Categories
ತೀರ್ಥಹಳ್ಳಿ

ದೇವಸ್ಥಾನಕ್ಕೆ ಕನ್ನ ಹಾಕಿದ ಕಳ್ಳರು!

ದೇವಸ್ಥಾನಕ್ಕೆ ಕನ್ನ ಹಾಕಿದ ಕಳ್ಳರು!
– ಕುಡುಮಲ್ಲಿಗೆ ಸಮೀಪದ ಚಿಡುವದಲ್ಲಿ ಘಟನೆ
– ಕಾರಲ್ಲಿ ಬಂದು ಆಂಜನೇಯ ದೇಗುಲ ಕಳ್ಳತನ?
– ಕಾಣಿಕೆ ಹುಂಡಿ, ಬೆಳ್ಳಿ, ತಾಮ್ರದ ವಸ್ತು ಕಳ್ಳತನ

NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ತಾಲೂಕು ಕುಡುಮಲ್ಲಿಗೆ ಸಮೀಪದ ಚಿಡುವ ಆಂಜನೇಯ ಸ್ವಾಮಿ ದೇಗುಲದಲ್ಲಿ ಮಂಗಳವಾರ ತಡ ರಾತ್ರಿ ಕಳ್ಳರು ಭಾರೀ ಪ್ರಮಾಣದ ವಸ್ತುಗಳನ್ನು ಕಳ್ಳತನ ಮಾಡಿದ್ದಾರೆ. ಕಾಣಿಕೆ ಹುಂಡಿಯಲ್ಲಿ ಸುಮಾರು 50 ಸಾವಿರ ಇತ್ತು ಎನ್ನಲಾಗಿದೆ. ಹಾಗೆಯೇ ಬೆಳ್ಳಿ ವಸ್ತುಗಳು, ತಾಮ್ರದ ವಸ್ತುಗಳು, ಬೆಲೆ ಬಾಳುವ ವಸ್ತುಗಳನ್ನು ಕದ್ದಿದ್ದಾರೆ.
ದೇವರ ವಿಗ್ರಹ ಬಿಟ್ಟು ಮತ್ತೆಲ್ಲ ವಸ್ತು ಕಳುವು ಮಾಡಲಾಗಿದೆ. ಜಾಗಂಟೆ ಕೂಡ ಕದ್ದು ಕಳ್ಳರು ಪರಾರಿಯಾಗಿದ್ದಾರೆ.
ಕಾರಲ್ಲಿ ಬಂದು ಕಳ್ಳತನ ಮಾಡಲಾಗಿದೆ ಎಂದು ಅಂದಾಜಿಸಲಾಗಿದೆ. ಈಗ ಸ್ಥಳೀಯರು ಗಮನಿಸಿ ಮಾಳೂರು ಪೊಲೀಸರಿಗೆ ಮಾಹಿತಿ ಮುಟ್ಟಿಸಿದ್ದಾರೆ. ಪೊಲೀಸರು ಪರಿಶೀಲಿಸಿ, ಬೆರಳಚ್ಚು ತಜ್ಞರನ್ನು ಕರೆಸಿದ್ದಾರೆ. ಒಟ್ಟು ಸುಮಾರು 2 ಲಕ್ಷ ಬೆಲೆ ಬಾಳುವ ವಸ್ತು ಕಳುವು ಆಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ತೀರ್ಥಹಳ್ಳಿಯಲ್ಲಿ ಹೆಚ್ಚಿದ ಕಳ್ಳತನ

ತೀರ್ಥಹಳ್ಳಿ ಪಟ್ಟಣದಲ್ಲಿ ನಿಲ್ಲಿಸಿದ್ದ ಕಾರಲ್ಲಿ 1 ಲಕ್ಷ ಹಣವನ್ನು ಕಳ್ಳರು ದೋಚಿರುವ ಪ್ರಕರಣದ ನಡುವೆ ಈ ಘಟನೆ ನಡೆದಿದೆ. ಪೊಲೀಸ್ ಇಲಾಖೆ ತಕ್ಷಣ ಕ್ರಮ ಕೈಗೊಳ್ಳಬೇಕಿದೆ.

ಇದನ್ನೂ ಓದಿ : ಅಡಿಕೆ ಮಾರುಕಟ್ಟೆ: ಎಷ್ಟಿದೆ ದರ?

HOW TO APPLY : NEET-UG COUNSELLING 2023

Categories
ಕರಾವಳಿ

ಕರಾವಳಿ ಟಾಪ್ ನ್ಯೂಸ್ 08-08-2023

ಸೌಜನ್ಯ ಪ್ರಕರಣ: ಮರು ತನಿಖೆಗೆ ಭಾರೀ ಹೋರಾಟ!
– ಸುಳ್ಯದಲ್ಲಿ ಬೃಹತ್ ಪ್ರತಿಭಟನೆ: ಬಿಗಿ ಪೊಲೀಸ್ ಬಂದೋಬಸ್ತ್
– ಸೌಜನ್ಯ ಪರ ಹೋರಾಟಕ್ಕೆ ಅರುಣ್ ಪುತ್ತಿಲ ಎಂಟ್ರಿ!
– ಅಂಕೋಲಾದಲ್ಲಿ ದೋಣಿ ಮಗುಚಿ ಇಬ್ಬರಿಗೆ ಗಾಯ
– ಉಡುಪಿಗೆ ಆಗಮಿಸಿದ ಸಿಐಡಿ ತಂಡ!

NAMMUR EXPRESS NEWS
ಸುಳ್ಯ: ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮರು ತನಿಖೆ ನಡೆಸಿ ನೈಜ ಆರೋಪಿಗಳನ್ನು ಬಂಧಿಸಬೇಕೆಂದು ಒತ್ತಾಯಿಸಿ ಪ್ರಬಲ ಹಿಂದೂ ಮುಖಂಡ ಮಹೇಶ್ ಶೆಟ್ಟಿ ತಿಮರೋಡಿ ಮತ್ತು ದಿ.ಸೌಜನ್ಯಳ ತಾಯಿ ಕುಸುಮಾವತಿ ನೇತೃತ್ವದಲ್ಲಿ ಸುಳ್ಯ ತಾಲೂಕಿನ ಮುರುಳ್ಯ ಗ್ರಾಮದ ನಿಂತಿಕಲ್ಲಿನಿಂದ ವಾಹನ ಜಾಥಾದ ಮೂಲಕ ಪ್ರತಿಭಟನೆ ಆರಂಭಗೊಂಡಿದೆ. ಸುಳ್ಯದ ಪ್ರೆಸ್ ಕ್ಲಬ್‌ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಸೌಜನ್ಯ ಹೋರಾಟ ಸಮಿತಿಯ ವಸಂತ್ ಮಾತನಾಡಿ, ಸೌಜನ್ಯಳ ಹತ್ಯೆ ನಡೆದು 11 ವರ್ಷವಾಗಿದೆ. ನಿರಪರಾಧಿಯನ್ನು ಅಪರಾಧಿ ಮಾಡಿ ಶಿಕ್ಷೆ ವಿಧಿಸಲಾಗಿದೆ.

ನ್ಯಾಯದ ಕಣ್ಣಿಗೆ ಮಣ್ಣೆರಚುವ ಕೆಲಸ ಆಗಿದೆ. ಈ ಕೂಡಲೇ ಸೌಜನ್ಯ ಹತ್ಯೆ ಪ್ರಕರಣವನ್ನು ಉನ್ನತ ಮಟ್ಟದ ತನಿಖೆಗೆ ವಹಿಸಿ ನೊಂದ ಕುಟುಂಬಕ್ಕೆ ನ್ಯಾಯ ಒದಗಿಸುವ ಕಾರ್ಯ ಮಾಡಬೇಕಿದೆ ಎಂದು ಒತ್ತಾಯಿಸಿದ್ದರು
ಮಹೇಶ್ ಶೆಟ್ಟಿ ತಿಮರೋಡಿ, ಸೌಜನ್ಯ ತಾಯಿ ಕುಸುಮಾವತಿ ಸೇರಿಸಿಕೊಂಡು ಸುಳ್ಯ ತಾಲೂಕಿನ ಮುರುಳ್ಯ ಗ್ರಾಮದ ನಿಂತಿಕಲ್ಲಿನಿಂದ ವಾಹನ ಜಾಥಾ ಮೂಲಕ ಸುಮಾರು 500ಕ್ಕೂ ಹೆಚ್ಚು ಬೈಕ್, ಕಾರು ವಾಹನಗಳಲ್ಲಿ ಜಾಥಾ ಮೂಲಕ ಪ್ರತಿಭಟನೆ ಪ್ರಾರಂಭಗೊಂಡಿದೆ. ಸುಳ್ಯ ಪೇಟೆಯಲ್ಲಿ ಸುಮಾರು ಮೂರು ಸಾವಿರಕ್ಕೂ ಹೆಚ್ಚು ಮಂದಿ ನ್ಯಾಯಪರ ಹೋರಾಟಗಾರರು ಸಂಘಟಿತರಾಗಲಿದ್ದಾರೆ ಎಂದು ಅಂದಾಜಿಸಲಾಗಿದೆ.

