Categories
ರಾಷ್ಟ್ರೀಯ ವಾರ್ತೆ

ಮನೆ ಕಟ್ಟುವವರಿಗೆ ಗುಡ್‌ನ್ಯೂಸ್..!

ಮನೆ ಕಟ್ಟುವವರಿಗೆ ಗುಡ್‌ನ್ಯೂಸ್..!
– ಸಿಮೆಂಟ್ ಬೆಲೆಯಲ್ಲಿ ಕೊಂಚ ಇಳಿಕೆ ಸಾಧ್ಯತೆ
– ಬೇಡಿಕೆ ಕಡಿಮೆ ಹಿನ್ನೆಲೆಯಲ್ಲಿ ಸಿಮೆಂಟ್ ಬೆಲೆ ಇಳಿಕೆ

NAMMUR EXPRESS NEWS
ದೇಶದಲ್ಲಿ ಸಿಮೆಂಟ್ ಬೆಲೆಯಲ್ಲಿ ಇಳಿಕೆಯಾಗುವ ಸಾಧ್ಯತೆ ಇರುವುದರಿಂದ ಈಗ ಮನೆ ಕಟ್ಟುವುದು ಸ್ವಲ್ಪ ಅಗ್ಗವಾಗಬಹುದು. ಮುಂಬರುವ ಲೋಕಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು, ದೇಶದಲ್ಲಿ ನಿರ್ಮಾಣ ಚಟುವಟಿಕೆಗಳಲ್ಲಿ ಬಿರುಸು ಉಂಟಾಗಲಿದೆ ಮತ್ತು ಅದರ ಪರಿಣಾಮವು ಸಿಮೆಂಟ್‌ಗೆ ಹೆಚ್ಚುತ್ತಿರುವ ಬೇಡಿಕೆಯ ರೂಪದಲ್ಲಿ ಕಂಡುಬರುತ್ತದೆ. ಆದಾಗ್ಯೂ, ಅದರ ಬೆಲೆಗಳು ಪ್ರಸ್ತುತ ತಿಂಗಳು ಮತ್ತು ಮುಂಬರುವ ಎರಡು ತಿಂಗಳಲ್ಲಿ ಕಡಿಮೆಯಾಗುವುದನ್ನು ಕಾಣಬಹುದು.

ಕಳೆದ ಕೆಲವು ತಿಂಗಳುಗಳಲ್ಲಿ, ದೇಶದಲ್ಲಿ ಸಿಮೆಂಟ್‌ನ ಬೇಡಿಕೆಯಲ್ಲಿ ಏರಿಕೆ ಕಂಡುಬಂದಿದೆ ಮತ್ತು ಇದರ ಹೊರತಾಗಿಯೂ ಅದರ ಬೆಲೆಯಲ್ಲಿ ಯಾವುದೇ ಜಿಗಿತ ಕಂಡುಬಂದಿಲ್ಲ. ಈ ವಲಯದ ಹೂಡಿಕೆದಾರರಿಗೆ ಇದು ಆತಂಕದ ವಿಷಯವಾದರೂ, ಮನೆ ನಿರ್ಮಿಸುವವರು ಮತ್ತು ನಿರ್ಮಾಣ ಕಂಪನಿಗಳಿಗೆ ಇದು ಪರಿಹಾರದ ವಿಷಯವೆಂದು ಪರಿಗಣಿಸಬಹುದು.
ಸಿಮೆಂಟ್ ಬೆಲೆ ಏಕೆ ಕಡಿಮೆಯಾಗುತ್ತದೆ: ವರದಿಯ ಪ್ರಕಾರ, ಪ್ರಸ್ತುತ ದೇಶದಲ್ಲಿ ಮಾನ್ಸೂನ್ ಸೀಸನ್ ಮುಂದುವರೆದಿದೆ. ಈ ಸಮಯದಲ್ಲಿ ನಿರ್ಮಾಣ ಚಟುವಟಿಕೆಗಳು ಕಡಿಮೆಯಾಗುತ್ತವೆ. ಗಮನಾರ್ಹವಾಗಿ, ಮಳೆಯಿಂದಾಗಿ, ಈ 3-4 ತಿಂಗಳುಗಳು ಸಿಮೆಂಟ್ ಕ್ಷೇತ್ರಕ್ಕೆ ಸ್ವಲ್ಪ ನಿಧಾನವಾಗಿರುತ್ತವೆ ಮತ್ತು ಈ ಅವಧಿಯಲ್ಲಿ ಪ್ರತಿ ವರ್ಷ ಸಿಮೆಂಟ್ ಬೆಲೆಯಲ್ಲಿ ಕುಸಿತವನ್ನು ಕಾಣಬಹುದು. ಇದಲ್ಲದೇ ಹಬ್ಬ ಹರಿದಿನಗಳಿಗೂ ಮುನ್ನವೇ ಕಟ್ಟಡ ನಿರ್ಮಾಣ ಕಾಮಗಾರಿಯಲ್ಲಿ ಇಳಿಕೆಯಾಗಿದ್ದು, ಇದರ ಪರಿಣಾಮ ಸಿಮೆಂಟ್ ಬೆಲೆಯಲ್ಲಿ ಕುಸಿತ ಕಾಣಬಹುದಾಗಿದೆ.

ಇದನ್ನೂ ಓದಿ : ರೈತರಿಗೆ ಖುಷ್: ಕಾಳು ಮೆಣಸು ದರ ಏರಿಕೆ!

HOW TO APPLY : NEET-UG COUNSELLING 2023

Categories
ರಾಜ್ಯ

ಸೇತುವೆಯಿಂದ ನದಿಗೆ ಬೀಳುವಾಗ 50 ಅಡಿ ಪೈಪನ್ನೇ ಹಿಡಿದು ಜೀವ ಉಳಿಸಿಕೊಂಡ ಬಾಲಕಿ!

ಸೇತುವೆಯಿಂದ ನದಿಗೆ ಬೀಳುವಾಗ 50 ಅಡಿ ಪೈಪನ್ನೇ ಹಿಡಿದು ಜೀವ ಉಳಿಸಿಕೊಂಡ ಬಾಲಕಿ!
– ಮಹಿಳೆಯ ಜೊತೆಗೆ ಇಬ್ಬರು ಮಕ್ಕಳನ್ನು ಸೇತುವೆ ಮೇಲಿಂದ ನದಿಗೆ ತಳ್ಳಿದ ಪ್ರಿಯಕರ
– ಸೆಲ್ಫಿ ತೆಗೆಯೋಣ ಎಂದು ನಿಲ್ಲಿಸಿ ತುಂಬಿದ ನದಿಗೆ ದೂಡಿದ!

NAMMUR EXPRESS NEWS
ಗುಂಟೂರು: ಗಂಡನಿಂದ ದೂರವಾದ ಮಹಿಳೆಯ ಜತೆ ಅಕ್ರಮ ಸಂಬಂಧ ಹೊಂದಿದ್ದ ಪ್ರಿಯಕರನೇ ಆ
ಮಹಿಳೆ ಮತ್ತು ಆಕೆಯ ಇಬ್ಬರು ಮಕ್ಕಳನ್ನು ಸೇತುವೆ ಮೇಲಿಂದ ನದಿಗೆ ತಳ್ಳಿ ಸಾಯಿಸುವ ಪ್ಲಾನ್ ಮಾಡಿದ್ದು ಇದೀಗ 13 ವರ್ಷದ ಬಾಲಕಿ ಸೇತುವೆ ಮೇಲಿಂದ ಬೀಳುವಾಗ ಪ್ಲಾಸ್ಟಿಕ್ ಪೈಪ್ ಹಿಡಿದು ಬದುಕಿ ಬಂದಿದ್ದಾಳೆ.
ಪ್ರಿಯಕರನೇ ಮಹಿಳೆ,ಒಂದು ವರ್ಷದ ಮಗು ಹಾಗೂ ಹದಿಮೂರು ವರ್ಷದ ಬಾಲಕಿಯನ್ನು ಉಪಾಯವಾಗಿ ಕರೆದುಕೊಂಡು ಹೋಗಿ ಸೇತುವೆಯಿಂದ ಕೆಳಕ್ಕೆ ತಳ್ಳಿದ ತಳ್ಳಿದ ಘಟನೆ ಆಂಧ್ರ ಪ್ರದೇಶದ ಗುಂಟೂರು ಜಿಲ್ಲೆಯಲ್ಲಿ ನಡೆದಿದೆ. ತಾಯಿ ಹಾಗೂ ಒಂದು ವರ್ಷದ ಮಗು ನದಿಯ ನೀರಿನ ಸೆಳೆತಕ್ಕೆ ಕೊಚ್ಚಿ ಹೋಗಿ ನಾಪತ್ತೆಯಾಗಿದ್ದಾರೆ.
13 ವರ್ಷದ ಬಾಲಕಿ ನದಿಗೆ ಬೀಳುವ ಸಂಧರ್ಭದಲ್ಲಿ ಸೇತುವೆಗೆ ಅಳವಡಿಸಿದ ಪೈಪನ್ನು ಹಿಡಿದು ಕೊಂಡು ಸಾಕಷ್ಟು ಸಮಯ ನೇತಾಡಿ ಪೋಲಿಸರ ಕಾರ್ಯಚರಣೆಯಿಂದ ಬದುಕುಳಿದಿದ್ದಾಳೆ.

