ್ನೂ ಓದಿ : ಅಡಿಕೆ ಮಾರುಕಟ್ಟೆ: ಎಷ್ಟಿದೆ ದರ?

HOW TO APPLY : NEET-UG COUNSELLING 2023

Categories
ಕರಾವಳಿ

ಕರಾವಳಿ ಟಾಪ್ ನ್ಯೂಸ್ 09-08-2023

ಬೆಳ್ತಂಗಡಿ ಆಸ್ಪತ್ರೆಯಲ್ಲಿ ಮಗು ಸಾವು: ಆಕ್ರೋಶ
– ಕಾರ್ಕಳ: ನಾಲ್ವರು ದನಕಳ್ಳರು ಅರೆಸ್ಟ್
– ಬ್ರಹ್ಮಾವರ : ಅತ್ಯಾಚಾರ ಅಪರಾಧಿಗೆ 20 ವರ್ಷ ಜೈಲು
– ಕಾರ್ಕಳ:ಅಪಘಾತದಲ್ಲಿ ಆರೆಸ್ಸೆಸ್ ಕಾರ್ಯಕರ್ತ ನಿಧನ
– ಉಡುಪಿ: ತಾಯಿ- ಮಗಳು ನಾಪತ್ತೆ

NAMMUR EXPRESS NEWS
ಕಾರ್ಕಳ: ದನಗಳನ್ನು ಸ್ಕಾರ್ಪಿಯೊ ಕಾರಿನಲ್ಲಿ ಅಕ್ರಮವಾಗಿ ಸಾಗಿಸುವಾಗ ಸಿಕ್ಕಿಬಿದ್ದು, ವಾಹನ ಬಿಟ್ಟು ಪರಾರಿಯಾಗಿದ್ದ ಇಬ್ಬರು ಹಾಗೂ ಅಕ್ರಮ ದನ ಸಾಗಾಟಕ್ಕೆ ಸಹಕರಿಸಿದ್ದ ಇಬ್ಬರನ್ನು ಕಾರ್ಕಳ ಪೊಲೀಸರು ಬಂಧಿಸಿದ್ದಾರೆ. ಬಂಟ್ವಾಳ ಫರಂಗಿಪೇಟೆ ನಿವಾಸಿಗಳಾದ ಜಬ್ಬರ್ (24), ಹೈದರಾಲಿ (26) ಹಾಗೂ ಅವರಿಗೆ ದನ ಕಳ್ಳತನಕ್ಕೆ ಸಹಕರಿಸಿದ ಕಾರ್ಕಳ ಶಿರ್ಲಾಲು ಗ್ರಾಮದ ಪೈಯಂದೆ ದುಗ್ಗಿಬೆಟ್ಟು ಹೌಸ್‌ನ ಪ್ರಸಾದ್ ಪೂಜಾರಿ(23) ಮತ್ತು ಅಂಡಾರು ಗ್ರಾಮದ ಕುರುಂತಬೆಟ್ಟು ಹೌಸ್‌ನ ಜಗನ್ನಾಥ ಶೆಟ್ಟಿ (58) ಬಂಧಿತ ಆರೋಪಿಗಳು, ಕಾರ್ಕಳದ ಈ ಇಬ್ಬರು ದನ ಖರೀದಿಸಲು ಸಹಕರಿಸುವ ದಲ್ಲಾಳಿಗಳು ಎನ್ನಲಾಗಿದೆ. ಘಟನೆ ನಡೆದ 24 ತಾಸಿನೊಳಗೆ ಆರೋಪಿಗಳನ್ನು ಬಂಧಿಸಿದ ಕಾರ್ಕಳ ಪೊಲೀಸರು ಜನ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಅತ್ಯಾಚಾರ ಅಪರಾಧಿಗೆ 20 ವರ್ಷ ಜೈಲು

