Categories
ಮಾಹಿತಿ

ರೈತರಿಗೆ ಖುಷ್: ಕಾಳು ಮೆಣಸು ದರ ಏರಿಕೆ!

ರೈತರಿಗೆ ಖುಷ್: ಕಾಳು ಮೆಣಸು ದರ ಏರಿಕೆ!
– 700 ರೂ. ನತ್ತ ಒಂದು ಕೆಜಿ ಕಾಳು ಮೆಣಸು ದರ?
– ಇಳುವರಿ ಕಡಿಮೆ ಹಿನ್ನೆಲೆ ದರ ಹೆಚ್ಚಳ ಸಾಧ್ಯತೆ

NAMMUR EXPRESS NEWS
ಕಾಳು ಮೆಣಸು ಧಾರಣೆಯಲ್ಲಿ ಏರಿಕೆ ಸುಳಿವು ನೀಡಿದೆ. ಆ.5ರಂದು ಹೊರ ಮಾರುಕಟ್ಟೆ ಯಲ್ಲಿ ಕೆ.ಜಿ.ಗೆ 640ರಿಂದ 665 ರೂ. ತನಕವೂ ಖರೀದಿಯಾಗಿದೆ. ಕ್ಯಾಂಪೋದಲ್ಲಿ 610 ರೂ. ತನಕ ಇತ್ತು. ಹೊರ ಮಾರುಕಟ್ಟೆ ಮತ್ತು ಸಹಕಾರ ಸಂಘಗಳು ಧಾರಣೆ ಏರಿಕೆಯಲ್ಲಿ ಪೈಪೋಟಿ ಆರಂಭಿಸಿವೆ. ಆದರೂ ಬೇಡಿಕೆಗೆ ತಕ್ಕಷ್ಟು ಪೂರೈಕೆ ಆಗುತ್ತಿಲ್ಲ. ಈ ಹಿಂದಿನ ಮೂರು ವರ್ಷಗಳಲ್ಲಿ 500 ರೂ. ಗಡಿ ದಾಟದ ಧಾರಣೆ ಈ ವರ್ಷದ ಜುಲೈಯಲ್ಲಿ 600 ರೂ ಸನಿಹಕ್ಕೆ ಬಂದಿತ್ತು. ಆಗಸ್ಟ್ ಮೊದಲ ವಾರದಲ್ಲಿ 630ರಿಂದ 650 ರೂ ಸನಿಹಕ್ಕೆ ತಲುಪಿದೆ. ಲಭ್ಯ ಮಾಹಿತಿ ಪ್ರಕಾರ ಸದ್ಯದಲ್ಲೇ 650 ರೂ. ದಾಟಿ ಮುಂದುವರಿಯುವ ಸಾಧ್ಯತೆ ಇದೆ. ಕಾಳುಮೆಣಸು ದಾಸಾನು ವಹಿಸುವುದು ಉತ್ತಮ ಅನ್ನುವುದು ಕೆಲವರ ಅಭಿಪ್ರಾಯ, ಚೌತಿಯ ಬಳಿಕ ಅಂತಾರಾಷ್ಟ್ರೀಯ ಸರಬರಾಜು ನವೆಂಬರ್ 2ನೇ ವಾರದ ತನಕ ತೆರೆದಿರುತ್ತದೆ. ಈ ಸಮಯದಲ್ಲಿ ಕಾಳು ಮೆಣಸು ಧಾರಣೆಯಲ್ಲಿ ಹೆಚ್ಚಳವಾಗುತ್ತದೆ ಅನ್ನುವುದು ಇದಕ್ಕೆ ಕಾರಣ.

ಕೊರತೆ, ವಿದೇಶದಿಂದ ಆಮದು ನಿಯಂತ್ರಣದ ಕಾರಣದಿಂದ ಧಾರಣೆ ಏರಿಕೆ ಕಂಡಿದೆ. ಧಾರಣೆ ಏರಿಕೆ ಮುಂದುವರಿಯುವ ಸಾಧ್ಯತೆ ಇದೆ. ದೇಶಿಯ ಕಾಳು ಮೆಣಸಿಗೆ ಪೈಪೋಟಿ ನೀಡುತ್ತಿದ್ದ ವಿಯೆಟ್ನಾಂ, ಶ್ರೀಲಂಕಾ ದೇಶಗಳಲ್ಲಿ ಕಡಿಮೆ ಪ್ರಮಾಣದಲ್ಲಿ ದಾಸ್ತಾನು ಇರುವುದು ಕೂಡ ಧಾರಣೆ ಹೆಚ್ಚಳಕ್ಕೆ ಮುಖ್ಯ ಕಾರಣ. ದೇಶೀಯವಾಗಿಯೂ ಉತ್ಪಾದನೆ ಕುಸಿದಿರುವುದರಿಂದ ಕಾಳುಮೆಣಸು ಆಧಾರಿತ ಉತ್ಪಾದನಾ ವಲಯಕ್ಕೆ ಕೊರತೆಯ ಬಿಸಿ ತಟ್ಟಿದೆ.

ಇದನ್ನೂ ಓದಿ : ನಾನು ಬದುಕಿರುವುದೇ ಕಿಮ್ಮನೆಗೆ ಸಹಿಸಲಾಗುತ್ತಿಲ್ಲ

HOW TO APPLY : NEET-UG COUNSELLING 2023

Categories
ಬೆಂಗಳೂರು

ಸಾಲು ಮರದ ತಿಮ್ಮಕ್ಕ ಆಸ್ಪತ್ರೆಗೆ ದಾಖಲು!

ಸಾಲು ಮರದ ತಿಮ್ಮಕ್ಕ ಆಸ್ಪತ್ರೆಗೆ ದಾಖಲು!
– ಅರೋಗ್ಯ ಚೇತರಿಕೆಗೆ ರಾಜ್ಯದ ಜನರ ಹಾರೈಕೆ
– ಮನೆಯಲ್ಲಿ ಬಿದ್ದು ಪೆಟ್ಟು ಮಾಡಿಕೊಂಡ ತಿಮ್ಮಕ್ಕ

NAMMUR EXPRESS NEWS
ಬೆಂಗಳೂರು: ಪರಿಸರ ಪ್ರೇಮಿ, ಪದ್ಮಶ್ರೀ ಪುರಸ್ಕೃತ ಸಾಲುಮರದ ತಿಮ್ಮಕ್ಕ ತಮ್ಮ ಮಂಜುನಾಥ ನಗರದಲ್ಲಿರುವ ನಿವಾಸದಲ್ಲಿ ಕಾಲು ಜಾರಿ ಬಿದ್ದಿದ್ದು, ಬೆನ್ನು ಮೂಳೆಗೆ ಪೆಟ್ಟಾಗಿದೆ. ಜಯನಗರ ಆಪೋಲೋ ಆಸ್ಪತ್ರೆಗೆ ದಾಖಲಿಸಲಾಗಿದೆ, ಚಿಕಿತ್ಸೆ ನೀಡಲಾಗುತ್ತಿದೆ. ಈಗ ಅವರ ಅರೋಗ್ಯದಲ್ಲಿ ಚೇತರಿಕೆ ಆಗುತ್ತಿದೆ ಎಂದು ಮೂಲಗಳು ತಿಳಿಸಿವೆ. ಮರಗಳನ್ನೇ ತಮ್ಮ ಮಕ್ಕಳೆಂದು ಭಾವಿಸಿ ಸಾಕಿದ್ದ ತುಮಕೂರಿನ ಗುಬ್ಬಿ ತಾಲ್ಲೂಕಿನ ತಿಮ್ಮಕ್ಕ ಸಾಲುಮರದ ತಿಮ್ಮಕ್ಕ ಎಂದು ಖ್ಯಾತಿ ಪಡೆದರು. ಮಕ್ಕಳಿಲ್ಲದ ಕಾರಣ ತಿಮ್ಮಕ್ಕ ದಂಪತಿ ಗಿಡ ನೆಟ್ಟು ಸಾಕಿದರು. ಸಾವಿರಾರು ಮರಗಳಿಗೆ ಜೀವ ನೀಡಿರುವ ಸಾಲುಮರದ ತಿಮ್ಮಕ್ಕ ಅವರ ಆರೋಗ್ಯದಲ್ಲಿ ಸದ್ಯ ಏರುಪೇರಾಗಿದೆ. ರಾಜ್ಯದ ಮೂಲೆ ಮೂಲೆಯಲ್ಲೂ ಅವರ ಅರೋಗ್ಯಕ್ಕೆ ಜನ ಹಾರೈಸುತ್ತಿದ್ದಾರೆ.