ತಾನು ಒಂದು ಕೈಯಲ್ಲಿ ಪೈಪ್ ಹಿಡಿದುಕೊಂಡು ನೇತಾಡುತ್ತಲೆ ಬಾಲಕಿ ಮತ್ತೊಂದು ಕೈಯಿಂದ ತನ್ನ ಜೇಬಿನಲ್ಲಿದ್ದ ಅಮ್ಮನ ಮೊಬೈಲ್ ಅನ್ನು ಹೊರತೆಗೆದುಕೊಂಡು ಪೊಲೀಸರಿಗೆ ಕರೆ ಮಾಡಿದ್ದಾಳೆ. ಸುದ್ದಿ ತಿಳಿಯುತ್ತಿದ್ದಂತೆ ತಕ್ಷಣವೇ ಸ್ಥಳಕ್ಕೆ ಆಗಮಿಸಿದ ಪೊಲೀಸರು ಬಾಲಕಿಯನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪಿಕ್ನಿಕ್ ಎಂದು ಭಾನುವಾರ ಇಬ್ಬರು ಮಕ್ಕಳು ಹಾಗೂ ಸುಹಾಸಿನಿಯನ್ನು ಕರೆದುಕೊಂಡು ಹೋಗಿದ್ದ ಸುರೇಶ್, ಹತ್ಯೆಗೆ ಸ್ಕೆಚ್ ಹಾಕಿದ್ದು ಹಗಲು ಎಲ್ಲಾ ಸುತ್ತಾಡಿಸಿ ತಿನ್ನಿಸಿ ಭಾನುವಾರ ಬೆಳಗಿನ ಜಾವ ಹೋಗುವ ಹಾದಿಯಲ್ಲಿ ಗೋದಾವರಿ ನದಿಯ ಸೇತುವೆ ಮೇಲೆ ಕಾರು ನಿಲ್ಲಿಸಿದ್ದಾನೆ. ಸುರೇಶ ನಾವೆಲ್ಲರೂ ಸೆಲ್ಸಿ ಫೋಟೊ ತೆಗೆದುಕೊಳ್ಳೋಣ ಎಂದಿದ್ದಾನೆ. ಕಾರಿನಿಂದ ಇಳಿದ ಸುಹಾನಿಸಿ ಹಾಗೂ ಇಬ್ಬರು ಮಕ್ಕಳನ್ನು ನಿಲ್ಲಿಸಿ ತಾನು ಫೋಟೋ ತೆಗೆಯುವುದಾಗಿ ಹೇಳಿದ್ದಾನೆ. ಸೇತುವೆಯ ಅಂಚಿನಲ್ಲಿ ಮೂವರನ್ನು ನಿಲ್ಲಿಸಿ ನದಿಗೆ ದೂಡಿದ್ದಾನೆ. ಆರೋಪಿ ಸುರೇಶ್ ಪರಾರಿಯಾಗಿದ್ದು ಆತನ ಬಂಧನಕ್ಕೆ ಪೋಲಿಸರು ಬಲೆ ಬಿಸಿದ್ದಾರೆ.

ಇದನ್ನೂ ಓದಿ : ರೈತರಿಗೆ ಖುಷ್: ಕಾಳು ಮೆಣಸು ದರ ಏರಿಕೆ!

HOW TO APPLY : NEET-UG COUNSELLING 2023

Categories
ಉಡುಪಿ

ಸಿಐಡಿಗೆ ಉಡುಪಿ ಕಾಲೇಜಿನ ವೀಡಿಯೋ ಕೇಸ್!

ಸಿಐಡಿಗೆ ಉಡುಪಿ ಕಾಲೇಜಿನ ವೀಡಿಯೋ ಕೇಸ್!
– ಉಡುಪಿಗೆ ಬರಲಿದೆ ತನಿಖಾ ತಂಡ: ಏನಾಗುತ್ತೆ ಪ್ರಕರಣ
– ತರಾತುರಿಯಲ್ಲಿ ಸಿಐಡಿಗೆ ವರ್ಗಾಯಿಸುವ ಅಗತ್ಯ ಇತ್ತೇ?
– ಮಂಗಳೂರಲ್ಲಿ 170 ಮಂದಿ ಡಿ ಎಲ್ ರದ್ದು

NAMMUR EXPRESS NEWS
ಉಡುಪಿ: ಉಡುಪಿ ಖಾಸಗಿ ಕಾಲೇಜಿನ ವೀಡಿಯೋ ಪ್ರಕರಣದ ತನಿಖೆ ಸಿಐಡಿಗೆ ಹಸ್ತಾಂತರವಾಗಿದ್ದು ಇದೀಗ ಸಿಐಡಿ ಪೊಲೀಸರು ತನಿಖೆ ನಡೆಸಲಿದ್ದಾರೆ. ಉಡುಪಿಯ ಖಾಸಗಿ ಕಾಲೇಜುವೊಂದರ ವಿಡಿಯೋ ಪ್ರಕರಣದ ತನಿಖೆಯನ್ನು ಸಿಐಡಿಗೆ ಹಸ್ತಾಂತರಿಸಿ ರಾಜ್ಯ ಸರಕಾರ ಮಹತ್ವದ ಆದೇಶ ಹೊರಡಿಸಿದೆ. ಉಡುಪಿಯ ಖಾಸಗಿ ಕಾಲೇಜಿನಲ್ಲಿ ಜುಲೈ 18 ರಂದು ನಡೆದಿದ್ದ ವಿಡಿಯೋ ಪ್ರಕರಣ ಭಾರೀ ಚರ್ಚೆಗೆ ಗ್ರಾಸವಾಗಿದ್ದು, ಎಬಿವಿಪಿ ಬಿಜೆಪಿ ಸೇರಿದಂತೆ ಅನೇಕ ಸಂಘಟನೆಗಳು ಈ ಘಟನೆಯನ್ನು ವಿರೋಧಿಸಿ ಪ್ರತಿಭಟನೆ ಮಾಡಿದ್ದು ಕರಾವಳಿ ಶಾಸಕರ ನಿಯೋಗ ಕೂಡ ರಾಜ್ಯಪಾಲರ ಭೇಟಿ ಮಾಡಿ ಪ್ರಕರಣದ ತನಿಖೆ ಎಸ್‌ಐಟಿಗೆ ಮಾಡಬೇಕುಎಂದು ಒತ್ತಾಯಿಸಿ ರಾಜ್ಯಪಾಲರಿಗೆ ಮನವಿ ಮಾಡಿತ್ತು.
ಸಿಐಡಿ ತಂಡ ಮಂಗಳವಾರ ಉಡುಪಿಗೆ ಭೇಟಿ ನೀಡಲಿದೆ ಎಂದು ಮೂಲಗಳು ತಿಳಿಸಿವೆ. ಇನ್ನು ಈ ಪ್ರಕರಣ ಹಲವು ಆಯಾಮದಲ್ಲಿ ತನಿಖೆ ಆಗಲಿದೆ ಎನ್ನಲಾಗಿದೆ. ಉಡುಪಿ ಜಿಲ್ಲೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

ತರಾತುರಿಯಲ್ಲಿ ಸಿಐಡಿಗೆ ವರ್ಗಾಯಿಸುವ ಅಗತ್ಯ ಇತ್ತೇ?