ಸೌಜನ್ಯ ಪರ ಧ್ವನಿ ಎತ್ತಲಿರುವ ಪುತ್ತಿಲ ಪರಿವಾರ!

ಸೌಜನ್ಯ ಕೊಲೆ ಪ್ರಕರಣದಲ್ಲಿ ಇದೀಗ ಪುತ್ತಿಲ ಪಾರಿವಾರ ಎಂಟ್ರಿ ಆಗಿದೆ. ‘ನಮ್ಮ ನಡೆ ನ್ಯಾಯದ ಕಡೆ ಆಗಸ್ಟ್ 14 ರಂದು ಪುತ್ತೂರಿನಲ್ಲಿ ಪ್ರತಿಭಟನೆ ಪ್ರತಿಭಟನೆ ಮಾಡಲಿದ್ದಾರೆ. ಸೌಜನ್ಯ ಪರವಾಗಿ ದೊಡ್ಡ ಮಟ್ಟದ ಪ್ರತಿಭಟನೆ ನಡೆಸಲು ತೀರ್ಮಾನಿಸಿದ ಪುತ್ತಿಲ ಪರಿವಾರ ದೊಡ್ಡ ಮಟ್ಟದ ಹೋರಾಟಕ್ಕಿಳಿಯಲಿದೆ.

ದೋಣಿ ಮುಗುಚಿ ಮೀನುಗಾರರಿಗೆ ಗಾಯ

ಅಂಕೋಲಾ: ಮೀನುಗಾರಿಕೆಗೆ ತೆರಳಿದ್ದಾಗ ಸಮುದ್ರದಲ್ಲಿ ದೋಣಿ ಮುಗುಚಿ ಲಕ್ಷಾಂತರ ರೂಪಾಯಿ ಹಾನಿ ಸಂಭವಿಸಿ ಇಬ್ಬರೂ ಮೀನುಗಾರರು ಗಾಯಗೊಂಡ ಘಟನೆ ಸೋಮವಾರ ನಸುಕಿನಲ್ಲಿ 4 ಗಂಟೆಗೆ ಮೀನುಗಾರಿಕೆಗೆ ತೆರಳಿದ್ದರು. ಆಳ ಸಮುದ್ರ ಮೀನುಗಾರಿಕೆಯಲ್ಲಿ ತೊಡಗಿದಾಗ ದುರ್ಘಟನೆ ಸಂಭವಿಸಿದೆ. ಸಮುದ್ರಕ್ಕೆ ಹಾಕಿದ ಬಲೆಯನ್ನು ಮೇಲೆತ್ತಿ ದೋಣಿಯಲ್ಲಿ ತುಂಬಿಸುವಾಗ ಅಲೆಗಳ ರಭಸಕ್ಕೆ ದೋಣಿ ಮಗುಚಿಬಿದ್ದಿದೆ. ಈ ಘಟನೆಯಿಂದ ದೋಣಿಯು ಸಂಪೂರ್ಣವಾಗಿ ಹಾನಿಗೊಂಡಿದೆ. ದೋಣಿಯಲ್ಲಿನ 80,000 ಮೌಲ್ಯದ ಬಲೆ, 1.50 ಲಕ್ಷ ಮೌಲ್ಯದ ಇಂಜಿನ್ ಸಮುದ್ರದಲ್ಲಿ ಮುಳುಗಿ ನಾಪತ್ತೆಯಾಗಿದೆ. ಒಟ್ಟಾರೆ ಮೂರು ಲಕ್ಷಕ್ಕೂ ಅಧಿಕ ಮೌಲ್ಯದ ಹಾನಿ ಅಂದಾಜಿಸಲಾಗಿದೆ.

ಕಾಲುಜಾರಿ ಬಾವಿಗೆ ಬಿದ್ದ ವ್ಯಕ್ತಿ ಸಾವು!

ಕುಮಟಾ ತಾಲೂಕಿನ ಮುರೂರಿನ ಮಡಕಿಬೈಲ್’ನಲ್ಲಿನ ನಿವಾಸಿ ನಾಗರಾಜ್ ಗಾವಡಿ ಎಂಬಾತ ಕಾಲು ಜಾರಿ ಬಾವಿಗೆ ಬಿದ್ದು ಮೃತಪಟ್ಟಿರುವ ಘಟನೆ ನಡೆದಿದೆ. ರೈತಾಪಿ ಕೆಲಸ ಹಾಗೂ ಕರೆಂಟ್ ರಿಪೇರಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ಈತ ಮೂರೂರಿನ ನೆಲಬಾವಿಯಲ್ಲಿ ಕಾಲು ತೊಳೆಯಲು ಹೋದಾಗ ಜಾರಿ ಬಿದ್ದು ಸಾವನಪ್ಪಿದ್ದಾನೆಂದು ತಿಳಿದುಬಂದಿದೆ. ನಂತರ ಘಟನಾಸ್ಥಳಕ್ಕೆ ಕುಮಟಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಕುಮಟಾ ಪೊಲೀಸ್ ಠಾಣೆಯಲ್ಲಿ ಈ ಕುರಿತಾಗಿ ಪ್ರಕರಣ ದಾಖಲಾಗಿದೆ.

ಉಡುಪಿಗೆ ಆಗಮಿಸಿದ ಸಿಐಡಿ ತಂಡ!

ಉಡುಪಿ ಖಾಸಗಿ ಅರೆವೈದ್ಯಕೀಯ ಕಾಲೇಜಿನ ಶೌಚಾಲಯದಲ್ಲಿ ವಿಡಿಯೋ ಚಿತ್ರೀಕರಣ ಪ್ರಕರಣದ ತನಿಖೆಯನ್ನು ಸಿಐಡಿಗೆ ಹಸ್ತಾಂತರಿಸಿ ರಾಜ್ಯ ಸರಕಾರ ಆದೇಶ ಹೊರಡಿಸಿದ ಹಿನ್ನೆಲೆಯಲ್ಲಿ ಮಂಗಳವಾರ ಸಿಐಡಿ ಡಿವ್ಯೆಎಸ್ಪಿ ಅಂಜುಮಾಲಾ ನಾಯಕ್ ನೇತ್ರತ್ವದ ತಂಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಗೆ ಭೇಟಿ ನೀಡಿದ್ದಾರೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಕೆ ಅಕ್ಷಯ್ ಮಚ್ಚೀಂದ್ರ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸಿದ್ದಲಿಂಗಪ್ಪ, ತನಿಖಾಧಿಯಾಗಿದ್ದ ಬೆಳ್ಳಿಯಪ್ಪ ಸಹಿತ ಮಲ್ಪೆ ಠಾಣೆಯ ಪೊಲೀಸರು ಘಟನೆ ಹಾಗು ತನಿಖೆಯ ವರದಿಗಳನ್ನು ಸಿಐಡಿಗೆ ಹಸ್ತಾಂತರಿಸಿದರು. ಇನ್ನು ಮುಂದೆ ಅಂಜುಮಾಲಿ ನಾಯಕ್ ಈ ಪ್ರಕರಣದ ತನಿಖಾಧಿಕಾರಿಯಾಗಿರಲಿದ್ದಾರೆ. ಉಡುಪಿಯ ಖಾಸಗಿ ಅರೆವೈದ್ಯಕೀಯ ಕಾಲೇಜಿನ ಶೌಚಾಲಯದಲ್ಲಿ ವೀಡಿಯೋ ಚಿತ್ರೀಕರಣ ಮಾಡಲಾಗಿದೆ ಎಂಬ ಆರೋಪ ರಾಜ್ಯದಲ್ಲಿ ಸಾಕಷ್ಟು ಸದ್ದು ಮಾಡಿತ್ತು. ಶೌಚಾಲಯದಲ್ಲಿ ವಿಡಿಯೋ ಮಾಡಲಾಗಿದೆ ಎನ್ನಲಾದ ಪ್ರಕರಣ ಅತ್ಯಂತ ಸೂಕ್ಷ್ಮವಾದದ್ದು ಈ ಪ್ರಕರಣವನ್ನು ಸಿಐಡಿ ತನಿಖೆಗೆ ಒಪ್ಪಿಸಿರುವುದು ಸೂಕ್ತವಾಗಿದೆ ಜೊತೆಗೆ ನಿಷ್ಪಕ್ಷಪಾತವಾಗಿ ತನಿಖೆ ನಡೆಯಲಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮತ್ತು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಾದ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದಾರೆ.

