Categories
ರಾಷ್ಟ್ರೀಯ ವಾರ್ತೆ

ಅಯೋಧ್ಯೆ ಶ್ರೀ ರಾಮನಿಗೆ 400 ಕೆ.ಜಿ ಬೀಗ!

ಅಯೋಧ್ಯೆ ಶ್ರೀ ರಾಮನಿಗೆ 400 ಕೆ.ಜಿ ಬೀಗ!
– ಕೈಯಿಂದ ತಯಾರಾದ ಜಗತ್ತಿನ ದೊಡ್ಡ ಬೀಗ
– ರಾಮನ ಭಕ್ತನಿಂದ ಕೈಯಲ್ಲೇ ತಯಾರಿ
– ಆನ್ ಲೈನಲ್ಲೇ ಭಾರತದ ಯುವಕ, ಪಾಕ್ ಯುವತಿ ಮದುವೆ!
– ಪಾಕ್ ಉಗ್ರರ ಎದೆಗೆ ಗುಂಡಿಕ್ಕಿದ ಯೋಧರು
– ಇನ್ನು ಭಾರತದಲ್ಲೇ ತಯಾರಾಗಲಿದೆ ಲ್ಯಾಪ್ ಟಾಪ್ , ಕಂಪ್ಯೂಟರ್

NAMMUR EXPRESS NEWS
ನವ ದೆಹಲಿ: ಅಯೋಧ್ಯೆ ರಾಮಮಂದಿರಕ್ಕೆ ರಾಮ ಭಕ್ತನೊಬ್ಬ 400 ಕೆ.ಜಿ ಬೀಗ ತಯಾರಿಸಿದ್ದಾನೆ.
ಅಲಿಗಢದ ಸತ್ಯ ಪ್ರಕಾಶ ಶರ್ಮ ಎಂಬುವವರು ಒಂದು ತಿಂಗಳ ಅವಧಿಯಲ್ಲಿ ಈ ಬೀಗವನ್ನು ತಯಾರಿಸಿದ್ದಾರೆ.
ಹಿರಿಯ ಕುಶಲಕರ್ಮಿಯೊಬ್ಬರು ಕೈಯಿಂದಲೇ 400 ಕೆ.ಜಿ ತೂಕದ ಬೀಗವನ್ನು ತಯಾರಿಸಿದ್ದಾರೆ. ಇದು ಕೈಯಿಂದ ತಯಾರಿಸಿದ ಜಗತ್ತಿನ ಅತಿದೊಡ್ಡ ಬೀಗ ಎಂದು ಹೇಳಲಾಗಿದ್ದು, ರಾಮ ಮಂದಿರ ದೇವಸ್ಥಾನಕ್ಕೆ ಉಡುಗೊರೆಯಾಗಿ ನೀಡಲಿದ್ದಾರೆ. ರಾಮ ಮಂದಿರವನ್ನು ಗಮನದಲ್ಲಿಟ್ಟುಕೊಂಡು 10 ಅಡಿ ಎತ್ತರ, 4.5 ಅಡಿ ಅಗಲ ಮತ್ತು 9.5 ಇಂಚು ದಪ್ಪವಿರುವ ಬೀಗವನ್ನು ನಾಲ್ಕು ಅಡಿ ಕೀಲಿಯೊಂದಿಗೆ ಸ್ವಂತ ಹಣದಿಂದ ತಯಾರಿಸಿದ್ದಾರೆ. ಬೀಗವನ್ನು ತಯಾರಿಸಲು ಸುಮಾರು 2 ಲಕ್ಷ ರೂಪಾಯಿ ವೆಚ್ಚವಾಗಿದೆ ಎಂದು ಶರ್ಮಾ ಹೇಳಿದ್ದಾರೆ.

‘ಸತ್ಯ ಪ್ರಕಾಶ್ ಶರ್ಮಾ ಅವರಿಂದ ಬೀಗವನ್ನು ಪಡೆದು, ಯಾವ ಜಾಗಕ್ಕೆ ಅಳವಡಿಸಬಹುದು ಎಂದು ನಿರ್ಧರಿಸಲಾಗುವುದು” ಎಂದು ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಅಧಿಕಾರಿಗಳು ತಿಳಿಸಿದ್ದಾರೆ. ಮುಂದಿನ ವರ್ಷ ಜನವರಿ 21, 22, ಮತ್ತು 23 ರಂದು ರಾಮಮಂದಿರದಲ್ಲಿ ಮಹಾಮಸ್ತಕಾಭಿಷೇಕ ಸಮಾರಂಭವನ್ನುನಡೆಸಲು ದೇವಾಲಯದ ಟ್ರಸ್ಟ್ ನಿರ್ಧರಿಸಿದ್ದು, ಈ ವೇಳೆ ಬೀಗವನ್ನು ಪಡೆಯಲು ಸಿದ್ಧತೆ ನಡೆದಿದೆ.

ಆನ್ ಲೈನಲ್ಲೇ ಭಾರತದ ಯುವಕ, ಪಾಕ್ ಯುವತಿ ಮದುವೆ!

ರಾಜಸ್ಥಾನದ ಜೋದ್‌ಪುರ ಮೂಲದ ಅರ್ಬಾಜ್ ಹಾಗೂ ಪಾಕಿಸ್ತಾನದ ಮೂಲದ ವಧು ಅಮೀನಾ ವರ್ಚುವಲ್ ಮೂಲಕ ಮದ್ವೆ ಆಗಿದ್ದಾರೆ. ಅರ್ಬಾಜ್ ಹಾಗೂ ಅಮೀನಾ ಕುಟುಂಬ ಸಂಬಂಧಿಗಳಾಗಿದ್ದಾರೆ. ಈ ಹಿಂದೆ ಅರ್ಬಾಜ್ ಕುಟುಂಬದ ವ್ಯಕ್ತಿಯೊಬ್ಬರು ಪಾಕಿಸ್ತಾನದಲ್ಲಿರುವ ಅಮೀನಾ ಕುಟುಂಬದ ಯುವತಿಯನ್ನು ಮದುವೆಯಾಗಿದ್ದಾರೆ. ಈ ಹಿನ್ನೆಲೆ ಎರಡು ಕುಟುಂಬದ ನಡುವೆ ಮದುವೆ ಮಾತುಕತೆ ನಡೆದು, ವಿಡಿಯೋ ಕಾಲ್ ನಲ್ಲೇ ವಿವಾಹ ನಡೆದುಹೋಗಿದೆ.
ಅರ್ಬಾಜ್ ಮದುವೆ ದಿಬ್ಬಣ ಜೋದ್‌ಪುರದ ಓಸ್ವಾಲ್ ಸಮಾಜ ಭವನಕ್ಕೆ ತೆರಳಿ, ಅಲ್ಲಿ ವರ್ಚುವಲ್ ಮೂಲಕ ಪಾಕಿಸ್ತಾನದಲ್ಲಿರುವ ವಧು ಅಮೀನಾರೊಂದಿಗೆ ವಿವಾಹವಾಗಿದ್ದಾರೆ. ಅತ್ತ ಕಡೆಯ ಮೌಲ್ವಿ, ಇತ್ತ ಗಂಡಿನ ಕಡೆಯ ಮೌಲ್ವಿಗಳು ವಿವಾಹವನ್ನು ನೆರವೇರಿಸಿದ್ದಾರೆ.

ಈ ವರ್ಚುವಲ್ ಮದುವೆಗೂ ಮುನ್ನ ಅಮೀನಾ ವೀಸಾಕ್ಕಾಗಿ ಸರ್ಜಿ ಸಲ್ಲಿಸಿದ್ದರು. ಆದರೆ ಅದು ವಿಫಲವಾದ ಕಾರಣ, ವರ್ಚುವಲ್ ವಿವಾಹ ನೆರವೇರಿದೆ. ಪಾಕಿಸ್ತಾನಕ್ಕೆ ತೆರಳಿ ವಿವಾಹವಾಗಿಲ್ಲ. ಹಾಗೆ ಮಾಡಿದ್ದರೆ ಅದು ಮಾನ್ಯ ಆಗುತ್ತಿರಲಿಲ್ಲ. ನಮ್ಮ ವಿವಾಹದ ಪ್ರಮಾಣ ಪತ್ರವನ್ನು ಮೌಲ್ವಿಗಳಿಂದ ಪಡೆದುಕೊಂಡಿದ್ದೇವೆ. ಅಮೀನಾ ಅವರ ಭಾರತೀಯ ವೀಸಾ ಆದ ಬಳಿಕ ನಾವು ಮತ್ತೆ ಮರುಮದುವೆ ಆಗಲಿದ್ದೇವೆ ಎಂದು ಅರ್ಬಾಜ್ ಹೇಳಿದ್ದಾರೆ.

ಇಬ್ಬರು ಉಗ್ರರು ಸೇನೆ ಗುಂಡಿಗೆ ಬಲಿ!

ಜಮ್ಮುಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯಲ್ಲಿ ಗಡಿ ನಿಯಂತ್ರಣ ರೇಖೆಯಲ್ಲಿ ಕಾವಲು ಕಾಯುತ್ತಿರುವ ಸೇನಾ ಪಡೆಗಳು ಸೋಮವಾರ ಗಡಿಯಾಚೆಯಿಂದ ಒಳನುಸುಳುವಿಕೆ ಯತ್ನವನ್ನು ವಿಫಲಗೊಳಿಸಿ ಗುಂಡಿನ ಚಕಮಕಿಯಲ್ಲಿ ಇಬ್ಬರು ಭಯೋತ್ಪಾದಕರನ್ನು ಹೊಡೆದುರುಳಿಸಿದ್ದಾರೆ. ದಗ್ವಾರ್ ಸೆಕ್ಟರ್‌ನಲ್ಲಿ ಕೆಲವು ಭಯೋತ್ಪಾದಕರು ನುಸುಳಲು ಪ್ರಯತ್ನಿಸುತ್ತಿರುವುದನ್ನು ಗಮನಿಸಿದ ಭದ್ರತಾ ಪಡೆಗಳು ಎನ್‌ಕೌಂಟರ್ ನಡೆಸಿದ್ದು, ಇಬ್ಬರು ಉಗ್ರರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಮುಂಜಾನೆ 2 ಗಂಟೆ ಸುಮಾರಿಗೆ ಭಯೋತ್ಪಾದಕರ ಬಗ್ಗೆ ಸುಳಿವು ಸಿಕ್ಕಿ ಗುಂಡಿನ ದಾಳಿ ನಡೆಸಿರುವುದಾಗಿ ರಕ್ಷಣಾ ಪಿಆರ್‌ಒ ಲೆಫ್ಟಿನೆಂಟ್ ಕರ್ನಲ್ ಸುನೀಲ್ ಬರ್ತ್ವಾಲ್ ತಿಳಿಸಿದ್ದಾರೆ. ಇಡೀ ಪ್ರದೇಶವನ್ನು ಸೇನೆ ಸುತ್ತುವರಿದಿದ್ದು ಶೋಧ ಕಾರ್ಯಾಚರಣೆ ನಡೆಯುತ್ತಿದೆ.