ಉಡುಪಿ ಜಿಲ್ಲಾ ಪೊಲೀಸ್ ಇಲಾಖೆ ಖಾಸಗಿ ಪ್ಯಾರಾ ಮೆಡಿಕಲ್ ಕಾಲೇಜಿನ ವಿಡಿಯೋ ಪ್ರಕರಣದ ತನಿಖೆಯನ್ನು ನಡೆಸುತ್ತಿರುವ ಸಂದರ್ಭದಲ್ಲಿಯೇ ತರಾತುರಿಯಲ್ಲಿ ಸಿಐಡಿಗೆ ವರ್ಗಾಯಿಸುವ ಮೂಲಕ ಪ್ರಕರಣವನ್ನು ಮುಚ್ಚಿಹಾಕುವ ಹುನ್ನಾರ ರಾಜ್ಯ ಸರಕಾರ ಮಾಡುತ್ತಿದೆ ಎಂದು ಉಡುಪಿ ಶಾಸಕ ಯಶ್ ಪಾಲ್ ಸುವರ್ಣ ಹೇಳಿದ್ದಾರೆ.
ರಾಜ್ಯದಾದ್ಯಂತ ಈ ಪ್ರಕರಣದ ಬಗ್ಗೆ ತೀವ್ರ ಜನಾಕ್ರೋಶ, ಪ್ರತಿಭಟನೆಗೆ ಮಣಿದ ಸರಕಾರ ಈ ಹಿಂದೆ ತನಿಖಾಧಿಕಾರಿಯನ್ನು ಬದಲಾಯಿಸಿದ ಬಳಿಕ ಉಡುಪಿ ಜಿಲ್ಲಾ ಪೊಲೀಸ್ ಇಲಾಖೆ ತನಿಖೆ ತೀವ್ರಗೊಳಿಸಿ ಪ್ರಕರಣದ ಸಂತ್ರಸ್ಥ ಹಾಗೂ ಆರೋಪಿ ವಿದ್ಯಾರ್ಥಿನಿಯರನ್ನು ನ್ಯಾಯಾಧೀಶರ ಮುಂದೆ ಹಾಜರು ಪಡಿಸಿ ಹೇಳಿಕೆ ಪಡೆಯುವ ಮೂಲಕ ಹಲವು ಪೂರಕ ಸಾಕ್ಷ್ಯಗಳನ್ನು ಸಂಗ್ರಹಿಸಿತ್ತು. ಮಾತ್ರವಲ್ಲದೇ ಆರೋಪಿ ವಿದ್ಯಾರ್ಥಿನಿಯ ತಂದೆ ನಿಷೇಧಿತ ಪಿಎಫ್ ಐ ಸಂಘಟನೆಯ ಸಕ್ರಿಯ ಸದಸ್ಯ ಎಂಬ ಮಾಹಿತಿಗಳು ಕೂಡ ತನಿಖೆಯಲ್ಲಿ ಬೆಳಕಿಗೆ ಬಂದಿತ್ತು. ಇದೀಗ ಜಿಲ್ಲಾ ಪೊಲೀಸರ ತನಿಖೆ ಪೂರ್ಣಗೊಳ್ಳುವ ಮುನ್ನವೇ ತರಾತುರಿಯಲ್ಲಿ ಸಿಐಡಿಗೆ ವರ್ಗಾಯಿಸುವ ಮೂಲಕ ರಾಜ್ಯ ಸರಕಾರದ ನಡೆ ಮತ್ತೊಮ್ಮೆ ಗೊಂದಲ ಸೃಷ್ಟಿಸಿದೆ.
ಪ್ರಕರಣದ ಆರಂಭದ ದಿನದಿಂದಲೂ ಪೊಲೀಸ್ ಇಲಾಖೆಗೆ ಪ್ರತಿ ಹಂತದಲ್ಲೂ ಪ್ರಭಾವ ಬೀರುವ ಯತ್ನ ಮಾಡಿದ್ದ ಸರಕಾರ ಇದೀಗ ಆರೋಪಿಗಳನ್ನು ರಕ್ಷಿಸುವ ಸಲುವಾಗಿಯೇ ಸಿಐಡಿಗೆ ವರ್ಗಾಯಿಸಿದೆ ಎಂದು ನೇರ ಆರೋಪ ಮಾಡಿದ್ದಾರೆ.

ಮಂಗಳೂರಲ್ಲಿ 170 ಮಂದಿ ಡಿ ಎಲ್ ರದ್ದು

ಮಂಗಳೂರು: ಸಂಚಾರಿ ನಿಯಮ ಉಲ್ಲಂಘನೆ ಮಾಡಿದವರಿಗೆ ಈಗ ಡಿ ಎಲ್ ರದ್ದು ಶಿಕ್ಷೆ ಆಗಲಿದೆ. ಸುಮಾರು 170 ಮಂದಿಯ ಡಿಎಲ್ ರದ್ದು ಮಾಡಲಾಗಿದೆ. 24 ಅಪಘಾತ ಪ್ರಕರಣಗಳು, 12 ಅತಿಯಾದ ವೇಗದ ಪ್ರಕರಣಗಳು, 11 ಗೂಡ್ಸ್ ವಾಹನಗಳಲ್ಲಿ ಪ್ರಯಾಣಿಕರ ಸಾಗಾಟ ವಿಚಾರ, 95 ಹೆಲ್ಮಟ್ ಇಲ್ಲದೆ ಬೈಕ್ ಸವಾರಿ ನಡೆಸಿದ ಪ್ರಕರಣಗಳು, 13 ಸೀಟ್ ಬೆಲ್ಟ್ ಧರಿಸದೇ ಚಾಲನೆ, 7 ರೆಡ್ ಸಿಗ್ನಲ್ ಜಂಪ್, 5 ಚಾಲನೆ ಸಂದರ್ಭ ಮೊಬೈಲ್ ಬಳಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿಎಲ್ ರದ್ದುಗೊಳಿಸಲಾಗಿದೆ. ಇನ್ನು ನೋ ಪಾರ್ಕಿಂಗ್ ಜಾಗದಲ್ಲಿ ಪಾರ್ಕ್ ಮಾಡಿದ 371 ವಾಹನಗಳ ವಿರುದ್ಧ ಕೇಸ್ ದಾಖಲಾಗಿದೆ. ಕರ್ಕಶ ಹಾರ್ನ್ ಬಳಕೆ 31, ಟಿಂಟ್ ಬಳಕೆ 23 ಪ್ರಕರಣಗಳು ದಾಖಲಾಗಿದೆ.

ಇದನ್ನೂ ಓದಿ : ರೈತರಿಗೆ ಖುಷ್: ಕಾಳು ಮೆಣಸು ದರ ಏರಿಕೆ!

HOW TO APPLY : NEET-UG COUNSELLING 2023

Categories
ಬೆಂಗಳೂರು

ಮತ್ತೆ ಸಂಘಟನೆಯತ್ತ ಜೆಡಿಎಸ್ ಪಕ್ಷ!

ಮತ್ತೆ ಸಂಘಟನೆಯತ್ತ ಜೆಡಿಎಸ್ ಪಕ್ಷ!
– ಆ.15ರಿಂದ ರಾಜ್ಯ ಪ್ರವಾಸ: ಪಕ್ಷ ಕಟ್ಟಲು ಪ್ಲಾನ್
– ಲೋಕ ಸಭಾ ಚುನಾವಣೆಗೆ ಸಕಲ ಸಿದ್ಧತೆ
– ಜಿ ಟಿ ದೇವೇಗೌಡರ ನೇತೃತ್ವದಲ್ಲಿ ಕೋರ್ ಕಮಿಟಿ

NAMMUR EXPRESS NEWS
ಬೆಂಗಳೂರು: ವಿಧಾನ ಸಭಾ ಚುನಾವಣೆ ಸೋಲಿನ ಬಳಿಕ ಆಗಸ್ಟ್ 15ರ ನಂತರ ಪಕ್ಷ ಸಂಘಟನೆಗಾಗಿ ಜಾತ್ಯತೀತ ಜನತಾದಳ ಪಕ್ಷದ ಮುಖಂಡರು ರಾಜ್ಯಾದ್ಯಂತ ಪ್ರವಾಸ ಕೈಗೊಳ್ಳಲಿದ್ದಾರೆ. ಮುಂಬರುವ ಲೋಕಸಭೆ ಚುನಾವಣೆಗೆ ಸಿದ್ಧತೆ, ಪಕ್ಷ ಸಂಘಟನೆ ಹಾಗೂ ನೂತನ ಕೋರ್ ಕಮಿಟಿ ರಚನೆ ಸೇರಿದಂತೆ ಹಲವು ವಿಷಯಗಳ ಚರ್ಚೆಗಾಗಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷರು, ಮಾಜಿ ಪ್ರಧಾನಮಂತ್ರಿಗಳೂ ಆಗಿರುವ ಹೆಚ್.ಡಿ.ದೇವೇಗೌಡರ ಅಧ್ಯಕ್ಷತೆಯಲ್ಲಿ ಹಾಗೂ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರ ಉಪಸ್ಥಿತಿಯಲ್ಲಿ ನಡೆದ ಪಕ್ಷದ ಪ್ರಮುಖರ ಸಭೆಯಲ್ಲಿ ಈ ಮಹತ್ವದ ನಿರ್ಣಯ ಕೈಗೊಳ್ಳಲಾಗಿದೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಪಕ್ಷಕ್ಕೆ ಆಗಿರುವ ಹಿನ್ನಡೆಯ ಬಗ್ಗೆ ಎದೆಗುಂದದೆ ಪಕ್ಷದ ಸಂಘಟನೆ ಕಡೆ ಹೆಚ್ಚು ಗಮನ ನೀಡಬೇಕು ಎಂದು ರಾಷ್ಟ್ರೀಯ ಅಧ್ಯಕ್ಷರು ತಾಕೀತು ಮಾಡಿದ್ದು, ಅವರ ಆದೇಶದಂತೆ ಪಕ್ಷ ಸಂಘಟನೆಗೆ ಬಹಳಷ್ಟು ಒತ್ತು ಕೊಟ್ಟು ಕೆಲಸ ಮಾಡಲು ನಿರ್ಧರಿಸಲಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ತಿಳಿಸಿದ್ದಾರೆ.