ವಿಟ್ಲ: ತಲೆಮರೆಸಿಕೊಂಡಿದ್ದ ಆರೋಪಿ ಅರೆಸ್ಟ್!

ಮರಳು ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿಯನ್ನು ವಿಟ್ಲ ಪೊಲೀಸರು ಬಂಧಿಸಿರುವ ಘಟನೆ ನಡೆದಿದೆ. ಬಂಧಿತ ಆರೋಪಿಯನ್ನು ಪೆರುವಾಯಿ ಗ್ರಾಮದ ಕಿನಿಯರಪಾಲು ನಿವಾಸಿ ಸುಧೀರ್ ಕುಮಾರ್ (34)ಎಂದು ಗುರುತಿಸಲಾಗಿದೆ. ಇನ್ನು ಆರೋಪಿಯ ವಿರುದ್ಧ ಮರಳು ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ವಾರಂಟ್ ಹೊರಡಿಸಲಾಗಿತ್ತು. ಆದರೆ ಆತ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ. ವಿಟ್ಲ ಪೊಲೀಸ್ ಇನ್ ಸ್ಪೆಕ್ಟರ್ ನಾಗರಾಜ್ ಅವರ ಸೂಚನೆ ಮೇರೆಗೆ, ಎಸ್ಸೆಗಳಾದ ಕಾರ್ತಿಕ್ ಮತ್ತು ವಿದ್ಯಾ ಕೆ, ಸಿಬ್ಬಂದಿ ಅಡ್ಯನಡ್ಕ ಎಂಬಲ್ಲಿ ಸುಧೀರ್ ಕುಮಾರ್ ನನ್ನು ಬಂಧಿಸಿದ್ದಾರೆ.

ಇದನ್ನೂ ಓದಿ : ಅಡಿಕೆ ಮಾರುಕಟ್ಟೆ: ಎಷ್ಟಿದೆ ದರ?

HOW TO APPLY : NEET-UG COUNSELLING 2023

Categories
ತೀರ್ಥಹಳ್ಳಿ

ತೀರ್ಥಹಳ್ಳಿಯಲ್ಲಿ ಮುಂಗಾರು ಜನಪದ ಸಂಭ್ರಮ!

ತೀರ್ಥಹಳ್ಳಿಯಲ್ಲಿ ಮುಂಗಾರು ಜನಪದ ಸಂಭ್ರಮ!
– ಕರ್ನಾಟಕ ಜಾನಪದ ಪರಿಷತ್ ತೀರ್ಥಹಳ್ಳಿ
– ಮೈಲಾರ ಮಹದೇವ ಲಾವಣಿ ಗಾಯನ ವಿಶ್ಲೇಷಣೆ ಮುಂಗಾರು ಜನಪದ ಸಂಭ್ರಮ

NAMMUR EXPRESS NWES
ತೀರ್ಥಹಳ್ಳಿ: ತುಂಗಾ ವಿದ್ಯಾವರ್ಧಕ ಸಂಘ (ರಿ ) ತೀರ್ಥಹಳ್ಳಿ ಇವರ ಸಹಯೋಗದೊಂದಿಗೆ ಬಿ.ಎಸ್ಸಿ, ವಿದ್ಯಾರ್ಥಿಗಳಿಗೆ ಕನ್ನಡ ಪಠ್ಯದಲ್ಲಿರುವ ಮೈಲಾರ ಮಹಾದೇವ ಲಾವಣಿ ಗಾಯನ ವಿಶ್ಲೇಷಣೆ ಮುಂಗಾರು ಜಾನಪದ ಸಂಭ್ರಮ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು. ತೀರ್ಥಹಳ್ಳಿ ರಜತ ಮಹೋತ್ಸವ ಸಭಾಂಗಣದಲ್ಲಿ ಮುಖ್ಯ ಅತಿಥಿಗಳಾಗಿ ಸಾಹಿತ್ಯ ಪರಿಷತ್ ಜಿಲ್ಲಾ ಸಮಿತಿ ಶಿವಮೊಗ್ಗ, ಜಾನಪದ ಪರಿಷತ್ ಶಿವಮೊಗ್ಗ ಅಧ್ಯಕ್ಷರಾದ ಡಿ ಮಂಜುನಾಥ, ತುಂಗಾ ಕಾಲೇಜಿನ ಪ್ರಾಂಶುಪಾಲರಾದ ಡಾ.ಕೆ ಅಂಜನಪ್ಪ, ಕಲಾವಿದ ಕುಗ್ವೆ ವಸಂತ್ ಕುಮಾರ್ ಪ್ರಮುಖರಾದ ನೆಂಪೆ ದೇವರಾಜ್, ಪಟಮಕ್ಕಿ ಮಹಾಬಲೇಶ್, ಡಿ. ಸಿ. ದೇವರಾಜ್, ಕೆ ಎಲ್ ಪ್ರಸನ್ನ, ಶಿರುಪತಿ ಮಂಜುನಾಥ್ ಇತರರು ಇದ್ದರು.

ಇದನ್ನೂ ಓದಿ : ಅಡಿಕೆ ಮಾರುಕಟ್ಟೆ: ಎಷ್ಟಿದೆ ದರ?

HOW TO APPLY : NEET-UG COUNSELLING 2023

Categories
ತೀರ್ಥಹಳ್ಳಿ

ರಾಷ್ಟ್ರಧ್ವಜಕ್ಕಾಗುವ ಅಪಮಾನ ತಡೆಗಟ್ಟಿ ಪ್ಲೀಸ್

ರಾಷ್ಟ್ರಧ್ವಜಕ್ಕಾಗುವ ಅಪಮಾನ ತಡೆಗಟ್ಟಿ ಪ್ಲೀಸ್
– ಸ್ವಾಂತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಅಪಮಾನ
– ಹಿಂದೂ ಜನಜಾಗೃತಿ ಸಮಿತಿಯಿಂದ ತಾಲೂಕು ಆಡಳಿತಕ್ಕೆ ಮನವಿ

NAMMUR EXPRESS NEWS
ತೀರ್ಥಹಳ್ಳಿ: ಹಿಂದೂ ಜನಜಾಗೃತಿ ಸಮಿತಿ ವತಿಯಿಂದ ಸ್ವಾಂತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ರಾಷ್ಟ್ರಧ್ವಜಕ್ಕಾಗುವ ಅಪಮಾನವನ್ನು ತಡೆಗಟ್ಟಲು ಮತ್ತು ಸರ್ಕಾರವು ನಿಷೇಧಿಸಿರುವ ಪ್ಲಾಸ್ಟಿಕ್ ಧ್ವಜಗಳನ್ನು ಮಾರಾಟ ಮಾಡುವವರ ವಿರುದ್ಧ ಅಪರಾಧವನ್ನು ದಾಖಲಿಸುವ ಕುರಿತು ಮನವಿ ಸಲ್ಲಿಕೆಯಾಗಿದೆ. ತಾಲ್ಲೂಕು ಉಪ ತಹಶೀಲ್ದಾರ್ ಸತ್ಯಮೂರ್ತಿ ಆದೀಕ್ಷಕರ ಕಛೇರಿಯ ಡಿ. ವೈ.ಎಸ್. ಪಿ ಗಜಾನನ ವಾಮನ ಸುತಾರ ಮತ್ತು ಸಾರ್ವಜನಿಕ ಕ್ಷೇತ್ರ ಶಿಕ್ಷಣಧಿಕಾರಿ ಗಣೇಶ್ ಇವರಿಗೆ ಮನವಿ ಸಲ್ಲಿಸಲಾಯಿತು.