ಅಪ್ರಾಪ್ತ ವಯಸ್ಸಿನ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಅಪರಾಧಿಗೆ ಉಡುಪಿ ಪೋಕ್ಸ್‌ ನ್ಯಾಯಾಲಯ 20 ವರ್ಷಗಳ ಕಾರಾಗೃಹ ವಾಸದ ಕಠಿಣ ಶಿಕ್ಷೆ ವಿಧಿಸಿದೆ. ಬ್ರಹ್ಮಾವರ ಬಾಳಕುದ್ರು ನಿವಾಸಿ ಅಶೋಕ್ ಎ.(32) ಎಂಬಾತ ಶಿಕ್ಷೆಗೊಳಗಾದ ಅಪರಾಧಿ. ನಾಲ್ಕು ವರ್ಷದ ಹಿಂದೆ 15ರ ಹರೆಯದ ಶಾಲಾ ಬಾಲಕಿ ಜತೆ ಸ್ನೇಹ ಬೆಳೆಸಿದ ಅಪರಾಧಿ ಶಾಲೆಗೆ ಹೋಗುವಾಗ ಅಕೆಯನ್ನು ಕಾರಿಗೆ ಹತ್ತಿಸಿಕೊಂಡು ಪ್ರಕರಣದ ಇನ್ನೋರ್ವ ಆರೋಪಿಯಾಗಿದ್ದ ತನ್ನ ಸ್ನೇಹಿತನ ಮನೆಗೆ ಕರೆದುಕೊಂಡು ಹೋಗಿ ಅತ್ಯಾಚಾರ ಎಸಗಿದ್ದ. ಬಳಿಕ ಕಾರನಲ್ಲಿ ಆಕೆಯನ್ನು ಮನೆಗೆ ಬಿಟ್ಟು ಯಾರಿಗೂ ಹೇಳದಂತೆ ಬೆದರಿಕೆ ಹಾಕಿದ್ದ ಬಾಲಕಿ ಖಿನ್ನತೆಯಿಂದಿರುವುದನ್ನು ಕಂಡು ಮನೆಯವರು ವಿಚಾರಿಸಿದಾಗ ಪ್ರಕರಣ ಬೆಳಕಿಗೆ ಬಂದಿತ್ತು. ಮನೆಯವರು ನೀಡಿದ ದೂರಿನಂತೆ ಪ್ರಕರಣ ದಾಖಲಾಗಿ ಡಿವೈಎಸ್‌ಪಿ ಜೈಶಂಕರ್ ತನಿಖೆ ನಡೆಸಿದ್ದರು. ಅಪರಾಧಿಗೆ ಈಗಾಗಲೇ ಮದುವೆಯಾಗಿದ್ದರೂ ಹದಿಹರೆಯದ ಬಾಲಕಿಯ ಸ್ನೇಹ ಬೆಳೆಸಿ ಅತ್ಯಾಚಾರ ಎಸಗಿದ್ದ ಇದಕ್ಕೆ ಸಹಕರಿಸಿದ ಇನ್ನೋರ್ವ ಆರೋಪಿ ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ಖುಲಾಸೆಗೊಂಡಿದ್ದಾನೆ.

ಬೆಳ್ತಂಗಡಿ ಆಸ್ಪತ್ರೆಯಲ್ಲಿ ಮಗು ಸಾವು: ಆಕ್ರೋಶ

ಬೆಳ್ತಂಗಡಿ: ಬೆಳ್ತಂಗಡಿ ಸರ್ಕಾರಿ ಆಸ್ಪತ್ರೆಯಲ್ಲಿ ಡಾಕ್ಟರ್ ಇಲ್ಲದ ವೇಳೆ ನರ್ಸ್‌ ಇಂಜೆಕ್ಷನ್‌ ನೀಡಿದ ಬಳಿಕ ಮಗು ಸಾವನ್ನಪ್ಪಿದ ಪ್ರಕರಣ ಬೆಳ್ತಂಗಡಿ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದಿದೆ. ಧರ್ಮಸ್ಥಳ ಗ್ರಾಮದ ಮುಳಿಕಾ‌ ನಿವಾಸಿ ಬಾಲಕೃಷ್ಣ ಮತ್ತು ಸವಿತಾ ದಂಪತಿಯ 1.5 ತಿಂಗಳ ಹೆಣ್ಣು ಮಗು ಅಂಶಿಕಾಳನ್ನು ಕಫ ಸಮಸ್ಯೆಯ ಕಾರಣಕ್ಕೆ ಬೆಳ್ತಂಗಡಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ವೇಳೆ ಡಾಕ್ಟರ್ ಇಲ್ಲದ ಕಾರಣ ನರ್ಸ್ ಇಂಜೆಕ್ಷನ್ ನೀಡಿದ್ದು, ಬಳಿಕ ಮಗು ಸಾವನ್ನಪ್ಪಿದೆ ಎಂದು ಮನೆಮಂದಿ ಆರೋಪಿಸಿದ್ದಾರೆ. ಘಟನೆಯ ಮಾಹಿತಿ ಅರಿತ ಮಾಜಿ ಶಾಸಕ ವಸಂತ ಬಂಗೇರ ಆಸ್ಪತ್ರೆಗೆ ದೌಡಾಯಿಸಿ ಆಸ್ಪತ್ರೆಯ ಸಿಬ್ಬಂದಿಗೆ ತರಾಟೆಗೆ ತೆಗೆದುಕೊಂಡಿದ್ದು, ಮಗುವಿನ ತಂದೆಗೆ ಬೆಳ್ತಂಗಡಿ ಪೊಲೀಸ್ ಠಾಣೆಗೆ ದೂರು ನೀಡಿದಸಲಹೆ ಸೂಚನೆ ನೀಡಿದ್ದಾರೆ.