ಕೋರ್ ಕಮಿಟಿ: ಮಾಜಿ ಸಚಿವರಾದ ಜಿಟಿ ದೇವೇಗೌಡರ ಅಧ್ಯಕ್ಷತೆಯಲ್ಲಿ ನೂತನ ಕೋರ್ ಕಮಿಟಿ ರಚನೆಗೆ ಸಭೆಯಲ್ಲಿ ಒಮ್ಮತದ ನಿರ್ಣಯ ಕೈಗೊಳ್ಳಲಾಯಿತು. ಮಾಜಿ ಶಾಸಕರಾದ ವೈ ಎಸ್ ವಿ ದತ್ತಾ ಅವರು ಈ ಕಮಿಟಿಗೆ ಸಂಚಾಲಕರಾಗಿರುತ್ತಾರೆ. ಒಟ್ಟು 20 ಸದಸ್ಯರು ಕಮಿಟಿಯಲ್ಲಿ ಇರುತ್ತಾರೆ ಎಂದು ಅವರು ಮಾಹಿತಿ ನೀಡಿದ್ದಾರೆ.
15ರ ನಂತರ ಸಂಘಟನೆಗೆ ಪ್ರವಾಸ: ಪಕ್ಷದ ಸಂಘಟನೆ ಹಾಗೂ ಲೋಕಸಭೆ ಚುನಾವಣೆಗೆ ಪಕ್ಷವನ್ನು ಅಣಿಗೊಳಿಸುವ ನಿಟ್ಟಿನಲ್ಲಿ ಆಗಸ್ಟ್ 15ರ ನಂತರ ರಾಜ್ಯಾಧ್ಯಂತ ಪಕ್ಷದ ಪ್ರಮುಖ ಮುಖಂಡರು ಪ್ರವಾಸ ಮಾಡಲಿದ್ದಾರೆ. ನಾನೂ ಸೇರಿ ಪಕ್ಷದ ಬಹುತೇಕ ಹಿರಿಯ ನಾಯಕರು ಪ್ರವಾಸ ಕೈಗೊಳ್ಳುವರು ಎಂದು ಕುಮಾರಸ್ವಾಮಿ ಅವರು ತಿಳಿಸಿದ್ದಾರೆ.
ನಮ್ಮ ಹೋರಾಟ ಸಂಘಟಿರವಾಗಿರಬೇಕು ಹಾಗೂ ವಿಷಯಾಧಾರಿತ ಆಗಿರಬೇಕು. ಜನಪರವಾಗಿ ಇರಬೇಕು ಎಂದು ರಾಷ್ಟ್ರೀಯ ಅಧ್ಯಕ್ಷರು ನಿರ್ದೇಶನ ನೀಡಿದ್ದಾರೆ. ಅದರಂತೆ ನಾವು ಹೋರಾಟ ಮಾಡುತ್ತೇವೆ ಎಂದು ಅವರು ಹೇಳಿದ್ದಾರೆ.ಅಲ್ಲದೆ, ಪಕ್ಷದ ವಿವಿಧ ವಿಭಾಗಗಳಿಗೆ ಮುಖ್ಯಸ್ಥರನ್ನು ನೇಮಕ ಮಾಡುವ ಬಗ್ಗೆಯೂ ಸಭೆಯಲ್ಲಿ ವಿಸ್ತೃತವಾಗಿ ಚರ್ಚೆ ನಡೆಸಲಾಯಿತು ಎಂದು ಅವರು ಹೇಳಿದ್ದಾರೆ.

ಸಭೆಯಲ್ಲಿ ಹಿರಿಯ ನಾಯಕರಾದ ಬಂಡೆಪ್ಪ ಕಾಷೆಂಪೂರ್, ಹೆಚ್.ಕೆ.ಕುಮಾರಸ್ವಾಮಿ, ಅಲ್ಕೊಡ್ ಹನುಮಂತಪ್ಪ, ಸುರೇಶಗೌಡ, ಅನ್ನದಾನಿ, ನಿಸರ್ಗ ನಾರಾಯಣಸ್ವಾಮಿ, ಕೆ.ಎನ್.ತಿಪ್ಪೇಸ್ವಾಮಿ, ನೆಮಿರಾಜ್ ನಾಯ್ಕ, ವೈಎಸ್ ವಿ ದತ್ತಾ, ಲಿಂಗೇಶ್, ಅಪ್ಪಾಜಿ ಗೌಡ, ವೀರಭದ್ರಯ್ಯ ಹಾಲರವಿ, ಮಾಗಡಿ ಮಂಜುನಾಥ್, ಸೂರಜ್ ನಾಯಕ್ ಸೋನಿ, ತಿಮ್ಮರಾಯಪ್ಪ, ದೊಡ್ಡನಗೌಡ ಪಾಟೀಲ್, ಅಶ್ವಿನ್ ಕುಮಾರ್, ಚೌಡರೆಡ್ಡಿ, ಶ್ರೀಕಂಠೇಗೌಡ ಸೇರಿದಂತೆ ಇನ್ನೂ ಅನೇಕ ನಾಯಕರು ಭಾಗಿಯಾಗಿದ್ದರು.

ಇದನ್ನೂ ಓದಿ : ರೈತರಿಗೆ ಖುಷ್: ಕಾಳು ಮೆಣಸು ದರ ಏರಿಕೆ!

HOW TO APPLY : NEET-UG COUNSELLING 2023

Categories
ತೀರ್ಥಹಳ್ಳಿ

ತೀರ್ಥಹಳ್ಳಿಯ ಕ್ರೀಡಾ ಸಾಧಕ ವಿನಯ್ ನೆನಪು

ತೀರ್ಥಹಳ್ಳಿಯ ಕ್ರೀಡಾ ಸಾಧಕ ವಿನಯ್ ನೆನಪು
– ಮೊದಲ ವರ್ಷದ ಪುಣ್ಯಸ್ಮರಣೆ
– ಖೋ ಖೋ ಆಟದಲ್ಲಿ ಭಾರತ ತಂಡ ಪ್ರತಿನಿಧಿಸಿದ್ದ ಆಟಗಾರನ ಕಳೆದುಕೊಂಡ ತೀರ್ಥಹಳ್ಳಿ
– ಕುಟುಂಬದವರು, ಸ್ನೇಹಿತರ ಕಣ್ಣೀರು

NAMMUR EXPRESS NEWS
ತೀರ್ಥಹಳ್ಳಿ: ರಾಷ್ಟ್ರೀಯ ಖೋ ಖೋ ಆಟಗಾರ ತೀರ್ಥಹಳ್ಳಿಯ ವಿನಯ್ ತೀವ್ರ ಜ್ವರ ಮೆದುಳಿಗೆ ಏರಿ ಮಣಿಪಾಲ ಆಸ್ಪತ್ರೆಯಲ್ಲಿ ಮೃತಪಟ್ಟು ಇಂದಿಗೆ 1 ವರ್ಷ ಸಂದಿದೆ. ಅವರ ಪ್ರಥಮ ವರ್ಷದ ಪುಣ್ಯ ಸ್ಮರಣೆಯಂದು ಅವರ ಸೇವೆಗೆ ನಮನ ಸಲ್ಲಿಸೋಣ.  ವಿದ್ಯಾರ್ಥಿಯಾಗಿದ್ದಾಗಲೇ ಖೋ ಖೋ ಕ್ರೀಡಾಪಟುವಾಗಿದ್ದ ವಿನಯ್ ಜಿಲ್ಲಾ, ರಾಜ್ಯ ಹಾಗೂ ರಾಷ್ಟ್ರ ಮಟ್ಟವನ್ನು ಖೋ ಖೋ ಕ್ರೀಡೆಯಲ್ಲಿ ಪ್ರತಿನಿಧಿಸಿ ತೀರ್ಥಹಳ್ಳಿಗೆ ಕೀರ್ತಿ ತಂದಿದ್ದರು.  ಬೆಂಗಳೂರಿನಲ್ಲಿ ಕೆಲಸದಲ್ಲಿದ್ದ ವಿನಯ್ ಕರೋನಾ ಬಳಿಕ ತೀರ್ಥಹಳ್ಳಿಯಲ್ಲಿದ್ದರು. ತಮ್ಮ ಮನೆ ತೀರ್ಥಹಳ್ಳಿ ಪಟ್ಟಣದ ಸೀಬಿನಕೆರೆಯಲ್ಲಿ ಅಂಗಡಿ ಮತ್ತು ಹೋಲ್ ಸೇಲ್ ಬ್ಯುಸಿನೆಸ್ ನಡೆಸುತ್ತಿದ್ದರು. 2022 ಆಗಸ್ಟ್ ಮೊದಲ ವಾರ ತೀವ್ರ ಜ್ವರದಿಂದ ಬಳಲುತ್ತಿದ್ದ ವಿನಯ್(33) ಮಣಿಪಾಲ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲ ನೀಡದೆ ಅವರು ಮೃತರಾಗಿದ್ದರು. ತೀರ್ಥಹಳ್ಳಿಯಲ್ಲಿ ಅಪಾರ ಸ್ನೇಹಿತ ವಲಯ ವನ್ನು ಹೊಂದಿದ್ದ ವಿನಯ್ ಸಾವು ಇಡೀ ತೀರ್ಥಹಳ್ಳಿಯನ್ನು ಮೌನಕ್ಕೆ ಜಾರಿಸಿತ್ತು.