ಇದನ್ನೂ ಓದಿ : ನಾನು ಬದುಕಿರುವುದೇ ಕಿಮ್ಮನೆಗೆ ಸಹಿಸಲಾಗುತ್ತಿಲ್ಲ

HOW TO APPLY : NEET-UG COUNSELLING 2023

Categories
ಚಿಕ್ಕಮಗಳೂರು

ಕಾಫಿ ನಾಡಲ್ಲಿ ಭೂ ಕಬಳಿಕೆಗೆ ಬ್ರೇಕ್?

ಕಾಫಿ ನಾಡಲ್ಲಿ ಭೂ ಕಬಳಿಕೆಗೆ ಬ್ರೇಕ್?
– ಭೂ ಮಂಜೂರಾತಿ ನಿಯಮ ಉಲ್ಲಂಘಿಸಿದರೆ ಜೈಲು
– ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಎಚ್ಚರಿಕೆ
– ಚಿಕ್ಕಮಗಳೂರು ಜಿಲ್ಲೆಯಲ್ಲಿ ಅತಿ ಹೆಚ್ಚು ಸರ್ಕಾರಿ ಭೂಮಿ ಕಬಳಿಕೆ

NAMMUR EXPRESS NEWS
ಚಿಕ್ಕಮಗಳೂರು: ಕಾಫಿ ನಾಡಲ್ಲಿ ಭೂ ಕಬಳಿಕೆಗೆ ಬ್ರೇಕ್? ಬೀಳುವ ಕಾಲ ಬಂದಿದೆ.
ಭೂ ಮಂಜೂರಾತಿ ನಿಯಮ ಉಲ್ಲಂಘಿಸಿದರೆ ಜೈಲು ಶಿಕ್ಷೆ ಆಗಲಿದೆ. ಈ ಬಗ್ಗೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಎಚ್ಚರಿಕೆ ನೀಡಿದ್ದಾರೆ.
ಚಿಕ್ಕಮಗಳೂರು ಜಿಲ್ಲೆಯಲ್ಲಿ ಅತಿ ಹೆಚ್ಚು ಸರ್ಕಾರಿ ಭೂಮಿ ಕಬಳಿಕೆ ನಡೆದಿರುವ ಹಿನ್ನೆಲೆ ಈ ಆದೇಶ ಆಗಿದೆ.

ತಹಸೀಲ್ದಾರ್ ಹೊಣೆ ಎಚ್ಚರಿಕೆ!

ಬಗರ್ ಹುಕುಂ ಸಮಿತಿಯಲ್ಲಿ ಎಷ್ಟೇ ಸದಸ್ಯರಿದ್ದರೂ ನಿಯಮ ಉಲ್ಲಂಘನೆಯಾದಾಗ ಅಧಿಕಾರಿ ಮಾತ್ರ ಜವಾಬ್ದಾರಿ. ತಹಶೀಲ್ದಾರ್ ಹುದ್ದೆಗೆ ವರ್ಗಾವಣೆಯಾಗಲು ಜನಪ್ರತಿನಿಧಿಗಳಿಂದ ಪತ್ರ ಪಡೆದಿದ್ದರೆ ನಿಯಮಗಳನ್ನು ಹೇಳಲು ಧೈರ್ಯ ಇರುವುದಿಲ್ಲ. ಒತ್ತಡಕ್ಕೆ ಒಳಗಾಗಿ ಭೂಮಂಜೂರಾತಿಯಲ್ಲಿ ನಿಯಮ ಉಲ್ಲಂಘಿಸಿದರೆ ತಹಶೀಲ್ದಾರ್‌ಗಳೇ ಹೊಣೆ ಹೊರಬೇಕಾಗುತ್ತದೆ ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ರಾಜೇಂದರ್‌ ಕುಮಾರ್ ಕಟಾರಿಯಾ ಹೇಳಿದ್ದಾರೆ.
ಗೋಮಾಳ ಭೂಮಿಯನ್ನು ಸಾಗುವಳಿಗೆ ಮಂಜೂರು ಮಾಡಲು ಯಾರಿಗೂ ಅಧಿಕಾರ ಇಲ್ಲ. ಒತ್ತಡಕ್ಕೆ ಒಳಗಾಗಿ ನಿಯಮ ಉಲ್ಲಂಘಿಸಿದರೆ ತಹಶೀಲ್ದಾರ್‌ಗಳು ಜೈಲಿಗೆ ಹೋಗುವುದು ಗ್ಯಾರಂಟಿ ಎಂದು ಎಚ್ಚರಿಕೆ ನೀಡಿದರು. ನಮೂನೆ 50, 53, 57 ರಲ್ಲಿ ಸಲ್ಲಿಕೆಯಾಗಿರುವ ಅರ್ಜಿಗಳನ್ನು ಆಧರಿಸಿ ಜಮೀನು ಮಂಜೂರು ಮಾಡುವಾಗ ಎಚ್ಚರಿಕೆ ವಹಿಸಬೇಕು ಎಂದು ಸೂಚಿಸಿದರ ನಿಯಮ ಉಲ್ಲಂಘಿಸಿದ 48 ಪ್ರಕರಣಗಳು ನನ್ನ ಮುಂದೆ ಬಂದಿದ್ದು, ಈ ಪೈಕಿ 9 ಪ್ರಕರಣಗಳಲ್ಲಿ ತಹಶೀಲ್ದಾರ್ ಗಳ ವಿರುದ್ದ ಎಫ್.ಐ.ಆರ್.ಗೆ ಶಿಫಾರಸು ಮಾಡಿದ್ದೇನೆ ಎಂದು ತಿಳಿಸಿದ್ದಾರೆ.

ಸಾರ್ವಜನಿಕ ಉದ್ದೇಶಕ್ಕೆ ಮಂಜೂರು

ಸಾಗುವಳಿ ಮಾಡುತ್ತಿರುವ ಸರ್ಕಾರಿ ಜಮೀನು ಊರಿನ ಸಾರ್ವಜನಿಕ ಉಪಯೋಗಕ್ಕೆ ಅಗತ್ಯವಿದೆ ಎನಿಸಿದರೆ ಅದನ್ನು ಮಂಜೂರು ಮಾಡಬಾರದು. ಅಂಗನವಾಡಿ, ಶಾಲೆ, ಆಸ್ಪತ್ರೆ ಆಟದ ಮೈದಾನಕ್ಕೆ ಜಾಗ ಅಗತ್ಯವಿದ್ದರೆ ಸಾಗುವಳಿ ಬಿಡಿಸಿ ಸಂಬಂಧಪಟ್ಟ ಇಲಾಖೆಗೆ ಮಂಜೂರು ಮಾಡಬೇಕು ಎಂದರು.
ಸರ್ಕಾರಿ ಭೂಮಿ ಒತ್ತುವರಿಯಲ್ಲಿ ಚಿಕ್ಕಮಗಳೂರು ಜಿಲ್ಲೆ ಅಗ್ರಸ್ಥಾನದಲ್ಲಿದೆ. ಜಿಲ್ಲೆಯಾದ್ಯಂತ ಎರಡು ಲಕ್ಷ ಎಕರೆಗೂ ಹೆಚ್ಚು ಸರ್ಕಾರಿ ಭೂಮಿ ಒತ್ತುವರಿಯಾಗಿದ್ದು, ಸಾರ್ವಜನಿಕ ಉದ್ದೇಶಕ್ಕೆ ಭೂಮಿ ಸಿಗುವುದು ಕಷ್ಟವಾಗಿದೆ ಎಂದರು. 50 ಎಕರೆ ಜಮೀನು ಹೊಂದಿರುವವರು ಕೂಡ ಸರ್ಕಾರಿ ಭೂಮಿಯನ್ನು ಒತ್ತುವರಿ ಮಾಡಿಕೊಂಡಿದ್ದಾರೆ ಮತ್ತು ಮಂಜೂರಾತಿಗೆ ಅರ್ಜಿ ಸಲ್ಲಿಸಿದ್ದಾರೆ ಎಂದು ಕಟಾರಿಯಾ ಹೇಳಿದ್ದಾರೆ. ಅತಿಕ್ರಮಣದಿಂದ ಸ್ಮಶಾನ ಭೂಮಿ ಮತ್ತು ಇತರ ಸಾರ್ವಜನಿಕ ಕಾರಣಗಳಿಗಾಗಿ ಭೂಮಿಯನ್ನು ಪಡೆಯುವುದು ಕಷ್ಟಕರವಾಗಿದೆ. ಈ ಬಗ್ಗೆ ಜಿಲ್ಲಾಧಿಕಾರಿಯೂ ಗಮನ ಹರಿಸಬೇಕು ಎಂದರು.