ಕಾರ್ಕಳ:ಅಪಘಾತದಲ್ಲಿ ಆರೆಸ್ಸೆಸ್ ಕಾರ್ಯಕರ್ತ ನಿಧನ

ನಿಟ್ಟೆ ಗರಡಿ ಬಳಿ ಆ.7ರಂದು ಸಂಭವಿಸಿದ ಕಾರು ಮತ್ತು ಬೈಕ್ ನಡುವಿನ ಅಪಘಾತದಲ್ಲಿ ಗಾಯಗೊಂಡಿದ್ದ ನಿಟ್ಟೆ ಗ್ರಾಮದ ನಿವಾಸಿ ಮಂಜುನಾಥ್ ಶೆಟ್ಟಿ ಚಿಕಿತ್ಸೆ ಫಲಿಸದೆ ಮಣಿಪಾಲದ ಖಾಸಗಿ ಆಸ್ಪತ್ರೆಯಲ್ಲಿ ಆ.8ರಂದು ನಿಧನ ಹೊಂದಿದ್ದಾರೆ.ನಿಟ್ಟೆ ವಿದ್ಯಾಸಂಸ್ಥೆಯಲ್ಲಿ ಕೆಲಸಕ್ಕಿದ್ದ ಅವರು ಆರೆಸ್ಸೆಸ್ ಸ್ವಯಂ ಸೇವಕರಾಗಿ ಸಂಘದ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದರು.ಸಾಮಾಜಿಕ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಮೃತರು ಪತ್ನಿ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.ಮಂಜುನಾಥ್ ಶೆಟ್ಟಿ ನಿಧನಕ್ಕೆ ಮಾಜಿ ಸಚಿವ, ಕಾರ್ಕಳ ಶಾಸಕ ಸುನೀಲ್ ಕುಮಾರ್ ಸಂತಾಪ ವ್ಯಕ್ತಪಡಿಸಿದ್ದಾರೆ.

ಉಡುಪಿ: ತಾಯಿ- ಮಗಳು ನಾಪತ್ತೆ

ಉಡುಪಿ ನಗರದ ನಯಂಪಳ್ಳಿ ನಿವಾಸಿ ಅಕ್ಷತಾ (32) ಎಂಬ ಮಹಿಳೆಯು ತನ್ನ ಮಗಳಾದ ಖುಷಿ (9) ಯೊಂದಿಗೆ ಏಪ್ರಿಲ್ 30 ರಂದು ಮನೆಯಿಂದ ಹೊರಗೆ ಹೋದವರು ವಾಪಾಸು ಬಾರದೇ ನಾಪತ್ತೆಯಾಗಿರುತ್ತಾರೆ. ಅಕ್ಷತಾ 5 ಅಡಿ 4 ಇಂಚು ಎತ್ತರ, ಸಾಧಾರಣ ಶರೀರ, ಗೋಧಿ ಮೈಬಣ್ಣ, ದುಂಡು ಮುಖ ಹೊಂದಿದ್ದು, ಕನ್ನಡ, ಹಿಂದಿ ಹಾಗೂ ತುಳು ಭಾಷೆ ಮಾತನಾಡುತ್ತಾರೆ. ಖುಷಿ 4 ಅಡಿ 2 ಇಂಚು ಎತ್ತರ, ಸಾಧಾರಣ ಶರೀರ, ಗೋಧಿ ಮೈಬಣ್ಣ, ದುಂಡು ಮುಖ ಹೊಂದಿದ್ದು, ಕನ್ನಡ, ಇಂಗ್ಲೀಷ್ ಹಾಗೂ ತುಳು ಭಾಷೆ ಮಾತನಾಡುತ್ತಾರೆ. ಇವರ ಬಗ್ಗೆ ಮಾಹಿತಿ ದೊರೆತಲ್ಲಿ ಉಡುಪಿ ನಗರ ಪೊಲೀಸ್ ಠಾಣಾಧಿಕಾರಿಯನ್ನು ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ಇದನ್ನೂ ಓದಿ : ಅಡಿಕೆ ಮಾರುಕಟ್ಟೆ: ಎಷ್ಟಿದೆ ದರ?

HOW TO APPLY : NEET-UG COUNSELLING 2023

Categories
ತೀರ್ಥಹಳ್ಳಿ

ನಾನು ಬಿಜೆಪಿ ತೊರೆದಿಲ್ಲ, ಆರಗ ಜ್ಞಾನೇಂದ್ರ ನಮ್ಮ ನಾಯಕರು!