ದೇಶದಲ್ಲೇ ಸಿದ್ಧಗೊಳ್ಳಲಿವೆ ಲ್ಯಾಪ್‌ಟಾಪ್, ಕಂಪ್ಯೂಟರ್

ಮುಂದಿನ ಕೆಲವೇ ವರ್ಷಗಳಲ್ಲಿ ಜಗತ್ತಿನ ಪ್ರಮುಖ ಕಂಪೆನಿಗಳ ಪರ್ಸನಲ್ ಕಂಪ್ಯೂಟರ್, ಟ್ಯಾಬ್ಲೆಟ್, ಲ್ಯಾಪ್ ಟಾಪ್ ದೇಶದಲ್ಲೇ ಉತ್ಪಾದನೆಯಾಗಲಿದೆ. ಲೆನೊವೋ, ಎಚ್‌ ಪಿ, ಡೆಲ್, ಆ್ಯಪಲ್ ಸೇರಿದಂತೆ 44 ಸಂಸ್ಥೆಗಳು ದೇಶದಲ್ಲಿ ಉತ್ಪನ್ನಗಳನ್ನು ತಯಾರಿಸಲು ನೋಂದಾಯಿಸಿಕೊಂಡಿವೆ ಎಂದು ಸರಕಾರಿ ಮೂಲಗಳು ಮಾಹಿತಿ ನೀಡಿವೆ.
ಕೇಂದ್ರ ಸರಕಾರದ 17 ಸಾವಿರ ಕೋಟಿ ರೂ. ಮೌಲ್ಯದ ಉತ್ಪನ್ನ ಆಧರಿತ ಪ್ರೋತ್ಸಾಹ ಯೋಜನೆ ಇದಾಗಿದೆ. (ಪಿಎಲ್‌ ಐ) ಅನ್ವಯ ಈ ಕಂಪೆನಿಗಳು ನೋಂದಣಿ ಮಾಡಿಕೊಂಡಿವೆ. ಹಲವಾರು ಮೊಬೈಲ್ ತಯಾರಿಕ ಸಂಸ್ಥೆಗಳು ಕ್ಷೇತ್ರದಲ್ಲಿ ಯಶಸ್ಸನ್ನು ದಾಖಲಿಸಿವೆ. ಇದೇ ಮಾದರಿಯಲ್ಲಿ ಐಟಿ ಹಾರ್ಡ್ ವೇರ್ ಗಳ ತಯಾರಿಕೆಯಲ್ಲೂ ಯಶಸ್ಸು ಗಳಿಸುವ ಉದ್ದೇಶದಿಂದ ಹಲವಾರು ಸಂಸ್ಥೆಗಳು ತಮ್ಮ ಹಾರ್ಡ್‌ ವೇರ್ ಉತ್ಪನ್ನಗಳ ತಯಾರಿಕಾ ಘಟಕಗಳನ್ನು ಸ್ಥಾಪಿಸಲು ಕೋರಿ ನೋಂದಣಿ ಮಾಡಿಕೊಂಡಿವೆ. ಅದಕ್ಕೆ ಆ.30 ಕೊನೆಯ ನೋಂದಣಿ ಮಾಡಿಕೊಂಡಿರುವ ಸಂಸ್ಥೆಗಳ ದೇಶದಲ್ಲಿ ಪೈಕಿ, ಕೆಲವು ಸಂಸ್ಥೆಗಳು ಕೇವಲ ಅನುಮತಿಗಾಗಿ ಕಾಯುತ್ತಿದ್ದು, ಯಾವುದೇ ಸಮಯದಲ್ಲೂ ಉತ್ಪಾದನಾ ಘಟಕ ತೆರೆಯಲು ತಯಾರಾಗಿವೆ. ಇದು ದೇಶದಲ್ಲಿ ಉದ್ಯೋಗ ಸೃಷ್ಟಿ ಮಾಡುವುದಷ್ಟೇ ಅಲ್ಲದೆ ವಿದೇಶಗಳಿಂದ ಅವುಗಳನ್ನು ಆಮದು ಮಾಡಿಕೊಳ್ಳುವ ಅಗತ್ಯವೂ ತಪ್ಪಲಿದೆ ಎಂದು ವಿಶ್ಲೇಷಿಸಲಾಗಿದೆ.

ಇದನ್ನೂ ಓದಿ : ರೈತರಿಗೆ ಖುಷ್: ಕಾಳು ಮೆಣಸು ದರ ಏರಿಕೆ!

HOW TO APPLY : NEET-UG COUNSELLING 2023

Categories
ರಾಷ್ಟ್ರೀಯ ವಾರ್ತೆ

ರಾಹುಲ್ ಗಾಂಧಿ ಲೋಕ ಸಭೆಗೆ ರೀ ಎಂಟ್ರಿ!

ರಾಹುಲ್ ಗಾಂಧಿ ಲೋಕ ಸಭೆಗೆ ರೀ ಎಂಟ್ರಿ!
– ಗಾಂಧಿ ಪ್ರತಿಮೆಗೆ ನಮಸ್ಕರಿಸಿ ಲೋಕ ಸಭೆಗೆ
– ಕಾನೂನು ಸಮರದಲ್ಲಿ ಗೆಲುವಿನ ವಿಜಯೋತ್ಸವ

NAMMUR EXPRESS NEWS
ಹೊಸದಿಲ್ಲಿ: ಕಾನೂನು ಸಮರದ ಬಳಿಕ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಲೋಕ ಸಭೆಗೆ ಗ್ರಾಂಡ್ ಎಂಟ್ರಿ ಪಡೆದಿದ್ದಾರೆ.
ಸೋಮವಾರ ಲೋಕ ಸಭೆಯ ಅವರಣದಲ್ಲಿ ಗಾಂಧಿ ಪ್ರತಿಮೆಗೆ ನಮಸ್ಕರಿಸಿ ಬಳಿಕ ಲೋಕ ಸಭೆಗೆ ಹಾಜರ್ ಆಗಿದ್ದಾರೆ.
ಮೋದಿ ಉಪನಾಮ ಟೀಕೆ ಪ್ರಕರಣಕ್ಕೆ ಸಂಬಂಧಿಸಿ ಸೂರತ್ ನ್ಯಾಯಾಲಯ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರಿಗೆ ವಿಧಿಸಿದ್ದ 2 ವರ್ಷಗಳ ಜೈಲು ಶಿಕ್ಷೆಗೆ ಸುಪ್ರಿಂಕೋರ್ಟ್‌ ತಡೆಯಾಜ್ಞೆ ವಿಧಿಸಿದ ಬೆನ್ನಲ್ಲೇ, ರಾಹುಲ್ ಗಾಂಧಿಯ ಸಂಸತ್ ಸದಸ್ಯತ್ವವನ್ನು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಪುನಸ್ಥಾಪಿಸಿದ್ದಾರೆ.

ಕೋರ್ಟ್‌ ಆದೇಶ ಪ್ರತಿಯೊಂದಿಗೆ ಶುಕ್ರವಾರವೇ ಲೋಕಸಭಾ ಕಾರ್ಯದರ್ಶಿ ಭೇಟಿ ಮಾಡಿದ್ದ ಕಾಂಗ್ರೆಸ್ ನಾಯಕರು, ರಾಹುಲ್ ಅನರ್ಹತೆ ಆದೇಶ ರದ್ದು ಮಾಡುವಂತೆ ಮನವಿ ಮಾಡಿದ್ದರು. ಆ.8 ಹಾಗೂ 9 ರಂದು ಕಾಂಗ್ರೆಸ್ ಮಂಡಿಸಿರುವ ಕೇಂದ್ರದ ವಿರುದ್ಧ ಅವಿಶ್ವಾಸ ನಿಲುವಳಿ ಮೇಲಿನ ಚರ್ಚೆ ನಡೆಯಲಿದೆ. ಈ ಚರ್ಚೆಯಲ್ಲಿ ರಾಹುಲ್ ಗಾಂಧಿಯವರು ಭಾಗವಹಿಸಬೇಕೆಂಬುದು ಕಾಂಗ್ರೆಸ್ ನಾಯಕರ ಬಯಕೆ ಆಗಿತ್ತು. ಮಾನನಷ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಗುಜರಾತ್‌ನ ಸೂರತ್ ಮ್ಯಾಜಿಸ್ಟ್ರೇಟ್ ವಿಧಿಸಿರುವ ಶಿಕ್ಷೆಗೆ ತಡೆ ನೀಡಲು ನಿರಾಕರಿಸಿದ್ದ ಗುಜರಾತ್ ಹೈಕೋರ್ಟ್‌ ಆದೇಶ ಪ್ರಶ್ನಿಸಿ ರಾಹುಲ್ ಗಾಂಧಿ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು. ನ್ಯಾಯಮೂರ್ತಿಗಳಾದ ಬಿ.ಆರ್. ಗವಾಯಿ, ಪಿ.ಎಸ್. ನರಸಿಂಹ ಮತ್ತು ಸಂಜಯ್ ಕುಮಾರ್ ಅವರನ್ನೊಳಗೊಂಡ ಪೀ ಶುಕ್ರವಾರ ಪ್ರಕರಣದ ವಿಚಾರಣೆ ನಡೆಸಿ ಸೂರತ್ ನ್ಯಾಯಾಲಯದ ಆದೇಶಕ್ಕೆ ತಡೆ ನೀಡಿತ್ತು. ರಾಹುಲ್ ಅವರು 2019ರ ಏಪ್ರಿಲ್ 13 ರಂದು ಕೋಲಾರದಲ್ಲಿ ನಡೆದ ಲೋಕಸಭಾ ಚುಣಾವಣಾ ಪ್ರಚಾರ ಸಭೆಯಲ್ಲಿ ಎಲ್ಲ ಕಳ್ಳರಿಗೆ ಮೋದಿ ಎಂಬ ಉಪನಾಮ ಏಕಿದೆ ಎಂದು ಪ್ರಶ್ನಿಸಿದ್ದರು.ಈ ಬಗ್ಗೆ ಗುಜರಾತ್ ಶಾಸಕ ಪೂರ್ಣೇಶ್ ಮೋದಿ ಅವರು, ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು. ಈ ಪ್ರಕರಣದಲ್ಲಿ ರಾಹುಲ್ ಅವರು, ಎರಡು ವರ್ಷ ಶಿಕ್ಷೆಗೆ ಗುರಿಯಾಗಿ ಲೋಕಸಭಾ ಸದಸ್ಯತ್ವದಿಂದ ಅನರ್ಹಗೊಂಡಿದ್ದರು.

ಇದನ್ನೂ ಓದಿ : ರೈತರಿಗೆ ಖುಷ್: ಕಾಳು ಮೆಣಸು ದರ ಏರಿಕೆ!

HOW TO APPLY : NEET-UG COUNSELLING 2023

Categories
Uncategorized

ಎಸ್ಸಿ,ಎಸ್ಟಿ ಸಮುದಾಯಕ್ಕೆ ರಾಜ್ಯ ಸರ್ಕಾರದಿಂದ ವಂಚನೆ

ಎಸ್ಸಿ,ಎಸ್ಟಿ ಸಮುದಾಯಕ್ಕೆ ರಾಜ್ಯ ಸರ್ಕಾರದಿಂದ ವಂಚನೆ
– ಗ್ಯಾರಂಟಿ ಯೋಜನೆಯ ಹೆಸರಲ್ಲಿ 11 ಸಾವಿರ ಕೋಟಿ ರೂ ವರ್ಗಾವಣೆ
– ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಮಾಜಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ

NAMMUR EXPRESS NEWS
ಸಿಂದಗಿ(ವಿಜಯಪುರ): ಗ್ಯಾರಂಟಿ ಯೋಜನೆ ಹೆಸರಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಶಾಸನ ಬದ್ದವಾಗಿ ಮೀಸಲಿಟ್ಟ ಅನುದಾನದಲ್ಲಿ 11 ಸಾವಿರ ಕೋಟಿ ರೂಪಾಯಿ ಹಣವನ್ನು ವರ್ಗಾವಣೆ ಮಾಡಿ ದಲಿತ ಸಮುದಾಯಕ್ಕೆ ನೇರವಾಗಿ ರಾಜ್ಯ ಸರ್ಕಾರ ವಂಚನೆ ಮಾಡಿದೆ ಎಂದು ಮಾಜಿ ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ ಆಕ್ರೋಶ ವ್ಯಕ್ತಪಡಿಸಿದರು. ಸಿಂದಗಿ ಪಟ್ಟಣದ ರಾಜ ರಾಜೇಶ್ವರಿ ಕಲ್ಯಾಣ ಮಂಟಪದಲ್ಲಿ ನಡೆದ ಭಾರತೀಯ ಜನತಾ ಪಕ್ಷದ ಮೋರ್ಚಾಗಳ ಸಮಾವೇಶದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಭಯೋತ್ಪಾದನೆ ತಾಂಡವ ಆಡುತ್ತಿದೆ. ರಾಜ್ಯದಲ್ಲಿ ಪಾಕಿಸ್ತಾನ ಧ್ವಜ ಹಾರಾಡುತ್ತಿವೆ. ಕುಕ್ಕರ್ ನಲ್ಲಿ ಬಾಂಬ್ ಇಟ್ಟು ತಿರುಗಾಡುತ್ತಾರೆ. ಇಂತಹವರನ್ನು ನಮ್ಮ ಸಹೋದರರು ಎಂದು ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ ಹೇಳುತ್ತಾರೆ ಎಂದು ಹೇಳಿದರು.