ಇದನ್ನೂ ಓದಿ : ನಾನು ಬದುಕಿರುವುದೇ ಕಿಮ್ಮನೆಗೆ ಸಹಿಸಲಾಗುತ್ತಿಲ್ಲ

HOW TO APPLY : NEET-UG COUNSELLING 2023

Categories
ರಾಷ್ಟ್ರೀಯ ವಾರ್ತೆ

ದೇವಿಗೆ 11 ಲಕ್ಷ ರೂ. ನೋಟುಗಳ ಅಲಂಕಾರ!

ದೇವಿಗೆ 11 ಲಕ್ಷ ರೂ. ನೋಟುಗಳ ಅಲಂಕಾರ!
– ಕೊಯಮತ್ತೂರು ದೇವಸ್ಥಾನದಲ್ಲಿ ವಿಶೇಷ ಪೂಜೆ
– ನೋಟೇ ಹಾರ, ತೋರಣ, ಅಲಂಕಾರಿಕ ಚಕ್ರವೇ ನೋಟು
– ಭಕ್ತರಿಂದ ಹಣ ಸಂಗ್ರಹಣೆ, ಆಮೇಲೆ ವಾಪಾಸ್

NAMMUR EXPRESS NEWS
ದೇವಿಗೆ 11 ಲಕ್ಷ ರೂ. ನೋಟುಗಳ ಅಲಂಕಾರ. ಮಾಡಿರುವ ಘಟನೆ ಕೊಯಮತ್ತೂರು ದೇವಸ್ಥಾನದಲ್ಲಿ ವಿಶೇಷ ಪೂಜೆ ನಡೆದಿದೆ.
ಆದಿ ಮಾಸದ ಮೂರನೇ ಶುಕ್ರವಾರದ ಅಂಗವಾಗಿ ವಿಶೇಷ ಪೂಜೆಗಾಗಿ ತಮಿಳುನಾಡಿನ ಕೊಯಮತ್ತೂರಿನ ದೇವಾಲಯವೊಂದರ ಗರ್ಭಗುಡಿ ಮತ್ತು ದೇವತೆಯನ್ನು 11 ಲಕ್ಷ ರೂ.ಗಳ ನೋಟುಗಳಿಂದ ಅಲಂಕರಿಸಲಾಗಿತ್ತು.
ಕೊಯಮತ್ತೂರಿನ ಗೌಂಡಪಾಳ್ಯಂ ಬಳಿಯ ಪರಂಜ್ಯೋತಿ ಮಾರಿಯಮ್ಮನ್ ದೇವಾಲಯದ ಗರ್ಭಗುಡಿಯೊಳಗೆ ಆಲಂಕಾರವನ್ನು ಹಾಕಲು ವಿವಿಧ ಮುಖಬೆಲೆಯ ನೋಟುಗಳನ್ನು ಒಟ್ಟಿಗೆ ಜೋಡಿಸಲಾಗಿತ್ತು. ನೋಟುಗಳನ್ನು ಹಾರಗಳು, ತೋರಣಗಳು ಮತ್ತು ಅಲಂಕಾರಿಕ ಚಕ್ರಗಳಾಗಿಯೂ ಬಳಸಲಾಗಿತ್ತು.
ದೇವಾಲಯದ ವ್ಯವಸ್ಥಾಪಕರಲ್ಲಿ ಒಬ್ಬರಾದ ಕೃಷ್ಣಸ್ವಾಮಿ ಅವರ ಪ್ರಕಾರ, ವಿಶೇಷ ದಿನದಂದು ದೇವಾಲಯವನ್ನು ಅಲಂಕರಿಸಲು ಸ್ಥಳೀಯ ಭಕ್ತರಿಂದ ಹಣವನ್ನು ಸಂಗ್ರಹಿಸಲಾಗಿದೆ. ಅಲಂಕಾರವನ್ನು ಒಂದು ದಿನ ಇಡಲಾಗಿತ್ತು. ಒಮ್ಮೆ ತೆಗೆದುಹಾಕಿದ ನಂತರ, ಅದನ್ನು ನೀಡಿದವರಿಗೆ ಹಣವನ್ನು ಹಿಂತಿರುಗಿಸಲಾಯಿತು ಎಂದು ಅವರು ಹೇಳಿದರು.

ಹಲವಾರು ವರ್ಷಗಳಿಂದ ಇಂತಹ ಅಲಂಕಾರಗಳನ್ನು ಮಾಡುತ್ತಿದ್ದಾರೆ ಎಂದು ಕೃಷ್ಣಸ್ವಾಮಿ ಹೇಳಿದ್ದಾರೆ. ಸಂಪ್ರದಾಯದ ಹಿಂದಿನ ಕಾರಣವನ್ನು ವಿವರಿಸಿದ ಕೃಷ್ಣಸ್ವಾಮಿ, ಇದು ದೇವರ ಮೇಲಿನ ಅವರ ನಂಬಿಕೆ ಮತ್ತು ಪ್ರೀತಿಯ ಅಭಿವ್ಯಕ್ತಿಯಾಗಿದೆ ಎಂದು ಹೇಳಿದರು. ದೇವಾಲಯದಲ್ಲಿ ವಿಶೇಷ ದೀಪ ಪೂಜೆಯೂ ನಡೆಯಿತು, ಇದರಲ್ಲಿ 200ಕ್ಕೂ ಹೆಚ್ಚು ಮಹಿಳೆಯರು ಭಾಗವಹಿಸಿದ್ದರು.

ಇದನ್ನೂ ಓದಿ : ನಾನು ಬದುಕಿರುವುದೇ ಕಿಮ್ಮನೆಗೆ ಸಹಿಸಲಾಗುತ್ತಿಲ್ಲ

HOW TO APPLY : NEET-UG COUNSELLING 2023

Categories
ರಾಷ್ಟ್ರೀಯ ವಾರ್ತೆ

ಕ್ರಾಂತಿಕಾರಿ ಕವಿ ‘ಗದ್ದರ್’ ಇನ್ನಿಲ್ಲ!

ಕ್ರಾಂತಿಕಾರಿ ಕವಿ ‘ಗದ್ದರ್’ ಇನ್ನಿಲ್ಲ!
– ‘ನಕ್ಸಲಿಸಂ ಚಳವಳಿ’ಯಲ್ಲಿ ಭಾಗಿಯಾಗಿದ್ದ ಹೋರಾಟಗಾರ
– ರಾಜಕೀಯ ಪಾರ್ಟಿ ಕಟ್ಟಲು ಸಿದ್ಧತೆಯಲ್ಲಿರುವಾಗಲೇ ವಿಧಿವಶ

NAMMUR EXPRESS NEWS
ದೇಶದ ಇತಿಹಾಸದಲ್ಲಿ ಜಾನಪದ ಕಲೆ ಮೂಲಕ ಹೋರಾಟಗಾರನಾಗಿ ಹಲವು ಕ್ರಾಂತಿಗೆ ಕಾರಣವಾಗಿದ್ದ ತೆಲಂಗಾಣದ ‘ಗದ್ದರ್’ ಎಂದೇ ಹೆಸರುವಾಸಿಯಾದ ಖ್ಯಾತ ಜಾನಪದ ಕಲಾವಿದ ಗುಮ್ಮಡಿ ವಿಠಲ್ ರಾವ್ (77) ಇಹಲೋಕ ತ್ಯಜಿಸಿದ್ದಾರೆ.
ತೀವ್ರ ಅನಾರೋಗ್ಯದಿಂದ ಭಾನುವಾರ ಹೈದರಾಬಾದ್‌ನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.1949ರಲ್ಲಿ ತೆಲಂಗಾಣದ ತುಪಾನ್‌ನಲ್ಲಿ ಜನಿಸಿದ ಗದ್ದರ್ ಅವರು ತಮ್ಮ ಕ್ರಾಂತಿಕಾರಿ ಕವಿತೆ ಮತ್ತು ಗಾಯನದ ಮೂಲಕ ಖ್ಯಾತಿ ಪಡೆದಿದ್ದರು. ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಇತ್ತೀಚೆಗೆ ಹೈದರಾಬಾದ್‌ನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಇದೀಗ ದೇಶದ ಗಟ್ಟಿ ದನಿ ನಿಂತು ಹೋಗಿದೆ.