ರಾಷ್ಟ್ರಧ್ವಜವು ರಾಷ್ಟ್ರದ ಭಾವೈಕ್ಯದ ಸಂಕೇತವಾಗಿದೆ. ಆಗಸ್ಟ್ 15ಮತ್ತು ಜನವರಿ26ರಂದು, ರಾಷ್ಟ್ರಧ್ವಜವನ್ನು ಹೆಮ್ಮೆಯಿಂದ ಪ್ರದರ್ಶಿಸಲಾಗುತ್ತದೆ ಆದರೆ ಅದೇ ದಿನ, ಅದೇ ಪ್ಲಾಸ್ಟಿಕ್‌ನ ಸಣ್ಣ ಸಣ್ಣ ರಾಷ್ಟ್ರಧ್ವಜಗಳು ರಸ್ತೆಗಳು, ಕಸ ಮತ್ತು ಚರಂಡಿಗಳಲ್ಲಿ ಹರಿದ ಸ್ಥಿತಿಯಲ್ಲಿ ಬಿದ್ದಿರುವುದು ಕಂಡುಬರುತ್ತದೆ. ಪ್ಲಾಸ್ಟಿಕ ಧ್ವಜಗಳು ಬೇಗನೇ ನಾಶವಾಗುವುದಿಲ್ಲ, ಆದ್ದರಿಂದ ಅನೇಕ ದಿನಗಳವರೆಗೆ ಈ ರಾಷ್ಟ್ರಧ್ವಜಗಳ ಅವಮಾನವನ್ನು ನೋಡಬೇಕಾಗುತ್ತದೆ. ರಾಷ್ಟ್ರಧ್ವಜದ ಈ ಅವಮಾನವನ್ನು ತಡೆಯಲು ಹಿಂದೂ ಜನಜಾಗೃತಿ ಸಮಿತಿಯು ಮುಂಬೈ ಉಚ್ಚ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯನ್ನು (೧೦೩/೨೦೧೧) ಸಲ್ಲಿಸಿತ್ತು. ಈ ಕುರಿತು ವಿಚಾರಣೆ ನಡೆಸಿದಾಗ, ಪ್ಲಾಸ್ಟಿಕ್‌ನಿಂದ ತಯಾರಿಸಿದ ರಾಷ್ಟ್ರಧ್ವಜದ ಅಪಮಾನವನ್ನು ನಿಲ್ಲಿಸುವಂತೆ ನ್ಯಾಯಾಲಯವು ಸರ್ಕಾರಕ್ಕೆ ಆದೇಶ ನೀಡಿತ್ತು. ಅದರಂತೆ ಕೇಂದ್ರ ಮತ್ತು ರಾಜ್ಯ ಗೃಹ ಇಲಾಖೆಗಳು ಮತ್ತು ಶಿಕ್ಷಣ ಇಲಾಖೆಗಳು ಈ ಸಂಬಂಧ ಸುತ್ತೋಲೆಯನ್ನೂ ಹೊರಡಿಸಿದ್ದವು. ಇದರೊಂದಿಗೆ ಕೇಂದ್ರ ಸರಕಾರವೂ `ಪ್ಲಾಸ್ಟಿಕ್ ನಿಷೇಧಿಸಲು’ ನಿರ್ಧರಿಸಿದೆ. ಅದರ ಪ್ರಕಾರವೂ `ಪ್ಲಾಸ್ಟಿಕ್ ರಾಷ್ಟ್ರಧ್ವಜ ಮಾರಾಟ ಮಾಡುವುದು’ ಸಂವಿಧಾನಬಾಹಿರವಾಗಿದೆ.

ಈ ವರ್ಷ, ಅಂಗಡಿಗಳಲ್ಲಿ ಮತ್ತು ಇ-ಕಾಮರ್ಸ್ ಜಾಲತಾಣಗಳಲ್ಲಿ(ವೆಬ್‌ಸೈಟ್) ತ್ರಿವರ್ಣ ಮಾಸ್ಕಗಳನ್ನು ಮಾರಾಟ ಮಾಡುತ್ತಿರುವುದು ಕಂಡು ಬರುತ್ತಿದೆ. ತ್ರಿವರ್ಣ ಮಾಸ್ಕ್ ಬಳಕೆಯಿಂದ ರಾಷ್ಟ್ರಧ್ವಜದ ಪಾವಿತ್ರಕ್ಕೆ ಧಕ್ಕೆಯಾಗುತ್ತದೆ. ತ್ರಿವರ್ಣ ಮಾಸ್ಕ್’ ದೇಶಭಕ್ತಿಯ ಪ್ರದರ್ಶನದ ಮಾಧ್ಯಮವಲ್ಲ, ಅಲ್ಲದೇ ಧ್ವಜ ಸಂಹಿತೆಗನುಸಾರ ರಾಷ್ಟ್ರಧ್ವಜವನ್ನು ಈ ರೀತಿ ಬಳಸುವುದು’ ಧ್ವಜಕ್ಕೆ ಮಾಡಿದ ಅವಮಾನವೇ ಆಗಿದೆ. ಇದು ರಾಷ್ಟ್ರೀಯ ಗೌರವದ ಮಾನನಷ್ಟ ತಡೆ ಕಾಯ್ದೆ ೧೯೭೧’ರ ಉಲ್ಲಂಘನೆಯಾಗಿದೆ. ಆದ್ದರಿಂದ, ‘ತ್ರಿವರ್ಣ ಮಾಸ್ಕ್’ ಮಾರಾಟ ಮಾಡುವ ಮತ್ತು ಬಳಸುವವರ ವಿರುದ್ಧ ಅಪರಾಧಗಳನ್ನು ನಮೂದಿಸಬೇಕು.

ರಾಷ್ಟ್ರೀಯ ಚಿಹ್ನೆಗಳ ಅಪಮಾನಗೊಳಿಸುವುದನ್ನು ತಡೆಯಲು, ಸಮಿತಿಯು ಪ್ರತಿ ವರ್ಷ `ರಾಷ್ಟ್ರಧ್ವಜವನ್ನು ಗೌರವಿಸಿ!’ ಈ ಅಭಿಯಾನವನ್ನು ನಡೆಸುತ್ತದೆ. ಅನುಮತಿಯಿಲ್ಲದಿರುವಾಗಲೂ ಸರ್ಕಾರದ ಅಧಿನಿಯಮಗಳನ್ನು ಧಿಕ್ಕರಿಸಿ ಪ್ಲಾಸ್ಟಿಕ್ ಧ್ವಜ ಮಾರಾಟ ಮಾಡುವ ಮಾರಾಟಗಾರರು ಹಾಗೂ ಧ್ವಜ ಸಂಹಿತೆ ಪ್ರಕಾರ ಧ್ವಜವನ್ನು ಗೌರವಿಸದ ಜನರು, ಸಂಸ್ಥೆಗಳು ಮತ್ತು ಗುಂಪುಗಳು ಅಥವಾ ಬೇರೆಯವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ವಿನಂತಿಸಲಾಯಿತು.
ಹಿಂದೂ ಜನಜಾಗೃತಿ ಸಮಿತಿಯ ಹರೀಶ್ ಗೌಡ, ನರೇಂದ್ರ ಗೌಡ, ರಾಷ್ಟ್ರ ಪ್ರೇಮಿಗಳಾದ ಕಾಂತೇಶ್, ರಾಘವೇಂದ್ರ, ಸುಭಾಶ್ ಹೆಗಡೆ, ಸುಧೀರ್, ವೆಂಕಪ್ಪ ಇನ್ನು ಅನೇಕ ಕಾರ್ಯಕರ್ತರು ಉಪಸ್ಥಿತರಿದ್ದರು.

ಇದನ್ನೂ ಓದಿ : ಅಡಿಕೆ ಮಾರುಕಟ್ಟೆ: ಎಷ್ಟಿದೆ ದರ?

HOW TO APPLY : NEET-UG COUNSELLING 2023

Categories
ಶಿವಮೊಗ್ಗ

ಶಿವಮೊಗ್ಗದಲ್ಲಿ ಮಹಿಳೆ ಬಲಿ ಪಡೆದ ಚಿರತೆ!

ಶಿವಮೊಗ್ಗದಲ್ಲಿ ಮಹಿಳೆ ಬಲಿ ಪಡೆದ ಚಿರತೆ!
– ಶಿವಮೊಗ್ಗ ಗ್ರಾಮಾಂತರ ತಾಲೂಕು ಬಿಕೋನಹಳ್ಳಿಯಲ್ಲಿ ಘಟನೆ
– ಭದ್ರಾವತಿ: ಉರುಳಿಗೆ ಸಿಲುಕಿ ಚಿರತೆ ಸಾವು!

NAMMUR EXPRESS NEWS
ಶಿವಮೊಗ್ಗ: ಜಮೀನಿನಲ್ಲಿ ಕೆಲಸಕ್ಕೆ ಹೋದ ಮಹಿಳೆ ಮೇಲೆ ಚಿರತೆ ದಾಳಿ ನಡೆಸಿ ಮಹಿಳೆ ಸ್ಥಳದಲ್ಲೇ ಸಾವನ್ನಪಿದ ಘಟನೆ ಶಿವಮೊಗ್ಗ ಗ್ರಾಮಾಂತರ ತಾಲೂಕು ಬಿಕೋನಹಳ್ಳಿಯಲ್ಲಿ ಮಂಗಳವಾರ ಮಧ್ಯಾಹ್ನದ ನಡೆದಿದ್ದು ಇಡೀ ಜಿಲ್ಲೆಯಲ್ಲಿ ಬೆಚ್ಚಿ ಬೀಳಿಸಿದೆ. ಜೋಳದ ಹೊಲಕ್ಕೆ ಹೋಗಿದ್ದ ಮಹಿಳೆ ಯಶೋದಮ್ಮ (47) ಎಂಬುವರನ್ನು ಕಾಡಿನ ಒಳಗೆ ಹೊತ್ತೊಯ್ದ ಚಿರತೆ ಯಶೋದಮ್ಮನ ಕತ್ತಿನ ಭಾಗ ಹಾಗೂ ಬೆನ್ನಿನ ಭಾಗವನ್ನು ಚಿರತೆ ತಿಂದಿದೆ. ಜೋಳಕ್ಕೆ ಗೊಬ್ಬರ ಹಾಕಲೆಂದು ಹೋಗಿದ್ದ ವೇಳೆ ಈ ದುರಂತ ಸಂಭವಿಸಿದೆ.