ಇದನ್ನೂ ಓದಿ : ರೈತರಿಗೆ ಖುಷ್: ಕಾಳು ಮೆಣಸು ದರ ಏರಿಕೆ!

HOW TO APPLY : NEET-UG COUNSELLING 2023

Categories
ರಾಷ್ಟ್ರೀಯ ವಾರ್ತೆ

ಬೆಲೆ ಏರಿಕೆಯಿಂದ ತತ್ತರ: ಜನರಿಗೆ ಗುಡ್ ನ್ಯೂಸ್!

ಬೆಲೆ ಏರಿಕೆಯಿಂದ ತತ್ತರ: ಜನರಿಗೆ ಗುಡ್ ನ್ಯೂಸ್!
– ಅಗತ್ಯ ವಸ್ತುಗಳ ಬೆಲೆ ನಿಯಂತ್ರಿಸಲು ಕೇಂದ್ರದ ಹೆಜ್ಜೆ
– ಗೋಧಿ, ಬೇಳೆಕಾಳು ದರ ನಿಯಂತ್ರಣಕ್ಕೆ ಪ್ಲಾನ್

NAMMUR EXPRESS NEWS
ನವದೆಹಲಿ: ದೇಶದಲ್ಲಿ ಬೆಲೆ ಏರಿಕೆಯಿಂದ ತತ್ತರಿಸಿರುವ ಜನಸಾಮಾನ್ಯರಿಗೆ ಕೇಂದ್ರ ಸರ್ಕಾರ ನೆಮ್ಮದಿಯ ಸುದ್ದಿಯೊಂದು ನೀಡಿದ್ದು, ಅಗತ್ಯ ವಸ್ತುಗಳ ಬೆಲೆ ನಿಯಂತ್ರಿಸಲು ಕೇಂದ್ರ ಸರ್ಕಾರ ಮಹತ್ವದ ಕ್ರಮ ಕೈಗೊಳ್ಳುತ್ತಿದೆ ಎಂದು ಆಹಾರ ಕಾರ್ಯದರ್ಶಿ ಸಂಜೀವ್ ಚೋಪ್ರಾ ಹೇಳಿದ್ದಾರೆ. ಬೇಳೆಕಾಳುಗಳಿಂದ ಹಿಡಿದು ತರಕಾರಿಗಳವರೆಗೆ ಬೆಲೆಗಳು ಗಗನಕ್ಕೇರುತ್ತಿವೆ. ಬೆಲೆ ಏರಿಕೆಯಿಂದಾಗಿ ಜನರು ತೀವ್ರ ತೊಂದರೆಗಳನ್ನು ಎದುರಿಸುತ್ತಿದ್ದಾರೆ. ಇದಲ್ಲದೆ, ಅಗತ್ಯ ವಸ್ತುಗಳ ಜೊತೆಗೆ ಗೋಧಿಯ ಬೆಲೆಯೂ ಏರುತ್ತಿದೆ. ಬೆಲೆಗಳನ್ನು ನಿಯಂತ್ರಿಸಲು ಕೇಂದ್ರ ಸರ್ಕಾರ ಕ್ರಮಗಳನ್ನು ಕೈಗೊಂಡಿದೆ. ಗೋಧಿ ಬೆಲೆಯನ್ನು ಅಗ್ಗವಾಗಿಸಲು ಕೇಂದ್ರ ಸರ್ಕಾರ ಹಲವಾರು ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ ಎಂದು ಹೇಳಿದ್ದಾರೆ.

ಗೋಧಿ ಬೆಲೆ ಏರಿಕೆಯನ್ನು ನಿಯಂತ್ರಿಸಲು ಆಮದು ಸುಂಕವನ್ನು ಕಡಿಮೆ ಮಾಡುವುದು ಸೇರಿದಂತೆ ಇತರ ಎಲ್ಲಾ ಆಯ್ಕೆಗಳನ್ನು ಸರ್ಕಾರ ಪರಿಗಣಿಸುತ್ತಿದೆ. ಅಕ್ಕಿಗೆ ಸಂಬಂಧಿಸಿದಂತೆ, ಭೂತಾನ್ ನಿಂದ ಇದುವರೆಗೆ 80,000 ಟನ್ ಅಕ್ಕಿಯನ್ನು ಪೂರೈಸಲು ಭಾರತವು ಸರ್ಕಾರದ ಮಟ್ಟದಲ್ಲಿ ಜ್ಞಾಪಕ ಪತ್ರವನ್ನು ಸ್ವೀಕರಿಸಿದೆ ಎಂದು ಅವರು ಹೇಳಿದರು.
ದೇಶೀಯ ಲಭ್ಯತೆ ಮತ್ತು ಚಿಲ್ಲರೆ ಮಾರುಕಟ್ಟೆಗಳಲ್ಲಿ ಹೆಚ್ಚುತ್ತಿರುವ ಬೆಲೆಗಳನ್ನು ನಿಯಂತ್ರಿಸಲು ಕಳೆದ ವರ್ಷ ಸರ್ಕಾರ ಗೋಧಿ ರಫ್ತನ್ನು ನಿಷೇಧಿಸಿತ್ತು. ಗೋಧಿ ಮತ್ತು ಹಿಟ್ಟಿನ ಬೆಲೆಗಳನ್ನು ನಿಯಂತ್ರಿಸಲು ಸರ್ಕಾರವು ಮುಕ್ತ ಮಾರುಕಟ್ಟೆಯಲ್ಲಿ ಗೋಧಿ ದಾಸ್ತಾನುಗಳನ್ನು ಹಿಟ್ಟಿನ ಗಿರಣಿಗಳು ಮತ್ತು ಇತರ ವ್ಯಾಪಾರಿಗಳಿಗೆ ಮಾರಾಟ ಮಾಡುತ್ತಿದೆ.

ಇದನ್ನೂ ಓದಿ : ರೈತರಿಗೆ ಖುಷ್: ಕಾಳು ಮೆಣಸು ದರ ಏರಿಕೆ!

HOW TO APPLY : NEET-UG COUNSELLING 2023

Categories
ಬೆಂಗಳೂರು ಮಂಗಳೂರು ರಾಜ್ಯ ಸಿನಿಮಾ

ಮಂಗಳವಾರ ಬರಲಿದೆ ಸ್ಪಂದನಾ ಪಾರ್ಥಿವ ಶರೀರ?

ಮಂಗಳವಾರ ಬರಲಿದೆ ಸ್ಪಂದನಾ ಪಾರ್ಥಿವ ಶರೀರ?
– ವಿಜಯ ರಾಘವೇಂದ್ರ ಕುಟುಂಬದಲ್ಲಿ ಕಣ್ಣೀರು
– ಬೆಂಗಳೂರು, ಬೆಳ್ತಂಗಡಿ ಮನೆಗಳಲ್ಲಿ ನೀರವ ಮೌನ

NAMMUR EXPRESS NEWS
ಬೆಂಗಳೂರು/ಮಂಗಳೂರು: ನಟ ವಿಜಯ ರಾಘವೇಂದ್ರ ಅವರ ಪತ್ನಿ ಸ್ಪಂದನಾ ಹೃದಯಾಘಾತದಿಂದ ನಿಧನರಾಗಿದ್ದು ಇಡೀ ನಾಡು ಕಂಬನಿ ಮಿಡಿಯುತ್ತಿದೆ. ಸಿನಿಮಾ ರಂಗ ಮಾತ್ರವಲ್ಲದೆ ಜನರು ಕೂಡ ಸಂತಾಪ ವ್ಯಕ್ತಪಡಿಸುತ್ತಿದ್ದಾರೆ. ಮಂಗಳವಾರ ಬೆಂಗಳೂರಿಗೆ ಸ್ಪಂದನಾ ಪಾರ್ಥಿವ ಶರೀರ ಬರಲಿದೆ. ಎಂದು ಮೂಲಗಳು ತಿಳಿಸಿವೆ. ಸ್ಪಂದನಾ ಹಿರಿಯ ನಿವೃತ್ತ ಪೊಲೀಸ್ ಅಧಿಕಾರಿ ಬಿ.ಕೆ ಶಿವರಾಮ್ ಅವರ ಪುತ್ರಿ. ಆಗಸ್ಟ್ 26 -2007 ರಂದು ವಿಜಯರಾಘವೇಂದ್ರ ಅವರನ್ನು ವಿವಾಹವಾಗಿದ್ದರು. ಇವರಿಗೆ ಶೌರ್ಯ ಎಂಬ ಪುತ್ರನಿದ್ದಾನೆ. ಇನ್ನು ಸ್ಪಂದನಾ ಸಹೋದರ ರಕ್ಷಿತ್ ಶಿವರಾಂ ಈ ಬಾರಿ ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದರು.

ಅತ್ತಿಗೆ ಸಾವಿಗೆ ಕಂಬನಿ ಮಿಡಿದ ಶ್ರೀಮುರಳಿ

ಅತ್ತಿಗೆ ಸ್ಪಂದನಾ ಸಾವಿಗೆ ನಟ ಶ್ರೀಮುರಳಿ ಕಂಬನಿ ಮಿಡಿದಿದ್ದಾರೆ. ಈ ಬಗ್ಗೆ ಶ್ರೀಮುರಳಿ ಮಾತನಾಡಿ ನಿಧನವಾಗಿದ್ದನ್ನ ಅಣ್ಣ ಫೋನ್ ಮಾಡಿ ಹೇಳಿದರು, ಹೋಟೆಲ್‌ನಲ್ಲಿ ಮಲಗಿದ್ದಾಗಲೇ ನಿಧನರಾಗಿದ್ದಾರೆ. ಲೋ ಬಿಪಿಯಿಂದ ಈ ರೀತಿ ಆಗಿರಬಹುದು ಎಂದು ಬಿ.ಕೆ ಶಿವರಾಂ ನಿವಾಸದ ಬಳಿ ಕಣ್ಣೀರು ಹಾಕಿದ್ದಾರೆ. ಸ್ಪಂದನಾ ರವಿಚಂದ್ರನ್ ಅವರ ಅಪೂರ್ವ ಸಿನಿಮಾದಲ್ಲಿ ನಟಿಸಿದ್ದರು. ವಿಜಯ್ ಅಭಿನಯದ ಕಿಸ್ಮತ್ ಸಿನಿಮಾವನ್ನು ಸ್ಪಂದನಾ ನಿರ್ಮಿಸಿದ್ದರು. ಮಂಗಳವಾರ ಬೆಂಗಳೂರಿಗೆ ಸ್ಪಂದನಾ ಪಾರ್ಥೀವ ಶರೀರ ರವಾನೆಯಾಗಲಿದೆ. ಸ್ಪಂದನಾ ಮೃತದೇಹ ಭಾರತಕ್ಕೆ ಕರೆತರುವ ಬಗ್ಗೆ ಥೈಲ್ಯಾಂಡ್ ಸರ್ಕಾರದ ಜೊತೆ ಕೇಂದ್ರ ಸರ್ಕಾರ ಮಾತುಕತೆ ನಡೆಸಲಿದೆ. ಈ ಬಗ್ಗೆ ಹರಿಪ್ರಸಾದ್ ವಿದೇಶಾಂಗ ಸಚಿವ ಜೈಶಂಕರ್
ಜೊತೆ ಮಾತುಕತೆ ನಡೆಸಿದ್ದಾರೆ.