ತೆಲಂಗಾಣ ಪ್ರತ್ಯೇಕ ರಾಜ್ಯ ಹೋರಾಟದಲ್ಲಿ ಪ್ರಮುಖ ಪಾತ್ರ!

ತೆಲಂಗಾಣ ಪ್ರತ್ಯೇಕ ರಾಜ್ಯ ಹೋರಾಟದಲ್ಲಿ ಗದ್ದ‌ ಪ್ರಮುಖ ಪಾತ್ರ ವಹಿಸಿದ್ದರು. ತಮ್ಮ ಕ್ರಾಂತಿಕಾರಿ ಸಾಹಿತ್ಯ ಮತ್ತು ಗಾಯನದ ಮೂಲಕ ‘ತೆಲಂಗಾಣ ಚಳವಳಿಗೆ’ ಹೊಸ ಹುರುಪನ್ನೇ ನೀಡಿದ್ದರು. 2010ರವೆರೆಗೂ ‘ನಕ್ಸಲಿಸಂ ಚಳವಳಿ’ಯಲ್ಲಿ ಗುರುತಿಸಿಕೊಂಡಿದ್ದ ಗದ್ದರ್, ತೆಲಂಗಾಣ ಪ್ರತ್ಯೇಕ ರಾಜ್ಯವಾದ ಮೂರು ವರ್ಷದ ಬಳಿಕ ಮಾವೋವಾದಿಗಳ ಸಂಪರ್ಕವನ್ನು ಸಂಪೂರ್ಣವಾಗಿ ತ್ಯಜಿಸಿದ್ದರು.2018ರ ತೆಲಂಗಾಣ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಗದ್ದ‌ ಬೆಂಬಲಿಸಿದ್ದರು. ಭಾರತ್ ಜೋಡೊ ಯಾತ್ರೆ ಸಂದರ್ಭ ರಾಹುಲ್ ಗಾಂಧಿಯವರನ್ನೂ ಭೇಟಿ ಮಾಡಿದ್ದರು.

ಚುನಾವಣೆ ಸ್ಪರ್ಧೆ ಕನಸು ನನಸು ಆಗಲಿಲ್ಲ!

ಅನಾರೋಗ್ಯಕ್ಕೂ ಮೊದಲು ಚುನಾವಣಾ ಅಖಾಡಕ್ಕೆ ಇಳಿಯುವ ಕನಸನ್ನು ಕಂಡಿದ್ದ ಗದ್ದರ್ ಅವರು ‘ಗದ್ದರ್ ಪ್ರಜಾ ಪಾರ್ಟಿ’ ಎಂಬ ಹೊಸ ಪಕ್ಷ ಸ್ಥಾಪನೆಗೂ ಹೊರಟಿದ್ದರು. ಭವಿಷ್ಯದ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿಯೂ ಅವರುಹೇಳಿಕೊಂಡಿದ್ದರು. ಆದರೆ ಅವರ ರಾಜಕೀಯ ಕನಸು ಕನಸಾಗಿಯೇ ಉಳಿದಿದೆ.

ಇದನ್ನೂ ಓದಿ : ನಾನು ಬದುಕಿರುವುದೇ ಕಿಮ್ಮನೆಗೆ ಸಹಿಸಲಾಗುತ್ತಿಲ್ಲ

HOW TO APPLY : NEET-UG COUNSELLING 2023

Categories
ಬೆಂಗಳೂರು

ಸ್ಟಾರ್ಟ್ ಮಾಡುತ್ತಿದ್ದಂತೆ ಹೊತ್ತಿ ಉರಿದ ಎಲೆಕ್ಟ್ರಿಕಲ್ ಬೈಕ್!

ಸ್ಟಾರ್ಟ್ ಮಾಡುತ್ತಿದ್ದಂತೆ ಹೊತ್ತಿ ಉರಿದ ಎಲೆಕ್ಟ್ರಿಕಲ್ ಬೈಕ್!
– ಚಾಮರಾಜನಗರ ನಗರದಲ್ಲಿ ನಡೆದ ಘಟನೆ
– ಮನೆ ಮುಂದೆ ನಿಲ್ಲಿಸಿದ್ದ ಬೈಕ್‌ಗಳಿಗೆ ಬೆಂಕಿ ಹಚ್ಚಿದ ದುಷ್ಕರ್ಮಿಗಳು

NAMMUR EXPRESS NEWS
ಚಾಮರಾಜನಗರ: ಚಾರ್ಚ್ ಮಾಡಿ ಮನೆ ಮುಂದೆ ನಿಲ್ಲಿಸಿದ್ದ ಬೈಕ್ ಅನ್ನು ಸ್ಟಾರ್ಟ್ ಮಾಡಿದ ವೇಳೆ ಧಗಧಗನೇ ಹೊತ್ತಿ ಉರಿದಿರುವ ಘಟನೆ ಚಾಮರಾಜನಗರ ತಾಲೂಕಿನ‌ ಕೊತ್ತಲವಾಡಿ ಗ್ರಾಮದಲ್ಲಿ ನಡೆದಿದೆ‌. ಕೊತ್ತಲವಾಡಿ ಗ್ರಾಮದ ಬಸವರಾಜಪ್ಪ ಎಂಬವರಿಗೆ ಸೇರಿದ ಬೈಕ್ ಇದಾಗಿದ್ದು ಚಾರ್ಜ್ ಮಾಡಿ ಬೈಕನ್ನು ಸ್ಟಾರ್ಟ್ ಮಾಡಿದ ವೇಳೆ ಹೊಗೆ ಕಾಣಿಸಿಕೊಂಡಿದೆ, ಇದರಿಂದ ಆತಂಕಗೊಂಡು ಹಿಂದೆ ಸರಿದ ವೇಳೆ ದಿಢೀರನೇ ಬೆಂಕಿ ಜ್ವಾಲೆ ಕಾಣಿಸಿಕೊಂಡು ಹೊತ್ತಿ ಉರಿದಿದ್ದು ಅದೃಷ್ಟವಶಾತ್ ಮತ್ತೊಂದು ಬೈಕ್ ಗೆ ಹಾಗೂ ಮನೆಗೆ ಬೆಂಕಿ ವ್ಯಾಪಿಸಿಲ್ಲ. ಕೂಡಲೇ, ಕೆಲ ಯುವಕರು ಸೇರಿ ಉರಿಯುತ್ತಿದ್ದ ಬೈಕ್ ಗೆ ನೀರು ಹಾಯಿಸಿ ಬೆಂಕಿ ನಂದಿಸಿದ್ದಾರೆ. ಬೆಳ್ಳಂಬೆಳಗ್ಗೆ ಇ-ಬೈಕ್ ಸವಾರನಿಗೆ ದೊಡ್ಡ ಶಾಕ್ ಕೊಟ್ಟಿದೆ.

ಮನೆ ಮುಂದೆ ನಿಲ್ಲಿಸಿದ್ದ ಬೈಕ್‌ಗಳಿಗೆ ಬೆಂಕಿ ಹಚ್ಚಿದ ದುಷ್ಕರ್ಮಿಗಳು

ಬೆಂಗಳೂರಲ್ಲಿ ಕಿಡಿಗೇಡಿಗಳ ಅಟ್ಟಹಾಸ ಮಿತಿಮೀರಿದ್ದು, ಮನೆ ಮುಂದೆ ನಿಲ್ಲಿಸಿದ್ದ ಬೈಕ್‌ಗಳಿಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿದ ಘಟನೆ ವಸಂತನಗರದಲ್ಲಿ ಬೆಳಗಿನ ಜಾವ 5 ಗಂಟೆ ವೇಳೆಗೆ ನಡೆದಿದೆ. ದುಷ್ಕರ್ಮಿಗಳು ಬೆಂಕಿ ಹಚ್ಚಿದ ಘಟನೆ ವಸಂತನಗರದಲ್ಲಿ ಬೆಳಗಿನ ಜಾವ 5 ಗಂಟೆ ವೇಳೆಗೆ ನಡೆದಿದೆ.ಇನ್ನು ಮೂವರು ಕಿಡಿಗೇಡಿಗಳು ಸೇರಿ ಬೆಂಕಿ ಹಚ್ಚಿದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸ್ಥಳಕ್ಕೆ ಹೈಗೌಂಡ್ಸ್ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇನ್ನು ಘಟನೆ ಕುರಿತು ಸಿಸಿಟಿವಿ ದೃಶ್ಯ ಆಧರಿಸಿ ಆರೋಪಿಗಳಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.