ತೀರ್ಥಹಳ್ಳಿಯ ಕ್ರೀಡಾ ರತ್ನ ವಿನಯ್ ಪುಣ್ಯ ಸ್ಮರಣೆ

ವಿನಯ್ ತೀರ್ಥಹಳ್ಳಿಯನ್ನು ಕ್ರೀಡಾ ಕ್ಷೇತ್ರದಲ್ಲಿ ಭಾರತ ಮಟ್ಟಕ್ಕೆ ಕೊಂಡೋಯ್ದಿದ್ದರು. ತೀರ್ಥಹಳ್ಳಿಯ ಏಕಲವ್ಯ ಸ್ಪೋರ್ಟ್ಸ್ ಕ್ಲಬ್ ಹಾಗೂ ಕರ್ನಾಟಕವನ್ನು ಪ್ರತಿನಿಧಿಸಿ 2 ಬಾರಿ ರನ್ನರ್ ಆಗಿದ್ದರು. ತಮ್ಮ ಸಾಧನೆಗಾಗಿ ಕರ್ನಾಟಕ ಸರ್ಕಾರ ಕ್ರೀಡಾ ರತ್ನ ಪ್ರಶಸ್ತಿ ನೀಡಿ ಗೌರವ ನೀಡಿತ್ತು. ರಾಷ್ಟ್ರೀಯ ಖೋ ಖೋ ಆಟಗಾರ, ತೀರ್ಥಹಳ್ಳಿಯ ವಿನಯ್ ಅಕಾಲಿಕವಾಗಿ ಮೃತಪಟ್ಟು ಆ.8ಕ್ಕೆ ಒಂದು ವರ್ಷ ಕಳೆದಿದೆ.  ಕ್ರೀಡೆಯಲ್ಲಿ ತೀರ್ಥಹಳ್ಳಿ ಹೆಸರನ್ನು ಬೆಳಗಿಸಿದ ನಿನಗೆ ನಮ್ಮ ನಮನಗಳು.

ತೀರ್ಥಹಳ್ಳಿಯ ಕ್ರೀಡಾಪಟುಗಳು, ಸ್ನೇಹಿತರು,
ಹಾಗೂ
ನಮ್ಮೂರ್ ಎಕ್ಸ್ ಪ್ರೆಸ್ ಮಾಧ್ಯಮ

ಇದನ್ನೂ ಓದಿ : ರೈತರಿಗೆ ಖುಷ್: ಕಾಳು ಮೆಣಸು ದರ ಏರಿಕೆ!

HOW TO APPLY : NEET-UG COUNSELLING 2023

Categories
ಅಡಿಕೆ-ದರ

ಅಡಿಕೆ ಮಾರುಕಟ್ಟೆ: ಎಷ್ಟಿದೆ ದರ?

ಅಡಿಕೆ ಮಾರುಕಟ್ಟೆ: ಎಷ್ಟಿದೆ ದರ?
– ಕಾಳು ಮೆಣಸು ದರ ಕೆಜಿಗೆ 610 ರೂ.
ಶಿವಮೊಗ್ಗ, ಸಾಗರ, ಕಾರ್ಕಳ, ಸೇರಿದಂತೆ ರಾಜ್ಯದ ವಿವಿಧ ಮಾರುಕಟ್ಟೆಗಳಲ್ಲಿ ಇವತ್ತಿನ ಅಡಿಕೆ ಧಾರಣೆ ಏನಿದೆ ನೋಡಿ?ಶಿವಮೊಗ್ಗ ಮಾರುಕಟ್ಟೆ
ಗೊರಬಲು 18100- 42128
ಬೆಟ್ಟೆ 50400 -53510
ರಾಶಿ 38019 -54699
ಸರಕು 54009 -80010

ಕಾರ್ಕಳ ಮಾರುಕಟ್ಟೆ
ನ್ಯೂ ವೆರೈಟಿ 30000- 45000

ಕುಂದಾಪುರ ಮಾರುಕಟ್ಟೆ
ಹಳೆ ಚಾಲಿ 43500- 47000
ಹೊಸ ಚಾಲಿ 37000- 41500

ಕುಮಟಾ ಮಾರುಕಟ್ಟೆ
ಕೋಕ 22869 -35019
ಚಿಪ್ಪು 33019- 36089
ಫ್ಯಾಕ್ಟರಿ 15019- 22849
ಹಳೆ ಚಾಲಿ 39809 -42169
ಹೊಸ ಚಾಲಿ 39019- 42099

ಬಂಟ್ವಾಳ ಮಾರುಕಟ್ಟೆ
ಕೋಕ 12500 -25000
ನ್ಯೂ ವೆರೈಟಿ 27500- 45000
ವೋಲ್ಡ್ ವೆರೈಟಿ 46000- 48000

ಯಲ್ಲಾಪುರ ಮಾರುಕಟ್ಟೆ
ಕೆಂಪುಗೋಟು 32118 -36306
ಕೋಕ 21718 -35109
ಚಾಲಿ 39179 -43099
ತಟ್ಟಿಬೆಟ್ಟೆ 38599 -47899
ಬಿಳೆ ಗೋಟು 26999 -37499
ರಾಶಿ 48609 -54209

ಸಿದ್ದಾಪುರ ಮಾರುಕಟ್ಟೆ
ಕೆಂಪುಗೋಟು 33819- 35089
ಕೋಕ 30019 -35529
ಚಾಲಿ 38600 -42799
ತಟ್ಟಿಬೆಟ್ಟೆ 39699 -49099
ಬಿಳೆ ಗೋಟು 31899- 35899
ರಾಶಿ 47809- 50899

ಶಿರಸಿ ಮಾರುಕಟ್ಟೆ
ಕೆಂಪುಗೋಟು 31899- 38689
ಚಾಲಿ 38190- 43899
ಬೆಟ್ಟೆ 40099 -47508
ಬಿಳೆ ಗೋಟು 29009 -37809
ರಾಶಿ 48000 -51269

ಹೊನ್ನಾಳಿ ಮಾರುಕಟ್ಟೆ
ರಾಶಿ 53155- 53155

ಸಾಗರ ಮಾರುಕಟ್ಟೆ
ಕೆಂಪುಗೋಟು 24899 -43199
ಕೋಕ 28161- 36989
ಚಾಲಿ 35899 41299
ಬಿಳೆ ಗೋಟು 32709 -34429
ರಾಶಿ 35899 -54609
ಸಿಪ್ಪೆಗೋಟು 13499 -23109

ಇದನ್ನೂ ಓದಿ : ರೈತರಿಗೆ ಖುಷ್: ಕಾಳು ಮೆಣಸು ದರ ಏರಿಕೆ!

HOW TO APPLY : NEET-UG COUNSELLING 2023

Categories
ರಾಜ್ಯ

ಟಾಪ್ ನ್ಯೂಸ್ ಕರ್ನಾಟಕ

ಅಟ್ಟಾಡಿಸಿದ ಕಾಡಾನೆ: ಇಬ್ಬರು ಪಾರು!
– ಚಾಮರಾಜನಗರ ಜಿಲ್ಲೆ ಹನೂರಲ್ಲಿ ಘಟನೆ
– ಶ್ರೀರಂಗಪಟ್ಟಣ: ನದಿಯಲ್ಲಿ ಮುಳುಗಿ ಯುವಕ ಸಾವು
– ಹಾವೇರಿಯಲ್ಲಿ ಅಪಘಾತಕ್ಕೆ ಬಲಿ!
– ವೇಶ್ಯಾವಾಟಿಕೆ :7 ಮಹಿಳೆಯರ ರಕ್ಷಣೆ;8 ಜನ ಪುರುಷರು ಅರೆಸ್ಟ್.!

NAMMUR EXPRESS NEWS
ಚಾಮರಾಜನಗರ: ದನಗಾಹಿಗಳನ್ನು ಕಾಡಾನೆ ಅಟ್ಟಾಡಿಸಿರುವ ಘಟನೆ ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ‌ ದಿನ್ನಳ್ಳಿ ಅರಣ್ಯದಲ್ಲಿ ನಡೆದಿದೆ. ಹನೂರು ತಾಲೂಕಿನ ಪಿಜಿ ಪಾಳ್ಯ ಗ್ರಾಪಂ ವ್ಯಾಪ್ತಿಯ ಯರಗಬಾಳು ಗ್ರಾಮದ ಸಿದ್ದಮರಿ, ಗಿರಿಯಪ್ಪ ಗಾಯಗೊಂಡ ಸಹೋದರರಾಗಿದ್ದಾರೆ. ತಮಿಳುನಾಡಿನ ಆಡಿ ಜಾತ್ರೆಗೆ ತಮ್ಮ ದನಗಳನ್ನು ಮಾರಾಟ ಮಾಡಿ ಮಾರಾಟವಾಗದ ದನಗಳನ್ನು ವಾಪಾಸ್ ಕರೆತರುತ್ತಿದ್ದಾಗ ಏಕಾಏಕಿ ಕಾಡಾನೆ ದಾಳಿ ಮಾಡಿದ್ದು ಇಬ್ಬರನ್ನೂ ಅಟ್ಟಾಡಿಸಿದೆ. ಕಾಡಿನ‌ ರಸ್ತೆಯಲ್ಲಿ ಎದ್ದುಬಿದ್ದು ಸ್ವಲ್ಪದರಲ್ಲೇ ಬಚಾವಾದ ಇಬ್ಬರನ್ನೂ ಕಂಡ ಸ್ಥಳೀಯರು ರಾಮಪುರ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಸದ್ಯ, ಇಬ್ಬರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಹಾವೇರಿಯಲ್ಲಿ ಅಪಘಾತಕ್ಕೆ ಬಲಿ!