ಮಲೆನಾಡಲ್ಲಿ ಚಿರತೆ ಕಾಟ!

ಶಿವಮೊಗ್ಗ ಗ್ರಾಮಾಂತರ ತಾಲೂಕಿನಲ್ಲಿ ಕಳೆದ ಹಲವು ವರ್ಷಗಳಿಂದ ಗ್ರಾಮದ ಸುತ್ತಮುತ್ತಲಿನಲ್ಲಿ ಚಿರತೆ ಕಾಣಿಸಿಕೊಂಡಿದ್ದು ಹಸುಗಳ ಮೇಲೆ ದಾಳಿಯನ್ನು ನಡೆಸಿತ್ತು ಎನ್ನಲಾಗಿದೆ. ಈಗ ಮನುಷ್ಯರ ಮೇಲೆ ದಾಳಿ ನಡೆದಿದ್ದನ್ನ ಕಂಡು ಸುತ್ತಮುತ್ತಲಿನ ಗ್ರಾಮಸ್ಥರು ಭಯಗೊಂಡಿದ್ದಾರೆ. ತಕ್ಷಣ ಅರಣ್ಯ ಇಲಾಖೆ ಈ ಬಗ್ಗೆ ಗಮನ ಹರಿಸಬೇಕಿದೆ.

ಭದ್ರಾವತಿ: ಉರುಳಿಗೆ ಸಿಲುಕಿ ಚಿರತೆ ಸಾವು!

ಉರುಳಿಗೆ ಸಿಲುಕಿ ಚಿರತೆ ಸಾವನ್ನಪ್ಪಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಅಗರದಹಳ್ಳಿಯಲ್ಲಿ ನಡೆದಿದೆ. ಚಿರತೆ ಭದ್ರಾ ಅಭಯಾರಣ್ಯದ ವಲಯದಿಂದ ಹೊರಬಂದು ಅಗರದಹಳ್ಳಿಯ ಕಾಲುವೆ ಕೆಳಗೆ ಸೇರಿಕೊಂಡಿತ್ತು.ಇದನ್ನು ಸೆರೆ ಹಿಡಿಯಲು ಭದ್ರಾ ಕಣಿವಮ್ಮ ದೇವಸ್ಥಾನದ ಬಳಿ ಕಳೆದ ಒಂದು ತಿಂಗಳಿಂದ ಬೋನು ಇಟ್ಟಿದ್ದರೂ ಚಿರತೆ ಸೆರೆ ಸಿಕ್ಕಿರಲಿಲ್ಲ. ಆದರೆ ತಡರಾತ್ರಿ ಕಾಲುವೆಯಿಂದ ಅಡಿಕೆ ತೋಟಕ್ಕೆ ಹೋಗವಾಗ ಉರುಳಿಗೆ ಸಿಲುಕಿ ಚಿರತೆ ಸಾವನ್ನಪ್ಪಿದೆ. ಚಿರತೆಯ ಸಾವಿನ ಕುರಿತು ಗ್ರಾಮಸ್ಥರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ಬಂದ ಅರಣ್ಯ ಇಲಾಖೆ ಅಧಿಕಾರಿಗಳು ಪರಿಶೀಲಿಸಿದಾಗ ಇಲಾಖೆಯ ಉರುಳಲ್ಲ ಎಂದು ತಿಳಿದಿದೆ. ಅಲ್ಲದೇ ಮೃತಪಟ್ಟಿದ್ದು ಗಂಡು ಚಿರತೆ ಎಂದು ಗುರುತಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರಾಣಿ ಸಂರಕ್ಷಣೆ ಕಾಯ್ದೆ ಅಡಿ ಪ್ರಕರಣ ದಾಖಲಿಸಿಕೊಂಡು ಅರಣ್ಯ ಇಲಾಖೆ ಅಧಿಕಾರಿಗಳು ತನಿಖೆ ನಡೆಸಿದ್ದಾರೆ.

ಇದನ್ನೂ ಓದಿ : ಅಡಿಕೆ ಮಾರುಕಟ್ಟೆ: ಎಷ್ಟಿದೆ ದರ?

HOW TO APPLY : NEET-UG COUNSELLING 2023

Categories
ತೀರ್ಥಹಳ್ಳಿ

ಮತ್ತೆ ಮಹಾಬಲೇಶ್ವರ ಹೆಗಡೆ ತಂಡಕ್ಕೆ ಜಯಭೇರಿ!

ಮತ್ತೆ ಮಹಾಬಲೇಶ್ವರ ಹೆಗಡೆ ತಂಡಕ್ಕೆ ಜಯಭೇರಿ!
– ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸೌಹಾರ್ದ.ನಿ. ನಿರ್ದೇಶಕರ ಚುನಾವಣೆ
– ಹಾಲಿ ಅಧ್ಯಕ್ಷ ಮಹಾಬಲೇಶ್ವರ ಹೆಗಡೆ ಸೇರಿದಂತೆ ಎಲ್ಲ 17 ಮಂದಿ ನಿರ್ದೇಶಕರ ಅವಿರೋಧ ಆಯ್ಕೆ

NAMMUR EXPRESS NEWS
ತೀರ್ಥಹಳ್ಳಿ: ರಾಜ್ಯದ ಪ್ರತಿಷ್ಠಿತ ಸಹಕಾರಿ ಸಂಸ್ಥೆಯಲ್ಲಿ ಒಂದಾದ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸೌಹಾರ್ದ ಸಹಕಾರಿ ನಿಯಮಿತ, ತೀರ್ಥಹಳ್ಳಿ ಇದರ ನಿರ್ದೇಶಕರ ಚುನಾವಣೆ ಇದೆ ಆ.13ರಂದು ನಿಗದಿಪಡಿಸಲಾಗಿದ್ದು,ಚುನಾವಣೆಯ ಮುನ್ನ ಎಲ್ಲಾ ಸದಸ್ಯರುಗಳು ಒಮ್ಮತದ ತೀರ್ಮಾನದಂತೆ ಸಹಕಾರಿಯ ಆಡಳಿತ ಮಂಡಳಿಯ ಚುನಾವಣಾ ನಿರ್ದೇಶಕರಾಗಿ ಐದು ವರ್ಷದ ಅವಧಿಗೆ ವಿಜಯಕುಮಾರ ಸ್ವಾಮಿ ( ಪರಿಶಿಷ್ಟ ಜಾತಿ ಮೀಸಲು), ಪಾಲಯ್ಯ (ಪರಿಶಿಷ್ಟ ಪಂಗಡ ಮೀಸಲು ) ಅಲ್ತಾಫ್ ಹುಸೇನ್, (ಹಿಂದುಳಿದ ವರ್ಗಗಳ ಎ ಪ್ರವರ್ಗ ಮೀಸಲು ) ಜಗದೀಶ ಕಾಗಿನಲ್ಲಿ, (ಹಿಂದುಳಿದ ವರ್ಗಗಳ ಪ್ರವರ್ಗ ಬಿ ಮೀಸಲು), ಲಲಿತಾ ಹೆಗ್ಗಡೆ,ಆಶಾ (ಮಹಿಳಾ ಮೀಸಲು ) ಬಾಲಚಂದ್ರ ಗಜಾನನ ಭಟ್,ಸತೀಶ ರಾಮಕೃಷ್ಣ ಹೆಗಡೆ,
ಆಂಜನೇಯ, ಕರಿ ಬಸವಯ್ಯ,ತಿಮ್ಮಪ್ಪ,ಪುಟ್ಟಪ್ಪ, ಆನಂದ್, ಜಗದೀಶ, ಮಹಾಬಲೇಶ್ವರ ಹೆಗಡೆ, ಶ್ರೀಕಾಂತ್,ಕರಿಯಪ್ಪ ಇವರುಗಳು ಸಾಮಾನ್ಯ ಮೀಸಲಾತಿಯಲ್ಲಿ ಆವಿರೋಧವಾಗಿ ಆಯ್ಕೆಯಾಗಿದ್ದಾರೆ.