ನಾನು ಬಿಜೆಪಿ ತೊರೆದಿಲ್ಲ, ಆರಗ ಜ್ಞಾನೇಂದ್ರ ನಮ್ಮ ನಾಯಕರು!
– ಹಾದಿಗಲ್ಲು ನೂತನ ಗ್ರಾಮ ಪಂಚಾಯಿತಿ ಅಧ್ಯಕ್ಷೆ ವಸಂತಿ ಶ್ರೀನಿವಾಸ್

NAMMUR EXPRESS NEWS
ತೀರ್ಥಹಳ್ಳಿ: ಹಾದಿಗಲ್ ಗ್ರಾಮ ಪಂಚಾಯತ್ ನೂತನ ಅಧ್ಯಕ್ಷರಾಗಿ ಮಂಗಳವಾರ ಆಯ್ಕೆಯಾದ ವಸಂತಿ ಶ್ರೀನಿವಾಸ್, ನಾನು ಬಿಜೆಪಿ ತೊರೆದಿಲ್ಲ, ಆರಗ ಜ್ಞಾನೇಂದ್ರ ನಮ್ಮ ನಾಯಕರು. ಎಂದು ಹೇಳಿದ್ದಾರೆ. ಶಾಸಕ ಆರಗ ಜ್ಞಾನೇಂದ್ರ ಅವರ ಮನೆಗೆ ಭೇಟಿ ನೀಡಿ ಆರಗ ಜ್ಞಾನೇಂದ್ರ ಅವರ ಆಶೀರ್ವಾದ ಪಡೆದ ಅವರು ಈ ಹೇಳಿಕೆ ನೀಡಿದ್ದಾರೆ. ಕಾಂಗ್ರೆಸ್ ಬೆಂಬಲ ಪಡೆದು ಹಾದಿಗಲ್ಲು ಗ್ರಾಮ ಪಂಚಾಯಿತಿ ನೂತನವಾಗಿ ಅಧ್ಯಕ್ಷರಾಗಿ ಆಯ್ಕೆಯಾದ ವಸಂತಿ ಶ್ರೀನಿವಾಸ್ ಅವರು ದಿನ ಪತ್ರಿಕೆಗಳಲ್ಲಿ ನಾನು ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ದೇನೆ ಎಂದು ವರದಿಯಾಗಿದೆ.

ಯಾವುದೇ ಕಾರಣಕ್ಕೂ ನಾನು ಬಿಜೆಪಿ ಪಕ್ಷವನ್ನ ಬಿಟ್ಟಿಲ್ಲ, ನಮ್ಮ ನಾಯಕರು ಅರಗ ಜ್ಞಾನೇಂದ್ರ ಅವರೇ ಗ್ರಾಮ ಪಂಚಾಯಿತಿ ಸದಸ್ಯರಾಗಲು, ಇದೀಗ ಅಧ್ಯಕ್ಷರಾಗಲು ನನಗೆ ಅವಕಾಶ ಕಲ್ಪಿಸಿ ಕೊಟ್ಟಿರುವುದು ಬಿಜೆಪಿ ಪಕ್ಷ ನಾನು ಇಂದಿಗೂ ಬಿಜೆಪಿಯಲ್ಲೇ ಇದ್ದೇನೆ. ನಾನು ಅಧ್ಯಕ್ಷರಾಗಲು ನಮ್ಮ ಪಕ್ಷದ ಕೆಲವರು ಅಡ್ಡಿ ಪಡಿಸಿದ್ದರು ಆದ್ದರಿಂದ ಕಾಂಗ್ರೆಸ್ ಬೆಂಬಲ ಪಡೆದು ಅಧ್ಯಕ್ಷರಾಗಿದ್ದೇನೆ. ಹೊರತು ಪಕ್ಷ ಬಿಟ್ಟಿಲ್ಲ ಎಂಬುದಾಗಿ ನೂತನ ಅಧ್ಯಕ್ಷರಾದ ವಸಂತಿ ಶ್ರೀನಿವಾಸ್ ಅವರು ಈ ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ : ಅಡಿಕೆ ಮಾರುಕಟ್ಟೆ: ಎಷ್ಟಿದೆ ದರ?

HOW TO APPLY : NEET-UG COUNSELLING 2023

Categories
ಬೆಂಗಳೂರು ಸಿನಿಮಾ

ಸ್ಪಂದನಾ ಅಂತಿಮ ದರ್ಶನ: ಇಂದೇ ಅಂತ್ಯಕ್ರಿಯೆ!