ಕಾರು ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ವ್ಯಕ್ತಿಗಳು ಸ್ಥಳದಲ್ಲೇ ಸಾವಿಗೀಡಾದ ಘಟನೆ ಹಾವೇರಿ ಜಿಲ್ಲೆ ಶಿಗ್ಗಾವಿ ತಾಲ್ಲೂಕಿನ ನೀರಲಗಿ ಗ್ರಾಮದ ಬಳಿ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಸೋಮವಾರ ನಡೆದಿದೆ. ನೀರಲಗಿ ಗ್ರಾಮದ ವಿರೂಪಾಕ್ಷಪ್ಪ ಕಾಳಿ (60) ಮತ್ತು ಚಿದಾನಂದ ಶೇರವಾಡ (55) ಮೃತಪಟ್ಟವರು. ಹೊನ್ನಾಪುರ ಗ್ರಾಮದ ಬಸನಗೌಡ ಶಿವನಗೌಡ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಗಾಯಗೊಂಡಿದ್ದ ಚಿದಾನಂದ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲು ಸರಿಯಾದ ಸಮಯಕ್ಕೆ ಆಂಬುಲೆನ್ಸ್ ಬಾರದ ಕಾರಣ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಒಂದು ಗಂಟೆಗೂ ಹೆಚ್ಚು ಕಾಲ ರಾಷ್ಟ್ರೀಯ ಹೆದ್ದಾರಿ ಬಂದ್‌ ಮಾಡಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.

ಶ್ರೀರಂಗಪಟ್ಟಣ: ನದಿಯಲ್ಲಿ ಮುಳುಗಿ ಯುವಕ ಸಾವು

ಶ್ರೀರಂಗಪಟ್ಟಣ ತಾಲ್ಲೂಕಿನ ಬೆಳಗೊಳ ಸಮೀಪದ ಬಲಮುರಿ ಪ್ರಕೃತಿ ತಾಣಕ್ಕೆ ಭಾನುವಾರ ವಿಹಾರಕ್ಕೆ ಬಂದಿದ್ದ ಯುವಕ ಈಜುವ ವೇಳೆ ಕಾವೇರಿ ನದಿಯಲ್ಲಿ ಮುಳುಗಿ ಮೃತಪಟ್ಟರು. ಕೋಲಾರ ಜಿಲ್ಲೆ ಕೆಜಿಎಫ್ ಪೊಲೀಸ್ ಠಾಣೆಯ ಎಎಸ್‌ಐ ವಾಸುದೇವಸಿಂಗ್ ಅವರ ಪುತ್ರ ಯಶ್ವಂತ್ (26) ಮೃತರು. ಅವರು ಮೂವರು ಸ್ನೇಹಿತರೊಂದಿಗೆ ಇಲ್ಲಿಗೆ ಬಂದಿದ್ದರು. ನದಿಯಲ್ಲಿ ಸುಳಿಗೆ ಸಿಕ್ಕಿ ಅವರು ಸಾವಿಗೀಡಾಗಿದ್ದಾರೆ’ ಎಂದು ಪೊಲೀಸರು ತಿಳಿಸಿದರು.

ವೇಶ್ಯಾವಾಟಿಕೆ :7 ಮಹಿಳೆಯರ ರಕ್ಷಣೆ;8 ಜನ ಪುರುಷರು ಅರೆಸ್ಟ್.!

ಬಳ್ಳಾರಿ ನಗರದ ಇನ್ವೆಂಟ್ರಿ ರಸ್ತೆಯಲ್ಲಿರುವ ಸೆಲೂನ್‌ವೊಂದರಲ್ಲಿ ನಡೆಯುತ್ತಿದ್ದ ಹೈಟೆಕ್ ವೇಶ್ಯಾವಾಟಿಕೆ ಅಡ್ಡೆಯ ಮೇಲೆ ಕೌಲ್ ಬಜಾರ್ ಪೊಲೀಸರು ದಾಳಿ ನಡೆಸಿದ್ದಾರೆ. ದಾಳಿ ವೇಳೆ 7 ಮಹಿಳೆಯರನ್ನು ರಕ್ಷಿಸಿ, 8 ಪುರುಷರನ್ನು ಮಕ್ಕಳನ್ನು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದುಬಂದಿದೆ. ನಾಗಲ್ಯಾಂಡ್, ದೆಹಲಿ, ವೆಸ್ಟ್ ಬೆಂಗಾಲ್ ಮತ್ತು ಓಡಿಸ್ಸಾ ಮೂಲದ ಮಹಿಳೆಯರನ್ನು ರಕ್ಷಣೆ ಮಾಡಿದ್ದಾರೆ. ವ್ಯವಸ್ಥಾಪಕ ಪ್ರಭುಗೌಡ ಸೇರಿದಂತೆ 8 ಜನರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.ಈ ಕುರಿತು ಕೌಲ್ ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ : ರೈತರಿಗೆ ಖುಷ್: ಕಾಳು ಮೆಣಸು ದರ ಏರಿಕೆ!

HOW TO APPLY : NEET-UG COUNSELLING 2023

Categories
ರಾಜ್ಯ

ಹೆಣ್ಣಿನ ಧ್ವನಿಯಲ್ಲಿ ಮಾತಾಡಿ 41 ಲಕ್ಷ ಕಿತ್ತಿದ್ದ ಯುವಕ!

ಹೆಣ್ಣಿನ ಧ್ವನಿಯಲ್ಲಿ ಮಾತಾಡಿ 41 ಲಕ್ಷ ಕಿತ್ತಿದ್ದ ಯುವಕ!
– ಪುರುಷರೇ ಟಾರ್ಗೆಟ್: ಫೋಟೋ ಅಶ್ಲೀಲವಾಗಿ ಎಡಿಟ್ ಮಾಡಿ ಬೆದರಿಕೆ
– ರಾಮನಗರ ಪೊಲೀಸರ ಬಲೆಗೆ ಬಿದ್ದ ಕುಣಿಗಲ್ ಯುವಕ: ಏನಿದು ಸ್ಟೋರಿ…?!

NAMMUR EXPRESS NEWS
ರಾಮನಗರ: ಹುಡುಗಿ ಹೆಸರಿನಲ್ಲಿ ವ್ಯಕ್ತಿಯೊಬ್ಬರಿಗೆ ಬ್ಲ್ಯಾಕ್‌ಮೇಲ್ ಮಾಡಿ 41 ಲಕ್ಷ ವಂಚಿಸಿದ್ದ ಯುವಕನನ್ನು ರಾಮನಗರ ಸಿಇಎನ್ ಪೊಲೀಸರು ಬಂಧಿಸಿದ್ದಾರೆ. ಬೆಂಗಳೂರಿನ ದಾಸರಹಳ್ಳಿಯಲ್ಲಿ ರವಿಕುಮಾರ್(24) ಬಂಧಿತ ಆರೋಪಿ. ಈತ ಮೂಲತಃ ಕುಣಿಗಲ್ ತಾಲೂಕಿನ ಕಗ್ಗೇರಿಯವನಾಗಿದ್ದು, ಬೆಂಗಳೂರಿನಲ್ಲಿ ನೆಲೆಸಿ ಖಾಸಗಿ ಡಾಟಾ ಬೇಸ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ. ಈತ ತಂತ್ರಜ್ಞಾನದಲ್ಲೂ ನಿಪುಣನಾಗಿದ್ದು, ಹೆಣ್ಣಿನ ಧ್ವನಿಯಲ್ಲಿ ಮಾತನಾಡುವ ಕಲೆ ಕರಗತ ಮಾಡಿಕೊಂಡಿದ್ದ. ತನ್ನ ಈ ಎರಡು ಕೌಶಲ್ಯಗಳನ್ನು ಬಳಸಿಕೊಂಡು ಪುರುಷರನ್ನು ಬಲೆಗೆ ಬೀಳಿಸಿಕೊಂಡು, ಬ್ಲ್ಯಾಕ್‌ಮೇಲ್ ಮಾಡಿ ಹಣ ಸುಲಿಗೆ ಮಾಡುತ್ತಿದ್ದ.