ರಿಟರ್ನಿಂಗ್ ಆಫೀಸರ್ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸೌಹಾರ್ದ ಸಹಕಾರಿ ಸಂಘ, ತೀರ್ಥಹಳ್ಳಿ ಹಾಗೂ ಸಹಕಾರ ಸಂಘಗಳ ಸಹಾಯಕ ನಿಬಂಧಕರು, ಉಪ ವಿಭಾಗ ಶಿವಮೊಗ್ಗ ರವರ ಕಾರ್ಯಾಲಯ ಸೌಹಾರ್ದ ಸಹಕಾರಿ ಕಾಯ್ದೆ 2004ರ ಹಾಗೂ ನಿಯಮಗಳು 5ಎಲ್ ರಲ್ಲಿನ ಉಪಬಂಧಾನುಸಾರ ಚುನಾವಣೆ ಫಲಿತಾಂಶವನ್ನು ಘೋಷಣೆ ಮಾಡಿದೆ.

ಇದನ್ನೂ ಓದಿ : ಅಡಿಕೆ ಮಾರುಕಟ್ಟೆ: ಎಷ್ಟಿದೆ ದರ?

HOW TO APPLY : NEET-UG COUNSELLING 2023

Categories
ಚಿಕ್ಕಮಗಳೂರು

ಎನ್. ಆರ್. ಪುರ: ಬಸ್ಸಿನ ಮೇಲೆ ಬಿದ್ದ ಮರ: ಪಾರಾದ ಪ್ರಯಾಣಿಕರು!

ಎನ್. ಆರ್. ಪುರ: ಬಸ್ಸಿನ ಮೇಲೆ ಬಿದ್ದ ಮರ: ಪಾರಾದ ಪ್ರಯಾಣಿಕರು!
– ಕೊಟ್ಟಿಗೆಹಾರ: ಕಾಡಾನೆ ದಾಳಿಯಿಂದ ಬಚಾವ್!
– ಶಿವಮೊಗ್ಗದಲ್ಲಿ ಬಸ್ಸು, ಕಾರು ಡಿಕ್ಕಿ: ಓರ್ವನಿಗೆ ಗಾಯ

NAMMUR EXPRESS NEWS
ಚಿಕ್ಕಮಗಳೂರು: ಚಾಲಕನ ನಿಯಂತ್ರಣ ತಪ್ಪಿ ಸರಕಾರಿ ಬಸ್ಸು ರಸ್ತೆ ಬದಿಯಲ್ಲಿದ್ದ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಬಸ್ಸಿನ ಮೇಲೆ ಮರ ಬಿದ್ದ ಘಟನೆ ಎನ್.ಆರ್.ಪುರ ತಾಲೂಕಿನ ಸೀಕೆ ಗ್ರಾಮದಲ್ಲಿ ಮಂಗಳವಾರ ಬೆಳಿಗ್ಗೆ ನಡೆದಿದೆ. ಎನ್.ಆರ್.ಪುರದಿಂದ ಬೆಳಗ್ಗೆ 6 ಗಂಟೆಗೆ ಹೊರಟಿದ್ದ ಬಸ್ಸು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯಲ್ಲಿದ್ದ ಮರಕ್ಕೆ ಗುದ್ದಿದೆ. ಪರಿಣಾಮ ಮರ ಬಸ್ಸಿನ ಮೇಲೆ ಬಿದ್ದು ಕೆಲವು ಪ್ರಯಾಣಿಕರು ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ.
ಬಸ್ಸಿನಲ್ಲಿ ಸುಮಾರು 28 ಜನ ಪ್ರಯಾಣಿಕರಿದ್ದರು ಇದರಲ್ಲಿ 10-12 ಪ್ರಯಾಣಿಕರಿಗೆ ಸಣ್ಣ-ಪುಟ್ಟ ಗಾಯಗಳಾಗಿ ಅಪಾಯದಿಂದ ಪಾರಾಗಿದ್ದಾರೆ. ಗಾಯಾಳುಗಳನ್ನು ಎನ್.ಆರ್.ಪುರ ಹಾಗೂ ಬಾಳೆಹೊನ್ನೂರು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಕೊಟ್ಟಿಗೆಹಾರ: ಕಾಡಾನೆ ದಾಳಿಯಿಂದ ಬಚಾವ್!

ಮೂಡಿಗೆರೆಯ ಮೇಗೂರಿನ ಅತ್ತಿಗುಣಿ ಬಳಿ ಕಾಡಾನೆ ಕಾಡಿಗಟ್ಟುವ ಕಾರ್ಯಾಚರಣೆ ವೇಳೆ ಕಾಡಾನೆ ಅಟ್ಟಿಸಿಕೊಂಡು ಬಂದಿದ್ದು ಅರಣ್ಯ ಅಧಿಕಾರಿಗಳು ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ. ಮಲೆಮನೆ ಮೇಗೂರು ಆಲೇಕಾನ್ ಗ್ರಾಮದಲ್ಲಿ ಕಾಡಾನೆ ಹಾವಳಿ ಹೆಚ್ಚಾದ ಹಿನ್ನಲೆಯಲ್ಲಿ ಆನೆ ಕಾರ್ಯ ಪಡೆಯ ಉಪವಲಯ ಅರಣ್ಯಾಧಿಕಾರಿ ಸುಹಾಸ್, ಕಿರಣ್ ಕುಮಾರ್, ದೀಕ್ಷಿತ್, ಕಾರ್ತಿಕ್, ಅಶ್ವಿನ್, ಕರ್ಣ, ಗಸ್ತು ಅಧಿಕಾರಿ ಪರಮೇಶ್ ಗ್ರಾಮಸ್ಥರೊಂದಿಗೆ ಸೋಮವಾರ ಕಾಡಾನೆ ಕಾಡಿಗಟ್ಟುವ ಕಾರ್ಯಾಚರಣೆ ನಡೆಸುವ ವೇಳೆ ಮೇಗೂರಿನ ಅತ್ತಗುಣಿ ಸಮೀಪ ಕಾಡಾನೆ ಅಟ್ಟಿಸಿಕೊಂಡು ಬಂದಿದ್ದು ಅರಣ್ಯ ಅಧಿಕಾರಿಗಳು ಕೂದಲೆಳೆಯಲ್ಲಿ ಪಾರಾಗಿದ್ದಾರೆ.

ಶಿವಮೊಗ್ಗದಲ್ಲಿ ಬಸ್ಸು, ಕಾರು ಡಿಕ್ಕಿ: ಓರ್ವನಿಗೆ ಗಾಯ

ಕಾರಿಗೆ ಖಾಸಗಿ ಬಸ್‌ ಡಿಕ್ಕಿಯಾಗಿ ಕಾರು ಚಾಲಕ ಗಾಯಗೊಂಡ ಘಟನೆ ಸವಳಂಗ ರಸ್ತೆಯ ಮೇಲಿನ ಕುಂಚೇನಹಳ್ಳಿ ಬಳಿ ಘಟನೆ ಸಂಭವಿಸಿದೆ. ಅಭಿಷೇಕ್ ಎಂಬುವವರು ಶಿವಮೊಗ್ಗದಿಂದ ಸೊರಬ ತಾಲೂಕು ಉದ್ರಿ ಗ್ರಾಮಕ್ಕೆ ತೆರಳುತ್ತಿದ್ದಾಗ ಅಪಘಾತವಾಗಿದೆ. ಎದುರಿನಿಂದ ಬಂದ ಖಾಸಗಿ ಬಸ್ ಡಿಕ್ಕಿ ಹೊಡೆದಿದ್ದು ಕಾರಿನ ಮುಂಭಾಗ ಜಖಂ ಆಗಿದೆ. ಅಭಿಷೇಕ್ ಮೈಕೈಗೆ ನೋವಾಗಿದೆ. ಮೇಲಿನ ಕುಂಚೇನಹಳ್ಳಿ ಗ್ರಾಮಸ್ಥರು, ಸ್ನೇಹಿತನ ನೆರವಿನೊಂದಿಗೆ ಅಭಿಷೇಕ್ ಶಿವಮೊಗ್ಗಕ್ಕೆ ತಲುಪಿದ್ದು, ಮರುದಿನ ಮೆಗ್ಗಾನ್ ಆಸ್ಪತ್ರೆ ದಾಖಲಾಗಿದ್ದರು. ಖಾಸಗಿ ಬಸ್‌ ಚಾಲಕನ ಅಜಾಗರೂಕತೆಯ ಚಾಲನೆಯೆ ಘಟನೆಗೆ ಕಾರಣ ಎಂದು ಆರೋಪಿಸಲಾಗಿದೆ. ಶಿವಮೊಗ್ಗ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ : ಅಡಿಕೆ ಮಾರುಕಟ್ಟೆ: ಎಷ್ಟಿದೆ ದರ?