ಸ್ಪಂದನಾ ಅಂತಿಮ ದರ್ಶನ: ಇಂದೇ ಅಂತ್ಯಕ್ರಿಯೆ!
– ಮಲ್ಲೇಶ್ವರಂ ಮನೆಯಲ್ಲಿ ಸಾರ್ವಜನಿಕ ದರ್ಶನ
– ಮಧ್ಯಾಹ್ನ 2ರ ಬಳಿಕ ಅಂತ್ಯಕ್ರಿಯೆಗೆ ಸಿದ್ಧತೆ

NAMMUR EXPRESS NEWS
ಬೆಂಗಳೂರು: ನಟ ವಿಜಯ್‌ ರಾಘವೇಂದ್ರ ಅವರ ಪತ್ನಿ ಸ್ಪಂದನಾ ಅವರ ಪಾರ್ಥಿವ ಶರೀರವನ್ನು ಭಾರತಕ್ಕೆ ತರಲಾಗಿದೆ. ಮಲ್ಲೇಶ್ವರಂನಲ್ಲಿರುವ ಸ್ಪಂದನಾ ತಂದೆ ಬಿ.ಕೆ.ಶಿವರಾಂ ಅವರ ಮನೆಯಲ್ಲಿ ಅಂತಿಮ ದರ್ಶನಕ್ಕೆ ಇಡಲಾಗಿದ್ದು, ಸಿನಿಮಾ ರಂಗದ ಗಣ್ಯರು ಆಗಮಿಸಿ ಸ್ಪಂದನಾ ಅಂತಿಮ ದರ್ಶನ ಪಡೆಯುತ್ತಿದ್ದಾರೆ. ಮಧ್ಯಾಹ್ನದ ನಂತರ ಈಡಿನ ಸಂಪ್ರದಾಯದಂತೆ ಅಂತ್ಯಕ್ರಿಯೆ ನಡೆಯಲಿದೆ. ಈಗಾಗಲೇ ಚಿತ್ರರಂಗದ ಪ್ರಮುಖರು ಆಗಮಿಸಿ ಅಂತಿಮ ದರ್ಶನ ಪಡೆದಿದ್ದಾರೆ.

ಮಂಗಳವಾರ ಬೆಂಗಳೂರಿಗೆ ಪಾರ್ಥಿವ ಶರೀರ

ಥಾಯ್ಲೆಂಡ್‌ ಪ್ರವಾಸಕ್ಕೆ ತೆರಳಿದ್ದ ವೇಳೆಯಲ್ಲಿ ಸ್ಪಂದನಾ ಅವರಿಗೆ ಹೃದಯಾಘಾತವಾಗಿತ್ತು. ಎರಡು ದಿನಗಳ ಬಳಿಕ ಎಲ್ಲಾ ಕಾನೂನು ತೊಡಕುಗಳನ್ನು ಪೂರೈಸಿ ಪಾರ್ಥಿವ ಶರೀರವನ್ನು ಭಾರತಕ್ಕೆ ತರಲಾಗಿದೆ. ಮಂಗಳವಾರ ರಾತ್ರಿ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಸ್ಪಂದನಾ ಪಾರ್ಥಿವ ಶರೀರವನ್ನು ಅಂಬುಲೆನ್ಸ್‌ ಮೂಲಕ ಮಲ್ಲೇಶ್ವರಂನಲ್ಲಿರುವ ಬಿ.ಕೆ.ಶಿವರಾಂ ಅವರ ಮನೆಗೆ ತರಲಾಗಿದೆ. ಸಿನಿಮಾ ರಂಗದ ಗಣ್ಯರು, ಪೊಲೀಸ್‌ ಅಧಿಕಾರಿಗಳು ಆಗಮಿಸಿ ಸ್ಪಂದನಾ ಅವರ ಅಂತಿಮ ದರ್ಶನವನ್ನು ಪಡೆದುಕೊಂಡಿದ್ದಾರೆ. ಬುಧವಾರ ಮಧ್ಯಾಹ್ನ 2 ಗಂಟೆಯ ವರೆಗೆ ಅಂತಿಮ ದರ್ಶನಕ್ಕೆ ಅವಕಾಶವನ್ನು ಕಲ್ಪಿಸಲಾಗಿದ್ದು, ಮಧ್ಯಾಹ್ನದ ನಂತರ ಹರಿಶ್ಚಂದ್ರ ಘಾಟ್‌ನಲ್ಲಿ ಈಡಿಗ ಸಂಪ್ರದಾಯದಂತೆ ಅಂತ್ಯಸಂಸ್ಕಾರ ನಡೆಸಲು ಸಿದ್ದತೆ ಮಾಡಿಕೊಳ್ಳಲಾಗಿದೆ.

ಪತ್ನಿ ಪಕ್ಕದಲ್ಲೇ ಕುಳಿತು ಕಣ್ಣೀರು..!