ಎರಡು ಕುಟುಂಬ ಬ್ಯಾಂಕಾಕ್‌ಗೆ ಪಯಣ!

ವಿಷಯ ತಿಳಿಯುತ್ತಿದ್ದಂತೆ ವಿಜಯ ರಾಘವೇಂದ್ರ, ಸ್ಪಂದನಾ ತಂದೆ ನಿವೃತ್ತ ಪೊಲೀಸ್ ಅಧಿಕಾರಿ ಬಿ.ಕೆ. ಶಿವರಾಂ ಸೇರಿದಂತೆ ಕುಟುಂಬಸ್ಥರು ಬ್ಯಾಂಕಾಕ್‌ಗೆ ತೆರಳಿದ್ದಾರೆ. ಸ್ಪಂದನ ಮಂಗಳೂರಿನ ವಿಮಾನ ನಿಲ್ದಾಣದ ಮೂಲಕ ಶನಿವಾರ ಬ್ಯಾಂಕಾಕ್ ಗೆ ತೆರಳಿದ್ದರು. ಭಾನುವಾರ ಸ್ಪಂದನಾ ಅವರಿಗೆ ಹೃದಯಾಘಾತವಾಗಿ ಅಲ್ಲಿನ ಸ್ಥಳೀಯ ಆಸ್ಪತ್ರೆಗೆ ಸೇರಿಸಲಾಗಿತ್ತು.ಆದರೇ ಚಿಕಿತ್ಸೆ ಫಲಕಾರಿಯಾಗದೇ ಸಾವು ಕಂಡಿದ್ದಾರೆ. ಅತ್ಯಂತ ಕ್ಯೂಟ್ ಜೋಡಿಯಾಗಿದ್ದ ವಿಜಯ ರಾಘವೇಂದ್ರ ಮತ್ತು ಸ್ಪಂದನಾ ಸಿನಿಮಾ ರಂಗದ ಜತೆಗೆ ಸಾಮಾಜಿಕ ಚಟುವಟಿಕೆಯಲ್ಲೂ ತೊಡಗಿಸಿಕೊಂಡಿದ್ದರು.

ಬೆಂಗಳೂರು, ಬೆಳ್ತಂಗಡಿ ಮನೆಗಳಲ್ಲಿ ನೀರವ ಮೌನ

ಸ್ಪಂದನಾ ಅವರ ಬೆಂಗಳೂರು ಮತ್ತು ಬೆಳ್ತಂಗಡಿ ಮನೆಗಳಲ್ಲಿ ನೀರವ ಮೌನ ಆವರಿಸಿದೆ. ಎಲ್ಲೆಡೆ ಕುಟುಂಬದವರು, ಸ್ನೇಹಿತರು ಕಣ್ಣೀರು ಹಾಕುತ್ತಿದ್ದಾರೆ. ಇಡೀ ನಾಡಿನ ಎಲ್ಲರಲ್ಲೂ ಸಂತಾಪ ವ್ಯಕ್ತವಾಗುತ್ತಿದೆ.ಸಾಮಾಜಿಕ ಜಾಲ ತಾಣದಲ್ಲಿ ಇಬ್ಬರ ಜೋಡಿಯ ಫೋಟೋಗಳು ಕಾಣಿಸಿವೆ.

ಇದನ್ನೂ ಓದಿ : ರೈತರಿಗೆ ಖುಷ್: ಕಾಳು ಮೆಣಸು ದರ ಏರಿಕೆ!

HOW TO APPLY : NEET-UG COUNSELLING 2023

Categories
ಮಲ್ನಾಡ್

ಮಲ್ನಾಡ್: ಟಾಪ್ 7 ನ್ಯೂಸ್

20 ಲಕ್ಷ ಕದ್ದು ಗೋವಾದಲ್ಲಿ ಇಸ್ಪೀಟ್ ಆಡಿದವ ಅರೆಸ್ಟ್!
– ಶಿವಮೊಗ್ಗದಲ್ಲಿ ನಡೆದ ಕಳ್ಳತನ ಪ್ರಕರಣಕ್ಕೆ ಟ್ವಿಸ್ಟ್
– ಮೂಡಿಗೆರೆಯಲ್ಲಿ ಮರದಲ್ಲೇ ವಿದ್ಯುತ್ ಶಾಕ್: ಸಾವು
– ಕಡೂರು: ದೇಗುಲ ಕಳ್ಳ ಪೊಲೀಸರಿಗೆ ಸಿಕ್ಕಿ ಬಿದ್ದ!
– ಭದ್ರಾವತಿ: ನೀರು ಕೇಳಿಮಾಂಗಲ್ಯ ಕದ್ದ ಕಳ್ಳನಿಗೆ ಜೈಲು!
– ಮಗನ ಚೇಡಿಸಿದ್ದನ್ನು ಕೇಳಿದ ತಂದೆ ಮೇಲೆ ಹಲ್ಲೆ
– ಬಿಜೆಪಿ ಶಾಸಕ ಚಂದ್ರಪ್ಪ ಹೆಸರು ಬರೆದಿಟ್ಟು ಆತ್ಮಹತ್ಯೆ!
– ಮರದಿಂದ ಬಿದ್ದು ಪೊಲೀಸ್ ಸಿಬ್ಬಂದಿ ಸಾವು!

NAMMUR EXPRESS NEWS : ಕುಡಿಯುವ ನೀರಿನ ಕಾಮಗಾರಿಯಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರಿಗೆ ವೇತನ ಕೊಡಲು ತಂದಿದ್ದ 20 ಲಕ್ಷ ರೂಪಾಯಿಯನ್ನು ಕದ್ದೊಯ್ದ ಪ್ರಕರಣವನ್ನು ಶಿವಮೊಗ್ಗದ ತುಂಗಾ ನಗರ ಪೊಲೀಸ್‌ ಸ್ಟೇಷನ್ ಪೊಲೀಸರು ಭೇದಿಸಿದ್ದಾರೆ. ಶಿವಮೊಗ್ಗ ಸಿಟಿಯಲ್ಲಿನ 24*7 ಕುಡಿಯುವ ನೀರು ಸರಬರಾಜು ಕಾಮಗಾರಿಯ ಯೋಜನಾ ವ್ಯವಸ್ಥಾಪಕ ಹೇಮಂತ್ ಕುಮಾರ್ ರವರು ಕಾರ್ಮಿಕರಿಗೆ ವೇತನ ನೀಡಲು 20 ಲಕ್ಷ ರೂಪಾಯಿ ಕ್ಯಾಶ್ ಹಿಡಿದುಕೊಂಡು ಬಂದಿದ್ದರು. ಅದನ್ನ ಜ್ಯೋತಿ ನಗರದ ಬಳಿಯಲ್ಲಿ ಅವರ ಕಾರಿನಚಾಲಕ ಕಿತ್ತುಕೊಂಡು ಪರಾರಿಯಾಗಿದ್ದ. ಜುಲೈ 29ರಂದು ಈ ಘಟನೆ ನಡೆದಿತ್ತು. ಪ್ರಕರಣ ಸಂಬಂಧ ತುಂಗಾನಗರ ಪೊಲೀಸರು ಕೇಸ್ ದಾಖಲಿಸಿದ್ದರು. ಆರೋಪಿಗೆ ಆತನಿಗೆ ಕ್ಯಾಸಿನೋದಲ್ಲಿ ಜೂಜಾಡುವ ಚಟವಿತ್ತು ಎಂದು ತಿಳಿದ ಪೊಲೀಸರು ಗೋವಾದಲ್ಲಿ ಆರೋಪಿಯ ಇರುವಿಕೆಯನ್ನ ಪತ್ತೆ ಮಾಡಿದ್ದಾರೆ. ಅಲ್ಲಿಗೆ ತೆರಳಿದ್ದ ತನಿಖಾ ತಂಡ, ಕ್ಯಾಸಿನೋದಿಂದಲೇ ಆರೋಪಿಯನ್ನ ಬಂಧಿಸಿ ಕರೆತಂದಿದೆ. ಕದ್ದಿದ್ದ 20 ಲಕ್ಷ ರೂಪಾಯಿಯಲ್ಲಿ ಆರೋಪಿ ಅದಾಗಲೇ 12.39 ಲಕ್ಷ ರೂಪಾಯಿಯನ್ನು ಜೂಜಾಡಿ ಕಳೆದಿದ್ದ ಸದ್ಯ ಆತನಿಂದ 7.61 ಲಕ್ಷ ರೂಪಾಯಿಯನ್ನ ಪೊಲೀಸರು ಜಪ್ತಿ ಮಾಡಿದ್ದಾರೆ.

ಕಡೂರಿನಲ್ಲಿ ಕಳ್ಳತನ: ಕಳ್ಳನ ಹಿಡಿದ ಪೊಲೀಸರು!

ದೇವಸ್ಥಾನದ ಹುಂಡಿಯನ್ನು ಕಳ್ಳತನ ಮಾಡಿದ್ದ ಆರೋಪಿಯನ್ನು ಬಂಧಿಸಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕಡೂರಿನಲ್ಲಿ ನಡೆದಿದೆ. ಅನಿಲ್ ಕುಮಾರ್ ಡಿ.ಎಂ(30) ಬಂಧಿತ ಆರೋಪಿ ಆಗಿದ್ದಾನೆ. ಜೂನ್ ತಿಂಗಳಿನಲ್ಲಿ ಕಡೂರಿನ ಹೇಮಗಿರಿ ಶ್ರೀ ಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನದ ಹುಂಡಿಯನ್ನು ಕಳ್ಳತನ ಮಾಡಿದ್ದ, ಸಿ.ಪಿ.ಐ. ಕಡೂರು ವೃತ್ತ ನೇತೃತ್ವದ ಪೊಲೀಸ್ ತಂಡ ಆರೋಪಿಯನ್ನು ಬಂಧಿಸಿದ್ದಾರೆ. ಈ ಹಿಂದೆ ಹಾಸನ ಮತ್ತು ಮಂಡ್ಯ ಜಿಲ್ಲೆಗಳ ದೇವಸ್ಥಾನದ ಹುಂಡಿ ಕಳವು ಮಾಡಿದ ಬಗ್ಗೆ ಪ್ರಕರಣ ದಾಖಲಾಗಿದ್ದು, ಬಂಧಿತ ಆರೋಪಿಯಿಂದ ಕಳವು ಮಾಡಿದ್ದ 20,150 ನಗದು ವಶಪಡಿಸಿಕೊಂಡಿದ್ದಾರೆ.

ಮಗನ ಚೇಡಿಸಿದಕ್ಕೆ ಕೇಳಿದ್ದಕ್ಕೆ ಮನ ಬಂದಂತೆ ಹಲ್ಲೆ!