HOW TO APPLY : NEET-UG COUNSELLING 2023

Categories
ತೀರ್ಥಹಳ್ಳಿ

ದೇಶದ ಅಧಃಪತನಕ್ಕೆ ಶತ್ರುಗಳು ಯುದ್ಧ ಮಾಡಬೇಕಿಲ್ಲ, ಅಲ್ಲಿಯ ಸಂಸ್ಕೃತಿ ಹಾಳು ಮಾಡಿದ್ರೆ ಸಾಕು!

ದೇಶದ ಅಧಃಪತನಕ್ಕೆ ಶತ್ರುಗಳು ಯುದ್ಧ ಮಾಡಬೇಕಿಲ್ಲ, ಅಲ್ಲಿಯ ಸಂಸ್ಕೃತಿ ಹಾಳು ಮಾಡಿದ್ರೆ ಸಾಕು!
– ವಿದ್ಯಾರ್ಥಿಗಳಿಗೆ ವಿನುತಾ ಮುರಳೀಧರ ಆತಂಕ
– ರೋಟರಿ ಮೌಲ್ಯಾಧಾರಿತ ಶಿಕ್ಷಣ ಕಾರ್ಯಕ್ರಮ

NAMMUR EXPRESS NEWS
ತೀರ್ಥಹಳ್ಳಿ: ಮೌಲ್ಯಾಧಾರಿತ ಶಿಕ್ಷಣದ ಕೊರತೆಯಿಂದ ಸಮಾಜದಲ್ಲಿ ಅಸಭ್ಯ ವರ್ತನೆ, ದೇಶ ವಿರೋಧಿ ಚಟುವಟಿಕೆ, ವಿದ್ವಂಸಕ ಕೃತ್ಯ, ವಿಕೃತ ಮನೋವ ಸ್ಥಿತಿ ಸಮಾಜಕ್ಕೆ ಮಾರಕವಾಗುತ್ತದೆ ಒಟ್ಟಿನಲ್ಲಿ ಸಮಾಜಕ್ಕೆ ಪೂರಕವಲ್ಲದ ನಡತೆಗಳು ಎದ್ದು ಕಾಣುತ್ತಿವೆ ಎಂದು ಸರ್ಕಾರಿ ಬಾಲಕಿಯರ ಪ್ರೌಢಶಾಲೆ ತೀರ್ಥಹಳ್ಳಿಯ ಆಪ್ತ ಸಮಾಲೋಚಕಿ ವಿನುತಾ ಮುರಳೀಧರ ಹೇಳಿದ್ದಾರೆ. ರೋಟರಿ ಕ್ಲಬ್ ತೀರ್ಥಹಳ್ಳಿ ಆಯೋಜಿಸಿದ ಮೌಲ್ಯಾಧಾರಿತ ಶಿಕ್ಷಣ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.

ವಿದ್ಯಾರ್ಥಿಗಳಾದ ತಾವೆಲ್ಲರೂ ಬದ್ಧತೆಯನ್ನು ಬೆಳೆಸಿಕೊಳ್ಳಿ, ವಿನಯ ಹಾಗೂ ವಿದೇಯತೆಗಳನ್ನು ರೂಡಿಸಿಕೊಳ್ಳಿ, ತಂದೆ ತಾಯಿಗಳ ಬಗ್ಗೆ, ಗುರುಗಳ ಬಗ್ಗೆ ಭಯ ಭಕ್ತಿ ಇರಬೇಕು. ಪ್ರಾಮಾಣಿಕತೆ ಚಿಕ್ಕವರಿಂದಲೇ ಬೆಳೆಸಿಕೊಳ್ಳಬೇಕು, ದೇಶದ ಬಗ್ಗೆ ಭಕ್ತಿ ಹಾಗೂ ಯಾರ ಮೇಲೆಯೂ ದ್ವೇಶದ ಭಾವನೆ ಬೆಳೆಸಿಕೊಳ್ಳಬಾರದು. ಅವಿಭಕ್ತ ಕುಟುಂಬಗಳು ಇದ್ದಾಗ ಮಕ್ಕಳು ಮೌಲ್ಯಗಳನ್ನು ಪಡೆಯುತ್ತಿದ್ದರು. ಈಗ ಅದರ ಕೊರತೆ ಎದ್ದು ಕಾಣುತ್ತಿದೆ ಎಂದರು.

ಮಕ್ಕಳು ಮೌಲ್ಯಗಳನ್ನು ಪಡೆಯುವಲ್ಲಿ ಶಾಲೆ, ಕುಟುಂಬ ,ಸಮಾಜ ಮತ್ತು ಸುತ್ತಮುತ್ತಲಿನ ಪರಿಸರ ಪೂರಕವಾಗಿರಬೇಕು. ಸಹಾಯ ಅನುಕಂಪ ಹಾಗೂ ಆತ್ಮ ವಿಶ್ವಾಸಗಳನ್ನು ಕಲಿಯಬಹುದು. ಒಂದು ದೇಶದ ಅಧಃಪತನಕ್ಕೆ ಶತ್ರುಗಳು ಯುದ್ಧ ಮಾಡಬೇಕಿಲ್ಲ, ಅಲ್ಲಿಯ ಸಂಸ್ಕೃತಿಯನ್ನು ಹಾಳು ಮಾಡಿದರೆ ಇಡೀ ದೇಶವೇ ಸರ್ವನಾಶವಾಗುತ್ತದೆ. ಸದ್ಗುಣಗಳು ನಮ್ಮನ್ನು ಕಾಪಾಡುತ್ತದೆ ಸಂಪತ್ತನ್ನು ನಾವೇ ಕಾಪಾಡಬೇಕು ಎಂದು ಶ್ರೀಮತಿ ವಿನುತ ಮುರಳಿದರ ಇವರು ಮಕ್ಕಳನ್ನು ಉದ್ದೇಶಿಸಿ ಮಾತನಾಡಿದರು. ಮೌಲ್ಯ ಆಧಾರಿತ ಶಿಕ್ಷಣ ಇದು ರೋಟರಿ ಜಿಲ್ಲೆಯ ಪ್ರಮುಖ ಕಾರ್ಯಕ್ರಮವಾಗಿರೋದು ಸಂತೋಷ ತಂದಿದೆ ಎಂದು ಈ ಸಂದರ್ಭದಲ್ಲಿ ತಿಳಿಸಿದರು.

ಸಭೆಯ ಅಧ್ಯಕ್ಷತೆಯನ್ನು ಉಪ ಪ್ರಾಂಶುಪಾಲ ನಾಗಪ್ಪ ವಹಿಸಿದ್ದರು. ವೇದಿಕೆಯಲ್ಲಿ ರೋಟರಿ ಅಧ್ಯಕ್ಷ ರೊ. ಭರತ್ ಕುಮಾರ್,ರೊ.ಕೆ ಪಿ ಎಸ್ ಸ್ವಾಮಿ, ಜಿಲ್ಲಾ ಚೇರ್ಮನ್’ಮೌಲ್ಯಾಧಾರಿತ ಶಿಕ್ಷಣ’, ರೊ ಚಂದ್ರಪ್ಪ ಕೇ ಟಿ., ವಲಯ ಸೇನಾನಿ, ರೊ ಎಂ ಆರ್ ಮಂಜುನಾಥ್ ಇತರರು ಇದ್ದರು.

ಇದನ್ನೂ ಓದಿ : ಅಡಿಕೆ ಮಾರುಕಟ್ಟೆ: ಎಷ್ಟಿದೆ ದರ?

HOW TO APPLY : NEET-UG COUNSELLING 2023

Categories
ತೀರ್ಥಹಳ್ಳಿ

ತೀರ್ಥಹಳ್ಳಿ ಹಾದಿಗಲ್ಲು ಗ್ರಾಪಂ ಕೈವಶ!