ಇದನ್ನೂ ಓದಿ : ನಾನು ಬದುಕಿರುವುದೇ ಕಿಮ್ಮನೆಗೆ ಸಹಿಸಲಾಗುತ್ತಿಲ್ಲ

HOW TO APPLY : NEET-UG COUNSELLING 2023

Categories
ರಾಜ್ಯ

ಕಿರಿಯ ರೈಡರ್ ಶ್ರೇಯಸ್ ರೈಡಿಂಗ್ ವೇಳೆ ಸಾವಿನ ಮನೆಗೆ!

ಕಿರಿಯ ರೈಡರ್ ಶ್ರೇಯಸ್ ರೈಡಿಂಗ್ ವೇಳೆ ಸಾವಿನ ಮನೆಗೆ!
– ಬೆಂಗಳೂರಿನ 13 ವರ್ಷದ ಬಾಲಕ ಸ್ಪರ್ಧೆಯ ವೇಳೆ ಅಪಘಾತ: ಸಾಧಕ ಕ್ರೀಡಾಪಟು ದುರಂತ ಅಂತ್ಯ
– ಮೂಡಿಗೆರೆ: ಆಟ ಆಡಲು ಹೋಗಿದ್ದ ಬಾಲಕ ಗುಂಡಿಗೆ ಬಲಿ
– ಮಂಗಳೂರು: ಯಶಸ್ವಿ ಉದ್ಯಮಿ 8ನೇ ಮಹಡಿಯಿಂದ ಬಿದ್ದು ಆತ್ಮಹತ್ಯೆ

NAMMUR EXPRESS NEWS
ಚೆನ್ನೈನ ಮದ್ರಾಸ್ ಇಂಟರ್ ನ್ಯಾಶನಲ್ ಸರ್ಕ್ಯೂಟ್ನಲ್ಲಿ ಆಯೋಜಿಸಿದ್ದ ಇಂಡಿಯನ್ ನ್ಯಾಷನಲ್ ಮೋಟಾರು ಸೈಕಲ್ ರೇಸಿಂಗ್ ಚಾಂಪಿಯನ್ ಶಿಪ್ ನಲ್ಲಿ ಕಿರಿಯ ರೈಡರ್ ಶ್ರೇಯಸ್ ಹರೀಶ್ ದುರ್ಮರಣಕ್ಕೀಡಾಗಿದ್ದಾರೆ. ಶ್ರೇಯಸ್ ಹರೀಶ್ ಎಂಬ ಬೆಂಗಳೂರಿನ 13 ವರ್ಷದ ಬಾಲಕ ಸ್ಪರ್ಧೆಯಲ್ಲಿ ಮೂರನೇ ಸುತ್ತಿನ ರೈಡಿಂಗ್ ವೇಳೆ ಅಪಘಾತಕ್ಕೆ ಈಡಾಗಿದ್ದು, ತಲೆಗೆ ಗಂಭೀರ ಗಾಯಗಳಾಗಿತ್ತು. ಕೂಡಲೇ ಆತನನ್ನು ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಿಸದೇ ಆತ ಮೃತಪಟ್ಟಿದ್ದಾನೆ. ಈ ಹಿನ್ನೆಲೆ ಶನಿವಾರ ಮತ್ತು ಭಾನುವಾರದಂದು ನಿಗದಿಯಾಗಿದ್ದ ಉಳಿದ ರೇಸ್ ಗಳನ್ನು ರದ್ದುಗೊಳಿಸಿದೆ.
ರಾಷ್ಟ್ರಮಟ್ಟದಲ್ಲಿ ಹಲವಾರು ರೇಸ್ ಗಳಲ್ಲಿ ಭಾಗಿಯಾಗಿ ಅನೇಕ ಪ್ರಶಸ್ತಿಗೆ ಶ್ರೇಯಸ್ ಭಾಜನರಾಗಿದ್ದರು. ಶ್ರೇಯಸ್ ಸಾವಿಗೆ ಪೋಷಕರು ಮಮ್ಮುಲ ಮರುಗಿದ್ದಾರೆ.

ಮೂಡಿಗೆರೆ: ಆಟ ಆಡಲು ಹೋಗಿದ್ದ ಬಾಲಕ ಗುಂಡಿಗೆ ಬಲಿ

ಆಟವಾಡಲು ಹೋದ ಬಾಲಕ ನೀರು ತುಂಬಿದ್ದ ಗುಂಡಿಗೆ ಬಿದ್ದು ಮೃತಪಟ್ಟಿರುವ ಘಟನೆ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಗೋಣಿಬೀಡು ಬಳಿ ಜನ್ನಾಪುರದಲ್ಲಿ ಶವಿವಾರ ನಡೆದಿದೆ. ಸುನೀಲ್ ಎಂಬುವರ ಮಗ ಆಶಿ‌ ಮೃತಪಟ್ಟ ಬಾಲಕ. ಸರಕಾರಿ ಕಟ್ಟಡವೊಂದರ ಕಾಮಗಾರಿ ನಡೆಯುವ ಸ್ಥಳದಲ್ಲಿ ನಿರ್ಮಾಣ ಮಾಡಿದ್ದ ಗುಂಡಿಯಲ್ಲಿ ನೀರು ತುಂಬಲಾಗಿತ್ತು. ಇಲ್ಲಿಗೆ ಮೂವರು ಬಾಲಕರು ಶನಿವಾರ ಆಟವಾಡಲು ತೆರಳಿದ್ದರು. ಈ ವೇಳೆ ಬಾಲಕ ಆಶಿ‌ ಗುಂಡಿಗೆ ಬಿದ್ದು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದನೆ ಎಂದು ತಿಳಿದು ಬಂದಿದೆ.ಜನ್ನಾಪುರದ ಚಿನ್ನಿಗ ಸರ್ಕಾರಿ ಪ್ರೌಢಶಾಲೆಯ ಪಕ್ಕದಲ್ಲಿ ಇತ್ತೀಚಿಗಷ್ಟೇ ಗುದ್ದಲಿಪೂಜೆ ಮಾಡಿ ನೂತನವಾಗಿ ನಿರ್ಮಿಸುತ್ತಿರುವ, ಮುರಾರ್ಜಿ ವಸತಿ ಶಾಲೆ ನೂತನ ಕಟ್ಟಡಕ್ಕೆಂದು ನೀರಿಗೋಸ್ಕರ ತೋಡಿರುವ ತಾತ್ಕಾಲಿಕ ನೀರಿನ ಗುಂಡಿ ತೆಗೆದಿರುತ್ತಾರೆ. ಇದರ ಸುತ್ತಾ ಕಟ್ಟಡದ ಕಾಮಗಾರಿ ಅಧಿಕಾರಿಗಳು ಹಾಗೂ ಇಂಜಿನಿಯರ್ ನಿರ್ಲಕ್ಷತೆಯಿಂದ ಮೆಸ್ ಅಡ್ಡಗಾವಲು ಇಲ್ಲದ ಕಾರಣ ಶಾಲೆಯ ಪಕ್ಕದಲ್ಲಿ ಇರುವ ಸುನಿಲ್ ಎಂಬುವವರ ಮನೆಯ 8 ವರ್ಷದ ಮಗು ಆಟವಾಡಲು ಹೋಗಿ ಬಾವಿಯ ಸುತ್ತ ಏನು ಇಲ್ಲದ ಕಾರಣ ಕಾಲು ಜಾರಿ ನೀರಿಗೆ ಬಿದ್ದು ಕೊನೆಯುಸಿರು ಎಳೆದಿದ್ದಾನೆ.