ಪತ್ರಕರ್ತ ಮುದಾಸಿರ್ ಮತ್ತು ಅವರ 9 ವರ್ಷದ ಮಗನ ಮೇಲೆ ಮೇಲೆ ಹಲ್ಲೆ ನಡೆಸಲಾಗಿದೆ. ಮಗನ ಮೇಲೆ ಹಲ್ಲೆ ನಡೆಸಿದ ವಿಚಾರದಲ್ಲಿ ಮಾತುಕತೆಗೆ ಕರೆದು ಮುದಾಸೀರ್ ಮೇಲೆ ಹಲ್ಲೆ ನಡೆಸಿರುವುದು ಶಿವಮೊಗ್ಗ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಆರ್ ಎಂ ಎಲ್ ನಗರದ ಖುಬ ಮಸೀದಿಯ ಬಳಿಯ ಅಂಗಡಿಗೆ ಹೊರಟಿದ್ದ ಮುದಾಸಿರ್ ಅವರ ಮಗ ಮಾನಸಿಕವಾಗಿ ಅಸ್ವಸ್ಥನಾಗಿರುವ ವಿಶೇಷ ಮಗುವಾಗಿದೆ. ಈತನನ್ನ ಚುಡಾಯಿಸಿ ಹಲ್ಲೆ ಮಾಡಲಾಗಿದೆ. ಮಗನ ಮೇಲೆ ಹಲ್ಲೆ ನಡೆದಿರುವ ಬಗ್ಗೆ ಸ್ಥಳಕ್ಕೆ ಹೋಗಿ ತಂದೆ ಮುದಾಸಿ‌ರ್ ನೋಡಿದ್ದಾರೆ. ಮಗನನ್ನ ತಕ್ಷಣ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗುತ್ತದೆ. ನಂತರ ದೊಡ್ಡಪೇಟೆ ಪೊಲೀಸ್ ಠಾಣೆಗೆ ದೂರು ಕೊಡಲು ಹೋದಾಗ ಮಗನ ಮೇಲೆ ಹಲ್ಲೆ ನಡೆಸಿದವರು ಬನ್ನಿ ಮಾತನಾಡೋಣ ಎಂದು ನಂಬಿಸಿದ್ದಾರೆ. ಮಾತುಕತೆಗೆ ಮತ್ತೆ ಖುಬ ಮಸೀದಿ ಕಡೆ ತೆರಳಿದಾಗ ಮದಾಸಿರ್ ಮೇಲೆ ಹಲ್ಲೆ ನಡೆಸಲಾಗಿದೆ. ಎದೆಗೆ, ತಲೆಗ ಹಾಗೂ ಬೆನ್ನ ಮೇಲೆ ಹಲ್ಲೆ ನಡೆಸಲಾಗಿದೆ. ಹಲ್ಲೆ ನಡೆಸಿರುವವರನ್ನ ಸಲೀಂ, ಶಾಹೀದ್ ಮತ್ತು ಇತರರು ಎಂದು ಗುರುತಿಸಲಾಗಿದೆ. ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.

ಮರದಿಂದ ಬಿದ್ದು ಪೊಲೀಸ್ ಸಿಬ್ಬಂದಿ ಸಾವು!

ಮರದಿಂದ ಕೆಳಗೆ ಬಿದ್ದು ಪೊಲೀಸ್ ಸಿಬ್ಬಂದಿ ಸಾವನ್ನಪ್ಪಿರುವ ಘಟನೆ ಕೊಡಗು ಜಿಲ್ಲೆಯ ಕುಶಾಲನಗರ ತಾಲೂಕಿನ ಕಾನ್‌ಬೈಲು ಗ್ರಾಮದಲ್ಲಿ ನಡೆದಿದೆ. ಲೋಕೇಶ್(40) ಸಾವನ್ನಪ್ಪಿದ ಪೊಲೀಸ್ ಸಿಬ್ಬಂದಿ.ಮಾಜಿ ಶಾಸಕ ಅಪ್ಪಚ್ಚು ರಂಜನ್ ಗನ್ ಮ್ಯಾನ್ ಆಗಿದ್ದ ಲೋಕೇಶ್ ಅವರು ಸುಮಾರು 15 ವರ್ಷಗಳಿಗೂ ಹೆಚ್ಚು ಕಾಲ ಸೇವೆ ಸಲ್ಲಿಸಿದರು. ಮಡಿಕೇರಿ ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಮೃತದೇಹ ಇರಿಸಿದ್ದು, ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ

ಬಿಜೆಪಿ ಶಾಸಕ ಚಂದ್ರಪ್ಪ ಹೆಸರು ಬರೆದಿಟ್ಟ ನೌಕರ ಆತ್ಮಹತ್ಯೆ!

ಬಿಜೆಪಿ ಶಾಸಕ ಎಂ ಚಂದ್ರಪ್ ಹೆಸರು ಬರೆದಿಟ್ಟು ಎಸ್ ಡಿಎ ನೌಕರ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳಕಿಗೆ ಬಂದಿದೆ. ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ಉಪ್ಪರಿಗೇನಹಳ್ಳಿ ಗ್ರಾಮ ಪಂಚಾಯಿತಿ ಎಸ್‌ಡಿಎ ತಿಪ್ಪೇಸ್ವಾಮಿ ಅವರು ಜಾನಕಲ್ ಬಳಿ ಆ.6ರಂದು ವಿಷಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹೊಳಲ್ಕೆರೆ ಶಾಸಕ ಎಂ.ಚಂದ್ರಪ್ಪ ಅವರ ಅಮಾನತು ಬೆದರಿಕೆ, ತಾಲೂಕು ಪಂಚಾಯಿತಿ ಹಾಗೂ ಗ್ರಾಮ ಪಂಚಾಯಿತಿ ಸದಸ್ಯರು ಕಿರುಕುಳದಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಡೆತ್‌ನೋಟ್‌ನಲ್ಲಿ ಬರೆದಿಟ್ಟಿದ್ದಾರೆ. ಈ ಸಂಬಂಧ ಮೃತ ತಿಪ್ಪೇಸ್ವಾಮಿ ಪುತ್ರ ರಾಜಶೇಖರಪ್ಪ ಎನ್ನುವರು ಹೊಸದುರ್ಗ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಕೊಂಬೆ ಕಡಿಯಲು ಹೋಗಿ ಮರದಲ್ಲೇ ಮೃತಪಟ್ಟ ವ್ಯಕ್ತಿ!

ಮರದ ಕೊಂಬೆ ಕಡಿಯಲು ಹೋಗಿ ವಿದ್ಯುತ್ ತಂತಿ ಸ್ಪರ್ಶಿಸಿ ವ್ಯಕ್ತಿಯೊಬ್ಬ ಮೃತಪಟ್ಟಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಹುಯಿಲುಮನೆ ಗ್ರಾಮದಲ್ಲಿ ನಡೆದಿದೆ. ಲೋಕಪ್ಪಗೌಡ
(56)ಮೃತ ಪಟ್ಟ ವ್ಯಕ್ತಿ. ವಿದ್ಯುತ್ ತಂತಿಗೆ ಮರದ ಕೊಂಬೆಗಳು ತಗಲಿದ್ದನ್ನು ಕಡಿಯಲು ಹೋಗಿ ವಿದ್ಯುತ್ ತಂತಿ ಸ್ಪರ್ಶಿಸಿ ಮರದ ಮೇಲೆಯೇ ಪ್ರಾಣ ಬಿಟ್ಟಿದ್ದಾರೆ.ಈ ಬಗ್ಗೆ ಮನೆಯವರು ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದು ಸಬ್ ಇನ್ ಸ್ಪೆಕ್ಟರ್ ವಿ. ಶ್ರೀನಾಥ್ ರೆಡ್ಡಿ ಹಾಗೂ ಪೊಲೀಸ್ ಸಿಬ್ಬಂದಿಗಳು ಮತ್ತು ಬಾಳೂರು ಮೆಸ್ಕಾಂ ಕಿರಿಯ ಇಂಜಿನೀಯರ್ ಪ್ರಭಾಕರ್ ಹಾಗೂ ಸ್ಥಳಕ್ಕೆ ಆಗಮಿಸಿ ಮರದ ಮೇಲಿಂದ ಮೃತ ದೇಹ ಇಳಿಸಿ ಸ್ಥಳ ಪರಿಶೀಲನೆ ನಡೆಸಿದ್ದಾರೆ.

ನೀರು ಕೇಳಿ, ಮಾಂಗಲ್ಯ ಕದ್ದ ಕಳ್ಳನಿಗೆ ಜೈಲು!

ನೀರು ಕೇಳುವ ನೆಪದಲ್ಲಿ ಮನೆಯೊಳಗೆ ನುಗ್ಗಿ, ಮನೆಯಲ್ಲಿದ್ದ ಗೃಹಿಣಿಯ ಮೇಲೆ ಹಲ್ಲೆ ಮಾಡಿ, ಚಿನ್ನ ದುಡ್ಡು ಕದ್ದೊಯ್ದ ಆರೋಪಿಗೆ ಬರೋಬ್ಬರಿ 8 ವರ್ಷಗಳ ನಂತರ ಶಿಕ್ಷೆಯಾಗಿದೆ. ಭದ್ರಾವತಿ ನ್ಯೂಟೌನ್ ಪೊಲೀಸ್ ಠಾಣಾ ವ್ಯಾಪ್ತಿಯ ಜನ್ನಾಪುರ ವಾಸಿ 60 ವರ್ಷದ ಮಹಿಳೆಯೊಬ್ಬರು ದಿನಾಂಕಃ 13-01-2015 ರಂದು ತಮ್ಮ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಈ ಘಟನೆ ಸಂಭವಿಸಿತ್ತು. ಇಲ್ಲಿನ ನಿವಾಸಿ ಕುಮಾರ ಎಂಬಾತ, ಮಹಿಳೆಯ ಮನೆಗೆ ಬಂದು ನೀರು ಕೇಳಿದ್ದ. ಆನಂತರ ಮಹಿಳೆಯು ನೀರು ತರಲು ಅಡುಗೆ ಮನೆಗೆ ಹೋದಾಗ ಅವರ ಕತ್ತಿನಲ್ಲಿದ್ದ ಬಂಗಾರದ ಸರವನ್ನು ಕಿತ್ತುಕೊಂಡು, ಕೆಳಗೆ ಬೀಳಿಸಿ ತಲೆದಿಂಬಿನಿಂದ ಮುಖಕ್ಕೆ ಒತ್ತಿ ಕೈಯಿಂದ ಹೊಡೆದು ಹಲ್ಲೆ ಮಾಡಿದ್ದ. ಅಲ್ಲದೆ, ಮಾಂಗಲ್ಯ ಸರ, ಹಣ ಮತ್ತು ಮೊಬೈಲ್ ಅನ್ನು ತೆಗೆದುಕೊಂಡು ಹೋಗಿದ್ದ, ಈ ಸಂಬಂಧ 394 ಐಪಿಸಿ ರೀತ್ಯಾ ಪ್ರಕರಣ ದಾಖಲಾಗಿತ್ತು.ಇದೇ ಪ್ರಕರಣ ಸಂಬಂಧ ಅಂದಿನ ತನಿಖಾಧಿಕಾರಿಗಳಾದ ಪ್ರಭು ಸೂರಿನ್ ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರವನ್ನು ಸಲ್ಲಿಸಿದ್ದರು. ಪ್ರಕರಣ ಕುರಿತಾಗಿ ಸಹಾಯಕ ಸರ್ಕಾರಿ ಅಭಿಯೋಜಕಿ ನೀಲಜ್ಯೋತಿ ವಾದ ಮಂಡಿಸಿದ್ದರು. ಇದೀಗ, 04 ನೇ ಹೆಚ್ಚುವರಿ ಸಿವಿಲ್ ಮತ್ತು ಜೆಎಂಎಫ್‌ಸಿ ನ್ಯಾಯಾಲಯ ಭದ್ರಾವತಿ ಪ್ರಕರಣ ವಿಚಾರಣೆ ಮುಗಿಸಿ ತೀರ್ಪು ನೀಡಿದೆ.