ನಟ ವಿಜಯ್‌ ರಾಘವೇಂದ್ರ ಪತ್ನಿಯ ಪಾರ್ಥವ ಶರೀರದ ಪಕ್ಕದಲ್ಲಿಯೇ ನಿಂತು ಕಣ್ಣೀರು ಸುರಿಸುತ್ತಿದ್ದಾರೆ. ನಟ ಶಿವರಾಜ್‌ ಕುಮಾರ್‌, ರಾಘವೇಂದ್ರ ರಾಜ್‌ ಕುಮಾರ್‌, ನಟಿ ಸುಧಾರಾಣಿ, ಗಾಯಕ ವಿಜಯಪ್ರಕಾಶ್‌ ಸೇರಿದಂತೆ ಸಿನಿಮಾ ರಂಗದ ಗಣ್ಯಾತಿ ಗಣ್ಯರು ಆಗಮಿಸಿ ಕಂಬನಿ ಮಿಡಿದಿದ್ದಾರೆ. ಅಲ್ಲದೆ ಇಡೀ ರಾಜ್ಯದ ಜನ ಸಂತಾಪ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ : ಅಡಿಕೆ ಮಾರುಕಟ್ಟೆ: ಎಷ್ಟಿದೆ ದರ?

HOW TO APPLY : NEET-UG COUNSELLING 2023

Categories
ರಾಷ್ಟ್ರೀಯ ವಾರ್ತೆ

ಪ್ರಧಾನ ಮಂತ್ರಿ ಯಶಸ್ವಿ ವಿದ್ಯಾರ್ಥಿ ಯೋಜನೆ ಅರ್ಜಿಗೆ ಇಂದೇ ಕೊನೆ ದಿನ

ಪ್ರಧಾನ ಮಂತ್ರಿ ಯಶಸ್ವಿ ವಿದ್ಯಾರ್ಥಿ ಯೋಜನೆ ಅರ್ಜಿಗೆ ಇಂದೇ ಕೊನೆ ದಿನ
– 9 ರಿಂದ 12 ವರೆಗಿನ ವಿದ್ಯಾರ್ಥಿಗೆ ವಾರ್ಷಿಕ ವಿದ್ಯಾರ್ಥಿ ವೇತನ
– ಸೆ.29ರಂದು ವಿವಿಧ ಕೇಂದ್ರದಲ್ಲಿ ಪರೀಕ್ಷೆ
– ಯಾರು ಯಾರು ಅರ್ಜಿ ಸಲ್ಲಿಸಬಹುದು… ಇಲ್ಲಿದೆ ಡೀಟೇಲ್ಸ್!

NAMMUR EXPRESS NEWS
ನವ ದೆಹಲಿ: ರಾಷ್ಟ್ರೀಯ ಪರೀಕ್ಷಣ ಸಂಸ್ಥೆ ಪ್ರಧಾನ ಮಂತ್ರಿ ಯಶಸ್ವಿ ವಿದ್ಯಾರ್ಥಿ ಯೋಜನೆ 2023 ಅಧಿಸೂಚನೆ ಜಾರಿಗೊಂಡಿದೆ. ಭಾರತದ ಯಶಸ್ವಿ ವಿದ್ಯಾರ್ಥಿ ಅನುದಾನ ಪ್ರಶಸ್ತಿ ಯೋಜನೆಗೆ ಪ್ರಧಾನ ಮಂತ್ರಿ ಯಶಸ್ವಿ ವಿದ್ಯಾರ್ಥಿ ಯೋಜನೆ 2023 ತರಗತಿ 9 ರಿಂದ 12 ವರೆಗಿನ ವಿದ್ಯಾರ್ಥಿಗೆ ವಾರ್ಷಿಕ ಮೌಲ್ಯ ರೂಪಾಯಿ 75,000 ರಿಂದ 1,25,000 ವರೆಗಿನ 15,000 ಯಶಸ್ವಿ ವಿದ್ಯಾರ್ಥಿ ಅನುದಾನಗಳನ್ನು ಭಾರತ ಸರ್ಕಾರ ನೀಡುತ್ತದೆ. yet.nta.ac.in Registration 2023 ಅಧಿಕಾರಿಗಳ ಅಧಿಕೃತ ವೆಬ್ಸೈಟ್ ಮೂಲಕ 11 ಜುಲೈ ರಿಂದ 10 ಆಗಸ್ಟ್ 2023 ರವರೆಗೂ (ರಾತ್ರಿ 11:50 ಗಂಟೆಗೆ) ನಡೆಯಲಿದೆ.