8ನೇ ಮಹಡಿಯಿಂದ ಬಿದ್ದು ಉದ್ಯಮಿ ಆತ್ಮಹತ್ಯೆ

ಮಂಗಳೂರು: ಯಶಸ್ವಿ ಉದ್ಯಮಿಯೋರ್ವರು ಬಹುಮಹಡಿ ಕಟ್ಟಡದಿಂದ ಹಾರಿ ಆತ್ಮಹತ್ಯೆ ಬೆಂದೂ‌ವೆಲ್ ಬಳಿ ನಡೆದಿದೆ.
ಮಾಡಿಕೊಂಡ ಘಟನೆ ಮಂಗಳೂರಿನ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯನ್ನು ಬಿಲ್ಡರ್, ಯುವ ಉದ್ಯಮಿ ಮೋಹನ್ ಅಮೀನ್ (48) ಎನ್ನಲಾಗಿದೆ. ಕಟ್ಟಡದ 8ನೇ ಮಹಡಿಯಿಂದ ಭಾನುವಾರ ಮುಂಜಾನೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದು ಆತ್ಮಹತ್ಯೆಗೆ ಸ್ಪಷ್ಟ ಕಾರಣಗಳು ತಿಳಿದು ಬಂದಿಲ್ಲ. ಕದ್ರಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲು ಮಾಡಿ ತನಿಖೆ ಕೈಗೊಂಡಿದ್ದಾರೆ.

 

ಇದನ್ನೂ ಓದಿ : ನಾನು ಬದುಕಿರುವುದೇ ಕಿಮ್ಮನೆಗೆ ಸಹಿಸಲಾಗುತ್ತಿಲ್ಲ

HOW TO APPLY : NEET-UG COUNSELLING 2023

Categories
ಬೆಂಗಳೂರು ಮಾಹಿತಿ

ಎಂಜಿನಿಯರಿಂಗ್‌ ಕೋರ್ಸ್ ಶುಲ್ಕ ಶೇ.3 ಇಳಿಕೆ!

ಎಂಜಿನಿಯರಿಂಗ್‌ ಕೋರ್ಸ್ ಶುಲ್ಕ ಶೇ.3 ಇಳಿಕೆ!
– ಬಿಜೆಪಿ ಸರ್ಕಾರದ ಶೇ.10ರಷ್ಟು ಇಳಿಕೆ ಮಾಡುವ ಪ್ರಸ್ತಾಪಕ್ಕೆ ತಡೆ
– ಈಗ ಎಷ್ಟು ಹೆಚ್ಚಾಯ್ತು…?, ಎಷ್ಟು ಕಡಿಮೆ ಆಯ್ತು..?

NAMMUR EXPRESS NEWS
ಬೆಂಗಳೂರು: 2023-24ರ ಶೈಕ್ಷಣಿಕ ವರ್ಷದ ಎಂಜಿನಿಯರಿಂಗ್‌ ಕೋರ್ಸ್‌ಗಳ ಶುಲ್ಕವನ್ನು ರಾಜ್ಯ ಸರ್ಕಾರ ಶೇ 3ರಷ್ಟು ಇಳಿಕೆ ಮಾಡಿದೆ. ಖಾಸಗಿ ಎಂಜಿನಿಯರಿಂಗ್ ಕಾಲೇಜುಗಳ ಬೇಡಿಕೆಗೆ ಸಮ್ಮತಿಸಿದ್ದ ಹಿಂದಿನ ಬಿಜೆಪಿ ಸರ್ಕಾರ ಶೇ 10ರಷ್ಟು ಶುಲ್ಕ ಹೆಚ್ಚಳ ಮಾಡಲು ಕಳೆದ ಏಪ್ರಿಲ್‌ನಲ್ಲಿ ಒಪ್ಪಿಗೆ ನೀಡಿತ್ತು. ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಶುಲ್ಕ ಹೆಚ್ಚಳಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಆಕ್ಷೇಪ ವ್ಯಕ್ತಪಡಿಸಿ, ಆದೇಶ ಹಿಂಪಡೆಯಲು ತಾಂತ್ರಿಕ ಶಿಕ್ಷಣ ಇಲಾಖೆಗೆ ಸೂಚಿಸಿದ್ದರು.
ವಿಧಾನಸೌಧದಲ್ಲಿ ನಡೆದ ಸಭೆಯಲ್ಲಿ ಈ ಕುರಿತು ಸುದೀರ್ಘ ಚರ್ಚೆ ನಡೆಸಿದ ಉನ್ನತ ಹಾಗೂ ತಾಂತ್ರಿಕ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್, ಹಿಂದಿನ ಸರ್ಕಾರ ಒಪ್ಪಿದ ಶೇ 10ರಷ್ಟು ಶುಲ್ಕ ಹೆಚ್ಚಳಕ್ಕೆ ಬದಲಾಗಿ, ಶೇ 7ರಷ್ಟು ಹೆಚ್ಚಳ ಮಾಡಲು ಸಮ್ಮತಿ ಸೂಚಿಸಿದ್ದಾರೆ.

2022-23ರ ಶೈಕ್ಷಣಿಕ ಸಾಲಿನಲ್ಲಿ ಸರ್ಕಾರಿ ಮತ್ತು ಅನುದಾನಿತ ಎಂಜಿನಿಯರಿಂಗ್ ಕಾಲೇಜುಗಳ ಸರ್ಕಾರಿ ಕೋಟಾದ ವಿದ್ಯಾರ್ಥಿಗಳ ಶುಲ್ಕ 338,200 ಇತ್ತು. ಅಲ್ಪಸಂಖ್ಯಾತರ ಕಾಲೇಜುಗಳಲ್ಲಿ (ಟೈಪ್-1) 191,796, ಅನುದಾನರಹಿತ ಕಾಲೇಜುಗಳಲ್ಲಿ (ಟೈಪ್-2) 198,984 ಮತ್ತು ಡೀಮ್ಸ್ ಮತ್ತು ಖಾಸಗಿ ವಿಶ್ವವಿದ್ಯಾಲಯಗಳಲ್ಲಿ 391,796 ಇತ್ತು. ಪ್ರಸಕ್ತ ಸಾಲಿಗೆ ಪ್ರವೇಶ ಪಡೆಯುವ ವಿದ್ಯಾರ್ಥಿಗಳು ಹಿಂದಿನ ಮೊತ್ತಕ್ಕೆ ಶೇ 7ರಷ್ಟು ಹೆಚ್ಚುವರಿ ಶುಲ್ಕ ಪಾವತಿಸಬೇಕಿದೆ.

ಇದನ್ನೂ ಓದಿ : ನಾನು ಬದುಕಿರುವುದೇ ಕಿಮ್ಮನೆಗೆ ಸಹಿಸಲಾಗುತ್ತಿಲ್ಲ

HOW TO APPLY : NEET-UG COUNSELLING 2023

Categories
ಕರಾವಳಿ

ಕರಾವಳಿ ನ್ಯೂಸ್ ಅಪ್ಡೇಟ್

ಸಮುದ್ರದಲ್ಲಿ ತಡ ರಾತ್ರಿ ಮುಳುಗಿ ಯುವತಿ ಸಾವು!
– ಮಲ್ಪೆ ಸಮುದ್ರದಲ್ಲಿ ನಡೆದ ಘಟನೆ: ಇನ್ನೊಬ್ಬಳ ರಕ್ಷಣೆ
– ಅಪ್ರಾಪ್ತ ಬಾಲಕಿ ಅತ್ಯಾಚಾರ: 10 ವರ್ಷ ಜೈಲು!
– ಉಡುಪಿ: ಮೀನು ಹಿಡಿಯಲು ತೆರಳಿದ್ದ ದೋಣಿ ಪಲ್ಟಿ!
– ಕಾರ್ಕಳ: ಪೆಟ್ರೋಲ್ ಬಂಕ್ ಅಲ್ಲಿ ಕಳ್ಳತನ
– ಮಂಗಳೂರು: ಕರ್ಕಶ ಹಾರ್ನ್ ಬಸ್ ವಿರುದ್ಧ ಕೇಸ್