ಇದನ್ನೂ ಓದಿ : ರೈತರಿಗೆ ಖುಷ್: ಕಾಳು ಮೆಣಸು ದರ ಏರಿಕೆ!

HOW TO APPLY : NEET-UG COUNSELLING 2023

Categories
ಅಡಿಕೆ-ದರ ರಾಷ್ಟ್ರೀಯ ವಾರ್ತೆ

ಮತ್ತೆ ಭೂತಾನ್ ಭೂತ: ಅಡಿಕೆಗೆ ಕುತ್ತು ಬರುತ್ತಾ?

ಮತ್ತೆ ಭೂತಾನ್ ಭೂತ: ಅಡಿಕೆಗೆ ಕುತ್ತು ಬರುತ್ತಾ?
– ಕರ್ನಾಟಕ ಅಡಿಕೆ ಬೆಳೆದ ರೈತರಿಗೆ ದೊಡ್ಡ ಹೊಡೆತ
– ಅಡಿಕೆ ದರ ಇಳಿಯುತ್ತಾ…?,ಕೇಂದ್ರದ ನಿರ್ಧಾರ ಏನು?

NAMMUR EXPRESS NEWS
ನವ ದೆಹಲಿ: ಅಡಿಕೆಗೆ ಮತ್ತೆ ಕುತ್ತು ಬರುವ ಸಾಧ್ಯತೆಗಳು ಹೆಚ್ಚಾಗಿದೆ. ಭೂತಾನ್‌ನಿಂದ ಪ್ರತಿವರ್ಷ 17 ಸಾವಿರ ಟನ್‌ ತಾಜಾ ಅಡಿಕೆ ಆಮದು ಮಾಡಿಕೊಳ್ಳಲು ಕೇಂದ್ರ ವಾಣಿಜ್ಯ ಹಾಗೂ ಕೈಗಾರಿಕಾ ಸಚಿವಾಲಯ ಒಪ್ಪಿಗೆ ನೀಡಿದೆ. ಇದು ದೇಶಿಯ ಮಾರುಕಟ್ಟೆಗೆ ದೊಡ್ಡ ಪೆಟ್ಟು ನೀಡುವ ಸಾಧ್ಯತೆ ಇದೆ. ಲೋಕಸಭೆಯಲ್ಲಿ ಸದಸ್ಯರ ಪ್ರಶ್ನೆಗೆ ಲಿಖಿತ ಉತ್ತರ ನೀಡಿರುವ ಇಲಾಖೆಯ ರಾಜ್ಯ ಸಚಿವೆ ಅನುಪ್ರಿಯಾ ಪಟೇಲ್, ಕಳೆದ ನಾಲ್ಕು ವರ್ಷಗಳಿಂದ ಭೂತಾನ್‌ನಿಂದ ಅಡಿಕೆ ಆಮದು ಆಗಿರಲಿಲ್ಲ. ಕನಿಷ್ಠ ಬೆಂಬಲ ಬೆಲೆಯ ಯಾವುದೇ ಷರತ್ತುಗಳನ್ನು ವಿಧಿಸದೆ ಪ್ರತಿವರ್ಷ ತಾಜಾ ಅಡಿಕೆ ಅಮದು ಮಾಡಿಕೊಳ್ಳಲು ಜುಲೈ 3ರಂದು ಅಧಿಸೂಚನೆ ಹೊರಡಿಸಲಾಗಿದೆ. ಆಮದನ್ನು ಪಶ್ಚಿಮ ಬಂಗಾಳದ ಜೈಗಾನ್ ಬಂದರು ಹಾಗೂ ಚಾಮುರ್ಚಿ ಬಂದರು ಮೂಲಕವೇ ಮಾಡಬೇಕು ಎಂದು ಷರತ್ತು ವಿಧಿಸಲಾಗಿದೆ. ಅಂತಹ ಅಮದುಗಳು ಡೈರೆಕ್ಟರೇಟ್ ಜನರಲ್ ಆಫ್ ಫಾರಿನ್ ಟ್ರೇಡ್ ನೀಡಿದ ಬಂದರು ನೋಂದಣಿ ಪ್ರಮಾಣ- ಪತ್ರಕ್ಕೆ ಒಳಪಟ್ಟಿರುತ್ತದೆ’ ಎಂದು ತಿಳಿಸಿದ್ದಾರೆ. ಇದು ಭಾರತ, ಅದರಲ್ಲೂ ಕರ್ನಾಟಕ ರೈತರಿಗೆ ದೊಡ್ಡ ಹೊಡೆತ ನೀಡಲಿದೆ ಎನ್ನಲಾಗಿದೆ.

ಮ್ಯಾನ್ಮಾರ್, ಶ್ರೀಲಂಕಾ, ಇಂಡೊನೇಷ್ಯಾದಿಂದ ಅಡಿಕೆ ಆಮದು!

ಕಳೆದ ಎರಡು ವರ್ಷಗಳಿಂದ ಮ್ಯಾನ್ಮಾರ್, ಶ್ರೀಲಂಕಾ ಹಾಗೂ ಇಂಡೊನೇಷ್ಯಾದಿಂದ ಅಡಿಕೆ ಆಮದು ಹೆಚ್ಚಾಗಿದೆ ಎಂದೂ ಅವರು ಮಾಹಿತಿ ನೀಡಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಅಡಿಕೆ ಆಮದು ಪ್ರಮಾಣ ಹೆಚ್ಚಳ ಗಮನಿಸಿದ ಸಚಿವಾಲಯವು, ಅಡಿಕೆಯ ಅಮದಿನ ಕನಿಷ್ಠ ದರವನ್ನು ಪ್ರತಿ ಕೆ.ಜಿ.ಗೆ 7251ಯಿಂದ 7351ಕ್ಕೆ ಹೆಚ್ಚಿಸಿ ಈ ವರ್ಷದ ಫೆಬ್ರುವರಿ 14ರಂದು ಅಧಿಸೂಚನೆ ಹೊರಡಿಸಿತ್ತು, ನಮ್ಮ ರೈತರ ಹಿತರಕ್ಷಣೆ ಮಾಡುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿ ತ್ತು. ಜತೆಗೆ, ಸುಪಾರಿಯ ಆಮದು ನೀತಿಯನ್ನು ಉಚಿತದಿಂದ ನಿಷೇಧಿತ ಎಂದೂ ಪರಿಷ್ಕರಿಸ ಲಾಗಿತ್ತು’ ಎಂದು ಅವರು ಹೇಳಿದ್ದಾರೆ.

ಸ್ಥಳೀಯ ಅಡಿಕೆ ದರ ಕುಸಿತ ಸಾಧ್ಯತೆ!

ಅಡಿಕೆಯ ಅಮದಿನಿಂದ ದೇಶೀಯ ಅಡಿಕೆಯ ಬೆಲೆ ಕುಸಿತವಾಗುತ್ತಿದ್ದು, ಇದರಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ರೈತರು ಹಾಗೂ ರೈತ ಸಂಘಟನೆಗಳು ಇಲಾಖೆಗೆ ಮನವಿ ಸಲ್ಲಿಸಿದ್ದವು. ಅಡಿಕೆಯ ಅಡೆತಡೆ ಇಲ್ಲದ ಅಮದು ನಿಯಂತ್ರಿಸಲು ಹಾಗೂ ಕಳಪೆ ಗುಣಮಟ್ಟದ ಅಡಿಕೆ ಮಾರುಕಟ್ಟೆಗೆ ಬರುವುದನ್ನು ತಪ್ಪಿಸಲು ಸಚಿವಾಲಯವು ಅನೇಕ ಉಪಕ್ರಮಗಳನ್ನು ಕೈಗೊಂಡಿದೆ ಎಂದೂ ಅವರು ತಿಳಿಸಿದ್ದಾರೆ.

ಮಲೆನಾಡಿಗೆ ಬದುಕಿಗೆ ಪೆಟ್ಟು!

ಅಡಿಕೆ ಆಮದು ಈಗಾಗಲೇ ಎಲೆ ಚುಕ್ಕಿ, ಬೇರುಳ, ತುಂಡೆ ರೋಗ ಸೇರಿ ಅನೇಕ ರೋಗಗಳಿಂದ ತತ್ತರವಾಗಿರುವ ಮಲೆನಾಡ ರೈತರ ಬದುಕು ಆತಂಕದಲ್ಲಿದೆ. ಈಗ ಅಡಿಕೆ ಅಮದಿನಿಂದ ಬೆಲೆ ಇಳಿಕೆಯಾದರೆ ರೈತರ ಬದುಕು ತೊಂದರೆಗೆ ಒಳಗಾಗಲಿದೆ.

ಇದನ್ನೂ ಓದಿ : ರೈತರಿಗೆ ಖುಷ್: ಕಾಳು ಮೆಣಸು ದರ ಏರಿಕೆ!

HOW TO APPLY : NEET-UG COUNSELLING 2023

Categories
ರಾಜ್ಯ

ಟಾಪ್ 7 ನ್ಯೂಸ್

ಆಸ್ಪತ್ರೆಯ ತೊಟ್ಟಿಯಲ್ಲಿ ನವಜಾತ ಶಿಶು ಪತ್ತೆ!
– ವಿಟ್ಲದಲ್ಲಿ ಜೂಜಾಟದ ಅಡ್ಡೆ ಮೇಲೆ ದಾಳಿ
– ಪುತ್ತೂರು: ಜನರ ಹಣ ಸಂಗ್ರಹ ಮಾಡಿ ಮೋಸ
– ಸಿಎಂ ವಿರುದ್ಧ ವಿವಾದಿತ ಕಮೆಂಟ್: ಅರೆಸ್ಟ್
– ಪಾಕ್: ಹಳಿ ತಪ್ಪಿದ ರೈಲು: 30 ಮಂದಿ ಸಾವು
– ಬಾಂಗ್ಲಾದೇಶದಲ್ಲಿ ಡೆಂಗಿಗೆ 300 ಮಂದಿ ಬಲಿ!
– ನಾಡಬಾಂಬ್ ಇಟ್ಟು ಕಾಡು ಹಂದಿ ಹತ್ಯೆ: ಸೆರೆ

NAMMUR EXPRESS NEWS
ಮುಂಡಗೋಡ: ಮುಂಡಗೋಡು ಪಟ್ಟಣದ ಜ್ಯೋತಿ (ಕ್ರಿಶ್ಚಿಯನ್) ಆಸ್ಪತ್ರೆಯ ಮುಂಭಾಗದಲ್ಲಿನ ತೊಟ್ಟಿಲಿನಲ್ಲಿ ಮೂರು ದಿನದ ನವಜಾತ ಶಿಶುವೊಂದು ಪತ್ತೆಯಾಗಿದೆ. ಜ್ಯೋತಿ ಆರೋಗ್ಯ ಕೇಂದ್ರದ ಮುಂಭಾಗದಲ್ಲಿ ತೊಟ್ಟಿಲನ್ನು ಇಡಲಾಗಿದ್ದು, ಮಗುವನ್ನು ಸಾಕಲು ಸಾಧ್ಯವಾಗದವರು ತಮ್ಮ ಮಗುವನ್ನು ಈ ತೊಟ್ಟಿಲಲ್ಲಿ ಹಾಕುವಂತೆ ನಾಮಫಲಕವನ್ನು ಹಾಕಲಾಗಿದೆ. ಇದೇ ತೊಟ್ಟಿಲಿನಲ್ಲಿ ಮಗುವನ್ನ ಇಟ್ಟು ಹೋಗಲಾಗಿದೆ. ನವಜಾತ ಶಿಶು ಅಳುತ್ತಿರುವ ಶಬ್ದ ಕೇಳಿದ ಆಸ್ಪತ್ರೆಯವರು ಪೊಲೀಸ್ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಶಿರಸಿ ದತ್ತು ಕೇಂದ್ರಕ್ಕೆ ಮಗುವನ್ನ ನೀಡಲು ಕ್ರಮ ಕೈಗೊಂಡಿದ್ದಾರೆ.