ಹಾಗೇ ಈತನ ಜಾಲಕ್ಕೆ ಬಿದ್ದ ರವಿಕುಮಾರ್ ಎಂಬುವವರಿಂದ ತಮ್ಮ ಕುಟುಂಬದಲ್ಲಿ ಸಮಸ್ಯೆ ಇದೆ ಎಂದು ಸುಳ್ಳು ಹೇಳಿ ಬೇಡಿಕೆ ಇಟ್ಟು ಆಗಾಗ ಹಣ ಪಡೆಯುತ್ತಿದ್ದ.ಕಡೆಗೊಮ್ಮೆ ರಾಜೇಶ್ ನಿರಾಕರಿಸಿದಾಗ ಅವರ ಫೋಟೊವನ್ನು ಅಶ್ಲೀಲವಾಗಿ ಎಡಿಟ್ ಮಾಡಿ ವಾಟ್ಸಪ್‌ಗೆ ಕಳುಹಿಸಿ, ಬ್ಲ್ಯಾಕ್‌ಮೇಲ್ ಮಾಡಲಾರಂಭಿಸಿದ್ದ. ಇದೇ ರೀತಿ ಆರೋಪಿ ಆರು ತಿಂಗಳಲ್ಲೇ 41 ಲಕ್ಷ ರು. ಸುಲಿದಿದ್ದ. ಕಡೆಗೆ ರವಿಕುಮಾರ್ ದೂರಿನ ಮೇರೆಗೆ ಆರೋಪಿಯನ್ನು ರಾಮನಗರ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಇದನ್ನೂ ಓದಿ : ರೈತರಿಗೆ ಖುಷ್: ಕಾಳು ಮೆಣಸು ದರ ಏರಿಕೆ!

HOW TO APPLY : NEET-UG COUNSELLING 2023

Categories
ಕರಾವಳಿ

ಕರಾವಳಿ ಟಾಪ್ ನ್ಯೂಸ್

ಸ್ಕಾರ್ಪಿಯೋ ಕಾರಲ್ಲಿ ಗೋವುಗಳ ಕದ್ದು ಸಾಗಾಟ!
– ಕಾರ್ಕಳದ ಬಜಗೋಳಿಯಲ್ಲಿ ನಡೆದ ಘಟನೆ
– ಸೌಜನ್ಯ ಕೊಲೆ: ಶಿಕ್ಷೆಗೆ ಈಗ ದೇವರ ಮೊರೆ
– ಅಟೋ ರಿಕ್ಷಾದಲ್ಲೇ ಡ್ರಗ್ಸ್ ಮಾರಾಟ: ಓರ್ವ ಅರೆಸ್ಟ್
– ಧರ್ಮಸ್ಥಳದಲ್ಲಿ ಮಹಿಳೆಗೆ ಬಸ್ ಡಿಕ್ಕಿ: ಗಾಯ
– ಮಕ್ಕಳ ಜೊತೆ ಅಸಭ್ಯ ವರ್ತನೆ: ಬಂಧನ
– ಅಬ್ಬಾ.. ಸಭಾಂಗಣದಲ್ಲೇ ಇಸ್ಪೀಟ್: 24 ಮಂದಿ ಅರೆಸ್ಟ್!

NAMMUR EXPRESS NEWS
ಕಾರ್ಕಳ: ಗೋವುಗಳನ್ನು ಕದ್ದು ಪರಾರಿಯಾಗುತ್ತಿದ್ದ ವಾಹನವನ್ನು ಬಜರಂಗದಳದ ಕಾರ್ಯಕರ್ತರು ಬೆನ್ನಟ್ಟಿ ಹಿಡಿದು ಗೋವುಗಳನ್ನು ರಕ್ಷಿಸಿದ ಘಟನೆ ಉಡುಪಿ ಜಿಲ್ಲೆ ಕಾರ್ಕಳ ತಾಲೂಕಿನ ಬಜಗೋಳಿಯಲ್ಲಿ ನಡೆದಿದೆ.
ನಾಲ್ಕು ಗೋವುಗಳನ್ನು ಸ್ಕಾರ್ಪಿಯೋ ವಾಹನದಲ್ಲಿ ತುಂಬಿಸಿಕೊಂಡು ಕಾರ್ಕಳ ತಾಲೂಕಿನ ಕೆರ್ವಾಶೆಯಲ್ಲಿ ಸಾಗುತ್ತಿರುವುದು ಬಜರಂಗದಳದ ಕಾರ್ಯಕರ್ತರ ಗಮನಕ್ಕೆ ಬಂದು ತಕ್ಷಣ ಬಂದಾಗ ಬಜಗೋಳಿಯಲ್ಲಿ ವಾಹನ ಬಿಟ್ಟು ಪರಾರಿಯಾಗಿದ್ದಾರೆ. ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸೌಜನ್ಯ ಕೊಲೆ: ಆರೋಪಿಗಳ ಶಿಕ್ಷೆಗೆ ಈಗ ದೇವರ ಮೊರೆ

ಪುತ್ತೂರು: ಸೌಜನ್ಯ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಾಯಿ ಕಸುಮಾವತಿ ಉಪಸ್ಥಿತಿಯಲ್ಲಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಆರೋಪಿಗೆ ಶಿಕ್ಷೆಯಾಗುವಂತೆ ಸಾಮೂಹಿಕ ಪ್ರಾರ್ಥನೆ ನಡೆಸಲಾಗಿದೆ. 2011 ರಲ್ಲಿ ಕಾಲೇಜು ವಿದ್ಯಾರ್ಥಿನಿ ಸೌಜನ್ಯ ಕೊಲೆ ಪ್ರಕರಣದಲ್ಲಿ ಆರೋಪಿಗಳಿಗೆ ಶಿಕ್ಷೆಯಾಗುವಂತೆ ಪುತ್ತೂರು ವಿಶ್ವಹಿಂದು ಪರಿಷತ್ ಮತ್ತು ಬಜರಂಗದಳದಿಂದ ಸೋಮವಾರ ಪುತ್ತೂರಿನಲ್ಲಿ ಕಾಲ್ನಡಿಗೆ ಮತ್ತು ಸಾಮೂಹಿಕ ಪ್ರಾರ್ಥನೆ ನಡೆಸಲಾಯಿತು. ಬೆಳಿಗ್ಗೆ ಪುತ್ತೂರು ಶ್ರೀ ಲಕ್ಷ್ಮೀವೆಂಕಟರಮಣ ದೇವಸ್ಥಾನದಲ್ಲಿ ಪ್ರಾರ್ಥನೆ ಮಾಡಿ ನಂತರ ಅಲ್ಲಿಂದ ಕಾಲ್ನಡಿಗೆ ಮೂಲಕ ಮುಖ್ಯರಸ್ತೆಯಾಗಿ ಸಾಗಿ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಸಾಮೂಹಿಕ ಪ್ರಾರ್ಥನೆ ನಡೆಸಲಾಯಿತು. ಸಾಮೂಹಿಕ ಪ್ರಾರ್ಥನೆಯಲ್ಲಿ ಸೌಜನ್ಯ ತಾಯಿ ಕುಸುಮಾವತಿ ಜೊತೆ ಮಾಜಿ ಶಾಸಕ ಸಂಜೀವ ಮಠಂದೂರು, ಬಜರಂಗದಳ ವಿಭಾಗ ಸಹಸಂಯೋಜಕ ಮುರಳಿಕೃಷ್ಣ ಹಸಂತಡ್ಕ, ವಿಹಿಂಪ ಜಿಲ್ಲಾ ಅಧ್ಯಕ್ಷ ಡಾ.ಕೃಷ್ಣಪ್ರಸನ್ನ, ಕಾರ್ಯದರ್ಶಿ ಸತೀಶ್ ಭಟ್, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಬೂಡಿಯಾರು ರಾಧಾಕೃಷ್ಣ ರೈ, ಸಹಿತ ನೂರಾರು ಮಂದಿ ಭಾಗವಹಿಸಿದ್ದರು.

ಧರ್ಮಸ್ಥಳದಲ್ಲಿ ಬಸ್ ಡಿಕ್ಕಿ: ಕಾಲಿನ ಮೂಳೆ ಮುರಿತ

ಬೆಂಗಳೂರು ನಿವಾಸಿ ಮಹಿಳೆಯೊಬ್ಬರು ಧರ್ಮಸ್ಥಳ ದೇವಾಲಯದ ವಠಾರದಲ್ಲರುವ ಬಸ್ ನಿಲ್ದಾಣದ ಮುಂಭಾಗದ ರಸ್ತೆ ಬದಿಯಲ್ಲಿ ನಿಂತಿರುವಾಗ ಕೆಎಸ್‌ಆರ್‌ಟಿಸಿ ಬಸ್ಸನ್ನು ಚಾಲಕ ಏಕಾಏಕಿ ಹಿಂದಕ್ಕೆ ಚಲಾಯಿಸಿದ ಪರಿಣಾಮ ಮಹಿಳೆಯ ಕಾಲಿನ ಮೇಲೆ ಬಸ್ಸಿನ ಟಯರ್ ಹರಿದು ಮೂಳೆ ಮುರಿತ ಗೊಂಡಿದೆ.
ಗಾಯಾಳುವನ್ನು ಉಜಿರೆ ಆಸ್ಪತ್ರೆಗೆ ದಾಖಲಿಸಲಾಗಿದೆ.

ಮಂಗಳೂರಲ್ಲಿ ಆಟೋದಲ್ಲೇ ಡ್ರಗ್ಸ್ ಮಾರಾಟ!