NAMMUR EXPRESS NEWS
ಉಡುಪಿ: ತಡರಾತ್ರಿ ಸಮುದ್ರದಲ್ಲಿ ಮುಳುಗಿ ಬಾಲಕಿ ಮೃತಪಟ್ಟಿದ್ದಾಳೆ.
ಮಡಿಕೇರಿಯಿಂದ ನಾಪತ್ತೆಯಾಗಿದ್ದ ಇಬ್ಬರು ಯುವತಿಯರ ಪೈಕಿ ಒಬ್ಬಳು ಮಲ್ಪೆ ಬೀಚ್‌ನಲ್ಲಿ ನೀರು ಪಾಲಾದ ಘಟನೆ ಶನಿವಾರ ರಾತ್ರಿ ಸಂಭವಿಸಿದೆ. ಮೃತ ಯುವತಿಯನ್ನು ಮಾನ್ಯಾ (16)ಎಂದು ಗುರುತಿಸಲಾಗಿದೆ.
ಇನ್ನೋರ್ವ ಯುವತಿಯನ್ನು ಆಪತ್ಯಾಂಧವ ಈಶ್ವರ ಮಲ್ಪೆ ಅವರು ರಕ್ಷಿಸಿದ್ದಾರೆ ರಕ್ಷಿಸಿದ ಯುವತಿಯನ್ನು ಯಶಸ್ವಿನಿ(16) ಎಂದು ಗುರುತಿಸಲಾಗಿದ್ದು, ಆಕೆಯನ್ನು ಉಡುಪಿಯ ಆದರ್ಶ ಆಸ್ಪತ್ರೆಗೆ ದಾಖಲಿಸಲಾಗಿದೆ. ರಾತ್ರಿ ಭಾರಿ ಅಲೆಗಳ ಹೊಡೆತಕ್ಕೆ ಇಬ್ಬರು ಯುವತಿಯರು ಸಮುದ್ರ ಪಾಲಾಗಿದ್ದರು. ಮಾಹಿತಿ ಸಿಕ್ಕಿ ಧಾವಿಸಿದ ಈಶ್ವರ ಮಲ್ಪೆ ಓರ್ವ ಯುವತಿಯರನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮಾನ್ಯಾ ಆಸ್ಪತ್ರೆಗೆ ಸಾಗಿಸುವ ದಾರಿಯಲ್ಲಿ ಮೃತಪಟ್ಟಿದ್ದಾಳೆ. ಯುವತಿಯರು ಆತ್ಮಹತ್ಯೆಗೆ ಪ್ರಯತ್ನಸಿದ್ದಾರೆಯೇ ಅಥವಾ ಆಕಸ್ಮಿಕವಾಗಿ ನೀರು ಪಾಲಾಗಿದ್ದಾರೆಯೇ ಎನ್ನುವುದ ತಿಳಿದುಬಂದಿಲ್ಲ. ತಡರಾತ್ರಿ ಏಕೆ ಬಂದಿದ್ದರು ಎಂಬ ಬಗ್ಗೆ ಈಗ ಅನುಮಾನ ವ್ಯಕ್ತವಾಗುತ್ತಿದೆ.

ಅಪ್ರಾಪ್ತ ಬಾಲಕಿ ಅತ್ಯಾಚಾರ: 10 ವರ್ಷ ಜೈಲು!

ಕೋಟ: ಉಡುಪಿಯ ಕೋಟ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಐದು ವರ್ಷಗಳ ಹಿಂದೆ ನಡೆದ ಅಪ್ರಾಪ್ತ ಬಾಲಕಿ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿ ಉಡುಪಿ ಜಿಲ್ಲಾ ಹೆಚ್ಚುವರಿ ಮತ್ತು ಸತ್ರ ನ್ಯಾಯಾಲಯದಲ್ಲಿನ ಪೋಕ್ಸೊ ತ್ವರಿತ ವಿಶೇಷ ನ್ಯಾಯಾಲಯವು ಆರೋಪಿಗೆ 10ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಿ ಆದೇಶಿಸಿದೆ.
ಕೋಟದ ನಿವಾಸಿ ವಿಗ್ನೇಶ್ ನಾಯ್ಕ(30) ಶಿಕ್ಷೆಗೆ ಗುರಿಯಾದ ಆರೋಪಿ. ಈತ ಕೋಟ ಪೊಲೀಸ್ ಠಾಣಾ ವ್ಯಾಪ್ತಿಯ 17 ಹರೆಯದ ನೊಂದ ಬಾಲಕಿಯ ಮನೆಗೆ ಬಾವಿ ಕೆಲಸಕ್ಕೆ ಬಂದಿದ್ದು, ಈ ವೇಳೆ ನೊಂದ ಬಾಲಕಿಯನ್ನು ಪರಿಚಯ ಮಾಡಿಕೊಂಡಿದ್ದನು. ಬಳಿಕ ಬಾಲಕಿಗೆ ಫೋನ್ ಮೂಲಕ ಸಂದೇಶ ಕಳುಹಿಸಿ ಪ್ರೀತಿ ಮಾಡುವಂತೆ ಒತ್ತಾಯಿಸಿ ಹಿಂಬಾಲಿಸುತ್ತಿದ್ದನು. 2018ರ ಡಿಸೆಂಬರ್‌ನಲ್ಲಿ ಶಾಲೆ ಬಿಟ್ಟು ಮನೆಗೆ ಒಬ್ಬಳೇ ನಡೆದುಕೊಂಡು ಬರುತ್ತಿದ್ದ ಬಾಲಕಿಯನ್ನು ಆರೋಪಿ ದಾರಿ ಮಧ್ಯೆ ಸರಕಾರಿ ಕಾಡಿಗೆ ಎಳೆದು ಕೊಂಡು ಹೋಗಿ ಬಲವಂತವಾಗಿ ದೈಹಿಕ ಸಂಪರ್ಕ ನಡೆಸಿದ್ದನು. ಈ ವಿಚಾರವನ್ನು ಯಾರಲ್ಲಾದರೂ ಹೇಳಿದರೆ ತಾಯಿ, ತಮ್ಮನನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದನು. ಅದರಂತೆ ನೊಂದ ಬಾಲಕಿ ಈ ವಿಚಾರವನ್ನು ಯಾರ ಬಳಿ ಕೂಡ ಹೇಳಿರಲಿಲ್ಲ. ಬಳಿಕ ತನ್ನ ಶಾಲೆಯಲ್ಲಿ 1098 ಮಕ್ಕಳ ಸಹಾಯವಾಣಿಯ ನಂಬರ್ ತಿಳಿದು ಕೊಂಡು ಸಹಾಯ ವಾಣಿಗೆ ಕರೆ ಮಾಡಿ ಮಾಹಿತಿ ನೀಡಿದ್ದಳು.

ಮೀನು ಹಿಡಿಯಲು ತೆರಳಿದ್ದ ದೋಣಿ ಪಲ್ಟಿ!

ಮರವಂತೆ: ಸಮುದ್ರದಲ್ಲಿ ಮೀನುಗಾರಿಕೆಗೆ ನಡೆಸಲು ತೆರಳಿದ್ದ ವೇಳೆ ದೋಣಿಯೊಂದು ಪಲ್ಟಿಯಾಗಿ ಒಂಭತ್ತು ಮಂದಿ ಮೀನುಗಾರರ ಮುಳುಗುತ್ತಿರುವ ಸಂದರ್ಭದಲ್ಲಿ ರಕ್ಷಣೆ ಮಾಡಿದ ಘಟನೆ ನಡೆದಿದೆ.
ಸಮುದ್ರದ ಅಲೆಗಳ ಹೊಡೆತಕ್ಕೆ ಸಿಲುಕಿ ದೋಣಿ ಪಲ್ಟಿಯಾಗಿದ್ದು ಈ ಸಂದರ್ಭದಲ್ಲಿ ದೋಣಿಯಲ್ಲಿದ್ದ ಮೀನುಗಾರರು ಅಪಾಯದಿಂದ ಪಾರಾಗಿದ್ದಾರೆ ಎಂದು ವರದಿಯಾಗಿದೆ. ಅರಬ್ಬಿ ಸಮುದ್ರಕ್ಕೆ ಉಪ್ಪುಂದ ತಾರಾಪತಿಯಿಂದ ಬೆಳಗ್ಗೆ ದೋಣಿ ಮೀನುಗಾರಿಕೆಗೆ ತೆರಳಿತ್ತು. 5 ನಾಟಿಕಲ್ ಮೈಲುಗಳ ದೂರದಲ್ಲಿ ದೋಣಿ ಪಲ್ಟಿಯಾಗಿದ್ದು, ಸಮೀಪದ ದೋಣಿಗಳಿಗೆ ಮಾಹಿತಿ ರವಾನೆ ಹಿನ್ನೆಲೆಯಲ್ಲಿ ಮೀನುಗಾರರು ರಕ್ಷಣೆ ಮಾಡಿದ್ದಾರೆ. ಅಪಘಾತಕ್ಕೀಡಾದ ದೋಣಿಯಲ್ಲಿದ್ದ ನೀರನ್ನು ಖಾಲಿ ಮಾಡಿ ಬಳಿಕ ದೋಣಿಯನ್ನು ಮರವಂತೆ ಬಂದರಿಗೆ ರವಾನೆ ಮಾಡಲಾಗಿದೆ ಎಂದು ತಿಳಿದು ಬಂದಿದೆ.