ವಿಟ್ಲದಲ್ಲಿ ಜುಗಾರಿ ಅಡ್ಡೆಗೆ ದಾಳಿ

ದಕ್ಷಿಣ ಕನ್ನಡ ಜಿಲ್ಲೆ ವಿಟ್ಲದ ವೀರಕಂಬ ಗ್ರಾಮದ ಎರ್ಮೆಮಜಲು ಗುಡ್ಡ ಪ್ರದೇಶದಲ್ಲಿ ನಡೆಯುತ್ತಿದ್ದ ಇಸ್ಪೀಟು ಜುಗಾರಿ ಅಡ್ಡೆಗೆ ಪೊಲೀಸರು ದಾಳಿ ನಡೆಸಿ ಕೇಪುಳಕೋಡಿ ನಿವಾಸಿ ಗಣೇಶ್‌ (40) ಕುಳ ಕಾರ್ಯಾಡಿ ನಿವಾಸಿ ಸುಮಿತ್‌(29), ಬರಿಮಾರು ನಿವಾಸಿ ದಯಾನಂದ (30) ಅವರನ್ನು ಬಂಧಿಸಿದ್ಧಾರೆ. ಅವರಿಂದ ಸುಮಾರು 15 ಸಾವಿರ ರೂ. ಮೊತ್ತವನ್ನು ವಶಕ್ಕೆ ಪಡೆಯಲಾಗಿದೆ. 6 ಮಂದಿ ಸ್ಥಳದಿಂದ ಪರಾರಿಯಾಗಿದ್ಧಾರೆ. ಗುಡ್ಡದಲ್ಲಿ ಸುಮಾರು 9 ಮಂದಿ “ಉಳಾಯಿ ಪಿದಾಯಿ’ ಆಟವನ್ನು ಆಡುತ್ತಿದ್ದ ಸಂದರ್ಭ ವಿಟ್ಲ ಪೊಲೀಸರು ದಾಳಿ ನಡೆಸಿದ್ದರು.

ಠೇವಣಿ ಹಣ ವಾಪಸು ನೀಡದೆ ವಂಚನೆ: ದೂರು!

ಪುತ್ತೂರು ನಗರದ ಖಾಸಗಿ ಕಟ್ಟಡವೊಂದರಲ್ಲಿ ಕಾರ್ಯನಿರ್ವಹಿಸುತ್ತಿರುವ ಭಾರತ್‌ ಒನ್‌ ಸೌಹಾರ್ದ ಸಹಕಾರಿ ಸಂಘ ಮತ್ತು ಈ ಸಂಸ್ಥೆಯ ಅಡಿಯಲ್ಲಿ ಕಾರ್ಯಾಚರಿಸುತ್ತಿದ್ದ ಟಾರ್ಗೆಟ್‌ 2 ಸಕ್ಸೆಸ್‌ ಎಂಬ ಟ್ರೇಡಿಂಗ್‌ ವ್ಯವಹಾರ ಸಂಸ್ಥೆಗಳು ಸಾರ್ವಜನಿಕರಿಂದ ಠೇವಣಿ ಸಂಗ್ರಹಿಸಿ ಮರಳಿ ನೀಡದೆ ವಂಚಿಸಿರುವ ಬಗ್ಗೆ ಪುತ್ತೂರು ನಗರ ಠಾಣೆಯಲ್ಲಿ ದೂರು ದಾಖಲಾಗಿದೆ.ಪುತ್ತೂರು ಒಳಮೊಗ್ರು ಗ್ರಾಮದ ನಿವಾಸಿ ನಾರಾಯಣ ನೀಡಿದ ದೂರಿನಂತೆ ಪ್ರಕರಣ ದಾಖಲಾಗಿದೆ. 2022 ಮಾ. 11ರಿಂದ ದೂರುದಾರರು ಹಾಗೂ ಸಾರ್ವಜನಿಕರಿಂದ ಹಣವನ್ನು ಠೇವಣಿಯಾಗಿ ಸಂಗ್ರಹಿಸಿ ಹಾಗೂ ತನ್ನ ಸಿಬಂದಿಗಳಿಗೆ ಕೂಡ ಗುರಿಯನ್ನು ನಿಗದಿಪಡಿಸಿ ಒತ್ತಡ ಹೇರಿ ಠೇವಣಿಗಳನ್ನು ಸಂಗ್ರಹಿಸಿ ಸಾರ್ವಜನಿಕರಿಂದ ಹಣ ಪಡೆದು ಠೇವಣಿ ಅವಧಿ ಮುಗಿದರೂ ಠೇವಣಿ ಸಂಗ್ರಹಿಸಿದ ಹಣವನ್ನು ಪಿರ್ಯಾದುದಾರರಿಗೆ ಹಾಗೂ ಸಾರ್ವಜನಿಕರಿಗೆ ನಿಗದಿತ ಅವಧಿಯಲ್ಲಿ ವಾಪಸು ನೀಡದೆ ನಂಬಿಕೆ ದ್ರೋಹ ಹಾಗೂ ವಂಚನೆ ಎಸಗಿದ್ದಾಗಿದೆ.

ಸಿಎಂ ವಿರುದ್ಧ ವಿವಾದಿತ ಕಮೆಂಟ್: ಅರೆಸ್ಟ್

ವಾಟ್ಸಾಪ್ ಗ್ರೂಪ್‌ನಲ್ಲಿ ಉತ್ತರಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಕುರಿತು ವಿವಾದಿತ ಕಮೆಂಟ್ ಮಾಡಿದ್ದ ವ್ಯಕ್ತಿಯನ್ನು ಪೊಲೀಸರು ಅರೆಸ್ಟ್ ಮಾಡಿದ ಘಟನೆ ನಡೆದಿದೆ. ಯುಪಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ವಿರುದ್ಧ ವ್ಯಕ್ತಿಯೊಬ್ಬ ಸಾಮಾಜಿಕ ಜಾಲತಾಣದಲ್ಲಿ ಮಾಡಿದ್ದ ಕಾಮೆಂಟ್‌ ಬಹಳ ವೈರಲ್ ಆಗಿತ್ತು. ಬಂಧಿತ ವ್ಯಕ್ತಿ ಸಹಾಬುದ್ದೀನ್ ಅನ್ಸಾರಿ ಎಂದು ತಿಳಿದುಬಂದಿದ್ದು, ಟ್ವಿಟರ್ ಮೂಲಕ ನಾವು ದೂರನ್ನು ಸ್ವೀಕರಿಸಿದೆವು. ಕಾಮೆಂಟ್‌ನ ಸ್ಕ್ರೀನ್ ಶಾಟ್ ಕೂಡ ಪಡೆಯಲಾಗಿದೆ ಎಂದು ಕೋಟ್ವಾಲಿ ಪೊಲೀಸ್ ಠಾಣೆಯ ಎಸ್‌ಎಚ್‌ಒ ಅಜಯ್ ಕುಮಾರ್ ಸೇರ್ ಮಾಹಿತಿ ನೀಡಿದ್ದಾರೆ.

ಹಳಿ ತಪ್ಪಿದ ರೈಲು: 30 ಮಂದಿ ಸಾವು

ಪಾಕಿಸ್ತಾನದ ಸಿಂಧೆ ಪ್ರಾಂತ್ಯದಲ್ಲಿ ಸಂಭವಿಸಿದ ಎಕ್ಸ್‌ಪ್ರೆಸ್ ರೈಲು ಅಪಘಾತದಲ್ಲಿ, ಸಾವಿನ ಸಂಖ್ಯೆ 30 ಕ್ಕೆ ಏರಿಕೆಯಾಗಿದೆ. 80 ಜನ ಗಾಯಗೊಂಡಿದ್ದಾರೆ ಎಂದು ರೈಲ್ವೆ ಸಚಿವ ಸಾದ್‌ ರಫೀಕ್ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
ಕರಾಚಿಯಿಂದ ರಾವಲ್ಪಿಂಡಿಗೆ ಹೊರಟಿದ್ದ ಹಜಾರಾ ಎಕ್ಸ್‌ಪ್ರೆಸ್ ರೈಲು ನವಾಬ್ ಶಾ ಜಿಲ್ಲೆಯ ಬಳಿ ಹಳಿತಪ್ಪಿದೆ. ಕರಾಚಿಯಿಂದ 275 ಕಿ.ಮೀ ದೂರದಲ್ಲಿ ರೈಲು ಅಪಘಾತಕ್ಕೀಡಾಗಿದೆ. ರೈಲ್ವೆ ಅಧಿಕಾರಿಗಳು ಮತ್ತು ರಕ್ಷಣಾ ಸಿಬ್ಬಂದಿ ತಂಡ ರಕ್ಷಣಾ ಕಾರ್ಯದಲ್ಲಿ ತೊಡಗಿವೆ, ಗಾಯಾಳುಗಳಿಗೆ ಹತ್ತಿರದ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸುಮಾರು ಒಂದು ಸಾವಿರ ಮಂದಿ ರೈಲಿನಲ್ಲಿ ಪ್ರಯಾಣಿಸುತ್ತಿದ್ದರು. ಹಲವಾರು ಮಂದಿ ರೈಲು ಬೋಗಿಗಳಲ್ಲಿ ಸಿಲುಕಿರುವ ಸಾಧ್ಯತೆ ಇದೆ. ಅಪಘಾತದ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಸಚಿವರು ತಿಳಿಸಿದ್ದಾರೆ.

ಬಾಂಗ್ಲಾದೇಶದಲ್ಲಿ ಡೆಂಗಿಗೆ 300 ಮಂದಿ ಬಲಿ!

ಮಾರಣಾಂತಿಕ ಡೆಂಗಿ ಜ್ವರ ಬಾಂಗ್ಲಾದೇಶದಲ್ಲಿ ವ್ಯಾಪಕವಾಗಿ ಹರಡುತ್ತಿದ್ದು, ಈಗಾಗಲೇ 61,500ಕ್ಕೂ ಹೆಚ್ಚು ಜನ ಸೋಂಕಿಗೆ ತುತ್ತಾಗಿದ್ದಾರೆ. ಅಲ್ಲದೆ 300 ಜನ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಚಿಕಿತ್ಸೆ ನೀಡಲು ಪರದಾಡುವ ಸ್ಥಿತಿ ಎದುರಾಗಿದೆ. ಅದರಲ್ಲೂ ರಾಜಧಾನಿ ಢಾಕಾದಲ್ಲಿ ಅತಿಹೆಚ್ಚು ಜನರಿಗೆ ಸೋಂಕು ತಗುಲಿದ್ದು, ತೀವ್ರ ಜ್ವರ, ಕೀಲುಗಳಲ್ಲಿ ನೋವು, ವಾಂತಿಯಂತಹ ಅನಾರೋಗ್ಯದಿಂದ ಬಳಲುತ್ತಿದ್ದಾರೆ.