ಮಂಗಳೂರು ಪೊಲೀಸ್ ಠಾಣಾ ವ್ಯಾಪ್ತಿಯ ಕುಂಪಲದ ಭಗಂಬಿಲ ಸ್ಮಶಾನದ ಮೈದಾನದಲ್ಲಿ ಸಾರ್ವಜನಿಕವಾಗಿ ಎಂಡಿಎಂಎ ಮಾದಕ ವಸ್ತುವನ್ನು ಮಾರಾಟ ಮಾಡುವ ಬಗ್ಗೆ ಖಚಿತ ಮಾಹಿತಿ ದೊರೆತ ಹಿನ್ನೆಲೆಯಲ್ಲಿ ಪೊಲೀಸರು ಶಾಂತಿಬಾಗ್ ನಿವಾಸಿ ಮಹಮ್ಮದ್ ಶರೀಫ್ ಯಾನೆ ಫೈಝಲ್ ನನ್ನು ಬಂಧಿಸಿದ್ದಾರೆ.
ಬಂಧಿತನಿಂದ 12 ಗ್ರಾಂ ಎಂಡಿಎಂಎ ಮಾದಕ ವಸ್ತು ಹಾಗೂ ಎರಡು ಮೊಬೈಲ್ ಫೋನ್ ಸಮೇತ ಮಾದಕ ವಸ್ತುವನ್ನು ಮಾರಾಟ ಮಾಡಲು ಉಪಯೋಗಿಸಿದ ಆಟೋರಿಕ್ಷಾವನ್ನು ವಶಕ್ಕೆ ಪಡೆದು ವಶಕ್ಕೆ ಪಡೆದು ಕಾನೂನು ಕ್ರಮ ಕೈಗೊಳ್ಳಲಾಗಿದೆ. 95,000 ಮೌಲ್ಯದ ಒಟ್ಟು ಸೊತ್ತುಗಳನ್ನು ವಶಕ್ಕೆ ಪಡೆಯಲಾಗಿದೆ.

ಮಕ್ಕಳ ಜೊತೆ ಅಸಭ್ಯ ವರ್ತನೆ: ಬಂಧನ

ಮಕ್ಕಳ ಜೊತೆ ಅಸಭ್ಯವಾಗಿ ವರ್ತಿಸುತ್ತಿದ್ದ ಆರೋಪದ ಮೇಲೆ ಇಬ್ಬರು ತಳ್ಳುಗಾಡಿ ವ್ಯಾಪಾರಿಗಳನ್ನು ಮಹಿಳಾ ಪೊಲೀಸರು ಬಂಧಿಸಿದ ಘಟನೆ ಮಂಗಳೂರಲ್ಲಿ ನಡೆದಿದೆ. ಬಂಧಿತರನ್ನು ಅಮರ್ ಮತ್ತು ಸೂರಜ್ ಎನ್ನಲಾಗಿದೆ.
ಬಂಧಿತರು ಅತ್ತಾವರದಲ್ಲಿ ನಡೆದುಕೊಂಡು ಹೋಗುವ ಮಕ್ಕಳ ಜತೆ ಅಸಭ್ಯವಾಗಿ ವರ್ತಿಸಿದ್ದು, ಮಕ್ಕಳು ಹಾದು ಹೋಗುವಾಗ ಹಿಂಬಾಲಿಸಿ, ಕೆಟ್ಟ ದೃಷ್ಠಿಯಿಂದ ನೋಡುವ ಆರೋಪ ಕೇಳಿಬಂದಿತ್ತು. ಮಂಗಳೂರು ಪೊಲೀಸ್ ಆಯುಕ್ತರ ಫೋನ್-ಇನ್ ಕಾರ್ಯಕ್ರಮದಲ್ಲಿ ಸಾರ್ವಜನಿಕರಿಂದ ಈ ದೂರು ಬಂದಿತ್ತು. ಕಮಿಷನರ್ ಕುಲದೀಪ್ ಕುಮಾರ್ ಜೈನ್ ಅವರು ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ, ಆರೋಪಿಗಳನ್ನು ವಶಕ್ಕೆ ಪಡೆಯುವಂತೆ ಸೂಚಿಸಿದ್ದರು. ಅದರಂತೆ ಕಾರ್ಯಾಚರಣೆ ನಡೆಸಿರುವ ಪೊಲೀಸರು ಇಬ್ಬರನ್ನು ವಶಕ್ಕೆ ಪಡೆದೆ, ಪೋಕೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಅಬ್ಬಾ.. ಸಭಾಂಗಣದಲ್ಲೇ ಇಸ್ಪೀಟ್: 24 ಮಂದಿ ಅರೆಸ್ಟ್!

ಉಡುಪಿ ಜಿಲ್ಲೆ ಕೋಟ ಪೊಲೀಸರು ಜೂಜು ಕೇಂದ್ರದ ಮೇಲೆ ದಾಳಿ ನಡೆಸಿ 24 ಮಂದಿಯನ್ನು ಬಂಧಿಸಿ ಸುಮಾರು 10 ಲಕ್ಷ ರೂ.ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.ಶನಿವಾರ ಸಂಜೆ ಕುಂದಾಪುರ ತಾಲೂಕಿನ ಮೊಳಹಳ್ಳಿ ಗ್ರಾಮದ ಗುಡ್ಡೆಯಂಗಡಿ ಕ್ರಾಸ್ ಬಳಿಯ ವಿನಾಯಕ ಸಭಾಂಗಣದಲ್ಲಿ ಜೂಜಾಟದ ಬಗ್ಗೆ ಖಚಿತ ಮಾಹಿತಿ ಮೇರೆಗೆ ಕೋಟ ಪಿಎಸ್‌ಐ ಶಂಬುಲಿಂಗಯ್ಯ ಮತ್ತಿತರರ ತಂಡ ದಾಳಿ ನಡೆಸಿ 24 ಮಂದಿಯನ್ನು ಬಂಧಿಸಿದೆ. ವಶಪಡಿಸಿಕೊಂಡ ಸೊತ್ತುಗಳ ಒಟ್ಟು ಮೌಲ್ಯ 9,77,250 ರೂ. ಎಂದು ಅಂದಾಜಿಸಲಾಗಿದೆ.

ಇದನ್ನೂ ಓದಿ : ರೈತರಿಗೆ ಖುಷ್: ಕಾಳು ಮೆಣಸು ದರ ಏರಿಕೆ!

HOW TO APPLY : NEET-UG COUNSELLING 2023

Categories
ತೀರ್ಥಹಳ್ಳಿ

ತೀರ್ಥಹಳ್ಳಿಯಲ್ಲಿ ಹಾಡಹಗಲೇ 1 ಲಕ್ಷ ಕದ್ದ ಕಳ್ಳರು!

ತೀರ್ಥಹಳ್ಳಿಯಲ್ಲಿ ಹಾಡಹಗಲೇ 1 ಲಕ್ಷ ಕದ್ದ ಕಳ್ಳರು!
– 3 ಬೈಕಲ್ಲಿ ಬಂದು ಕಾರಲ್ಲಿ ಇಟ್ಟ ಹಣ ಎಗರಿಸಿದರು
– ಪೊಲೀಸರಿಂದ ಸಿಸಿಟಿವಿ ತನಿಖೆ: ಕಳ್ಳರು ಯಾರು

NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿಯಲ್ಲಿ ಸೋಮವಾರ ಹಾಡಹಗಲೇ ಕಳ್ಳರು ಕಾರಲ್ಲಿ ಇಟ್ಟಿದ್ದ 1 ಲಕ್ಷ ಹಣ ಕದ್ದೋಯ್ದ ಘಟನೆ ನಡೆದಿದೆ. ಜನ ಓಡಾಟ ನಡೆಸುವ ಮಾರಿಕಾಂಬಾ ದೇವಾಲಯದ ಮುಂದೆಯೇ ನಡೆದಿದೆ. ತೀರ್ಥಹಳ್ಳಿ ತಾಲೂಕಿನ ಮುಂಡಿಗೆಮನೆ ಸಮೀಪದ ದೇವರಾಜ್ ಎಂಬುವವರು ಕರ್ನಾಟಕ ಬ್ಯಾಂಕಿನಿಂದ ಹಣ ಡ್ರಾ ಮಾಡಿ ಬಳಿಕ ಕಾರಲ್ಲಿ ಇಟ್ಟು ಮತ್ತೆ ಪಾಸ್ ಬುಕ್ ಎಂಟ್ರಿ ಮಾಡಿಸಲು ಹೋಗಿದ್ದರು. ಈ ವೇಳೆ ಕಳ್ಳರು ಕಾರಿನ ಡೋರ್ ಲಾಕ್ ತೆಗೆದು ಹಣ ಕದ್ದಿದ್ದಾರೆ.ಸ್ಥಳೀಯರು ಯಾರೂ ಗಮನಿಸದ ಹಾಗೆ ಕಳ್ಳತನ ನಡೆಸಿದ್ದಾರೆ. ಇದೀಗ ಪೊಲೀಸರು ತನಿಖೆ ನಡೆಸುತ್ತಿದ್ದು ಮೂರು ಮಂದಿ ಬೈಕಲ್ಲಿ ಬಂದು ಕಳ್ಳತನ ನಡೆಸಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ : ರೈತರಿಗೆ ಖುಷ್: ಕಾಳು ಮೆಣಸು ದರ ಏರಿಕೆ!

HOW TO APPLY : NEET-UG COUNSELLING 2023