ತೀರ್ಥಹಳ್ಳಿ ಹಾದಿಗಲ್ಲು ಗ್ರಾಪಂ ಕೈವಶ!
– ಬಿಜೆಪಿ ಅಧಿಕಾರದಲ್ಲಿದ್ದ ಗ್ರಾಮ ಪಂಚಾಯತ್
– ಅಧ್ಯಕ್ಷರಾಗಿ ವಸಂತಿ ಶ್ರೀನಿವಾಸ್, ಉಪಾಧ್ಯಕ್ಷರಾಗಿ ಕಾಂಗ್ರೆಸ್ ಮುಖಂಡ ಹೊಸ್ಕೇರಿ ರವಿಕುಮಾರ್ ಆಯ್ಕೆ

NAMMUR EXPRESS NEWS
ತೀರ್ಥಹಳ್ಳಿ ತಾಲೂಕು ಹಾದಿಗಲ್ಲು ಗ್ರಾಮಪಂಚಾಯತ್ ನಲ್ಲಿ ಇಂದು ನಡೆದ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಚುನಾವಣೆಯಲ್ಲಿ 8 ಸಂಖ್ಯಾಬಲದ ಸದಸ್ಯರಲ್ಲಿ 6 ಬಿಜೆಪಿ , 2 ಕಾಂಗ್ರೆಸ್ ಸದಸ್ಯರಿದ್ದು ಕ್ಷೇತ್ರ ಮತ್ತು ಸ್ಥಳೀಯ ಕಾಂಗ್ರೆಸ್ ಮುಖಂಡರುಗಳ ತಂತ್ರಗಾರಿಕೆಯಿಂದ ಕಾಂಗ್ರೆಸ್ ಕೈವಶವಾಗಿದೆ. ಅಧ್ಯಕ್ಷರಾಗಿ ವಸಂತಿ ಶ್ರೀನಿವಾಸ್ ಹಾಗೂ ಉಪಾಧ್ಯಕ್ಷರಾಗಿ ಯುವ ಕಾಂಗ್ರೆಸ್ ಮುಖಂಡರಾದ ಹೊಸ್ಕೇರಿ ರವಿಕುಮಾರ್ ಅವರು ಆಯ್ಕೆಯಾಗಿದ್ದಾರೆ..

ಈ ಸಂಧರ್ಭದಲ್ಲಿ ಕಾಂಗ್ರೆಸ್ ಗ್ರಾಮಾಂತರ ಬ್ಲಾಕ್ ಅಧ್ಯಕ್ಷರಾದ ಮುಡುಬ ರಾಘವೇಂದ್ರ , ಮುಖಂಡರಾದ ಆಮ್ರಪಾಲಿ ಸುರೇಶ್ , ಯುವ ಕಾಂಗ್ರೆಸ್ ಅಧ್ಯಕ್ಷರಾದ ಅಮರನಾಥ್ ಶೆಟ್ಟಿ , ಮುಖಂಡರುಗಳಾದ ಕಂಪದಗದ್ದೆ ಸುರೇಶ ,ಯುವಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಶ್ವಲ್ ಗೌಡ , ಸಾಮಾಜಿಕ ಜಾಲತಾಣ ಅಧ್ಯಕ್ಷ ಶ್ರೇಯಸ್ ರಾವ್ , ನಾಗೇಶ್ ಹುಂಚದಕಟ್ಟೆ , ಸತೀಶ್ ಕಟ್ಟೆಕೊಪ್ಪ , ಯುವ ನಾಯಕರುಗಳಾದ ನಾಗೇಂದ್ರ ಕುರುವಳ್ಳಿ ಹಾಗೂ ಎಲ್ಲಾ ಸ್ಥಳೀಯ ಮುಖಂಡರುಗಳು ಮತ್ತು ಗ್ರಾಮಸ್ಥರುಗಳು ಉಪಸ್ಥಿತರಿದ್ದರು..

ಇದನ್ನೂ ಓದಿ : ಅಡಿಕೆ ಮಾರುಕಟ್ಟೆ: ಎಷ್ಟಿದೆ ದರ?

HOW TO APPLY : NEET-UG COUNSELLING 2023

Categories
ಕರಾವಳಿ ಕಾರ್ಕಳ

ಸಿಎ ಅರ್ಹತಾ ಪರೀಕ್ಷೆಯಲ್ಲಿ ಕ್ರಿಯೇಟಿವ್‌ ಕಾಲೇಜು ಸಾಧನೆ

ಸಿಎ ಅರ್ಹತಾ ಪರೀಕ್ಷೆಯಲ್ಲಿ ಕ್ರಿಯೇಟಿವ್‌ ಕಾಲೇಜು ಸಾಧನೆ
– ಪಿಯು ಕಾಲೇಜಿನ ವಿದ್ಯಾರ್ಥಿಗಳ ಅತ್ಯುತ್ತಮ ಸಾಧನೆ
– ಪ್ರಥಮ ಪಿಯುಸಿಯಿಂದಲೇ ವಿಶೇಷ ತರಬೇತಿ ನೀಡುತ್ತಿರುವ ಸಂಸ್ಥೆ

NAMMUR EXPRESS NEWS
ಇನ್ಸ್ಟಿಟ್ಯೂಟ್‌ ಆಫ್‌ ಚಾರ್ಟೆರ್ಡ್‌ ಅಕೌಂಟೆಂಟ್‌ ಆಫ್‌ ಇಂಡಿಯಾ ಸಂಸ್ಥೆಯವರು ನಡೆಸಿದ ಸಿಎ (CA) ಮೊದಲ ಹಂತದ ಅರ್ಹತಾ ಪರೀಕ್ಷೆಯಲ್ಲಿ ಕ್ರಿಯೇಟಿವ್‌ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಸಾಧನೆ ಮಾಡಿದ್ದಾರೆ. ಕ್ರಿಯೇಟಿವ್ ಕಾಲೇಜಿನ ವಿದ್ಯಾರ್ಥಿಗಳಾದ ಸುದೀಪ್‌ ಕೆ, ಸುಮಾ, ಸುಚಿತಾ ಬಿ ಸಿ, ಅನಘಾ, ಬಿ ಸಿದ್ದಾರ್ಥ್‌ ಪೈ, ಹೆಗ್ಡೆ ಅನಿರುದ್ಧ್‌ ರಮೇಶ್‌, ಅಭಿಷೇಕ್‌ ಪಿ ಎಸ್‌, ವಿಂದ್ಯಾ ವಿನಯ್‌ ಹೆಗಡೆ, ಎಸ್‌ ಅನುರಾಜ್‌ ಇವರು ಸಿ ಎ ಫೌಂಡೇಶನ್‌ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿ ಸಿ ಎ ಇಂಟರ್‌ ಮೀಡಿಯೆಟ್‌ ಗೆ ಅರ್ಹತೆ ಗಳಿಸಿದ್ದಾರೆ. ಸುದೀಪ್‌ ಕೆ 261 ಅಂಕ, ಸುಮಾ 250 ಅಂಕ, ಸುಚಿತಾ ಬಿ ಸಿ 223 ಅಂಕ, ಅನಘಾ 219 ಅಂಕ, ಬಿ ಸಿದ್ದಾರ್ಥ್‌ ಪೈ 214 ಅಂಕ, ಹೆಗ್ಡೆ ಅನಿರುದ್ಧ್‌ ರಮೇಶ್‌ 210 ಅಂಕ, ಅಭಿಷೇಕ್‌ ಪಿ ಎಸ್‌ 209 ಅಂಕ, ವಿಂದ್ಯಾ ವಿನಯ್‌ ಹೆಗಡೆ 203 ಅಂಕ, , ಎಸ್‌ ಅನುರಾಜ್‌ 200 ಅಂಕವನ್ನು ಗಳಿಸುವ ಮೂಲಕ ಅಮೋಘ ಸಾಧನೆಗೈದಿದ್ದಾರೆ.

ಪ್ರಥಮ ಪಿಯುಸಿಯಿಂದಲೇ ವಿಶೇಷ ತರಬೇತಿ ನೀಡುತ್ತಿರುವ ಸಂಸ್ಥೆ

ಕಾರ್ಕಳ ಕ್ರಿಯೇಟಿವ್‌ ಕಾಲೇಜಿನಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಪ್ರಥಮ ಪಿಯುಸಿಯಿಂದಲೇ ವಿಶೇಷ ತರಬೇತಿಯನ್ನೂ ಅತ್ಯಂತ ಕಡಿಮೆ ಶುಲ್ಕದೊಂದಿಗೆ ನುರಿತ ಉಪನ್ಯಾಸಕರಿಂದ ನೀಡಲಾಗುತ್ತಿದೆ. ಸಂಸ್ಥೆಯ ಹೆಮ್ಮೆಯ ಸಾಧಕ ವಿದ್ಯಾರ್ಥಿಗಳನ್ನು ಕ್ರಿಯೇಟಿವ್‌ ಶಿಕ್ಷಣ ಪ್ರತಿಷ್ಠಾನದ ಆಡಳಿತ ಮಂಡಳಿ, ಪ್ರಾಂಶುಪಾಲರು, ವಾಣಿಜ್ಯ ವಿಭಾಗದ ಎಲ್ಲ ಉಪನ್ಯಾಸಕರು ಸಂಯೋಜಕರು ಅಭಿನಂದಿಸಿದ್ದಾರೆ.

ಇದನ್ನೂ ಓದಿ : ಅಡಿಕೆ ಮಾರುಕಟ್ಟೆ: ಎಷ್ಟಿದೆ ದರ?

HOW TO APPLY : NEET-UG COUNSELLING 2023