ನಾಡಬಾಂಬ್ ಇಟ್ಟು ಕಾಡು ಹಂದಿ ಹತ್ಯೆ: ಸೆರೆ

ಕಾರವಾರ ತಾಲೂಕಿನ ಚೆಂಡಿಯಾದಲ್ಲಿ ಕಾಡುಹಂದಿಯನ್ನು ನಾಡಬಾಂಬ್ ಇಟ್ಟು ಹತ್ಯೆ ಮಾಡಿದ್ದು, ಆರೋಪಿಯನ್ನು ಅರಣ್ಯ ಇಲಾಖೆ ಸಿಬ್ಬಂದಿ ವಶಕ್ಕೆ ಪಡೆದಿದ್ದಾರೆ. ಸಿಫ್ರನ್ ಥಾಮಸ್ ಫರ್ನಾಂಡೀಸ್ ಹಂದಿ ಹತ್ಯೆ ಮಾಡಿದ ಆರೋಪಿ. ಕೆಲ ದಿನಗಳಿಂದ ಕಾಡುಹಂದಿಗಳ ಗುಂಪು ಗ್ರಾಮಗಳಿಗೆ ನುಗ್ಗುತ್ತಿತ್ತು. ಇದನ್ನು ಗಮನಿಸಿದ ಚೆಂಡಿಯಾ ಗ್ರಾಮಸ್ಥರು ಹಂದಿಗಳಿಗೆ ತರಕಾರಿಗಳನ್ನು ನೀಡುತ್ತಿದ್ದರು. ಇದರಿಂದಾಗಿ ಹಂದಿಗಳು ರಾತ್ರಿ ವೇಳೆ ಊರಿಗೆ ಬಂದು ಇಟ್ಟ ತರಕಾರಿಗಳನ್ನು ತಿಂದು ವಾಪಸ್ ಕಾಡಿಗೆ ತೆರಳುತ್ತಿದ್ದವು. ಆದರೆ ಶುಕ್ರವಾರ ಸ್ಥಳೀಯರಿಗೆ ನಾಡಬಾಂಬ್ ಸಿಡಿಸಿದ ಶಬ್ದ ಕೇಳಿಸಿದೆ. ಬಳಿಕ ಗ್ರಾಮದ ಸ್ಮಶಾನದಲ್ಲಿ ಹಂದಿಯು ನಾಡಬಾಂಬ್ ತಿಂದು ಮೃತಪಟ್ಟಿರುವುದು ತಿಳಿದುಬಂದಿದೆ. ನಾಡಬಾಂಬ್‌ಗೆ ಕೋಳಿ ಮಾಂಸವನ್ನು ಕಟ್ಟಿ ಇಟ್ಟಿರುವುದು ತಿಳಿದಿದೆ.

ಇದನ್ನೂ ಓದಿ : ರೈತರಿಗೆ ಖುಷ್: ಕಾಳು ಮೆಣಸು ದರ ಏರಿಕೆ!

HOW TO APPLY : NEET-UG COUNSELLING 2023

Categories
ಬೆಂಗಳೂರು

ನಟ ವಿಜಯ್ ರಾಘವೇಂದ್ರ ಪತ್ನಿ ಇನ್ನಿಲ್ಲ!

ನಟ ವಿಜಯ್ ರಾಘವೇಂದ್ರ ಪತ್ನಿ ಇನ್ನಿಲ್ಲ!
– ಸ್ಪಂದನಾ ಹೃದಯಾಘಾತದಿಂದ ನಿಧನ
– ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ಮೂಲದ ಸ್ಪಂದನಾ

NAMMUR EXPRESS NEWS
ಬೆಂಗಳೂರು: ಕನ್ನಡದ ಖ್ಯಾತ ನಟ ವಿಜಯ್ ರಾಘವೇಂದ್ರ ಅವರ ಪತ್ನಿ ಸ್ಪಂದನಾ ವಿಧಿವಶರಾಗಿದ್ದಾರೆ. ಥೈಲ್ಯಾಂಡ್​​ಗೆ ಹೋದಾಗ ಈ ಘಟನೆ ನಡೆದಿದೆ ಎನ್ನಲಾಗುತ್ತಿದೆ. ಸದ್ಯ ಲೋ ಬಿಪಿ ಹಾಗು ಹೃದಯಾಘಾತ ಆಗಿತ್ತು ಎಂಬ ಮಾಹಿತಿ ಲಭ್ಯವಾಗಿದೆ. ಸ್ಯಾಂಡಲ್​ವುಡ್​ನಲ್ಲಿ ಗುರುತಿಸಿಕೊಂಡಿರುವ ನಟ ವಿಜಯ್ ರಾಘವೇಂದ್ರ ಅವರ ಅಭಿಮಾನಿಗಳು ಇದೀಗ ಕಣ್ಣೀರಲ್ಲಿ ಮುಳುಗಿದ್ದಾರೆ. ಅವರ ಪತ್ನಿ ಸ್ಪಂದನಾಗೆ ಹೃದಯಾಘಾತ ಆಗಿ ಮೃತಪಟ್ಟಿದ್ದಾರೆ.
ಪುನೀತ್ ಅವರ ನಿಧನದ ನೋವಲ್ಲಿ ಇದ್ದ ಕುಟುಂಬಕ್ಕೆ ಇದೀಗ ಮತ್ತೊಂದು ಶಾಕ್ ಎದುರಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ಮೂಲದ ಸ್ಪಂದನಾ ಅವರು ಕುಟುಂಬವನ್ನು ಅಗಲಿದ್ದಾರೆ.

ಇದನ್ನೂ ಓದಿ : ರೈತರಿಗೆ ಖುಷ್: ಕಾಳು ಮೆಣಸು ದರ ಏರಿಕೆ!

HOW TO APPLY : NEET-UG COUNSELLING 2023

Categories
ಬೆಂಗಳೂರು

ರಾಜಧಾನಿಯಲ್ಲಿ ಕಂಬಳದ ಸಂಭ್ರಮಕ್ಕೆ ಸಜ್ಜು!

ರಾಜಧಾನಿಯಲ್ಲಿ ಕಂಬಳದ ಸಂಭ್ರಮಕ್ಕೆ ಸಜ್ಜು!
– ಅರಮನೆ ಮೈದಾನದಲ್ಲಿ ನಡೆಯಲಿದೆ ಕಂಬಳ
– ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ನೇತೃತ್ವದಲ್ಲಿ ಸಮಿತಿ: ಕರಾವಳಿಗರಿಗೆ ಸಿಹಿ ಸುದ್ದಿ

NAMMUR EXPRESS NEWS
ರಾಜ್ಯದ ಇತಿಹಾಸದಲ್ಲೇ ಮೊದಲು ತುಳುನಾಡಿನ ಕಂಬಳ ಬೆಂಗಳೂರಿನಲ್ಲಿ ಆಯೋಜನೆ ಮಾಡಲು ಸಿದ್ಧತೆ ನಡೆದಿದೆ. ಅಚ್ಚರಿ ಎಂದರೆ ಬೆಂಗಳೂರು ತುಳು ಕೂಟದ 50ನೇ ವರ್ಷಾಚರಣೆ ಅಂಗವಾಗಿ ಈ ಕಂಬಳ ನಡೆಯಲಿದ್ದು, ರೈಲಿನಲ್ಲಿ ಕೋಣಗಳು ಬರಲಿವೆ. ಬೆಂಗಳೂರಿನಲ್ಲೇ ಕಂಬಳವನ್ನು ನಡೆಸಲು ಒಂದು ತಂಡವೇ ಸಿದ್ಧವಾಗಿದೆ. ಇದಕ್ಕಾಗಿ ಸೂಕ್ತ ಸ್ಥಳವನ್ನು ಸ್ಥಳವನ್ನು ಪರಿಶೀಲನೆ ಕೂಡ ನಡೆಸಲಾಗಿದೆ. ಬೆಂಗಳೂರಿನ ಅರಮನೆ ಮೈದಾನದಲ್ಲೇ ಈ ಕಂಬಳ ನಡೆಯಲಿದೆ ಎನ್ನಲಾಗಿದೆ.

ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಸಾರಥ್ಯ!

ಕಂಬಳ ಆಯೋಜನೆ ಮಾಡುವ ಕುರಿತು ಪುತ್ತೂರು ಶಾಸಕ ಹಾಗೂ ಉಪ್ಪಿನಂಗಡಿ ವಿಜಯ ವಿಕ್ರಮ ಜೋಡುಕೆರೆ ಕಂಬಳ ಸಮಿತಿ ಅಧ್ಯಕ್ಷ ಅಶೋಕ್ ಕುಮಾರ್ ರೈ ನೇತೃತ್ವದಲ್ಲಿ ಕಂಬಳಕ್ಕಾಗಿ ಅರಮನೆ ಮೈದಾನದಲ್ಲಿ ಸ್ಥಳ ಪರಿಶೀಲನೆ ನಡೆಸಿದ್ದಾರೆ. ಆದರೆ ಕಂಬಳ ಯಾವತ್ತು ನಡೆಯಲಿದೆ ಎನ್ನುವ ಕುರಿತು ಇನ್ನೂ ದಿನಾಂಕವನ್ನು ಮಾತ್ರ ನಿಗದಿ ಮಾಡಿಲ್ಲ. ಜೊತೆಗೆ, ಯಾವ ಕೋಣಗಳನ್ನು ಇಲ್ಲಿನ ಕಂಬಳಕ್ಕೆ ಆಯ್ಕೆ ಮಾಡಬೇಕು, ಅವುಗಳನ್ನು ಊರಿನಿಂದ ಬೆಂಗಳೂರಿಗೆ ಹೇಗೆ ತರಬೇಕು ಎಂಬ ನಿಟ್ಟಿನಲ್ಲಿಯೂ ಚರ್ಚೆ ನಡೆಯುತ್ತಿದೆ ಎಂದು ತಿಳಿದುಬಂದಿದೆ. ಇನ್ನು ಶಾಸಕ ಅಶೋಕ್‌ ಕುಮಾರ್‌ ರೈ ಅವರೊಂದಿಗೆ ತುಳು ಕೂಟದ ಅಧ್ಯಕ್ಷ ಸುಂದರ್ ರಾಜ್ ರೈ, ಪ್ರಧಾನ ಕಾರ್ಯದರ್ಶಿ ಅಜಿತ್ ಹೆಗ್ಡೆ ಕೆ., ತುಳುಕೂಟದ ಗೌರವಾಧ್ಯಕ್ಷ ಹಾಗೂ ಮಹಾನಗರ ಪಾಲಿಕೆ ಮಾಜಿ ಸದಸ್ಯ ರಾಜೇಂದ್ರ ಕುಮಾರ್ ಕೆ.ವಿ., ಮಾಜಿ ಅಧ್ಯಕ್ಷ ದಿನೇಶ್ ಹೆಗ್ಡೆ ಬಿ., ಜಯರಾಮ್ ಸೂಡ, ಚಂದ್ರಹಾಸ ರೈ, ಮಹಾನಗರ ಪಾಲಿಕೆ ಮಾಜಿ ಸದಸ್ಯ ಸಂಪತ್ ಕುಮಾರ್, ಅಕ್ಷಯ್ ರೈ ದಂಬೆಕಾನ ಮತ್ತು ಕಾರ್ಯಕಾರಿ ಸಮಿತಿಯ ಸದಸ್ಯರು ಕೂಡ ಕಂಬಳ ನಡೆಯುವ ಅರಮನೆ ಮೈದಾನದ ಸ್ಥಳವನ್ನು ಪರಿಶೀಲನೆ ಮಾಡಿದ್ದಾರೆ.

ಕರಾವಳಿಯ ಸಂಭ್ರಮದ ಕ್ರೀಡೆ

ಕಂಬಳ ಕರಾವಳಿಯ ಸಂಭ್ರಮದ ಕ್ರೀಡೆ. ಇಲ್ಲಿ ಭಾಗವಹಿಸುವುದೇ ಒಂದು ದೊಡ್ಡ ಸಡಗರ. ಈಗ ರಾಜಧಾನಿಯಲ್ಲಿ ಇರುವ ಲಕ್ಷ ಲಕ್ಷ ಮಂದಿ ಕರಾವಳಿಗರಿಗೆ ಇದೊಂದು ಹಬ್ಬ ಆಗಲಿದೆ.

ಇದನ್ನೂ ಓದಿ : ರೈತರಿಗೆ ಖುಷ್: ಕಾಳು ಮೆಣಸು ದರ ಏರಿಕೆ!

HOW TO APPLY : NEET-UG COUNSELLING 2023