ಪ್ರಧಾನ ಮಂತ್ರಿ ಯಶಸ್ವಿ ವಿದ್ಯಾರ್ಥಿ ಪರೀಕ್ಷೆ 2023 ದಿನಾಂಕ: 29 ಸೆಪ್ಟೆಂಬರ್ 2023 (ಶುಕ್ರವಾರ) ಪೆನ್ ಪೇಪರ್ OMR ಆಧಾರಿತ ವಿವಿಧ ಪರೀಕ್ಷಾ ಕೇಂದ್ರಗಳಲ್ಲಿ ನಡೆಯಲಿದೆ. ಅಭಿಯಾಂತರೀತ ಅರ್ಜಿದಾರರು PM ಯಶಸ್ವಿ ವಿದ್ಯಾರ್ಥಿ ಯೋಜನೆ 2023 ಅಧಿಕಾರಿಗಳ ಅಧಿಕೃತ ವೆಬ್ಸೈಟ್ ಪರಿಶೀಲಿಸಬಹುದು. ವೆಬ್ ಲಿಂಕ್: yet.nta.ac.in Registration

ಇದನ್ನೂ ಓದಿ : ಅಡಿಕೆ ಮಾರುಕಟ್ಟೆ: ಎಷ್ಟಿದೆ ದರ?

HOW TO APPLY : NEET-UG COUNSELLING 2023

Categories
ಬೆಂಗಳೂರು ಸಿನಿಮಾ

ಜಲಪಾತ ಸಿನಿಮಾಕ್ಕೆ ವಿಜಯಪ್ರಕಾಶ್ ಎಂಟ್ರಿ!

ಜಲಪಾತ ಸಿನಿಮಾಕ್ಕೆ ವಿಜಯಪ್ರಕಾಶ್ ಎಂಟ್ರಿ!
– ಮಲೆನಾಡ ನಿರ್ದೇಶಕರು, ನಟ ನಟಿಯರ ಸಿನಿಮಾ
– ರವೀಂದ್ರ ತುಂಬರಮನೆ ನಿರ್ಮಾಣ, ರಮೇಶ್ ಬೇಗಾರ್ ನಿರ್ದೇಶನ
– ಸಾದ್ವಿನಿ ಕೊಪ್ಪ ಸಂಗೀತ ನಿರ್ದೇಶಕರಾಗಿ ಹೊಸ ಹೆಜ್ಜೆ
– ನಭಾ, ಸಂಗೀತಾ ಬಳಿಕ ಈಗ ಇನ್ನೊಬ್ಬಳು ಹೀರೋಯಿನ್

NAMMUR EXPRESS NEWS
ಬೆಂಗಳೂರು: ಮಲೆನಾಡ ಖ್ಯಾತ ಕಲಾವಿದ, ರಂಗಕರ್ಮಿ ಶೃಂಗೇರಿಯ ಬೇಗಾರು ರಮೇಶ್ ರಚಿಸಿ ನಿರ್ದೇಶನ ಮಾಡಿರುವ ಜಲಪಾತ ಸಿನಿಮಾ ಇದೀಗ ಕನ್ನಡ ಸಿನಿಮಾ ರಂಗದಲ್ಲಿ ಸದ್ದು ಮಾಡುತ್ತಿದೆ. ಇದೀಗ ಮತ್ತೊಂದು ಗುಡ್ ನ್ಯೂಸ್ ಸಿಕ್ಕಿದೆ. ಕೊಪ್ಪದ ಜೀ ಕನ್ನಡದ ಸರಿಗಮಪ ಖ್ಯಾತಿಯ ಸಾದ್ವಿನಿ ಕೊಪ್ಪ ಸಂಗೀತ ನಿರ್ದೇಶನ ಮಾಡಿರುವ ಬೇಗಾರ್ ರಮೇಶ್ ಸಾಹಿತ್ಯ ರಚಿಸಿದ ಹಾಡನ್ನು ಕನ್ನಡದ ಖ್ಯಾತ ಗಾಯಕ ವಿಜಯ ಪ್ರಕಾಶ್ ಹಾಡಲಿದ್ದಾರೆ. ತೀರ್ಥಹಳ್ಳಿ ಮೂಲದ ಉದ್ಯಮಿ ಇಂಡಸ್ ಹರ್ಬ್ಸ್ ಟಿ. ಸಿ ರವೀಂದ್ರ ತುಂಬರಮನೆ ಇವರು ನಿರ್ಮಿಸಿರುವ ಈ ಸಿನಿಮಾ ಈಗಾಗಲೇ ಹೊಸಬರ ಹಾಗೂ ವಿಭಿನ್ನ ಕಲಾವಿದರ ತಂಡದ ಮೂಲಕ ಹೆಸರು ಮಾಡಿದೆ. ಮಲೆನಾಡ ಖ್ಯಾತ ರಂಗಕರ್ಮಿ ರಮೇಶ್ ಬೇಗಾರ್ ರಚಿಸಿ ನಿರ್ದೇಶಿಸುತ್ತಿರುವ “ಜಲಪಾತ ” ಸಿನಿಮಾಕ್ಕೆ ದೇಶದ ಸುಪ್ರಸಿದ್ಧ ಗಾಯಕ ವಿಜಯಪ್ರಕಾಶ್ “ಎದೆಯ ದನಿಯ ಹಾಡು ಕೇಳು…” ಎಂಬ ಥೀಮ್ ಸಾಂಗ್ ನ್ನು ಹಾಡಿದ್ದಾರೆ.