ಕಾರ್ಕಳ: ಪೆಟ್ರೋಲ್ ಬಂಕಲ್ಲಿ ಕಳ್ಳತನ

ಕಾರ್ಕಳ ತಾಲೂಕು ನಿಟ್ಟೆ ಲೇಮಿನ ಕ್ರಾಸ್ ಬಳಿ ಇರುವ ಅನ್ಯ ಪೆಟ್ರೋಲ್ ಪಂಪ್ ನಲ್ಲಿ ಆಗಸ್ಟ್ 4ರಂದು ರಾತ್ರಿ ಕಳ್ಳತನ ನಡೆದಿದೆ. ಪೆಟ್ರೋಲ್ ಬಂಕ್ ಬಾಗಿಲನ್ನು ಮುರಿದು 5000ರೂ ನಗದು, 3000ರೂ ಮೌಲ್ಯದ ಡಿ,ವಿ,ಆರ್ ಮತ್ತು 15,000 ರೂ ಮೌಲ್ಯದ ಕಂಪ್ಯೂಟರ್ ಮದರ್ ಬೋರ್ಡ್ ಕಳವು ಮಾಡಿಕೊಂಡು ಹೋಗಿದ್ದಾರೆ.

ಬಸ್‌ಗಳಲ್ಲಿ ಕರ್ಕಶ ಹಾರ್ನ್: 24 ಪ್ರಕರಣ ದಾಖಲು

ಮಂಗಳೂರು: ವಾಹನಗಳಿಗೆ ನಿಯಮ ಮೀರಿ ಕರ್ಕಶ ಹಾರ್ನ್ ಅಳವಡಿಸುತ್ತಿದ್ದು ಪ್ರಯಾಣಿಕರಿಗೆ ಕಿರಿಕಿರಿ ಉಂಟುಮಾಡುವ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಮಂಗಳೂರು ನಗರದಲ್ಲಿ ಟ್ರಾಫಿಕ್ ಪೊಲೀಸರು ವಿಶೇಷ ಕಾರ್ಯಾಚರಣೆಗೆ ನಡೆಸಿದ್ದು ಒಟ್ಟಾರೆ 24 ಪ್ರಕರಣಗಳನ್ನು ದಾಖಲಿಸಿಕೊಂಡಿದ್ದಾರೆ.
2 ಗಂಟೆಗಳ ಕಾಲ ನಡೆದ ವಿಶೇಷ ಕಾರ್ಯಾಚರಣೆಯಲ್ಲಿ 24 ಪ್ರಕರಣಗಳನ್ನು ಪೊಲೀಸರು ದಾಖಲಿಸಿಕೊಂಡಿದ್ದಾರೆ. ಖಾಸಗಿ ಬಸ್‌ಗಳಲ್ಲಿ ಕರ್ಕಶ ಹಾರ್ನ್ ಬಳಕೆ ಮತ್ತು ಬಸ್‌ನೊಳಗೆ ಧ್ವನಿವರ್ಧಕಗಳನ್ನು ಬಳಸುವುದರ ವಿರುದ್ಧ ಸಂಚಾರ ವಿಭಾಗದ ಪೊಲೀಸರು ಮಂಗಳೂರು ನಗರ ವ್ಯಾಪ್ತಿಯಲ್ಲಿ ವಿಶೇಷ ಕಾರ್ಯಾಚರಣೆಗಿಳಿದಿದ್ದರು. ಇಂತಹ ವಿಶೇಷ ಕಾರ್ಯಾಚರಣೆ ಮತ್ತಷ್ಟು ಮುಂದುವರಿಸಲಾಗುವುದು’ ಎಂದು ಪೊಲೀಸ್ ಆಯುಕ್ತ ಕುಲದೀಪ್ ಕುಮಾರ್ ಜೈನ್ ತಿಳಿಸಿದ್ದಾರೆ.

ಇದನ್ನೂ ಓದಿ : ನಾನು ಬದುಕಿರುವುದೇ ಕಿಮ್ಮನೆಗೆ ಸಹಿಸಲಾಗುತ್ತಿಲ್ಲ

HOW TO APPLY : NEET-UG COUNSELLING 2023

Categories
ಸಾಗರ

ಸಿಗಂದೂರು ದೇವಿಯ ಆಶೀರ್ವಾದ ಪಡೆದ ಸಚಿವ ರಾಜಣ್ಣ!

ಸಿಗಂದೂರು ದೇವಿಯ ಆಶೀರ್ವಾದ ಪಡೆದ ಸಚಿವ ರಾಜಣ್ಣ!
– ಬೇಳೂರು, ಮಂಜುನಾಥ ಗೌಡ ಸಾಥ್
– ಪ್ರಮುಖರಾದ ಶ್ರೀಪಾದ್ ಹೆಗ್ಡೆ,ಗುರುಶಕ್ತಿ ವಿಧ್ಯಾಧರ್ ಹಾಜರ್

NAMMUR EXPRESS NEWS
ಸಾಗರ: ಶ್ರೀ ಕ್ಷೇತ್ರ ಸಿಗಂಧೂರು ಶ್ರೀ ಚೌಡೇಶ್ವರಿ ಸನ್ನಿಧಾನಕ್ಕೆ ಭಾನುವಾರ ರಾಜ್ಯ ಸಹಕಾರ ಸಚಿವರಾದ ಕೆ ಎನ್ ರಾಜಣ್ಣ ಅವರು ಭೇಟಿ ಮಾಡಿ ದೇವಿಯ ಆಶೀರ್ವಾದ ಪಡೆದರು. ಸಿಗಂದೂರು ದೇವಾಲಯದ ಕಛೇರಿಯಲ್ಲಿ ಸಚಿವರನ್ನು ಹಾಗೂ ಸಾಗರ ಕ್ಷೇತ್ರದ ಜನಪ್ರಿಯ ಶಾಸಕರಾದ ಬೇಳೂರು ಗೋಪಾಲಕೃಷ್ಣ ಹಾಗೂ ರಾಜ್ಯ ಅಪೆಕ್ಸ್ ಬ್ಯಾಂಕ್ ಮಾಜಿ ಅಧ್ಯಕ್ಷರಾದ ಡಾ.ಆರ್.ಎಂ ಮಂಜುನಾಥ ಗೌಡ ಮತ್ತು ಶಿಮೂಲ್ ಅಧ್ಯಕ್ಷರು ಶ್ರೀಪಾದ್ ಹೆಗ್ಡೆ, ಮಾಜಿ ಅಧ್ಯಕ್ಷರಾದ ಗುರುಶಕ್ತಿ ವಿಧ್ಯಾಧರ್ ಅವರನ್ನು ಆಡಳಿತ ಮಂಡಳಿ ವತಿಯಿಂದ ಗೌರವಿಸಲಾಯಿತು. ಈ ಸಂಧರ್ಭದಲ್ಲಿ ದೇವಾಲಯದ ಪ್ರಮುಖರಾದ ರವಿ ಹಾಗೂ ಹೊಸನಗರದ ಯುವ ಸಹಕಾರಿಗಳಾದ ವಿನಯ್ ಅವರು ಇದ್ದರು.

ಇದನ್ನೂ ಓದಿ : ನಾನು ಬದುಕಿರುವುದೇ ಕಿಮ್ಮನೆಗೆ ಸಹಿಸಲಾಗುತ್ತಿಲ್ಲ

HOW TO APPLY : NEET-UG COUNSELLING 2023