 

ಕನ್ನಡದ ಖ್ಯಾತ ನಟರ ನಟನೆ

ಕಿರಿಕ್ ಪಾರ್ಟಿ, ಕಾಂತಾರ ಖ್ಯಾತಿಯ ನಟ ಪ್ರಮೋದ್ ಶೆಟ್ಟಿ ವಿಭಿನ್ನವಾದ ಪಾತ್ರವೊಂದರಲ್ಲಿ ಈ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಪದವಿ ಪೂರ್ವ ಸಿನಿಮಾ ಖ್ಯಾತಿಯ ರಜನೀಶ್ ಎಂ ನಾಯಕ ನಟರಾಗಿದ್ದಾರೆ. ಈ ಚಿತ್ರದ ನಾಯಕಿ ಶೃಂಗೇರಿ ಮೂಲದ ವೈಶಂಪಾಯನ ತೀರ ಖ್ಯಾತಿಯ ನಾಗಶ್ರೀ. ಇನ್ನು ಚಿತ್ರದಲ್ಲಿ ರೇಖಾ ಪ್ರೇಮ್ ಕುಮಾರ್ , ಬಿ. ಎಲ್. ರವಿಕುಮಾರ್, ನಯನ , ಪ್ರಶಾಂತ್ ಶೆಟ್ಟಿ , ತೋರಣ ಗದ್ದೆ ನಟರಾಜ್ , ಅಭಿಷೇಕ್ ಹೆಬ್ಬಾರ್ , ವಿಶ್ವನಾಥ್ , ಚಂದ್ರಶೇಖರ ತುಂಬರಮನೆ, ರಶ್ಮಿ ಹೇರ್ಳೆ ಮೊದಲಾದ ಮಲೆನಾಡ ರಂಗಭೂಮಿ ಕಲಾವಿದರು ಅಭಿನಯಿಸಿದ್ದಾರೆ. ಶಶೀರ ಛಾಯಾಗ್ರಹಣ, ಅವಿನಾಶ್ ಸಂಕಲನ ವಿಭಾಗದಲ್ಲಿ ಕೆಲಸ ಮಾಡಿದ್ದಾರೆ. ಪರಿಸರ ಕಾಳಜಿ ಮತ್ತು ಅರಿವನ್ನು ಮೂಡಿಸುವ ವಿಭಿನ್ನ ಕಥಾವಸ್ತುವನ್ನು ಹೊಂದಿದ ಜಲಪಾತ ಚಿತ್ರ ಪರಿಪೂರ್ಣವಾಗಿ ಮಲೆನಾಡ ಭಾಷೆ , ಸಂಸ್ಕೃತಿ ಮತ್ತು ಪ್ರಕೃತಿಯನ್ನೊಳಗೊಂಡಿದೆ.

ಚಂದನವನಕ್ಕೆ ಶೃಂಗೇರಿಯ ಮತ್ತೊಬ್ಬಳು ನಟಿ!

ಶೃಂಗೇರಿ ಮೂಲದ ನಭಾ ನಟೇಶ್ ಕನ್ನಡ ಮತ್ತು ತೆಲಗು ಚಿತ್ರರಂಗದಲ್ಲಿ ಹೆಸರು ಮಾಡುತ್ತಿದ್ದಾರೆ. ಇನ್ನು ಚಾರ್ಲಿ ಸಿನಿಮಾ ಮೂಲಕ ಶೃಂಗೇರಿ ಮೂಲದ ಸಂಗೀತಾ ಶೃಂಗೇರಿ ಕನ್ನಡದ ಟಾಪ್ ನಟಿಯರಲ್ಲಿ ಒಬ್ಬರಾಗಿದ್ದಾರೆ. ಇದೀಗ ಮತ್ತೊಬ್ಬಳು ಶೃಂಗೇರಿ ಮೂಲದ ಕಲಾವಿದೆ ವೈಶಂಪಾಯನ ತೀರ ಖ್ಯಾತಿಯ ನಾಗಶ್ರೀ ಈ ಚಿತ್ರದ ಮೂಲಕ ಕನ್ನಡ ಸಿನಿಮಾದಲ್ಲಿ ಹೆಸರು ಮಾಡಿದ್ದಾರೆ.

ಇದನ್ನೂ ಓದಿ : ಅಡಿಕೆ ಮಾರುಕಟ್ಟೆ: ಎಷ್ಟಿದೆ ದರ?

HOW TO APPLY : NEET-UG COUNSELLING 2023